Linux/C2/Simple-filters/Kannada
From Script | Spoken-Tutorial
Time | Narration |
00:00 | ಲಿನಕ್ಸ್ ನಲ್ಲಿ ಸಿಂಪಲ್ ಫಿಲ್ಟರ್ ನ ಬಗ್ಗೆ ಇರುವ ಸ್ಪೋಕನ್ ಟ್ಯುಟೋರಿಯಲ್ ಗೆ ತಮಗೆಲ್ಲರಿಗೂ ಸ್ವಾಗತ. |
00:08 | ಇಲ್ಲಿ ನಾವು ಹೆಡ್, ಟೇಲ್, ಸಾರ್ಟ್, ಕಟ್ ಮತ್ತು ಪೇಸ್ಟ್ ಗಳ ಬಗ್ಗೆ ಕಲಿಯಲಿದ್ದೇವೆ. |
00:17 | ಇವೆಲ್ಲಾ ಕಮಾಂಡ್ ಲೈನ್ ಟೆಕ್ಸ್ಟ್ ಮಾನ್ಯುಪ್ಯುಲೇಶನ್ ಟೂಲ್ ಗಳಾಗಿವೆ. |
00:22 | ನಿಮಗೆ ಟರ್ಮಿನಲ್ ಮೇಲೆ ಹ್ಯಾಷ್ (#) ಸಿಂಬಲ್ ಕಾಣಿಸಿದರೆ, ಆ ಕಮಾಂಡ್ ಗಳನ್ನು ಚಲಾಯಿಸಲು ನೀವು ರೂಟ್ ಯೂಸರ್ ಆಗಬೇಕಾಗುತ್ತದೆ. (sudo su ಅಥವಾ su root) |
00:29 | ನಿಮಗೆ ಟರ್ಮಿನಲ್ ನಲ್ಲಿ ಒಂದು ಡಾಲರ್ ಸಿಂಬಲ್ ಕಾಣಿಸಿದರೆ, ಆ ಕಮಾಂಡ್ ಗಳನ್ನು ಚಲಾಯಿಸಲು ನೀವು ಸಾಮಾನ್ಯ ಯೂಸರ್ ಆಗಿದ್ದರೆ ಸಾಕು. |
00:38 | ನೀವು ಫೈಲ್ ಗಳು ಸೇವ್ ಆಗುವ ಯಾವುದೇ ಪಾತ್ ನ್ನು ಬದಲಾಯಿಸದೇ ಡೀಫಾಲ್ಟ್ ಇನ್ಸ್ಟಾಲೇಶನ್ ಮಾಡಿದ್ದೀರಿ ಎಂದು ನಾನು ಭಾವಿಸುತ್ತೇನೆ. |
00:46 | ನಾನು ಈ ಟ್ಯುಟೋರಿಯಲ್ ನಲ್ಲಿ ಉಬುಂಟು 10.10 ಅನ್ನು ಬಳಸುತ್ತಿದ್ದೇನೆ. |
00:51 | ಈ ಟ್ಯುಟೋರಿಯಲ್ ಗೆ ಬೇಕಾಗಿರುವ ಅಗತ್ಯತೆಗಳೇನೆಂದರೆ, ಮೌಸ್ ಮತ್ತು ಕೀಬೋರ್ಡ್ ನ ಬಳಕೆ ಹಾಗೂ ವಿಂಡೋನಲ್ಲಿ ಮೆಗ್ಸಿಮೈಸ್ ಮತ್ತು ಮಿನಿಮೈಸ್ ಬಟನ್ ಗಳ ಬಳಕೆ. |
01:02 | ನಾವು, ಡೀಫಾಲ್ಟ್ ಆಗಿ ಫೈಲ್ ನ ಮೊದಲ 10 ಸಾಲುಗಳನ್ನು ತೋರಿಸಲು ascii ಫೈಲ್ ಹೆಸರನ್ನು ಹೊಂದಿರುವ head ಕಮಾಂಡ್ ಅನ್ನು ಬಳಸುತ್ತೇವೆ. |
01:10 | ಈಗ ನಾವು ಒಂದು ಫೈಲ್ ನ್ನು ರಚಿಸೋಣ. ಈಗ ನಾನು ಅದನ್ನು ಪ್ರಾಯೋಗಿಕವಾಗಿ ತೋರಿಸಲು ESC (ಎಸ್ಕೇಪ್) ಕೀಯನ್ನು ಒತ್ತುತ್ತಿದ್ದೇನೆ. |
01:17 | ಕ್ರಮವಾಗಿ Applications > Accessories > Text Editor ಗೆ ಹೋಗಿ. |
01:24 | ಸಮಯದ ಅಭಾವದಿಂದಾಗಿ ನಾನು ಈಗಾಗಲೇ ಇನ್ನೊಂದು ಫೈಲ್ ನಲ್ಲಿ ಇರುವ ಸಂಖ್ಯೆಗಳನ್ನು ಕಾಪಿ ಮತ್ತು ಪೇಸ್ಟ್ ಮಾಡುತ್ತೇನೆ. |
01:38 | ಫೈಲ್ ಗೆ ಹೋಗಿ ಸೇವ್ ಮಾಡಿ. |
01:41 | ಫೈಲ್ ನ್ನು numbers dot txt ಎಂದು ಹೆಸರಿಸಿ, ಸೇವ್ ಮಾಡಿ. |
01:48 | ಆ ಫೈಲನ್ನು ಕ್ಲೋಸ್ ಮಾಡಿ. |
01:53 | ಈಗ Applications > Accessories > Terminal ಗೆ ಹೋಗಿ. |
02:01 | ನಮಗೆ ನೋಡಲು ಸಾಧ್ಯವಾದರೆ ನಾವು ರಚಿಸಿರುವ ಫೈಲ್ ನ್ನು ಈಗ ನೋಡಲು ಪ್ರಯತ್ನಿಸೋಣ. |
02:05 | ls ಎಂದು ಟೈಪ್ ಮಾಡಿ, ಎಂಟರ್ ಒತ್ತಿ. |
02:09 | ನಾವು ಇಲ್ಲಿ ಎಲ್ಲಾ ಫೈಲ್ ಗಳನ್ನೂ ಹಾಗೂ ಫೋಲ್ಡರ್ ಗಳನ್ನೂ ನಮ್ಮ ಹೋಂ ಡೈರೆಕ್ಟರಿಯಲ್ಲಿ ಪಟ್ಟಿ ಮಾಡಿದ್ದೇವೆ. |
02:15 | ಈಗ ನಾವು ರಚಿಸಿರುವ ಫೈಲ್ ನಲ್ಲಿರುವ ವಿಷಯವನ್ನು ಓದಲು ನಾವು cat ಕಮಾಂಡ್ ನ್ನು ಬಳಸಬಹುದು. |
02:21 | cat num, ಫೈಲ್ ನ ಹೆಸರು ತಾನಾಗಿಯೇ ಬರಲು ಟ್ಯಾಬ್ ಒತ್ತಿ ನಂತರ ಎಂಟರ್ ಒತ್ತಿ. |
02:29 | ಹೀಗೆಯೇ ನಾವು head ಕಮಾಂಡ್ ನ ಜೊತೆ ಮಾಡೋಣ. |
02:33 | Head numbers dot txt. ಎಂಟರ್ ಒತ್ತಿ. |
02:39 | ಈಗ ಮೊದಲ 10 ಸಾಲುಗಳು ಪ್ರದರ್ಶಿತವಾಗಿದೆ. |
02:43 | ನಮಗೆ ಮೊದಲ 5 ಸಾಲುಗಳನ್ನು ನೋಡಬೇಕಾದಲ್ಲಿ, head ಕಮಾಂಡ್ ಮತ್ತು ಫೈಲ್ ನ ನಡುವೆ hyphen n5 ಆಯ್ಕೆಯನ್ನು ಬಳಸಿ. |
02:52 | ಅಪ್ ಏರೋ ಕೀ ಒತ್ತಿ ನಡುವೆ ಬನ್ನಿ, hyphen n5 ಬರೆದು ಎಂಟರ್ ಒತ್ತಿ. |
02:58 | ಈಗ ಮೊದಲ 5 ಸಾಲುಗಳು ಮಾತ್ರ ಕಾಣಿಸುತ್ತಿವೆ. |
03:02 | ಈಗ ನಾವು ಪ್ರೆಸೆಂಟೇಶನ್ ಗೆ ಹಿಂತಿರುಗೋಣ. |
03:08 | F5. |
03:14 | tail ಕಮಾಂಡ್, head ಕಮಾಂಡ್ ಗೆ ಅತ್ಯಂತ ವಿರುದ್ದವಾಗಿದ್ದು, ಅದು ಡೀಫಾಲ್ಟ್ ಆಗಿ ಫೈಲ್ ನ ಕೊನೆಯ 10 ಸಾಲುಗಳನ್ನು ತೋರಿಸುತ್ತದೆ. |
03:22 | ಈಗ ನಾನು ಟರ್ಮಿನಲ್ ಗೆ ಹೋಗಲು ALT ಮತ್ತು Tab ಒತ್ತುತ್ತೇನೆ. |
03:27 | tail numbers dot txt |
03:31 | ನಮಗೆ ಕೊನೆಯ 5 ಸಾಲುಗಳನ್ನು ಮಾತ್ರ ನೋಡಬೇಕಾದಲ್ಲಿ, tail ಕಮಾಂಡ್ ಮತ್ತು ಫೈಲ್ ನ ನಡುವೆ hyphen n5 ಆಯ್ಕೆಯನ್ನು ಬಳಸಿ. |
03:40 | hyphen n5, ಎಂಟರ್ ಒತ್ತಿ. |
03:45 | ಈಗ ಸ್ಲೈಡ್ ಗೆ ಹಿಂತಿರುಗೋಣ. |
03:50 | ಲಾಗ್ ಫೈಲ್ ನಲ್ಲಿ ಸಿಸ್ಟಂ ನಲ್ಲಿ ನಡೆದ ಘಟನೆಗಳು ಇರುತ್ತವೆ. |
03:55 | Auth dot log ಎಂಬ ಫೈಲ್, ಯಾರು ಲಾಗ್ ಇನ್ ಹಾಗೂ ಲಾಗ್ ಔಟ್ ಆಗುತ್ತಾರೋ ಅವರ ಲಾಗ್ ಗಳನ್ನು ನಿಯಂತ್ರಿಸುತ್ತದೆ. |
04:01 | tail ಕಮಾಂಡ್ ನ ತುಂಬಾ ಉಪಯುಕ್ತವಾದ ವಿಕಲ್ಪವೆಂದರೆ, hyphen f. ಇದನ್ನು ಲಾಗ್ ಫೈಲ್ ನ ಕೊನೆಯನ್ನು ಅನುಸರಿಸಲು ಬಳಸಲಾಗುತ್ತದೆ. |
04:09 | ಒಂದು ವೇಳೆ, ಲಾಗ್ ಫೈಲ್ ಗೆ ಒಂದು ಹೊಸ ಸಾಲು ಸೇರಿಕೊಂಡರೆ, ಟೈಲ್ ಕಮಾಂಡ್ ಅದನ್ನು ಕೊನೆಯ ಸಾಲು ಎಂದು ಪರಿಗಣಿಸಿ, ಡೀಫಾಲ್ಟ್ ಆಗಿ ಅದರ ಮೇಲಿನ 10 ಸಾಲುಗಳನ್ನು ಪ್ರದರ್ಶಿಸುತ್ತದೆ. |
04:18 | ಟರ್ಮಿನಲ್ ಗೆ ಹೋಗಿ. |
04:21 | tail hyphen f forward slash (/) var log auth dot log |
04:31 | ಈಗ ನಾನು ಟರ್ಮಿನಲ್ ನ್ನು ಚಿಕ್ಕದಾಗಿಸುತ್ತೇನೆ. |
04:39 | ಈಗ ನಾವು ಇನ್ನೊಂದು ಟರ್ಮಿನಲ್ ನ್ನು ಓಪನ್ ಮಾಡೋಣ. Application- > Accessories - > Terminal. |
04:46 | ಈಗ ನಾನು ಈ ಟರ್ಮಿನಲ್ ನ್ನು ಚಿಕ್ಕದಾಗಿಸುತ್ತೇನೆ. |
04:52 | ಇದರಿಂದಾಗಿ ನಾನು ಒಂದೇ ಸ್ಕ್ರೀನ್ ನಲ್ಲಿ ಟೈಲ್ ಎಂಬುದು ಹೇಗೆ ಲಾಗ್ ಫೈಲ್ ನ ಕೊನೆಯ ಸಾಲನ್ನು ತಲುಪುತ್ತದೆ ಎಂಬುದನ್ನು ತೋರಿಸಬಹುದು. |
05:00 | ಈಗ su ರೂಪದಲ್ಲಿ ತಮ್ಮ ಹೆಸರನ್ನು ಪ್ರಯತ್ನಿಸಿ. ನಂತರ ಎಂಟರ್ ಒತ್ತಿ. |
05:05 | ಅದರಲ್ಲಿ ತಪ್ಪಾದ ಪಾಸ್ ವರ್ಡ್ ಹಾಕಿ ಎಂಟರ್ ಒತ್ತಿ. |
05:08 | ಈಗ ನೀವು, tail ಕಾರ್ಯನಿರತವಾಗಿರುವ ಟರ್ಮಿನಲ್ ನಲ್ಲಿ ಹೊಸ ಲಾಗ್ ಸೇರಿರುವುದನ್ನು ಕಾಣಬಹುದು. |
05:15 | ದಿನಾಂಕ ಮತ್ತು ಸಮಯವು ದೃಢೀಕರಣದ ವೈಫಲ್ಯವು ಯಾವಾಗ ಆಯಿತೆಂದು ಸೂಚಿಸುತ್ತದೆ. |
05:23 | ಸಿಸ್ಟಂ ನ ದಿನಾಂಕ ಮತ್ತು ಸಮಯವನ್ನು ಪರೀಕ್ಷಿಸಲು date ಎಂದು ಟೈಪ್ ಮಾಡಿ. |
05:32 | ಟರ್ಮಿನಲ್ ನ್ನು ಕ್ಲೋಸ್ ಮಾಡಲು exit ಎಂದು ಟೈಪ್ ಮಾಡಿ. |
05:36 | ಕಾರ್ಯನಿರತವಾಗಿರುವ tail ಕಮಾಂಡ್ ನ್ನು ಕ್ಲೋಸ್ ಮಾಡಲು CTRL C ಒತ್ತಿ, ಮತ್ತು ಸ್ಕ್ರೀನ್ ನ್ನು ದೊಡ್ಡದು ಮಾಡಿ. |
05:51 | ನಾವು ಹಿಂದಿನ ಉದಾಹರಣೆಯಲ್ಲಿ auth dot log ಫೈಲ್ ನ್ನು ಮಾತ್ರ ನೋಡಿದ್ದೇವೆ. |
05:57 | ಇವುಗಳು ಲಿನಕ್ಸ್ ನಲ್ಲಿ ಸಾಮಾನ್ಯವಾಗಿ ಬಳಸಲ್ಪಡುವ ಲಾಗ್ ಫೈಲ್ ಗಳು. |
06:01 | ಒಬ್ಬ ಲಿನಕ್ಸ್ ಸಿಸ್ಟಂ ಅಡ್ಮಿನಿಸ್ಟ್ರೇಟರ್, ಸಿಸ್ಟಂ ನಲ್ಲಿ ಏನಾದರೂ ತೊಂದರೆ ಸಂಭವಿಸಿದರೆ ಪರಿಹಾರ ಹುಡುಕುವ ಸಲುವಾಗಿ ಹೆಚ್ಚಿನ ಮಾಹಿತಿಗಾಗಿ ಈ ಲಾಗ್ ಫೈಲ್ ಗಳನ್ನು ನೋಡುತ್ತಾನೆ. |
06:12 | sort ಎಂಬ ಕಮಾಂಡ್ ಹೆಸರಿಗನುಗುಣವಾಗಿ, ಒಂದು ಫೈಲ್ ನಲ್ಲಿರುವ ವಿಷಯಗಳನ್ನು ನಮಗಾಗಿ ಏರಿಕೆ ಹಾಗೂ ಇಳಿಕೆ ಕ್ರಮದಲ್ಲಿ ಜೋಡಿಸುತ್ತದೆ. |
06:23 | sort numbers dot txt. ಇದು ನಮ್ಮ numbers dot txt ನ್ನು ಏರಿಕೆ ಕ್ರಮದಲ್ಲಿ ಜೋಡಿಸುತ್ತದೆ. |
06:31 | ಇದರಲ್ಲಿ ಒಂದು ವಿಶೇಷವಿದೆ. sort ಎಂಬುದು ಸಂಖ್ಯೆಯ ಮೊದಲ ಅಂಕೆಯನ್ನು ಮಾತ್ರ ಪರಿಗಣಿಸುತ್ತಿದೆ. ಹಾಗಾಗಿ, 2 ಎಂಬುದರ ಮುಂಚೆಯೇ 10, 11, 12 ಕಾಣಿಸಿಕೊಳ್ಳುತ್ತವೆ. |
06:43 | ಇದನ್ನು ತಪ್ಪಿಸಲು, hyphen n ಆಯ್ಕೆಯನ್ನು ಸೇರಿಸಿ. hyphen n ಮತ್ತು ಎಂಟರ್ ಒತ್ತಿ. |
06:53 | ಈಗ sort, ಸಂಪೂರ್ಣ ಸಂಖ್ಯೆಯನ್ನು ಪರಿಗಣಿಸುತ್ತದೆ. |
06:58 | number dot txt ನ್ನು ಇಳಿಕೆಯ ಕ್ರಮದಲ್ಲಿ ಜೋಡಿಸಲು hyphen r ಆಯ್ಕೆಯನ್ನು ಸೇರಿಸಿ. |
07:09 | ನಾವು ಈ ಫೈಲ್ ನಲ್ಲಿ ಕೆಲವು ಸಂಖ್ಯೆಗಳು ಪುನರಾವರ್ತಿತವಾಗಿರುವುದನ್ನು ನೋಡಬಹುದು. ಆ ತರಹದ ವಿಶಿಷ್ಟ ಸಂಖ್ಯೆಯನ್ನು ತೆಗೆಯಲು hyphen u ಅನ್ನು ಸೇರಿಸಿ. |
07:17 | ಈಗ ಟರ್ಮಿನಲ್ ಗೆ ಹೋಗಿ. |
07:20 | ಅಪ್ ಏರೋ ಕೀ ಒತ್ತಿ. |
07:22 | u ಒತ್ತಿ, ಎಂಟರ್ ಒತ್ತಿ. |
07:26 | ಮೊದಲು ಎರಡು 2 ಗಳು ಇದ್ದವು, ಈಗ ಒಂದೇ 2 ಇದೆ. |
07:38 | ಈಗ ನಾವು ಫೈಲ್ ನ ಕಂಟೆಂಟ್ ಅನ್ನು ಒಂದು ನಿಗದಿಪಡಿಸಿದ ಕಾಲಂನಲ್ಲಿ ಹೇಗೆ ವಿಂಗಡಿಸುವುದೆಂದು ನೋಡೋಣ. |
07:44 | ಈಗ ನಾವು ಒಂದು ಫೈಲ್ ನ್ನು ರಚಿಸೋಣ, ಅದಕ್ಕಾಗಿ |
07:48 | Applications > Accessories > Text Editor ಗೆ ಹೋಗಿ. |
07:57 | ಸಮಯದ ಅಭಾವದಿಂದಾಗಿ ನಾನು ಈಗಾಗಲೇ ಇನ್ನೊಂದು ಫೈಲ್ ನಲ್ಲಿರುವ ಡಾಟಾವನ್ನು ಕಾಪಿ ಮತ್ತು ಪೇಸ್ಟ್ ಮಾಡುತ್ತೇನೆ, CTRL+C; CTRL+V. |
08:11 | ಫೈಲ್ ನ್ನು marks dot txt ಎಂದು ಹೆಸರಿಸಿ ಮತ್ತು save ಒತ್ತಿ. |
08:21 | ಈ ಫೈಲ್ ನಲ್ಲಿರುವ ಅಂಕಗಳ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳಬೇಡಿ. ಏಕೆಂದರೆ, ಕಡಿಮೆ ಅಂಕಗಳನ್ನು ನೀಡಿದ್ದಕ್ಕೆ ಯಾರಾದರೂ ನನ್ನನ್ನು ಆರೋಪಿಸುವುದು ನನಗೆ ಇಷ್ಟವಿಲ್ಲ. |
08:28 | ಫೈಲನ್ನು ಕ್ಲೋಸ್ ಮಾಡಿ. |
08:33 | ಈಗ ನಾವು marks dot txt file ನ ಎರಡನೇಯ ಕಾಲಂನ ಪ್ರಕಾರ ವಿಂಗಡಣೆ ಮಾಡೋಣ. |
08:40 | ಟರ್ಮಿನಲ್ ಗೆ ಹೋಗಿ. |
08:42 | sort space marks dot txt space hyphen t space open inverted commas space close inverted commas space |
08:53 | ಇಲ್ಲಿ Hyphen t ಎಲ್ಲೆಯನ್ನು ನಿರ್ಧರಿಸುತ್ತದೆ ಹಾಗೂ ಕೋಟ್ ಗಳ ನಡುವಿನ ಜಾಗ ಅದನ್ನು ಪ್ರತಿನಿಧಿಸುತ್ತದೆ. |
09:02 | hyphen k2 ಎನ್ನುವುದು ವಿಂಗಡಣೆ ಮಾಡಬೇಕಾಗಿರುವ ಎರಡನೇ ಕಾಲಂ ಅನ್ನು ಸೂಚಿಸುತ್ತದೆ. |
09:14 | ಎಂಟರ್ ಒತ್ತಿ. |
09:20 | cat marks dot txt |
09:24 | ನಾವು ಎರಡನೇ ಕಾಲಂಗೆ ತಕ್ಕಂತೆ ಮಾತ್ರ ವಿಂಗಡಣೆ ಮಾಡಿದಾಗ ನಿಮಗೆ Avir ಮೇಲೆ ಹೋಗಿ, Bala ಕೆಳಗೆ ಬಂದಿರುವುದು ಕಂಡುಬಂದರೆ, ಅದು ಮೂಲ ಫೈಲ್ ಎಂದರ್ಥ. |
09:43 | cut ಕಮಾಂಡ್ ನ್ನು ಫೈಲ್ ನ ಕೆಲವು ಮಾಹಿತಿಗಳನ್ನು ಕಟ್ ಮಾಡಲು ಬಳಸುತ್ತಾರೆ. |
09:51 | ನಾವು ಈಗ marks dot txt ನಿಂದ ಹೆಸರುಗಳನ್ನು ತೆಗೆದು ಹಾಕೋಣ. |
09:55 | ಈಗ ನಾವು ಟರ್ಮಿನಲ್ ಗೆ ಹೋಗೋಣ. ALT Tab |
09:58 | cut space marks dot txt space hyphen d space open inverted commas space close inverted commas space. |
10:08 | ಈ ಕಮಾಂಡ್ ನಲ್ಲಿ d ಯು ಎಲ್ಲೆ ನಿರ್ಧರಿಸುತ್ತದೆ ಮತ್ತು ಕೋಟ್ ಗಳ ನಡುವಿನ ಜಾಗವು ಅದನ್ನು ಪ್ರತಿನಿಧಿಸುತ್ತದೆ. |
10:20 | hyphen f2 ಎರಡನೇ ಕಾಲಂ ಅನ್ನು ಸೂಚಿಸುತದೆ. ನಂತರ ಎಂಟರ್ ಒತ್ತಿ. |
10:31 | paste ಕಮಾಂಡ್ ಎನ್ನುವುದು ಎರಡು ಅಥವಾ ಹೆಚ್ಚಿನ ಫೈಲ್ ಗಳ ಲೈನ್ ಗಳನ್ನು ಒಂದೇ ಫೈಲ್ ನಲ್ಲಿ ಸೇರಿಸುತ್ತದೆ. |
10:36 | ಈಗ ನಾವು numbers dot txt ಮತ್ತು marks dot txt ಎರಡನ್ನೂ ಉಪಯೋಗಿಸೋಣ. |
10:41 | ಟರ್ಮಿನಲ್ ಗೆ ಹೋಗೋಣ. |
10:43 | numbers dot txt ಮತ್ತು marks dot txt ಅನ್ನು ಪೇಸ್ಟ್ ಮಾಡಿ ಮತ್ತು ಎಂಟರ್ ಒತ್ತಿ. |
10:50 | ಈಗ numbers dot txt ನ ಮೊದಲ ಸಾಲು marks dot txt ನ ಮೊದಲ ಸಾಲಿನೊಂದಿಗೆ ಸೇರಿಕೊಂಡಿದೆ. |
10:57 | ನಾವು ಈ ಔಟ್ ಪುಟ್ ನ್ನು concatefile dot txt ಎನ್ನುವ ಬೇರೆ ಫೈಲ್ ಗೆ ರಿಡೈರೆಕ್ಟ್ ಮಾಡಲು ರಿಡೈರೆಕ್ಟ್ ಕೀಯನ್ನು ಬಳಸಬಹುದು. |
11:06 | ಟರ್ಮಿನಲ್ ಗೆ ಹೋಗೋಣ. |
11:08 | ಅಪ್ ಏರೋ ಕೀಯನ್ನು ಒತ್ತಿ, ರಿಡೈರೆಕ್ಟ್ ಕೀ ಆದ ಗ್ರೇಟರ್ ದೆನ್ ಗುರುತನ್ನು ಒತ್ತಿ, concatfile dot txt, ನಂತರ ಎಂಟರ್ ಒತ್ತಿ. |
11:18 | Cat concatfile dot txt |
11:22 | ಸ್ಲೈಡ್ ಗೆ ಹೋಗೋಣ. |
11:25 | paste ಕಮಾಂಡ್ tab ನಿಂದ ನಿರ್ಧರಿಸಲ್ಪಟ್ಟ ಸಂಖ್ಯೆಗಳನ್ನು ಕ್ರಮವಾಗಿ ತೋರಿಸಬೇಕೆಂದು ಇಚ್ಛಿಸಿದಲ್ಲಿ ನಾವು hyphen s ನ್ನು ಬಳಸಬಹುದು. |
11:34 | paste hyphen s |
11:39 | numbers dot txt |
11:43 | ಸ್ಲೈಡ್ ಗೆ ಹೋಗಿ. |
11:45 | ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ Talk to a Teacher ಎಂಬ ಪರಿಯೋಜನೆಯ ಭಾಗವಾಗಿದೆ. |
11:49 | ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ. |
11:55 | ಇದರ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿದೆ. |
11:59 | ಈ ಪಾಠದ ಅನುವಾದಕ ಮತ್ತು ಪ್ರವಾಚಕ ಐ. ಐ. ಟಿ. ಬಾಂಬೆಯಿಂದ ವಾಸುದೇವ. ಧನ್ಯವಾದಗಳು. |