PHP-and-MySQL/C2/Variables-in-PHP/Kannada
From Script | Spoken-Tutorial
Time | Narration |
00:00 | PHP variables ಬಗ್ಗೆ ಇರುವ ಈ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
00:04 | ಮೊದಲು ಕೆಲವು ವಿಷಯಗಳನ್ನು ನಾನು ವಿವರಿಸುತ್ತೇನೆ. |
00:07 | PHP ವೇರಿಯೇಬಲ್ ಗಳನ್ನು ಬಳಸುವುದು ಬಹಳ ಸುಲಭ; ನೀವು ಬೇಗನೇ ಇದನ್ನು ತಿಳಿದುಕೊಳ್ಳುವಿರಿ. |
00:14 | ನೀವು ಇವುಗಳನ್ನು ಡಿಕ್ಲೇರ್ ಮಾಡಬೇಕಾಗಿಲ್ಲ ಮತ್ತು ಬರೆಯುವುದು ಸಹ ಸುಲಭವಾಗಿದೆ. |
00:18 | ಸ್ಕ್ರಿಪ್ಟ್ ನ ಮಧ್ಯದಲ್ಲಿ ಸಹ ನೀವು ವೇರಿಯೇಬಲ್ ಗೆ ಒಂದು ವ್ಯಾಲ್ಯೂಅನ್ನು ಸೇರಿಸಬಹುದು. |
00:23 | ಅಲ್ಲದೆ, ಅವು ನಿಮಗೆ ಬೇಕಾಗಿರುವ ಡೇಟಾ-ಟೈಪ್ ಗೆ ತಂತಾನೇ ಬದಲಾಗುತ್ತವೆ. |
00:28 | ಹೀಗಾಗಿ, ಪ್ರತಿಯೊಂದು ಸಲ ಅವುಗಳನ್ನು ಬೇರೆ ವಿಧದಲ್ಲಿ ಡಿಕ್ಲೇರ್ ಮಾಡುವ ಅಗತ್ಯವಿಲ್ಲ. ಅಥವಾ ಪ್ರತಿಯೊಂದು ಸಲ ಅವುಗಳಿಗಾಗಿ ವ್ಯಾಲ್ಯುವನ್ನು ಕೊಡಬೇಕಾಗಿಲ್ಲ. |
00:36 | ಉದಾಹರಣೆಗೆ, ಇಲ್ಲಿ ನಮ್ಮ PHP tags ನಾವು ಕ್ರಿಯೇಟ್ ಮಾಡೋಣ. ಮತ್ತು ನಮ್ಮ ಕಂಟೆಂಟ್ ಗಳು (ವಿಷಯಗಳು) ಮಧ್ಯದಲ್ಲಿ ಇರುತ್ತವೆ. |
00:41 | ಸರಿ. ಈಗ ನಾವು ಡಾಲರ್ ಚಿಹ್ನೆಯೊಂದಿಗೆ ($) ಆರಂಭಿಸುತ್ತೇವೆ, ನಂತರ ನಮ್ಮ ವೇರಿಯೇಬಲ್ “name” ಎಂದು ಇದೆ. |
00:48 | ದಯವಿಟ್ಟು ಗಮನಿಸಿ, ನೀವು ಸಂಖ್ಯೆಯೊಂದಿಗೆ ಇದನ್ನು ಆರಂಭಿಸಲು ಸಾಧ್ಯವಿಲ್ಲ. ಹೀಗಾಗಿ, ನಾನು '1' ರಿಂದ ಇದನ್ನು ಆರಂಭಿಸಲು ಸಾಧ್ಯವಿಲ್ಲ. |
00:53 | ಆದರೆ ಒಂದು ಅಂಡರ್ಸ್ಕೋರ್ ಅಥವಾ ಅಕ್ಷರದಿಂದ ಆರಂಭಿಸಲು ಸಾಧ್ಯವಿದೆ. |
00:57 | ಅಂಡರ್ಸ್ಕೋರ್, ಅಕ್ಷರ ಮತ್ತು ಸಂಖ್ಯೆಗಳ ಹೊರತಾಗಿ ಇನ್ನುಳಿದ ಯಾವುದೇ ವಿಶೇಷ ಕ್ಯಾರೆಕ್ಟರ್ ಗಳಿಗೆ ಅನುಮತಿಯಿಲ್ಲ. ಆದರೆ ಸಂಖ್ಯೆಯೊಂದಿಗೆ ಆರಂಭಿಸಲು ಮಾತ್ರ ಸಾಧ್ಯವಿಲ್ಲ. |
01:06 | ಆದ್ದರಿಂದ, ಅದನ್ನು ಇಲ್ಲಿ ಸಂಪೂರ್ಣವಾಗಿ ಸ್ವೀಕರಿಸಲಾಗಿದೆ. |
01:09 | ಸರಿ. ನಾನು name ಎಂಬ ಒಂದು ವೇರಿಯೇಬಲ್ ಅನ್ನು ಕ್ರಿಯೇಟ್ ಮಾಡುತ್ತೇನೆ. ಅದು ಡಬಲ್ ಕೋಟ್ಸ್ ನಲ್ಲಿದ್ದು, ಒಂದು ಸ್ಟ್ರಿಂಗ್ ವ್ಯಾಲ್ಯೂಅನ್ನು ಹೊಂದಿರುತ್ತದೆ. ಇದು "echo" ಫಂಕ್ಷನ್ ಗಾಗಿ ನಾವು ಬಳಸಿದಂತೆಯೇ ಇದೆ. |
01:21 | ನನ್ನ ಹೆಸರು "Alex" ಎಂದಿದೆ. |
01:23 | ಮುಂದಿನ ಸಾಲಿನಲ್ಲಿ ನಾವು ಡಾಲರ್ ಚಿಹ್ನೆಯನ್ನು ಬಳಸಿ ($), age ಎಂಬ ಇನ್ನೊಂದು ವೇರಿಯೇಬಲ್ ಅನ್ನು ಕ್ರಿಯೇಟ್ ಮಾಡುತ್ತೇವೆ. ಇದು '19' ವ್ಯಾಲ್ಯೂಅನ್ನು ಹೊಂದಿದೆ, ಆದರೆ ಡಬಲ್ ಕೋಟ್ಸ್ ನಲ್ಲಿ ಇಲ್ಲ. |
01:33 | ಏಕೆಂದರೆ ಇದು ಒಂದು ಇಂಟೀಜರ್ (ಪೂರ್ಣಾಂಕ) ಆಗಿದೆ. |
01:36 | ನೀವು ಇದನ್ನು ದಶಮಾಂಶ ವ್ಯಾಲ್ಯೂಗಳಿಗಾಗಿ ಸಹ ಬಳಸಬಹುದು. ಹೀಗಾಗಿ ಇದು '19.5' ಸಹ ಆಗಿರಲು ಸಾಧ್ಯವಿದೆ. |
01:43 | ಅದೂ ಸಹ ತಂತಾನೆ ಇದನ್ನು ದಶಮಾಂಶಕ್ಕೆ ಬದಲಾಯಿಸುತ್ತದೆ. |
01:48 | ಆದಾಗ್ಯೂ, ಸಧ್ಯಕ್ಕೆ ಇದು ಇಂಟೀಜರ್ ಮಾತ್ರ ಆಗಿದೆ. ನನಗೆ ಇದು ಹೀಗೇ ಬೇಕಾಗಿದೆ. ವೇರಿಯೇಬಲ್- 'name', ಇದು ಒಂದು string ಆಗಿದೆ ಮತ್ತು ವೇರಿಯೇಬಲ್ 'age' , integer ಆಗಿದೆ. |
01:57 | ಈಗ ಇವುಗಳನ್ನು “ಇಕೋ” ಮಾಡಲು ಪ್ರಯತ್ನಿಸೋಣ. |
02:00 | ನಮಗೆ "echo" ಮತ್ತು name ಎಂಬ ವೇರಿಯೇಬಲ್ ಗಳು ಬೇಕು. ಲೈನ್ ಟರ್ಮಿನೇಟರ್ ಅನ್ನು ಮರೆಯಬೇಡಿ. |
02:06 | ಸರಿ, "variables" ಎಂಬ ನಮ್ಮ ಫೈಲ್ ಅನ್ನು ಹುಡುಕೋಣ. |
02:11 | ಇಲ್ಲಿ ನಾನು "echo name" ಎಂದು ಹೇಳಿದಲ್ಲಿ, "Alex" ಅನ್ನು echo ಮಾಡಲಾಗಿದೆ. |
02:16 | ಈಗ ನನ್ನ age ಅನ್ನು echo ಮಾಡಲು ಪ್ರಯತ್ನಿಸೋಣ. |
02:19 | ಇದು ಒಂದು ಇಂಟೀಜರ್ ವೇರಿಯೇಬಲ್ ಆಗಿದೆ ಮತ್ತು ಇದನ್ನು ಇಲ್ಲಿ echo ಮಾಡಲಾಗಿದೆ. |
02:24 | ವೇರಿಯೇಬಲ್ ಗಳನ್ನು ಸುಲಭವಾಗಿ ಒಂದು ಸ್ಟ್ರಿಂಗ್ ನಲ್ಲಿ ಜೋಡಿಸಬಹುದು (concatenate). |
02:30 | ವಾಸ್ತವವಾಗಿ, ಇದನ್ನು concatenation ಎಂದರೆ ತಪ್ಪಾಗುತ್ತದೆ. ಆದರೆ ನಿಮ್ಮ ಸ್ಟ್ರಿಂಗ್ ನ ಒಳಗೆ ಅವುಗಳನ್ನು ಬಹಳ ಸುಲಭವಾಗಿ ಸೇರಿಸಬಹುದು. |
02:37 | ಕಾಂಕ್ಯಾಟಿನೇಶನ್ (concatenation) ಎಂದರೆ, ಎರಡು ಸ್ಟ್ರಿಂಗ್ ಗಳನ್ನು ಒಂದು ಸಾಲಿನಲ್ಲಿ ಸೇರಿಸುವುದು. |
02:46 | ಉದಾಹರಣೆಗೆ, 'concat', ನಂತರ '.', ಆನಂತರ 'ination' ಎನ್ನುತ್ತೇನೆ. |
02:56 | ಇದು 'concatination' ಎಂದು echo ಮಾಡುತ್ತದೆ. |
02:59 | ಇದನ್ನು ಪ್ರಯತ್ನಿಸೋಣ. OK? |
03:03 | ಆದರೆ ಅದರ ಬಗ್ಗೆ ಒಂದು ಬೇರೆಯ ಟ್ಯುಟೋರಿಯಲ್ ಇದೆ. ಸಧ್ಯಕ್ಕೆ ನೀವು ಇದನ್ನು ಇಕೋ ಮಾಡುವಾಗ, ನಿಮ್ಮ ವೇರಿಯೇಬಲ್ ಗಳಲ್ಲಿ ಇದೂ ಒಂದು ಎಂದು ಇದನ್ನು ಸೇರಿಸಬೇಕಾಗಿಲ್ಲ. |
03:14 | ನಿಮಗೆ ಇದು ಅರ್ಥವಾಗದಿದ್ದರೆ ಚಿಂತಿಸಬೇಡಿ. ಇದು ಬಹಳ ಸರಳವಾಗಿದೆ. |
03:18 | ನಾನು ಹೀಗೆ ಹೇಳುತ್ತೇನೆ: "My name is", $name, "and my age is", ನನ್ನ age ನ್ನು ಬರೆಯುತ್ತೇನೆ. |
03:24 | ಈಗ ಎಲ್ಲವೂ ಒಂದೇ ಸ್ಟ್ರಿಂಗ್ ನಲ್ಲಿದೆ, ಎಲ್ಲವೂ ಒಂದೇ echo ದಲ್ಲಿದೆ ಮತ್ತು ನಮಗೆ 'My name is' ಮತ್ತು ಈ ಟೆಕ್ಸ್ಟ್ ಸಿಕ್ಕಿದೆ. |
03:32 | ವೇರಿಯೇಬಲ್ ಅನ್ನು ಕಾಲ್ ಮಾಡಲಾಗಿದೆ. ಇದನ್ನು ಇಲ್ಲಿ ಇಡಲಾಗಿದೆ. ಮತ್ತು, age ಅನ್ನು ಕಾಲ್ ಮಾಡಿದಾಗ, ಅದರ ವ್ಯಾಲ್ಯೂ ಅನ್ನು ಇಲ್ಲಿ ಇರಿಸಲಾಗುತ್ತದೆ. |
03:40 | ನಾವು ಅದನ್ನು refresh ಮಾಡಬಹುದು ಮತ್ತು ನೀವು "My name is Alex" ಅನ್ನು ನೋಡಬಹುದು. ಇದು ನಮ್ಮ ವೇರಿಯೇಬಲ್ ಆಗಿದೆ; "and my age is 19" ಇದೂ ನಮ್ಮ ವೇರಿಯೇಬಲ್ ಆಗಿದೆ. |
03:48 | ನಿಜವಾಗಿಯೂ ಇವುಗಳನ್ನು ಸುಲಭವಾಗಿ ಸ್ಟ್ರಿಂಗ್ ಗಳಲ್ಲಿ ಸೇರಿಸಬಹುದು. |
03:52 | ಸರಿ, ವೇರಿಯೇಬಲ್ ಗಳ ಬಗ್ಗೆ ನೀವು ತಿಳಿಯಬೇಕಾದುದು ಇಷ್ಟೇ ಆಗಿದೆ. |
03:56 | ಇಲ್ಲಿ ನಾನು ನಿಮಗೆ ತೋರಿಸಿದ Boolean (ಬೂಲಿಯನ್), decimal (ಡೆಸಿಮಲ್) ಗಳಂತಹ ಬೇರೆ ವಿಧದ ವೇರಿಯೇಬಲ್ ಗಳಿವೆ. ಉದಾಹರಣೆಗೆ '19.5'. |
04:06 | ನೀವು ಅವುಗಳನ್ನು ಡಾಲರ್ ಚಿಹ್ನೆಯೊಂದಿಗೆ ಅದೇರೀತಿಯಲ್ಲಿ ಡಿಕ್ಲೇರ್ ಮಾಡಬಹುದು. |
04:10 | ಆದ್ದರಿಂದ, ಇದನ್ನು ಅಭ್ಯಾಸ ಮಾಡಿ ಮತ್ತೆ ಹಿಂತಿರುಗಿ. ನಂತರ ನೀವು ಇನ್ನೂ ಹೆಚ್ಚು ಸುಧಾರಿತ ಕಾರ್ಯಗಳನ್ನು ಕಲಿಯಬಹುದು. |
04:19 | ಈ ಸ್ಕ್ರಿಪ್ಟ್ ನ ಅನುವಾದಕಿ, IIT Bombay ಯಿಂದ ಸಂಧ್ಯಾ ಪುಣೇಕರ್ ಹಾಗೂ ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.
ಧನ್ಯವಾದಗಳು! |