PHP-and-MySQL/C2/Common-Errors-Part-1/Kannada

From Script | Spoken-Tutorial
Jump to: navigation, search
Time Narration
00:00 ನಮಸ್ಕಾರ, ಸ್ವಾಗತ. ಇದು ಒಂದು ವಿವರಣಾತ್ಮಕ ವಿಡೀಯೋವಾಗಿದೆ.
00:07 ನೀವು ಪಿ.ಎಚ್.ಪಿ.ಯಲ್ಲಿ ಪ್ರೋಗ್ರಾಂ ಮಾಡುವಾಗ ಎದುರಾಗಬಹುದಾದ ಸಾಮಾನ್ಯ ಎರರ್ ಗಳ ಕುರಿತು ಇಲ್ಲಿ ನೋಡುವೆವು.
00:13 ಅವುಗಳಲ್ಲಿ ಹಲವು ಸ್ವಯಂ ವಿವರಣಾತ್ಮಕವಾಗಿವೆ.
00:17 ನಿಮಗೆ ಎದುರಾಗುವ ಎರರ್ ಗಳಲ್ಲಿ ಶೇಕಡಾ ಐವತ್ತರಷ್ಟು ಟೈಪ್ ಮಾಡುವಾಗ ಅಕಸ್ಮಾತ್ ಆಗಿ ನೀವು ನೋಡದೆ ಆದ ತಪ್ಪುಗಳು ಅಥವಾ ನೀವು ಏನನ್ನಾದರೂ ಬಿಟ್ಟು ಬಿಡುವುದರಿಂದಾಗುವ ತಪ್ಪುಗಳಾಗಿರುತ್ತವೆ.
00:32 ಸೆಮಿಕೋಲನ್ಅನ್ನು ಬಿಟ್ಟು ಬಿಡುವುದು, ಅಥವಾ ಹೆಚ್ಚಿನ ಬ್ರ್ಯಾಕೆಟ್ ಅನ್ನು ಹಾಕುವುದು ಅಥವ ಇದೇ ತರಹದ ಸಣ್ಣಪುಟ್ಟ ತಪ್ಪುಗಳನ್ನು ಎಲ್ಲರೂ ಮಾಡುತ್ತಾರೆ.
00:41 ನಾನು ಇಲ್ಲಿ ಕೆಲವು ಪುಟಗಳನ್ನು ತಯಾರಿಸಿದ್ದೇನೆ, ಇವುಗಳು ಸಾಮಾನ್ಯವಾಗಿ ನಿಮಗೆ ಎದುರಾಗುವ ಎರರ್ ಗಳಾಗಿವೆ.
00:47 ಇನ್ನೂ ಬಹಳಷ್ಟು ಎರರ್ ಗಳಿವೆ. ಈ ಪಟ್ಟಿಯು ಸಮಗ್ರವಲ್ಲ. ಇದು ಕೆಲವು ಪ್ರಾಥಮಿಕ ಎರರ್ ಗಳನ್ನು ಒಳಗೊಂಡಿದೆ.
00:51 ಈಗ ಈ ಎರರ್ ಗಳನ್ನು ಒಂದೊಂದಾಗಿ ತೋರಿಸಲು ನಾನು "ಕಂಟೆಕ್ಸ್ಟ್ ಎಡಿಟರ್" ಅನ್ನು ಸಿದ್ಧಪಡಿಸಿದ್ದೇನೆ.
01:00 ಮೊದಲನೆಯದಾಗಿ ನಾನು "html" ಫೈಲ್ ಅನ್ನು ಬಳಸಿ ವಿವರಣೆ ಮಾಡಲು ಹೊರಟಿದ್ದೇನೆ.
01:06 ನಾನು ಇಲ್ಲಿ ನನ್ನ echo ಕಮಾಂಡ್ ನಲ್ಲಿ ಬಹಳಷ್ಟು html ಕೋಡ್ ಗಳನ್ನು ಎಂಬೆಡ್ ಮಾಡಿಕೊಂಡಿದ್ದೇನೆ.
01:10 ನಾನು ಈ ಪೇಜ್ ಅನ್ನು ರನ್ ಮಾಡಿದರೆ, ಇಲ್ಲಿ ನಮಗೆ ಎರರ್ ಕಾಣಿಸುತ್ತದೆ.
01:17 ಇದು Parse error ಆಗಿದ್ದು, ನಾವು ಇಲ್ಲಿ ಈ ಸಂದೇಶವನ್ನು ಪಡೆದಿದ್ದೇವೆ.
01:21 ನೀವು ಇದನ್ನು ಸರಿಯಾಗಿ ನೋಡಬೇಕು. - "expecting either a comma or a semicolon" ಎಂದಿದೆ.
01:27 ಇದು ನಮಗೆ ಸಾಲಿನ ಸಂಖ್ಯೆಯನ್ನು ಕೊಡುತ್ತದೆ. Parse error ಗಳು ಇದ್ದಾಗ, ಇದು ಯಾವಾಗಲೂ ಸಾಲಿನ ಸಂಖ್ಯೆಯನ್ನು ಕೊಡುತ್ತದೆ.
01:34 ಇದು line 5 ಎಂದು ತೋರಿಸುತ್ತದೆ.
01:36 ನಾವು ಈಗ ಕೆಳಗೆ ಐದನೇ ಸಾಲಿಗೆ ಬಂದರೆ, ನಾವು 5 ನೇ ಸಾಲು, 19 ಕಾಲಮ್ ನಲ್ಲಿ (Ln5, Col19) ಎಲ್ಲಾ ಮಾಹಿತಿಗಳನ್ನು ಪಡೆಯುತ್ತೇವೆ.
01:45 ಇಲ್ಲಿ 5 ನೇ ಸಾಲಿದೆ. ಇಲ್ಲಿ ಕಣ್ಣಿಗೆ ಕಾಣುವಂತಹ ತಪ್ಪಿಲ್ಲ.
01:50 ಪಿ.ಎಚ್.ಪಿ. ಯು ಈ echo ಕಮಾಂಡ್ ಗೆ, ಈ ಡಬಲ್ ಕೋಟ್ ಅನ್ನು ಪ್ರಾರಂಭವೆಂದೂ, ಇದನ್ನು ಕೊನೆಯೆಂದೂ ವ್ಯಾಖ್ಯಾನಿಸುತ್ತದೆ. ಹಾಗಾಗಿ ಇದು ಪ್ರಾರಂಭ ಮತ್ತು ಇದು ಕೊನೆಯಾಗಿರುತ್ತದೆ.
02:06 ಈಗ ನಾವು ಇಲ್ಲಿ ಎಚ್.ಟಿ.ಎಂ.ಎಲ್. ಅನ್ನು ಎಂಬೆಡ್ ಮಾಡಿದ್ದು, ನಾವು ಇಲ್ಲಿ ಡಬಲ್ ಕೋಟ್ಸ್ ಅನ್ನು ಬಳಸಿರುವುದು ಇದಕ್ಕೆ ಕಾರಣವಾಗಿದೆ. ಏಕೆಂದರೆ echo ಕಮಾಂಡ್ ಇದನ್ನು ಪ್ರಾರಂಭ ಎಂದೂ, ಇದನ್ನು ಕೊನೆ ಎಂದೂ ಭಾವಿಸುತ್ತದೆ.
02:17 ನಾನು ಇದನ್ನು ನಿಮಗೆ echo ಫಂಕ್ಷನ್ ನಲ್ಲಿ ವಿವರಿಸಿದ್ದೇನೆ ಅನಿಸುತ್ತದೆ.
02:21 ಸರಿ. ಈ ಸಾಲಿನಲ್ಲಿ ಎರರ್ ಬರಲು ಕಾರಣವೇನೆಂದರೆ, ಇದು ಮೊದಲ ಡಬಲ್ ಕೋಟ್ಸ್, ಮತ್ತು ಇನ್ನೊಂದು ಇಲ್ಲಿರಬಾರದು.
02:31 ತಾಂತ್ರಿಕವಾಗಿ, ಪಿ.ಎಚ್.ಪಿ. ಇದನ್ನು ತೆಗೆದುಕೊಂಡಿಲ್ಲ, ಹಾಗಾಗಿ ಇದು ಇಲ್ಲಿರಬಾರದು.
02:36 ಇದು ಸೆಮಿಕೋಲನ್ ಇರಬೇಕು ಎಂದು ಕೊಡುತ್ತಿದೆ ಏಕೆಂದರೆ ನಾವು ಎಕೋ ಕಮಾಂಡ್ ಅನ್ನು ಮುಗಿಸುವಾಗ ಸೆಮಿಕೋಲನ್ ಅನ್ನು ಬಳಸುತ್ತೇವೆ. ಅದು ಹುಡುಕುತ್ತಿರುವುದು ಇಲ್ಲಿದೆ.
02:49 ಆದರೆ, ಈಗಲೂ ಕೂಡ ಇದು ಅರ್ಥಹೀನವಾಗುತ್ತದೆ.
02:52 ಹಾಗಾಗಿ ನಾವು ಇದರ ಬದಲಿಗೆ ಸಿಂಗಲ್ ಕೋಟ್ ಚಿಹ್ನೆಯನ್ನು ಬಳಸಬೇಕು.
02:58 ಈಗ ನಾವು ಇದನ್ನು ಸೇವ್ ಮಾಡಿದರೆ, ನಾವು ಈಗ ಆರನೇ ಸಾಲಿನಲ್ಲಿ ಎರರ್ ಅನ್ನು ಪಡೆಯುತ್ತೇವೆ, ಏಕೆಂದರೆ ಎರರ್ ಇಲ್ಲಿ ಕೆಳಕ್ಕೆ ಬಂದಿದೆ ಅಂದರೆ ಆರನೇ ಸಾಲಿಗೆ ಬಂದಿದೆ.
03:08 ಅಂದರೆ ನೀವು ಆರನೇ ಸಾಲಿನಲ್ಲಿ ಅಥವ ಆರನೇ ಸಾಲಿನ ಹತ್ತಿರದ ಸಾಲಿನಲ್ಲಿ ಏನನ್ನೋ ಬದಲಾವಣೆ ಮಾಡಬೇಕು. ಕೆಲವು ಎರರ್ ಗಳು ಅಲ್ಲಿ ಸೂಚಿಸಿರುವ ಸಾಲಿನಲ್ಲಿ ಇರಬಹುದು. ಮತ್ತು ಇನ್ನು ಕೆಲವು ಎರರ್ ಇರುವ ಸಾಲಿನ ಸಂಖ್ಯೆಯನ್ನು ನಿಖರವಾಗಿ ಕೊಡದೇ ಇರಬಹುದು.
03:19 ನೀವು ಈಗ ಎಚ್.ಟಿ.ಎಂ.ಎಲ್. ಕೋಡ್ ಅನ್ನು ರನ್ ಮಾಡಿದ ನಂತರ ನೀವು ಇದನ್ನು ಪಡೆದಿದ್ದೀರಿ. ಇದು ಕಾರ್ಯನಿರ್ವಹಿಸುತ್ತಿಲ್ಲ. ಆದರೆ ನಾವು ಎರರ್ ಅನ್ನು ಹೋಗಲಾಡಿಸಿದ್ದೇವೆ.
03:28 ಈಗ ನಾವು ಸೆಮಿಕೋಲನ್ ಅನ್ನು ನೋಡೋಣ. ಇದು ಇನ್ನೊಂದು ಸಾಮಾನ್ಯ ಎರರ್ ಆಗಿದೆ.
03:33 ಈಗ ನಾವು ಇಲ್ಲಿಗೆ ಹಿಂದಿರುಗಿ , semicolon ಅನ್ನು ಕ್ಲಿಕ್ ಮಾಡೋಣ. ನಾವು ಇಲ್ಲಿ "expecting a semicolon" ಎಂದಿರುವ ಒಂದು parse error ಅನ್ನು ಪಡೆದಿದ್ದೇವೆ.
03:39 ಈಗ ಇಲ್ಲಿ ನಾವು ಸೆಮಿಕೋಲನ್ ಅನ್ನು ಏಕೆ ನಿರೀಕ್ಷಿಸುತ್ತಿದ್ದೇವೆ? ಈ ಕೋಡ್ ಸರಿಯಾಗಿರುವಂತೆ ಕಾಣುತ್ತಿದೆ. ಇಲ್ಲಿ ನಾವು "Alex" ಎಂಬ ವ್ಯಾಲ್ಯುವನ್ನು ಹೊಂದಿರುವ ಒಂದು ವೇರಿಯೇಬಲ್ ಅನ್ನು ಹೊಂದಿದ್ದೇವೆ. "Alex" ಎಂಬ ವ್ಯಾಲ್ಯುವನ್ನು ಹೊಂದಿರುವ ಇನ್ನೊಂದು ವೇರಿಯೇಬಲ್ ಅನ್ನು ಹೊಂದಿದ್ದೇವೆ.
03:47 ನಾವು ಈ ಎರಡು ವೇರಿಯೇಬಲ್ ಗಳನ್ನು ಹೋಲಿಕೆ ಮಾಡುತ್ತಿದ್ದೇವೆ. ಇದಕ್ಕಾಗಿ ಇಲ್ಲಿ ಎರಡು ಇಕ್ವಲ್ (==)ಚಿಹ್ನೆಯಿದೆ.
03:52 ಈ 'ಕಂಡಿಷನ್' True ಆಗಿದ್ದರೆ , ನಾವು ಈ ಸಂದೇಶವನ್ನು echo ಮಾಡುವೆವು.
03:55 ಈಗ ನಾವು ಇಲ್ಲಿ ನೋಡಿದರೆ - line no. 9 ಎಂದಿದೆ.
03:58 ಇದು ಖಂಡಿತವಾಗಿಯು ಒಂದು ಸರಳ ಕೋಡ್ ಆಗಿದೆ. ಇದು ಸ್ವಲ್ಪ ಕಠಿಣವಾಗಿದ್ದರೆ ಅದಕ್ಕೆ ಕಾರಣ ನೀವು ಒಂಬತ್ತನೇ ಸಾಲಿಗೆ ಬಂದಿದ್ದೀರಿ. ಇದು ಒಂಬತ್ತನೇ ಸಾಲಾಗಿದೆ.
04:07 ಆದರೆ ಒಂಬತ್ತನೇ ಸಾಲನ್ನು ನೋಡಿದರೆ, ಇಲ್ಲಿ ಏನೂ ತಪ್ಪಿಲ್ಲ.
04:10 ಆದರೆ ತಪ್ಪಿರುವುದು ಆ ಸಾಲಿನಲ್ಲಿ. ಆದರೆ ಪಿ.ಎಚ್.ಪಿ. ಯು ಒಂದು ಸಾಲಿನ ಆಧಾರದಲ್ಲಿ ಪೇಜ್ ಅನ್ನು ವ್ಯಾಖ್ಯಾನಿಸುತ್ತದೆ.
04:19 ಹಾಗಾಗಿ ನಾವು ಈಗ ಇಲ್ಲಿ ನೋಡುತ್ತಿರುವ ಕೋಡ್ ಅದರಂತೆಯೇ ಇದೆ.
04:23 ಇದು ಈಗಲೂ ಇದನ್ನು ಕಂಪೈಲ್ ಮಾಡುತ್ತದೆ ಮತ್ತು ಕಾರ್ಯನಿರ್ವಹಿಸುತ್ತದೆ. ಇದು ಇಲ್ಲಿ ಕೆಳಗಿದೆ ಮತ್ತು ಇದು ಇಲ್ಲಿ ಮೇಲೆ ಇದೆ. ಆದರೆ ನಾವು ಇನ್ನೂ ಇದಾದ ಮೇಲೆ ಒಂದು ಸೆಮಿಕೋಲನ್ ಅನ್ನು ನಿರೀಕ್ಷಿಸುತ್ತಿದ್ದೇವೆ.
04:34 ನಾವು ಅದನ್ನು ಹಾಕಿದರೆ, ಈಗ ಈ ಕೋಡ್ ಮಾನ್ಯವಾಗಿದೆ. ಹಾಗಾಗಿ ನಾನು ಇಲ್ಲಿ ಸೆಮಿಕೋಲನ್ ಅನ್ನು ಸೇರಿಸಿದ್ದೇನೆ, ನಮ್ಮ ಕಣ್ಣಿಗೆ ಇದು ಇಲ್ಲಿ ಇರಬೇಕು ಅನಿಸಿದರೂ, ಇದು ಸರಿಯಾಗಿದೆ.
04:42 ನಾವು ಇದನ್ನು ಕೆಳಕ್ಕೆ ಬೇಕಾದರೂ ತರಬಹುದು. ಈಗ ಈ ಕೋಡ್ ಅನ್ನು ಮತ್ತೆ ರನ್ ಮಾಡೋಣ.
04:53 ಹೌದು ನಾವು ಯಶಸ್ವಿಯಾದ page ಅನ್ನು ಪಡೆದಿದ್ದೇವೆ.
04:57 ನಾನು ಇದನ್ನು ಇಲ್ಲಿ ಮೇಲಕ್ಕೆ ಹಾಕಿದರೆ ಖಂಡಿತವಾಗಿಯೂ, ಅದರಂತೆಯೇ ಇದು ಕೂಡ ಒಂದು ಮಾನ್ಯವಾದ ಕೋಡ್ ಆಗಿರುತ್ತದೆ.
05:02 php ಯು ಈ ಸಾಲಿನಲ್ಲಿ ಎರರ್ ಇದೆ ಎನ್ನುವ ಆಧಾರದ ಮೇಲೆ ಕಾರ್ಯ ನಿರ್ವಹಿಸುವುದಿಲ್ಲ.
05:07 ಇದು ಹಿಂದಿನ ಸಾಲಿನಲ್ಲಿ ಎರರ್ ಇರುವುದರಿಂದ ಪ್ರಸ್ತುತ ಸಾಲು ರನ್ ಆಗುವುದಿಲ್ಲ ಎಂದು ಹೇಳುತ್ತದೆ.
05:13 ಹಾಗಾಗಿ ಈ ಸಾಲಿನಲ್ಲಿ ಸೆಮಿಕೋಲನ್ ಇಲ್ಲದೇ ಎರರ್ ಇರುವುದರಿಂದ, ಈ ಸಾಲು ರನ್ ಆಗುವುದಿಲ್ಲ. ಹಾಗಾಗಿ ಈ ಸಾಲು ಒಂಬತ್ತನೇ ಸಾಲಿನಲ್ಲಿ ಎರರ್ ಇದೆ ಎಂದು ತೋರಿಸುತ್ತಿದೆ. ನೀವು ಇದನ್ನು ಅಲ್ಲಿ ನೋಡಬಹುದು.
05:29 ಈಗ ನಾವು ಎರಡು ಮೂಲಭೂತ ಎರರ್ ಗಳನ್ನು ನೋಡಿದ್ದೇವೆ.
05:33 ನೀವು ಈ ಸನ್ನಿವೇಶವನ್ನು ಎದುರುಗೊಂಡರೆ, ಕೇವಲ ಎರರ್ ನಲ್ಲಿ ಕೊಟ್ಟಿರುವ ಸಾಲು ಒಂದನ್ನೇ ಪರೀಕ್ಷಿಸಬೇಡಿ.
05:40 ಹಿಂದಿನ ಮತ್ತು ಮುಂದಿನ ಸಾಲುಗಳನ್ನು ಪರೀಕ್ಷಿಸಿ. ಕ್ಷಮಿಸಿ, ಮುಂದಿನದ್ದಲ್ಲ ಆದರೆ ಹಿಂದಿನ ಸಾಲನ್ನು ಪರೀಕ್ಷಿಸಿ ಮತ್ತು ಸರಿಪಡಿಸಬಹುದೇ ಎಂದು ನೋಡಿ.
05:47 ಅವಶ್ಯವಿದ್ದರೆ ಪ್ರತಿ ಅಕ್ಷರವನ್ನು ಗಮನವಿಟ್ಟು ಪರೀಕ್ಷಿಸಿ.
05:50 ನನಗೆ ಇಂತಹ ತಪ್ಪು ಮಾಡಿದ ಅನೇಕರಿಂದ ಹಲವಾರು ಇ-ಮೇಲ್ ಗಳು ಬರುತ್ತವೆ.ನನಗೆ ಜನರಿಗೆ ಸಹಾಯ ಮಾಡಲು ಬೇಸರವಿಲ್ಲ.
05:56 ನನ್ನನ್ನು ಕೇಳಲು ಬೇಸರ ಬೇಡ ಆದರೆ ನನಗೆ ಕಳುಹಿಸುವ ಮೊದಲು ಒಮ್ಮೆ, ಎರಡು ಬಾರಿ ಅಥವಾ ಮೂರು ಬಾರಿ ನಿಮ್ಮ ಕೋಡ್ ಅನ್ನು ಪರೀಕ್ಷಿಸಿಕೊಳ್ಳಿ.
06:04 ಸರಿ ಇನ್ನುಳಿದ ಎರರ್ ಪೇಜ್ ನ ಕುರಿತು ಮುಂದಿನ ಟ್ಯುಟೋರಿಯಲ್ ಗಳಲ್ಲಿ ನೋಡೋಣ. ಮತ್ತೆ ಸಿಗೋಣ. ಸ್ಕ್ರಿಪ್ಟ್ ನ ಅನುವಾದಕಿ, ಮೈಸೂರಿನಿಂದ ಅಂಜನಾ ಅನಂತ್ ನಾಗ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ. ಧನ್ಯವಾದಗಳು.

Contributors and Content Editors

Sandhya.np14