PERL/C2/Functions-in-Perl/Kannada

From Script | Spoken-Tutorial
Jump to: navigation, search
Time Narration
00:01 Functions in PERL ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:06 ಈ ಟ್ಯುಟೋರಿಯಲ್ ನಲ್ಲಿ, ನಾವು:
00:10 * ಪರ್ಲ್ ನ ಫಂಕ್ಷನ್ ಗಳು
00:11 * ಆರ್ಗ್ಯುಮೆಂಟ್ ಗಳನ್ನು ಹೊಂದಿರುವ ಫಂಕ್ಷನ್ ಗಳು ಮತ್ತು
00:13 * ರಿಟರ್ನ್ ವ್ಯಾಲ್ಯೂಗಳನ್ನು ಹೊಂದಿರುವ ಫಂಕ್ಷನ್ ಗಳ ಬಗ್ಗೆ ಕಲಿಯುವೆವು.
00:16 ಈ ಟ್ಯುಟೋರಿಯಲ್ ಗಾಗಿ ನಾನು,
00:18 * Ubuntu Linux 12.04 ಆಪರೇಟಿಂಗ್ ಸಿಸ್ಟಂ,
00:22 * Perl 5.14.2 ಹಾಗೂ
00:24 * gedit ‘ಟೆಕ್ಸ್ಟ್ ಎಡಿಟರ್’ ಇವುಗಳನ್ನು ಬಳಸುತ್ತಿದ್ದೇನೆ.
00:27 ನೀವು, ನಿಮಗೆ ಇಷ್ಟವಾದ ಯಾವುದೇ ‘ಟೆಕ್ಸ್ಟ್ ಎಡಿಟರ್’ಅನ್ನು ಬಳಸಬಹುದು.
00:31 ನಿಮಗೆ Perl (ಪರ್ಲ್) ನಲ್ಲಿ ‘ವೇರಿಯೆಬಲ್ಸ್, ಕಾಮೆಂಟ್ಸ್, ಲೂಪ್ಸ್, ಕಂಡಿಶನಲ್ ಸ್ಟೇಟ್ಮೆಂಟ್ಸ್’ ಮತ್ತು ‘ಡೇಟಾ ಸ್ಟ್ರಕ್ಚರ್’ಗಳ ಬಗ್ಗೆ ತಿಳಿದಿರಬೇಕು.
00:41 ಸಂಬಂಧಿತ ಸ್ಪೋಕನ್ ಟ್ಯುಟೋರಿಯಲ್ ಗಳನ್ನು ದಯವಿಟ್ಟು Spoken Tutorial ವೆಬ್ಸೈಟ್ ಮೇಲೆ ನೋಡಿ.
00:47 ಮೊದಲು ನಾವು ಸರಳವಾದ ಕೆಲವು ಪರ್ಲ್ 'ಫಂಕ್ಷನ್'ಗಳನ್ನು ನೋಡುವೆವು.
00:51 ಪರ್ಲ್ ನಲ್ಲಿ, 'ಫಂಕ್ಷನ್'ಗಳನ್ನು ‘subroutines’ ಎಂದು ಸಹ ಕರೆಯಲಾಗುತ್ತದೆ ಮತ್ತು ಇವುಗಳನ್ನು 'sub' ಕೀವರ್ಡ್ ನೊಂದಿಗೆ ಡಿಕ್ಲೇರ್ ಮಾಡಲಾಗುತ್ತದೆ.
00:57 ಡಿಕ್ಲೇರ್ ಮಾಡಲಾದ ಫಂಕ್ಷನ್ ನ ವ್ಯಾಖ್ಯಾನವನ್ನು (definition) ಕರ್ಲಿ ಬ್ರಾಕೆಟ್ ಗಳ ಮಧ್ಯದಲ್ಲಿ ಬರೆಯಲಾಗುತ್ತದೆ.
01:03 ಈ ಫಂಕ್ಷನ್, ಯಾವುದೇ ಆರ್ಗ್ಯುಮೆಂಟ್ ಗಳನ್ನು ತೆಗೆದುಕೊಳ್ಳುವುದಿಲ್ಲ
01:07 ಮತ್ತು ಇದು ಏನನ್ನೂ ಹಿಂದಿರುಗಿಸುವುದಿಲ್ಲ.
01:10 ಸೂಚನೆ: ಫಂಕ್ಷನ್ ನ ವ್ಯಾಖ್ಯಾನವನ್ನು ಸ್ಕ್ರಿಪ್ಟ್ ನಲ್ಲಿ ಎಲ್ಲಿಯಾದರೂ ಅಥವಾ ಬೇರೊಂದು 'ಮೊಡ್ಯೂಲ್' (module) ನಲ್ಲಿ ಬರೆಯಬಹುದು.
01:17 ಆಗ ಈ ಫಂಕ್ಷನ್ ಅನ್ನು ಬಳಸಿಕೊಳ್ಳಲು, ಸ್ಕ್ರಿಪ್ಟ್ ನಲ್ಲಿ ಈ 'ಮೊಡ್ಯೂಲ್'ಅನ್ನು ಸೇರಿಸಿಕೊಳ್ಳಲೇಬೇಕು.
01:24 'ಮೊಡ್ಯೂಲ್' ಫೈಲ್ ಅನ್ನು ಸ್ಕ್ರಿಪ್ಟ್ ನಲ್ಲಿ ಸೇರಿಸಲು, ಈ ಕೆಳಗಿನ ಸಿಂಟ್ಯಾಕ್ಸ್ ಅನ್ನು ಬಳಸಬೇಕಾಗುತ್ತದೆ.
01:31 'use ModuleFileName' ಸೆಮಿಕೋಲನ್.
01:35 ಒಂದು ಸ್ಯಾಂಪಲ್ ಪ್ರೊಗ್ರಾಂಅನ್ನು ಬಳಸಿ ಇದನ್ನು ನಾವು ತಿಳಿದುಕೊಳ್ಳೋಣ.
01:39 ನಿಮ್ಮ ‘ಟೆಕ್ಸ್ಟ್ ಎಡಿಟರ್’ ನಲ್ಲಿ ಒಂದು ಫೈಲನ್ನು ಓಪನ್ ಮಾಡಿ ಮತ್ತು ಅದನ್ನು 'simpleFunction dot pl' ಎಂದು ಹೆಸರಿಸಿ.
01:46 'gedit' ನಲ್ಲಿ, ಇದು ನನ್ನ 'simpleFunction dot pl' ಎಂಬ ಫೈಲ್ ಆಗಿದೆ.
01:51 ಸ್ಕ್ರೀನ್ ಮೇಲೆ ತೋರಿಸಿದಂತೆ ಕೋಡನ್ನು ಟೈಪ್ ಮಾಡಿ.
01:55 ಇಲ್ಲಿ, ನಾವು ಡಿಫೈನ್ ಮಾಡಿರುವ ಫಂಕ್ಷನ್ ಅನ್ನು ‘ಕಾಲ್’ ಮಾತ್ರ ಮಾಡುತ್ತಿದ್ದೇವೆ.
02:00 ಆಗ, ಎಕ್ಸಿಕ್ಯೂಶನ್ ಕಂಟ್ರೋಲ್, ಆ ಫಂಕ್ಷನ್ ಗೆ ದಾಟಿಸಲ್ಪಡುವುದು.
02:06 ಇದು ಫಂಕ್ಷನ್ ನ ಡಿಕ್ಲೆರೇಶನ್ ಮತ್ತು ಡೆಫಿನಿಶನ್ (ವ್ಯಾಖ್ಯಾನ) ಆಗಿದೆ.
02:10 ಈ ಫಂಕ್ಷನ್, ನಿರ್ದಿಷ್ಟ ಟೆಕ್ಸ್ಟ್ ಅನ್ನು ಪ್ರಿಂಟ್ ಮಾಡುವುದು.
02:14 ನಿಮ್ಮ ಫೈಲನ್ನು ಸೇವ್ ಮಾಡಿ.
02:17 ಆಮೇಲೆ ‘ಟರ್ಮಿನಲ್’ಗೆ ಬದಲಾಯಿಸಿ ಮತ್ತು PERL ಸ್ಕ್ರಿಪ್ಟ್ ಅನ್ನು ಎಕ್ಸಿಕ್ಯೂಟ್ ಮಾಡಿ. ಇದಕ್ಕಾಗಿ ಹೀಗೆ ಟೈಪ್ ಮಾಡಿ:
02:24 'perl simpleFunction dot pl'
02:28 ಮತ್ತು Enter ಅನ್ನು ಒತ್ತಿ.
02:30 ಔಟ್ಪುಟ್, ಟರ್ಮಿನಲ್ ನ ಮೇಲೆ ತೋರಿಸಿದಂತೆ ಇರುವುದು.
02:38 ಈಗ ನಾವು, ಆರ್ಗ್ಯುಮೆಂಟ್ಗಳನ್ನು ಹೊಂದಿದ ಒಂದು ಫಂಕ್ಷನ್ ಅನ್ನು ನೋಡೋಣ.
02:44 ಒಂದು ಸ್ಯಾಂಪಲ್ ಪ್ರೊಗ್ರಾಂಅನ್ನು ಬಳಸಿ, ಈ ಫಂಕ್ಷನ್ ಅನ್ನು ನಾವು ತಿಳಿದುಕೊಳ್ಳೋಣ.
02:48 ನಿಮ್ಮ ‘ಟೆಕ್ಸ್ಟ್ ಎಡಿಟರ್’ ನಲ್ಲಿ ಒಂದು ಫೈಲನ್ನು ಓಪನ್ ಮಾಡಿ ಮತ್ತು ಅದನ್ನು 'functionWithArgs dot pl' ಎಂದು ಹೆಸರಿಸಿ.
02:57 ಇದು, 'gedit'ನಲ್ಲಿ ನನ್ನ 'functionWithArgs' ಎಂಬ ಸ್ಕ್ರಿಪ್ಟ್ ಆಗಿದೆ.
03:02 ಈ ಕೆಳಗಿನ ಕೋಡ್ ನ ಭಾಗವನ್ನು ಸ್ಕ್ರೀನ್ ಮೇಲೆ ತೋರಿಸಿದಂತೆ ಟೈಪ್ ಮಾಡಿ.
03:07 ಇಲ್ಲಿ, ನಾವು 10 ಮತ್ತು 20, ಈ ಆರ್ಗ್ಯುಮೆಂಟ್ ಗಳೊಂದಿಗೆ ಫಂಕ್ಷನ್ ಅನ್ನು ‘ಕಾಲ್’ ಮಾಡುತ್ತಿದ್ದೇವೆ.
03:13 ಪಾಸ್ ಮಾಡಲ್ಪಟ್ಟ ಆರ್ಗ್ಯುಮೆಂಟ್ ಗಳನ್ನು '$var1' ಮತ್ತು '$var2' ಗಳಲ್ಲಿ ಸ್ಟೋರ್ ಮಾಡಲಾಗುತ್ತದೆ.
03:20 '@_' (ಎಟ್ ದ ರೇಟ್ ಅಂಡರ್ಸ್ಕೋರ್)– ಇದು ಒಂದು ವಿಶೇಷವಾದ 'Perl' ವೇರಿಯೆಬಲ್ ಆಗಿದೆ. ಇದರ ವಿವರಗಳನ್ನು ನಾವು ಮುಂದಿನ ಟ್ಯುಟೋರಿಯಲ್ ಗಳಲ್ಲಿ ನೋಡುವೆವು.
03:29 ಈ ಫಂಕ್ಷನ್, 2 (ಎರಡು) ವೇರಿಯೆಬಲ್ ಗಳ ಸಂಕಲನವನ್ನು ಮಾಡುತ್ತದೆ ಮತ್ತು ಉತ್ತರವನ್ನು ಪ್ರಿಂಟ್ ಮಾಡುತ್ತದೆ.
03:37 ನಿಮ್ಮ ಫೈಲನ್ನು ಸೇವ್ ಮಾಡಿ.
03:42 '@_' – ಇದು ಒಂದು ವಿಶಿಷ್ಟವಾದ 'Perl ಆರೇ' ಆಗಿದೆ.
03:46 ಈ 'ಆರೇ', ‘ಪಾಸ್’ ಮಾಡಿದ ಆರ್ಗ್ಯುಮೆಂಟ್ ಗಳನ್ನು ಸ್ಟೋರ್ ಮಾಡಲು ಬಳಸಲ್ಪಡುತ್ತದೆ.
03:51 ಹೀಗೆಯೇ, ‘ಪಾಸ್’ ಮಾಡಿದ ಆರ್ಗ್ಯುಮೆಂಟ್ ಗಳನ್ನು ವೇರಿಯೆಬಲ್ ಗಳಲ್ಲಿ ನಾವು ಈ ರೀತಿಯಲ್ಲಿ ಸ್ಟೋರ್ ಮಾಡಿಕೊಳ್ಳಬಹುದು:
03:56 '$var1 space = space shift @_' ಸೆಮಿಕೋಲನ್
04:04 '$var2 space = space shift @_ ಸೆಮಿಕೋಲನ್
04:12 'shift @_', '@_ ' ‘ಅರೇ’ಯಿಂದ ಮೊದಲ ಸ್ಥಾನದಲ್ಲಿನ ಎಲಿಮೆಂಟ್ ಅನ್ನು ತೆಗೆದುಹಾಕುತ್ತದೆ
04:21 ಮತ್ತು ಅದನ್ನು ಒಂದು ವೇರಿಯೆಬಲ್ ಗೆ ಅಸೈನ್ ಮಾಡುತ್ತದೆ.
04:24 ಇನ್ನೊಂದು ವಿಧಾನ: '$var1 space = space dollar underscore open square bracket zero close square bracket semicolon'
04:38 '$var2 space = space dollar underscore open square bracket 1 close square bracket semicolon'
04:49 ಮೇಲೆ ಹೇಳಿದ ವಿಧಾನವು, ಇಂಡೆಕ್ಸ್ ಅನ್ನು ಬಳಸಿ '@_ ' 'ಅರೇ'ಯ ಎಲಿಮೆಂಟ್ ಗಳನ್ನು ಪಡೆಯುವ ವಿಧಾನವನ್ನು ಹೋಲುತ್ತದೆ.
04:59 ಈಗ, ‘ಟರ್ಮಿನಲ್’ಗೆ ಬದಲಾಯಿಸಿ ಮತ್ತು ಸ್ಕ್ರಿಪ್ಟ್ ಅನ್ನು ಎಕ್ಸಿಕ್ಯೂಟ್ ಮಾಡಿ. ಇದಕ್ಕಾಗಿ ಹೀಗೆ ಟೈಪ್ ಮಾಡಿ:
05:06 'perl functionWithArgs dot pl' ಮತ್ತು Enter ಅನ್ನು ಒತ್ತಿ.
05:14 ಔಟ್ಪುಟ್, ಟರ್ಮಿನಲ್ ನ ಮೇಲೆ ತೋರಿಸಿದಂತೆ ಇರುತ್ತದೆ.
05:23 ಈಗ, ಒಂದೇ ವ್ಯಾಲ್ಯೂ ಅನ್ನು ‘ರಿಟರ್ನ್’ ಮಾಡುವ ಒಂದು ಫಂಕ್ಷನ್ ಅನ್ನು ನಾವು ನೋಡೋಣ.
05:32 ಒಂದು ಸ್ಯಾಂಪಲ್ ಪ್ರೊಗ್ರಾಂಅನ್ನು ಬಳಸಿ ಇದನ್ನು ನಾವು ತಿಳಿದುಕೊಳ್ಳೋಣ.
05:35 ನಾನು 'gedit'ನಲ್ಲಿ, 'funcWithSingleRtrnVal dot pl' ಸ್ಕ್ರಿಪ್ಟ್ ಗೆ ಬದಲಾಯಿಸುತ್ತೇನೆ.
05:46 ನಿಮ್ಮ ‘ಟೆಕ್ಸ್ಟ್ ಎಡಿಟರ್’ನಲ್ಲಿ ಒಂದು ಫೈಲನ್ನು ಓಪನ್ ಮಾಡಿ ಮತ್ತು ಇಲ್ಲಿ ತೋರಿಸಿದಂತೆ ಈ ಕೆಳಗಿನ ಕೋಡ್ ನ ಭಾಗವನ್ನು ಟೈಪ್ ಮಾಡಿ.
05:52 ಇಲ್ಲಿ, ನಾವು 'addVariables' ಎಂಬ ಫಂಕ್ಷನ್ ಅನ್ನು 10 ಮತ್ತು 20, ಈ ಪ್ಯಾರಾಮೀಟರ್ ಗಳೊಂದಿಗೆ ‘ಕಾಲ್’ ಮಾಡುತ್ತಿದ್ದೇವೆ.
06:01 ಫಂಕ್ಷನ್ ನ ‘ರಿಟರ್ನ್’ ವ್ಯಾಲ್ಯೂಅನ್ನು '$addition' ಎಂಬ ವೇರಿಯೆಬಲ್ ನಲ್ಲಿ ಸ್ಟೋರ್ ಮಾಡಲಾಗುತ್ತದೆ.
06:09 ಈ ಫಂಕ್ಷನ್, ‘ಪಾಸ್’ ಮಾಡಿದ (ರವಾನಿಸಲ್ಪಟ್ಟ) ಪ್ಯಾರಾಮೀಟರ್ ಗಳ ಸಂಕಲನವನ್ನು ಮಾಡುತ್ತದೆ ಮತ್ತು ಉತ್ತರವನ್ನು ‘ರಿಟರ್ನ್’ ಮಾಡುತ್ತದೆ.
06:15 ಈ ಫೈಲನ್ನು ಸೇವ್ ಮಾಡಿ.
06:17 ಈಗ, ನಾವು ಸ್ಕ್ರಿಪ್ಟ್ ಅನ್ನು ಎಕ್ಸಿಕ್ಯೂಟ್ ಮಾಡೋಣ.
06:20 ಆದ್ದರಿಂದ, ‘ಟರ್ಮಿನಲ್’ಗೆ ಬದಲಾಯಿಸಿ ಮತ್ತು ಹೀಗೆ ಟೈಪ್ ಮಾಡಿ:
06:24 'perl funcWithSingleRtrnVal dot pl' ಮತ್ತು Enter ಅನ್ನು ಒತ್ತಿ.
06:35 ಔಟ್ಪುಟ್, ಟರ್ಮಿನಲ್ ನ ಮೇಲೆ ತೋರಿಸಿದಂತೆ ಇರುತ್ತದೆ.
06:43 ಈಗ, ಅನೇಕ ವ್ಯಾಲ್ಯೂಗಳನ್ನು ‘ರಿಟರ್ನ್’ ಮಾಡುವ ಒಂದು ಫಂಕ್ಷನ್ ಅನ್ನು ನಾವು ನೋಡೋಣ.
06:48 ಇದನ್ನೇ ಒಂದು ಸ್ಯಾಂಪಲ್ ಪ್ರೊಗ್ರಾಂಅನ್ನು ಬಳಸಿ ನಾವು ತಿಳಿದುಕೊಳ್ಳೋಣ.
06:53 'gedit' ನಲ್ಲಿ, ನಾನು ಒಂದು ಫೈಲನ್ನು ಓಪನ್ ಮಾಡಿದ್ದೇನೆ ಮತ್ತು ಅದನ್ನು 'funcWithMultipleRtrnVals dot pl' ಎಂದು ಹೆಸರಿಸಿದ್ದೇನೆ.
07:04 ದಯವಿಟ್ಟು ನಿಮ್ಮ ‘ಟೆಕ್ಸ್ಟ್ ಎಡಿಟರ್’ನಲ್ಲಿ ಹೀಗೆಯೇ ಮಾಡಿ.
07:08 ಈಗ, ಈ ಕೆಳಗಿನ ಕೋಡ್ ನ ಭಾಗವನ್ನು ಇಲ್ಲಿ ತೋರಿಸಿದಂತೆ ಟೈಪ್ ಮಾಡಿ.
07:13 ಇಲ್ಲಿ, ನಾವು 'addVariables' ಎಂಬ ಫಂಕ್ಷನ್ ಅನ್ನು 10 ಮತ್ತು 20 ಈ ಪ್ಯಾರಾಮೀಟರ್ ಗಳೊಂದಿಗೆ ‘ಕಾಲ್’ ಮಾಡುತ್ತಿದ್ದೇವೆ.
07:21 ಫಂಕ್ಷನ್ ನ ‘ರಿಟರ್ನ್’ ವ್ಯಾಲ್ಯೂಗಳನ್ನು '$var1, $var2 ಮತ್ತು $addition' ಎಂಬ ವೇರಿಯೆಬಲ್ ಗಳಲ್ಲಿ ಸ್ಟೋರ್ ಮಾಡಲಾಗುತ್ತದೆ.
07:31 ಈ ಫಂಕ್ಷನ್, ಸಂಕಲನವನ್ನು ಮಾಡುತ್ತದೆ ಮತ್ತು ‘ಪಾಸ್’ ಮಾಡಿದ (ರವಾನಿಸಲ್ಪಟ್ಟ) ಪ್ಯಾರಾಮೀಟರ್ ಗಳನ್ನು ಮತ್ತು ಫಲಿತಾಂಶವನ್ನು ‘ರಿಟರ್ನ್’ ಮಾಡುತ್ತದೆ.
07:42 ಒಂದು ಫಂಕ್ಷನ್ ನಿಂದ ‘ಅರೇ’ಯನ್ನು ನಾವು ಹೇಗೆ ರಿಟರ್ನ್ ಮಾಡಬಹುದೆಂದು ಈ ದೃಷ್ಟಾಂತವು ನಿರೂಪಿಸುತ್ತದೆ.
07:53 ಹಾಗೆಯೇ, ಒಂದು ಫಂಕ್ಷನ್ ನಿಂದ ಹ್ಯಾಶ್ ಅನ್ನು ಹೇಗೆ ರಿಟರ್ನ್ ಮಾಡಬಹುದೆಂದು ಇದು ನಿರೂಪಿಸುತ್ತದೆ.
08:00 ನಿಮ್ಮ ಫೈಲನ್ನು ಸೇವ್ ಮಾಡಿ.
08:03 ಈಗ ನಾವು, ‘ಟರ್ಮಿನಲ್’ನ ಮೇಲೆ ಪರ್ಲ್ ಸ್ಕ್ರಿಪ್ಟ್ ಅನ್ನು ಎಕ್ಸಿಕ್ಯೂಟ್ ಮಾಡೋಣ. ಇದಕ್ಕಾಗಿ ಹೀಗೆ ಟೈಪ್ ಮಾಡಿ:
08:10 'perl funcWithMultipleRtrnVals dot pl'
08:18 ಮತ್ತು Enter ಅನ್ನು ಒತ್ತಿ.
08:20 ಔಟ್ಪುಟ್, ಟರ್ಮಿನಲ್ ನ ಮೇಲೆ ತೋರಿಸಿದಂತೆ ಇರುತ್ತದೆ.
08:32 ಪರ್ಲ್, ಹಲವು ಇನ್-ಬಿಲ್ಟ್ ಫಂಕ್ಷನ್ ಗಳನ್ನು ಒದಗಿಸುತ್ತದೆ.
08:36 ಅವುಗಳಲ್ಲಿ ಕೆಲವನ್ನು ಹಿಂದಿನ ಟ್ಯುಟೋರಿಯಲ್ ಗಳಲ್ಲಿ ನಾವು ಕಲಿತಿದ್ದೇವೆ. ಉದಾಹರಣೆಗೆ - 'arrays, Hash, sort, scalar, each, keys' ಇತ್ಯಾದಿ.
08:49 ಇನ್-ಬಿಲ್ಟ್ ಫಂಕ್ಷನ್ ಗಳನ್ನು ‘ಕಾಲ್’ ಮಾಡುವುದು, ನಾವು ಡಿಫೈನ್ ಮಾಡುವ ಬೇರೆ ಯಾವುದೇ ಫಂಕ್ಷನ್ ಅನ್ನು ‘ಕಾಲ್’ ಮಾಡುವುದನ್ನು ಹೋಲುತ್ತದೆ.
08:57 ಉದಾ: 'sort open bracket @arrayName close bracket semicolon'.
09:04 ನಾವು ಬಳಸಿದ ಸ್ಯಾಂಪಲ್ ಪ್ರೊಗ್ರಾಂಗಳಲ್ಲಿ, ಕೆಲವು ಇನ್-ಬಿಲ್ಟ್ ಫಂಕ್ಷನ್ ಗಳನ್ನು ಅಳವಡಿಸಲು ಪ್ರಯತ್ನಿಸಿ.
09:10 ಮತ್ತು ಅವುಗಳ ಔಟ್ಪುಟ್ ಅನ್ನು ಗಮನಿಸಿ.
09:13 ಸಂಕ್ಷಿಪ್ತವಾಗಿ,
09:15 ಈ ಟ್ಯುಟೋರಿಯಲ್ ನಲ್ಲಿ ನಾವು, ಸ್ಯಾಂಪಲ್ ಪ್ರೊಗ್ರಾಂಗಳನ್ನು ಬಳಸಿ -
09:17 * Perl ನಲ್ಲಿ ಫಂಕ್ಷನ್ ಗಳು
09:19 * ಆರ್ಗ್ಯುಮೆಂಟ್ ಗಳನ್ನು ಹೊಂದಿದ ಫಂಕ್ಷನ್ ಗಳು ಮತ್ತು
09:22 * ವ್ಯಾಲ್ಯೂಗಳನ್ನು ರಿಟರ್ನ್ ಮಾಡುವ ಫಂಕ್ಷನ್ ಗಳನ್ನು ಕಲಿತಿದ್ದೇವೆ.
09:27 ಇಲ್ಲಿ ನಿಮಗಾಗಿ ಒಂದು ಅಸೈನ್ಮೆಂಟ್ ಇದೆ:
09:29 3 (ಮೂರು) ಆರ್ಗ್ಯುಮೆಂಟ್ ಗಳನ್ನು ತೆಗೆದುಕೊಳ್ಳುವ ಒಂದು 'ಫಂಕ್ಷನ್' ಅನ್ನು ಬರೆಯಿರಿ.
09:33 ಈ ಆರ್ಗ್ಯುಮೆಂಟ್ ಗಳ ಮೇಲೆ ಕೆಲವು ಕ್ರಿಯೆಗಳನ್ನು ನಿರ್ವಹಿಸಿ.
09:37 ಆರ್ಗ್ಯುಮೆಂಟ್ ಗಳ ಮೇಲೆ ನಿರ್ವಹಿಸಿದ ಕ್ರಿಯೆಯ ಫಲಿತಾಂಶವನ್ನು ‘ರಿಟರ್ನ್’ ಮಾಡಿ ಮತ್ತು ಅದನ್ನು ಪ್ರಿಂಟ್ ಮಾಡಿ.
09:43 ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋವನ್ನು ವೀಕ್ಷಿಸಿ.
09:47 ಇದು “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ಸಾರಾಂಶವಾಗಿದೆ.
09:51 ನಿಮಗೆ ಒಳ್ಳೆಯ ‘ಬ್ಯಾಂಡ್ವಿಡ್ತ್’ ಸಿಗದಿದ್ದರೆ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು.
09:56 “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ತಂಡವು: * ‘ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ.
10:02 * ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ.
10:07 ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ:

contact@spoken-tutorial.org

10:14 "ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪವು “ಟಾಕ್ ಟು ಎ ಟೀಚರ್” ಪ್ರಕಲ್ಪದ ಒಂದು ಭಾಗವಾಗಿದೆ.
10:19 ಇದು ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ.
10:28 ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುತ್ತದೆ:

spoken hyphen tutorial dot org slash NMEICT hyphen Intro.

10:40 ನಿಮಗೆ ಈ PERL ಟ್ಯುಟೋರಿಯಲ್ ಇಷ್ಟವಾಯಿತು ಎಂದು ಭಾವಿಸುತ್ತೇನೆ.
10:43 IIT Bombay ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ವಾಸುದೇವ.
10:46 ವಂದನೆಗಳು.

Contributors and Content Editors

Sandhya.np14, Vasudeva ahitanal