Netbeans/C3/Connecting-to-a-MySQL-Database/Kannada

From Script | Spoken-Tutorial
Jump to: navigation, search
Time Narration
00:00 ಎಲ್ಲರಿಗೂ ನಮಸ್ಕಾರಗಳು.
00:02 'Connecting to a MySQL Database' ಎಂಬ ಈ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:07 ಈ ಟ್ಯುಟೋರಿಯಲ್ ನಲ್ಲಿ, ನಾವು:
00:09 MySQL ಸರ್ವರ್ ನ ಗುಣಲಕ್ಷಣಗಳನ್ನು ಕಾನ್ಫಿಗರ್ ಮಾಡಲು,
00:14 MySQL ಸರ್ವರ್ ಅನ್ನು ಪ್ರಾರಂಭಿಸಲು,
00:17 ಡೇಟಾಬೇಸ್ ಅನ್ನು ರಚಿಸಲು ಮತ್ತು ಅದನ್ನು ಸಂಪರ್ಕಿಸಲು ಕಲಿಯುವೆವು.
00:20 ಡೇಟಾಬೇಸ್ ಟೇಬಲ್ ಗಳನ್ನು ರಚಿಸಲು- ಇದರಲ್ಲಿ ನಾವು ಎರಡು ವಿಧಾನಗಳನ್ನು ನೋಡುವೆವು:
00:26 1. sql ಎಡಿಟರ್ ಅನ್ನು ಬಳಸುವುದು
00:29 2. create table ಡೈಲಾಗ್ ಅನ್ನು ಬಳಸುವುದು
00:33 ಮತ್ತು ಕೊನೆಯದಾಗಿ, SQL ಸ್ಕ್ರಿಪ್ಟ್ ಅನ್ನು ರನ್ ಮಾಡಲು ಕಲಿಯುವೆವು.
00:37 ಇಲ್ಲಿ, ವಿವರಣೆಗಾಗಿ ನಾನು Linux Operating System Ubuntu ಆವೃತ್ತಿ 12.04
00:44 ಮತ್ತು Netbeans IDE ಆವೃತ್ತಿ 7.1.1 ಇವುಗಳನ್ನು ಬಳಸುತ್ತಿದೇನೆ.
00:48 ನಿಮಗೆ Java Development Kit (JDK) ಆವೃತ್ತಿ 6
00:54 ಮತ್ತು MySQL database ಸರ್ವರ್ ನ ಆವಶ್ಯಕತೆ ಸಹ ಇದೆ.
00:57 ಈ ಟ್ಯುಟೋರಿಯಲ್ ಅನ್ನು ಕಲಿಯಲು, 'ಡೇಟಾಬೇಸ್ ಮ್ಯಾನೇಜ್ಮೆಂಟ್' ನ ಬಗ್ಗೆ ತಿಳಿದಿರುವುದು ಅಗತ್ಯವಾಗಿದೆ.
01:03 ಇದರ ಬಗ್ಗೆ ಹೆಚ್ಚು ತಿಳಿದುಕೊಳ್ಳಲು, ಇಲ್ಲಿ ತೋರಿಸಿದ ಲಿಂಕ್ ನಲ್ಲಿ PHP and MySQL ಸ್ಪೋಕನ್ ಟ್ಯುಟೋರಿಯಲ್ ಗಳನ್ನು ನೋಡಿ.
01:10 ಈ ಟ್ಯುಟೋರಿಯಲ್ ನಲ್ಲಿ, ಪ್ರಮಾಣಿತ ಪ್ರೋಗ್ರಾಮಿಂಗ್ ಪರಿಭಾಷೆಯನ್ನು ಬಳಸಲಾಗಿದೆ.
01:16 ಈ ಟ್ಯುಟೋರಿಯಲ್, Netbeans IDE ಇಂದ MySQL database ಗೆ ಸಂಪರ್ಕವನ್ನು ಹೇಗೆ ಒದಗಿಸಬೇಕೆಂದು ತೋರಿಸುತ್ತದೆ.
01:24 ಒಮ್ಮೆ ಸಂಪರ್ಕ ವನ್ನು ಕೊಟ್ಟ ನಂತರ, ನಾವು IDE ಯ Database Explorer ನಲ್ಲಿ, MySQL ನೊಂದಿಗೆ ಕೆಲಸ ಮಾಡುವೆವು.
01:31 ಈಗ ನಾವು IDE ಗೆ ಬದಲಾಯಿಸೋಣ.
01:36 Netbeans IDE, MySQL RDBMS ಗಾಗಿ ಬೇಕಾದ ಎಲ್ಲ ಸಪೋರ್ಟ್ ನೊಂದಿಗೆ ಬರುತ್ತದೆ.
01:42 'ನೆಟ್ಬೀನ್ಸ್' ನಲ್ಲಿ MySQL ಡೇಟಾಬೇಸ್ ಸರ್ವರ್ ಅನ್ನು ಆಕ್ಸೆಸ್ ಮಾಡುವ ಮೊದಲು, MySQL ಸರ್ವರ್ ನ ಗುಣಲಕ್ಷಣಗಳನ್ನು ನೀವು ಕಾನ್ಫಿಗರ್ ಮಾಡಲೇಬೇಕು.
01:51 Services ವಿಂಡೋದಲ್ಲಿ, Databases ನೋಡ್ ನ ಮೇಲೆ ರೈಟ್-ಕ್ಲಿಕ್ ಮಾಡಿ.
01:56 MySQL server properties ಎಂಬ ಡೈಲಾಗ್-ಬಾಕ್ಸ್ ಅನ್ನು ತೆರೆಯಲು, Register MySQL Server ಅನ್ನು ಆರಿಸಿಕೊಳ್ಳಿ.
02:05 Server Host Name ಮತ್ತು Port ಗಳು ಸರಿಯಾಗಿವೆ ಎಂದು ಖಚಿತಪಡಿಸಿಕೊಳ್ಳಿ.
02:10 ಗಮನಿಸಿ: IDE, "localhost" ಅನ್ನು ಡೀಫಾಲ್ಟ್ server host name ಎಂದು ನಮೂದಿಸುತ್ತದೆ.
02:18 3306, ಡೀಫಾಲ್ಟ್ server port ನಂಬರ್ ಆಗಿದೆ.
02:23 ಇಲ್ಲಿ ತೋರಿಸಿರದಿದ್ದರೆ, Administrator Username ಅನ್ನು ನಮೂದಿಸಿ.
02:27 ನನ್ನ ಸಿಸ್ಟಂನಲ್ಲಿ, Administrator Username, "root" ಎಂದು ಇದೆ.
02:33 Administrator password ಅನ್ನು ನಮೂದಿಸಿ.
02:36 ನನ್ನ ಸಿಸ್ಟಂನಲ್ಲಿ, ಪಾಸ್ವರ್ಡ್ ಅನ್ನು ನಮೂದಿಸಿಲ್ಲ.
02:40 ಡೈಲಾಗ್-ಬಾಕ್ಸ್ ನ ಮೇಲ್ಭಾಗದಲ್ಲಿರುವ Admin Properties ಟ್ಯಾಬ್ ಅನ್ನು ಕ್ಲಿಕ್ ಮಾಡಿ.
02:45 MySQL server ಅನ್ನು ನಿಯಂತ್ರಿಸಲಿಕ್ಕಾಗಿ ಮಾಹಿತಿಯನ್ನು ನಮೂದಿಸಲು ಇದು ನಿಮಗೆ ಅನುಮತಿಸುತ್ತದೆ.
02:51 Path/URL to admin tool: ಫೀಲ್ಡ್ ನಲ್ಲಿ,
02:56 ನಿಮ್ಮ MySQL Administration ಅಪ್ಲಿಕೇಶನ್ ಇರುವ ಲೊಕೇಶನ್ ಅನ್ನು (ಸ್ಥಳವನ್ನು) ಟೈಪ್ ಮಾಡಿ ಅಥವಾ ಅಲ್ಲಿಗೆ ಬ್ರೌಸ್ ಮಾಡಿ.
03:02 ನನ್ನ ಸಿಸ್ಟಂನಲ್ಲಿ, ಟೂಲ್ ನ ಲೊಕೇಶನ್, /usr/bin/mysqladmin ಆಗಿದೆ.
03:12 Arguments ಫೀಲ್ಡ್ ನಲ್ಲಿ, admin tool ಗಾಗಿ ಯಾವುದೇ ಆರ್ಗ್ಯುಮೆಂಟ್ ಗಳನ್ನು ಟೈಪ್ ಮಾಡಿ.
03:18 ಇದನ್ನು ಖಾಲಿಯಾಗಿಯೂ ಇಡಬಹುದು.
03:22 Path to start command: ಫೀಲ್ಡ್ ನಲ್ಲಿ,
03:25 MySQL start ಕಮಾಂಡ್ ಇರುವ ಲೊಕೇಶನ್ ಅನ್ನು ಟೈಪ್ ಮಾಡಿ ಅಥವಾ ಅಲ್ಲಿಗೆ ಬ್ರೌಸ್ ಮಾಡಿ.
03:29 ನನ್ನ ಸಿಸ್ಟಂನಲ್ಲಿ, ಇದು ಹೀಗಿದೆ: /usr/bin/mysqld_safe.
03:38 start ಕಮಾಂಡ್ ಗಾಗಿ, Arguments ಫೀಲ್ಡ್ ನಲ್ಲಿ ಯಾವುದೇ ಆರ್ಗ್ಯುಮೆಂಟ್ ಗಳನ್ನು ಟೈಪ್ ಮಾಡಿ.
03:42 ಇಲ್ಲಿ, ನಾನು ಹೀಗೆ ಟೈಪ್ ಮಾಡುವೆನು: -u space root space start.
03:51 Path to stop command: ನಲ್ಲಿ,
03:54 MySQL stop ಕಮಾಂಡ್ ಇರುವ ಲೊಕೇಶನ್ ಅನ್ನು ಟೈಪ್ ಮಾಡಿ ಅಥವಾ ಅಲ್ಲಿಗೆ ಬ್ರೌಸ್ ಮಾಡಿ.
03:58 ಇದು, ಸಾಮಾನ್ಯವಾಗಿ MySQL ಇನ್ಸ್ಟಾಲೇಶನ್ ಡೈರೆಕ್ಟರಿಯ bin ಫೋಲ್ಡರ್ ನಲ್ಲಿ, mysqladmin ಗೆ ಪಾಥ್ ಆಗಿದೆ.
04:06 ನನ್ನ ಸಿಸ್ಟಂನಲ್ಲಿ, ಇದು ಹೀಗಿದೆ: /usr/bin/mysqladmin.
04:14 ಒಂದುವೇಳೆ, ಕಮಾಂಡ್ mysqladmin ಆಗಿದ್ದರೆ, Arguments ಫೀಲ್ಡ್ ನಲ್ಲಿ, ಹೀಗೆ ಟೈಪ್ ಮಾಡಿ: -u space root space stop.
04:27 ಮುಗಿದ ನಂತರ, Admin Properties ಟ್ಯಾಬ್, ಸ್ಕ್ರೀನ್ ಮೇಲೆ ತೋರಿಸಿದಂತೆ ಕಾಣಬೇಕು.
04:33 OK ಅನ್ನು ಕ್ಲಿಕ್ ಮಾಡಿ.
04:36 ಮೊದಲು, MySQL database ಸರ್ವರ್, ನಿಮ್ಮ ಮಷಿನ್ ನಲ್ಲಿ ರನ್ ಆಗುತ್ತಿರುವುದನ್ನು ಖಚಿತಪಡಿಸಿಕೊಳ್ಳಿ.
04:42 Service ವಿಂಡೋದಲ್ಲಿಯ, MySQL server ನೋಡ್, MySQL database server ಗೆ ಸಂಪರ್ಕವನ್ನು ಕೊಡಲಾಗಿದೆಯೇ ಎಂಬುದನ್ನು ತೋರಿಸುತ್ತದೆ.
04:52 ಅದು ರನ್ ಅಗುತ್ತಿದೆ ಎಂದು ಖಚಿತಪಡಿಸಿಕೊಂಡ ನಂತರ, Databases >> MySQL server ನೋಡ್ ಮೇಲೆ ರೈಟ್-ಕ್ಲಿಕ್ ಮಾಡಿ ಮತ್ತು Connect ಅನ್ನು ಆರಿಸಿಕೊಳ್ಳಿ.
05:05 MySQL server ನೋಡ್ ಅನ್ನು ವಿಸ್ತರಿಸಿದಾಗ, ಅದು ಲಭ್ಯವಿರುವ ಎಲ್ಲ MySQL database ಗಳನ್ನು ತೋರಿಸುತ್ತದೆ.
05:13 ಸಾಮಾನ್ಯವಾಗಿ, SQL ಎಡಿಟರ್ ಮೂಲಕ ಡೇಟಾಬೇಸ್ ಗಳೊಂದಿಗೆ ವ್ಯವಹರಿಸಲಾಗುತ್ತದೆ.
05:19 ಈ ಕೆಲಸಕ್ಕಾಗಿ, Netbeans ಬಿಲ್ಟ್-ಇನ್ SQL Editor ಅನ್ನು ಹೊಂದಿದೆ.
05:23 connection ನೋಡ್ ನ ಮೇಲೆ ರೈಟ್-ಕ್ಲಿಕ್ ಮಾಡಿ, ನೀವು ಇದನ್ನು ಆಕ್ಸೆಸ್ ಮಾಡಬಹುದು.
05:29 ಈಗ ನಾವು SQL ಎಡಿಟರ್ ಅನ್ನು ಬಳಸಿ, ಒಂದು ಹೊಸ 'ಡೇಟಾಬೇಸ್ ಇನ್ಸ್ಟನ್ಸ್' (database instance) ಅನ್ನು ಕ್ರಿಯೇಟ್ ಮಾಡೋಣ.
05:34 Services ವಿಂಡೋದಲ್ಲಿ, MySQL server ನೋಡ್ ನ ಮೇಲೆ ರೈಟ್-ಕ್ಲಿಕ್ ಮಾಡಿ ಮತ್ತು Create Database ಅನ್ನು ಆರಿಸಿಕೊಳ್ಳಿ.
05:44 Create Database ಡೈಲಾಗ್ ನಲ್ಲಿ, ಹೊಸ ಡೇಟಾಬೇಸ್ ನ ಹೆಸರನ್ನು ಟೈಪ್ ಮಾಡಿ.
05:50 ನಾನು ಇದನ್ನು "mynewdatabase" ಎಂದು ಹೆಸರಿಸುತ್ತೇನೆ.
05:56 ಯಾವುದೇ ಒಂದು ಯೂಸರ್ ನಿಗೆ, ನೀವು full access ಅನ್ನು ಸಹ ಕೊಡಬಹುದು.
06:01 ಡೀಫಾಲ್ಟ್ ಆಗಿ, ಅಡ್ಮಿನ್ ಯೂಸರ್ ನು ಮಾತ್ರ ಕೆಲವು ಕಮಾಂಡ್ ಗಳನ್ನು ನಿರ್ವಹಿಸಲು ಪರ್ಮಿಶನ್ ಗಳನ್ನು ಹೊಂದಿರುತ್ತಾನೆ.
06:08 ಈ ಡ್ರಾಪ್-ಡೌನ್ ಲಿಸ್ಟ್, ಪರ್ಮಿಶನ್ ಗಳನ್ನು ಒಬ್ಬ ನಿರ್ದಿಷ್ಟ ಯೂಸರ್ ನಿಗೆ ಕೊಡಲು ನಿಮಗೆ ಅನುಮತಿಸುತ್ತದೆ.
06:13 ಟೇಬಲ್ ಗಳನ್ನು 'ಡ್ರಾಪ್' ಮಾಡುವುದನ್ನು ಹೊರತುಪಡಿಸಿ, ಬಳಕೆದಾರರಿಗೆ ಹೆಚ್ಚಿನ ಪರ್ಮಿಶನ್ ಗಳನ್ನು ಒದಗಿಸುವುದು ಒಳ್ಳೆಯ ಅಭ್ಯಾಸವಾಗಿದೆ.
06:18 ಮತ್ತು ಅವರ ಅಪ್ಲಿಕೇಶನ್ ನಿಂದ ಕ್ರಿಯೇಟ್ ಮಾಡಲಾದ ಡೇಟಾಬೇಸ್ ಗಳನ್ನು ಮಾತ್ರ ಮಾರ್ಪಡಿಸಲು ಬಳಕೆದಾರರಿಗೆ ಅನುಮತಿ ಕೊಡಬೇಕು.
06:25 ಆದರೆ ಸಧ್ಯಕ್ಕೆ, ನಾವು ಚೆಕ್-ಬಾಕ್ಸ್ ಅನ್ನು ಆಯ್ಕೆಮಾಡುವುದು ಬೇಡ.
06:30 OK ಅನ್ನು ಕ್ಲಿಕ್ ಮಾಡಿ.
06:34 ಈಗ ನಾವು ಟೇಬಲ್ ಗಳನ್ನು, ಕ್ರಿಯೇಟ್ ಮಾಡೋಣ. ಅವುಗಳನ್ನು ಡೇಟಾದಿಂದ ತುಂಬಿಸೋಣ. ಮತ್ತು ಟೇಬಲ್ ಗಳಲ್ಲಿ ನಿರ್ವಹಿಸಲಾದ ಡೇಟಾಅನ್ನು ಮಾರ್ಪಡಿಸೋಣ.
06:41 "mynewdatabase" ಸಧ್ಯಕ್ಕೆ ಖಾಲಿ ಇದೆ.
06:44 ಟೇಬಲ್ ಗಳಲ್ಲಿ ಡೇಟಾಅನ್ನು ಸೇರಿಸಲು, ಮೊದಲನೆಯ ವಿಧಾನವನ್ನು ನಾವು ನೋಡೋಣ.
06:48 Database explorer ನಲ್ಲಿ, mynewdatabase ಕನೆಕ್ಷನ್ ನೋಡ್ ಅನ್ನು ವಿಸ್ತರಿಸಿ.
06:58 ಇಲ್ಲಿ ಮೂರು ಸಬ್-ಫೋಲ್ಡರ್ ಗಳಿವೆ:
07:00 Tables, Views ಮತ್ತು Procedures.
07:04 Tables ಫೋಲ್ಡರ್ ಮೇಲೆ ರೈಟ್-ಕ್ಲಿಕ್ ಮಾಡಿ ಮತ್ತು Execute Command ಅನ್ನು ಆರಿಸಿಕೊಳ್ಳಿ.
07:11 ಮೇನ್ ವಿಂಡೋದಲ್ಲಿ, SQL Editor ನಲ್ಲಿ ಒಂದು ಖಾಲಿ ಕ್ಯಾನ್ವಾಸ್ ತೆರೆದುಕೊಳ್ಳುತ್ತದೆ.
07:16 ನಾವು ಈ SQL editor ನಲ್ಲಿ, ಒಂದು ಸರಳವಾದ ಕ್ವೆರಿಯನ್ನು ಟೈಪ್ ಮಾಡೋಣ.
07:30 ಈಗ ನಾನು SQL editor ನಲ್ಲಿ, ಒಂದು ಸರಳವಾದ ಕ್ವೆರಿಯನ್ನು ಟೈಪ್ ಮಾಡಿದ್ದೇನೆ.
07:36 ಇದು, ಸಧ್ಯದಲ್ಲೇ ನಾವು ಕ್ರಿಯೇಟ್ ಮಾಡಲಿರುವ Counselor ಎಂಬ ಟೇಬಲ್ ಗಾಗಿ ವ್ಯಾಖ್ಯಾನವಾಗಿದೆ.
07:42 ಈ ಕ್ವೆರಿಯನ್ನು ಎಕ್ಸೀಕ್ಯೂಟ್ ಮಾಡಲು, ಮೇಲ್ಗಡೆ ಇರುವ ಟಾಸ್ಕ್ ಬಾರ್ ನಲ್ಲಿ Run SQL ಐಕಾನ್ ಅನ್ನು ರೈಟ್-ಕ್ಲಿಕ್ ಮಾಡಿ.
07:51 ಅಥವಾ, SQL Editorನ ಒಳಗಡೆ ರೈಟ್-ಕ್ಲಿಕ್ ಮಾಡಿ ಹಾಗೂ Run Statement ಅನ್ನು ಆರಿಸಿಕೊಳ್ಳಿ.
08:00 IDE, Counselor ಎಂಬ ಟೇಬಲ್ ಅನ್ನು ಡೇಟಾಬೇಸ್ ನಲ್ಲಿ ತಯಾರಿಸುತ್ತದೆ.
08:04 ನೀವು ಈ ಮೆಸೇಜ್ ಅನ್ನು Output ವಿಂಡೋದಲ್ಲಿ ನೋಡಬಹುದು.
08:12 ಕಮಾಂಡ್ ಅನ್ನು ಯಶಸ್ವಿಯಾಗಿ ಎಕ್ಸೀಕ್ಯೂಟ್ ಮಾಡಲಾಗಿದೆ ಎಂದು ಇದು ಹೇಳುತ್ತದೆ.
08:17 ಈ ಬದಲಾವಣೆಗಳನ್ನು ಪರೀಕ್ಷಿಸಲು, Database Explorer ನಲ್ಲಿ Tables ನೋಡ್ ಅನ್ನು ರೈಟ್-ಕ್ಲಿಕ್ ಮಾಡಿ.
08:25 Refresh ಅನ್ನು ಆರಿಸಿಕೊಳ್ಳಿ.
08:28 ಇದು, ಸೂಚಿಸಲಾದ ಡೇಟಾಬೇಸ್ ನ ಪ್ರಸ್ತುತ ಸ್ಟ್ಯಾಟಸ್ ಅನ್ನು ಅಪ್-ಡೇಟ್ ಮಾಡುತ್ತದೆ.
08:32 ಈ ಹೊಸ Counselor ಟೇಬಲ್, Tables ಎಂಬ ಆಯ್ಕೆಯ ಅಡಿಯಲ್ಲಿ ಈಗ ಕಾಣಿಸುತ್ತದೆ.
08:40 Table ನೋಡ್ ಅನ್ನು ವಿಸ್ತರಿಸಿದರೆ, ನೀವು ಕ್ರಿಯೇಟ್ ಮಾಡಿದ ಕಾಲಂ ಗಳನ್ನು ನೋಡಬಹುದು.
08:46 ಈಗ ನಾವು ಟೇಬಲ್ ಗಳಲ್ಲಿ ಡೇಟಾ ಅನ್ನು ಸೇರಿಸಲು ಇನ್ನೊಂದು ವಿಧಾನವನ್ನು ನೋಡೋಣ.
08:51 ಅರ್ಥಾತ್, Create Table ಡೈಲಾಗ್ ಅನ್ನು ಬಳಸಿ.
08:54 Database Explorer ನಲ್ಲಿ, Tables ನೋಡ್ ಅನ್ನು ರೈಟ್-ಕ್ಲಿಕ್ ಮಾಡಿ. ಮತ್ತು Create Table ಅನ್ನು ಆರಿಸಿಕೊಳ್ಳಿ.
09:03 ಈಗ Create Table ಎಂಬ ಡೈಲಾಗ್ ತೆರೆದುಕೊಳ್ಳುತ್ತದೆ.
09:06 Table name ಎಂಬ ಟೆಕ್ಸ್ಟ್-ಫೀಲ್ಡ್ ನಲ್ಲಿ, "Subject" ಎಂದು ಟೈಪ್ ಮಾಡಿ.
09:13 Add Column ಮೇಲೆ ಕ್ಲಿಕ್ ಮಾಡಿ.
09:16 Add Column ಡೈಲಾಗ್ ನಲ್ಲಿ, Name ಫೀಲ್ಡ್ ನಲ್ಲಿ "id" ಎಂದು ಟೈಪ್ ಮಾಡಿ.
09:22 ಡೇಟಾ-ಟೈಪ್ ಗಾಗಿ, Type ಡ್ರಾಪ್-ಡೌನ್ ಮೆನ್ಯುದಿಂದ SMALLINT ಅನ್ನು ಆರಿಸಿಕೊಳ್ಳಿ.
09:30 Add Column ಡೈಲಾಗ್-ಬಾಕ್ಸ್ ನಲ್ಲಿ, Primary Key ಚೆಕ್-ಬಾಕ್ಸ್ ಅನ್ನು ಆಯ್ಕೆಮಾಡಿ.
09:35 ನಿಮ್ಮ ಟೇಬಲ್ ಗಾಗಿ, ಪ್ರೈಮರಿ-ಕೀ ಯನ್ನು ಸೂಚಿಸಲು ಹೀಗೆ ಮಾಡುತ್ತೇವೆ.
09:39 ಗಮನಿಸಿ: ನೀವು Primary Key ಚೆಕ್-ಬಾಕ್ಸ್ ಅನ್ನು ಆಯ್ಕೆಮಾಡಿದಾಗ, Index ಹಾಗೂ Unique ಚೆಕ್-ಬಾಕ್ಸ್ ಗಳು ತಾವಾಗಿಯೇ ಆಯ್ಕೆಯಾಗುತ್ತವೆ.
09:49 ಹಾಗೆಯೇ, Null ಚೆಕ್-ಬಾಕ್ಸ್ ನ ಆಯ್ಕೆಯನ್ನು ರದ್ದುಮಾಡುತ್ತೇವೆ.
09:53 ಏಕೆಂದರೆ, ಪ್ರೈಮರಿ-ಕೀ ಗಳನ್ನು ಡೇಟಾಬೇಸ್ ನಲ್ಲಿ ವಿಶಿಷ್ಟವಾದ ರೋ ಅನ್ನು ಗುರುತಿಸಲು ಬಳಸಲಾಗುತ್ತದೆ.
09:59 OK ಅನ್ನು ಕ್ಲಿಕ್ ಮಾಡಿ.
10:03 ಇನ್ನುಳಿದ ಕಾಲಂಗಳನ್ನು ಸೇರಿಸಲು, ಸ್ಕ್ರೀನ್ ಮೇಲೆ ತೋರಿಸಿದಂತೆ ಈ ವಿಧಾನವನ್ನು ಪುನರಾವರ್ತಿಸಿ.
10:09 ಈಗ ನಾವು, Subject ಎಂಬ ಒಂದು ಟೇಬಲ್ ಅನ್ನು ಕ್ರಿಯೇಟ್ ಮಾಡಿದ್ದೇವೆ. ಇದು, Name, Description ಹಾಗೂ Counselor ID ಇವುಗಳ ಡೇಟಾ ಅನ್ನು ಹೊಂದಿರುವುದು.
10:20 OK ಅನ್ನು ಕ್ಲಿಕ್ ಮಾಡಿ.
10:23 ಡೇಟಾಬೇಸ್ ನಲ್ಲಿ SQL ಕ್ವೆರಿಗಳನ್ನು ರನ್ ಮಾಡುವುದರ ಮೂಲಕ, ನಾವು 'ಡೇಟಾಬೇಸ್ ಸ್ಟ್ರಕ್ಚರ್' (database structure) ಗಳಲ್ಲಿ ನಿರ್ವಹಿಸಲಾದ ಡೇಟಾ ಅನ್ನು ಸೇರಿಸಬಹುದು, ಮಾರ್ಪಡಿಸಬಹುದು ಮತ್ತು ತೆಗೆದುಹಾಕಬಹುದು.
10:32 ನಾವು Counselor ಟೇಬಲ್ ಗೆ, ಒಂದು ಹೊಸ ರೆಕಾರ್ಡ್ ಅನ್ನು ಸೇರಿಸೋಣ.
10:35 Tables ನೋಡ್ ನ ಕಾಂಟೆಕ್ಸ್ಟ್ ಮೆನ್ಯುದಿಂದ, Execute Command ಅನ್ನು ಆರಿಸಿಕೊಳ್ಳಿ.
10:43 ಮೇನ್ ವಿಂಡೊದಲ್ಲಿ, ಒಂದು ಹೊಸ SQL ಎಡಿಟರ್ ತೆರೆದುಕೊಳ್ಳುತ್ತದೆ.
10:47 SQL ಎಡಿಟರ್ ನಲ್ಲಿ, ನಾವು ಒಂದು ಸರಳವಾದ ಕ್ವೆರಿಯನ್ನು ಟೈಪ್ ಮಾಡೋಣ.
11:00 ಈ ಕ್ವೆರಿಯನ್ನು ಎಕ್ಸೀಕ್ಯೂಟ್ ಮಾಡಲು, source editor ನ ಒಳಗಡೆ ರೈಟ್-ಕ್ಲಿಕ್ ಮಾಡಿ ಮತ್ತು Run Statement ಅನ್ನು ಆರಿಸಿಕೊಳ್ಳಿ.
11:07 ಈಗ, ಹೊಸ ರೆಕಾರ್ಡ್ ಅನ್ನು ಈ ಟೇಬಲ್ ಗೆ ಸೇರಿಸಲಾಗಿದೆ ಎಂಬುದನ್ನು ನಾವು ಪರೀಕ್ಷಿಸೋಣ.
11:12 Counselor ಟೇಬಲ್ ಅನ್ನು ರೈಟ್-ಕ್ಲಿಕ್ ಮಾಡಿ ಮತ್ತು View Data ಅನ್ನು ಆರಿಸಿಕೊಳ್ಳಿ.
11:18 ಮೇನ್ ವಿಂಡೋದಲ್ಲಿ, ಒಂದು ಹೊಸ SQL Editor ತೆರೆದುಕೊಳ್ಳುತ್ತದೆ.
11:21 ಟೇಬಲ್ ನಿಂದ ಎಲ್ಲಾ ಡೇಟಾವನ್ನು ಆಯ್ಕೆಮಾಡುವ ಒಂದು ಕ್ವೆರಿಯು ತಾನಾಗಿಯೆ ಉತ್ಪತ್ತಿಯಾಗುತ್ತದೆ.
11:27 ಈ ಸ್ಟೇಟ್ಮೆಂಟ್ ನ ಫಲಿತಾಂಶಗಳನ್ನು ವರ್ಕ್-ಸ್ಪೇಸ್ ನ ಕೆಳಗಡೆ, ಒಂದು ' ಟೇಬಲ್ ವ್ಯೂ' ನಲ್ಲಿ ತೋರಿಸಲಾಗುತ್ತದೆ.
11:41 ಗಮನಿಸಿ: ಈಗಷ್ಟೆ ನಾವು ಕೊಟ್ಟ ಡೇಟಾ ದೊಂದಿಗೆ, ಒಂದು ಹೊಸ ಸಾಲನ್ನು ಸೇರಿಸಲಾಗಿದೆ.
11:46 ಹೊರಗಿನ SQL ಸ್ಕ್ರಿಪ್ಟ್ ಅನ್ನು ಸಹ IDE ಯಲ್ಲಿ ನೇರವಾಗಿ ನಾವು ರನ್ ಮಾಡಬಹುದು.
11:52 ಇಲ್ಲಿ ವಿವರಣೆಗಾಗಿ, ನನ್ನ ಹತ್ತಿರ ಒಂದು SQL ಕ್ವೆರಿ ಇದೆ.
11:59 ಈಗಷ್ಟೇ ನಾವು ಕ್ರಿಯೇಟ್ ಮಾಡಿದ ಟೇಬಲ್ ಗಳಂತಹ ಎರಡು ಟೇಬಲ್ ಗಳನ್ನು ಈ ಸ್ಕ್ರಿಪ್ಟ್, ಕ್ರಿಯೇಟ್ ಮಾಡುತ್ತದೆ.
12:04 i.e. Counselor ಹಾಗೂ Subject.
12:09 ಏಕೆಂದರೆ, ಈ ಸ್ಕ್ರಿಪ್ಟ್, ಈ ಟೇಬಲ್ ಗಳನ್ನು ತಿದ್ದಿಬರೆಯುತ್ತದೆ.
12:12 ಈ ಎರಡು ಟೇಬಲ್ ಗಳು ಈಗಾಗಲೇ ಇಲ್ಲಿ ಇದ್ದರೆ, ನಾವು ಅವುಗಳನ್ನು ಡಿಲೀಟ್ ಮಾಡುವೆವು.
12:16 ಟೇಬಲ್ ಗಳನ್ನು ತೆಗೆದುಹಾಕಲು (ಡಿಲೀಟ್), Counselor ಟೇಬಲ್ ನ ಮೇಲೆ ರೈಟ್-ಕ್ಲಿಕ್ ಮಾಡಿ.
12:21 ಮತ್ತು Delete ಅನ್ನು ಆರಿಸಿಕೊಳ್ಳಿ.
12:24 Confirm Object Deletion ಎಂಬ ಡೈಲಾಗ್-ಬಾಕ್ಸ್ ನಲ್ಲಿ, Yes ಅನ್ನು ಕ್ಲಿಕ್ ಮಾಡಿ.
12:31 Subject ಟೇಬಲ್ ಗಾಗಿ ಇದನ್ನೇ ಪುನರಾವರ್ತಿಸಿ.
12:38 ಈಗ, ನಿಮ್ಮ ಸಿಸ್ಟಂ ನಲ್ಲಿರುವ SQL ಕ್ವೆರಿ ಫೈಲ್ ಅನ್ನು ತೆರೆಯಿರಿ.
12:43 File ಮೆನ್ಯೂನಿಂದ, Open File ಅನ್ನು ಆರಿಸಿಕೊಳ್ಳಿ.
12:48 ಈ ಫೈಲ್ ಇರುವ ಲೊಕೇಶನ್ ಗೆ ಬ್ರೌಸ್ ಮಾಡಿ.
12:54 ಸ್ಕ್ರಿಪ್ಟ್, SQL ಎಡಿಟರ್ ನಲ್ಲಿ ತನ್ನಷ್ಟಕ್ಕೆ ತಾನೇ ತೆರೆದುಕೊಳ್ಳುತ್ತದೆ.
12:59 mynewdatabase ಗೆ ಮಾಡಿರುವ ಕನೆಕ್ಷನ್ ಆಯ್ಕೆಯಾಗಿರುವುದನ್ನು ಖಚಿತಪಡಿಸಿಕೊಳ್ಳಿ.
13:03 ಎಡಿಟರ್ ನ ಮೇಲ್ಭಾಗದಲ್ಲಿರುವ Connection ಎಂಬ ಡ್ರಾಪ್-ಡೌನ್ ಟೂಲ್-ಬಾರ್ ನಲ್ಲಿ, ಇದನ್ನು ಪರೀಕ್ಷಿಸಿ.
13:13 ಟಾಸ್ಕ್-ಬಾರ್ ನಲ್ಲಿ Run SQL ಬಟನ್ ಅನ್ನು ಕ್ಲಿಕ್ ಮಾಡಿ.
13:17 ಮತ್ತು, ಆಯ್ಕೆಮಾಡಿದ ಡೇಟಾಬೇಸ್ ಗಾಗಿ, ಸ್ಕ್ರಿಪ್ಟ್ ಅನ್ನು ಎಕ್ಸೀಕ್ಯೂಟ್ ಮಾಡಲಾಗುತ್ತದೆ.
13:22 mynewdatabase ಕನೆಕ್ಷನ್ ನೋಡ್ ಅನ್ನು ರೈಟ್-ಕ್ಲಿಕ್ ಮಾಡಿ ಮತ್ತು Refresh ಅನ್ನು ಆರಿಸಿಕೊಳ್ಳಿ.
13:28 ಇದು, ಡೇಟಾಬೇಸ್ ಕಾಂಪೋನೆಂಟ್ ಅನ್ನು, ಸೂಚಿಸಲಾದ ಡೇಟಾಬೇಸ್ ನ ಈಗಿನ ಸ್ಟ್ಯಾಟಸ್ ಗೆ ಅಪ್ಡೇಟ್ ಮಾಡುತ್ತದೆ.
13:34 ಈಗ ಈ ಟೇಬಲ್ ಗಳಲ್ಲಿ ಯಾವುದರ ಮೇಲಾದರೂ ರೈಟ್-ಕ್ಲಿಕ್ ಮಾಡಿ ಮತ್ತು View Data ಅನ್ನು ಆರಿಸಿಕೊಳ್ಳಿ.
13:41 ನೀವು 'ವರ್ಕ್-ಸ್ಪೇಸ್' ನ ಕೆಳಗಡೆ, ಹೊಸ ಟೇಬಲ್ ಗಳಲ್ಲಿ ಇರುವ ಡೇಟಾ ಅನ್ನು ನೋಡಬಹುದು.
13:52 ಈ ಟ್ಯುಟೋರಿಯಲ್ ನಲ್ಲಿ, ನೀವು -
13:54 ನಿಮ್ಮ ಕಂಪ್ಯೂಟರ್ ನಲ್ಲಿ, MySQL ಅನ್ನು ಕಾನ್ಫಿಗರ್ ಮಾಡಲು,
13:57 IDE ಯಿಂದ 'ಡೇಟಾಬೇಸ್ ಸರ್ವರ್' ಗೆ ಸಂಪರ್ಕವನ್ನು ಒದಗಿಸಲು,
14:02 ಡೇಟಾ ಅನ್ನು ಕ್ರಿಯೇಟ್, ಡಿಲೀಟ್ ಮಾಡಲು ಮತ್ತು ಬದಲಾಯಿಸಲು
14:06 ಹಾಗೂ, SQL ಕ್ವೆರಿ ಗಳನ್ನು ರನ್ ಮಾಡಲು ಕಲಿತಿರುವಿರಿ.
14:10 ಒಂದು ಅಸೈನ್ಮೆಂಟ್ ಇದೆ:
14:11 ಟೇಬಲ್ ಗಳೊಂದಿಗೆ ಇನ್ನೊಂದು ಡೇಟಾಬೇಸ್ ಇನ್ಸ್ಟನ್ಸ್ ಅನ್ನು (instance) ಕ್ರಿಯೇಟ್ ಮಾಡಿ.
14:15 ನಿಮ್ಮ ವೈಯಕ್ತಿಕ ಪುಸ್ತಕಗಳ ಲೈಬ್ರರಿ ಯನ್ನು ನಿರ್ವಹಿಸಲು ಅವಶ್ಯವಿರುವ ಡೇಟಾದಿಂದ ಈ ಟೇಬಲ್ ಗಳನ್ನು ತುಂಬಿ.
14:21 ಮತ್ತು, ಡೇಟಾಅನ್ನು ನೋಡಲು, ಈ SQL ಸ್ಟೇಟ್ಮೆಂಟ್ ಗಳನ್ನು ರನ್ ಮಾಡಿ.
14:29 ನಾನು ಇಂತಹದೇ ಒಂದು ಡೇಟಾಬೇಸ್ ಅನ್ನು ಕ್ರಿಯೇಟ್ ಮಾಡಿದ್ದೇನೆ. ಇದು ನನ್ನ ವೈಯಕ್ತಿಕ ಮೂವಿಗಳ ಲೈಬ್ರರಿಯ ವಿವರಗಳನ್ನು ನಿರ್ವಹಿಸುತ್ತದೆ.
14:37 ನಿಮ್ಮ ಅಸೈನ್ಮೆಂಟ್ ಹೀಗೆ ಇರಬೇಕು.
14:44 ಸ್ಕ್ರೀನ್ ಮೇಲೆ ತೋರಿಸಿದ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋಅನ್ನು ವೀಕ್ಷಿಸಿ.
14:48 ಇದು ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ಸಾರಾಂಶವಾಗಿದೆ.
14:51 ನಿಮಗೆ ಒಳ್ಳೆಯ ‘ಬ್ಯಾಂಡ್‌ವಿಡ್ತ್’ ಸಿಗದಿದ್ದರೆ ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು.
14:56 ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ತಂಡವು: ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ
15:01 ಮತ್ತು, ಆನ್ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ.
15:04 ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಕೆಳಗಿನ ಲಿಂಕ್ ಗೆ ಬರೆಯಿರಿ:

contact@spoken-tutorial.org

15:10 Spoken Tutorial ಪ್ರಕಲ್ಪವು Talk to a Teacher ಎಂಬ ಪ್ರಕಲ್ಪದ ಒಂದು ಭಾಗವಾಗಿದೆ.
15:15 ಇದು NMEICT, MHRD ಮೂಲಕ ಭಾರತ ಸರ್ಕಾರದ ಅನುದಾನವನ್ನು ಪಡೆದಿದೆ.
15:20 ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗೆ ತೋರಿಸಿದ ಲಿಂಕ್ ನಲ್ಲಿ ಲಭ್ಯವಿದೆ.
15:27 ಈ ಟ್ಯುಟೋರಿಯಲ್, IT for Change ಅವರ ಕೊಡುಗೆಯಾಗಿದೆ.
15:30 ಧನ್ಯವಾದಗಳು.

Contributors and Content Editors

Sandhya.np14