PHP-and-MySQL/C2/XAMPP-in-Linux/Kannada
From Script | Spoken-Tutorial
Time | Narration |
00:01 | ನಮಸ್ಕಾರ. XAMPP Installation on Linux ಎಂಬ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
00:08 | ಈ ಟ್ಯುಟೋರಿಯಲ್ ನಲ್ಲಿ ನಾವು:
Linux ನಲ್ಲಿ XAMPP ಅನ್ನು ಹೇಗೆ ಇನ್ಸ್ಟಾಲ್ ಮಾಡುವುದು ಮತ್ತು php ಫೈಲ್ ಅನ್ನು ಹೇಗೆ ಕ್ರಿಯೇಟ್ ಮಾಡಿ ರನ್ ಮಾಡುವುದೆಂದು ಕಲಿಯುವೆವು. |
00:18 | ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು :
Ubuntu Linux OS 14.04, FireFox ವೆಬ್-ಬ್ರೌಸರ್ ಮತ್ತು Gedit ಟೆಕ್ಸ್ಟ್ ಎಡಿಟರ್ ಇವುಗಳನ್ನು ಬಳಸುತ್ತಿದ್ದೇನೆ. |
00:32 | XAMPP ಅನ್ನು ಇನ್ಸ್ಟಾಲ್ ಮಾಡಲು, ನೀವು -
ಸಕ್ರಿಯವಾದ ಇಂಟರ್ನೆಟ್ ಸಂಪರ್ಕ ಮತ್ತು ನಿಮ್ಮ ಕಂಪ್ಯೂಟರ್ ಗೆ Admin ಆಕ್ಸೆಸ್ ಅನ್ನು ಹೊಂದಿರಬೇಕು. |
00:41 | ಅಲ್ಲದೆ, ಲಿನಕ್ಸ್ ಕಮಾಂಡ್ ಗಳ ಬಗ್ಗೆ ಸಹ ನೀವು ತಿಳಿದಿರಬೇಕು. ಇಲ್ಲದಿದ್ದರೆ, ಸಂಬಂಧಿತ ಟ್ಯುಟೋರಿಯಲ್ ಗಳಿಗಾಗಿ, ನಮ್ಮ ವೆಬ್ಸೈಟ್ ಅನ್ನು ನೋಡಿ. |
00:52 | XAMPP ಒಂದು ಉಚಿತ ಮತ್ತು ಓಪನ್-ಸೋರ್ಸ್ ವೆಬ್-ಸರ್ವರ್ ಪ್ಯಾಕೇಜ್ ಆಗಿದೆ. |
00:58 | XAMPP- Apache HTTP Server, MySQL database, ಸ್ಕ್ರಿಪ್ಟ್ ಗಳಿಗಾಗಿ PHP ಯಲ್ಲಿ ಬರೆಯಲಾದ Interpreters ಮತ್ತು Perl ಇವುಗಳನ್ನು ಒಳಗೊಂಡಿದೆ. |
01:12 | XAMPP ಅನ್ನು ಇನ್ಸ್ಟಾಲ್ ಮಾಡುವುದು ಸುಲಭ. GNU/Linux, Mac, Windows ಮತ್ತು Solaris ಆಪರೇಟಿಂಗ್ ಸಿಸ್ಟಂ ಗಳಿಗಾಗಿ ಇದು ಲಭ್ಯವಿದೆ. |
01:23 | Linux ಗಾಗಿ, XAMPP ಅನ್ನು ನಾವು ಡೌನ್ಲೋಡ್ ಮಾಡೋಣ. |
01:27 | ನಿಮ್ಮ ಕಂಪ್ಯೂಟರ್ ನಲ್ಲಿ, ವೆಬ್-ಬ್ರೌಸರ್ ಅನ್ನು ತೆರೆಯಿರಿ. |
01:31 | ಅಡ್ರೆಸ್-ಬಾರ್ ನಲ್ಲಿ ಹೀಗೆ ಟೈಪ್ ಮಾಡಿ: https://www.apachefriends.org/download.html ಮತ್ತು Enter ಅನ್ನು ಒತ್ತಿ. |
01:44 | ಪೇಜ್ ಅನ್ನು ಸ್ಕ್ರೋಲ್ ಮಾಡಿ. |
01:47 | ಇಲ್ಲಿ XAMPP, ಎಲ್ಲ ಆಪರೇಟಿಂಗ್ ಸಿಸ್ಟಂ ಗಳಿಗಾಗಿ ಡೌನ್ಲೋಡ್ ಮಾಡಲು ಲಭ್ಯವಿದೆ. |
01:53 | XAMPP for Linux ವಿಭಾಗಕ್ಕೆ ಭೆಟ್ಟಿಕೊಡಿ. ನೀವು Xampp ನ ಇತ್ತೀಚಿನ ಆವೃತ್ತಿಯನ್ನು ನೋಡಬಹುದು. |
02:01 | ನನ್ನ ಸಿಸ್ಟಂ, 64 bit OS ಆಗಿದೆ. ಹೀಗಾಗಿ, 5.5.19 / PHP 5.5.19 ಆವೃತ್ತಿಯ ಅಡಿಯಲ್ಲಿ, |
02:11 | ನಾನು Download (64 bit) ಅನ್ನು ಆಯ್ಕೆಮಾಡುವೆನು. |
02:15 | ಡೌನ್ಲೋಡ್ ಆಗಲು ಆರಂಭವಾಗುವುದು. |
02:18 | ನನ್ನ Downloads ಫೋಲ್ಡರ್ ನಲ್ಲಿ, ನಾನು ಈ ಫೈಲ್ ಅನ್ನು ಈಗಾಗಲೇ ಡೌನ್ಲೋಡ್ ಮಾಡಿದ್ದೇನೆ. |
02:24 | ಆದ್ದರಿಂದ ನಾನು ಡೌನ್ಲೋಡ್ ಮಾಡುವ ಹಂತವನ್ನು ಬಿಟ್ಟುಬಿಡುತ್ತೇನೆ. |
02:28 | ಈಗ terminal ಅನ್ನು ತೆರೆಯಿರಿ. |
02:31 | ಟರ್ಮಿನಲ್ ನ ಮೇಲೆ, ಕಮಾಂಡ್ ಅನ್ನು ಹೀಗೆ ಟೈಪ್ ಮಾಡಿ: cd space Downloads ಮತ್ತು Enter ಅನ್ನು ಒತ್ತಿ. |
02:40 | ಇದು ಕರೆಂಟ್ ವರ್ಕಿಂಗ್ ಡಿರೆಕ್ಟರೀಯನ್ನು Downloads ಗೆ ಬದಲಾಯಿಸುವುದು. |
02:46 | ಈಗ ls ಕಮಾಂಡ್ ಅನ್ನು ಟೈಪ್ ಮಾಡಿ ಮತ್ತು Enter ಅನ್ನು ಒತ್ತಿ. |
02:51 | ಇದು Downloads ಫೋಲ್ಡರ್ ನಲ್ಲಿರುವುದನ್ನು ತೋರಿಸುವುದು. |
02:56 | ಇಲ್ಲಿರುವುದು ನಮ್ಮ XAMPP ನ ಇನ್ಸ್ಟಾಲೇಶನ್ ಫೈಲ್ ಆಗಿದೆ. |
03:00 | ನಾವು ಫೈಲ್ ಗೆ executable ಪರ್ಮಿಶನ್ ಅನ್ನು ಕೊಡೋಣ. |
03:04 | ಇದರಿಂದ ನಾವು ಈ ಫೈಲ್ ಅನ್ನು ರನ್ ಮಾಡಲು ಸಾಧ್ಯವಾಗುವುದು. ಹೀಗೆ ಟೈಪ್ ಮಾಡಿ: chmod space +x space filename ಮತ್ತು Enter ಅನ್ನು ಒತ್ತಿ. |
03:18 | ಈಗ, ಫೈಲ್ ಅನ್ನು ರನ್ ಮಾಡಲು, ಹೀಗೆ ಟೈಪ್ ಮಾಡಿ: sudo space dot slash (./) filename ಮತ್ತು Enter ಅನ್ನು ಒತ್ತಿ. |
03:29 | ಅಗತ್ಯವಿದ್ದರೆ, admin password ಅನ್ನು ನಮೂದಿಸಿ. |
03:34 | Setup wizard ಎಂಬ ಡೈಲಾಗ್ ಬಾಕ್ಸ್ ಕಾಣಿಸಿಕೊಳ್ಳುತ್ತದೆ. |
03:38 | ಅಗತ್ಯವಿದ್ದಾಗ Next ಬಟನ್ ಮೇಲೆ ಕ್ಲಿಕ್ ಮಾಡಿ ಮತ್ತು ಇಲ್ಲಿ ತೋರಿಸಿದಂತೆ ಇನ್ಸ್ಟಾಲ್ಲೇಶನ್ ಹಂತಗಳನ್ನು ಅನುಸರಿಸಿ. |
03:46 | Learn more about Bitnami for XAMPP ಚೆಕ್-ಬಾಕ್ಸ್ ಅನ್ನು ಅನ್-ಚೆಕ್ ಮಾಡಿ. |
03:52 | Next ಮೇಲೆ ಕ್ಲಿಕ್ ಮಾಡಿ. |
03:54 | ಒಮ್ಮೆ ಇನ್ಸ್ಟಾಲ್ಲೇಶನ್ ಮುಗಿಯಿತೆಂದರೆ, Launch XAMPP ಚೆಕ್-ಬಾಕ್ಸ್ ಅನ್ನು ಅನ್-ಚೆಕ್ ಮಾಡಿ ಮತ್ತು Finish ಮೇಲೆ ಕ್ಲಿಕ್ ಮಾಡಿ. |
04:04 | ಈ ಇನ್ಸ್ಟಾಲ್ಲೇಶನ್, ಸಿಸ್ಟಂ ನ opt ಫೋಲ್ಡರ್ ನಲ್ಲಿ, lampp ಎಂಬ ಫೋಲ್ಡರ್ ಅನ್ನು ತಯಾರಿಸುವುದು. |
04:12 | ಅಲ್ಲಿ ಹೋಗಿ ನೋಡೋಣ. |
04:15 | ಎಡಗಡೆಯಲ್ಲಿರುವ launcher ನಿಂದ, Files ಫೋಲ್ಡರ್ ಐಕಾನ್ ಅನ್ನು ಕ್ಲಿಕ್ ಮಾಡಿ. |
04:21 | ಎಡಗಡೆಯ ಪ್ಯಾನೆಲ್ ನಲ್ಲಿ, Devices ವಿಭಾಗದ ಅಡಿಯಲ್ಲಿ, Computer ನ ಮೇಲೆ ಕ್ಲಿಕ್ ಮಾಡಿ. |
04:29 | ನೀವು ಸಿಸ್ಟಂ ಫೈಲ್ ಗಳನ್ನು ನೋಡಬಹುದು. opt ಫೋಲ್ಡರ್ ಅನ್ನು ತೆರೆಯಲು, ಅದರ ಮೇಲೆ ಡಬಲ್-ಕ್ಲಿಕ್ ಮಾಡಿ. |
04:38 | ಇಗೋ ಇಲ್ಲಿದೆ! lampp ಫೋಲ್ಡರ್. ಈ ಫೋಲ್ಡರ್ ಅನ್ನು ತೆರೆಯಿರಿ. |
04:44 | ಹಲವು ಸಬ್- ಫೋಲ್ಡರ್ ಗಳನ್ನು ಇಲ್ಲಿ ನಾವು ನೋಡಬಹುದು. |
04:48 | htdocs (h- t -ಡಾಕ್ಸ್) ಎಂಬ ಫೋಲ್ಡರ್ ಅನ್ನು ಗುರುತಿಸಿ. |
04:53 | ಇದು ನಮ್ಮ ವೆಬ್ ಸರ್ವರ್ Apache ಯ (ಅಪಾಚೆ) ರೂಟ್-ಡಿರೆಕ್ಟರಿ ಆಗಿದೆ. |
04:58 | ನಮ್ಮ PHP ಕೋಡ್ ಫೈಲ್ ಅನ್ನು ರನ್ ಮಾಡಲು, ನಾವು ಅದನ್ನು ಈ ಫೋಲ್ಡರ್ ನಲ್ಲಿ ಸೇವ್ ಮಾಡಬೇಕು. |
05:05 | ನಿಮ್ಮ ಇನ್ಸ್ಟಾಲ್ಲೇಶನ್ ಪ್ರಕ್ರಿಯೆಯನ್ನು ಆಧರಿಸಿ, Apache's ರೂಟ್-ಡಿರೆಕ್ಟರಿಯು /opt/lampp/htdocs ಅಥವಾ /var/www ಆಗಿದೆ. |
05:24 | htdocs ಫೋಲ್ಡರ್ ನಲ್ಲಿ ಬರೆಯಲು, (writable) ನಾವು ಪರ್ಮಿಶನ್ ಅನ್ನು ಬದಲಾಯಿಸಬೇಕು. |
05:30 | ಆದ್ದರಿಂದ, ಟರ್ಮಿನಲ್ ನ ಮೇಲೆ ಹೀಗೆ ಟೈಪ್ ಮಾಡಿ: sudo chmod 777 -R /opt/lampp/htdocs ಮತ್ತು Enter ಅನ್ನು ಒತ್ತಿ. |
05:56 | ಅಗತ್ಯವಿದ್ದರೆ admin password ಅನ್ನು ನಮೂದಿಸಿ. |
06:00 | ಈಗ ನಾವು Xampp ರನ್ ಆಗುತ್ತಿದೆಯೋ ಇಲ್ಲವೊ ಎಂದು ಪರೀಕ್ಷಿಸೋಣ. |
06:04 | ವೆಬ್-ಬ್ರೌಸರ್ ಅನ್ನು ತೆರೆಯಿರಿ. ಅಡ್ರೆಸ್-ಬಾರ್ ನಲ್ಲಿ, localhost ಎಂದು ಟೈಪ್ ಮಾಡಿ ಮತ್ತು Enter ಅನ್ನು ಒತ್ತಿ. |
06:15 | “Unable to connect” ಎಂಬ ಮೆಸೇಜ್ ಅನ್ನು ಅದು ತೋರಿಸುತ್ತದೆ. |
06:20 | Xampp ಸರ್ವೀಸ್ ಗಳು ರನ್ ಆಗುತ್ತಿಲ್ಲ. |
06:23 | ಸರ್ವೀಸ್ ಗಳನ್ನು ಪ್ರಾರಂಭಿಸಲು, 'ಟರ್ಮಿನಲ್' ನ ಮೇಲೆ ಹೀಗೆ ಟೈಪ್ ಮಾಡಿ: sudo /opt/lampp/lampp start ಮತ್ತು Enter ಅನ್ನು ಒತ್ತಿ. |
06:40 | ಅಗತ್ಯವಿದ್ದರೆ admin password ಅನ್ನು ನಮೂದಿಸಿ. |
06:44 | ಇದು ಎಲ್ಲ Xampp services ಗಳನ್ನು ಆರಂಭಿಸುವುದು. |
06:47 | ವೆಬ್-ಬ್ರೌಸರ್ ಗೆ ಹಿಂದಿರುಗಿ ಮತ್ತು ಪೇಜ್ ಅನ್ನು ರಿಫ್ರೆಶ್ ಮಾಡಿ. |
06:52 | ಇಗೋ ಇಲ್ಲಿದೆ! Xampp ಗೆ ನಿಮ್ಮನ್ನು ಸ್ವಾಗತಿಸುವ ಸ್ಕ್ರೀನ್ . |
06:56 | ಇದು ಡೀಫಾಲ್ಟ್ ಭಾಷೆಯನ್ನು ಆರಿಸಿಕೊಳ್ಳಲು ನಮ್ಮನ್ನು ಕೇಳುತ್ತದೆ. ನಾನು English ಅನ್ನು ಆಯ್ದುಕೊಳ್ಳುತ್ತೇನೆ. |
07:03 | Xampp ಈಗ ಸರಿಯಾಗಿ ರನ್ ಆಗುತ್ತಿದೆ. |
07:06 | ನಾವು ಒಂದು ಸ್ಯಾಂಪಲ್ php ಕೋಡ್ ಅನ್ನು ಬರೆದು ಅದನ್ನು ರನ್ ಮಾಡೋಣ. |
07:11 | htdocs ನಲ್ಲಿ, ನಾವು phpacademy ಎಂಬ ಒಂದು ಫೋಲ್ಡರ್ ಅನ್ನು ಕ್ರಿಯೇಟ್ ಮಾಡೋಣ. |
07:16 | ಇನ್ನು ಮುಂದೆ, ನಾನು ನನ್ನ ಎಲ್ಲ php ಫೈಲ್ ಗಳನ್ನು, ಈ ಫೋಲ್ಡರ್ ನಲ್ಲಿ ಸೇವ್ ಮಾಡುವೆನು. |
07:23 | ನನ್ನ ಫೈಲ್ ಗಳನ್ನು ಬೇರೆಯವರು ತಿದ್ದಬಾರದೆಂದು ಖಚಿತಪಡಿಸಿಕೊಳ್ಳಲು ಹೀಗೆ ಮಾಡುತ್ತೇನೆ. |
07:30 | phpacademy ಫೋಲ್ಡರ್ ಅನ್ನು ತೆರೆಯಿರಿ. ನಾವು ಒಂದು php ಫೈಲ್ ಅನ್ನು ಕ್ರಿಯೇಟ್ ಮಾಡೋಣ. |
07:37 | ರೈಟ್-ಕ್ಲಿಕ್ ಮಾಡಿ New Document, ನಂತರ Empty document ಅನ್ನು ಆಯ್ಕೆಮಾಡಿ. ಇದನ್ನು demo.php ಎಂದು ಹೆಸರಿಸಿ. |
07:48 | Gedit ಟೆಕ್ಸ್ಟ್-ಎಡಿಟರ್ ನಲ್ಲಿ, demo.php ಅನ್ನು ತೆರೆಯಿರಿ. |
07:53 | ನೀವು ನಿಮಗೆ ಇಷ್ಟವಾದ ಯಾವುದೇ ಎಡಿಟರ್ ಅನ್ನು ಬಳಸಬಹುದು. |
07:59 | ಹೀಗೆ ಟೈಪ್ ಮಾಡಿ: less than, question mark, php, Enter, echo, space, in double quotes "Hello India”, semicolon, Enter, question mark greater than. |
08:20 | ಫೈಲ್ ಅನ್ನು ಸೇವ್ ಮಾಡಲು,Ctrl ಮತ್ತು S ಕೀಗಳನ್ನು ಒಟ್ಟಿಗೆ ಒತ್ತಿ. |
08:27 | ವೆಬ್-ಬ್ರೌಸರ್ ಗೆ ಹಿಂದಿರುಗಿ. |
08:29 | ಅಡ್ರೆಸ್-ಬಾರ್ ನಲ್ಲಿ, ಹೀಗೆ ಟೈಪ್ ಮಾಡಿ: localhost/phpacademy ಮತ್ತು Enter ಅನ್ನು ಒತ್ತಿ. |
08:40 | ಇದು phpacademy ಫೋಲ್ಡರ್ ನಲ್ಲಿ, ಫೈಲ್ ಗಳ ಲಿಸ್ಟ್ ಅನ್ನು ತೋರಿಸುವುದು. |
08:47 | ಇದು ನಮ್ಮ demo.php ಫೈಲ್ ಆಗಿದೆ; ಅದರ ಮೇಲೆ ಕ್ಲಿಕ್ ಮಾಡಿ. |
08:53 | Hello India ಎಂಬ ಮೆಸೇಜ್ ಅನ್ನು ತೋರಿಸಲಾಗುತ್ತದೆ. |
08:57 | Xampp ಸರ್ವೀಸ್ ಗಳನ್ನು ನಿಲ್ಲಿಸಲು, 'ಟರ್ಮಿನಲ್' ನ ಮೇಲೆ ಹೀಗೆ ಟೈಪ್ ಮಾಡಿ: sudo /opt/lampp/lampp stop ಮತ್ತು Enter ಅನ್ನು ಒತ್ತಿ. |
09:13 | ಅಗತ್ಯವಿದ್ದರೆ admin password ಅನ್ನು ನಮೂದಿಸಿ. |
09:17 | XAMPP services ರನ್ ಆಗುತ್ತಿರುವುದು ನಿಲ್ಲುತ್ತದೆ. ನಿಮಗೆ ಮುಂದೆ ಎಂದಾದರೂ Xampp ಅನ್ನು ಇನ್ನೊಮ್ಮೆ ರನ್ ಮಾಡಬೇಕೆನಿಸಿದಾಗ, ಮೊದಲು ಅದನ್ನು start ಮಾಡಲು ನೆನಪಿಡಿ. |
09:27 | ಸಂಕ್ಷಿಪ್ತವಾಗಿ, ಈ ಟ್ಯುಟೋರಿಯಲ್ ನಲ್ಲಿ ನಾವು -
XAMPP services ಅನ್ನು ಹೇಗೆ ಇನ್ಸ್ಟಾಲ್ ಮಾಡುವುದು, ಆರಂಭಿಸುವುದು ಮತ್ತು ನಿಲ್ಲಿಸುವುದು, PHP ಫೈಲ್ ಅನ್ನು ಹೇಗೆ ಕ್ರಿಯೇಟ್ ಮತ್ತು ರನ್ ಮಾಡುವುದು ಎಂದು ಕಲಿತಿದ್ದೇವೆ. |
09:45 | ಈ ವೀಡಿಯೋ, Spoken Tutorial ಪ್ರೊಜೆಕ್ಟ್ ನ ಸಾರಾಂಶವಾಗಿದೆ. ನಿಮಗೆ ಒಳ್ಳೆಯ ಬ್ಯಾಂಡ್ವಿಡ್ತ್ ಸಿಗದಿದ್ದರೆ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು. |
09:55 | 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್ ತಂಡವು, ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ಪ್ರಮಾಣಪತ್ರಗಳನ್ನು ಕೊಡುತ್ತದೆ. ವಿವರಗಳಿಗಾಗಿ, ದಯವಿಟ್ಟು ನಮಗೆ ಬರೆಯಿರಿ. |
10:06 | Spoken Tutorial ಪ್ರೊಜೆಕ್ಟ್, NMEICT, MHRD, ಭಾರತ ಸರ್ಕಾರದ ಅನುದಾನವನ್ನು ಪಡೆದಿದೆ. |
10:13 | ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗೆ ತೋರಿಸಿದ ಲಿಂಕ್ ನಲ್ಲಿ ಲಭ್ಯವಿದೆ. |
10:19 | ಈ ಸ್ಕ್ರಿಪ್ಟ್ ನ ಅನುವಾದಕಿ, IIT Bombay ಯಿಂದ ಸಂಧ್ಯಾ ಪುಣೇಕರ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.
ವಂದನೆಗಳು. |