PERL/C3/Including-files-or-modules/Kannada
From Script | Spoken-Tutorial
Time | Narration |
00:01 | PERL ಪ್ರೊಗ್ರಾಂನಲ್ಲಿ, Including files or modules (ಇನ್ಕ್ಲುಡಿಂಗ್ ಫೈಲ್ಸ್ ಆರ್ ಮೊಡ್ಯೂಲ್ಸ್) ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
00:08 | ಈ ಟ್ಯುಟೋರಿಯಲ್ ನಲ್ಲಿ ನಾವು, 'PERL' ಪ್ರೊಗ್ರಾಮಿಂಗ್ ನಲ್ಲಿ:
ಎಂಬ ಮೆಥಡ್ ಗಳನ್ನು ಬಳಸಲು ಕಲಿಯುವೆವು. |
00:16 | ಈ ಟ್ಯುಟೋರಿಯಲ್ ಗಾಗಿ, ನಾನು:
|
00:28 | ನೀವು, ನಿಮಗೆ ಇಷ್ಟವಾದ ಯಾವುದೇ ಟೆಕ್ಸ್ಟ್-ಎಡಿಟರ್ ಅನ್ನು ಬಳಸಬಹುದು. |
00:32 | ಈ ಟ್ಯುಟೋರಿಯಲ್ ಅನ್ನು ಅನುಸರಿಸಲು, ನಿಮಗೆ ಪರ್ಲ್ (Perl) ಪ್ರೊಗ್ರಾಮಿಂಗ್ ಬಗ್ಗೆ ತಿಳಿದಿರುವುದು ಅವಶ್ಯಕ. |
00:37 | ಇಲ್ಲದಿದ್ದರೆ, ಸಂಬಂಧಿತ Perl ಸ್ಪೋಕನ್ ಟ್ಯುಟೋರಿಯಲ್ ಗಳನ್ನು ದಯವಿಟ್ಟು Spoken Tutorial ವೆಬ್ಸೈಟ್ ಮೇಲೆ ನೋಡಿ. |
00:44 | 'do' ಮೆಥಡ್: ಬೇರೆ ಫೈಲ್ ಗಳಿಂದ, ಸೋರ್ಸ್ ಕೋಡನ್ನು ಈಗಿನ ಸ್ಕ್ರಿಪ್ಟ್ ಫೈಲ್ ನಲ್ಲಿ ಸೇರಿಸಲು ಇದು ಸರಳವಾದ ವಿಧಾನವಾಗಿದೆ. |
00:53 | 'do()' ಮೆಥಡ್ ಅನ್ನು ಹೇಗೆ ಬಳಸುವುದೆಂದು ನಾವು ತಿಳಿದುಕೊಳ್ಳೋಣ. |
00:57 | ನಿಮ್ಮ ಟೆಕ್ಸ್ಟ್-ಎಡಿಟರ್ ನಲ್ಲಿ, ಒಂದು ಹೊಸ ಫೈಲನ್ನು ಓಪನ್ ಮಾಡಿ ಮತ್ತು ಅದನ್ನು 'datetime dot pl' ಎಂದು ಹೆಸರಿಸಿ. |
01:03 | 'datetime dot pl' ಫೈಲ್ ನಲ್ಲಿ, ಈ ಕೆಳಗಿನ ಕೋಡ್ ಅನ್ನು ಸ್ಕ್ರೀನ್ ಮೇಲೆ ತೋರಿಸಿದಂತೆ ಟೈಪ್ ಮಾಡಿ. |
01:09 | ಇನ್ನುಮುಂದೆ, ಟರ್ಮಿನಲ್ ನ ಮೇಲೆ ಪ್ರತಿಯೊಂದು ಕಮಾಂಡ್ ನ ನಂತರ 'Enter' ಕೀಯನ್ನು ಒತ್ತಲು ನೆನಪಿಡಿ. |
01:15 | ನಾವು ಈಗ ಕೋಡ್ ಅನ್ನು ತಿಳಿದುಕೊಳ್ಳೋಣ. |
01:18 | ಪ್ರಸ್ತುತ ದಿನಾಂಕ ಹಾಗೂ ಸಮಯವನ್ನು 'dollar datestring' ಎಂಬ ವೇರಿಯೇಬಲ್ ನಲ್ಲಿ ಸ್ಟೋರ್ ಮಾಡಲಾಗಿದೆ. |
01:23 | ಇಲ್ಲಿ, ನನ್ನ ಹತ್ತಿರ 'msgThanks' ಎಂಬ ಹೆಸರಿನ ಒಂದು ಫಂಕ್ಷನ್ ಇದೆ. ಇದು “Thank you” ಎಂಬ ಮೆಸೇಜನ್ನು ಹಿಂದಿರುಗಿಸುತ್ತದೆ. |
01:31 | ಈಗ, ಫೈಲನ್ನು ಸೇವ್ ಮಾಡಲು 'Ctrl+S' ಅನ್ನು ಒತ್ತಿ. |
01:35 | ಇನ್ನುಮುಂದೆ, ಈ 'datetime dot pl' ಎಂಬ ಫೈಲನ್ನು ಬಳಸುವ ಇನ್ನೊಂದು ಪರ್ಲ್ ಪ್ರೊಗ್ರಾಂಅನ್ನು ನಾವು ನೋಡೋಣ. |
01:43 | ನಿಮ್ಮ ಟೆಕ್ಸ್ಟ್-ಎಡಿಟರ್ ನಲ್ಲಿ ಒಂದು ಹೊಸ ಫೈಲನ್ನು ಓಪನ್ ಮಾಡಿ ಮತ್ತು ಅದನ್ನು 'main dot pl' ಎಂದು ಹೆಸರಿಸಿ. |
01:49 | 'main dot pl' ಫೈಲ್ ನಲ್ಲಿ, ಈ ಕೆಳಗಿನ ಕೋಡ್ ಅನ್ನು, ಸ್ಕ್ರೀನ್ ಮೇಲೆ ತೋರಿಸಿದಂತೆ ಟೈಪ್ ಮಾಡಿ. |
01:55 | ಈಗ ನಾನು ಕೋಡ್ ಅನ್ನು ವಿವರಿಸುತ್ತೇನೆ. |
01:58 | ಇಲ್ಲಿ, ಮೊದಲನೆಯ ಸಾಲು, ವೆಲ್ಕಮ್ ಮೆಸೇಜನ್ನು (ಸ್ವಾಗತ ಸಂದೇಶ) ಪ್ರಿಂಟ್ ಮಾಡುತ್ತದೆ. |
02:03 | ನಮಗೆ ಎಲ್ಲಿ ಕೋಡ್ ಅನ್ನು ಬಳಸಬೇಕಾಗಿದೆಯೋ ಅಲ್ಲಿಂದ 'do()' ಮೆಥಡ್ ಅನ್ನು ಫೈಲ್-ನೇಮ್ ನೊಂದಿಗೆ ಕಾಲ್ ಮಾಡಲಾಗುತ್ತದೆ. |
02:09 | ಪ್ರಸ್ತುತ ದಿನಾಂಕ ಹಾಗೂ ಸಮಯಗಳನ್ನು, 'datetime dot pl' ಫೈಲ್ ನ '$datestring' ಎಂಬ ವೇರಿಯೇಬಲ್ ನಲ್ಲಿ ಸ್ಟೋರ್ ಮಾಡಲಾಗಿದೆ |
02:16 | ಮತ್ತು ಕೊನೆಯಲ್ಲಿ, ಇದೇ ಫೈಲ್ ನಿಂದ 'msgThanks()' ಎಂಬ ಫಂಕ್ಷನ್ ಅನ್ನು ನಾವು ಕಾಲ್ ಮಾಡುತ್ತೇವೆ. |
02:21 | ಈಗ, ಫೈಲನ್ನು ಸೇವ್ ಮಾಡಲು 'Ctrl+S' ಅನ್ನು ಒತ್ತಿ. |
02:25 | ನಾವು ಪ್ರೊಗ್ರಾಮನ್ನು ಎಕ್ಸೀಕ್ಯೂಟ್ ಮಾಡೋಣ. |
02:27 | ಟರ್ಮಿನಲ್ ಗೆ ಬದಲಾಯಿಸಿ ಮತ್ತು ಹೀಗೆ ಟೈಪ್ ಮಾಡಿ: 'perl main dot pl' ಮತ್ತು 'Enter' ಅನ್ನು ಒತ್ತಿ. |
02:34 | ಟರ್ಮಿನಲ್ ನ ಮೇಲಿನ ಔಟ್ಪುಟ್ ಅನ್ನು ಗಮನಿಸಿ. |
02:37 | ನಂತರ, ಪರ್ಲ್ ಪ್ರೊಗ್ರಾಂನಲ್ಲಿ, 'require' ಮೆಥಡ್ ಮತ್ತು 'use' ಮೆಥಡ್ ಗಳನ್ನು ಹೇಗೆ ಬಳಸುವುದೆಂದು ನಾವು ಕಲಿಯುವೆವು. |
02:44 | ನಮ್ಮ ಹತ್ತಿರ ಸಬ್-ರುಟೀನ್ ಗಳ ಸಂಗ್ರಹವಿದ್ದು, ಅದನ್ನು ಅನೇಕ ಪರ್ಲ್ ಪ್ರೊಗ್ರಾಂಗಳಲ್ಲಿ ಬಳಸಲು ಸಾಧ್ಯವಿದ್ದಾಗ ಈ ಮೆಥಡ್ ಗಳನ್ನು ಬಳಸಲಾಗುತ್ತದೆ. |
02:52 | 'use' ಮೆಥಡ್ ಅನ್ನು ಮೊಡ್ಯೂಲ್ ಗಳಿಗಾಗಿ ಮಾತ್ರ ಬಳಸಲಾಗುತ್ತದೆ. |
02:56 | ಇದು ಕಂಪೈಲೇಶನ್ ಸಮಯದಲ್ಲಿ ಪರೀಕ್ಷಿಸಲ್ಪಡುತ್ತದೆ. |
02:59 | ಫೈಲ್ ಎಕ್ಸ್ಟೆನ್ಶನ್ ಅನ್ನು ಕೊಡಬೇಕಾದ ಅವಶ್ಯಕತೆಯಿಲ್ಲ. |
03:03 | 'require' ಮೆಥಡ್ ಅನ್ನು ಪರ್ಲ್ ಪ್ರೊಗ್ರಾಂ ಮತ್ತು ಮೊಡ್ಯೂಲ್ ಎರಡಕ್ಕೂ ಬಳಸಲಾಗುತ್ತದೆ. |
03:08 | ಇದನ್ನು ರನ್-ಟೈಮ್ ನಲ್ಲಿ ಪರೀಕ್ಷಿಸಲಾಗುವುದು. |
03:10 | ಫೈಲ್ ಎಕ್ಸ್ಟೆನ್ಶನ್ ಅನ್ನು ಕೊಡುವ ಅವಶ್ಯಕತೆಯಿದೆ. |
03:14 | 'use' ಮೆಥಡ್ ನ ಸಿಂಟ್ಯಾಕ್ಸ್ ಹೀಗಿದೆ: 'use' module-name semicolon |
03:20 | ಪರ್ಲ್ ಮೊಡ್ಯೂಲ್ಸ್, '.pm' ಎಕ್ಸ್ಟೆನ್ಶನ್ ನಿಂದ ಕೊನೆಗೊಳ್ಳುವ ಫೈಲ್ ಗಳಾಗಿವೆ. |
03:25 | ಮೊಡ್ಯೂಲ್ ಗಳ ಮೂಲಕ, ಕೋಡ್ ನ ಮರುಬಳಕೆಯನ್ನು ಕಾರ್ಯಗತ ಮಾಡಲಾಗುತ್ತದೆ. |
03:30 | ಇವುಗಳು, ಬೇರೆ (ಕಂಪ್ಯೂಟರ್) ಲ್ಯಾಂಗ್ವೇಜ್ ಗಳಲ್ಲಿನ ಲೈಬ್ರರೀ ಗಳಂತೆಯೇ ಆಗಿವೆ. |
03:35 | ಈಗ ಪರ್ಲ್ ಕೋಡ್ ನಲ್ಲಿ ಒಂದು ಮೊಡ್ಯೂಲ್ ಅನ್ನು ಸೇರಿಸಲು, 'use' ಮೆಥಡ್ ಅನ್ನು ಹೊಂದಿರುವ ಒಂದು ಸರಳವಾದ ಪ್ರೊಗ್ರಾಮನ್ನು ನಾನು ತೋರಿಸುತ್ತೇನೆ. |
03:43 | ನಿಮ್ಮ ಟೆಕ್ಸ್ಟ್-ಎಡಿಟರ್ ನಲ್ಲಿ ಒಂದು ಹೊಸ ಫೈಲನ್ನು ಓಪನ್ ಮಾಡಿ ಮತ್ತು ಅದನ್ನು 'sum dot pm' ಎಂದು ಹೆಸರಿಸಿ. |
03:49 | 'sum dot pm' ಫೈಲ್ ನಲ್ಲಿ, ಈ ಕೆಳಗಿನ ಕೋಡ್ ಅನ್ನು ಸ್ಕ್ರೀನ್ ಮೇಲೆ ತೋರಿಸಿದಂತೆ ಟೈಪ್ ಮಾಡಿ. |
03:55 | ಇಲ್ಲಿ, ಕೊಟ್ಟ ಸಂಖ್ಯೆಗಳ ಮೊತ್ತವನ್ನು ಕಂಡುಹಿಡಿಯುವ ಒಂದು ಸರಳವಾದ ಫಂಕ್ಷನ್, ನನ್ನ ಹತ್ತಿರ ಇದೆ. |
04:01 | ಈಗ, ಫೈಲನ್ನು ಸೇವ್ ಮಾಡಲು 'Ctrl+S' ಅನ್ನು ಒತ್ತಿ. |
04:05 | ಇಲ್ಲಿ, ನಾವು ಈ 'sum dot pm' ಎಂಬ ಫೈಲನ್ನು ಬಳಸಿ, ಇನ್ನೊಂದು ಪರ್ಲ್ ಸ್ಕ್ರಿಪ್ಟ್ ಅನ್ನು ಬರೆಯುವೆವು. |
04:11 | ನಾನು ಈಗಾಗಲೇ ಸೇವ್ ಮಾಡಿರುವ 'app dot pl' ಎಂಬ ಸ್ಯಾಂಪಲ್ ಪ್ರೊಗ್ರಾಂನ ಫೈಲ್ ಅನ್ನು ಓಪನ್ ಮಾಡುತ್ತೇನೆ. |
04:17 | 'app dot pl' ಫೈಲ್ ನಲ್ಲಿ, ಈ ಕೆಳಗಿನ ಕೋಡ್ ಅನ್ನು ಸ್ಕ್ರೀನ್ ಮೇಲೆ ತೋರಿಸಿದಂತೆ ಟೈಪ್ ಮಾಡಿ. |
04:22 | ಈಗ ನಾನು ಕೋಡ್ ಅನ್ನು ವಿವರಿಸುತ್ತೇನೆ. |
04:25 | ಮೊದಲನೆಯ ಸಾಲು, ಮೊಡ್ಯೂಲ್ ನ ಹೆಸರಿನೊಂದಿಗೆ 'use' ಮೆಥಡ್ ಅನ್ನು ತೋರಿಸುತ್ತದೆ. |
04:29 | ಈ ಸಂದರ್ಭದಲ್ಲಿ, ಮೊಡ್ಯೂಲ್ ನ ಹೆಸರು 'sum' ಎಂದು ಇರುತ್ತದೆ. |
04:33 | ನಾವು 'sum dot pm ' ಎಂಬ ಫೈಲ್ ನಲ್ಲಿ, 1, 7, 5, 4, 9 ಗಳನ್ನು 'total' ಎಂಬ ಫಂಕ್ಷನ್ ಗೆ ಇನ್ಪುಟ್ ಪ್ಯಾರಾಮೀಟರ್ ಗಳೆಂದು ಪಾಸ್ ಮಾಡುತ್ತಿದ್ದೇವೆ. |
04:44 | ಮುಂದಿನ ಸಾಲಿನಲ್ಲಿ ಮತ್ತೊಮ್ಮೆ 1 ರಿಂದ 10 (ಹತ್ತು) ನ್ನು ಇದೇ ಫಂಕ್ಷನ್ ಗೆ ಇನ್ಪುಟ್ ಪ್ಯಾರಾಮೀಟರ್ ಗಳೆಂದು ಪಾಸ್ ಮಾಡುತ್ತಿದ್ದೇವೆ. |
04:52 | ಈಗ, ಫೈಲನ್ನು ಸೇವ್ ಮಾಡಲು 'Ctrl+S' ಅನ್ನು ಒತ್ತಿ. |
04:56 | ನಾವು ಪ್ರೊಗ್ರಾಮನ್ನು ಎಕ್ಸೀಕ್ಯೂಟ್ ಮಾಡೋಣ. |
04:59 | ಟರ್ಮಿನಲ್ ಗೆ ಬದಲಾಯಿಸಿ ಮತ್ತು ಹೀಗೆ ಟೈಪ್ ಮಾಡಿ: 'perl app dot pl' ಮತ್ತು 'Enter' ಅನ್ನು ಒತ್ತಿ. |
05:06 | ಟರ್ಮಿನಲ್ ನ ಮೇಲೆ ತೋರಿಸಲಾದ ಔಟ್ಪುಟ್ ಅನ್ನು ಗಮನಿಸಿ. |
05:10 | ನಾವು 'use' ಮೆಥಡ್ ನಲ್ಲಿ ಇನ್ನೂ ಕೆಲವು ಆಯ್ಕೆಗಳನ್ನು ನೋಡೋಣ. ಟೆಕ್ಸ್ಟ್-ಎಡಿಟರ್ ನಲ್ಲಿ 'sum dot pm' ಗೆ ಹಿಂದಿರುಗಿ. |
05:18 | ಸೋರ್ಸ್ ಕೋಡ್ ನ ಆರಂಭದಲ್ಲಿ, ಈ ಸಾಲುಗಳನ್ನು ಸೇರಿಸಿ:
“use strict” ಸೆಮಿಕೋಲನ್ “use warnings” ಸೆಮಿಕೋಲನ್ |
05:27 | 'use strict' ಮತ್ತು 'use warnings' ಗಳು, ಪರ್ಲ್ ಗೆ ಕರಾರುವಾಕ್ಕಾಗಿ ವರ್ತಿಸಲು ಸೂಚಿಸುವ 'ಕಂಪೈಲರ್ ಫ್ಲ್ಯಾಗ್' ಗಳಾಗಿವೆ. |
05:35 | ಪ್ರೊಗ್ರಾಮಿಂಗ್ ಮಾಡುವಾಗಿನ ಸಾಮಾನ್ಯ ತಪ್ಪುಗಳನ್ನು ತಪ್ಪಿಸಲು ಇವುಗಳನ್ನು ಬಳಸಲಾಗುವುದು. |
05:39 | 'use strict': ಇದು, ಯೂಸರ್ ನಿಗೆ ಪ್ರೊಗ್ರಾಂನಲ್ಲಿ ಬಳಸುವ ಎಲ್ಲ ವೇರಿಯೇಬಲ್ ಗಳನ್ನು ಡಿಕ್ಲೇರ್ ಮಾಡಲು ಒತ್ತಾಯ ಪಡಿಸುತ್ತದೆ. |
05:45 | ಒಂದುವೇಳೆ ಇಲ್ಲಿ ಎರರ್ ಗಳಿದ್ದರೆ, 'use strict', ಎಕ್ಸೀಕ್ಯೂಶನ್ ಅನ್ನು ಸ್ಥಗಿತಗೊಳಿಸುವುದು. |
05:50 | 'use warnings': ಇದು, ಎಚ್ಚರಿಕೆಗಳನ್ನು ಮಾತ್ರ ಕೊಡುತ್ತದೆ ಆದರೆ ಎಕ್ಸೀಕ್ಯೂಶನ್ ಅನ್ನು ಮುಂದುವರಿಸುತ್ತದೆ. |
05:56 | ನಾವು ವೇರಿಯೇಬಲ್ '$sum' ಅನ್ನು, 'my' ಎಂದು ಡಿಕ್ಲೇರ್ ಮಾಡಲು ಮರೆತಿದ್ದೇವೆ ಎಂದು ಭಾವಿಸಿ. |
06:02 | ಈಗ, ಇದೇ ಪ್ರೊಗ್ರಾಂಅನ್ನು ಹೇಗೆ ಎಕ್ಸೀಕ್ಯೂಟ್ ಮಾಡಲಾಗುತ್ತದೆ ಎಂದು ನಾವು ನೋಡೋಣ. |
06:06 | ಫೈಲನ್ನು ಸೇವ್ ಮಾಡಲು 'Ctrl+S' ಅನ್ನು ಒತ್ತಿ. |
06:09 | ಟರ್ಮಿನಲ್ ಗೆ ಬದಲಾಯಿಸಿ ಮತ್ತು ಹೀಗೆ ಟೈಪ್ ಮಾಡಿ: 'perl app dot pl'. |
06:15 | ಫಲಿತಾಂಶವನ್ನು ಎಕ್ಸೀಕ್ಯೂಟ್ ಮಾಡದೇ ಪ್ರೊಗ್ರಾಂಅನ್ನು ಅಬಾರ್ಟ್ (ಪ್ರೊಗ್ರಾಂನಿಂದ ಹೊರಗೆ ಬರುವುದು) ಮಾಡಲಾಗಿದೆ ಎಂಬುದನ್ನು ನಾವು ನೋಡಬಹುದು. |
06:21 | ಟರ್ಮಿನಲ್ ನ ಮೇಲೆ ತೋರಿಸಲಾದ ಸಾಲುಗಳ ಮೊದಲನೆಯ ಸಮೂಹವು, “use strict” ನಿಂದ ಉತ್ಪಾದಿಸಲಾದ ಎರರ್ ಮೆಸೇಜ್ ಗಳಾಗಿವೆ. |
06:29 | ಕೊನೆಯಲ್ಲಿ ಇರುವುದು ಎರಡು ಅಬಾರ್ಟ್ ಮೆಸೇಜ್ ಗಳು. |
06:32 | ಹೀಗೆ, ಈ ರೀತಿಯಾಗಿ 'use' ಮೆಥಡ್ ನ ಆಯ್ಕೆಗಳು ಕೆಲಸ ಮಾಡುತ್ತವೆ. |
06:36 | ಇನ್ನುಮುಂದೆ, 'require' ಮೆಥಡ್ ಅನ್ನು ಬಳಸುವ ಒಂದು ಪರ್ಲ್ ಪ್ರೊಗ್ರಾಂಅನ್ನು ನಾವು ನೋಡೋಣ. |
06:41 | ನಾನು ಈಗಾಗಲೇ ಸೇವ್ ಮಾಡಿರುವ 'commonfunctions dot pl' ಎಂಬ ಈ ಸ್ಯಾಂಪಲ್ ಪ್ರೊಗ್ರಾಂಅನ್ನು ಓಪನ್ ಮಾಡುತ್ತೇನೆ. |
06:48 | ನಿಮ್ಮ 'commonfunctions dot pl' ಫೈಲ್ ನಲ್ಲಿ, ಈ ಕೆಳಗಿನ ಕೋಡ್ ಅನ್ನು, ಸ್ಕ್ರೀನ್ ನ ಮೇಲೆ ತೋರಿಸಿದಂತೆ ಟೈಪ್ ಮಾಡಿ. ನಾವು ಈಗ ಈ ಕೋಡ್ ಅನ್ನು ಅರ್ಥಮಾಡಿಕೊಳ್ಳೋಣ. |
06:57 | ಇಲ್ಲಿ, ನಾವು ಸಾಮಾನ್ಯವಾಗಿ ಬಳಸುವ ಫಂಕ್ಷನ್ ಗಳ ಸಂಗ್ರಹವನ್ನು ನೋಡಬಹುದು. |
07:01 | 'square()' ಎಂಬ ಮೊದಲನೆಯ ಫಂಕ್ಷನ್, ಸಂಖ್ಯೆಯ ವರ್ಗವನ್ನು ಹಿಂದಿರುಗಿಸುತ್ತದೆ. |
07:06 | 'square underscore root()' ಎಂಬ ಎರಡನೆಯ ಫಂಕ್ಷನ್, ಕೊಟ್ಟ ಸಂಖ್ಯೆಯ ವರ್ಗಮೂಲವನ್ನು ಹಿಂದಿರುಗಿಸುತ್ತದೆ. |
07:12 | ಮುಂದಿನ ಫಂಕ್ಷನ್, 'random underscore number()', ಯಾವುದೋ ಒಂದು ಸಂಖ್ಯೆಯನ್ನು ಹುಟ್ಟಿಸುತ್ತದೆ. |
07:18 | 'random underscore range()' ಎಂಬ ಕೊನೆಯ ಫಂಕ್ಷನ್, 'ಲೋವರ್ ರೇಂಜ್' ಮತ್ತು 'ಅಪ್ಪರ್ ರೇಂಜ್' ಎಂಬ ಸಂಖ್ಯೆಗಳ ನಡುವಿನ ಯಾವುದೋ ಒಂದು ಸಂಖ್ಯೆಯನ್ನು ಉತ್ಪಾದಿಸುತ್ತದೆ. |
07:26 | ಫೈಲ್ ನ ಕೊನೆಯಲ್ಲಿ 'ಒಂದು ಸೆಮಿಕೋಲನ್' (1 ;) ನಮಗೆ ಅವಶ್ಯಕ ಎಂಬುದನ್ನು ಗಮನಿಸಿ. |
07:31 | ಏಕೆಂದರೆ, ಫೈಲ್ ನಲ್ಲಿಯ ಕೊನೆಯ ಎಕ್ಸ್ಪ್ರೆಶನ್, 'true' ವ್ಯಾಲ್ಯೂಅನ್ನು ಹಿಂದಿರುಗಿಸುವುದು ಪರ್ಲ್ ಗೆ ಅವಶ್ಯವಾಗಿದೆ. |
07:37 | ಈಗ, ಫೈಲನ್ನು ಸೇವ್ ಮಾಡಲು 'Ctrl+S' ಅನ್ನು ಒತ್ತಿ. |
07:41 | ನಂತರ, ನಾವು ಒಂದು ಪರ್ಲ್ ಪ್ರೊಗ್ರಾಮನ್ನು ಬರೆಯುವೆವು. ಇದರಲ್ಲಿ ನಾವು 'require' ಮೆಥಡ್ ಅನ್ನು ಬಳಸಿ, ಈ ಸಬ್-ರುಟೀನ್ ಗಳನ್ನು ಕಾಲ್ ಮಾಡುವೆವು. |
07:48 | ನಾನು ಈಗಾಗಲೇ ಸೇವ್ ಮಾಡಿರುವ 'callprogram dot pl' ಎಂಬ ಸ್ಯಾಂಪಲ್ ಪ್ರೊಗ್ರಾಮನ್ನು ಓಪನ್ ಮಾಡುತ್ತೇನೆ. |
07:54 | ನಿಮ್ಮ ಫೈಲ್ ನಲ್ಲಿ, ಈ ಕೆಳಗಿನ ಕೋಡ್ ಅನ್ನು ಸ್ಕ್ರೀನ್ ನ ಮೇಲೆ ತೋರಿಸಿದಂತೆ ಟೈಪ್ ಮಾಡಿ. ನಾನು ಈಗ ಕೋಡ್ ಅನ್ನು ವಿವರಿಸುತ್ತೇನೆ. |
08:02 | 'require' (ರಿಕ್ವೈರ್), ಪರ್ಲ್ ಕೋಡನ್ನು ಒಳಗೊಂಡಿರುವ 'commonfunctions dot pl' ಎಂಬ ಫೈಲನ್ನು ಓದುತ್ತದೆ ಮತ್ತು ಅದನ್ನು ಕಂಪೈಲ್ ಮಾಡುತ್ತದೆ. |
08:09 | ಈ ಪ್ರೊಗ್ರಾಂ, ಯುಸರ್ ನಿಗೆ ನಾಲ್ಕು ಆಯ್ಕೆಗಳನ್ನು ಕೊಡುತ್ತದೆ. ಯೂಸರ್ ನು ಒಂದು ಸಲಕ್ಕೆ ಒಂದು ಆಯ್ಕೆಯನ್ನು ಮಾತ್ರ ಆಯ್ದುಕೊಳ್ಳಬೇಕು. |
08:17 | '1' (ಒಂದು), ಸಂಖ್ಯೆಯ ವರ್ಗವನ್ನು ಹಾಗೂ |
08:20 | '2' (ಎರಡು), ಸಂಖ್ಯೆಯ ವರ್ಗಮೂಲವನ್ನು ಕಂಡುಹಿಡಿಯಲು, |
08:23 | '3' (ಮೂರು), ಕೊಟ್ಟಿರುವ ವ್ಯಾಪ್ತಿಯಲ್ಲಿ ಯಾವುದೋ ಒಂದು ಸಂಖ್ಯೆಗಾಗಿ ಮತ್ತು '4' (ನಾಲ್ಕು), ಪ್ರೊಗ್ರಾಮನ್ನು ಬಿಟ್ಟು ಹೊರಬರಲು ಆಗಿವೆ. |
08:29 | ಆಯ್ಕೆ '1' ಎಂದು ಟೈಪ್ ಮಾಡಿದರೆ, ಅದು ಯೂಸರ್ ಅನ್ನು ಒಂದು ಸಂಖ್ಯೆಯನ್ನು ಎಂಟರ್ ಮಾಡಲು ಕೇಳುವುದು. |
08:34 | ವ್ಯಾಲ್ಯೂಅನ್ನು '$number' ನಲ್ಲಿ ಸ್ಟೋರ್ ಮಾಡಲಾಗುತ್ತದೆ ಮತ್ತು ಇದನ್ನು 'commonfunctions dot pl' ಎಂಬ ಫೈಲ್ ನಲ್ಲಿಯ 'square' ಎಂಬ ಫಂಕ್ಷನ್ ಗೆ ಪಾಸ್ ಮಾಡಲಾಗುತ್ತದೆ. |
08:44 | ಈ ಫಂಕ್ಷನ್, ಸಂಖ್ಯೆಯ ವರ್ಗವನ್ನು ಹಿಂದಿರುಗಿಸುವುದು. |
08:47 | 'print' ಸ್ಟೇಟ್ಮೆಂಟ್, ಸಂಖ್ಯೆಯ ವರ್ಗವನ್ನು ಔಟ್ಪುಟ್ ಎಂದು ಪ್ರಿಂಟ್ ಮಾಡುತ್ತದೆ. |
08:52 | ಒಂದುವೇಳೆ ಆಯ್ಕೆ '2' ಅನ್ನು ಟೈಪ್ ಮಾಡಿದರೆ, ಸಂಖ್ಯೆಯ ವರ್ಗಮೂಲವನ್ನು ಔಟ್ಪುಟ್ ಎಂದು ತೋರಿಸಲಾಗುತ್ತದೆ. |
08:58 | ಹಿಂದಿನ ಫಂಕ್ಷನ್ 'square' ನಲ್ಲಿ ವಿವರಿಸಿದಂತೆ, ಎಕ್ಸೀಕ್ಯೂಶನ್ ಅನ್ನು ಮಾಡಲಾಗುತ್ತದೆ. |
09:03 | ಆಯ್ಕೆ '3' (ಮೂರು) ಅನ್ನು ಟೈಪ್ ಮಾಡಿದರೆ, ಕೊಟ್ಟಿರುವ ವ್ಯಾಪ್ತಿಯಲ್ಲಿನ ಯಾವುದೋ ಒಂದು ಸಂಖ್ಯೆಯನ್ನು ಔಟ್ಪುಟ್ ಎಂದು ತೋರಿಸಲಾಗುತ್ತದೆ. |
09:09 | ಅಥವಾ ಆಯ್ಕೆಯು '4' (ನಾಲ್ಕು) ಎಂದಾದರೆ, ಪ್ರೊಗ್ರಾಂ ಹೊರಗೆ ಬರುತ್ತದೆ. ಸೂಚಿಸಲಾದ ಆಯ್ಕೆಗಳ ಹೊರತಾಗಿ ಬೇರೆ ಯಾವುದೇ ಆಯ್ಕೆಯನ್ನು ಕೊಟ್ಟಾಗ, ಪ್ರಿಂಟ್ ಸ್ಟೇಟ್ಮೆಂಟ್, “Incorrect option” ಎಂದು ಹೇಳುತ್ತದೆ. |
09:20 | ಈ ಪ್ರೊಗ್ರಾಂನಲ್ಲಿ ನಾವು 'commonfunctions dot pl' ನಿಂದ, ನಾಲ್ಕರಲ್ಲಿ ಮೂರು ಫಂಕ್ಷನ್ ಗಳನ್ನು ಮಾತ್ರ ಕಾಲ್ ಮಾಡಿರುವುದನ್ನು ಗಮನಿಸಿ. |
09:28 | ಈಗ, ಫೈಲನ್ನು ಸೇವ್ ಮಾಡಲು 'Ctrl+S' ಅನ್ನು ಒತ್ತಿ. |
09:31 | ನಾವು ಪ್ರೊಗ್ರಾಮನ್ನು ಎಕ್ಸೀಕ್ಯೂಟ್ ಮಾಡೋಣ. |
09:34 | ಟರ್ಮಿನಲ್ ಗೆ ಬದಲಾಯಿಸಿ ಮತ್ತು ಹೀಗೆ ಟೈಪ್ ಮಾಡಿ: 'perl callprogram dot pl' |
09:41 | ಔಟ್ಪುಟ್ ಅನ್ನು ಗಮನಿಸಿ. |
09:44 | ನಾನು ಮತ್ತೊಮ್ಮೆ ಬೇರೆ ಆಯ್ಕೆಯೊಂದಿಗೆ ಪ್ರೊಗ್ರಾಮನ್ನು ಎಕ್ಸೀಕ್ಯೂಟ್ ಮಾಡುವೆನು. |
09:49 | ಹೀಗೆ ಟೈಪ್ ಮಾಡಿ: 'perl callprogram dot pl' |
09:53 | ಈಗ, “Enter the Option” ಗೆ '3' ಎಂದು, |
09:56 | “Enter a lower range” ಗೆ '50' ಎಂದು, |
09:59 | “Enter a upper range” ಗೆ '99' ಎಂದು ಕೊಡಿ. |
10:02 | ಕೊಟ್ಟ ಸಂಖ್ಯೆಗಳ ವ್ಯಾಪ್ತಿಯಲ್ಲಿ, ಯಾವುದೋ ಒಂದು ಸಂಖ್ಯೆಯು (random number) ಉತ್ಪತ್ತಿಯಾಗಿರುವುದನ್ನು ನಾವು ನೋಡಬಹುದು. |
10:08 | ಇನ್ನುಳಿದ ಆಯ್ಕೆಗಳನ್ನು ನೀವೇ ಪ್ರಯತ್ನಿಸಿ. |
10:11 | ಇದರೊಂದಿಗೆ, ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ. ಸಂಕ್ಷಿಪ್ತವಾಗಿ, |
10:16 | ಈ ಟ್ಯುಟೋರಿಯಲ್ ನಲ್ಲಿ ನಾವು, ಪರ್ಲ್ ಪ್ರೊಗ್ರಾಮಿಂಗ್ ನಲ್ಲಿ
|
10:24 | ಗಮನಿಸಿ: 'require' ಎಂಬ ಮೊಡ್ಯೂಲ್ ಗೆ ಬದಲಾಗಿ, 'use' ಎಂಬ ಮೊಡ್ಯೂಲ್ ಅನ್ನು ಶಿಫಾರಸು ಮಾಡಲಾಗುತ್ತದೆ. ಏಕೆಂದರೆ, ಇದು ಕಂಪೈಲ್ ಮಾಡುವ ಸಮಯದಲ್ಲಿ ಮೊಡ್ಯೂಲ್ ನ ಲಭ್ಯತೆಯನ್ನು ನಿರ್ಧರಿಸುತ್ತದೆ. |
10:33 | ಇಲ್ಲಿ ನಿಮಗಾಗಿ ಒಂದು ಅಸೈನ್ಮೆಂಟ್ ಇದೆ.
'reminder.pl' ಎಂಬ ಒಂದು ಪರ್ಲ್ ಪ್ರೊಗ್ರಾಮನ್ನು ಬರೆಯಿರಿ. ಇದರಲ್ಲಿ ನೀವು ಭಾಗವಹಿಸುವವರಿಗೆ ಪತ್ರವನ್ನು ಬರೆಯುವಿರಿ. |
10:41 | 'To' ಮತ್ತು 'From' name (ಹೆಸರು) ಗಳನ್ನು ಎಂಟರ್ ಮಾಡಲು ಯೂಸರ್ ನಿಗೆ ಪ್ರಾಂಪ್ಟ್ ಮಾಡಿ. |
10:45 | ‘use’ ಮೆಥಡ್ ಅನ್ನ್ ಬಳಸಿ, 'Letter dot pm' ನಿಂದ ಸಬ್-ರುಟೀನ್ ಗಳನ್ನು ಕಾಲ್ ಮಾಡಿ. |
10:50 | ಈ ಕೆಳಗಿನ ಫಂಕ್ಷನ್ ಗಳನ್ನು, 'Letter dot pm' ಎಂಬ ಫೈಲ್ ನಲ್ಲಿ ಬರೆಯಿರಿ. |
10:54 | 'LetterDate()' ಎಂಬ ಫಂಕ್ಷನ್, ಪ್ರಸ್ತುತ ದಿನಾಂಕ ಮತ್ತು ಸಮಯವನ್ನು ಹಿಂದಿರುಗಿಸುತ್ತದೆ. |
10:58 | 'To()' ಎಂಬ ಫಂಕ್ಷನ್, ಭಾಗವಹಿಸುವವರ ಹೆಸರುಗಳನ್ನು ಹಿಂದಿರುಗಿಸುತ್ತದೆ. |
11:02 | 'From()' ಎಂಬ ಫಂಕ್ಷನ್, ಕಳುಹಿಸುವವರ ಹೆಸರನ್ನು ಹಿಂದಿರುಗಿಸುತ್ತದೆ. |
11:05 | 'Lettermsg()' ಎಂಬ ಫಂಕ್ಷನ್, ಲೆಟರ್ ನಲ್ಲಿರುವ ವಿಷಯವನ್ನು ಹಿಂದಿರುಗಿಸುತ್ತದೆ. |
11:09 | 'Thanksmsg()' ಎಂಬ ಫಂಕ್ಷನ್, “Thanks and regards” ಅನ್ನು ಹಿಂದಿರುಗಿಸುತ್ತದೆ. |
11:13 | ಔಟ್ಪುಟ್ ಅನ್ನು ಇಲ್ಲಿ ತೋರಿಸಿದಂತೆ ಪ್ರದರ್ಶಿಸಬೇಕು. |
11:20 | ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋ, “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ಸಾರಾಂಶವಾಗಿದೆ. ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ವೀಕ್ಷಿಸಿ. |
11:27 | “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ತಂಡವು:
|
11:36 | ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಇಲ್ಲಿಗೆ ಬರೆಯಿರಿ: |
11:40 | ಇದು NMEICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ.
ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುತ್ತದೆ: |
11:51 | IIT Bombay ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ನವೀನ್ ಭಟ್, ಉಪ್ಪಿನಪಟ್ಟಣ.
ವಂದನೆಗಳು. |