PERL/C2/Variables-in-Perl/Kannada

From Script | Spoken-Tutorial
Jump to: navigation, search
Time Narration
00:01 Variables in Perl ಎನ್ನುವ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:06 ಈ ಟ್ಯುಟೋರಿಯಲ್ ನಲ್ಲಿ ನಾವು, ಪರ್ಲ್ ನಲ್ಲಿಯ (Perl) ‘ವೇರಿಯೆಬಲ್’ ಗಳ ಬಗ್ಗೆ ಕಲಿಯುವೆವು.
00:12 ನಾನು Ubuntu Linux 12.04 ಆಪರೇಟಿಂಗ್ ಸಿಸ್ಟಂ ಹಾಗೂ
00:18 Perl 5.14.2 ಎಂದರೆ: Perl ರಿವಿಜನ್ 5, ಆವೃತ್ತಿ 14 ಮತ್ತು ಉಪ-ಆವೃತ್ತಿ 2 ಇವುಗಳನ್ನು ಬಳಸುತ್ತಿದ್ದೇನೆ.
00:26 ನಾನು gedit Text Editor ಅನ್ನು ಸಹ ಬಳಸುತ್ತಿರುವೆನು.
00:30 ನೀವು, ನಿಮಗೆ ಇಷ್ಟವಾದ ಯಾವುದೇ ‘ಟೆಕ್ಸ್ಟ್ ಎಡಿಟರ್’ ಅನ್ನು ಬಳಸಬಹುದು.
00:34 ‘ಪರ್ಲ್’ ನಲ್ಲಿ (Perl) ‘ವೇರಿಯೇಬಲ್’ಗಳು:
00:37 ‘ಟೆಕ್ಸ್ಟ್ ಸ್ಟ್ರಿಂಗ್’ಗಳು, ಸಂಖ್ಯೆಗಳು ಅಥವಾ ‘ಆರೇ’ಗಳಂತಹ ವ್ಯಾಲ್ಯೂಗಳನ್ನು ಸ್ಟೋರ್ ಮಾಡಲು, ‘ವೇರಿಯೇಬಲ್’ಗಳನ್ನು ಉಪಯೋಗಿಸಲಾಗುತ್ತದೆ.
00:44 ‘ವೇರಿಯೇಬಲ್’ಅನ್ನು ಒಮ್ಮೆ ಡಿಕ್ಲೇರ್ ಮಾಡಿದ ನಂತರ, ಅದನ್ನು ಸ್ಕ್ರಿಪ್ಟ್ ನಲ್ಲಿ ಮತ್ತೆ ಮತ್ತೆ ಬಳಸಬಹುದು.
00:50 ‘ಸ್ಕೇಲರ್’ (scalar), ಒಂದೇ ಒಂದು ವ್ಯಾಲ್ಯೂವನ್ನು ಪ್ರತಿನಿಧಿಸುತ್ತದೆ ಹಾಗೂ ‘ಸ್ಕೇಲರ್’ಗಳನ್ನು ಮಾತ್ರ ಸ್ಟೋರ್ ಮಾಡಬಲ್ಲದು.
00:56 ‘ಡಾಲರ್’ ಚಿಹ್ನೆಯನ್ನು ($) ಬಳಸಿ, ಸ್ಕೇಲರ್ ‘ವೇರಿಯೇಬಲ್’ಗಳನ್ನು ಡಿಕ್ಲೇರ್ ಮಾಡಲಾಗುವುದು.
01:00 ನಾವು ‘ವೇರಿಯೇಬಲ್’ಗಳನ್ನು ಡಿಕ್ಲೇರ್ ಮಾಡುವ ಬಗೆಯನ್ನು ನೋಡೋಣ.
01:03 ಒಂದು ‘ವೇರಿಯೇಬಲ್’ಅನ್ನು ಹೀಗೆ ಡಿಕ್ಲೇರ್ ಮಾಡಬಹುದು: ‘ಡಾಲರ್ priority ಸೆಮಿಕೋಲನ್’.
01:09 ‘ಪರ್ಲ್’ನಲ್ಲಿ, ‘ವೇರಿಯೇಬಲ್’ಗಳ ಹೆಸರುಗಳು ಹಲವಾರು ಫಾರ್ಮ್ಯಾಟ್ ಗಳನ್ನು ಹೊಂದಿರಲು ಸಾಧ್ಯವಿದೆ. ‘ವೇರಿಯೇಬಲ್’ಗಳು, ಒಂದು ಅಕ್ಷರ ಅಥವಾ ‘ಅಂಡರ್ಸ್ಕೋರ್’ನಿಂದ (_) ಮಾತ್ರ ಆರಂಭವಾಗಬೇಕು,
01:18 ಮತ್ತು ಅಕ್ಷರಗಳು, ಅಂಕಿಗಳು, ‘ಅಂಡರ್ಸ್ಕೋರ್’ಗಳು ಅಥವಾ ಈ ಮೂರರ ಸಂಯೋಜನೆಯನ್ನು ಒಳಗೊಂಡಿರಬಹುದು.
01:24 ದೊಡ್ಡಕ್ಷರಗಳೊಂದಿಗೆ (CAPITAL letters) ಡಿಕ್ಲೇರ್ ಮಾಡಲಾದ ‘ವೇರಿಯೇಬಲ್’ಗಳು, ಪರ್ಲ್ ನಲ್ಲಿ ವಿಶೇಷ ಅರ್ಥವನ್ನು ಹೊಂದಿವೆ.
01:30 ಆದ್ದರಿಂದ, ದೊಡ್ಡಕ್ಷರಗಳನ್ನು ಬಳಸಿ ‘ವೇರಿಯೇಬಲ್’ಗಳನ್ನು ಡಿಕ್ಲೇರ್ ಮಾಡುವುದನ್ನು ದೂರವಿಡಿ.
01:34 ಈಗ ಟರ್ಮಿನಲ್ (Terminal) ಅನ್ನು ‘ಓಪನ್’ ಮಾಡಿ ಮತ್ತು ಹೀಗೆ ಟೈಪ್ ಮಾಡಿ: gedit variables . pl & (ಜಿ-ಎಡಿಟ್ ವೇರಿಯೇಬಲ್ಸ್ ಡಾಟ್ ಪಿ-ಎಲ್ ಆಂಪರ್ಸಂಡ್).
01:44 ‘ಆಂಪರ್ಸಂಡ್’ (&), ಟರ್ಮಿನಲ್ ನ ಮೇಲೆ ‘ಕಮಾಂಡ್ ಪ್ರಾಂಪ್ಟ್’ಅನ್ನು ಅನ್ಲಾಕ್ ಮಾಡುವುದು. ಈಗ Enter ಅನ್ನು ಒತ್ತಿ.
01:50 ಇದು ‘ಜಿ-ಎಡಿಟ್ ಟೆಕ್ಸ್ಟ್ ಎಡಿಟರ್’ನಲ್ಲಿ, “variables.pl” ಎನ್ನುವ ಫೈಲನ್ನು ಓಪನ್ ಮಾಡುವುದು.
01:56 “.pl” ( ಡಾಟ್ ಪಿ-ಎಲ್), ‘ಪರ್ಲ್’ ಫೈಲ್ನ ಡೀಫಾಲ್ಟ್ ಎಕ್ಸ್ಟೆನ್ಶನ್ ಆಗಿದೆ.
02:01 ಫೈಲ್ನಲ್ಲಿ ಹೀಗೆ ಟೈಪ್ ಮಾಡಿ: ‘ಡಾಲರ್ priority ಸೆಮಿಕೋಲನ್’ ಮತ್ತು Enter ಅನ್ನು ಒತ್ತಿ.
02:10 ಹೀಗೆ, ನಾವು priority ಎನ್ನುವ ‘ವೇರಿಯೇಬಲ್’ ಅನ್ನು ಡಿಕ್ಲೇರ್ ಮಾಡಿದ್ದೇವೆ.
02:13 ‘ವೇರಿಯೇಬಲ್’ ಅನ್ನು ಉಪಯೋಗಿಸುವ ಮುನ್ನ ನೀವು ಅದನ್ನು ಡಿಕ್ಲೇರ್ ಮಾಡಬೇಕಾದ ಅಗತ್ಯವಿಲ್ಲ.
02:18 ನೀವು ಹಾಗೆಯೇ ಅದನ್ನು ನಿಮ್ಮ ‘ಕೋಡ್’ನಲ್ಲಿ ಬಳಸಬಹುದು.
02:21 ಈಗ, priority ಎನ್ನುವ ‘ವೇರಿಯೇಬಲ್’ಗೆ ನಾವು ಒಂದು ಸಂಖ್ಯೆಯನ್ನು ನಿಗದಿಪಡಿಸೋಣ.
02:25 ಇದಕ್ಕಾಗಿ, ಹೀಗೆ ಟೈಪ್ ಮಾಡಿ: “ಡಾಲರ್ priority ಸ್ಪೇಸ್ ಇಕ್ವಲ್ ಟು ಸ್ಪೇಸ್ 1 (ಒಂದು) ಸೆಮಿಕೋಲನ್”,
02:32 ಮತ್ತು Enter ಅನ್ನು ಒತ್ತಿ.
02:34 ಆಮೇಲೆ, ಹೀಗೆ ಟೈಪ್ ಮಾಡಿ:
02:36 “print ಸ್ಪೇಸ್ ಡಬಲ್ ಕೋಟ್ಸ್ Value of variable is: ಡಾಲರ್ priority ಬ್ಯಾಕ್-ಸ್ಲ್ಯಾಶ್ n ಡಬಲ್ ಕೋಟ್ಸ್ ಮುಚ್ಚಿ ಸೆಮಿಕೋಲನ್” ಮತ್ತು Enter ಅನ್ನು ಒತ್ತಿ.
02:50 ಬ್ಯಾಕ್-ಸ್ಲ್ಯಾಶ್ n (\n), ‘ನ್ಯೂ ಲೈನ್’ (new line) ಕ್ಯಾರೆಕ್ಟರ್ ಆಗಿದೆ.
02:53 ಈಗ, ಈ ಫೈಲನ್ನು ‘variables.pl’ ಎಂದು ಯಾವುದೇ ಲೊಕೇಶನ್ ನಲ್ಲಿ ಸೇವ್ ಮಾಡಿ.
03:02 ನನ್ನದು, home/amol ಎನ್ನುವ ಡಿರೆಕ್ಟರಿಯಲ್ಲಿ ಸೇವ್ ಆಗುವುದು. ಈಗ ಈ ಫೈಲನ್ನು ಸೇವ್ ಮಾಡಿ.
03:10 ಈಗಷ್ಟೇ ‘ಕ್ರಿಯೇಟ್’ ಮಾಡಿದ ‘variables.pl’ ಫೈಲ್ ನ ಪರ್ಮಿಷನ್ ಗಳನ್ನು ಈಗ ನಾವು ಬದಲಾಯಿಸೋಣ.
03:18 ಇದನ್ನು ಮಾಡಲು, ಟರ್ಮಿನಲ್ ನ ಮೇಲೆ ಹೀಗೆ ಟೈಪ್ ಮಾಡಿ: chmod 755 variables . (ಡಾಟ್) pl
03:27 ಇದು, ಫೈಲ್ ಗೆ “read", "write" & "execute” ಮಾಡುವ ಹಕ್ಕುಗಳನ್ನು (rights) ಒದಗಿಸುತ್ತದೆ.
03:32 ಈ ಪರ್ಲ್ ಸ್ಕ್ರಿಪ್ಟ್ ಅನ್ನು ಕಂಪೈಲ್ ಮಾಡಲು, ಟರ್ಮಿನಲ್ ನ ಮೇಲೆ ಹೀಗೆ ಟೈಪ್ ಮಾಡಿ:
03:36 ‘perl ಹೈಫನ್ c variables ಡಾಟ್ pl’
03:42 ಹೈಫನ್ c ಸ್ವಿಚ್, ಯಾವುದೇ ಕಂಪೈಲೇಶನ್/ಸಿಂಟ್ಯಾಕ್ಸ್ ಎರರ್ ಗಳಿಗಾಗಿ, ಪರ್ಲ್ ಸ್ಕ್ರಿಪ್ಟ್ ಅನ್ನು ಕಂಪೈಲ್ ಮಾಡುತ್ತದೆ.
03:49 ಈಗ Enter ಅನ್ನು ಒತ್ತಿ.
03:51 ನಮ್ಮ ಸ್ಕ್ರಿಪ್ಟ್ ನಲ್ಲಿ ಸಿಂಟ್ಯಾಕ್ಸ್ ಎರರ್ ಗಳಿಲ್ಲ ಎಂದು ಇದು ನಮಗೆ ಹೇಳುತ್ತದೆ.
03:56 ಈಗ ನಾವು ‘perl variables . (ಡಾಟ್) pl’ ಎಂದು ಟೈಪ್ ಮಾಡಿ ಹಾಗೂ Enter ಅನ್ನು ಒತ್ತಿ ಈ ಪರ್ಲ್ ಸ್ಕ್ರಿಪ್ಟ್ ಅನ್ನು ಎಕ್ಸಿಕ್ಯೂಟ್ ಮಾಡೋಣ.
04:06 ಔಟ್ಪುಟ್, ಹೈಲೈಟ್ ಮಾಡಿ ತೋರಿಸಿದ ಹಾಗೆ ಇರುತ್ತದೆ.
04:10 ನಾವು ಡಿಕ್ಲೇರ್ ಮಾಡಿದ ‘ವೇರಿಯೇಬಲ್’ಗೆ, string ವ್ಯಾಲ್ಯೂವನ್ನು ಸಹ ನಿಗದಿಪಡಿಸಬಹುದು (assign).
04:15 ‘ಟೆಕ್ಸ್ಟ್ ಎಡಿಟರ್’ ವಿಂಡೋ ಗೆ ಹಿಂತಿರುಗಿ.
04:18 ‘ಡಾಲರ್ priority ಇಕ್ವಲ್ ಟು ವನ್;’ ಗೆ ಬದಲಾಗಿ
04:22 ಡಾಲರ್ priority ಇಕ್ವಲ್ ಟು ಸಿಂಗಲ್ ಕೋಟ್ಸ್ ನಲ್ಲಿ high; ಎಂದು ಟೈಪ್ ಮಾಡಿ.
04:28 ಹಂಚಿಕೆಗಳನ್ನು (assignments) ಬಲಗಡೆಯಿಂದ ಎಡಕ್ಕೆ ಮೌಲ್ಯೀಕರಿಸಲಾಗುತ್ತದೆ (evaluate) ಎನ್ನುವುದನ್ನು ದಯವಿಟ್ಟು ಗಮನಿಸಿ.
04:34 ಸ್ಕೇಲರ್, string ಅಥವಾ ‘ನಂಬರ್’ನಂತಹ ಯಾವುದೇ ಪ್ರಕಾರದ ಡೇಟಾ ಅನ್ನು ಇಟ್ಟುಕೊಳ್ಳಲು ಸಾಧ್ಯವಿದೆ.
04:38 ಈ ಫೈಲನ್ನು ಸೇವ್ ಮಾಡಿ ಮತ್ತು
04:45 perl ಹೈಫನ್ c variables ಡಾಟ್ pl ಎಂದು ಟೈಪ್ ಮಾಡಿ ಸ್ಕ್ರಿಪ್ಟನ್ನು ಮತ್ತೊಮ್ಮೆ ಕಂಪೈಲ್ ಮಾಡಿ. ಈಗ Enter ಅನ್ನು ಒತ್ತಿ.
04:51 ಇಲ್ಲಿ ‘ಸಿಂಟ್ಯಾಕ್ಸ್ ಎರರ್’ ಇಲ್ಲ ವೆಂದು ಇದು ನಮಗೆ ಹೇಳುತ್ತದೆ.
04:55 ‘perl variables ಡಾಟ್ pl’ ಎಂದು ಟೈಪ್ ಮಾಡಿ, Enter ಅನ್ನು ಒತ್ತುವುದರ ಮೂಲಕ ಸ್ಕ್ರಿಪ್ಟ್ ಅನ್ನು ಎಕ್ಸಿಕ್ಯೂಟ್ ಮಾಡಿ.
05:03 ಔಟ್ಪುಟ್, ಇಲ್ಲಿ ತೋರಿಸಿದಂತೆ ಇರುತ್ತದೆ.
05:07 ಈಗ ‘ಟೆಕ್ಸ್ಟ್ ಎಡಿಟರ್’ವಿಂಡೋ ಗೆ ಹಿಂತಿರುಗಿ.
05:10 ನೀವು ‘ಸ್ಕೇಲರ್’ಗಳನ್ನು ಡಬಲ್ ಕೋಟ್ಸ್ ನ ಒಳಗಿರುವ ಸ್ಟ್ರಿಂಗ್ ನಂತೆ ಸಹ ಬಳಸಬಹುದು, ಹೀಗೆ:
05:15 ಡಾಲರ್ priority ಡಬಲ್ ಕೋಟ್ಸ್ ನ ಒಳಗಡೆ string;
05:19 ಈ ಫೈಲನ್ನು ಸೇವ್ ಮಾಡಿ ಮತ್ತು ಕ್ಲೋಸ್ ಮಾಡಿ.
05:22 ಹಲವು ‘ವೇರಿಯೇಬಲ್’ಗಳನ್ನು ಹೇಗೆ ಡಿಕ್ಲೇರ್ ಮಾಡುವುದು ಎನ್ನುವುದನ್ನು ನಾವು ತಿಳಿಯೋಣ.
05:27 ಇದನ್ನು ಮಾಡಲು, ‘ಟೆಕ್ಸ್ಟ್ ಎಡಿಟರ್’ನಲ್ಲಿ ಹೊಸ ಫೈಲನ್ನು ಓಪನ್ ಮಾಡಿ.
05:31 ಟರ್ಮಿನಲ್ ನ ಮೇಲೆ ಹೀಗೆ ಟೈಪ್ ಮಾಡಿ: ‘gedit multivar ಡಾಟ್ pl ಸ್ಪೇಸ್ ಆಂಪರ್ಸಂಡ್’ ಮತ್ತು Enter ಅನ್ನು ಒತ್ತಿ.
05:42 ಇದು ‘ಟೆಕ್ಸ್ಟ್ ಎಡಿಟರ್’ನಲ್ಲಿ, ‘multivar ಡಾಟ್ pl’ ಎನ್ನುವ ಫೈಲನ್ನು ‘ಓಪನ್’ ಮಾಡುತ್ತದೆ.
05:48 ಈಗ ಹೀಗೆ ಟೈಪ್ ಮಾಡಿ:
05:50 ಡಾಲರ್ firstVar ಕಾಮಾ ಡಾಲರ್ secondVar ಸೆಮಿಕೋಲನ್ ಮತ್ತು Enter ಅನ್ನು ಒತ್ತಿ.
06:00 ‘ಡಾಲರ್ firstVar’ ‘ವೇರಿಯೇಬಲ್’ನ ವ್ಯಾಲ್ಯೂವನ್ನು ‘ಡಾಲರ್ secondVar’ಗೆ ‘ಕಾಪಿ’ ಮಾಡಲು ಹೀಗೆ ಟೈಪ್ ಮಾಡಿ:
06:07 ಡಾಲರ್ firstVar ಸ್ಪೇಸ್ ಇಕ್ವಲ್ ಟು ಸ್ಪೇಸ್ ಡಾಲರ್ secondVar ಸೆಮಿಕೋಲನ್ ಮತ್ತು Enter ಅನ್ನು ಒತ್ತಿ.
06:19 ಸಂಕಲನ, ವ್ಯವಕಲನ, ಗುಣಾಕಾರ, ಭಾಗಾಕಾರಗಳಂತಹ ಗಣಿತದ ಎಲ್ಲ ‘ಆಪರೇಶನ್’ಗಳನ್ನು ಈ ‘ವೇರಿಯೇಬಲ್’ಗಳ ಮೇಲೆ ಮಾಡಬಹುದು.
06:30 ಪರ್ಲ್ ಅನ್ನು ಬಳಸಿ ಇದನ್ನು ಹೇಗೆ ಸಾಧಿಸಬಹುದು ಎಂದು ನಾವು ನೋಡೋಣ.
06:34 ‘ಟೆಕ್ಸ್ಟ್ ಎಡಿಟರ್’ಗೆ ಬದಲಾಯಿಸಿ.
06:36 ಈಗ ನಾವು ಈ ಎರಡೂ ‘ವೇರಿಯೇಬಲ್’ಗಳಿಗೆ 10 (ಹತ್ತು) ಎಂದು ವ್ಯಾಲ್ಯೂವನ್ನು ಅಸೈನ್ ಮಾಡೋಣ. ಇದಕ್ಕಾಗಿ ಹೀಗೆ ಟೈಪ್ ಮಾಡಿ:
06:41 ಡಾಲರ್ firstVar ಇಕ್ವಲ್ ಟು ಡಾಲರ್ secondVar ಇಕ್ವಲ್ ಟು ಹತ್ತು (10) ಸೆಮಿಕೋಲನ್. ಮತ್ತು Enter ಅನ್ನು ಒತ್ತಿ.
06:51 ಈಗ ಈ ವ್ಯಾಲ್ಯೂಗಳನ್ನು ಪ್ರಿಂಟ್ ಮಾಡಲು, ಹೀಗೆ ಟೈಪ್ ಮಾಡಿ:
06:55 print ಡಬಲ್ ಕೋಟ್ಸ್ ನಲ್ಲಿ firstVar: ಡಾಲರ್ firstVar and secondVar: ಡಾಲರ್ secondVar ಬ್ಯಾಕ್ಸ್ಲ್ಯಾಶ್ n ಡಬಲ್ ಕೋಟ್ಸ್ ಮುಚ್ಚಿ ಸೆಮಿಕೋಲನ್. Enter ಅನ್ನು ಒತ್ತಿ.
07:17 ಈಗ, ಈ ಫೈಲನ್ನು ಸೇವ್ ಮಾಡಿ.
07:19 ಈಗ, ಎರಡು ‘ವೇರಿಯೇಬಲ್’ಗಳಲ್ಲಿರುವ ವ್ಯಾಲ್ಯೂಗಳನ್ನು ನಾವು ಕೂಡಿಸೋಣ.
07:23 ಇದಕ್ಕಾಗಿ, ಹೀಗೆ ಟೈಪ್ ಮಾಡಿ:
07:25 ಡಾಲರ್ addition ಸ್ಪೇಸ್ ಇಕ್ವಲ್ ಟು ಸ್ಪೇಸ್ ಡಾಲರ್ firstVar ಸ್ಪೇಸ್ plus ಸ್ಪೇಸ್ ಡಾಲರ್ secondVar ಸೆಮಿಕೋಲನ್. ಮತ್ತು Enter ಅನ್ನು ಒತ್ತಿ.
07:43 addition ಎನ್ನುವ ‘ವೇರಿಯೇಬಲ್’ಅನ್ನು ನಾವು ಡಿಕ್ಲೇರ್ ಮಾಡಿಲ್ಲ ಎನ್ನುವುದನ್ನು ಗಮನಿಸಿ.
07:47 ಮತ್ತೊಮ್ಮೆ, addition ಎನ್ನುವ ‘ವೇರಿಯೇಬಲ್’ನ ವ್ಯಾಲ್ಯೂವನ್ನು ಪ್ರಿಂಟ್ ಮಾಡಲು ಹೀಗೆ ಟೈಪ್ ಮಾಡಿ:
07:53 print ಡಬಲ್ ಕೋಟ್ಸ್ Addition is ಡಾಲರ್addition ಬ್ಯಾಕ್ ಸ್ಲ್ಯಾಶ್ n ಡಬಲ್ ಕೋಟ್ಸ್ ಮುಚ್ಚಿ ಸೆಮಿಕೋಲನ್.
08:05 ಈ ಫೈಲನ್ನು ಸೇವ್ ಮಾಡಿ.
08:07 ಈ ಫೈಲನ್ನು ಕಂಪೈಲ್ ಮಾಡಲು, ಮತ್ತೊಮ್ಮೆ ಟರ್ಮಿನಲ್ ನ ಮೇಲೆ ಹೀಗೆ ಟೈಪ್ ಮಾಡಿ:
08:12 ‘perl ಹೈಫನ್ c multivar ಡಾಟ್ pl’
08:18 ಇಲ್ಲಿ ಸಿಂಟ್ಯಾಕ್ಸ್ ಎರರ್ ಇಲ್ಲ. ಹೀಗಾಗಿ ನಾವು
08:24 ‘perl multivar ಡಾಟ್ pl’ ಎಂದು ಟೈಪ್ ಮಾಡಿ, ಸ್ಕ್ರಿಪ್ಟ್ ಅನ್ನು ಎಕ್ಸಿಕ್ಯೂಟ್ ಮಾಡಬಹುದು.
08:30 ಇಲ್ಲಿ ಹೈಲೈಟ್ ಮಾಡಿ ತೋರಿಸಿದಂತೆ ಇದು ಔಟ್ಪುಟ್ಅನ್ನು ಕೊಡುವುದು.
08:34 ಹೀಗೆಯೇ, ವ್ಯವಕಲನ, ಗುಣಾಕಾರ ಮತ್ತು ಭಾಗಾಕಾರಗಳನ್ನು ಮಾಡಲು ಪ್ರಯತ್ನಿಸಿ.
08:38 ನಾನು ಇಲ್ಲಿ ‘ಕೋಡ್’ಅನ್ನು ಬರೆದಿದ್ದೇನೆ.
08:41 ಈಗ ನಾವು ಈ ಫೈಲನ್ನು ಸೇವ್ ಮಾಡಿ ನಂತರ ಕ್ಲೋಸ್ ಮಾಡೋಣ.
08:46 ಈಗ ಫೈಲನ್ನು ಕಂಪೈಲ್ ಮಾಡಿ. ಇದಕ್ಕಾಗಿ ಹೀಗೆ ಟೈಪ್ ಮಾಡಿ.
08:48 ‘perl ಹೈಫನ್ c multivar ಡಾಟ್ pl’
08:54 ಇಲ್ಲಿ ಸಿಂಟ್ಯಾಕ್ಸ್ ಎರರ್ ಇಲ್ಲ.
08:55 ಹೀಗಾಗಿ, ನಾವು ಸ್ಕ್ರಿಪ್ಟ್ ಅನ್ನು perl multivar.pl ( ಪರ್ಲ್ ಮಲ್ಟಿವಾರ್ ಡಾಟ್ ಪಿ-ಎಲ್) ಎಂದು ಎಕ್ಸಿಕ್ಯೂಟ್ ಮಾಡಬಹುದು.
09:01 ಎಕ್ಸಿಕ್ಯೂಟ್ ಮಾಡಿದಾಗ, ಔಟ್ಪುಟ್ ಹೀಗೆ ಕಾಣಿಸುವುದು.
09:06 ಇದು ನಮ್ಮನ್ನು ಈ ಟ್ಯುಟೋರಿಯಲ್ ನ ಕೊನೆಗೆ ತರುತ್ತದೆ.
09:11 ಈ ಟ್ಯುಟೋರಿಯಲ್ ನಲ್ಲಿ ನಾವು,
09:14 ಪರ್ಲ್ ನಲ್ಲಿ ‘ಸ್ಕೇಲರ್ ವೇರಿಯೇಬಲ್’ಗಳನ್ನು ಡಿಕ್ಲೇರ್ ಮಾಡಲು ಮತ್ತು ಅವುಗಳನ್ನು ಉಪಯೋಗಿಸಲು ಕಲಿತಿದ್ದೇವೆ.
09:18 ಅಸೈನ್ಮೆಂಟ್:
09:20 ಒಂದು ‘ನಂಬರ್ ವೇರಿಯೇಬಲ್’ಅನ್ನು ಡಿಕ್ಲೇರ್ ಮಾಡಿ.
09:22 ಇದಕ್ಕೆ 10 (ಹತ್ತು) ಎಂದು ಅಸೈನ್ ಮಾಡಿ.
09:24 ಡಿಕ್ಲೇರ್ ಮಾಡಿದ ‘ವೇರಿಯೇಬಲ್’ ಅನ್ನು ಪ್ರಿಂಟ್ ಮಾಡಿ.
09:26 ಎರಡು ‘ಸ್ಟ್ರಿಂಗ್ ವೇರಿಯೇಬಲ್’ಗಳನ್ನು ಡಿಕ್ಲೇರ್ ಮಾಡಿ.
09:29 ಅವುಗಳಿಗೆ “Namaste” ಮತ್ತು “India” ಎಂಬ ವ್ಯಾಲ್ಯೂಗಳನ್ನು ನಿಗದಿಪಡಿಸಿ (assign).
09:34 ಆ ಎರಡು ‘ವೇರಿಯೇಬಲ್’ಗಳನ್ನು ಒಂದರ ನಂತರ ಇನ್ನೊಂದರಂತೆ ಪ್ರಿಂಟ್ ಮಾಡಿ.
09:38 ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋವನ್ನು ವೀಕ್ಷಿಸಿ.
09:42 ಇದು “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ಸಾರಾಂಶವಾಗಿದೆ.
09:45 ನಿಮಗೆ ಒಳ್ಳೆಯ ‘ಬ್ಯಾಂಡ್ವಿಡ್ತ್’ ಸಿಗದಿದ್ದರೆ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು.
09:50 “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ತಂಡವು:
09:53 ‘ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ.
09:56 ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ.
10:01 ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ: contact@spoken-tutorial.org
10:08 "ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪವು “ಟಾಕ್ ಟು ಎ ಟೀಚರ್” ಪ್ರಕಲ್ಪದ ಒಂದು ಭಾಗವಾಗಿದೆ.
10:13 ಇದು ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ.
10:23 ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುತ್ತದೆ.
10:29 ನಿಮಗೆ ಈ PERL ಟ್ಯುಟೋರಿಯಲ್ ಇಷ್ಟವಾಯಿತು ಎಂದು ಭಾವಿಸುತ್ತೇನೆ. IIT Bombay ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ನವೀನ್ ಭಟ್, ಉಪ್ಪಿನಪಟ್ಟಣ.
10:34 ವಂದನೆಗಳು.

Contributors and Content Editors

Sandhya.np14, Vasudeva ahitanal