Linux/C2/Desktop-Customization-16.04/Kannada

From Script | Spoken-Tutorial
Jump to: navigation, search
Time Narration
00:01 Ubuntu Linux 16.04 operating system ನಲ್ಲಿ Desktop Customization ಎಂಬ ಈ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:11 ಈ ಟ್ಯುಟೋರಿಯಲ್ ನಲ್ಲಿ, ನಾವು:

Launcher (ಲಾಂಚರ್) ಬಗ್ಗೆ, ಲಾಂಚರ್ ನಲ್ಲಿ ಅಪ್ಲಿಕೇಶನ್ ಗಳನ್ನು ತೆಗೆದುಹಾಕುವುದು ಮತ್ತು ಸೇರಿಸುವುದು,

00:21 ಅನೇಕ ಡೆಸ್ಕ್-ಟಾಪ್ ಗಳನ್ನು ಹೇಗೆ ಬಳಸುವುದು,

ಡೆಸ್ಕ್-ಟಾಪ್ ನ ಥೀಮ್ ಅನ್ನು ಬದಲಾಯಿಸುವುದು,

00:27 ಇಂಟರ್ನೆಟ್ ಸಂಪರ್ಕ, ಸೌಂಡ್ ಸೆಟ್ಟಿಂಗ್ಸ್,
00:32 ಟೈಮ್ ಆಂಡ್ ಡೇಟ್ ಸೆಟ್ಟಿಂಗ್ಸ್,

ಬೇರೆ ಯೂಸರ್ ಅಕೌಂಟ್ ಗಳಿಗೆ ಬದಲಾಯಿಸುವುದು ಇವುಗಳ ಬಗ್ಗೆ ಕಲಿಯುವೆವು.

00:39 ಈ ಟ್ಯುಟೋರಿಯಲ್ ಗಾಗಿ ನಾನು Ubuntu Linux 16.04 ಆಪರೇಟಿಂಗ್ ಸಿಸ್ಟಂ ಅನ್ನು

ಬಳಸುತ್ತಿದ್ದೇನೆ.

00:46 Launcher (ಲಾಂಚರ್) ನೊಂದಿಗೆ ಆರಂಭಿಸೋಣ.
00:49 'ಉಬುಂಟು ಲಿನಕ್ಸ್ ಡೆಸ್ಕ್ಟಾಪ್' ನಲ್ಲಿ, ಲಾಂಚರ್, ಡೀಫಾಲ್ಟ್ ಆಗಿ ಎಡಭಾಗದ ಪ್ಯಾನೆಲ್ ಆಗಿದೆ.

ಇದು ಡೀಫಾಲ್ಟ್ ಆಗಿ ಕೆಲವು ಅಪ್ಲಿಕೇಶನ್ ಗಳನ್ನು ಹೊಂದಿದೆ.

00:59 ಆಗಾಗ್ಗೆ ಬಳಸುವ ಅಪ್ಲಿಕೇಶನ್‌ಗಳನ್ನು ಆಕ್ಸೆಸ್ (access) ಮಾಡುವುದನ್ನು ಲಾಂಚರ್ ಸುಲಭಗೊಳಿಸುತ್ತದೆ.
01:05 ಹೀಗಾಗಿ, ಲಾಂಚರ್ ಮೇಲಿನ ಅದರ 'ಡೆಸ್ಕ್ಟಾಪ್ ಶಾರ್ಟ್‌ಕಟ್' ಅನ್ನು ಕ್ಲಿಕ್ ಮಾಡುವ ಮೂಲಕ ನಾವು ಪ್ರೋಗ್ರಾಂ ಅನ್ನು ಪ್ರಾರಂಭಿಸಬಹುದು.
01:12 ಡೀಫಾಲ್ಟ್ ಆಗಿ, ಲಾಂಚರ್ ಕೆಲವು ಅಪ್ಲಿಕೇಶನ್‌ ಗಳನ್ನು ಹೊಂದಿದೆ.
01:17 ನಮ್ಮ ಅಗತ್ಯತೆಗೆ ತಕ್ಕಂತೆ ನಾವು 'ಲಾಂಚರ್' ಅನ್ನು ಕಸ್ಟಮೈಜ್ ಮಾಡಲು ಕಲಿಯೋಣ.
01:22 ನನ್ನ ಕೆಲಸಕ್ಕಾಗಿ, ನನಗೆ Terminal, LibreOffice Writer, gedit ಇತ್ಯಾದಿ ಅಪ್ಲಿಕೇಶನ್‌ ಗಳ ಅಗತ್ಯವಿದೆ.
01:34 'ಲಾಂಚರ್' ಗೆ ನಾವು ಈ ಅಪ್ಲಿಕೇಶನ್‌ ಗಳನ್ನು ಸೇರಿಸೋಣ.
01:38 ಇದನ್ನು ಮಾಡುವ ಮುನ್ನ, ನನಗೆ ಬೇಡವಾದ ಕೆಲವು ಅಪ್ಲಿಕೇಶನ್‌ ಗಳನ್ನು ತೆಗೆದುಹಾಕುವೆನು.
01:44 'ಲಾಂಚರ್' ನಿಂದ ನನಗೆ Amazon ಅಪ್ಲಿಕೇಶನ್‌ ಅನ್ನು ತೆಗೆದುಬಿಡಬೇಕಾಗಿದೆ ಎಂದುಕೊಳ್ಳಿ.
01:49 Amazon ಅಪ್ಲಿಕೇಶನ್‌ ಐಕಾನ್ ಗೆ ಹೋಗಿ, ರೈಟ್-ಕ್ಲಿಕ್ ಮಾಡಿ ಮತ್ತು Unlock from Launcher ಅನ್ನು ಆಯ್ಕೆಮಾಡಿ.
01:58 'ಲಾಂಚರ್' ನಿಂದ Amazon ಅಪ್ಲಿಕೇಶನ್‌ ಐಕಾನ್ ಅನ್ನು ತೆಗೆದುಬಿಡಲಾಗಿದೆ ಎಂದು ನೀವು ನೋಡಬಹುದು.
02:04 ಇದೇ ರೀತಿ, ನಾವು ಆಗಾಗ್ಗೆ ಬಳಸದಿರುವ ಎಲ್ಲಾ ಶಾರ್ಟ್‌ಕಟ್ ಗಳನ್ನು ತೆಗೆದುಹಾಕಬಹುದು.
02:11 ನೀವು ಇಲ್ಲಿ ನೋಡುವಂತೆ ನಾನು ಕೆಲವು ಅಪ್ಲಿಕೇಶನ್‌ ಗಳನ್ನು 'ಲಾಂಚರ್' ನಿಂದ ತೆಗೆದುಬಿಟ್ಟಿದ್ದೇನೆ.
02:17 ಈಗ, 'ಲಾಂಚರ್' ಗೆ Terminal ಶಾರ್ಟ್‌ಕಟ್ ಅನ್ನು ಸೇರಿಸುವೆನು.
02:22 'ಲಾಂಚರ್' ನ ಮೇಲ್ತುದಿಯಲ್ಲಿ, Dash home ಮೇಲೆ ಕ್ಲಿಕ್ ಮಾಡಿ.
02:26 'ಸರ್ಚ್ ಬಾರ್' ನಲ್ಲಿ, “terminal” ಎಂದು ಟೈಪ್ ಮಾಡಿ.

Terminal ಅನ್ನು ತೆರೆಯಲು, ಅದರ ಐಕಾನ್ ಮೇಲೆ ಕ್ಲಿಕ್ ಮಾಡಿ.

02:34 'ಲಾಂಚರ್' ನಲ್ಲಿ, ನೀವು Terminal ಐಕಾನ್ ಅನ್ನು ನೋಡಬಹುದು.
02:38 Terminal ಐಕಾನ್ ಅನ್ನು 'ಲಾಂಚರ್' ಮೇಲೆ ಸ್ಥಿರವಾಗಿಸಲು, ಮೊದಲು ಅದರ ಮೇಲೆ ರೈಟ್-ಕ್ಲಿಕ್ ಮಾಡಿ.

ಆಮೇಲೆ Lock to Launcher ಅನ್ನು ಆಯ್ಕೆಮಾಡಿ.

02:47 ಲಾಂಚರ್ ನಲ್ಲಿ ಅಪ್ಲಿಕೇಶನ್‌ ಶಾರ್ಟ್‌ಕಟ್‌ಗಳನ್ನು ಇರಿಸುವ ಇನ್ನೊಂದು ವಿಧಾನ, dragging and dropping ಮೂಲಕ ಆಗಿದೆ.

ನಾನು ಈಗ ಇದನ್ನು ಮಾಡಿತೋರಿಸುವೆನು.

02:57 Dash Home ಅನ್ನು ತೆರೆಯಿರಿ. ಸರ್ಚ್-ಬಾರ್ ನಲ್ಲಿ gedit ಎಂದು ಟೈಪ್ ಮಾಡಿ.
03:03 gedit ಐಕಾನ್ ಅನ್ನು ಲಾಂಚರ್ ಮೇಲೆ ಎಳೆಯಿರಿ (drag).
03:07 ಈಗ, gedit ಐಕಾನ್ ಅನ್ನು ಲಾಂಚರ್ ಮೇಲೆ ಹಾಕಿರಿ (drop).

gedit ಶಾರ್ಟ್‌ಕಟ್‌ ಅನ್ನು ಲಾಂಚರ್ ಗೆ ಸೇರಿಸಿರುವುದನ್ನು ನೀವು ನೋಡಬಹುದು.

03:16 ಲಾಂಚರ್‌ನಲ್ಲಿ ನಾವು ಶಾರ್ಟ್‌ಕಟ್‌ಗಳನ್ನು ಹೀಗೆ ಸೇರಿಸಬಹುದು.
03:21 'ಉಬಂಟು ಲಿನಕ್ಸ್ ಓ ಎಸ್' ನಲ್ಲಿನ ಪ್ರಮುಖ ವೈಶಿಷ್ಟ್ಯವೆಂದರೆ, ಅನೇಕ 'ವರ್ಕ್-ಸ್ಪೇಸ್' ಗಳು ಅಥವಾ 'ಡೆಸ್ಕ್ಟಾಪ್' ಗಳಾಗಿವೆ.
03:28 ಕೆಲವೊಮ್ಮೆ ನಾವು ಅನೇಕ ಅಪ್ಲಿಕೇಶನ್‌ ಗಳಲ್ಲಿ ಕೆಲಸ ಮಾಡುತ್ತಿರಬಹುದು.
03:33 ಮತ್ತು, ಒಂದು ಅಪ್ಲಿಕೇಶನ್‌ ನಿಂದ ಇನ್ನೊಂದಕ್ಕೆ ಬದಲಾಯಿಸಲು ನಮಗೆ ಕಷ್ಟವಾಗಬಹುದು.
03:38 ಅದನ್ನು ಸುಲಭವಾಗಿಸಲು, ನಾವು Workspace Switcher ಅನ್ನು ಬಳಸಬಹುದು.
03:42 ನಾವು Desktop ಗೆ ಹಿಂದಿರುಗೋಣ.
03:45 Ubuntu 16.04 ನಲ್ಲಿ, multiple workspace ಗಳು ಡೀಫಾಲ್ಟ್ ಆಗಿ ಕಾಣಿಸುವುದಿಲ್ಲ.
03:51 ಅದನ್ನು ಸಕ್ರಿಯಗೊಳಿಸಲು, System Settings ಮೇಲೆ, ನಂತರ Appearance ಮೇಲೆ ಕ್ಲಿಕ್ ಮಾಡಿ.
03:58 Appearance ವಿಂಡೋದಲ್ಲಿ, Behavior ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
04:02 ಇಲ್ಲಿ, Enable workspaces ಆಯ್ಕೆಯನ್ನು ಆರಿಸಿಕೊಳ್ಳಿ.

ಲಾಂಚರ್ ಮೇಲೆ ಇದು multiple workspaces ಐಕಾನ್ ಅನ್ನು ಸಕ್ರಿಯಗೊಳಿಸುವುದು.

04:11 ಈ ವಿಂಡೊ ಅನ್ನು ಮುಚ್ಚಿ.
04:13 ಲಾಂಚರ್ ಮೇಲೆ, Workspace Switcher ಐಕಾನ್ ಅನ್ನು ಗುರುತಿಸಿ ಮತ್ತು ಅದರ ಮೇಲೆ ಕ್ಲಿಕ್ ಮಾಡಿ.
04:19 ಇದು 4 ಡೆಸ್ಕ್ಟಾಪ್‌ ಗಳೊಂದಿಗೆ 4 ಕ್ವಾಡ್ರಂಟ್‌ಗಳನ್ನು ತೋರಿಸುತ್ತದೆ.
04:24 ಡೀಫಾಲ್ಟ್ ಆಗಿ, ಮೇಲಿನ ಎಡಭಾಗದ Desktop ಆಯ್ಕೆಯಾಗಿದೆ.
04:29 ಸದ್ಯಕ್ಕೆ ನಾವು ಅದೇ Desktop ನಲ್ಲಿ ಕೆಲಸ ಮಾಡುತ್ತಿದ್ದೇವೆ.
04:34 ಈಗ ನಾವು, ಎರಡನೆಯ Desktop ಮೇಲೆ ಡಬಲ್-ಕ್ಲಿಕ್ ಮಾಡಿ ಅದನ್ನು ಆಯ್ಕೆಮಾಡೋಣ.
04:39 ನಾನು ಲಾಂಚರ್ ನಲ್ಲಿ terminal ಐಕಾನ್ ಮೇಲೆ ಕ್ಲಿಕ್ ಮಾಡಿ, ಇಲ್ಲಿ terminal ಅನ್ನು ತೆರೆಯುವೆನು.
04:45 ಈಗ, ಮತ್ತೊಮ್ಮೆ Workspace Switcher ಮೇಲೆ ಕ್ಲಿಕ್ ಮಾಡಿ.
04:49 ನೀವು ಟರ್ಮಿನಲ್ ಅನ್ನು ಎರಡನೆಯ 'ವರ್ಕ್-ಸ್ಪೇಸ್' (Workspace) ಮೇಲೆ ಮತ್ತು ನಮ್ಮ Desktop ಅನ್ನು ಮೊದಲನೆಯದರ ಮೇಲೆ ನೋಡಬಹುದು.
04:55 ಈ ರೀತಿಯಾಗಿ, ನೀವು ಅನೇಕ ಡೆಸ್ಕ್ಟಾಪ್‌ಗಳಲ್ಲಿ ಕೆಲಸ ಮಾಡಬಹುದು.
04:59 ಈಗ ನಾವು ಮೊದಲನೆಯ Desktop ಗೆ ಹಿಂದಿರುಗೋಣ.
05:03 ಲಾಂಚರ್ ಮೇಲೆ Trash ಇನ್ನೊಂದು ಮುಖ್ಯವಾದ ಐಕಾನ್ ಆಗಿದೆ.
05:07 Trash, ಡಿಲೀಟ್ ಮಾಡಲಾದ ಎಲ್ಲಾ ಫೈಲ್ ಮತ್ತು ಫೋಲ್ಡರ್ ಗಳನ್ನು ಒಳಗೊಂಡಿದೆ.

ಆಕಸ್ಮಿಕವಾಗಿ ನಾವು ಒಂದು ಫೈಲ್ ಅನ್ನು ಡಿಲೀಟ್ ಮಾಡಿದರೆ, ಅದನ್ನು Trash ನಿಂದ ಮತ್ತೆ ಪಡೆಯಬಹುದು.

05:17 ಇದನ್ನು ವಿವರಿಸಲು, ನನ್ನ Desktop ಮೇಲಿರುವ Hello.txt ಅನ್ನು ನಾನು ಡಿಲೀಟ್ ಮಾಡುವೆನು.
05:23 ಫೈಲ್ ಮೇಲೆ ರೈಟ್- ಕ್ಲಿಕ್ ಮಾಡಿ ಮತ್ತು Move to Trash ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
05:29 ಇದನ್ನು ರಿಸ್ಟೋರ್ ಮಾಡಲು, ಲಾಂಚರ್ ನಲ್ಲಿ Trash ಐಕಾನ್ ಮೇಲೆ ಕ್ಲಿಕ್ ಮಾಡಿ.

Trash ಫೋಲ್ಡರ್ ತೆರೆಯುತ್ತದೆ.

05:37 ಫೈಲ್ ಅನ್ನು ಆಯ್ಕೆಮಾಡಿ, ಅದರ ಮೇಲೆ ರೈಟ್- ಕ್ಲಿಕ್ ಮಾಡಿ ಮತ್ತು Restore ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
05:43 Trash ಫೋಲ್ಡರ್ ವಿಂಡೋ ಅನ್ನು ಮುಚ್ಚಿ, Desktop ಗೆ ಹಿಂದಿರುಗಿ.
05:48 ನಾವು ಮೊದಲು ಡಿಲೀಟ್ ಮಾಡಿದ ಫೈಲ್, ಈಗ ಮತ್ತೆ ಸಿಕ್ಕಿರುವುದನ್ನು (restore) ನೋಡಬಹುದು.
05:53 ನಿಮ್ಮ ಸಿಸ್ಟಮ್‌ನಿಂದ ಫೈಲ್ ಅನ್ನು ಶಾಶ್ವತವಾಗಿ ಡಿಲೀಟ್ ಮಾಡಲು, ಮೊದಲು ಅದನ್ನು ಆಯ್ಕೆಮಾಡಿ. ನಂತರ Shift+Delete ಕೀಗಳನ್ನು ಒತ್ತಿ.
06:01 ಒಂದು ಡೈಲಾಗ್-ಬಾಕ್ಸ್ “Are you sure you want to permanently delete Hello.txt?” ಎಂದು ಕೇಳುತ್ತಿದೆ.

Delete ಬಟನ್ ಮೇಲೆ ಕ್ಲಿಕ್ ಮಾಡಿ.

06:12 ಮತ್ತೊಮ್ಮೆ Trash ಐಕಾನ್ ಮೇಲೆ ಕ್ಲಿಕ್ ಮಾಡಿ.
06:15 ಫೈಲ್ ಅನ್ನು ನಮ್ಮ ಸಿಸ್ಟಮ್‌ನಿಂದ ಶಾಶ್ವತವಾಗಿ ಡಿಲೀಟ್ ಮಾಡಿರುವುದರಿಂದ, ಅದು Trash ಫೋಲ್ಡರ್‌ನಲ್ಲಿ ನಮಗೆ ಸಿಗುವುದಿಲ್ಲ.
06:23 ಡೆಸ್ಕ್ಟಾಪ್‌ ನ ಅದೇ ಥೀಮ್ ಅನ್ನು ನೋಡಿ ನಿಮಗೆ ಬೇಸರವಾಗಿದೆಯೇ? ಅದನ್ನು ಬದಲಾಯಿಸೋಣ.
06:28 ಲಾಂಚರ್ ಗೆ ಹೋಗಿ. System settings ಆಯ್ಕೆಮಾಡಿ. ಆಮೇಲೆ Appearance ಮೇಲೆ ಕ್ಲಿಕ್ ಮಾಡಿ.
06:35 Appearance ವಿಂಡೋ ತೆರೆಯುತ್ತದೆ.
06:38 ಇಲ್ಲಿ, Themes ಟ್ಯಾಬ್ ನ ಅಡಿಯಲ್ಲಿ, ಮೊದಲೇ ಇನ್ಸ್ಟಾಲ್ ಮಾಡಲಾದ ಹಲವು ಥೀಮ್‌ಗಳಿವೆ.
06:44 ನಿಮ್ಮ ಆದ್ಯತೆಗೆ ಅನುಗುಣವಾಗಿ ಈ ಥೀಮ್‌ಗಳನ್ನು ಬಳಸಿ.
06:47 ಯಾವುದೇ ಒಂದನ್ನು ಕ್ಲಿಕ್ ಮಾಡಿದ ತಕ್ಷಣ, ಡೆಸ್ಕ್ಟಾಪ್ ನಲ್ಲಿ ಬದಲಾವಣೆಗಳು ಅನ್ವಯ ಆಗಿರುವುದನ್ನು ನೀವು ನೋಡಬಹುದು.
06:54 ವಿಂಡೋಅನ್ನು ಮುಚ್ಚಲು, ಪುಟ್ಟ X ಐಕಾನ್ ಮೇಲೆ ಕ್ಲಿಕ್ ಮಾಡಿ.
06:58 ಈಗ, Desktop ನ ಮೇಲಿನ ಬಲಮೂಲೆಯಲ್ಲಿ ಲಭ್ಯವಿರುವ ಕೆಲವು ಐಕಾನ್ ಗಳನ್ನು ನೋಡುವೆವು.
07:04 ಮೊದಲನೆಯದು Internet connectivity ಎಂದು ಇದೆ.
07:07 ನೀವು ಯಾವುದೇ Lan (ಲ್ಯಾನ್) ಅಥವಾ Wifi (ವೈಫೈ) ನೆಟ್‌ವರ್ಕ್‌ಗೆ ಸಂಪರ್ಕವನ್ನು ಹೊಂದಿದ್ದರೆ, ನಿಮಗೆ ಕನೆಕ್ಷನ್ ಸಿಗುತ್ತದೆ.
07:13 ಇವುಗಳನ್ನು ಇಲ್ಲಿ ನೀವು ನೋಡಬಹುದು.
07:16 ನಿಮಗೆ ಆಕ್ಸೆಸ್ (access) ಇರುವ 'ನೆಟ್‌ವರ್ಕ್' ಅನ್ನು ನೀವು ಆಯ್ಕೆ ಮಾಡಬಹುದು.
07:20 ನೆಟ್ವರ್ಕ್ ಅನ್ನು Enable ಅಥವಾ Disable ಮಾಡಲು, Enable Networking ಆಯ್ಕೆಯನ್ನು ಚೆಕ್ ಅಥವಾ ಅನ್-ಚೆಕ್ ಮಾಡಿ.
07:27 Edit Connections ಆಯ್ಕೆಯನ್ನು ಬಳಸಿ, ನಾವು ನೆಟ್ವರ್ಕ್ ಗಳನ್ನು ಎಡಿಟ್ ಸಹ ಮಾಡಬಹುದು.
07:32 ಮುಂದಿನ ಐಕಾನ್ Sound ಎಂದು ಇದೆ.
07:35 ನೀವು ಇಲ್ಲಿ ಒಂದು ಸ್ಲೈಡರ್ ಅನ್ನು ನೋಡಬಹುದು.
07:37 ನಮ್ಮ ಆಯ್ಕೆಯ ಪ್ರಕಾರ, ಆಡಿಯೊ ಮಟ್ಟವನ್ನು ಹೆಚ್ಚು ಅಥವಾ ಕಡಿಮೆ ಮಾಡಲು ಇದು ನಮಗೆ ಸಹಾಯ ಮಾಡುತ್ತದೆ.
07:43 Sound Settings ಮೇಲೆ ಕ್ಲಿಕ್ ಮಾಡುವ ಮೂಲಕ, ನಮ್ಮ ಸಿಸ್ಟಂನ ಧ್ವನಿಯ ಮಟ್ಟವನ್ನು ನಾವು ಮತ್ತಷ್ಟು ಹೊಂದಿಸಬಹುದು.

ಈ ವಿಂಡೋದಲ್ಲಿನ ಸೆಟ್ಟಿಂಗ್‌ಗಳನ್ನು ನೀವೇ ಸ್ವತಃ ಕಲಿತುಕೊಳ್ಳಿ.

07:53 ಮುಂದಿನ ಐಕಾನ್ Time & Date ಆಗಿದೆ.

ನಾವು ಈ ಐಕಾನ್ ಮೇಲೆ ಕ್ಲಿಕ್ ಮಾಡಿದರೆ, ಕ್ಯಾಲೆಂಡರ್ ತೆರೆದುಕೊಳ್ಳುತ್ತದೆ.

08:00 ನಾವು ಪ್ರಸ್ತುತ ದಿನಾಂಕ, ತಿಂಗಳು ಮತ್ತು ವರ್ಷವನ್ನು ನೋಡಬಹುದು.
08:04 ಆರೋ (arrow) ಬಟನ್ ಗಳು, ನಮಗೆ ಬೇಕಾದ ಇತರ ತಿಂಗಳು ಮತ್ತು ವರ್ಷಗಳಿಗೆ ಹೋಗಲು ಅನುವು ಮಾಡಿಕೊಡುತ್ತವೆ.
08:11 Time & Date Settings ಮೇಲೆ ಕ್ಲಿಕ್ ಮಾಡಿ, ದಿನಾಂಕ ಮತ್ತು ಸಮಯವನ್ನು ನಾವು ಎಡಿಟ್ ಮಾಡಬಹುದು.
08:16 ಈ ಆಯ್ಕೆಯ ಬಗ್ಗೆ ಇನ್ನಷ್ಟು ನೀವೇ ಸ್ವತಃ ಕಲಿತುಕೊಳ್ಳಿ.
08:20 ನಂತರ, wheel ಅಥವಾ Power ಐಕಾನ್ ಮೇಲೆ ಕ್ಲಿಕ್ ಮಾಡಿ.
08:24 ಇಲ್ಲಿ, Log Out ಮತ್ತು Shut Down ಆಯ್ಕೆಗಳೊಂದಿಗೆ ನಾವು ಕೆಲವು ಶಾರ್ಟ್‌ಕಟ್ ಆಯ್ಕೆಗಳನ್ನು ನೋಡಬಹುದು.
08:31 ನಮ್ಮ ಸಿಸ್ಟಮ್ ನಲ್ಲಿ ಲಭ್ಯವಿರುವ ಎಲ್ಲಾ ಯೂಸರ್ ಅಕೌಂಟ್ ಗಳನ್ನು ಸಹ ನಾವು ನೋಡಬಹುದು.
08:36 ನಮಗೆ ಬೇಕಾದ ಯಾವುದೇ ಒಂದು user ಮೇಲೆ ಕ್ಲಿಕ್ ಮಾಡಿ, ಆ ಯೂಸರ್ ಅಕೌಂಟ್ ಗೆ ನಾವು ಬದಲಾಯಿಸಬಹುದು.
08:43 ಇದರೊಂದಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ.

ಸಂಕ್ಷಿಪ್ತವಾಗಿ,

08:48 ಈ ಟ್ಯುಟೋರಿಯಲ್ ನಲ್ಲಿ ನಾವು:

ಲಾಂಚರ್ ಬಗ್ಗೆ, ಲಾಂಚರ್ ನಲ್ಲಿ ಅಪ್ಲಿಕೇಶನ್ ಗಳನ್ನು ತೆಗೆದುಹಾಕುವುದು ಮತ್ತು ಸೇರಿಸುವುದು,

08:55 ಅನೇಕ ಡೆಸ್ಕ್-ಟಾಪ್ ಗಳನ್ನು ಹೇಗೆ ಬಳಸುವುದು,

ಡೆಸ್ಕ್-ಟಾಪ್ ನ ಥೀಮ್ ಅನ್ನು ಬದಲಾಯಿಸುವುದು,

09:01 ಇಂಟರ್ನೆಟ್ ಸಂಪರ್ಕ,

Sound ಸೆಟ್ಟಿಂಗ್‌ಗಳು,

09:04 Time and Date ಸೆಟ್ಟಿಂಗ್‌ಗಳು ಮತ್ತು ಬೇರೆ ಯೂಸರ್ ಅಕೌಂಟ್ ಗಳಿಗೆ ಬದಲಾಯಿಸುವುದು ಇವುಗಳ ಬಗ್ಗೆ ಕಲಿತಿದ್ದೇವೆ.
09:10 ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋ, “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ಸಾರಾಂಶವಾಗಿದೆ. ಇದನ್ನು ಡೌನ್ಲೋಡ್ ಮಾಡಿ ವೀಕ್ಷಿಸಿ.
09:18 “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ತಂಡವು, 'ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ಆನ್ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣ ಪತ್ರವನ್ನು ಕೊಡುತ್ತದೆ.
09:27 ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಮಗೆ ಬರೆಯಿರಿ.
09:30 ಈ 'ಸ್ಪೋಕನ್ ಟ್ಯುಟೋರಿಯಲ್' ನಲ್ಲಿ ನಿಮಗೆ ಪ್ರಶ್ನೆಗಳಿವೆಯೇ?

ದಯವಿಟ್ಟು ಈ ಸೈಟ್ ಗೆ ಭೆಟ್ಟಿಕೊಡಿ:

09:35 ನೀವು ಪ್ರಶ್ನೆಯನ್ನು ಹೊಂದಿರುವ ನಿಮಿಷ ಮತ್ತು ಸೆಕೆಂಡ್ ಅನ್ನು ಆಯ್ಕೆ ಮಾಡಿ.

ನಿಮ್ಮ ಪ್ರಶ್ನೆಯನ್ನು ಸಂಕ್ಷಿಪ್ತವಾಗಿ ವಿವರಿಸಿ.

09:41 ನಮ್ಮ ತಂಡದಿಂದ ಯಾರಾದರೂ ಉತ್ತರಿಸುತ್ತಾರೆ.
09:45 "ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪವು NMEICT, MHRD ಮೂಲಕ ಭಾರತ ಸರ್ಕಾರದ ಅನುದಾನವನ್ನು ಪಡೆದಿದೆ.

ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುತ್ತದೆ.

09:57 ಈ ಸ್ಕ್ರಿಪ್ಟ್, "ಸ್ಪೋಕನ್ ಟ್ಯುಟೋರಿಯಲ್” ತಂಡದ ಕೊಡುಗೆಯಾಗಿದೆ.

ಸ್ಕ್ರಿಪ್ಟ್ ನ ಅನುವಾದಕಿ IIT Bombay ಯಿಂದ ಸಂಧ್ಯಾ ಪುಣೇಕರ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ. ಧನ್ಯವಾದಗಳು.

Contributors and Content Editors

Sandhya.np14