PHP-and-MySQL/C2/If-Statement/Kannada

From Script | Spoken-Tutorial
Jump to: navigation, search
Time Narration
00:00 php - Spoken Tutorial ಗೆ ನಿಮಗೆ ಸ್ವಾಗತ. ಇಲ್ಲಿ ನಾವು if ಸ್ಟೇಟ್ಮೆಂಟ್ ನ ಬಗ್ಗೆ ಚರ್ಚಿಸುವೆವು.
00:06 ಈಮೊದಲು ನೀವು ಕೋಡ್ ಅನ್ನು ಬರೆದಿದ್ದರೆ, ನೀವು if ಸ್ಟೇಟ್ಮೆಂಟ್ ಅನ್ನು ನೋಡಿರಬಹುದು.
00:11 php ಯಲ್ಲಿ ಇದೇನೂ ಬೇರೆಯಾಗಿಲ್ಲ. ಶೀಘ್ರದಲ್ಲಿಯೇ ನಾನು ಒಂದನ್ನು ಎಕ್ಸೀಕ್ಯೂಟ್ ಮಾಡಿ ತೋರಿಸುವೆನು.
00:16 ಈಗ ನಾವು ಆರಂಭಿಸೋಣ.
00:18 Ok.. ಇಲ್ಲಿ if ಸ್ಟೇಟ್ಮೆಂಟ್ ಬಗ್ಗೆ ಸಂಕ್ಷಿಪ್ತವಾದ ಮಾಹಿತಿ ಇದೆ. ಇದಕ್ಕೆ ಒಂದು 'ಕಂಡಿಶನ್' (ಷರತ್ತು) ಬೇಕಾಗುತ್ತದೆ.
00:23 ಒಂದುವೇಳೆ ಈ ಷರತ್ತು True ಎಂದಾದರೆ, ಅದು ಕೋಡ್ ನ ಒಂದು ಭಾಗವನ್ನು ಎಕ್ಸೀಕ್ಯೂಟ್ ಮಾಡುತ್ತದೆ.
00:28 ಷರತ್ತು False ಇದ್ದರೆ, ಅದು ಕೋಡ್ ನ ಇನ್ನೊಂದು ಭಾಗವನ್ನು ಎಕ್ಸೀಕ್ಯೂಟ್ ಮಾಡುತ್ತದೆ.
00:32 ಉದಾಹರಣೆಗೆ – ಇದು ಸ್ಟ್ರಕ್ಚರ್ ಆಗಿದೆ.
00:36 if - ಬ್ರ್ಯಾಕೆಟ್ ನಲ್ಲಿ, 1 equals 1 ಇದೆಯೇ ಎಂದು ತಿಳಿದುಕೊಳ್ಳಲು ಇರುವ ಷರತ್ತು ಆಗಿದೆ.
00:41 ಗಮನಿಸಿ, ಇಲ್ಲಿ ನಾನು ಎರಡು 'equal to' ಚಿಹ್ನೆಗಳನ್ನು ಬಳಸುತ್ತಿದ್ದೇನೆ. ಇದು, ಹೋಲಿಸಲು ಬಳಸುವ (comparison) 'ಆಪರೇಟರ್' ಆಗಿದೆ.
00:47 ಬೇರೊಂದು ಟ್ಯುಟೋರಿಯಲ್ ನಲ್ಲಿ ನಾವು, 'ಆಪರೇಟರ್'ಗಳ ಬಗ್ಗೆ ಕಲಿಯುವವರಿದ್ದೇವೆ.
00:50 ಇದು 'equals' ಎಂದು ಆಗಿರದಿದ್ದರೂ ಸಹ, ಇದನ್ನು ನಾವು 'is equal to' ಎಂದೇ ಹೇಳುತ್ತೇವೆ.
00:56 ವೇರಿಯೇಬಲ್ ಗಳನ್ನು ಬಳಸುವಾಗ, ಹೋಲಿಸಬೇಕಾಗಿದ್ದರೆ ನಾವು 'double equal to' ಅನ್ನು ಬಳಸುತ್ತೇವೆ.
01:02 ನೀವು 'True' ದ ಪಾಥ್ ನಲ್ಲಿ ಹೋಗುತ್ತಿದ್ದರೆ, ನೀವು ಎರಡು ಕರ್ಲೀ ಬ್ರ್ಯಾಕೆಟ್ ಗಳನ್ನು ಬಳಸಬಹುದು.
01:06 ನಾವು ಇಲ್ಲಿ ಒಂದನ್ನು ತೆರೆಯುತ್ತಿದ್ದೇವೆ.
01:08 ನಮ್ಮ ಕೋಡ್, ಬ್ರ್ಯಾಕೆಟ್ ಗಳ ನಡುವೆ ಹೋಗುವುದು.
01:12 ಒಂದುವೇಳೆ ಇದು 'Not True' ಎಂದಿದ್ದರೆ, ನಾವು else ಎಂದು ಹೇಳುತ್ತೇವೆ.
01:15 ಅದೇ ಸ್ಟ್ರಕ್ಚರ್ - ಹೀಗಾಗಿ, ಎರಡು ಬ್ರ್ಯಾಕೆಟ್ ಗಳು.
01:17 ಉದಾಹರಣೆಗೆ – if 1 equals 1, echo 'True' ಎಂದು ನಾವು ಹೇಳುತ್ತೇವೆ.
01:23 1 is not equal 1 ಎಂದಾದರೆ, ನಾವು ನಮ್ಮ ಫೈಲ್ ಅನ್ನು ರನ್ ಮಾಡಿದಾಗ False ಅನ್ನು ಪಡೆಯಬೇಕು.
01:30 1 is equal to 1 ಇರುವುದರಿಂದ, ನಾವು ನಮ್ಮ ಫೈಲ್ ಅನ್ನು ರನ್ ಮಾಡಿದಾಗ True ಎಂದು ಸಿಗುತ್ತದೆ.
01:36 ನಾವು ಇದನ್ನು ಬದಲಾಯಿಸೋಣ. if 1 equals 2. ಇದು ಹೀಗೆ ಇಲ್ಲ. ಆದ್ದರಿಂದ ನಾವು False ಅನ್ನು ಪಡೆಯುತ್ತೇವೆ.
01:42 ಒಂದು ಸಂಖ್ಯೆಯು ಇನ್ನೊಂದು ಸಂಖ್ಯೆಗೆ ಸಮನಾಗಿದೆಯೇ ಎಂದು ಹೇಳುವ ಒಂದು ಸರಳವಾದ ಪ್ರೊಗ್ರಾಂಅನ್ನು ನಾವು ಕ್ರಿಯೇಟ್ ಮಾಡಬಹುದಿತ್ತು.
01:49 ಆದರೆ ಇದು ಪ್ರೊಗ್ರಾಂ ಮಾಡುವ ಬಹಳ ದಡ್ಡ ವಿಧಾನ ಆಗಿದೆ.
01:52 ಆದ್ದರಿಂದ ನಾನು ಇನ್ನೂ ಏನನ್ನೊ ಸೇರಿಸುವೆನು. ಪಾಸ್ವರ್ಡ್ ಆಕ್ಸೆಸ್ ಗಾಗಿ (access) ನಾನು ಒಂದು ಸಣ್ಣ ಪ್ರೊಗ್ರಾಂ ಅನ್ನು ಬರೆಯುವೆನು.
01:58 ಇಲ್ಲಿ, ಒಂದು ವೇರಿಯೇಬಲ್ ನಲ್ಲಿ, ನಾವು password ಅನ್ನು ಸ್ಟೋರ್ ಮಾಡುತ್ತೇವೆ.
02:03 $password ಇದು "abc" ಆಗಿದೆ.
02:05 ನನ್ನ if ಫಂಕ್ಷನ್ ನಲ್ಲಿ, ನಾನು ಒಂದು ವೇರಿಯೇಬಲ್ ಅನ್ನು ಹೀಗೆ ಸೇರಿಸುತ್ತೇನೆ:
02:11 if password, ನೆನಪಿಡಿ ಡಬಲ್ ಇಕ್ವಲ್ಸ್ "def",
02:15 ಮತ್ತು Access granted ಎನ್ನುತ್ತೇನೆ.
02:21 ಕ್ಷಮಿಸಿ, ನಾನು ಒಂದು ತಪ್ಪು ಮಾಡಿದ್ದೇನೆ. 'def' ಪಾಸ್ವರ್ಡ್ ಗಾಗಿ ನಾವು ಯೂಸರ್ ನನ್ನು ಕೇಳುತ್ತೇವೆ. 'abc' ಈ ಪಾಸ್ವರ್ಡ್ ಅನ್ನು ನಾನು ಸಿಸ್ಟಂಗೆ ಕೊಡುತ್ತಿದ್ದೇನೆ.
02:32 ಅದು 'def' ಗೆ ಸಮ ಆಗಿರದಿದ್ದರೆ, Access denied ಎನ್ನುತ್ತೇನೆ.
02:39 ನಾನು ಇನ್ಪುಟ್ ಮಾಡಿದ ಪಾಸ್ವರ್ಡ್ 'abc' ಆಗಿದೆ.
02:42 ನಾವು ಪಾಸ್ವರ್ಡ್ ಅನ್ನು 'def' ಗೆ ಹೋಲಿಸುತ್ತೇವೆ. ಇದು ಸ್ಟೋರ್ ಮಾಡಲಾದ ಪಾಸ್ವರ್ಡ್ ಆಗಿದೆ.
02:50 ಇದು 'def' ಗೆ ಸಮ ಆಗಿದ್ದರೆ, ನಾವು Access granted ಎಂದು ಹೇಳುತ್ತೇವೆ. ಇಲ್ಲದಿದ್ದರೆ (else) Access denied.
02:57 ನಾವು ಇದನ್ನು ಪ್ರಯತ್ನಿಸೋಣ.
03:00 Access denied. ಏಕೆಂದರೆ, ಪಾಸ್ವರ್ಡ್ ಗಳು ಹೊಂದುವುದಿಲ್ಲ.
03:05 ಅದಕ್ಕಾಗಿ, ನಾನು ಇಲ್ಲಿ ಒಂದು ವೇರಿಯೇಬಲ್ ಅನ್ನು ಸೇರಿಸಿದ್ದೇನೆ ಎಂದು ನೀವು ನೋಡಬಹುದು.
03:10 ಇದನ್ನು 'def' ಎಂದು ಬದಲಾಯಿಸಿ. ನಮಗೆ Access granted ಎಂದು ಸಿಗುತ್ತದೆ.
03:18 ಏಕೆಂದರೆ, ಇಲ್ಲಿ ಕೋಡ್ ನ ಒಂದು ಸಾಲು ಇದೆ. ಮತ್ತು ಇಲ್ಲಿ ಇನ್ನೊಂದು ಕೋಡ್ ನ ಸಾಲು ಇದೆ.
03:22 ಈ ಕರ್ಲೀ ಬ್ರ್ಯಾಕೆಟ್ ಗಳನ್ನು ನಾನು ತೆಗೆದುಬಿಡಬಹುದು.
03:25 ಈಗ ಚೆನ್ನಾಗಿ ಕಾಣುತ್ತಿದೆ.
03:29 ದಯವಿಟ್ಟು ಗಮನಿಸಿ - ಇಂತಹ ಸರಳವಾದ if ಸ್ಟೇಟ್ಮೆಂಟ್ ಗಳಿಗಾಗಿ, ಒಂದೇ ಸಾಲಿನ ಕೋಡ್ ಇದ್ದರೆ, ಕರ್ಲೀ ಬ್ರ್ಯಾಕೆಟ್ ಗಳನ್ನು ಸೇರಿಸುವುದರಲ್ಲಿ ಅರ್ಥವಿಲ್ಲ.
03:37 ಇಲ್ಲಿ, ಒಂದರ ನಂತರ ಇನ್ನೊಂದು ಸಾಲು ಇದ್ದರೆ, ನಿಮಗೆ ಕರ್ಲೀ ಬ್ರ್ಯಾಕೆಟ್ ಗಳು ಬೇಕಾಗುತ್ತವೆ.
03:42 ಉದಾಹರಣೆಗೆ, ಇಲ್ಲಿ ನಾವು ಒಂದು ಹೊಸ ವೇರಿಯೇಬಲ್ ಅನ್ನು ಸೆಟ್ ಮಾಡೋಣ.
03:46 $access ಇಕ್ವಲ್ಸ್ "Allowed".
03:52 ಇದು ಕೋಡ್ ನ ಇನ್ನೊಂದು ಸಾಲು ಆಗಿದೆ.
03:57 ಆದರೆ ನಾನು ಇದನ್ನು ರನ್ ಮಾಡಲು ಪ್ರಯತ್ನಿಸಿದಾಗ, ನನಗೆ ಎರರ್ ಸಿಗುತ್ತದೆ.
04:02 ಇದು ಹೀಗೆ ಹೇಳುತ್ತಿದೆ: “an unexpected T_else on line 8”.
04:08 ನಾವು line 8 ಅನ್ನು ಹುಡುಕೋಣ. ಇದು ಇಲ್ಲಿದೆ. ಇದರ ಹಿಂದಿನ ಸಾಲು ಸಮಸ್ಯೆಗೆ ಕಾರಣವಾಗಿದೆ.
04:13 ಇದಕ್ಕಾಗಿ, ಎರಡು ಅಥವಾ ಅದಕ್ಕಿಂತ ಹೆಚ್ಚು ಕೋಡ್ ನ ಸಾಲುಗಳಿದ್ದಾಗ, ನಾವು ಕರ್ಲೀ ಬ್ರ್ಯಾಕೆಟ್ ಗಳನ್ನು ಮತ್ತೆ ಸೇರಿಸುವುದು ಅಗತ್ಯವಾಗಿದೆ.
04:22 ನಾವು ಇದನ್ನು ರಿಫ್ರೆಶ್ ಮಾಡುತ್ತೇವೆ ಮತ್ತು ಈಗ Access granted.
04:25 ಈಗ ನಾನು ಒಂದು access ಎಂಬ ಹೊಸ ವೇರಿಯೇಬಲ್ ಅನ್ನು ಸೆಟ್ ಮಾಡಿದ್ದೇನೆ. ಇದು allowed ಎಂದು ಇರಲಿ.
04:29 ಇದು ಹೆಚ್ಚು ಉಪಯುಕ್ತವಾಗಿಲ್ಲ.
04:32 ಆದರೆ ನಾನು ನಿಮಗೆ ಒಂದು ಉದಾಹರಣೆ ಎಂದು ಮಾತ್ರ ಕೊಟ್ಟಿದ್ದೇನೆ.
04:35 ಇದು ಇನ್ನೂ ಒಂದೇ ಸಾಲು ಆಗಿದ್ದು, ಇವು ಎರಡು ಸಾಲುಗಳಾಗಿರುವುದನ್ನು ನೀವು ನೋಡಬಹುದು. ನೀವು ಇವುಗಳನ್ನು ಬೆರೆಸಲು ಸಾಧ್ಯವಿಲ್ಲ.
04:40 ನಾನು ಒಂದು ವೇರಿಯೇಬಲ್ ಅನ್ನು ಕ್ರಿಯೇಟ್ ಮಾಡಿ. ಅದನ್ನು “if” ಸ್ಟೇಟ್ಮೆಂಟ್ ನ ಒಳಗೆ ಸೇರಿಸಿದ್ದೇನೆ. ಇದು ನಿಮಗೆ ಉಪಯುಕ್ತವಾಗಿದೆ ಎಂದು ಭಾವಿಸುತ್ತೇನೆ.
04:46 ಇಲ್ಲಿಗೆ, ನಾವು ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ.
04:50 ಈ ಸ್ಕ್ರಿಪ್ಟ್ ನ ಅನುವಾದಕಿ, IIT Bombay ಯಿಂದ ಸಂಧ್ಯಾ ಪುಣೇಕರ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.

ಧನ್ಯವಾದಗಳು.

Contributors and Content Editors

Sandhya.np14