Netbeans/C2/Adding-a-File-Chooser/Kannada

From Script | Spoken-Tutorial
Jump to: navigation, search
Time Narration
00:00 ನಮಸ್ಕಾರ.
00:01 ಒಂದು ಜಾವಾ ಅಪ್ಲಿಕೇಶನ್ ಗೆ, ಫೈಲ್ ಚೂಜರ್ ಅನ್ನು ಸೇರಿಸುವ ಬಗ್ಗೆ ತಿಳಿಸುವ Adding a File Chooser ಎಂಬ ಈ ಟ್ಶುಟೋರಿಯಲ್ ಗೆ ನಿಮಗೆ ಸ್ವಾಗತ.
00:07 ಈ ಟ್ಶುಟೋರಿಯಲ್ ನಲ್ಲಿ, ನಾವು:
00:09 ಅಪ್ಲಿಕೇಶನ್ ಮತ್ತು ಅಪ್ಲಿಕೇಶನ್ ಫಾರ್ಮ್ ಅನ್ನು ಕ್ರಿಯೇಟ್ ಮಾಡುವುದು,
00:12 'File Chooser' (ಫೈಲ್ ಚೂಜರ್) ಅನ್ನು ಸೇರಿಸುವುದು,
00:14 ಫೈಲ್ ಚೂಜರ್ ಅನ್ನು ಕಾನ್ಫಿಗರ್ ಮಾಡುವುದು ಮತ್ತು
00:17 'ಅಪ್ಲಿಕೇಶನ್' ಅನ್ನು 'ರನ್' ಮಾಡುವುದು ಇವುಗಳನ್ನು ಕಲಿಯುತ್ತೇವೆ.
00:19 ಇಲ್ಲಿ ವಿವರಿಸಲು, ನಾನು 'Linux ಆಪರೇಟಿಂಗ್ ಸಿಸ್ಟಂ, Ubuntu' ಆವೃತ್ತಿ 12.04 ಹಾಗೂ
00:26 'Netbeans IDE', ಆವೃತ್ತಿ 7.1.1 ಇವುಗಳನ್ನು ಬಳಸುತ್ತೇನೆ.
00:31 ಈ ಟ್ಶುಟೋರಿಯಲ್ ನಲ್ಲಿ, ನಾವು 'javax.swing.JFileChooser' ಎಂಬ ಘಟಕವನ್ನು ಬಳಸಿ, 'File chooser' ಅನ್ನು 'ಜಾವಾ ಅಪ್ಲಿಕೇಶನ್ 'ಗೆ ಸೇರಿಸುವುದನ್ನು ಕಲಿಯುವೆವು.
00:42 ಇದರಲ್ಲಿ, ಒಂದು '.txt' ಫೈಲ್ ಅನ್ನು 'ಟೆಕ್ಟ್ಸ ಏರಿಯಾ' ದಲ್ಲಿ ಲೋಡ್ ಮಾಡುವ ಒಂದು ಚಿಕ್ಕ ' ಜಾವಾ ಅಪ್ಲಿಕೇಶನ್' ಅನ್ನು ಕ್ರಿಯೇಟ್ ಮಾಡಲು ನಾವು ಕಲಿಯುವೆವು.
00:52 ಮೊದಲು, ನಾವು ' ಜಾವಾ ಅಪ್ಲಿಕೇಶನ್ ' ಅನ್ನು ಕ್ರಿಯೇಟ್ ಮಾಡೋಣ.
00:55 'IDE' ಅನ್ನು ಲಾಂಚ್ ಮಾಡಿ.
00:57 ಮೇನ್ ಮೆನ್ಯುವಿನಿಂದ 'File' > 'New Project' ಗಳನ್ನು ಆಯ್ಕೆಮಾಡಿ.
01:03 ನಂತರ, Categories ನಲ್ಲಿ 'Java' ಮತ್ತು Projects ನಲ್ಲಿ "Java Application" ಗಳನ್ನು ಆಯ್ಕೆ ಮಾಡಿ.
01:08 ಮತ್ತು 'Next ' ಅನ್ನು ಕ್ಲಿಕ್ ಮಾಡಿ.
01:10 'Project Name' ಫೀಲ್ಡ್ ನಲ್ಲಿ, ಹೀಗೆ ಟೈಪ್ ಮಾಡಿ: 'JFileChooserDemo'
01:20 'Create Main Class' ಎಂಬ ಚೆಕ್-ಬಾಕ್ಸ್ ಅನ್ನು ಖಾಲಿ ಮಾಡಿ.
01:23 ' Set as Main Project' ಎಂಬ ಚೆಕ್-ಬಾಕ್ಸ್, ಆಯ್ಕೆಯಾಗಿರುವುದನ್ನು ಖಚಿತಪಡಿಸಿಕೊಳ್ಳಿ.
01:27 'Finish' ಮೇಲೆ ಕ್ಲಿಕ್ ಮಾಡಿ.
01:31 ಇಲ್ಲಿ ನಾವು 'JFrame' 'container' ಅನ್ನು ಕ್ರಿಯೇಟ್ ಮಾಡಿ, ಅದರಲ್ಲಿ ಕೆಲವು ಘಟಕಗಳನ್ನು ಸೇರಿಸುವೆವು.
01:37 'Source Packages' ಎಂಬ ನೋಡ್ ನ ಮೇಲೆ ರೈಟ್-ಕ್ಲಿಕ್ ಮಾಡಿ.
01:41 'New > other' ಅನ್ನು ಆಯ್ಕೆಮಾಡಿ.
01:45 Categories ನಲ್ಲಿ 'Swing GUI Forms' ಅನ್ನು ಮತ್ತು File type ನಲ್ಲಿ JFrameForm ಅನ್ನು ಆಯ್ಕೆಮಾಡಿ.
01:51 'Next' ಅನ್ನು ಕ್ಲಿಕ್ ಮಾಡಿ.
01:54 'Class Name'ಗಾಗಿ, ಹೀಗೆ ಟೈಪ್ ಮಾಡಿ: 'JFileChooserDemo'
02:02 ' Package' ಎಂಬ ಫೀಲ್ಡ್ ನಲ್ಲಿ, ಹೀಗೆ ಟೈಪ್ ಮಾಡಿ: 'jfilechooserdemo.resources'.
02:12 'Finish' ಮೇಲೆ ಕ್ಲಿಕ್ ಮಾಡಿ.
02:17 'Properties' ಎಂಬ ವಿಂಡೋದಲ್ಲಿ, ' Title ' ಎಂಬ ಪ್ರಾಪರ್ಟೀಯನ್ನು ಆರಿಸಿ.
02:22 ಮತ್ತು ' Demo Application ' ಎಂದು ಟೈಪ್ ಮಾಡಿ.
02:30 ಖಚಿತಪಡಿಸಲು 'Enter' ಅನ್ನು ಒತ್ತಿ.
02:32 'Palette' ನಲ್ಲಿ, 'Swing Menus' ಎಂಬ ವಿಭಾಗವನ್ನು ಓಪನ್ ಮಾಡಿ.
02:40 Menu Bar ಎಂಬ ಕಾಂಪೊನೆಂಟ್ ಅನ್ನು ಆಯ್ಕೆ ಮಾಡಿ, ಅದನ್ನು'Jframe 'ನ ಮೇಲ್ತುದಿಯ ಎಡಮೂಲೆಗೆ ಎಳೆಯಿರಿ.
02:50 Menu Bar ಕಾಂಪೊನೆಂಟ್ ನ 'Edit' ಐಟಂ ಮೇಲೆ ರೈಟ್-ಕ್ಲಿಕ್ ಮಾಡಿ.
02:55 ಕಾಂಟೆಕ್ಸ್ಟ್ ಮೆನ್ಯೂದಲ್ಲಿ, 'Delete' ಅನ್ನು ಆಯ್ಕೆಮಾಡಿ.
02:59 ನಂತರ, ರನಿಂಗ್ ಅಪ್ಲಿಕೇಶನ್ ನಿಂದ 'FileChooser' ಅನ್ನು ಓಪನ್ ಮಾಡುವ, ಒಂದು ಮೆನ್ಯೂ ಐಟಂ ಅನ್ನು ನಾವು ಸೇರಿಸೋಣ.
03:07 ಇಲ್ಲಿ ಮತ್ತೊಂದು 'ಮೆನ್ಯೂಐಟಂ' ಅನ್ನು ಎಳೆದು ತರುವ ಮೊದಲು, 'ಮೆನ್ಯೂ ಬಾರ್' ಅನ್ನು ಆಯ್ಕೆಮಾಡಲಾಗಿದೆ ಎಂದು ಖಚಿತಪಡಿಸಿಕೊಳ್ಳಿ.
03:14 'Palette' ನಲ್ಲಿಯ 'Swing Menus' ವಿಭಾಗದಲ್ಲಿ, ಒಂದು ಹೊಸ Menu Item ಅನ್ನು (ಮೆನ್ಯೂಐಟಂ) ಆಯ್ಕೆಮಾಡಿ.
03:22 ಅದನ್ನು 'ಮೆನ್ಯೂ ಬಾರ್' ಗೆ ಎಳೆದುತಂದು, ಅಲ್ಲಿಯ 'File' ಐಟಂನ ಮೇಲೆ ಡ್ರಾಪ್ ಮಾಡಿ.
03:30 'Design' ವ್ಹ್ಯೂ ನಲ್ಲಿ, ' jMenuItem1 ' ಮೇಲೆ ರೈಟ್-ಕ್ಲಿಕ್ ಮಾಡಿ
03:35 ಮತ್ತು ಕಾಂಟೆಕ್ಸ್ಟ್ ಮೆನ್ಯೂ ದಿಂದ, 'Change Variable Name' ಅನ್ನು ಆರಿಸಿಕೊಳ್ಳಿ.
03:41 ಐಟಂ ಅನ್ನು Open ಎಂದು ರಿ-ನೇಮ್ (Rename) ಮಾಡಿ ಮತ್ತು 'OK' ಮೇಲೆ ಕ್ಲಿಕ್ ಮಾಡಿ.
03:48 'Design' ವ್ಹ್ಯೂ ನಲ್ಲಿ, 'JMenuItem1' ಇನ್ನೂ ಆಯ್ಕೆಯಾಗಿಯೇ ಇದೆ ಎಂದು ಖಚಿತಪಡಿಸಿಕೊಳ್ಳಿ.
03:53 ಕಾಂಪೊನೆಂಟ್ ನ ಟೆಕ್ಸ್ಟ್ ಅನ್ನು ಎಡಿಟ್ ಮಾಡಲು, 'ಸ್ಪೇಸ್ ಬಾರ್' ಅನ್ನು ಒತ್ತಿ.
03:58 ಟೆಕ್ಟ್ಸ ಅನ್ನು 'Open' ಎಂದು ಬದಲಿಸಿ ಮತ್ತು ಖಚಿತಪಡಿಸಿಕೊಳ್ಳಲು 'Enter' ಅನ್ನು ಒತ್ತಿ.
04:04 'Open' ಮೆನ್ಯೂ ಐಟಂಗಾಗಿ, ಆಕ್ಷನ್ ಹ್ಯಾಂಡ್ಲರ್ ಅನ್ನು (action handler) ಸೂಚಿಸಿ.
04:08 'Open' ಎಂಬ ಮೆನ್ಯೂ ಐಟಂಅನ್ನು ರೈಟ್-ಕ್ಲಿಕ್ ಮಾಡಿ ಮತ್ತು ಕಾಂಟೆಕ್ಸ್ಟ್ ಮೆನ್ಯೂವಿನಿಂದ ಕ್ರಮವಾಗಿ 'Events > Action > Action Performed' ಗಳನ್ನು ಆಯ್ಕೆಮಾಡಿ.
04:20 'GUI ಬಿಲ್ಡರ್', Source ವ್ಹ್ಯೂ ಗೆ ತನ್ನಷ್ಟಕ್ಕೆ ತಾನೇ ಬದಲಾಯಿಸುತ್ತದೆ.
04:25 'OpenActionPerformed ()' ಎಂಬ ಒಂದು ಹೊಸ 'ಇವೆಂಟ್ ಹ್ಯಾಂಡ್ಲರ್ ಮೆಥಡ್' ಅನ್ನು ರಚಿಸಲಾಗಿದೆ.
04:31 ನಾವು ಮತ್ತೆ 'Design' ವ್ಹ್ಯೂ ಗೆ ಹಿಂತಿರುಗೋಣ.
04:35 ನಾವು 'File Chooser' ನಿಂದ ಹೊರ ಬರಲು, ಒಂದು ಮೆನ್ಯೂ ಐಟಂ ಅನ್ನು ಸೇರಿಸೋಣ.
04:39 'Palette' ನಲ್ಲಿ, 'Swing Menus' ಅನ್ನು ಆರಿಸಿಕೊಳ್ಳಿ.
04:45 'Menu Item ಅನ್ನು ಆಯ್ಕೆ ಮಾಡಿ.
04:48 ಫಾರ್ಮ್ ನಲ್ಲಿಯ 'ಮೆನ್ಯೂ ಬಾರ್ 'ಗೆ ಹೋಗಿ, 'Open ' ಎಂಬ ಮೆನ್ಯೂ ಐಟಂ ನ ಕೆಳಗೆ ಇದನ್ನು ಎಳೆಯಿರಿ.
04:53 'jmenuItem1' ಅನ್ನು ಎಲ್ಲಿ ಇಡಲಾಗುತ್ತದೆ ಎಂದು ಸೂಚಿಸುತ್ತಿರುವ ಆರೇಂಜ್ ಹೈಲೈಟ್ ಅನ್ನು ಗಮನಿಸಿ.
05:03 ' Design' ವ್ಹ್ಯೂ ನಲ್ಲಿ, 'jMenuItem1' ಅನ್ನು ರೈಟ್-ಕ್ಲಿಕ್ ಮಾಡಿ.
05:07 ಕಾಂಟೆಕ್ಸ್ಟ್ ಮೆನ್ಯೂ ನಿಂದ, 'Change Variable Name ' ಅನ್ನು ಆರಿಸಿಕೊಳ್ಳಿ.
05:12 ಐಟಂಅನ್ನು 'Exit' ಎಂದು ರಿ-ನೇಮ್ ಮಾಡಿ ಮತ್ತು 'OK' ಮೇಲೆ ಕ್ಲಿಕ್ ಮಾಡಿ.
05:20 'Design' ವ್ಹ್ಯೂ ನಲ್ಲಿ, 'JMenuItem1' ಅನ್ನು ಆಯ್ಕೆಮಾಡಲಾಗಿದೆ ಎಂದು ಖಚಿತಪಡಿಸಿಕೊಳ್ಳಿ.
05:25 ಕಾಂಪೊನೆಂಟ್ ನ ಟೆಕ್ಸ್ಟ್ ಅನ್ನು ಎಡಿಟ್ ಮಾಡಲು, 'ಸ್ಪೇಸ್ ಬಾರ್' ಅನ್ನು ಒತ್ತಿ.
05:30 ಟೆಕ್ಸ್ಟ್ ಅನ್ನು 'Exit' ಎಂದು ಬದಲಿಸಿ ಮತ್ತು 'Enter' ಅನ್ನು ಒತ್ತಿ ಖಚಿತಪಡಿಸಿ.
05:36 'Exit' ಮೆನ್ಯೂ ಐಟಂಗಾಗಿ, ' ಆಕ್ಷನ್ ಹ್ಯಾಂಡ್ಲರ್ ' (action handler) ಅನ್ನು ಸೂಚಿಸಿ.
05:41 'Exit' ಮೆನ್ಯೂ ಐಟಂ ಅನ್ನು ರೈಟ್-ಕ್ಲಿಕ್ ಮಾಡಿ.
05:44 ಕಾಂಟೆಕ್ಸ್ಟ್ ಮೆನ್ಯೂ ದಲ್ಲಿ, ಕ್ರಮವಾಗಿ 'Events > Action > Action Performed' ಇವುಗಳನ್ನು ಆರಿಸಿಕೊಳ್ಳಿ.
05:51 'GUI ಬಿಲ್ಡರ್', ತನ್ನಿಂದ ತಾನೆ source ವ್ಹ್ಯೂ ಗೆ ಬದಲಾಯಿಸುತ್ತದೆ.
05:56 'ExitActionPerformed()' ಎಂಬ ಒಂದು ಹೊಸ 'ಇವೆಂಟ್ ಹ್ಯಾಂಡ್ಲರ್ ಮೆಥಡ್' ತಯಾರಾಗಿದೆ.
06:02 'ನ್ಯಾವಿಗೇಟರ್' ವಿಂಡೋದಲ್ಲಿ, 'OpenActionPerformed()' ನೋಡ್ ನ ಮೇಲ್ಗಡೆ, ' ExitActionPerformed()' ನೋಡ್ ಕಾಣಿಸಿಕೊಳ್ಳುತ್ತದೆ.
06:12 ಒಂದುವೇಳೆ ನಿಮಗೆ ನಿಮ್ಮ 'ನ್ಯಾವಿಗೇಟರ್' ಕಾಣದೆ ಇದ್ದಲ್ಲಿ,
06:14 ಮೆನ್ಯೂ ಬಾರ್ ನಲ್ಲಿ, Window ಎಂಬ ಮೆನ್ಯೂ ಗೆ ಹೋಗಿ.
06:18 Navigatingಅನ್ನು ಆರಿಸಿ ಮತ್ತು Navigator ಮೇಲೆ ಕ್ಲಿಕ್ ಮಾಡಿ.
06:25 ಇಲ್ಲಿ, ನೀವು 'OpenActionPerformed' ನೋಡ್ ನ ಮೇಲ್ಗಡೆ, 'ExitActionPerformed' ನೋಡ್ ಇರುವುದನ್ನು ನೋಡಬಹುದು.
06:33 'Exit' ಮೆನ್ಯೂ-ಐಟಂ ಅನ್ನು ಕಾರ್ಯಗತ ಮಾಡಲು,
06:36 'System.exit(0);' ಎಂಬ ಸ್ಟೇ ಟ್ಮೆಂಟ್ ಅನ್ನು 'ExitActionPerformed()' ಎಂಬ ಮೆಥಡ್ ನ body ಒಳಗೆ ಸೇರಿಸೋಣ.
06:47 'Design' ಮೋಡ್ ಗೆ ಹಿಂತಿರುಗಿ.
06:50 'Palette'ದಲ್ಲಿಯ 'Swing Controls' ಎಂಬ ವರ್ಗದಿಂದ ಒಂದು Text Area ಅನ್ನು'ಫಾರ್ಮ್ ' ಗೆ ಎಳೆದುತನ್ನಿ.
07:06 ನಂತರ 'File Chooser' ನಿಂದ ಪ್ರದರ್ಶಿಸಲಾಗುವ ಟೆಕ್ಟ್ಸ ಗಾಗಿ ಸ್ಥಳವನ್ನು ಮಾಡಲು, ಸೇರಿಸಲಾದ ಕಾಂಪೊನೆಂಟ್ ಗಳನ್ನು' ರಿ-ಸೈಜ ' ಮಾಡಿ.
07:18 ವೈರಿಯೇಬಲ್ ಅನ್ನು, “textarea” (ಟೆಕ್ಟ್ಸ ಎರಿಯಾ) ಎಂದು ರಿ-ನೇಮ್ ಮಾಡಿ.
07:26 ಈಗ ನಿಜವಾದ 'File Chooser' ಅನ್ನು ಸೇರಿಸೋಣ.
07:31 ನಿಮ್ಮ Navigator ವಿಂಡೋ ತೆರೆದಿರದಿದ್ದರೆ, ಅದನ್ನು ತೆರೆಯಲು ನೀವು 'Window > Navigating > Navigator' ಇವುಗಳನ್ನು ಆಯ್ಕೆಮಾಡಿ.
07:38 ಮತ್ತು, Navigator ನಲ್ಲಿ, 'Jframe' ನೋಡ್ ಅನ್ನು ರೈಟ್-ಕ್ಲಿಕ್ ಮಾಡಿ.
07:44 ಕಾಂಟೆಕ್ಸ್ಟ್ ಮೆನ್ಯೂ ನಿಂದ, ಕ್ರಮವಾಗಿ Add From Palette > Swing Windows > File Chooser ಗಳನ್ನು ಆಯ್ಕೆಮಾಡಿರಿ.
07:54 'ಫಾರ್ಮ್'ಗೆ ಒಂದು 'JFileChooser' ಅನ್ನು ಸೇರಿಸಿರುವುದನ್ನು Navigator ನಲ್ಲಿ ನೀವು ಗಮನಿಸಬಹುದು.
08:01 'JFileChooser' ನೋಡ್ ಅನ್ನು ರೈಟ್-ಕ್ಲಿಕ್ ಮಾಡಿ ಮತ್ತು ವೇರಿಯೇಬಲ್ ಅನ್ನು 'fileChooser' ಎಂದು ರಿ-ನೇಮ್ ಮಾಡಿ.
08:16 'OK' ಅನ್ನು ಕ್ಲಿಕ್ ಮಾಡಿ.
08:19 ಈಗ ನಾವು 'File Chooser' ಅನ್ನು ಸೇರಿಸಿದ್ದೇವೆ.
08:21 ಮುಂದಿನ ಹಂತದಲ್ಲಿ, ' File Chooser ' ಅನ್ನು ನಿಮಗೆ ಬೇಕಾದ ಟೈಟಲ್ ಅನ್ನು ಪ್ರದರ್ಶಿಸುವ ಹಾಗೆ ಕಾನ್ಫಿಗರ್ ಮಾಡಬೇಕು.
08:27 ನಾವು ಒಂದು 'custom file filter' ಅನ್ನು ಸಹ ಸೇರಿಸುವೆವು. ಮತ್ತು, 'File Chooser' ಅನ್ನು ನಿಮ್ಮ 'ಅಪ್ಲಿಕೇಶನ್ ' ನಲ್ಲಿ ಸಂಯೋಜಿಸುವೆವು (ಇಂಟಿಗ್ರೇಟ್ ಮಾಡುವೆವು).
08:34 Navigator ವಿಂಡೋ ದಲ್ಲಿ, 'JfileChooser' ಅನ್ನು ಆಯ್ಕೆಮಾಡಲು ಕ್ಲಿಕ್ ಮಾಡಿ.
08:38 ಈಗ ನಾವು ಅದರ ಪ್ರಾಪರ್ಟೀಗಳನ್ನು 'Properties' ಡೈಲಾಗ-ಬಾಕ್ಸ್ ನಲ್ಲಿ ಎಡಿಟ್ ಮಾಡೋಣ.
08:43 'Palette'ನ ಕೆಳಗೆ, 'Properties' ವಿಂಡೋದಲ್ಲಿ,
08:47 dialogTitle ಅನ್ನು 'This is my open dialog' ಎಂದು ಬದಲಿಸಿ.
09:00 ಖಚಿತಪಡಿಸಲು, 'Enter' ಅನ್ನು ಒತ್ತಿ.
09:03 ಈಗ, 'Source' ಮೋಡ್ ಗೆ ಬದಲಾಯಿಸಿ.
09:07 ಈಗ, ' FileChooser' ಅನ್ನು ನಿಮ್ಮ ಅಪ್ಲಿಕೇಶನ್ ನಲ್ಲಿ ಇಂಟಿಗ್ರೇಟ್ ಮಾಡಲು (ಸಂಯೋಜಿಸಲು),
09:12 ನನ್ನ ಹತ್ತಿರ ಒಂದು 'code snippet' ಇದೆ. ಅದನ್ನು ನಾನು ಕಾಪಿ ಮಾಡಿ 'OpenActionPerformed()' ಮೆಥಡ್ ನಲ್ಲಿ, ಪೇಸ್ಟ್ ಮಾಡುವೆನು.
09:20 ಈ ಉದಾಹರಣೆಯು, ಫೈಲ್ ನಲ್ಲಿರುವುದನ್ನು ಓದುತ್ತದೆ ಮತ್ತು ಅದನ್ನು 'ಟೆಕ್ಟ್ಸ ಏರಿಯಾ' ದಲ್ಲಿ ಪ್ರದರ್ಶಿಸುತ್ತದೆ.
09:27 ಯೂಸರ್ ನು ಯಾವ ಫೈಲ್ ಅನ್ನು ಕ್ಲಿಕ್ ಮಾಡಿದ್ದಾನೆ ಎಂದು ನಿರ್ಧರಿಸಲು, 'FileChooser' ನ 'getSelectedFile()' ಎಂಬ ಮೆಥಡ್ ಅನ್ನು ನಾವು ಈಗ ಕಾಲ್ ಮಾಡುತ್ತೇವೆ.
09:36 ನಾನು ಈ ಕೋಡ್ ಅನ್ನು ನನ್ನ ಕ್ಲಿಪ್-ಬೋರ್ಡ್ ನಲ್ಲಿ ಕಾಪಿ ಮಾಡಿ IDEಯ 'Source' ವ್ಹ್ಯೂ ದಲ್ಲಿ, 'OpenActionPerformed()' ಮೆಥಡ್ ನ ಒಳಗೆ ಅದನ್ನು ಪೇಸ್ಟ್ ಮಾಡುತ್ತೇನೆ.
09:51 ಒಂದುವೇಳೆ, ಎಡಿಟರ್ ನಿಮ್ಮ ಕೋಡ್ ನಲ್ಲಿ ಎರರ್ ಅನ್ನು ತೋರಿಸಿದರೆ, ಕೋಡ್ ನಲ್ಲಿ ಎಲ್ಲಾದರೂ ರೈಟ್-ಕ್ಲಿಕ್ ಮಾಡಿ ಮತ್ತು 'Fix Imports' ಅನ್ನು ಆಯ್ಕೆಮಾಡಿ.
10:00 ಈಗ, ನಾವು ಒಂದು 'custom file filter' ಅನ್ನು ಸೇರಿಸೋಣ. ಇದು, 'ಫೈಲ್ ಚೂಸರ್' '.txt' ಫೈಲ್ ಗಳನ್ನು ಮಾತ್ರ ಪ್ರದರ್ಶಿಸುವ ಹಾಗೆ ಮಾಡುತ್ತದೆ.
10:09 'Design' ಮೋಡ್ ಗೆ ಹೋಗಿ. Navigator ವಿಂಡೋ ದಲ್ಲಿ, 'fileChooser' ಅನ್ನು ಆಯ್ಕೆಮಾಡಿ.
10:16 'Properties' ವಿಂಡೋದಲ್ಲಿ, 'fileFilter' ಪ್ರಾಪರ್ಟೀ ನಂತರ ಇರುವ 'ellipsis' ಬಟನ್ ಅನ್ನು ಕ್ಲಿಕ್ ಮಾಡಿ.
10:25 'fileFilter' ಡೈಲಾಗ್- ಬಾಕ್ಸ್ ನಲ್ಲಿ, ಕಾಂಬೊ-ಬಾಕ್ಸ್ ನಿಂದ 'Custom Code' ಅನ್ನು ಆಯ್ಕೆಮಾಡಿ.
10:31 ಟೆಕ್ಸ್ಟ್ ಫೀಲ್ಡ್ ನಲ್ಲಿ, 'new MyCustomFilter()' ಎಂದು ಟೈಪ್ ಮಾಡಿ
10:41 ಮತ್ತು 'OK' ಯನ್ನು ಕ್ಲಿಕ್ ಮಾಡಿ.
10:44 ಕಸ್ಟಮ್ ಕೋಡ್ ಅನ್ನು ಕಾರ್ಯಗತ ಮಾಡಲು, ನಾವು 'MyCustomFilter ' ಕ್ಲಾಸ್ ಅನ್ನು ಬರೆಯುವೆವು.
10:52 ಈ ಇನ್ನರ್ ಅಥವಾ ಔಟರ್ ಕ್ಲಾಸ್, 'fileFilter' ಕ್ಲಾಸ್ ಅನ್ನು extend ಮಾಡುತ್ತದೆ.
10:57 ನಾನು ಈ 'ಕೋಡ್ ಸ್ನಿಪೆಟ್' ಅನ್ನು ಕಾಪಿ ಮಾಡಿ, ನಮ್ಮ 'class' ನ ಸೋರ್ಸ್ ನಲ್ಲಿ, 'import' ಸ್ಟೇಟ್ಮೆಂಟ್ ಗಳ ಕೆಳಗೆ ಅದನ್ನು ಪೇಸ್ಟ್ ಮಾಡುತ್ತೆನೆ.
11:11 ಈ ಇನ್ನರ್ ಅಥವಾ ಔಟರ್ ಕ್ಲಾಸ್, 'fileFilter' ಕ್ಲಾಸ್ ಅನ್ನು extend (ಎಕ್ಸ್ಟೆಂಡ್) ಮಾಡುವುದು.
11:20 Project ವಿಂಡೋ ದಲ್ಲಿ, 'JFileChooserDemo' ಪ್ರಾಜೆಕ್ಟ್ ನ ಮೇಲೆ ರೈಟ್-ಕ್ಲಿಕ್ ಮಾಡಿ. ಸ್ಯಾಂಪಲ್ ಪ್ರಾಜೆಕ್ಟ್ ಅನ್ನು ಆರಂಭಿಸಲು Run ಅನ್ನು ಆಯ್ಕೆಮಾಡಿ.
11:31 Run Project ಡೈಲಾಗ್- ಬಾಕ್ಸ್ ನಲ್ಲಿ, 'jfilechooserdemo.resources.JFileChooserDemo' ಎಂಬ ಮೇನ್ ಕಾಸ್ಲ್ ಅನ್ನು ಆಯ್ಕೆಮಾಡಿ.
11:41 'OK' ಮೇಲೆ ಕ್ಲಿಕ್ ಮಾಡಿ.
11:47 ರನ್ ಆಗುತ್ತಿರುವ 'Demo Application' ನಲ್ಲಿ, ಕ್ರಿಯೆಗೆ ಚಾಲನೆಯನ್ನು ನೀಡಲು File ಮೆನ್ಯುನಲ್ಲಿ 'Open' ಅನ್ನು ಆರಿಸಿಕೊಳ್ಳಿ.
11:55 ಯಾವುದೇ ಒಂದು ಟೆಕ್ಸ್ಟ್- ಫೈಲ್ ನಲ್ಲಿ ಇರುವುದನ್ನು, ಟೆಕ್ಸ್ಟ್-ಏರಿಯಾದಲ್ಲಿ ತೋರಿಸಲು, ಆ ಫೈಲ್ ಅನ್ನು ಓಪನ್ ಮಾಡಿ.
12:00 ನಾನು 'Sample.txt' ಎಂಬ ಫೈಲ್ ಅನ್ನು ಆಯ್ಕೆ ಮಾಡಿ, Open ಅನ್ನು ಆರಿಸಿಕೊಳ್ಳುತ್ತೇನೆ.
12:06 'fileChooser', ಟೆಕ್ಸ್ಟ್- ಫೈಲ್ ನಲ್ಲಿ ಇರುವುದನ್ನು ಡಿಸ್ಪ್ಲೇ ಮಾಡುತ್ತದೆ.
12:10 ಈ ಅಪ್ಲಿಕೇಶನ್ ಅನ್ನು ಕ್ಲೋಸ್ ಮಾಡಲು, File ಮೆನ್ಯುವಿನಿಂದ 'Exit' ಅನ್ನು ಆಯ್ಕೆಮಾಡಿ.
12:17 ಈ ಟ್ಯುಟೋರಿಯಲ್ ನಲ್ಲಿ, ನಾವು:
12:19 ಜಾವಾ ಅಪ್ಲಿಕೇಶನ್ ಗೆ, ಫೈಲ್ ಚೂಜರ್ ಅನ್ನು ಸೇರಿಸಲು ಮತ್ತು
12:23 ಫೈಲ್ ಚೂಜರ್ ಅನ್ನು ಕಾನ್ಫಿಗರ್ ಮಾಡಲು ಕಲಿತಿದ್ದೇವೆ.
12:27 ಅಸೈನ್ಮೆಂಟ್ ಗಾಗಿ- ನಾವು ರಚಿಸಿದ ಇದೇ 'demo project' ಅನ್ನು ಬಳಸಿ, ಈ ಕೆಳಗಿನ ವಿಶೇಷತೆಗಳನ್ನು ಸೇರಿಸಿ:
12:35 ಮೆನ್ಯುಬಾರ್ ನಲ್ಲಿ, 'Save' ಎಂಬ ಒಂದು ಮೆನ್ಯೂ ಐಟಂ ಅನ್ನು ಸೇರಿಸಿ.
12:38 ಎಲ್ಲ ಮೆನ್ಯೂ ಐಟಂ ಗಳಿಗಾಗಿ, ಕೀಬೋರ್ಡ್ ಶಾರ್ಟ್-ಕಟ್ ಗಳನ್ನು ಸೇರಿಸಿ.
12:42 ಪೈಲ್ ಅನ್ನು ಸೇವ್ ಮಾಡಲು, 'Save' ಕ್ರಿಯೆಗೆ, ಒಂದು ಕೋಡ್ ಸ್ನಿಪೆಟ್ (code snippet) ಸೇರಿಸಿ.
12:51 ನಾನು ಈಗಾಗಲೇ ಇದೇ ರೀತಿಯ ಅಸೈನ್ಮೆಂಟ್ ಅನ್ನು ಕ್ರಿಯೇಟ್ ಮಾಡಿದ್ದೇನೆ. ಇದರಲ್ಲಿ, 'ಫೈಲ್ ಚೂಜರ್', File ಮೆನ್ಯೂನಲ್ಲಿ Save ಎಂಬ ಆಯ್ಕೆಯನ್ನು ತೋರಿಸುತ್ತದೆ.
13:01 ಮತ್ತು, ನೀವು ಓಪನ್ ಮಾಡುವ ಟೆಕ್ಸ್ಟ್- ಫೈಲ್ ಅನ್ನು ಸೇವ್ ಮಾಡುವ ಆಯ್ಕೆಯನ್ನು ನಿಮಗೆ ಕೊಡುತ್ತದೆ.
13:09 ಈಗ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಬಗ್ಗೆ ಮಾಹಿತಿ:
13:12 ಸ್ಕ್ರೀನ್ ಮೇಲೆ ತೋರಿಸಿದ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋಅನ್ನು ವೀಕ್ಷಿಸಿ.
13:15 ಇದು 'ಸ್ಪೋಕನ್ ಟ್ಯುಟೋರಿಯಲ್' ಪ್ರಾಜೆಕ್ಟ್ ನ ಸಾರಾಂಶವಾಗಿದೆ.
13:19 ನಿಮಗೆ ಒಳ್ಳೆಯ ‘ಬ್ಯಾಂಡ್ವಿಡ್ತ್’ ಸಿಗದಿದ್ದರೆ, ನೀವು ವೀಡಿಯೋಅನ್ನು ಡೌನ್ಲೋಡ್ ಮಾಡಿ ನೋಡಬಹುದು.
13:24 ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ತಂಡವು, ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ.
13:30 ಮತ್ತು, ಆನ್ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರಗಳನ್ನು ಕೊಡಲಾಗುತ್ತದೆ.
13:33 ಹೆಚ್ಚಿನ ಮಾಹಿತಿಗಾಗಿ, ಈಕೆಳಗೆ ಕೊಟ್ಟಿರುವ ಲಿಂಕ್ ಅನ್ನು ಸಂರ್ಪಕಿಸಬಹುದು.

'contact@spoken-tutorial.org'

13:41 'Spoken Tutorial' ಪ್ರಕಲ್ಪವು , 'Talk to a Teacher' ಎಂಬ ಪ್ರಕಲ್ಪದ ಒಂದು ಭಾಗವಾಗಿದೆ.
13:46 ಇದು NMEICT, MHRD ಮೂಲಕ ಭಾರತ ಸರ್ಕಾರದ ಅನುದಾನವನ್ನು ಪಡೆದಿದೆ.
13:53 ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗೆ ತೋರಿಸಿದ ಲಿಂಕ್ ನಲ್ಲಿ ಲಭ್ಯವಿದೆ:

spoken-tutorial.org/NMEICT-Intro

13:59 ಈ ಟ್ಯುಟೋರಿಯಲ್, 'IT for Change' ಅವರ ಕೊಡುಗೆಯಾಗಿದೆ.
14:04 ವಂದನೆಗಳು.

Contributors and Content Editors

Sandhya.np14