LibreOffice-Suite-Impress/C4/Presentation-Notes/Kannada

From Script | Spoken-Tutorial
Jump to: navigation, search
Time Narration
00.00 LibreOffice Impress ನಲ್ಲಿ Presentation Notes ಎಂಬ ಸ್ಪೋಕನ್ ಟ್ಯುಟೋರಿಯಲ್-ಗೆ ನಿಮಗೆ ಸ್ವಾಗತ.
00.06 ಈ ಟ್ಯುಟೋರಿಯಲ್-ನಲ್ಲಿ, ನಾವು Notes ಮತ್ತು ಅವುಗಳನ್ನು ಪ್ರಿಂಟ್ ಮಾಡುವ ವಿಧಾನದ ಬಗ್ಗೆ ಕಲಿಯಲಿದ್ದೇವೆ.
00.12 Notes ಗಳನ್ನು ಎರಡು ಉದ್ದೇಶಗಳಿಗಾಗಿ ಉಪಯೋಗಿಸಲಾಗುತ್ತದೆ:
00.14 ಪ್ರೇಕ್ಷಕರಿಗೆ ಪ್ರತಿಯೊಂದು ಸ್ಲೈಡ್ ನಲ್ಲಿರುವ ಹೆಚ್ಚುವರಿ ಸಾಮಗ್ರಿ ಅಥವಾ ರೆಫರೆನ್ಸ್ ಅನ್ನು ತೋರಿಸಲು, ಮತ್ತು
00.20 ಪ್ರಸ್ತುತಿಕಾರನಿಗೆ, ವೀಕ್ಷಕರ ಮುಂದೆ ಸ್ಲೈಡ್ಸ್ ಅನ್ನು ಪ್ರಸ್ತುತಪಡಿಸುವಾಗ ರೆಫರೆನ್ಸ್ ನೋಟ್ಸ್-ಗಳೊಂದಿಗೆ ಸಹಾಯಮಾಡಲು.
00.27 Sample-Impress.odp ಎಂಬ ಪ್ರಸಂಟೇಶನ್ ಅನ್ನು ತೆರೆಯಿರಿ.
00.33 ಎಡಭಾಗದಲ್ಲಿರುವ Slides ಪೇನಿನಿಂದ, Overview ಎಂಬ ಶೀರ್ಷಕವಿರುವ ಸ್ಲೈಡ್ ಅನ್ನು ಆರಿಸಿ.
00.38 ಪಠ್ಯವನ್ನು ಈ ರೀತಿ ಬದಲಾಯಿಸಿ -
00.40 "To achieve 30%, shift to OpenSource software within 1 year".
00.46 "To achieve 95%, shift to OpenSource Software within 5 years".
00.53 ನಾವು ಪೇಜಿಗೆ ಕೆಲವು ನೋಟ್ಸ್ ಗಳನ್ನು ಸೇರಿಸೋಣ. ಇದರಿಂದ ಪ್ರಿಂಟ್ ಮಾಡಿದಾಗ, ಓದುಗನಿಗೆ ಕೆಲವು ರೆಫರೆನ್ಸ್ ಸಾಮಗ್ರಿ ಲಭ್ಯವಾಗುತ್ತದೆ.
01.01 ನೋಟ್ಸ್ ಅನ್ನು edit ಮಾಡಲು, Notes ಟ್ಯಾಬ್ ನ ಮೇಲೆ ಕ್ಲಿಕ್ ಮಾಡಿ.
01.04 Notes ಎಂಬ ಒಂದು ಟೆಕ್ಸ್ಟ್ ಬಾಕ್ಸ್, ಸ್ಲೈಡ್ ನ ಕೆಳಗೆ ಪ್ರದರ್ಶಿತವಾಗುತ್ತದೆ. ಇಲ್ಲಿ ನಾವು ನೋಟ್ಸ್ ಅನ್ನು ಟೈಪ್ ಮಾಡಬಹುದು.
01.12 Click to Add Notes ನ ಮೇಲೆ ಕ್ಲಿಕ್ ಮಾಡಿ.
01.15 ನೀವು ಈ ಬಾಕ್ಸ್ ಅನ್ನು ಪರಿಷ್ಕರಿಸಬಹುದೆಂಬುದನ್ನು (ಎಡಿಟ್) ಗಮನಿಸಿ.
01.19 ಈ ಟೆಕ್ಸ್ಟ್ ಬಾಕ್ಸ್ ನಲ್ಲಿ ಹೀಗೆ ಟೈಪ್ ಮಾಡಿ:
01.22 "Management would like to explore cost saving from shifting to Open Source Software".
01.28 "Open source software has now become a viable (ವಾಯೆಬಲ್) option to proprietary software".
01.35 "Open source software will free the company from arbitrary (ಆರ್ಬಿಟರಿ) software updates of proprietary (ಪ್ರೊಪ್ರೈಟ್ರೀ) software".
01.46 ನಾವು ನಮ್ಮ ಮೊದಲ ನೋಟ್ಸ್ ಅನ್ನು ರಚಿಸಿದ್ದೇವೆ.
01.49 Notes ನಲ್ಲಿಯ ಪಠ್ಯವನ್ನು ಹೇಗೆ format ಮಾಡುವುದು ಎಂದು ನೋಡೋಣ.
01.54 ಪಠ್ಯವನ್ನು ಆಯ್ಕೆ ಮಾಡಿ.
01.56 Impress window ವಿನ ಎಡ ಮೇಲ್ತುದಿಯಲ್ಲಿ, Font Type ಎಂಬ ಡ್ರಾಪ್-ಡೌನ್ ನ ಮೇಲೆ ಕ್ಲಿಕ್ ಮಾಡಿ ಮತ್ತು TlwgMono (ಟ್ವಿಗ್ ಮೋನೋ) ಅನ್ನು ಆಯ್ಕೆ ಮಾಡಿ.
02.05 ನಂತರ, Font size ಡ್ರಾಪ್-ಡೌನ್-ನಲ್ಲಿ, 18 ಅನ್ನು ಆರಿಸಿ.
02.10 ಅದೇ Task bar ನಿಂದ, Bullet ಐಕಾನ್-ನ ಮೇಲೆ ಕ್ಲಿಕ್ ಮಾಡೋಣ. ಈಗ ಪಠ್ಯಕ್ಕೆ ಬುಲೆಟ್ ಪಾಯಿಂಟ್-ಗಳಿವೆ.
02.18 ಈಗ ನಾವು ಎಲ್ಲಾ ನೋಟ್ಸ್ ಗಳನ್ನು ಒಂದು ಸ್ಟಾಂಡರ್ಡ್ ಫಾರ್ಮ್ಯಾಟ್ ಗೆ ಸೆಟ್ ಮಾಡಲು Notes Master ಅನ್ನು ರಚಿಸುವುದನ್ನು ಕಲಿಯೋಣ.
02.25 Main ಮೆನುವಿನಿಂದ, View ಅನ್ನು ಕ್ಲಿಕ್ ಮಾಡಿ ಮತ್ತು Master ನ ಮೇಲೆ ಕ್ಲಿಕ್ ಮಾಡಿ. Notes Master ಮೇಲೆ ಕ್ಲಿಕ್ ಮಾಡಿ.
02.33 Notes Master ವ್ಯೂ ಕಾಣಿಸುತ್ತದೆ.
02.36 ಎರಡು ಸ್ಲೈಡ್ ಗಳು ಪ್ರದರ್ಶಿತವಾಗಿವೆ ಎಂಬುದನ್ನು ಗಮನಿಸಿ.
02.40 ಅಂದರೆ – ಪ್ರಸಂಟೇಶನ್ ನಲ್ಲಿ ಉಪಯೋಗಿಸಿರುವ ಪ್ರತಿಯೊಂದು Master Slide ಗೂ ಒಂದೊಂದು Notes Master ಇರುತ್ತದೆ.
02.47 Notes Master ಸ್ಲೈಡ್, ಟೆಂಪ್ಲೇಟ್ ನ ರೀತಿಯದ್ದಾಗಿರುತ್ತದೆ.
02.51 ಇಲ್ಲಿ ನೀವು ಫಾರ್ಮ್ಯಾಟಿಂಗ್ ಆದ್ಯತೆಗಳನ್ನು ಸೆಟ್ ಮಾಡಬಹುದು. ಇದು ನಂತರದ ಪ್ರಸಂಟೇಶನ್ ನ ಎಲ್ಲಾ ನೋಟ್ಸ್ ಗಳಿಗೆ ಅನ್ವಯವಾಗುತ್ತದೆ.
02.58 Slides ಪೇನಿನಿಂದ ಮೊದಲ ಸ್ಲೈಡ್ ಅನ್ನು ಆಯ್ಕೆ ಮಾಡಿ.
03.01 Notes ಪ್ಲೇಸ್ ಹೋಲ್ಡರ್ ಮೇಲೆ ಕ್ಲಿಕ್ ಮಾಡಿ ಮತ್ತು ಅಲ್ಲಿ ಪ್ರದರ್ಶಿತವಾಗಿರುವ ಪಠ್ಯವನ್ನು ಆಯ್ಕೆಮಾಡಿ.
03.08 Impress ವಿಂಡೋನ ಎಡ ಮೇಲ್ಭಾಗದಲ್ಲಿನ, Font Size ಡ್ರಾಪ್ ಡೌನ್ ಮೇಲೆ ಕ್ಲಿಕ್ ಮಾಡಿ ಮತ್ತು 32 ಎಂದು ಆಯ್ಕೆ ಮಾಡಿ.
03.16 Main ಮೆನುವಿನಿಂದ, Format ಮತ್ತು Character ಅನ್ನು ಕ್ಲಿಕ್ ಮಾಡಿ.
03.21 Character ಡೈಲಾಗ್ ಬಾಕ್ಸ್ ಕಾಣಿಸುತ್ತದೆ.
03.24 Font Effects ಟ್ಯಾಬ್-ನ ಮೇಲೆ ಕ್ಲಿಕ್ ಮಾಡಿ.
03.28 Font color ಡ್ರಾಪ್ ಡೌನ್ ನ ಮೇಲೆ ಕ್ಲಿಕ್ ಮಾಡಿ ಮತ್ತು ಕೆಂಪು ಬಣ್ಣವನ್ನು ಆಯ್ಕೆ ಮಾಡಿ. OK ಕ್ಲಿಕ್ ಮಾಡಿ.
03.35 ನೋಟ್ಸ್ ಗೆ ಒಂದು logo ಅನ್ನು ಜೋಡಿಸೋಣ.
03.38 ಒಂದು ತ್ರಿಭುಜವನ್ನು ಸೇರಿಸೋಣ.
03.40 Drawing ಟೂಲ್ ಬಾರ್ ನಿಂದ, Basic Shapesನ ಮೇಲೆ ಕ್ಲಿಕ್ ಮಾಡಿ ಮತ್ತು Isosceles Triangle (ಐಸೊಸಲೆಸ್ ಟ್ರಿಯಾಂಗಲ್)ಅನ್ನು ಆಯ್ಕೆ ಮಾಡಿ.
03.48 ತ್ರಿಕೋಣವನ್ನು Notes ಟೆಕ್ಸ್ಟ್ ಬಾಕ್ಸ್ ನ ಎಡ ಮೇಲ್ಭಾಗದಲ್ಲಿ ತಂದು ಸೇರಿಸಿ.
03.53 ತ್ರಿಕೋಣವನ್ನು ಆಯ್ಕೆ ಮಾಡಿ ಮತ್ತು context ಮೆನುಗಾಗಿ ರೈಟ್-ಕ್ಲಿಕ್ ಮಾಡಿ. Area ಮೇಲೆ ಕ್ಲಿಕ್ ಮಾಡಿ.
03.59 Area ಡೈಲಾಗ್ ಬಾಕ್ಸ್ ಕಾಣಿಸುತ್ತದೆ.
04.02 Area ಟ್ಯಾಬ್ ನ ಮೇಲೆ ಕ್ಲಿಕ್ ಮಾಡಿ.
04.05 Fill ಡ್ರಾಪ್-ಡೌನ್ ನ ಮೇಲೆ ಕ್ಲಿಕ್ ಮಾಡಿ ಮತ್ತು Color ಅನ್ನು ಕ್ಲಿಕ್ ಮಾಡಿ. ಈಗ Blue 7 ಅನ್ನು ಆರಿಸಿ.
04.12 ಈ formatting ಮತ್ತು logo, ಮುಂದೆ ರಚಿಸಲ್ಪಡುವ ಎಲ್ಲಾ ನೋಟ್ಸ್ ಗಳಿಗ್ ಡಿಫಾಲ್ಟ್ ಆಗಿವೆ.
04.18 OK ಕ್ಲಿಕ್ ಮಾಡಿ.
04.20 Master View ಟೂಲ್ ಬಾರ್ ನಲ್ಲಿ, Close Master View ಅನ್ನು ಕ್ಲಿಕ್ ಮಾಡಿ.
04.25 Main ಪೇನಿನಲ್ಲಿ, Notes ಟ್ಯಾಬ್ ನ ಮೇಲೆ ಕ್ಲಿಕ್ ಮಾಡಿ.
04.29 ಎಡ ಭಾಗದಲ್ಲಿರುವ Slides ಪೇನಿನಿಂದ, Overview ಎಂಬ ಶೀರ್ಷಕವಿರುವ ಸ್ಲೈಡ್ ಅನ್ನು ಆಯ್ಕೆ ಮಾಡಿ.
04.35 Master Notes ನಲ್ಲಿ ಸೆಟ್ ಮಾಡಿರುವಂತೆಯೇ ನೋಟ್ಸ್ ಗಳು ಫಾರ್ಮ್ಯಾಟ್ ಆಗಿವೆ ಎಂಬುದನ್ನು ಗಮನಿಸಿ.
04.42 ಈಗ, ನಾವು Notes ಮತ್ತು Slide ಪ್ಲೇಸ್ ಹೋಲ್ಡರ್ ಗಳ ಗಾತ್ರವನ್ನು ಹೇಗೆ ಬದಲಿಸುವುದು ಎಂಬುದನ್ನು ಕಲಿಯೋಣ.
04.48 Slide Placeholder (ಸ್ಲೈಡ್ ಪ್ಲೇಸ್ ಹೋಲ್ಡರ್) ಅನ್ನು ಆರಿಸಿ, ಎಡ ಮೌಸ್ ಬಟನ್ ಅನ್ನು ಒತ್ತಿ. ಮತ್ತು ಇದನ್ನು ಪರದೆಯ ಮೇಲ್ಭಾಗಕ್ಕೆ ಕೊಂಡೊಯ್ಯಿರಿ.
04.56 ಇದರಿಂದ Notes place-holder ನ ಗಾತ್ರವನ್ನು ಬದಲಿಸಲು ಹೆಚ್ಚಿನ ಜಾಗವು ಸಿಗುತ್ತದೆ.
05.02 ಈಗ Notes ಟೆಕ್ಸ್ಟ್ ಪ್ಲೇಸ್ ಹೋಲ್ಡರ್ ನ ತುದಿಯ ಮೇಲೆ ಕ್ಲಿಕ್ ಮಾಡಿ.
05.06 ಗಾತ್ರವನ್ನು ಹೆಚ್ಚಿಸಲು, ಎಡ ಮೌಸ್ ಬಟನ್ ಅನ್ನು ಹೋಲ್ಡ್ ಮಾಡಿ ಮತ್ತು ಇದನ್ನು ಮೇಲಕ್ಕೆ ಎಳೆಯಿರಿ.
05.13 ನಮಗೆ ಬೇಕಾದಂತೆ ಪ್ಲೇಸ್ ಹೋಲ್ಡರ್ ಗಳ ಗಾತ್ರಗಳನ್ನು ಹೇಗೆ ಬದಲಿಸುವುದು ಎಂಬುದನ್ನು ಈಗ ನಾವು ಕಲಿತಿದ್ದೇವೆ.
05.18 ಈಗ, ನಾವು ನೋಟ್ಸ್ ಗಳನ್ನು ಹೇಗೆ ಪ್ರಿಂಟ್ ಮಾಡುವುದು ಎಂಬುದನ್ನು ನೋಡೋಣ.
05.22 Main ಮೆನುವಿನಿಂದ, Fileನ ಮೇಲೆ ಕ್ಲಿಕ್ ಮಾಡಿ ಮತ್ತು Print ಅನ್ನು ಆಯ್ಕೆ ಮಾಡಿ.
05.27 Print ಡೈಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ.
05.30 ಪ್ರಿಂಟರ್ ಗಳ ಪಟ್ಟಿಯಿಂದ, ನಿಮ್ಮ ಯಂತ್ರಕ್ಕೆ ಕನೆಕ್ಟ್ ಆದ ಪ್ರಿಂಟರ್ ಅನ್ನು ಆರಿಸಿ.
05.35 Number of Copies ಫೀಲ್ಡ್ ನಲ್ಲಿ, 2 ಎಂದು ಬರೆಯಿರಿ.
05.40 Properties ಮೇಲೆ ಕ್ಲಿಕ್ ಮಾಡಿ ಮತ್ತು Orientation ಎಂಬುದರಲ್ಲಿ, Landscape ಅನ್ನು ಆರಿಸಿ. Ok ಕ್ಲಿಕ್ ಮಾಡಿ.
05.48 Print Document ಎಂಬುದರಲ್ಲಿ, ಡ್ರಾಪ್ ಡೌನ್ ಮೆನುವಿನಿಂದ Notes ಅನ್ನು ಆಯ್ಕೆ ಮಾಡಿ.
05.53 ಈಗ LibreOffice impress ಟ್ಯಾಬ್ ಅನ್ನು ಆಯ್ಕೆ ಮಾಡಿ.
05.58 Contents ಎಂಬುದರ ಕೆಳಗೆ:
06.00 Slide Name ಬಾಕ್ಸ್ ಅನ್ನು ಚೆಕ್ ಮಾಡಿ.
06.02 Date and Time ಬಾಕ್ಸ್ ಅನ್ನು ಚೆಕ್ ಮಾಡಿ.
06.05 Original Color ಬಾಕ್ಸ್ ಅನ್ನು ಚೆಕ್ ಮಾಡಿ.
06.08 Print ನ ಮೇಲೆ ಕ್ಲಿಕ್ ಮಾಡಿ.
06.11 ನಿಮ್ಮ ಪ್ರಿಂಟರ್ ಸೆಟ್ಟಿಂಗ್ ಗಳು ಸರಿಯಾಗಿ configure ಆಗಿದ್ದಲ್ಲಿ, ಸ್ಲೈಡ್ ಗಳು ಈಗ ಪ್ರಿಂಟ್ ಆಗುತ್ತಿರಬೇಕು.
06.18 ಇದರೊಂದಿಗೆ ಈ ಟ್ಯುಟೋರಿಯಲ್ ಮುಕ್ತಾಯವಾಗುತ್ತದೆ.
06.21 ಈ ಟ್ಯುಟೋರಿಯಲ್ ನಲ್ಲಿ ನಾವು Notes ಮತ್ತು ಅವುಗಳನ್ನು ಪ್ರಿಂಟ್ ಮಾಡುವುದು ಹೇಗೆ ಎನ್ನುವುದನ್ನು ಕಲಿತೆವು.
06.27 ಇಲ್ಲಿ ನಿಮಗೊಂದು ಅಸೈನ್-ಮೆಂಟ್ ಇದೆ.
06.30 ಹೊಸ ಪ್ರಸಂಟೇಶನ್ ಒಂದನ್ನು ತೆರೆಯಿರಿ.
06.32 notes ಪ್ಲೇಸ್ ಹೋಲ್ಡರ್ ನಲ್ಲಿ ವಿಷಯವನ್ನು ಸೇರಿಸಿ ಮತ್ತು
06.36 ಆಯತವೊಂದನ್ನು ಸೇರಿಸಿ. ಸ್ಸ್
06.38 ವಿಷಯದ ಫಾಂಟ್ ಗಾತ್ರವು 36, ಮತ್ತು ಬಣ್ಣವು ನೀಲಿಯಾಗಿರಲಿ.
06.44 ಆಯತದಲ್ಲಿ ಹಸಿರು ಬಣ್ಣವನ್ನು ತುಂಬಿ.
06.48 ಸ್ಲೈಡ್ ಟೆಕ್ಸ್ಟ್ ಹೋಲ್ಡರ್ ನ ತುಲನೆಯಲ್ಲಿ notes ಪ್ಲೇಸ್ ಹೋಲ್ಡರ್ ನ ಗಾತ್ರವನ್ನು ವ್ಯವಸ್ಥಿತಗೊಳಿಸಿ.
06.54 notes ಅನ್ನು ಬ್ಲಾಕ್ ಅಂಡ್ ವೈಟ್ ನಲ್ಲಿ Portrait ಫಾರ್ಮ್ಯಾಟ್ ನಲ್ಲಿ ಪ್ರಿಂಟ್ ಮಾಡಿ.
06.59 ನೀವು notes ನ ಐದು ಪ್ರತಿಗಳನ್ನು ಪ್ರಿಂಟ್ ಮಾಡಬೇಕು.
07.03 ಈ ಲಿಂಕ್-ನಲ್ಲಿ ಸಿಗುವ ವಿಡಿಯೋವನ್ನು ನೋಡಿ. ಇದು ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ನ ಸಾರಾಂಶವನ್ನು ತಿಳಿಸುತ್ತದೆ.
07.09 ಒಂದು ವೇಳೆ ನಿಮ್ಮಲ್ಲಿ ಒಳ್ಳೆಯ ಬ್ಯಾಂಡ್-ವಿಡ್ತ್ ಇಲ್ಲದಿದ್ದಲ್ಲಿ, ನೀವು ಡೌನ್-ಲೋಡ್ ಮಾಡಿ ನೋಡಬಹುದು.
07.13 ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಟೀಮ್ :

ಸ್ಪೋಕನ್ ಟ್ಯುಟೋರಿಯಲ್-ಗಳನ್ನು ಉಪಯೋಗಿಸಿ ಕಾರ್ಯಾಗಾರಗಳನ್ನು ನಡೆಸುತ್ತದೆ. ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರ ಕೊಡುತ್ತದೆ.

07.22 ಹೆಚ್ಚಿನ ವಿವರಣೆಗಾಗಿ, contact@spoken-tutorial.org ಗೆ ಬರೆಯಿರಿ.
07.28 ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್, ಟಾಕ್ ಟು ಎ ಟೀಚರ್ ಪ್ರಾಜೆಕ್ಟ್ ನ ಒಂದು ಭಾಗ. ಇದು ಭಾರತ ಸರ್ಕಾರದ MHRDಯ ICTಮಾಧ್ಯಮದ ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್-ನಿಂದ ಸಮರ್ಥಿತವಾಗಿದೆ.
07.41 ಈ ಸಂಸ್ಥೆಯ ಬಗ್ಗೆ ಹೆಚ್ಚಿನ ಮಾಹಿತಿ ಈ ಲಿಂಕ್-ನಲ್ಲಿ ಸಿಗುತ್ತದೆ - http://spoken-tutorial.org/NMEICT-Intro .
07.51 ಈ ಸ್ಕ್ರಿಪ್ಟ್ನ ಅನುವಾದಕಿ ಬೆಂಗಳೂರಿನಿಂದ ನಾಗರತ್ನಾ ಹೆಗಡೆ ಹಾಗೂ ಪ್ರವಾಚಕ ಐ ಐ ಟಿ ಬಾಂಬೆಯಿಂದ ವಾಸುದೇವ.ಧನ್ಯವಾದಗಳು.

Contributors and Content Editors

Pratik kamble, Vasudeva ahitanal