PHP-and-MySQL/C2/Switch-Statement/Kannada
From Script | Spoken-Tutorial
Time | Narration |
00:00 | ನಮಸ್ಕಾರ. PHP ಯಲ್ಲಿ 'switch' statement ಎಂಬ ಈ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
00:06 | ನಾನು ಇದರ ಬಗ್ಗೆ ಒಂದು ಹೊಸ ಅಭ್ಯಾಸವನ್ನು ತೋರಿಸುತ್ತೇನೆ. ಏಕೆಂದರೆ, ಇದು PHP ಯ ಒಂದು ಪ್ರಮುಖ ಲಕ್ಷಣವಾಗಿದೆ. |
00:13 | ನಾವು ಇದರ ಸಿಂಟ್ಯಾಕ್ಸ್ ಅನ್ನು ಬರೆಯೋಣ. |
00:16 | switch ಸ್ಟೇಟ್ಮೆಂಟ್ ಅನ್ನು, if ಸ್ಟೇಟ್ಮೆಂಟ್ ಗೆ ಬದಲಾಗಿ ಬಳಸುತ್ತೇವೆ. ಇನ್ಪುಟ್ ಒಂದು ಎಕ್ಸ್ಪ್ರೆಶನ್ (expression) ಆಗಿದ್ದರೂ ಸಹ ಇದು ಅಚ್ಚುಕಟ್ಟಾಗಿದೆ ಮತ್ತು ಫಾರ್ಮ್ಯಾಟ್ ಮಾಡಬಹುದಾದ ಆಯ್ಕೆಯಾಗಿದೆ. |
00:29 | ಈಗ ಯಾವುದೋ ಒಂದು ವ್ಯಾಲ್ಯೂವನ್ನು ಇನ್ಪುಟ್ ಮಾಡೋಣ ಮತ್ತು ನಂತರ ಇದಕ್ಕೆ ಸಮನಾದ ವ್ಯಾಲ್ಯೂವನ್ನು ಸೇವ್ ಮಾಡೋಣ. |
00:36 | ಅದು ಈ ವ್ಯಾಲ್ಯೂ ಗೆ ಸಮವಾಗಿದ್ದರೆ, ಆಮೇಲೆ ಈ ಕೋಡ್ ಅನ್ನು ನಾವು ಎಕ್ಸೀಕ್ಯೂಟ್ ಮಾಡಬಹುದು. |
00:43 | ಇದು ಹೋಲಿಸುವ ತಂತ್ರವಲ್ಲ. ವ್ಯಾಲ್ಯೂಗಳನ್ನು ಮತ್ತು ಇನ್ಪುಟ್ ಅನ್ನು ಅವಲಂಬಿಸಿರುವ ಔಟ್ಪುಟ್ ಅನ್ನು ಹೊಂದಿಸಲು, ಒಂದು if ಸ್ಟೇಟ್ಮೆಂಟ್ ಅನ್ನು ಹೋಲಿಸಲು, ನಾವು switch ಎಂದು ಹೇಳುತ್ತೇವೆ. |
00:55 | ಈಗ ನಾವು ಆರಂಭಿಸೋಣ. |
00:57 | ಇದಕ್ಕಾಗಿ switch ಬೇಸಿಕ್ ಕೋಡ್ ಆಗಿದೆ. |
01:00 | ಇಲ್ಲಿ ನಾವು ಒಂದು ಎಕ್ಸ್ಪ್ರೆಶನ್ ಅನ್ನು (expression) ಸೇರಿಸೋಣ. ಉದಾಹರಣೆಗೆ- ಇಲ್ಲಿ ನಾನು "Alex" ಎನ್ನುತ್ತೇನೆ. |
01:09 | ನಾವು ಒಂದು ಚಿಕ್ಕ ಪ್ರೊಗ್ರಾಂಅನ್ನು ಬರೆಯೋಣ. ನಾನು ಅದನ್ನು ವಿವರಿಸುತ್ತ ಹೋಗುತ್ತೇನೆ. |
01:15 | if ಸ್ಟೇಟ್ಮೆಂಟ್ ನ ಹಾಗೆಯೇ, ಇಲ್ಲಿ ನಾವು ಕರ್ಲೀ ಬ್ರ್ಯಾಕೆಟ್ ಗಳನ್ನು ಹಾಕುತ್ತೇವೆ. |
01:21 | ಈಗ ಪ್ರತಿಯೊಂದು ರೀತಿಯ ಚೆಕ್ ಮಾಡುವ ಬಗೆಯನ್ನು ನೋಡೋಣ. |
01:26 | ಇಲ್ಲಿ ನಮಗೆ ವ್ಯಾಲ್ಯೂ ಅನ್ನು ಪರಿಶೀಲಿಸಬೇಕಾಗಿದೆ. |
01:29 | ಈಗ ನಾವು ಇದನ್ನು ಕೊಟೇಶನ್ ಚಿಹ್ನೆಗಳಲ್ಲಿ ಹಾಕುತ್ತೇವೆ. |
01:32 | ನೀವು ಸಂಖ್ಯೆಯನ್ನು ಕೊಡಲು ಸಹ ಆಗುವದಿಲ್ಲ. |
01:35 | ಆದ್ದರಿಂದ ಹೀಗೆ ಟೈಪ್ ಮಾಡುತ್ತೇವೆ - case - ನಮಗೆ ಹೊಂದಿಸಬೇಕಾದ case ನ ವ್ಯಾಲ್ಯೂ. ಉದಾಹರಣೆಗೆ- "Alex". |
01:44 | ನಂತರ ಒಂದು ಕೋಲನ್ ಅಥವಾ ಸೆಮಿಕೋಲನ್. |
01:48 | ನಂತರ, ನೀವು ಆರಿಸಿಕೊಂಡ switch ಎಕ್ಸ್ಪ್ರೆಶನ್ ನೊಂದಿಗೆ case ಹೊಂದಿಕೆಯಾದರೆ, ಷರತ್ತು (condition) ಟೈಪ್ ಮಾಡುತ್ತೇವೆ. |
01:56 | ಹೀಗಾಗಿ, ನಾನು ಇದನ್ನು ಟೈಪ್ ಮಾಡುವೆನು - echo "you have blue eyes". |
02:05 | ನಮ್ಮ case ಹೋಲಿಕೆಯನ್ನು ಕೊನೆಗೊಳಿಸಲು, ನಾವು break ಮತ್ತು ಒಂದು ಸೆಮಿಕೋಲನ್ ಅನ್ನು ಬಳಸುತ್ತೇವೆ. |
02:11 | ನೆನಪಿಡಿ, ನಾವು ಸೆಮಿಕೋಲನ್ ಅನ್ನು ಇಲ್ಲಿ ಬಳಸಿದ್ದೇವೆ, ಆದರೆ ಇಲ್ಲಿ ಅಲ್ಲ. |
02:18 | ಈಗ ಎರಡನೆಯ case. ಇದನ್ನು ಹೇಗೆ ಮಾಡುವುದೆಂದು ನೋಡೋಣ. |
02:23 | ನಾನು "Billy" ಮತ್ತು echo "you have brown eyes" ಎಂದು ಟೈಪ್ ಮಾಡುವೆನು. |
02:30 | ಸರಿ. ನಂತರ break ಮತ್ತು ಸೆಮಿಕೋಲನ್. |
02:36 | ಇದು ಇಂಟಿಗ್ರೇಟ್ ಮಾಡಿದ if ನ ಹಾಗೆ ಇದೆ. ಎಂದರೆ, ಇದನ್ನು ನಾನು ಹೀಗೆ ಹೇಳಬಹುದಿತ್ತು - if your name is "Alex", echo "you have blue eyes", else if your name is Billy, "you have brown eyes". |
02:53 | ಬಹುಶಃ ಕೆಲವರಿಗೆ ಹೀಗೆ ಮಾಡುವುದು ಸುಲಭವಾಗಿದೆ. ಇದನ್ನು ಓದುವುದು ಸುಲಭ, ಆದರೆ ಅವರವರ ಇಷ್ಟ. |
03:02 | ಸರಿ, ಇಲ್ಲಿ ಇನ್ನುಮುಂದೆ case ಗಳಿಲ್ಲ. ಈ ಉದಾಹರಣೆಗಾಗಿ, ನಾನು ಕೇವಲ "Alex" ಮತ್ತು "Billy" ಗಳನ್ನು ಮಾತ್ರ ಬಳಸುತ್ತಿದ್ದೇನೆ. |
03:10 | ಇಲ್ಲಿ, ನಾನು default ಎನ್ನುತ್ತೇನೆ. ಇದು - "I don't know what color your eyes are" ಎಂದು echo (ಇಕೋ) ಮಾಡುತ್ತದೆ. |
03:19 | ಇದರ ನಂತರ ನಮಗೆ break ನ ಅಗತ್ಯವಿಲ್ಲ. ಏಕೆಂದರೆ, ಇಲ್ಲಿ ಇನ್ನು ಹೆಚ್ಚಿನ case ಗಳಿಲ್ಲ. |
03:26 | ಖಂಡಿತವಾಗಿಯೂ ಇದರ ನಂತರ break ಇಲ್ಲ. ಏಕೆಂದರೆ, ಇಲ್ಲಿ ಆಯ್ದುಕೊಳ್ಳಲು ಇನ್ನು ಹೆಚ್ಚಿನ ಆಯ್ಕೆಗಳೂ ಇಲ್ಲ. |
03:34 | ಸರಿ.. ಇಲ್ಲಿ ನಮ್ಮ switch ಇದೆ. ಇದನ್ನು ನೋಡೋಣ. |
03:39 | ಈಗ, ನಮ್ಮ ಪ್ರೊಗ್ರಾಂಅನ್ನು ಬಿಲ್ಡ್ ಮಾಡಲು, ನಾನು ಇಲ್ಲಿ ಈ "Alex" ಅನ್ನು, ಒಂದು ವೇರಿಯೇಬಲ್ ನಿಂದ ಬದಲಾಯಿಸುತ್ತೇನೆ. |
03:46 | $name ಇಕ್ವಲ್ಸ್ ಎಂದು ಟೈಪ್ ಮಾಡುತ್ತೇನೆ ಮತ್ತು ಅದನ್ನು ನಿರ್ಧರಿಸಲು ನಿಮಗೆ ಬಿಡುತ್ತೇನೆ. |
03:53 | ಆಮೇಲೆ ಇಲ್ಲಿ ನಾನು $name ಎನ್ನುತ್ತೇನೆ. |
03:57 | ಇಲ್ಲಿ, ನಾವು ಒಂದು ವೇರಿಯೇಬಲ್ ಅನ್ನು ಹೀಗೆ ಸೇರಿಸುವುದನ್ನು ನೀವು ನೋಡುತ್ತೀರಿ. |
04:01 | ಇಷ್ಟರಲ್ಲಿ ಅದನ್ನು ಹೇಗೆ ಮಾಡಬೇಕೆಂದು ನಿಮಗೆ ತಿಳಿದಿರಬೇಕು. |
04:04 | ಇದು ಹೇಗೆ ಕೆಲಸ ಮಾಡುತ್ತದೆ ಎಂದು ನೋಡೋಣ. |
04:08 | ನೀವು switch ಎಂದು ಹೇಳುವಿರಿ. ನೀವು "Alex" ಗೆ ಸಮವಾಗಿರುವ ಈ ಎಕ್ಸ್ಪ್ರೆಶನ್ ಅನ್ನು (expression) ತೆಗೆದುಕೊಳ್ಳಿ. |
04:13 | ಮೂಲತಃ, ಇದು "Alex" ಗೆ ಸಮವಾಗಿರುವ case ಆಗಿದೆ ಮತ್ತು ಇದನ್ನು ಹೀಗೆ echo ಮಾಡುತ್ತದೆ. ಈ break, ಅದನ್ನು ಕೊನೆಗೊಳಿಸಲು ಇದೆ. |
04:22 | ಒಂದುವೇಳೆ, name "Rahul" ಎಂದು ಇದ್ದರೆ, default ಹೀಗೆ echo ಮಾಡುವುದು - "I don't know what colour your eyes are". |
04:29 | ಸರಿ, ಇದನ್ನು ರನ್ ಮಾಡಲು ಪ್ರಯತ್ನಿಸೋಣ. |
04:37 | ಸಂಕ್ಷಿಪ್ತವಾಗಿ, |
04:39 | ನಾವು "Alex" ಮತ್ತು "Alex" ಹೊಂದುತ್ತವೆ ಎಂದು ನೋಡಬಹುದು, ಔಟ್ಪುಟ್ ಗೆ ಸರಿಹೊಂದುತ್ತವೆ. |
04:44 | ನೀವು ಹೀಗೆ ಮಾಡಬಹುದು, ಇಲ್ಲಿ ನಿಮಗೆ ಬೇಕಾದಷ್ಟು ಕೋಡ್ ನ ಸಾಲುಗಳನ್ನು ನೀವು ಸೇರಿಸಬಹುದು. case ಎಲ್ಲಿಗೆ ಕೊನೆಗೊಳ್ಳುವುದು ಎಂದು ಈ break ನಿರ್ಧರಿಸುತ್ತದೆ. |
04:54 | ಒಂದು if ಸ್ಟೇಟ್ಮೆಂಟ್ ನಲ್ಲಿ, ಬ್ಲಾಕ್ ಅನ್ನು ಅಂತ್ಯಗೊಳಿಸಲು ಕರ್ಲೀ ಬ್ರ್ಯಾಕೆಟ್ ಗಳು ಬೇಕು. |
04:59 | ಆದಾಗ್ಯೂ, ಇಲ್ಲಿ break, ಬ್ಲಾಕ್ ನ ಅಂತ್ಯವನ್ನು ನಿರ್ಧರಿಸುತ್ತದೆ. ಅಂದಹಾಗೆ, ಇವುಗಳನ್ನು ಬ್ಲಾಕ್ (block) ಗಳೆನ್ನುತ್ತಾರೆ. |
05:06 | ಇದನ್ನು "Billy" ಎಂದು ಬದಲಿಸೋಣ ಮತ್ತು ಏನಾಗುತ್ತದೆ ಎಂದು ನೋಡೋಣ. |
05:10 | "You have brown eyes" – ಇದನ್ನೇ ನಾವು ಇಲ್ಲಿ ನಿರ್ಧರಿಸಿದ್ದೇವೆ. |
05:16 | ಈಗ ನಾನು ಇದನ್ನು "Kyle" ಎಂದು ಬದಲಿಸಿ ರೆಫ್ರೆಶ್ ಮಾಡುತ್ತೇನೆ. "I don't know what colour your eyes are". ಏಕೆಂದರೆ, ಇಲ್ಲಿ, ನಮ್ಮ ಪ್ರೊಗ್ರಾಂನಲ್ಲಿ ಕೈಲ್ ನ ಕಣ್ಣಿನ ಬಣ್ಣವನ್ನು ಹೇಳುವ ಯಾವದೇ ಬ್ಲಾಕ್ ಇಲ್ಲ. |
05:31 | ಹೀಗೆ, ಇದು switch ಸ್ಟೇಟ್ಮೆಂಟ್ ಬಗ್ಗೆ ಆಗಿದೆ. |
05:34 | ಇದನ್ನು ಪ್ರಯತ್ನಿಸಿ ನೋಡಿ. ಕೆಲವರು ಇದನ್ನು ಬಳಸಲು ಇಷ್ಟಪಡುವುದಿಲ್ಲ ಹಾಗೂ ಕೆಲವರು ಇದನ್ನು ಬಳಸಲು ಬಯಸುತ್ತಾರೆ. |
05:38 | ಇದು ಬಹುಶಃ if ಸ್ಟೇಟ್ಮೆಂಟ್ ಗಿಂತ ಬಹಳ ಶೀಘ್ರವಾಗಿದೆ ಹಾಗೂ ನಿಯಂತ್ರಿಸಲು ಸುಲಭವಾಗಿದೆ. ಚೆನ್ನಾಗಿ ಸಹ ಕಾಣುತ್ತದೆ. ನಿಜವಾಗಿಯೂ ನಿಮ್ಮ ಆಯ್ಕೆಗೆ ಹೊಂದುವಂತಿದೆ. |
05:48 | ಈ ಸ್ಕ್ರಿಪ್ಟ್ ನ ಅನುವಾದಕಿ IIT Bombay ಯಿಂದ ಸಂಧ್ಯಾ ಪುಣೇಕರ್ ಹಾಗೂ ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.
ಧನ್ಯವಾದಗಳು. |