PHP-and-MySQL/C2/Logical-Operators/Kannada
From Script | Spoken-Tutorial
Time | Narration |
00:00 | ನಮಸ್ಕಾರ. Logical Operators ಎಂಬ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. ಇದೊಂದು ಬಹಳ ಸಂಕ್ಷಿಪ್ತವಾದ ಟ್ಯುಟೋರಿಯಲ್ ಆಗಿದೆ. |
00:09 | ಮತ್ತೊಮ್ಮೆ ನಾನು "if" ಸ್ಟೇಟ್ಮೆಂಟ್ ನ ಒಂದು ಉದಾಹರಣೆಯನ್ನು ಬಳಸುವೆನು. ಏಕೆಂದರೆ ಸಧ್ಯಕ್ಕೆ ನನ್ನ ಹತ್ತಿರ ಇದ್ದದ್ದು ಅದೊಂದೇ. |
00:18 | 'ಲಾಜಿಕಲ್ ಆಪರೇಟರ್' (logical operator) ಎಂದರೇನು? ಇದು AND ಅಥವಾ OR ಆಪರೇಟರ್ ಆಗಿದೆ. |
00:27 | ಈಗ, "if" ಸ್ಟೇಟ್ಮೆಂಟ್ ಗಾಗಿ ನಾನು ಬೇಸಿಕ್ ಲೇಔಟ್ ಅನ್ನು ರಚಿಸುವಾಗ, ನೀವು ಇವುಗಳೊಂದಿಗೆ ಏನು ಮಾಡಬಹುದೆಂದು ತೋರಿಸುತ್ತೇನೆ. |
00:43 | ಈ ಮೊದಲು ನಮ್ಮ ಹತ್ತಿರ ಇದ್ದ '1 is greater than 1' ನಂತಹ ಉದಾಹರಣೆಯು ಸಧ್ಯಕ್ಕೆ False ಅನ್ನು ರಿಟರ್ನ್ ಮಾಡುತ್ತದೆ (ಹಿಂದಿರುಗಿಸುತ್ತದೆ). |
00:54 | ನಾವು ಎಲ್ಲಿದ್ದೇವೆ ಎಂದು ನೋಡಲು, ಅದನ್ನು ನಾವು ನೊಡೋಣ..... ಸರಿ! ಅದು "False" ಎಂದಿದೆ. |
01:04 | ಈಗ, ನಾನು "if 1 is greater than 1 or equals 1" ಎಂದು ಹೇಳಿದರೆ ಏನಾಗುತ್ತದೆ? |
01:18 | ನಾವು ಇದನ್ನು 'OR' ಎಂದು ಬರೆಯುವುದಿಲ್ಲ. ಆದರೆ ಎರಡು ಲಂಬ ರೇಖೆಗಳನ್ನು ಅಥವಾ ಎರಡು ಪೈಪ್ ಗಳನ್ನು ಬರೆಯುತ್ತೇವೆ. |
01:26 | ನನ್ನ ಕೀಬೋರ್ಡ್ ನಲ್ಲಿ ಮಾತ್ರ ಇದು shift ಕೀ ಯ ಪಕ್ಕದಲ್ಲಿದೆ. ಎರಡು ಲಂಬ ರೇಖೆಗಳು ಎಂದರೆ 'OR' ಎಂದರ್ಥ. |
01:38 | ನಾವು ಇದನ್ನು ಕಂಪೈಲ್ ಮಾಡಿದರೆ, ಏನು ಫಲಿತಾಂಶ ಬರಬಹುದು? |
01:43 | ಈಗ ಒಮ್ಮೆ ಇದನ್ನು ನೋಡೋಣ- if 1 is greater than 1 - "false". ಆದ್ದರಿಂದ ನಾವು "false" ಎಂದು ಬರೆದಿದ್ದೇವೆ. OR 1 is equal to 1. |
01:54 | 1 equals to 1 ಇದು "true" ಎಂದು ನಮಗೆ ತಿಳಿದಿದೆ. ಇಲ್ಲಿ ನಾವು OR 1 is equal to 1 ಎಂದು ಹೇಳುತ್ತಿದ್ದೇವೆ, AND ಎಂದು ಅಲ್ಲ; ಏಕೆಂದರೆ, ನಾವು AND ಎಂದು ಹೇಳಿದರೆ, ಆಗ ಎರಡೂ "true" ಆಗಿರಬೇಕು. |
02:09 | OR- ಇದಕ್ಕಾಗಿ, ಈ ಎರಡರಲ್ಲಿ ಒಂದಾದರೂ "true" ಎಂದು ಇರಬೇಕು. |
02:12 | ಔಟ್ಪುಟ್ ನಮಗೆ "true" ಸಿಗುತ್ತದೆ ಎಂದು ಆಶಿಸುತ್ತೇನೆ. |
02:16 | ಸರಿ, OR ಹೀಗಿದೆ. |
02:18 | ಮೂಲತಃ ಅದು ನಿಮಗೆ ಎರಡು ಹೋಲಿಕೆಗಳನ್ನು ಮಾಡಲು ಅನುಮತಿಸುತ್ತದೆ. ಅವುಗಳನ್ನು ನಿಮ್ಮ if ಸ್ಟೇಟ್ಮೆಂಟ್ ನಲ್ಲಿ ತೋರಿಸಲು ಮತ್ತು ಅವುಗಳಲ್ಲಿ ಯಾವುದೇ ಒಂದು "true" ಎಂದಾದರೆ, ಆಗ ಅದು ಒಂದು "either" ಆಪರೇಟರ್ ನ ಹಾಗೆ ಆಗುತ್ತದೆ. |
02:30 | ಅವುಗಳಲ್ಲಿ ಯಾವುದೇ ಒಂದು "true" ಎಂದಾದರೆ, ನಿಮಗೆ "true" ಎಂದು ಸಿಗುತ್ತದೆ. |
02:34 | AND ಆಪರೇಟರ್ ಸ್ವಲ್ಪ ಬೇರೆಯಾಗಿದೆ. |
02:39 | AND ನಲ್ಲಿ ಇದನ್ನು ಎಕ್ಸೀಕ್ಯೂಟ್ ಮಾಡಲು ಈ ಎರಡೂ "true" ಆಗಿರುವುದು ಅವಶ್ಯಕ. |
02:46 | ಹೀಗಾಗಿ ಇಲ್ಲಿ ನಾವು "false" ಅನ್ನು ಪಡೆದಿದ್ದೇವೆ. ಏಕೆಂದರೆ 1 is not greater than 1. |
02:51 | ನಾವು ನಮ್ಮ ಹೋಲಿಸುವ ಆಪರೇಟರ್ ಗಳಿಗೆ (comparison operators) ಹಿಂದಿರುಗೋಣ. ಮತ್ತು if 1 is greater than 1 or equal to 1 AND (&&) 1 equal 1 ಎನ್ನುತ್ತೇವೆ. ಇಲ್ಲಿ ನಾವು "true" ಅನ್ನು ಪಡೆಯುತ್ತೇವೆ. |
03:04 | ಈಗ, ಈ ಟೆಸ್ಟ್ ನಲ್ಲಿ ನಾನು ಕೆಲವು ವೇರಿಯೇಬಲ್ ಗಳನ್ನು ಸೇರಿಸಬೇಕು ಎಂದುಕೊಂಡಿದ್ದೇನೆ. |
03:10 | ಇಲ್ಲಿಯವರೆಗೆ ನನ್ನ ಉಳಿದ ಟ್ಯುಟೋರಿಯಲ್ ಗಳನ್ನು ಅಭ್ಯಸಿಸಿ, ನೀವು ವೇರಿಯೇಬಲ್ ಗಳ ಬಗ್ಗೆ ಸಾಕಷ್ಟು ತಿಳಿದುಕೊಂಡಿರಬಹುದು. |
03:17 | ಇವು ಎರಡು 'ಲಾಜಿಕಲ್ ಆಪರೇಟರ್' (logical operators) ಗಳಾಗಿವೆ. |
03:20 | ಇವು ಬಹಳ ಉಪಯುಕ್ತವಾಗಿವೆ. ಇದು ಒಂದು ಒಳ್ಳೆಯ ಉದಾಹರಣೆ ಆಗಿದೆ. ಇದನ್ನು ನೀವು ನನ್ನ ಒಂದು ಪ್ರೊಜೆಕ್ಟ್ ನಲ್ಲಿ ನೋಡುತ್ತೀರಿ. |
03:30 | ಇದೊಂದು "login" ಫಾರ್ಮ್ ಆಗಿದೆ. ಒಬ್ಬ ಬಳಕೆದಾರನಿಗೆ (user) ಒಂದು ವೆಬ್ಸೈಟ್ ನಲ್ಲಿ ಲಾಗ್-ಇನ್ ಮಾಡಬೇಕಾಗಿದೆ ಎಂದುಕೊಳ್ಳಿ. |
03:35 | ಈಮೊದಲು ನೀವು ಒಂದು ವೆಬ್ಸೈಟ್ ನಲ್ಲಿ ಲಾಗ್-ಇನ್ ಮಾಡಿರಬಹುದು. ಅದು ನಿಮ್ಮ "username" ಮತ್ತು "password" ಗಳನ್ನು ನಮೂದಿಸಲು ಹೇಳಿರುತ್ತದೆ. ಈಗ ಇಲ್ಲಿಯೂ ಹಾಗೆಯೇ ಇದೆ. |
03:43 | ಬಳಕೆದಾರರು "username" ಮತ್ತು "password" ಗಳನ್ನು ನಮೂದಿಸಿದ್ದಾನೆಯೇ ಎಂದು ನಾವು ನೋಡಬೇಕು. |
03:48 | ಅವರು ಇನ್ನೂ ಮಾಡಿರದಿದ್ದರೆ, "username" ಅನ್ನು "password" ಗೆ ಹೋಲಿಸುವುದರಲ್ಲಿ ಅರ್ಥವಿಲ್ಲ. |
03:52 | ಉದಾಹರಣೆಗೆ ನಾವು ಹೀಗೆ ಹೆಳಬಹುದು: |
03:54 | ನಾನು '$username' ಅನ್ನು "alex" ಮತ್ತು ನನ್ನ '$password' ಅನ್ನು"abc"ಗೆ ಸಮ ಆಗಿವೆ ಎನ್ನುತ್ತೇನೆ. |
04:04 | ಈಗ, ಇವುಗಳನ್ನು ಇಲ್ಲಿ ಸೇರಿಸುತ್ತೆನೆ. ನಾನು "username" AND (&&) "password" ಎಂದು ಹೇಳಬಹುದು. |
04:11 | ಸಧ್ಯಕ್ಕೆ ಇದು "True" ಎಂದು ಹೇಳುತ್ತದೆ. |
04:15 | ಇದನ್ನು ನಾನು ಬದಲಿಸುತ್ತೇನೆ. "OK" ಅಥವಾ "you forgot to fill out a field" ಎನ್ನುತ್ತೇನೆ. ಏಕೆಂದರೆ, ಕೊನೆಯಲ್ಲಿ ಇಲ್ಲಿ HTML ಫೀಲ್ಡ್ ಗಳಿರುತ್ತವೆ. |
04:27 | ಇದು ಸರಿಯಾಗಿರುತ್ತದೆ. ಏಕೆಂದರೆ, ನಾವು ಎರಡೂ ವ್ಯಾಲ್ಯೂಗಳನ್ನು ಪಡೆದಿದ್ದೇವೆ. |
04:32 | ಹೀಗಾಗಿ ನಾವು ಇದನ್ನು ಪ್ರಯತ್ನಿಸೋಣ. ಹೌದು!! ಅದು "OK" ಎನ್ನುತ್ತಿದೆ. |
04:37 | ಈಗ, ನಾನು ನನ್ನ ಪಾಸ್ವರ್ಡ್ ಅನ್ನು ಇಲ್ಲಿ ಟೈಪ್ ಮಾಡಲು ಮರೆತರೆ ಏನಾಗುತ್ತದೆ? ಸಧ್ಯಕ್ಕೆ ಇಲ್ಲಿ ಏನೂ ಇಲ್ಲ. ಸ್ಪೇಸ್ ಇಲ್ಲ. ಅದನ್ನೂ ತೆಗೆದುಬಿಡೋಣ. |
04:48 | "You forgot to fill out a field". |
04:50 | ಇವು ಯೂಸರ್ ನಿಂದ ಬರುತ್ತವೆ ಎಂದು ನೀವು ಊಹಿಸಿದರೆ- ನೀವು ನಿಮ್ಮ "username" ಮತ್ತು "password" ಗಳನ್ನು ಟೈಪ್ ಮಾಡಿದ ಹಾಗೆ ಇವುಗಳನ್ನು ಸಬ್ಮಿಟ್ ಮಾಡಲಾಗಿದೆ. |
05:00 | ನಾವು "username" ಮತ್ತು "password" ಎನ್ನುತ್ತಿದ್ದೇವೆ; ಮೂಲತಃ "username" ಇದೆ. ಆದ್ದರಿಂದ ಇದು "true" ಆಗಿದೆ. |
05:07 | ಇದು ಇಲ್ಲಿ ಒಳಗೆ ಇದ್ದರೆ, ಅದು ಸಹ ಪರವಾಗಿಲ್ಲ; ಅದೂ "true" ಇರುತ್ತದೆ. |
05:14 | ನಾವು ಅದನ್ನು ಪರಿಶೀಲಿಸೋಣ. ಅದು ಹಾಗೇ ಇದೆ. |
05:18 | ನಮ್ಮ ಹತ್ತಿರ "username" ಮತ್ತು "password" ಎರಡೂ ಇರುವುದರಿಂದ ಇದು ಸರಿಯಾಗಿದೆ. |
05:23 | ಆದರೆ 'OR' ಗಾಗಿ, ಇದು ನಿಜವಾಗಿಯೂ ಸರಿಯಾಗುವುದಿಲ್ಲ ಮತ್ತು ಏನಾಗುತ್ತದೆ ಎಂಬುದನ್ನು ನೀವು ಊಹಿಸಬಹುದು. |
05:29 | ಸಧ್ಯಕ್ಕೆ, ಇದು "true" ಎಂದಾಗಿದೆ. ಏಕೆಂದರೆ, ನಾವು ಎರಡೂ ವ್ಯಾಲ್ಯೂಗಳನ್ನು ಪಡೆದಿದ್ದೇವೆ. ಹೀಗಾಗಿ ಇದು "OK" ಆಗಿದೆ. |
05:36 | ಈಗ ಈ ಎರಡನ್ನೂ ಒಟ್ಟಿಗೇ ನೋಡೋಣ. |
05:41 | ಒಂದುವೇಳೆ username ಇದ್ದರೆ, username "True" ಎಂದು ಆಗಿದೆ. |
05:45 | ಸಧ್ಯಕ್ಕೆ ಇಲ್ಲಿ ಯಾವ ವ್ಯಾಲ್ಯೂ ಇಲ್ಲ – ಹೀಗಾಗಿ ಇದು "False" ಆಗಿದೆ. |
05:48 | ಅಥವಾ password "true" ಎಂದಾದರೆ – ಎಂದರೆ ಅದಕ್ಕೊಂದು ವ್ಯಾಲ್ಯೂ ಇದ್ದರೆ, ಸಧ್ಯಕ್ಕೆ ಇಲ್ಲ, ಹೀಗಾಗಿ ಇದು "False" ಆಗಿದೆ. |
05:56 | ಆದ್ದರಿಂದ, ನಾವು "You forgot to fill out a field" ಎಂದು ಹೇಳುತ್ತೇವೆ. |
06:00 | ನಾನು ಇಲ್ಲಿ "Nothing" ಎಂದು ಬರೆಯುತ್ತೇನೆ. ಏಕೆಂದರೆ, ಸಧ್ಯಕ್ಕೆ ಇದಕ್ಕೆ ಏನೂ ಅರ್ಥವಿಲ್ಲ. |
06:05 | ರಿಫ್ರೆಶ್ ಮಾಡಿ. "Nothing" ಎಂದಿದೆ. |
06:08 | ಅನೇಕ php applications ಗಳಲ್ಲಿ, ಇವುಗಳು ಎಷ್ಟು ಉಪಯುಕ್ತವಾಗಿವೆ ಎಂದು ನಾನು ಈಗಾಗಲೇ ವಿವರಿಸಿದ್ದೇನೆ. |
06:17 | ಉದಾಹರಣೆಗೆ – ಯಾರಾದರೂ ತುಂಬಬಹುದಾದ ಒಂದು ಫಾರ್ಮ್. ಅದಕ್ಕಾಗಿ ಹಲವಾರು ಇತರ ಬಳಕೆದಾರರನ್ನು ನೀವು ನೋಡುತ್ತೀರಿ. |
06:22 | ಅದು ಇಲ್ಲಿದೆ. |
06:24 | ಎರಡು ಲಾಜಿಕಲ್ ಆಪರೇಟರ್ ಗಳಿವೆ. |
06:27 | ಅವುಗಳನ್ನು ಪ್ರಯತ್ನಿಸಿ ಮತ್ತು ನೀವು ಅವುಗಳೊಂದಿಗೆ ಏನೆಲ್ಲ ಮಾಡಬಹುದು ಎಂಬುದನ್ನು ನೋಡಿ. |
06:31 | ಶೀಘ್ರದಲ್ಲಿಯೇ ನಾನು ಇವುಗಳನ್ನು ನನ್ನ ಪ್ರೊಜೆಕ್ಟ್ ನಲ್ಲಿ ಖಂಡಿತವಾಗಿ ಬಳಸುವವನಿದ್ದೇನೆ. |
06:35 | ಧನ್ಯವಾದಗಳು. |
06:37 | ಈ ಸ್ಕ್ರಿಪ್ಟ್ ನ ಅನುವಾದಕಿ IIT Bombay ಯಿಂದ ಸಂಧ್ಯಾ ಪುಣೇಕರ್ ಹಾಗೂ ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ. |