PERL/C2/Array-functions/Kannada

From Script | Spoken-Tutorial
Jump to: navigation, search
Time Narration
00:01 Perl ನಲ್ಲಿ Array Functions ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:06 ಈ ಟ್ಯುಟೋರಿಯಲ್ ನಲ್ಲಿ ನಾವು, ಈ ಕೆಳಗೆ ಹೇಳಿದ Perl ನ ‘ಅರೇ ಫಂಕ್ಷನ್’ಗಳ ಬಗ್ಗೆ ಕಲಿಯುವೆವು.
00:11 * ‘push’ (ಪುಶ್)
00:11 * ‘pop’ (ಪಾಪ್)
00:12 * ‘shift’ (ಶಿಫ್ಟ್)
00:14 * ‘unshift’ (ಅನ್ ಶಿಫ್ಟ್)
00:15 * ‘split’ (ಸ್ಪ್ಲಿಟ್)
00:16 * ‘splice’ (ಸ್ಪ್ಲೈಸ್)
00:17 * ‘join’ (ಜಾಇನ್)
00:18 * ‘sort’ (ಸಾರ್ಟ್) ಮತ್ತು
00:19 * ‘qw’.
00:20 ನಾನು Ubuntu Linux 12.04 ಆಪರೇಟಿಂಗ್ ಸಿಸ್ಟಂ ಹಾಗೂ Perl 5.14.2 ಇವುಗಳನ್ನು ಬಳಸುತ್ತಿದ್ದೇನೆ.
00:28 'gedit' ‘ಟೆಕ್ಸ್ಟ್ ಎಡಿಟರ್’ಅನ್ನು ಸಹ ಬಳಸುತ್ತಿರುವೆನು.
00:32 ನೀವು, ನಿಮಗೆ ಇಷ್ಟವಾದ ಯಾವುದೇ ‘ಟೆಕ್ಸ್ಟ್ ಎಡಿಟರ್’ಅನ್ನು ಬಳಸಬಹುದು.
00:36 ನಿಮಗೆ Perl (ಪರ್ಲ್) ನಲ್ಲಿ ‘ವೇರಿಯೆಬಲ್ಸ್, ಡೇಟಾ ಸ್ಟ್ರಕ್ಚರ್ಸ್’ ಮತ್ತು ‘ಆರೇ’ಗಳ ಬಗ್ಗೆ ತಿಳಿದಿರುವುದು ಅವಶ್ಯಕ.
00:43 ‘ಕಾಮೆಂಟ್ಸ್, ಲೂಪ್ಸ್’ ಮತ್ತು ‘ಕಂಡಿಶನಲ್ ಸ್ಟೇಟ್ಮೆಂಟ್ಸ್’ಗಳನ್ನು ತಿಳಿದಿರುವುದು ಹೆಚ್ಚು ಲಾಭಕಾರಿ.
00:48 ಸಂಬಂಧಿತ ಸ್ಪೋಕನ್ ಟ್ಯುಟೋರಿಯಲ್ ಗಳನ್ನು ದಯವಿಟ್ಟು ’spoken tutorial’ ವೆಬ್ಸೈಟ್ ಮೇಲೆ ನೋಡಿ.
00:54 'Perl', ಕೆಲವು ಇನ್-ಬಿಲ್ಟ್ ಫಂಕ್ಷನ್ ಗಳನ್ನು ಒದಗಿಸುತ್ತದೆ.
00:57 ಈ ಫಂಕ್ಷನ್ ಗಳು, ‘ಆರೇ’ಯ ಮೇಲೆ ವಿವಿಧ ಆಪರೇಶನ್ ಗಳನ್ನು ಮಾಡಲು ಸಾಧ್ಯವಿದೆ.
01:02 ಮೊದಲು, ‘ಅರೇ’ಯ ಕೊನೆಯ ಸ್ಥಾನದಲ್ಲಿ ಎಲಿಮೆಂಟ್ ಗಳನ್ನು ಹೇಗೆ ಸೇರಿಸುವುದು ಮತ್ತು ತೆಗೆದುಹಾಕುವುದು ಎಂಬುದನ್ನು ನಾವು ತಿಳಿಯೋಣ.
01:08 ಇದನ್ನು 'push' ಎಂಬ ಫಂಕ್ಷನ್ ಅನ್ನು ಬಳಸಿ ಮಾಡಬಹುದು.
01:10 ಇದು ‘ಎಲಿಮೆಂಟ್’ಅನ್ನು ‘ಅರೇ’ಯ ಕೊನೆಯ ಸ್ಥಾನದಲ್ಲಿ ಸೇರಿಸುವುದು
01:15 ಮತ್ತು 'pop' ಫಂಕ್ಷನ್, ‘ಎಲಿಮೆಂಟ್’ಅನ್ನು ‘ಅರೇ’ಯ ಕೊನೆಯ ಸ್ಥಾನದಿಂದ ತೆಗೆದುಹಾಕುವುದು.
01:21 ನಾವು ಒಂದು ಸ್ಯಾಂಪಲ್ ಪ್ರೊಗ್ರಾಂಅನ್ನು ಬಳಸಿ 'push' ಮತ್ತು 'pop' ಫಂಕ್ಷನ್ ಗಳನ್ನು ತಿಳಿದುಕೊಳ್ಳೋಣ.
01:26 ‘ಟರ್ಮಿನಲ್’ಅನ್ನು ಓಪನ್ ಮಾಡಿ ಹೀಗೆ ಟೈಪ್ ಮಾಡಿ:

‘gedit perlArray dot pl space ampersand’

01:33 ಮತ್ತು Enter ಅನ್ನು ಒತ್ತಿ.
01:36 ಇದು, 'gedit' ನಲ್ಲಿ 'perlArray dot pl' ಎಂಬ ಫೈಲನ್ನು ಓಪನ್ ಮಾಡುವುದು.
01:41 ಸ್ಕ್ರೀನ್ ಮೇಲೆ ತೋರಿಸಿದಂತೆ ಕೋಡನ್ನು ಟೈಪ್ ಮಾಡಿ.
01:45 ಇಲ್ಲಿ, ಉದ್ದವು (array length) 3 ಆಗಿರುವ ಒಂದು ‘ಅರೇ’ಯನ್ನು ನಾವು ಡಿಕ್ಲೇರ್ ಮಾಡಿದ್ದೇವೆ.
01:50 'push' ಫಂಕ್ಷನ್, ಈ ‘ಅರೇ’ಯ ಕೊನೆಯ ಸ್ಥಾನದಲ್ಲಿ, ಎಂದರೆ 3 ರ ನಂತರ, ಒಂದು ಎಲಿಮೆಂಟ್ ಅನ್ನು ಸೇರಿಸುವುದು.
01:57 ಆದರೆ 'pop' ಫಂಕ್ಷನ್, ‘ಅರೇ’ಯ ಕೊನೆಯ ಸ್ಥಾನದಿಂದ ಒಂದು ಎಲಿಮೆಂಟ್ ಅನ್ನು ತೆಗೆದುಹಾಕುವುದು.
02:04 ಈ ಸಂದರ್ಭದಲ್ಲಿ, 4 ಅನ್ನು ‘ಅರೇ’ಯಿಂದ ತೆಗದುಹಾಕಲಾಗುವುದು.
02:08 ಫೈಲನ್ನು ಸೇವ್ ಮಾಡಲು 'Ctrl + S' ಒತ್ತಿ.
02:11 'push' ಫಂಕ್ಷನ್, 2 (ಎರಡು) ಆರ್ಗ್ಯೂಮೆಂಟ್ ಗಳನ್ನು ತೆಗೆದುಕೊಳ್ಳುತ್ತದೆ.
02:14 'push' ಫಂಕ್ಷನ್ ನ ಮೊದಲನೆಯ ಆರ್ಗ್ಯೂಮೆಂಟ್, ಎಲಿಮೆಂಟ್ ಅನ್ನು ಸೇರಿಸಿಕೊಳ್ಳುವ ‘ಅರೇ’ ಆಗಿರುತ್ತದೆ.
02:20 ‘ಅರೇ’ಯಲ್ಲಿ ಸೇರಿಸಬೇಕಾದ ಎಲಿಮೆಂಟ್, ಎರಡನೆಯ ಆರ್ಗ್ಯೂಮೆಂಟ್ ಆಗಿದೆ.
02:25 'pop' ಫಂಕ್ಷನ್ ನ ಸಿಂಟ್ಯಾಕ್ಸ್ ಈ ಕೆಳಗಿನಂತಿದೆ:
02:29 'pop' ಫಂಕ್ಷನ್, ಒಂದೇ ಒಂದು ಆರ್ಗ್ಯೂಮೆಂಟ್ ಅನ್ನು ತೆಗೆದುಕೊಳ್ಳುತ್ತದೆ.
02:32 ಇದು, ಎಲಿಮೆಂಟ್ ನ್ನು ತೆಗೆದುಹಾಕಬೇಕಾಗಿರುವ ‘ಅರೇ’ ಆಗಿದೆ.
02:36 ಸೂಚನೆ: ಈ ಎರಡೂ ಫಂಕ್ಷನ್ ಗಳು ‘ಅರೇ’ಯ ಕೊನೆಯ ಸ್ಥಾನದಲ್ಲಿ ಕೆಲಸ ಮಾಡುತ್ತವೆ.
02:41 'pop' ಫಂಕ್ಷನ್ ನಿಂದ ತೆಗೆದುಹಾಕಲ್ಪಟ್ಟ ಎಲಿಮೆಂಟ್ ಅನ್ನು ಬೇರೊಂದು ವೇರಿಯೆಬಲ್ ನಲ್ಲಿ ಇರಿಸಬಹುದು.
02:46 ಇದಕ್ಕಾಗಿ ಸಿಂಟ್ಯಾಕ್ಸ್ ಹೀಗಿದೆ:

$variable space = space pop open bracket @myArray close bracket

02:57 ಈಗ ‘ಟರ್ಮಿನಲ್’ಗೆ ಬದಲಾಯಿಸಿ ಮತ್ತು ಪರ್ಲ್ ಸ್ಕ್ರಿಪ್ಟ್ ಅನ್ನು ಎಕ್ಸಿಕ್ಯೂಟ್ ಮಾಡಿ.
03:01 ಹೀಗೆ ಟೈಪ್ ಮಾಡಿ: ‘perl perlArray dot pl’ ಮತ್ತು Enter ಅನ್ನು ಒತ್ತಿ.
03:07 ಔಟ್ಪುಟ್, ಟರ್ಮಿನಲ್ ನ ಮೇಲೆ ತೋರಿಸಿದಂತೆ ಇರುತ್ತದೆ.
03:11 ಈಗ, ಒಂದು ‘ಅರೇ’ಯ 1ನೇ ಸ್ಥಾನದಿಂದ ಎಲಿಮೆಂಟ್ ಅನ್ನು ಹೇಗೆ ಸೇರಿಸುವುದು/ತೆಗೆದುಹಾಕುವುದು ಎಂಬುದನ್ನು ನಾವು ನೋಡೋಣ.
03:18 ಈ ಕೆಳಗಿನ ಫಂಕ್ಷನ್ ಗಳನ್ನು ಬಳಸಿ ಇದನ್ನು ಮಾಡಬಹುದು -
03:20 ‘unshift’ ಫಂಕ್ಷನ್: ಇದು, ಒಂದು ಎಲಿಮೆಂಟ್ ಅನ್ನು ‘ಅರೇ’ಯ ಮೊದಲನೇ ಸ್ಥಾನಕ್ಕೆ ಸೇರಿಸುತ್ತದೆ.
03:25 ‘shift’ ಫಂಕ್ಷನ್: ಇದು, ‘ಅರೇ’ಯಿಂದ ಮೊದಲನೇ ಎಲಿಮೆಂಟ್ ಅನ್ನು ತೆಗೆದುಹಾಕುತ್ತದೆ.
03:31 ಒಂದು ಸ್ಯಾಂಪಲ್ ಪ್ರೊಗ್ರಾಂಅನ್ನು ಬಳಸಿ ಇದನ್ನು ನಾವು ತಿಳಿದುಕೊಳ್ಳೋಣ.
03:35 ಈಗಾಗಲೆ ನಾನು ಕ್ರಿಯೇಟ್ ಮಾಡಿದ 'perlArray dot pl' ಎಂಬ ಫೈಲನ್ನು ನಾನು ಓಪನ್ ಮಾಡುವೆನು.
03:39 ಈ ಕೆಳಗಿನ ಕೋಡ್ ನ ಭಾಗವನ್ನು ಸ್ಕ್ರೀನ್ ಮೇಲೆ ತೋರಿಸಿದಂತೆ ಟೈಪ್ ಮಾಡಿ.
03:43 'unshift' ಫಂಕ್ಷನ್, ಎಲಿಮೆಂಟ್ ಅನ್ನು ಮೊದಲನೆಯ ಸ್ಥಾನದಲ್ಲಿ, ಎಂದರೆ 1 ರ ಮೊದಲು, ಸೇರಿಸುವುದು.
03:52 'shift' ಫಂಕ್ಷನ್, ಎಲಿಮೆಂಟ್ ಅನ್ನು ಮೊದಲನೆಯ ಸ್ಥಾನದಿಂದ ತೆಗೆದುಹಾಕುವುದು.
03:57 ಈ ಸಂದರ್ಭದಲ್ಲಿ, 0 (ಸೊನ್ನೆ) ಯನ್ನು ತೆಗೆದುಹಾಕಲಾಗುವುದು.
04:00 ಫೈಲನ್ನು ಸೇವ್ ಮಾಡಲು 'Ctrl + S' ಒತ್ತಿ.
04:03 'unshift' ಫಂಕ್ಷನ್, ಎರಡು ಆರ್ಗ್ಯೂಮೆಂಟ್ ಗಳನ್ನು ತೆಗೆದುಕೊಳ್ಳುತ್ತದೆ -
04:06 ಎಲಿಮೆಂಟ್ ಅನ್ನು ಸೇರಿಸಿಕೊಳ್ಳುವ ‘ಅರೇ’, 1ನೇ ಆರ್ಗ್ಯೂಮೆಂಟ್ ಆಗಿದೆ.
04:10 ‘ಅರೇ’ಯಲ್ಲಿ ಸೇರಿಸಬೇಕಾದ ಎಲಿಮೆಂಟ್, 2ನೇ ಆರ್ಗ್ಯೂಮೆಂಟ್ ಆಗಿದೆ.
04:15 'shift' ಫಂಕ್ಷನ್, ಒಂದೇ ಒಂದು ಆರ್ಗ್ಯೂಮೆಂಟ್ ಅನ್ನು ತೆಗೆದುಕೊಳ್ಳುತ್ತದೆ.
04:18 ಇದು ಎಲಿಮೆಂಟ್ ನ್ನು ತೆಗೆದುಹಾಕಬೇಕಾಗಿರುವ ‘ಅರೇ’ ಆಗಿದೆ.
04:22 ಸೂಚನೆ: ಈ ಎರಡೂ ಫಂಕ್ಷನ್ ಗಳು ‘ಅರೇ’ಯ ಮೊದಲನೆಯ ಸ್ಥಾನದಲ್ಲಿ ಕೆಲಸ ಮಾಡುತ್ತವೆ.
04:27 'shift' ಫಂಕ್ಷನ್ ನಿಂದ ತೆಗೆದುಹಾಕಲ್ಪಟ್ಟ ಎಲಿಮೆಂಟ್ ಅನ್ನು, ಬೇರೆ ವೇರಿಯೆಬಲ್ ನಲ್ಲಿ ನಾವು ಇಡಬಹುದು.
04:33 ಇದಕ್ಕಾಗಿ ಸಿಂಟ್ಯಾಕ್ಸ್ ಹೀಗಿದೆ:

$variable space = space shift open bracket @myArray close bracket

04:44 ಆಮೇಲೆ ‘ಟರ್ಮಿನಲ್’ಗೆ ಬದಲಾಯಿಸಿ ಮತ್ತು 'Perl' ಸ್ಕ್ರಿಪ್ಟ್ ಅನ್ನು ಎಕ್ಸಿಕ್ಯೂಟ್ ಮಾಡಿ.
04:48 ಹೀಗೆ ಟೈಪ್ ಮಾಡಿ: 'perl perlArray dot pl' ಮತ್ತು Enter ಅನ್ನು ಒತ್ತಿ.
04:54 ಟರ್ಮಿನಲ್ ನ ಮೇಲೆ ತೋರಿಸಿದ ಔಟ್ಪುಟ್ ಅನ್ನು ಹೈಲೈಟ್ ಮಾಡಲಾಗಿದೆ.
04:59 ಈಗ, ‘ಅರೇ’ಯ ಒಂದು ನಿರ್ದಿಷ್ಟ ಸ್ಥಾನದಿಂದ ಎಲಿಮೆಂಟ್ ಅನ್ನು ಹೇಗೆ ತೆಗೆದುಹಾಕುವುದು ಎಂಬುದನ್ನು ನಾವು ನೋಡೋಣ.
05:05 'splice' (ಸ್ಪ್ಲೈಸ್) ಫಂಕ್ಷನ್, ‘ಅರೇ’ಯ ಒಂದು ನಿರ್ದಿಷ್ಟ ಸ್ಥಾನದಿಂದ ಎಲಿಮೆಂಟ್ ಅನ್ನು ತೆಗೆದುಹಾಕುವುದು.
05:11 ಈ ಫಂಕ್ಷನ್ ನ ರಿಟರ್ನ್ ವ್ಯಾಲ್ಯೂ, ತೆಗೆದುಹಾಕಿದ ಎಲಿಮೆಂಟ್ ಗಳ ಒಂದು ‘ಅರೇ’ ಆಗಿದೆ.
05:17 ಒಂದು ಸ್ಯಾಂಪಲ್ ಪ್ರೊಗ್ರಾಂಅನ್ನು ಬಳಸಿ, ಇದನ್ನು ನಾವು ತಿಳಿದುಕೊಳ್ಳೋಣ.
05:21 ಈ ಮೊದಲೇ ನಾವು ಕ್ರಿಯೇಟ್ ಮಾಡಿದ 'perlArray dot pl' ಎಂಬ ಫೈಲ್ ಗೆ ಹೋಗಿ.
05:26 ಕೋಡ್ ನ ಈ ಭಾಗವನ್ನು ಸ್ಕ್ರೀನ್ ಮೇಲೆ ತೋರಿಸಿದಂತೆ ಟೈಪ್ ಮಾಡಿ.
05:30 ‘ಅರೇ’ಯಲ್ಲಿ, ಎಲ್ಲಿಂದ ನಮಗೆ ಎಲಿಮೆಂಟ್ ಗಳನ್ನು ತೆಗೆದುಹಾಕಬೇಕಾಗಿದೆಯೋ ಆ ಇಂಡೆಕ್ಸ್ ಅನ್ನು ಮತ್ತು
05:35 ಎಲ್ಲಿಯವರೆಗೆ ಎಲಿಮೆಂಟ್ ಗಳನ್ನು ತೆಗೆದುಹಾಕಬೇಕಾಗಿದೆಯೋ ಆ ಆಫ್ಸೆಟ್ (offset) ಅನ್ನು ನಾವು ಒದಗಿಸುವುದು ಅವಶ್ಯವಾಗಿದೆ.
05:39 ಈ ಸಂದರ್ಭದಲ್ಲಿ, 5 ಮತ್ತು 6, ಈ ಎಲಿಮೆಂಟ್ ಗಳನ್ನು ತೆಗೆದುಹಾಕಲಾಗುವುದು.
05:44 ಆಮೇಲೆ ‘ಟರ್ಮಿನಲ್’ಗೆ ಬದಲಾಯಿಸಿ ಮತ್ತು ಪರ್ಲ್ ಸ್ಕ್ರಿಪ್ಟ್ ಅನ್ನು ಎಕ್ಸಿಕ್ಯೂಟ್ ಮಾಡಿ. ಇದಕ್ಕಾಗಿ ಹೀಗೆ ಟೈಪ್ ಮಾಡಿ:
05:49 'perl perlArray dot pl' ಮತ್ತು Enter ಅನ್ನು ಒತ್ತಿ.
05:55 ಔಟ್ಪುಟ್, ಟರ್ಮಿನಲ್ ನ ಮೇಲೆ ತೋರಿಸಿದಂತೆ ಇರುತ್ತದೆ.
05:59 ಈಗ ನಾವು, ‘ಅರೇ’ಯ ಇನ್ನೂ ಕೆಲವು ಇನ್-ಬಿಲ್ಟ್ ಫಂಕ್ಷನ್ ಗಳನ್ನು ನೋಡೋಣ.
06:04 ಒಂದು ಸ್ಟ್ರಿಂಗ್ ಅನ್ನು, ಒಂದು ನಿಗದಿತ ಡಿ-ಲಿಮಿಟರ್ ನಲ್ಲಿ ವಿಭಾಗಿಸಲು 'split' ಫಂಕ್ಷನ್ ಅನ್ನು ಬಳಸಲಾಗುತ್ತದೆ.
06:10 ಈ ಫಂಕ್ಷನ್ ನ ರಿಟರ್ನ್ ವ್ಯಾಲ್ಯೂ, ಒಂದು ‘ಅರೇ’ ಆಗಿರುತ್ತದೆ.
06:14 ಈ ‘ಅರೇ’ಯ ಎಲಿಮೆಂಟ್ ಗಳು, ಸ್ಟ್ರಿಂಗ್ ನ ಬೇರ್ಪಡಿಸಲಾದ ಭಾಗಗಳಾಗಿವೆ.
06:19 'join' ಫಂಕ್ಷನ್, ನಿಗದಿತ ಡಿ-ಲಿಮಿಟರ್ ಅನ್ನು ಬಳಸಿ ಅರೇ’ಯ ಎಲಿಮೆಂಟ್ ಗಳನ್ನು ಜೋಡಿಸುತ್ತದೆ.
06:25 ಇದು, ಜೋಡಿಸಲ್ಪಟ್ಟ ಎಲಿಮೆಂಟ್ ಗಳ ಒಂದು ಸ್ಟ್ರಿಂಗ್ ಅನ್ನು ರಿಟರ್ನ್ ಮಾಡುತ್ತದೆ.
06:28 'sort' ಫಂಕ್ಷನ್, ಒಂದು ‘ಅರೇ’ಯನ್ನು ವರ್ಣಮಾಲೆಯ/ಸಂಖ್ಯಾತ್ಮಕ ಕ್ರಮದಲ್ಲಿ ‘ಸಾರ್ಟ್’ ಮಾಡುತ್ತದೆ.
06:34 'qw' ಫಂಕ್ಷನ್, ಬಿಳಿ ಸ್ಪೇಸ್ ನಿಂದ ಬೇರ್ಪಡಿಸಲ್ಪಟ್ಟ ಶಬ್ದಗಳ ಒಂದು ‘ಅರೇ’ಯನ್ನು ರಿಟರ್ನ್ ಮಾಡುತ್ತದೆ.
06:40 ಈಗ, ನಾವು ಒಂದು ಸ್ಯಾಂಪಲ್ ಪ್ರೊಗ್ರಾಂಅನ್ನು ಬಳಸಿ ಈ ಎಲ್ಲ ಫಂಕ್ಷನ್ ಗಳನ್ನು ತಿಳಿದುಕೊಳ್ಳೋಣ.
06:45 ‘ಟರ್ಮಿನಲ್’ಗೆ ಬದಲಾಯಿಸಿ ಮತ್ತು ಹೀಗೆ ಟೈಪ್ ಮಾಡಿ:
06:48 'gedit arrayFunctions dot pl space ampersand' ಮತ್ತು Enter ಅನ್ನು ಒತ್ತಿ.
06:55 ಈ ಕೆಳಗಿನ ಕೋಡ್ ನ ಭಾಗವನ್ನು ಸ್ಕ್ರೀನ್ ಮೇಲೆ ತೋರಿಸಿದಂತೆ ಟೈಪ್ ಮಾಡಿ.
07:00 ಈ ಸಂದರ್ಭದಲ್ಲಿ, ವೇರಿಯೆಬಲ್ ‘string’ ನ ಪ್ರತಿಯೊಂದು ಶಬ್ದವು, ‘ಅರೇ’ಯಲ್ಲಿ ಒಂದು ಎಲಿಮೆಂಟ್ ಆಗುವುದು.
07:07 ಇಲ್ಲಿ, 'newArray' ಯ ಪ್ರತಿಯೊಂದು ಎಲಿಮೆಂಟ್ ಅನ್ನು ಕಾಮಾ (comma) ದಿಂದ ಜೋಡಿಸಲಾಗುವುದು.
07:12 'sort' ಫಂಕ್ಷನ್, ‘ಅರೇ’ಯ ಎಲಿಮೆಂಟ್ ಗಳನ್ನು ವರ್ಣಮಾಲೆಯ ಕ್ರಮದಲ್ಲಿ ಸಾರ್ಟ್ ಮಾಡುವುದು.
07:19 'qw' ಫಂಕ್ಷನ್, ಸ್ಪೇಸ್ ನಿಂದ ಬೇರ್ಪಡಿಸಲ್ಪಟ್ಟ ಶಬ್ದಗಳ ಒಂದು ‘ಅರೇ’ಯನ್ನು ಕ್ರಿಯೇಟ್ ಮಾಡುತ್ತದೆ.
07:25 ನಾವು, ಪ್ರತಿಯೊಂದು ಫಂಕ್ಷನ್ ಅನ್ನು ತಿಳಿದುಕೊಳ್ಳೋಣ.
07:28 'split' ಫಂಕ್ಷನ್, ಎರಡು ಆರ್ಗ್ಯೂಮೆಂಟ್ ಗಳನ್ನು ತೆಗೆದುಕೊಳ್ಳುತ್ತದೆ.
07:31 1ನೇ ಆರ್ಗ್ಯೂಮೆಂಟ್, ಸ್ಟ್ರಿಂಗ್ ಅನ್ನು ಸ್ಪ್ಲಿಟ್ ಮಾಡಲು ಅಗತ್ಯವಿರುವ ಡಿ-ಲಿಮಿಟರ್ ಆಗಿದೆ.
07:36 ಎರಡನೆಯದು, ಸ್ಪ್ಲಿಟ್ ಆಗಬೇಕಾಗಿರುವ ಸ್ಟ್ರಿಂಗ್ ಆಗಿದೆ.
07:39 ಡಿ-ಲಿಮಿಟರ್ ಗಳನ್ನು ಫಾರ್ವರ್ಡ್ ಸ್ಲ್ಯಾಶ್, ಸಿಂಗಲ್ ಅಥವಾ ಡಬಲ್ ಕೋಟ್ಸ್ ನಲ್ಲಿ ಸೂಚಿಸಬಹುದು.
07:45 'join' ಫಂಕ್ಷನ್, ಎರಡು ಆರ್ಗ್ಯೂಮೆಂಟ್ ಗಳನ್ನು ತೆಗೆದುಕೊಳ್ಳುತ್ತದೆ.
07:48 ಮೊದಲನೆಯದು, ‘ಅರೇ’ ಎಲಿಮೆಂಟ್ ಗಳನ್ನು ಜೋಡಿಸಲು ಅಗತ್ಯವಿರುವ ಡಿ-ಲಿಮಿಟರ್ ಆಗಿದೆ.
07:53 ಎರಡನೆಯದು ‘ಅರೇ’ ಆಗಿದೆ.
07:55 ಡಿ-ಲಿಮಿಟರ್ ಗಳನ್ನು ಸಿಂಗಲ್ ಅಥವಾ ಡಬಲ್ ಕೋಟ್ಸ್ ನಲ್ಲಿ ಸೂಚಿಸಬಹುದು.
07:58 'sort' ಫಂಕ್ಷನ್, ಒಂದು ಆರ್ಗ್ಯೂಮೆಂಟ್ ಅನ್ನು ಮಾತ್ರ ತೆಗೆದುಕೊಳ್ಳುತ್ತದೆ ಮತ್ತು ಇದು, ಸಾರ್ಟ್(sort) ಮಾಡಬೇಕಾಗಿರುವ ‘ಅರೇ’ ಆಗಿದೆ.
08:05 'qw' ಫಂಕ್ಷನ್, ಸ್ಪೇಸ್ ನಿಂದ ಬೇರ್ಪಡಿಸಲ್ಪಟ್ಟ ಶಬ್ದಗಳ ಒಂದು ‘ಅರೇ’ಯನ್ನು ರಿಟರ್ನ್ ಮಾಡುತ್ತದೆ.
08:11 ‘qw’ ಅನ್ನು ಬಳಸಿ ಶಬ್ದವನ್ನು ಬರೆದರೆ, ಅದನ್ನು ಕೋಟ್ಸ್ ನಲ್ಲಿ ನಿರ್ದಿಷ್ಟ ಪಡಿಸುವ ಅವಶ್ಯಕತೆ ಇಲ್ಲ.
08:17 ನಂತರ ‘ಟರ್ಮಿನಲ್’ಗೆ ಬದಲಾಯಿಸಿ ಮತ್ತು 'Perl' ಸ್ಕ್ರಿಪ್ಟ್ ಅನ್ನು ಎಕ್ಸಿಕ್ಯೂಟ್ ಮಾಡಿ. ಇದಕ್ಕಾಗಿ ಹೀಗೆ ಟೈಪ್ ಮಾಡಿ:
08:23 'perl arrayFunctions dot pl'
08:26 ಮತ್ತು Enter ಅನ್ನು ಒತ್ತಿ.
08:29 ಈ ಕೆಳಗಿನ ಔಟ್ಪುಟ್ ಅನ್ನು ಸ್ಕ್ರೀನ್ ನ ಮೇಲೆ ತೋರಿಸಲಾಗಿದೆ.
08:33 ಸಂಕ್ಷಿಪ್ತವಾಗಿ,
08:34 ಈ ಟ್ಯುಟೋರಿಯಲ್ ನಲ್ಲಿ ನಾವು, ಸ್ಯಾಂಪಲ್ ಪ್ರೊಗ್ರಾಂಅನ್ನು ಬಳಸಿ
08:36 * ಒಂದು ‘ಅರೇ’ಯಲ್ಲಿ ಎಲಿಮೆಂಟ್ ಗಳನ್ನು ಸೇರಿಸುವುದು/ತೆಗೆದುಹಾಕುವುದು ಮತ್ತು
08:40 * ‘ಅರೇ’ಯ ಮೇಲೆ ಪ್ರಯೋಗಿಸಬಹುದಾದ ಪ್ರಮುಖ ಫಂಕ್ಷನ್ ಗಳ ಬಗ್ಗೆ ಕಲಿತಿದ್ದೇವೆ.
08:46 ಇಲ್ಲಿ ನಿಮಗಾಗಿ ಒಂದು ಅಸೈನ್ಮೆಂಟ್ ಇದೆ.
08:48 'script.spoken-tutorial.org/index.php/Perl'
08:54 ಮೇಲಿನ ಸ್ಟ್ರಿಂಗ್ ಅನ್ನು '/ ' (forward slash) ಡಿ-ಲಿಮಿಟರ್ ಇರುವಲ್ಲಿ ಸ್ಪ್ಲಿಟ್ ಮಾಡಿ.
08:59 ಹೊಸದಾಗಿ ಕ್ರಿಯೇಟ್ ಮಾಡಿದ ‘ಅರೇ’ಯ ಆರಂಭದಲ್ಲಿ 'https:// ' ಯನ್ನು ಸೇರಿಸಿ.
09:06 “Perl” ಎಂಬ ಎಲಿಮೆಂಟ್ ನ್ನು ‘ಅರೇ’ಯಿಂದ ತೆಗೆದುಹಾಕಿ.
09:09 ಒಂದು ‘ನಂಬರ್ ಅರೇ’ಯನ್ನು ಡಿಕ್ಲೇರ್ ಮಾಡಿ ಮತ್ತು ಅದನ್ನು ‘ಸಾರ್ಟ್’ (sort) ಮಾಡಿ.
09:12 ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋವನ್ನು ವೀಕ್ಷಿಸಿ.
09:15 ಇದು “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ಸಾರಾಂಶವಾಗಿದೆ.
09:19 ನಿಮಗೆ ಒಳ್ಳೆಯ ‘ಬ್ಯಾಂಡ್ವಿಡ್ತ್’ ಸಿಗದಿದ್ದರೆ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು.
09:24 “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ತಂಡವು: * ‘ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ.
09:30 * ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ.
09:34 ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ:

contact@spoken-tutorial.org

09:40 "ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪವು “ಟಾಕ್ ಟು ಎ ಟೀಚರ್” ಪ್ರಕಲ್ಪದ ಒಂದು ಭಾಗವಾಗಿದೆ.
09:44 ಇದು ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ.
09:51 ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುತ್ತದೆ:

spoken hyphen tutorial dot org slash NMEICT hyphen Intro.

10:02 ನಿಮಗೆ ಈ PERL ಟ್ಯುಟೋರಿಯಲ್ ಇಷ್ಟವಾಯಿತು ಎಂದು ಭಾವಿಸುತ್ತೇನೆ.
10:04 IIT Bombay ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ವಾಸುದೇವ .
10:06 ವಂದನೆಗಳು.

Contributors and Content Editors

Sandhya.np14, Vasudeva ahitanal