PHP-and-MySQL/C4/PHP-String-Functions-Part-1/Kannada
From Script | Spoken-Tutorial
Time | Narration |
00:00 | string functions ನ ಕುರಿತಾದ ಟ್ಯುಟೋರಿಯಲ್ ಗೆ ಸ್ವಾಗತ. |
00:03 | ನಾನು ಇಲ್ಲಿ ತೋರಿಸಿರುವ ಸ್ಟ್ರಿಂಗ್ ಫಂಕ್ಷನ್ ಗಳ ಕುರಿತು ಇದರಲ್ಲಿ ತೋರಿಸುವೆನು. |
00:06 | ಇವುಗಳು ತುಂಬ ಉಪಯುಕ್ತವಾದವು ಮತ್ತು ದಿನನಿತ್ಯದ ಅಪ್ಲಿಕೇಷನ್ ಗಳಲ್ಲಿ ಇವುಗಳನ್ನು ಅಳವಡಿಸಿರಲಾಗುತ್ತದೆ. |
00:10 | ನಾನು ಮಾಡುತ್ತಿರುವ ಎಲ್ಲಾ ವಿಡಿಯೋಗಳಲ್ಲಿ ಖಂಡಿತವಾಗಿಯೂ ಅಳವಡಿಸಲಾಗಿದೆ. |
00:16 | ನಾನು ತೋರಿಸುತ್ತಿರುವ ಮೊದಲನೆಯ ಫಂಕ್ಷನ್ strlen() ಆಗಿದೆ. |
00:20 | ಇದು ತುಂಬ ಸರಳವಾಗಿದೆ, ಇದನ್ನು ತೋರಿಸಲು ಒಂದು '$string' ಅನ್ನು ತೆಗೆದುಕೊಳ್ಳೋಣ ಮತ್ತು ಅದರ ವ್ಯಾಲ್ಯು "hello" ಆಗಿರಲಿ. |
00:26 | ಈ ಫಂಕ್ಷನ್ ಒಂದು ಸ್ಟ್ರಿಂಗ್ ಅನ್ನು ತೆಗೆದುಕೊಳ್ಳುತ್ತದೆ ಮತ್ತು ಆ ಸ್ಟ್ರಿಂಗ್ ನಲ್ಲಿರುವ ಅಕ್ಷರಗಳನ್ನು ಎಣಿಸುತ್ತದೆ. |
00:30 | ಇಲ್ಲಿ ನಾವು 1, 2, 3, 4, 5 ಅಕ್ಷರಗಳನ್ನು ಹೊಂದಿದ್ದೇವೆ. |
00:35 | ನಾವು ಈ ಫಂಕ್ಷನ್ ಅನ್ನು ಬಳಸಿ ಈ '$string' ವೇರಿಯೇಬಲ್ ನ ವ್ಯಾಲ್ಯುವನ್ನು ಎಕೋ ಮಾಡುವುದಾದರೆ, ನಾವು ಬ್ರೌಸರ್ ನಲ್ಲಿ 5 ಎಂಬ ಫಲಿತಾಂಶವನ್ನು ಪಡೆಯಬೇಕು. |
00:47 | ಮುಂದಿನ ಫಂಕ್ಷನ್ ಇದಕ್ಕೆ ಅನ್ವಯವಾಗುತ್ತದೆ. |
00:52 | ಈಗ for ಲೂಪ್ ಅನ್ನು ಬಳಸಿ, ಸ್ಟ್ರಿಂಗ್ ನ ಅಕ್ಷರಗಳ ಮೂಲಕ ಲೂಪ್ ಮಾಡುವುದಾದರೆ, ನೀವು ಅದರ ನಿರ್ದಿಷ್ಟವಾದ ಸಬ್ ಸ್ಟ್ರಿಂಗ್ ಅನ್ನು ಪಡೆಯಲು ಈ mb substring ಫಂಕ್ಷನ್ ಬೇಕು. |
01:03 | ಉದಾಹರಣೆಗೆ ನೀವು , "My name is Alex" ಎಂಬ ಸ್ಟ್ರಿಂಗ್ ಅನ್ನು ಹೊಂದಿರುವಿರಿ ಮತ್ತು |
01:12 | ಇದರ ಮೂಲಕ loop ಮಾಡಿ, ನಮಗೆ ಬೇಕಾದ ಪ್ರತಿ ಅಕ್ಷರವನ್ನು ಪರೀಕ್ಷಿಸಬೇಕು ಎಂದುಕೊಳ್ಳೋಣ. |
01:18 | ಉದಾಹರಣೆಗೆ ನೀವು, ಸ್ಪೇಸ್ ಸಿಗುವ ವರೆಗೂ ಪ್ರತಿ ಅಕ್ಷರದ ಮೂಲಕ ಲೂಪ್ ಆಗಿ, ನಂತರ ಅಲ್ಲಿಂದ ಮುಂದೆ ಲಾಸ್ಟ್ ನೇಮ್ ಅನ್ನು ಸೇವ್ ಮಾಡುವ ನನ್ನ 'Name Splitter' ಟ್ಯುಟೋರಿಯಲ್ ಅನ್ನು ನೋಡಿ. |
01:32 | ಈಗ ಮೊದಲಿಗೆ ನಾನು mb_substring() ಅನ್ನು ಎಕೋ ಮಾಡುವೆನು. |
01:37 | ನಂತರ ನಾವು ಪರೀಕ್ಷಿಸಬೇಕಾದ $string ಅನ್ನು ಸೂಚಿಸುವೆನು. |
01:40 | ಇಲ್ಲಿ ನೀವು ಆರಂಭಿಕ ಬಿಂದುವನ್ನು ಸೂಚಿಸಬೇಕು, ಅದು ಇಲ್ಲಿ 1 ಆಗಿರಲಿ. |
01:45 | ಆದರೆ ಇದು ಸೊನ್ನೆ ಆಗಿರಲಿ ಮತ್ತು "length" – ಇದು 2 ಆಗಿರಲಿ. |
01:49 | ಇದು "My" ಎಂದು ಎಕೋ ಮಾಡಬೇಕು. |
01:52 | "Refresh" ಮಾಡಿ, ಸರಿ ನಾವು ಇಲ್ಲಿ "My" ಎಂದು ಪಡೆಯುವೆವು. |
01:57 | ಇದು ಏನು ಮಾಡಿದೆಯೆಂದರೆ – ಇದು ಈ ಸ್ಟ್ರಿಂಗ್ ನ ಮೂಲಕ ಹೋಗಿ, ಸೊನ್ನೆಯಿಂದ ಆರಂಭಿಸಿ 1, 2 ನೇ ಅಕ್ಷರಗಳನ್ನು ತೆಗೆದುಕೊಂಡು ಇಲ್ಲಿ ಎಕೋ ಮಾಡಿದೆ. |
02:05 | ಈಗ ನಾನು 's-t-r-len', ಕ್ಷಮಿಸಿ, 'length equals strlen of '$string' ' ಎಂದು ಟೈಪ್ ಮಾಡುವೆನು. |
02:15 | ನಾನು ಇಲ್ಲಿ ಒಂದು ಹೊಸ ವೇರಿಯೇಬಲ್ ಅನ್ನು ರಚಿಸಿ, ಅದು ಈ ಸ್ಟ್ರಿಂಗ್ ನ ಅಳತೆಯನ್ನು (length) ಹೊಂದಿರುವಂತೆ ಮಾಡುವೆನು. |
02:19 | ನಾನು 2 ಅನ್ನು ಈ ವ್ಯಾಲ್ಯುವಿನಿಂದ ಬದಲಿಸುವೆನು. |
02:22 | ನಾವು ಸೊನ್ನೆಯಿಂದ ಆರಂಭಿಸುವವರೆಗೆ, ನಾನು ಇಲ್ಲಿ ಸ್ಟ್ರಿಂಗ್ ಲೆಂಥ್ ಅಥವಾ ಕ್ಷಮಿಸಿ, '$length' ಅನ್ನು ಇಟ್ಟು ನಾವು ರಿಫ್ರೆಶ್ ಮಾಡಿದರೆ, ನಾವು ಪೂರ್ಣ ಸ್ಟ್ರಿಂಗ್ ಅನ್ನು ಪಡೆಯುವೆವು. |
02:37 | ಈಗ ನಾನು ಇಲ್ಲಿ ' s-t-r-len minus 5' ಎಂದು ಹೇಳುವೆನು ಅಂದರೆ ಪೂರ್ಣವಿರಾಮವನ್ನೊಳಗೊಂಡಂತೆ ನನ್ನ ಹೆಸರನ್ನು ಹೊರತೆಗೆಯಲು ನಾನು ಮೈನಸ್ 5 ಅನ್ನು ಇಡುವೆನು. |
02:49 | ಇದು ಸ್ಟ್ರಿಂಗ್ ನ ಪೂರ್ಣ ಅಳತೆಯಲ್ಲಿ ಕೊನೆಯ ಐದು ಅಕ್ಷರಗಳನ್ನು ಹೊರತೆಗೆದು "My name is" ಎಂದು ತೋರಿಸುವುದು. |
02:53 | ರಿಫ್ರೆಶ್ ಮಾಡಿದರೆ 'My name is' ಎಂದು ಪಡೆಯುವೆವು. |
02:56 | ಈ ಎರಡೂ ಫಂಕ್ಷನ್ ಗಳು ಸ್ವಲ್ಪ ಬಹುಮುಖ್ಯವಾಗಿದೆ, ಮತ್ತು strlen() ಅನ್ನು ಬಳಸಿ, ಇಲ್ಲಿ mb_substring ಅನ್ವಯಿಸಲಾಗಿದೆ. |
03:03 | ಮುಂದಿನ ಫಂಕ್ಷನ್ explode() ಆಗಿದೆ. |
03:07 | explode() ಫಂಕ್ಷನ್ ನಾವು ಇಲ್ಲಿ ಹೊಂದಿರುವಂತೆ $string ಅನ್ನು ತೆಗೆದುಕೊಳ್ಳುತ್ತದೆ. |
03:13 | ಈಗ ಇದು "1 2 3 4 5" ಆಗಿರಲಿ. |
03:17 | ಮತ್ತು explode() ಫಂಕ್ಷನ್ , ಇದು explode ಅನ್ನು ಎಕೋ ಮಾಡಲಿ. |
03:23 | ಇದು ನಿಮ್ಮ ಸ್ಟ್ರಿಂಗ್ ಅಂದರೆ ಖಾಲಿ ಸ್ಟ್ರಿಂಗ್ಅನ್ನು ತುಂಡರಿಸುತ್ತದೆ, ಆರಂಭದಿಂದ ಕೊನೆಯವರೆಗೆ ಇದು ಸ್ಟ್ರಿಂಗ್ ಅನ್ನು ಅರೇ ಆಗಿ ತುಂಡರಿಸುತ್ತದೆ. |
03:32 | ನಾನು ಇದನ್ನು ರಚಿಸಿ, ಬರೆಯುವೆನು. |
03:35 | ನಾನು 1 2 3 4 5 –ಇವುಗಳನ್ನು ಅರೆಯ ಪ್ರತ್ಯೇಕ ಎಲಿಮೆಂಟ್ ಆಗಿ ಸ್ಟೋರ್ ಮಾಡಲು ಬಯಸುವೆನು. |
03:40 | ಅದಕ್ಕಾಗಿ ನಾನು explode string ಎಂದು ಇಲ್ಲ ಕ್ಷಮಿಸಿ – ನಾನು ಇಲ್ಲಿ string ಅನ್ನು ತುಂಡರಿಸಲು ಏನನ್ನು ಬಳಸುವೆನು ಎಂದು ತೋರಿಸುವೆನು. |
03:45 | ಈ ಸಂದರ್ಭದಲ್ಲಿ ಇದು space ಆಗಿದೆ. |
03:49 | ನಾವು ಸ್ಲ್ಯಾಶ್ ಅನ್ನು ಹೊಂದಿದ್ದರೆ, ನಾವು ಇದನ್ನು ಸ್ಲ್ಯಾಶ್ ಎಂದು ಬದಲಿಸೋಣ. |
03:51 | ಏಕೆಂದರೆ ಇದು ಡಿಟರ್ಮಿನೆಂಟ್ (ನಿರ್ಣಾಯಕ) ಆಗಿರುವುದು, ಇದು ಇಲ್ಲಿಂದ ಆರಂಭವಾಗುವುದು ಮತ್ತು ಇದು ವಿಭಜಕವಾಗಿರುವುದು. |
03:57 | ಇದು ಎರಡನೆಯ ವ್ಯಾಲ್ಯು ಆಗಿರುವುದು.
ಈಗ ಸದ್ಯಕ್ಕೆ ನಾವು ಸ್ಪೇಸ್ ಅನ್ನು ಬಳಸೋಣ. ಸರಿಯೇ? |
04:03 | ನಿಮಗೆ ಏನು ಬೇಕೊ ಅದನ್ನು ನೀವು ಇಲ್ಲಿ ಸೇರಿಸಬಹುದು. ಇದು ಅಸ್ಟೆರಿಸ್ಕ್ ಕೂಡ ಆಗಿರಬಹುದು. |
04:06 | ಇದು ಯಾವ ಚಿಹ್ನೆಯಾದರೂ ಆಗಿರಬಹುದು. ಆದರೆ ನೀವು ಸ್ಟ್ರಿಂಗ್ ಅನ್ನು ಯಾವುದು ತುಂಡರಿಸಬೇಕು ಎಂಬುದನ್ನು ಸೂಚಿಸಬೇಕು. |
04:11 | explode ನಂತರ string ನ ಹೆಸರು ಆಗಿರುತ್ತದೆ. |
04:16 | ಇದು ಇಷ್ಟೇ ಆಗಿರುವುದು. |
04:18 | ಈಗ ಅದನ್ನು ಪರೀಕ್ಷಿಸೋಣ. |
04:20 | ರಿಫ್ರೆಶ್ ಮಾಡಿ. |
04:22 | "Array" ಈಗ ಇದು ಅರೇ ಅನ್ನು ಎಕೋ ಮಾಡುತ್ತಿದೆ. |
04:26 | ನಾನು ಇಲ್ಲಿ ಒಂದು ಅರೇಯನ್ನು ಎಕೋ ಮಾಡಿರುವುದನ್ನು ನೀವು ನೋಡಬಹುದು. |
04:30 | ಇದು ಅರೇ ಗೆ ಸೆಟ್ ಆಗಿದೆ ಎಂದು ಹೇಳಬಹುದು ಏಕೆಂದರೆ ನಾವು ನಮ್ಮ ಅರೇ ಟ್ಯುಟೋರಿಯಲ್ ನಲ್ಲಿ ಇದರ ಕುರಿತು ಕಲಿತಿದ್ದೇವೆ. |
04:35 | ಇದು ಇಲ್ಲಿ ನಾವು ಅರೇ ಯನ್ನು ಹೊಂದಿದ್ದೇವೆ ಎಂದು ಹೇಳುತ್ತದೆ. |
04:37 | ನಾವು ಇಲ್ಲಿ ಕೇವಲ ಈ ಫಂಕ್ಷನ್ ಅನ್ನು ಬಳಸಿ ನೇರವಾಗಿ ಎಕೋ ಮಾಡಿರುವೆವು, |
04:41 | ಆದರೆ ನಾವು ಇದನ್ನು ಒಂದು ವೇರಿಯೇಬಲ್ ಗೆ ಸೆಟ್ ಮಾಡಬೇಕು. |
04:44 | ಹಾಗಾಗಿ ಈಗ ನಾವು ಅದನ್ನು $exp array ಗೆ ಸರಿದೂಗಿಸೋಣ ಮತ್ತು ನಾವು $exp- array ಯನ್ನು ಎಕೋ ಮಾಡಿದರೆ ನಾವು ಸಂಖ್ಯೆಗಳನ್ನು echo ಮಾಡಬಹುದು. |
04:52 | ನಾವು ಇಲ್ಲಿ ಸೊನ್ನೆ, ಒಂದು, ಎರಡು, ಮೂರು, ನಾಲ್ಕು – ಇವುಗಳನ್ನು ಬಳಸಬಹುದು. ಇದು ನಾಲ್ಕು ಆಗಿದೆ. |
04:56 | ಇದರ ವ್ಯಾಲ್ಯು ಸೊನ್ನೆ ಆಗಿದ್ದಾಗ, ಇದು 1 ಕ್ಕೆ ಸಮವಾಗಿರುತ್ತದೆ. |
05:01 | ನಾನು ಇಲ್ಲಿ 1 ಎಂದು ಟೈಪ್ ಮಾಡಿದರೆ ಇದು 2 ಎಂದು echo ಮಾಡಬೇಕು. |
05:06 | ಸರಿ ನಾವು ನಮ್ಮ ಅರೇಯನ್ನು ಯಶಸ್ವಿಯಾಗಿ ತುಂಡರಿಸಿದ್ದೇವೆ. |
05:09 | ನಾನು ಮೊದಲೇ ಹೇಳಿದಂತೆ, ನಾವು ಇಲ್ಲಿ ಸ್ಲ್ಯಾಶ್ ಅನ್ನು ಇಟ್ಟರೆ ಇಲ್ಲಿ ಕೂಡ ಈ ಸ್ಪೇಸ್ ಅನ್ನು ಸ್ಲ್ಯಾಶ್ ನಿಂದ ಬದಲಾಯಿಸಿಬೇಕು. |
05:16 | ನಾವು ಇಲ್ಲಿ ಅದೇ ಫಲಿತಾಂಶವನ್ನು ಪಡೆಯುತ್ತೇವೆ. |
05:21 | ಇದು explode() ನ ಕುರಿತಾಗಿದೆ. |
05:23 | ಇದಕ್ಕೆ ವಿರುದ್ಧವಾದದ್ದು implode() ಆಗಿದೆ. |
05:26 | ಈಗ ಅದರ ಕುರಿತು ನೋಡೋಣ. |
05:28 | ನೀವು ಇಲ್ಲಿ implode() ಫಂಕ್ಷನ್ ಅನ್ನು ನೋಡಬಹುದು, ಮತ್ತು ಇದನ್ನು join() ಎಂದೂ ಕರೆಯುತ್ತಾರೆ. |
05:32 | ಹಾಗಾಗಿ ನೀವು ಇದನ್ನು join ಅಥವಾ implode – ಇವೆರಡರಲ್ಲಿ ಯಾವ ಹೆಸರಿನಿಂದಾದರೂ ಕರೆಯಬಹುದು. |
05:38 | ನಾನು ಈಗ $new string ಎಂದು ಟೈಪ್ ಮಾಡುವೆನು, ಇದು implode() ನ ವ್ಯಾಲ್ಯು ಗೆ ಸಮವಾಗಿರಲಿ ಮತ್ತು ನಾವು ನಮ್ಮ '$exparray' ಅನ್ನು ಇಂಪ್ಲೋಡ್ ಮಾಡೋಣ. |
05:51 | ಈಗ ಇದನ್ನು ಪ್ರಯತ್ನಿಸೋಣ. |
05:55 | ಸರಿ, ಯಾವುದೇ ಎರರ್ ಇಲ್ಲದೇ ನಾವು ಇದನ್ನು ಮಾಡಿರುವೆವು. |
05:57 | ಈಗ ನಾವು ನಮ್ಮ $new string ಅನ್ನು echo ಮಾಡೋಣ. |
06:01 | ಈಗ ಇದು ನಾವು ಮೊದಲು ಏನು ಮಾಡಿದ್ದೆವೋ ಅದನ್ನು ನೆನಪಿಸುತ್ತದೆ. ಆದರೆ ಸ್ಪೇಸ್ ಗಳಿಲ್ಲ. |
06:05 | ಆದರೆ ನೀವು ಇಲ್ಲಿ ಅರೇಯನ್ನು ಯಾವ ಚಿಹ್ನೆಯು ತುಂಡರಿಸಬೇಕು ಎಂದು ಸೂಚಿಸಬಹುದು. |
06:09 | ಹಾಗಾಗಿ ನಾನು ಇಲ್ಲಿ space ಅನ್ನು ಸೇರಿಸಲು ನಿರ್ಧರಿಸಿದ್ದೇನೆ. ಆದರೆ ನಿಮಗೆ ಸ್ಲ್ಯಾಶ್ ಬೇಕಾದಲ್ಲಿ ಇಲ್ಲಿ ಫಾರ್ವಾರ್ಡ್ ಸ್ಲ್ಯಾಶ್ ಅನ್ನು ಹಾಕಿ ಆ ಫಲಿತಾಂಶವನ್ನು ಪಡೆಯಬಹುದು. |
06:21 | ಹಿಂದಿರುಗಿ ನೋಡಿದರೆ ಈ ಎರಡು ಫಂಕ್ಷನ್ ಗಳು ಅರೇ ಇಂದ ಮತ್ತು ಅರೇ ಗೆ ಪರವರ್ತಿಸಲು ಬಳಸಲಾಗುತ್ತದೆ. |
06:27 | ಇದು explode() ಮತ್ತು implode() ಫಂಕ್ಷನ್ ಗಳ ಕುರಿತಾಗಿದೆ. ಮತ್ತು ಮೊದಲೇ ಹೇಳಿದ ಹಾಗೆ, ಇದನ್ನು join() ಎಂದು ಕೂಡ ಬರೆಯಬಹುದು. |
06:32 | ರಿಫ್ರೆಶ್ ಮಾಡಿದರೆ ನಾವು ಅದೇ ಫಲಿತಾಂಶವನ್ನು ಪಡೆಯುವೆವು. |
06:34 | ಇದು 'implode()' ಫಂಕ್ಷನ್ ನ ಕುರಿತಾಗಿದೆ. |
06:36 | ನಾವು ಹೋಗುವ ಮುಂದಿನದು nl2br() ಫಂಕ್ಷನ್ ಆಗಿದೆ. |
06:41 | ಈಗ ಈ ಫಂಕ್ಷನ್ ಇದು ನಿಜವಾಗಿಯೂ ಕ್ರಿಯಾತ್ಮಕವಾಗಿದೆ. ಮತ್ತು ಡಾಟಾಬೇಸ್ ಗಳೊಂದಿಗೆ ಕೆಲಸ ಮಾಡುವಾಗ ಇದು ತುಂಬ ಸರಳವಾಗಿದೆ. |
06:46 | ಡಾಟಾವು ಸಾಲಿನ ಆಧಾರದ ಮೇಲೆ ಸ್ಟೋರ್ ಆದಾಗ ಇದು ಉಪಯುಕ್ತವಾಗಿದೆ. |
06:51 | ನಾನು ಈಗಾಗಲೇ ಹೇಳಿದ ಹಾಗೆ ನನ್ನ ಹಿಂದಿನ ಟ್ಯುಟೋರಿಯಲ್ ಗಳನ್ನು ನೆನಪಿಸಿಕೊಳ್ಳಿ. |
06:58 | ಈಗ 'Hello' ಅಥವಾ 'Hello', 'New line', 'Another new line' ಎಂದು ಟೈಪ್ ಮಾಡಿ, ಒಂದು ಸೆಮಿಕೋಲನ್ ಅನ್ನು ಹಾಕುವೆನು. |
07:12 | ಇದನ್ನು ಹಾಗೇ ಇಡೋಣ. |
07:16 | ನಾನು ಈಗ ಇದನ್ನು ಎಕೋ ಮಾಡಿದರೆ ಏನು ಆಗುವುದೆಂದು ನೀವು ಊಹೆ ಮಾಡಬಹುದು. |
07:19 | ನಾವು ಇದನ್ನು ಪಡೆಯುವೆವು. |
07:21 | ನಾವು ಇದನ್ನು ಬೇರೆ ಬೇರೆ ಸಾಲಿನಲ್ಲಿ ಪಡೆಯಬೇಕು ಎಂದರೆ ನಾವು 'br' ಕಮಾಂಡ್ ಅನ್ನು ಬಳಸಬೇಕು. |
07:30 | ನೀವು ಯಾವುದಾದರೂ ಕಾರಣಕ್ಕಾಗಿ ಎಚ್.ಟಿ.ಎಂ.ಎಲ್ ಅನ್ನು ಬಳಸಲು ಇಷ್ಟಪಡದಿದ್ದರೆ, ಅಥವಾ ನೀವು ಡಾಟಾಬೇಸ್ ನ ಫಲಿತಾಂಶದಿಂದ ಪಡೆದುಕೊಳ್ಳುತ್ತಿದ್ದರೆ, ಆಗ ನೀವು ಲೈನ್ ಬ್ರೇಕ್ ಅನ್ನು ಹಾಕಲು ಯಾವುದಾದರೂ ಒಂದು ಕಠಿಣ ಫಂಕ್ಷನ್ ಅನ್ನು ಬಳಸಬೇಕಾಗುತ್ತದೆ. |
07:44 | ಇದು ಡಾಟಾಬೇಸ್ ನಿಂದ ಸೆಟ್ ಮಾಡುವಾಗ ಆಗುತ್ತದೆ. |
07:47 | ನೀವು ಅದನ್ನು ರಚಿಸಲಾಗುವುದಿಲ್ಲ ಅಥವ ಡಾಟಾಬೇಸ್ ನಲ್ಲಿ ಕುಂಟು ಪರೀಕ್ಷೆ ಮಾಡುವಾಗ ನೀವು ಏನು ಮಾಡಬೇಕಾಗುತ್ತದೆ ಎಂದರೆ, ನೀವೇ ಕೋಟ್ ಅನ್ನು ಬಳಸಲು ಅಥವಾ ಬ್ರೇಕ್ ಅನ್ನು ಹಾಕಲು ಸಾಧ್ಯವಿಲ್ಲ. ಇದು ಅರ್ಥವತ್ತಾಗಿರುತ್ತದೆ. |
07:59 | ಆದರೆ ನೀವು ಸ್ಟ್ರಿಂಗ್ ನ ಆರಂಭದಲ್ಲಿ nl2br ಅನ್ನು ಬಳಸಿದರೆ- ನಾವು ಬ್ರ್ಯಾಕೆಟ್ ಅನ್ನು ಇಲ್ಲಿ ಮುಗಿಸುವೆವು - |
08:04 | ನೀವು ಇದು ನಿಮಗೆ ಬೇಕಾದ ಹಾಗೆ ಎಕೋ ಮಾಡಿರುವುದನ್ನು ನೋಡಬಹುದು. |
08:08 | ನಾವು ಮೇಲ್ಗಡೆಯೂ ಲೈನ್ ಬ್ರೇಕ್ ಅನ್ನು ಹೊಂದಿದ್ದೇವೆ ಏಕೆಂದರೆ ನಾವು ಇಲ್ಲಿ ಸ್ಪೇಸ್ ಅನ್ನು ಕೊಟ್ಟಿದ್ದೇವೆ. ಈಗ ಅದನ್ನು ತೆಗೆದುಬಿಡೋಣ. |
08:16 | nl2br ಇಲ್ಲದಿದ್ದರೆ ನಾವು ಎಲ್ಲವನ್ನೂ ಒಂದೇ ಸಾಲಿನಲ್ಲಿ ಪಡೆಯುವೆವು ಮತ್ತು nl2br ಇದ್ದಾಗ ನಾವು ಬೇರೆ ಬೇರೆ ಸಾಲಿನಲ್ಲಿ ನಮಗೆ ಬೇಕಾದ ಹಾಗೆ ಫಲಿತಾಂಶವನ್ನು ಪಡೆಯುವೆವು. |
08:30 | ಸಮಯದ ಅಭಾವವಿರುವುದರಿಂದ, ನಾನು ಈ ವಿಡಿಯೋವನ್ನು ಇಲ್ಲಿಗೆ ನಿಲ್ಲಿಸುವೆನು. ಉಳಿದ ಫಂಕ್ಷನ್ ಗಳು ಎರಡನೇ ಭಾಗದಲ್ಲಿದೆ. ಅದನ್ನು ನೋಡಿ. |
08:38 | ಮತ್ತೆ ಭೇಟಿಯಾಗೋಣ. ಈ ಸ್ಕ್ರಿಪ್ಟ್ ನ ಅನುವಾದಕಿ, ಮೈಸೂರಿನಿಂದ ಅಂಜನಾ ಅನಂತ್ ನಾಗ್ ಮತ್ತು ಧ್ವನಿ ಡಾ. ನವೀನ್ ಭಟ್, ಉಪ್ಪಿನಪಟ್ಟಣ. |