Linux-AWK/C2/Conditional-statements-in-awk/Kannada
|
|
00:01 | Conditional statements in awk ಎಂಬ ಈ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
00:07 | ಈ ಟ್ಯುಟೋರಿಯಲ್ ನಲ್ಲಿ ನಾವು, awk ನಲ್ಲಿಯ if, else, else if ಗಳ ಬಗ್ಗೆ ಕಲಿಯುವೆವು. |
00:15 | ನಾವು ಇದನ್ನು ಕೆಲವು ಉದಾಹರಣೆಗಳ ಮೂಲಕ ಮಾಡುವೆವು. |
00:19 | ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು:
Ubuntu Linux 16.04 ಆಪರೇಟಿಂಗ್ ಸಿಸ್ಟಂ ಹಾಗೂ gedit ಟೆಕ್ಸ್ಟ್-ಎಡಿಟರ್ 3.20.1 ಅನ್ನು ಬಳಸುತ್ತಿದ್ದೇನೆ. |
00:32 | ನಿಮ್ಮ ಆಯ್ಕೆಯ ಯಾವುದೇ ಟೆಕ್ಸ್ಟ್-ಎಡಿಟರ್ ಅನ್ನು ನೀವು ಬಳಸಬಹುದು. |
00:36 | ಈ ಟ್ಯುಟೋರಿಯಲ್ ಅನ್ನು ಅಭ್ಯಾಸ ಮಾಡಲು, ನೀವು ನಮ್ಮ ವೆಬ್ಸೈಟ್ನಲ್ಲಿಯ ಹಿಂದಿನ awk ಟ್ಯುಟೋರಿಯಲ್ ಗಳನ್ನು ನೋಡಿರಬೇಕು. |
00:43 | ನಿಮಗೆ C ಅಥವಾ C++ ನಂತಹ ಯಾವುದೇ ಪ್ರೋಗ್ರಾಮಿಂಗ್ ಭಾಷೆಯ ಪರಿಚಯವಿರಬೇಕು. |
00:50 | ಇಲ್ಲದಿದ್ದರೆ, ದಯವಿಟ್ಟು ನಮ್ಮ ವೆಬ್ಸೈಟ್ನಲ್ಲಿನ ಈ ಟ್ಯುಟೋರಿಯಲ್ ಗಳನ್ನು ನೋಡಿ. |
00:56 | ಈ ಟ್ಯುಟೋರಿಯಲ್ ನಲ್ಲಿ ಬಳಸಲಾದ ಫೈಲ್ಗಳು, ಇದೇ ಪೇಜ್ ನಲ್ಲಿನ Code Files ಲಿಂಕ್ನಲ್ಲಿ ಲಭ್ಯವಿರುತ್ತವೆ.
ದಯವಿಟ್ಟು ಅವುಗಳನ್ನು ಡೌನ್ಲೋಡ್ ಮಾಡಿ, ಎಕ್ಸ್ಟ್ರ್ಯಾಕ್ಟ್ (extract) ಮಾಡಿ. |
01:06 | 'ಕಂಡಿಶನಲ್ ಸ್ಟೇಟ್ಮೆಂಟ್', ಕ್ರಿಯೆಯನ್ನು ಮಾಡುವ ಮೊದಲು, ಸೂಚಿಸಲಾದ ಕಂಡಿಶನ್ ಅನ್ನು ಪರೀಕ್ಷಿಸಲು (check) ನಮಗೆ ಅನುಮತಿಸುತ್ತದೆ. |
01:14 | awk ನಲ್ಲಿ if, else, else-if ಗಳಂತಹ ಕಂಡಿಶನಲ್ ಸ್ಟೇಟ್ಮೆಂಟ್ ಗಳು ಹೇಗೆ ಕೆಲಸ ಮಾಡುತ್ತವೆ ಎಂದು ತಿಳಿದುಕೊಳ್ಳೋಣ. |
01:22 | ಯಾವುದೇ ಪ್ರೋಗ್ರಾಮಿಂಗ್ ಭಾಷೆಯಲ್ಲಿ ಇರುವಂತೆ, if -else ಸ್ಟೇಟ್ಮೆಂಟ್ ನ ಸಿಂಟ್ಯಾಕ್ಸ್ ಹೀಗಿದೆ: |
01:28 | if conditional-expression1 is true, then perform action1. |
01:34 | else if conditional-expression2 is true, then perform action 2. |
01:41 | ಇದರ ನಂತರ, ಹಲವಾರು else if ಸ್ಟೇಟ್ಮೆಂಟ್ ಗಳು ಇರಬಹುದು. |
01:46 | ಕೊನೆಯಲ್ಲಿ, ನಿರ್ದಿಷ್ಟಪಡಿಸಿದ ಯಾವುದೇ conditional expressions true ಆಗಿಲ್ಲದಿದ್ದರೆ, ಆಗ action n ಅನ್ನು ಮಾಡಲಾಗುವುದು. |
01:54 | else ಮತ್ತು else-if ಭಾಗಗಳು ಐಚ್ಛಿಕವಾಗಿವೆ.
ನಾವು ಒಂದು ಉದಾಹರಣೆಯನ್ನು ನೋಡೋಣ. |
02:02 | ನಾವು ಮೊದಲು ಬಳಸಿದ awkdemo.txt ಫೈಲ್ ಅನ್ನೇ ಮತ್ತೆ ಬಳಸುತ್ತೇವೆ. |
02:10 | 8000 ರೂಪಾಯಿಗಳಿಗಿಂತ ಹೆಚ್ಚು ಸ್ಟೈಪೆಂಡ್ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ, ನಾವು ಅದನ್ನು 50% ಹೆಚ್ಚಿಸಬೇಕಾಗಿದೆ (increment) ಎಂದುಕೊಳ್ಳಿ. |
02:19 | ಈ ಕಂಡಿಶನ್ ಗಾಗಿ, ನಾವು ಒಂದು awk ಫೈಲ್ ಅನ್ನು ಕ್ರಿಯೇಟ್ ಮಾಡೋಣ. |
02:23 | ಇಲ್ಲಿ ತೋರಿಸಿರುವಂತೆ, ಈ ಕೆಳಗಿನ ಕೋಡ್ ಅನ್ನು ಟೆಕ್ಸ್ಟ್-ಎಡಿಟರ್ ನಲ್ಲಿ ಟೈಪ್ ಮಾಡಿ ಮತ್ತು ಅದನ್ನು cond dot awk ಎಂದು ಸೇವ್ ಮಾಡಿ.
ನಾನು ಇದನ್ನು ಈಗಾಗಲೇ ಮಾಡಿದ್ದೇನೆ. |
02:34 | ಇದೇ ಫೈಲ್ Code Files ಲಿಂಕ್ ನಲ್ಲಿ ಸಹ ಲಭ್ಯವಿದೆ. |
02:39 | ಈ ಕೋಡ್ನಲ್ಲಿ, ನಾವು ‘ಕೋಲನ್’ ಅನ್ನು 'ಔಟ್ಪುಟ್ ಫೀಲ್ಡ್ ಸೆಪರೇಟರ್' ಎಂದು ಸೆಟ್ ಮಾಡಿದ್ದೇವೆ. |
02:45 | ಮೊದಲನೆಯ print ಸ್ಟೇಟ್ಮೆಂಟ್, ಫೀಲ್ಡ್ ಗಳ ಶೀರ್ಷಿಕೆಗಳನ್ನು ಪ್ರಿಂಟ್ ಮಾಡುತ್ತದೆ. |
02:50 | ನಂತರ if ಸ್ಟೇಟ್ಮೆಂಟ್, 6 ನೇ ಫೀಲ್ಡ್ ನಲ್ಲಿಯ ವ್ಯಾಲ್ಯೂ 8000 ಗಿಂತ ಹೆಚ್ಚಿದೆಯೇ ಎಂದು ಪರೀಕ್ಷಿಸುತ್ತದೆ. |
02:58 | ‘ಹೌದು’ ಎಂದಾದರೆ, ಎರಡನೆಯ print ಸ್ಟೇಟ್ಮೆಂಟ್ ಅನ್ನು ಎಕ್ಸೀಕ್ಯೂಟ್ ಮಾಡಲಾಗುತ್ತದೆ. |
03:03 | ಈ print ಸ್ಟೇಟ್ಮೆಂಟ್ ನ ಒಳಗಿರುವ $6 into 1.5, 6 ನೇ ಫೀಲ್ಡ್ ನಲ್ಲಿಯ ವ್ಯಾಲ್ಯೂವನ್ನು 1.5 ರಿಂದ ಗುಣಿಸುತ್ತದೆ. |
03:13 | ಈಗ ಈ ಕೋಡ್ ಅನ್ನು ನಾವು ಎಕ್ಸೀಕ್ಯೂಟ್ ಮಾಡೋಣ. |
03:16 | CTRL, ALT ಮತ್ತು T ಕೀಗಳನ್ನು ಒತ್ತುವ ಮೂಲಕ 'ಟರ್ಮಿನಲ್' ಅನ್ನು ತೆರೆಯಿರಿ. |
03:22 | cd ಕಮಾಂಡ್ ಅನ್ನು ಬಳಸಿಕೊಂಡು, Code Files ಅನ್ನು ನೀವು ಡೌನ್ಲೋಡ್ ಮಾಡಿ, ಎಕ್ಸ್ಟ್ರ್ಯಾಕ್ಟ್ (extract) ಮಾಡಿರುವ ಫೋಲ್ಡರ್ಗೆ ಹೋಗಿ. |
03:29 | ಈಗ, ಹೀಗೆ ಟೈಪ್ ಮಾಡಿ: awk space hyphen capital F pipe symbol within double quotes space hyphen small f space cond dot awk space awkdemo dot txt.
Enter ಅನ್ನುಒತ್ತಿ. |
03:49 | ಕಂಡಿಶನ್ ಅನ್ನು ಪೂರೈಸಿದ ಕೇವಲ ಒಬ್ಬ ವಿದ್ಯಾರ್ಥಿಯ ರೆಕಾರ್ಡ್ ಅನ್ನು, ಹೆಚ್ಚಿಸಿದ ಸ್ಟೈಪೆಂಡ್ ನೊಂದಿಗೆ ಔಟ್ಪುಟ್ ತೋರಿಸುತ್ತದೆ. |
03:57 | ಈಗ, ನಿಯಮವು ಬದಲಾಗಿದೆ ಎಂದುಕೊಳ್ಳಿ: 8000 ರೂಪಾಯಿಗಳಿಗಿಂತ ಹೆಚ್ಚು ಪಡೆಯುವ ವಿದ್ಯಾರ್ಥಿಗಳಿಗೆ ಸ್ಟೈಪೆಂಡ್ ನಲ್ಲಿ 50% ಇನ್ಕ್ರಿಮೆಂಟ್, |
04:07 | ಇಲ್ಲದಿದ್ದರೆ 30% ಇನ್ಕ್ರಿಮೆಂಟ್ (increment) ಕೊಡಿ.
ನಾವು ಅದನ್ನು ಹೇಗೆ ಮಾಡಬಹುದು? |
04:13 | ನಾವು ಒಂದು else ಬ್ಲಾಕ್ ಅನ್ನು ಸೇರಿಸಬೇಕಾಗಿದೆ. |
04:16 | ಮತ್ತೊಮ್ಮೆ cond dot awk ಫೈಲ್ ಗೆ ಬದಲಾಯಿಸಿ. |
04:21 | ನಾವು ಈ ಕೆಳಗಿನ ಕೋಡ್ ನ ಸಾಲನ್ನು ಸೇರಿಸೋಣ.
ಕೊನೆಯ, ಮುಚ್ಚುವ 'ಕರ್ಲಿ ಬ್ರೇಸ್' ಮೊದಲು, Enter ಅನ್ನುಒತ್ತಿ. |
04:30 | else , Enter ಅನ್ನುಒತ್ತಿ. |
04:33 | print space dollar 2 comma dollar 6 comma dollar 6 into 1.3 |
04:42 | ಫೈಲ್ ಅನ್ನು ಸೇವ್ ಮಾಡಿ ಮತ್ತು ಟರ್ಮಿನಲ್ ಗೆ ಬದಲಾಯಿಸಿ. |
04:46 | ಹಿಂದೆ ಎಕ್ಸೀಕ್ಯೂಟ್ ಮಾಡಲಾದ ಕಮಾಂಡ್ ಅನ್ನು ಪಡೆಯಲು, ಅಪ್-ಆರೋ (up arrow) ಕೀಯನ್ನು ಒತ್ತಿ ಮತ್ತು Enter ಅನ್ನು ಒತ್ತಿ. |
04:53 | ಈಗ ಔಟ್ಪುಟ್ ಅನ್ನು ಗಮನಿಸಿ.
ಯೋಜನಾ ಚೌಧರಿ ಈಮೊದಲು 1000 ಪಡೆಯುತ್ತಿದ್ದಳು. ಈಗ ಅವಳಿಗೆ 1300 ಸಿಗುತ್ತಿದೆ. |
05:04 | ನಿಯಮಗಳನ್ನು ಮತ್ತೆ ಬದಲಾಯಿಸೋಣ.
8000 ರೂಪಾಯಿಗಳಿಗಿಂತ ಹೆಚ್ಚು ಪಡೆಯುತ್ತಿರುವ ವಿದ್ಯಾರ್ಥಿಗೆ 50% ಇನ್ಕ್ರಿಮೆಂಟ್, |
05:13 | 4000 ರೂಪಾಯಿಗಳಿಗಿಂತ ಹೆಚ್ಚು ಪಡೆಯುತ್ತಿರುವ ವಿದ್ಯಾರ್ಥಿಗೆ 40% ಇನ್ಕ್ರಿಮೆಂಟ್,
ಇಲ್ಲದಿದ್ದರೆ 30% ಇನ್ಕ್ರಿಮೆಂಟ್ ಕೊಡಿ. |
05:23 | ಕೋಡ್ಗೆ ಬದಲಾಯಿಸಿ. ತೋರಿಸಿರುವಂತೆ ಕೋಡ್ ಅನ್ನು ಅಪ್ಡೇಟ್ ಮಾಡಿ. |
05:29 | ಫೈಲ್ ಅನ್ನು ಸೇವ್ ಮಾಡಿ ಮತ್ತು ಟರ್ಮಿನಲ್ ಗೆ ಬದಲಾಯಿಸಿ. |
05:33 | ನಾನು ಟರ್ಮಿನಲ್ ಅನ್ನು ಖಾಲಿ ಮಾಡುತ್ತೇನೆ. |
05:36 | ಈಗ, ಹಿಂದೆ ಎಕ್ಸೀಕ್ಯೂಟ್ ಮಾಡಲಾದ ಕಮಾಂಡ್ ಅನ್ನು ಪಡೆಯಲು, ಅಪ್-ಆರೋ (up arrow) ಕೀಯನ್ನು ಒತ್ತಿ ಮತ್ತು Enter ಅನ್ನು ಒತ್ತಿ. |
05:44 | ಈ ಬಾರಿ, ವಿದ್ಯಾರ್ಥಿ ಮೀರಾ ನಾಯರ್ 40% ಹೆಚ್ಚಳವನ್ನು ಪಡೆದಿರುವುದನ್ನು ಗಮನಿಸಿ. |
05:51 | ಇಲ್ಲಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ. |
05:54 | ಸಂಕ್ಷಿಪ್ತವಾಗಿ, ಈ ಟ್ಯುಟೋರಿಯಲ್ ನಲ್ಲಿ ನಾವು:
awk ನಲ್ಲಿ if, else, else if ಗಳಂತಹ ಕಂಡಿಶನಲ್ ಸ್ಟೇಟ್ಮೆಂಟ್ ಗಳ ಬಗ್ಗೆ ಕಲಿತಿದ್ದೇವೆ. |
06:05 | ಒಂದು ಅಸೈನ್ಮೆಂಟ್:
ಈ ನಿಯಮಗಳ ಪ್ರಕಾರ ಗ್ರೇಡ್ ಗಳನ್ನು ಕೊಡಿ: mark 90 ಕ್ಕಿಂತ ಹೆಚ್ಚು ಅಥವಾ ಸಮ ಇದ್ದರೆ, ಗ್ರೇಡ್ A ಆಗಿರುತ್ತದೆ. |
06:15 | mark 80 ಕ್ಕಿಂತ ಹೆಚ್ಚು ಅಥವಾ ಸಮ ಇದ್ದು, 90 ಕ್ಕಿಂತ ಕಡಿಮೆ ಇದ್ದರೆ, ಗ್ರೇಡ್ B, |
06:23 | mark 70 ಕ್ಕಿಂತ ಹೆಚ್ಚು ಅಥವಾ ಸಮ ಇದ್ದು, 80 ಕ್ಕಿಂತ ಕಡಿಮೆ ಇದ್ದರೆ, ಗ್ರೇಡ್ C, |
06:30 | mark 60 ಕ್ಕಿಂತ ಹೆಚ್ಚು ಅಥವಾ ಸಮ ಇದ್ದು, 70 ಕ್ಕಿಂತ ಕಡಿಮೆ ಇದ್ದರೆ, ಗ್ರೇಡ್ D,
ಇಲ್ಲದಿದ್ದರೆ ಗ್ರೇಡ್ F ಆಗಿರುತ್ತದೆ. |
06:41 | ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋ, “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ಸಾರಾಂಶವಾಗಿದೆ. ಇದನ್ನು ಡೌನ್ಲೋಡ್ ಮಾಡಿ ವೀಕ್ಷಿಸಿ. |
06:49 | “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ತಂಡವು ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ಆನ್ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣ ಪತ್ರವನ್ನು ಕೊಡುತ್ತದೆ. |
06:58 | ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಮಗೆ ಬರೆಯಿರಿ. |
07:02 | ಈ 'ಸ್ಪೋಕನ್ ಟ್ಯುಟೋರಿಯಲ್' ನಲ್ಲಿ ನಿಮಗೆ ಪ್ರಶ್ನೆಗಳಿವೆಯೇ?
ದಯವಿಟ್ಟು ಈ ಸೈಟ್ ಗೆ ಭೆಟ್ಟಿಕೊಡಿ: |
07:08 | "ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪವು NMEICT, MHRD ಮೂಲಕ ಭಾರತ ಸರ್ಕಾರದ ಅನುದಾನವನ್ನು ಪಡೆದಿದೆ.
ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುತ್ತದೆ. |
07:20 | ಈ ಸ್ಕ್ರಿಪ್ಟ್ ನ ಅನುವಾದಕಿ IIT Bombay ಯಿಂದ ಸಂಧ್ಯಾ ಪುಣೇಕರ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.
ಧನ್ಯವಾದಗಳು. |