LibreOffice-Suite-Draw/C3/Polygons-and-Curves/Kannada
From Script | Spoken-Tutorial
Time | Narration |
00:01 | ಲಿಬ್ರೆ ಆಫಿಸ್ ಡ್ರಾ ನಲ್ಲಿ “creating curves and polygons’” (ಕ್ರಿಯೇಟಿಂಗ್ ಕರ್ವ್ಸ್ ಮತ್ತು ಪಾಲಿಗಾನ್ಸ್) ಕುರಿತಾದ ಟ್ಯುಟೋರಿಯಲ್ ಗೆ ಸ್ವಾಗತ. |
00:07 | ಈ ಟ್ಯುಟೋರಿಯಲ್ ನಲ್ಲಿ ನೀವು ಡ್ರಾ ನಲ್ಲಿ ಪಾಲಿಗಾನ್ ಮತ್ತು ಕರ್ವ್ ಸ್ ಜೊತೆ ಹೇಗೆ ಕೆಲಸಮಾಡುವುದು ಎನ್ನುವುದನ್ನು ತಿಳಿಯುತ್ತೀರಿ. |
00:14 | ಈ ಟ್ಯುಟೋರಿಯಲ್ ನೋಡಲು ನೀವು ಲಿಬ್ರೆ ಓಫಿಸ್ ನ ಸಾಮಾನ್ಯ ಜ್ಞಾನ ಹೊಂದಿರಬೇಕು. ಇಲ್ಲವಾದಲ್ಲಿ ಸಂಬಂಧಿತ ಟ್ಯುಟೋರಿಯಲ್ ಗಾಗಿ ಈ ವೆಬ್ ಸೈಟ್ ಅನ್ನು ನೋಡಿ. |
00:25 | ಇಲ್ಲಿ ನಾವು,
ಉಬುಂಟು ಲಿನಕ್ಸ್ ನ 10. 04 ಆವೃತ್ತಿಯನ್ನು ಮತ್ತು ಲಿಬ್ರೆ ಓಫಿಸ್ ಸ್ಯೂಟ್ ನ 3. 3. 4 ಆವೃತ್ತಿಯನ್ನು ಬಳಸುತ್ತೇವೆ. |
00:34 | ಪಾಲಿಗಾನ್ ಗಳೆಂದರೇನು? poly ಪದದ ಅರ್ಥ ವಿವಿಧ ಎಂದು. ವಿವಿಧ-ಪಾರ್ಶ್ವ ದ ಆಕೃತಿ ಯನ್ನು ಪಾಲಿಗಾನ್ ಎನ್ನುತ್ತೇವೆ. |
00:43 | ನಾವು ಈ ಸ್ಲೈಡ್ ನಲ್ಲಿ ತೋರಿಸಲ್ಪಟ್ಟಂತೆ ನಕ್ಷೆಯನ್ನು ಬಿಡಿಸುವ ವಿಧಾನವನ್ನು ಕಲಿಯಲಿದ್ದೇವೆ. ಈ ನಕ್ಷೆಯು ಮನೆಯಿಂದ ಶಾಲೆಗಿರುವ ದಾರಿಯನ್ನು ತೋರಿಸುತ್ತದೆ. |
00:53 | ಈ ಟ್ಯುಟೋರಿಯಲ್ ನ ಕೊನೆಯಲ್ಲಿ ನೀವು ಇದೇ ರೀತಿಯ ರೇಖಾಚಿತ್ರ ಬಿಡಿಸಲು ಶಕ್ತರಾಗುತ್ತೀರಿ. |
01:00 | ಈಗ ನಾವು ಡ್ರಾ ಗೆ ಬದಲಾಯಿಸಿಕೊಳ್ಳೋಣ. ನಾನು ಈ ಫೈಲ್ ಗೆ 'RouteMap' ಎಂದು ಹೆಸರಿಸಿ ಡೆಸ್ಕ್ ಟಾಪ್ ನಲ್ಲಿ ಸೇವ್ ಮಾಡಿದ್ದೇನೆ. |
01:09 | ಮೊದಲಯನೆಯದಾಗಿ, Grid view ಅನ್ನು ಸಕ್ರಿಯಗೋಳಿಸೋಣ. ಹಾಗೆ, View ಅನ್ನು ಕ್ಲಿಕ್ ಮಾಡಿ, Grid ಅನ್ನು ಆಯ್ಕೆಮಾಡಿ ಮತ್ತು ಅದರಲ್ಲಿ Display Grid ಅನ್ನು ಆಯ್ಕೆಮಾಡಿ. |
01:19 | ನಾವು ರೇಖಾಚಿತ್ರ ಪ್ರಾರಂಭ ಮಾಡುವ ಮೊದಲು, Page margin ಮತ್ತು Page orientation ಅನ್ನು ಸೆಟ್ ಮಾಡೋಣ. |
01:26 | ಕರ್ಸರ್ ಅನ್ನು Draw ಪೇಜ್ ನ ಮೇಲಿಡಿ. ಮತ್ತು Context menu ವಿಗಾಗಿ ರೈಟ್ ಕ್ಲಿಕ್ ಮಾಡಿ. |
01:33 | Page ಅನ್ನು ಆಯ್ಕೆ ಮಾಡಿ ಮತ್ತು Page Setup ಅನ್ನು ಕ್ಲಿಕ್ ಮಾಡಿ. |
01:36 | Page Setup ಡೈಲಾಗ್ ಬಾಕ್ಸ್ ಕಾಣಿಸುತ್ತದೆ. |
01:40 | Format ನ ಡ್ರಾಪ್-ಡೌನ್ ಅನ್ನು ಕ್ಲಿಕ್ ಮಾಡಿ ಮತ್ತುA4 ಅನ್ನು ಆಯ್ಕೆ ಮಾಡಿ ಮತ್ತು Orientation ಅನ್ನು Portrait ಎಂದು ಆಯ್ಕೆ ಮಾಡಿ. |
01:49 | Left, Right, Top ಮತ್ತು Bottom ಮಾರ್ಜಿನ್ ಗಳನ್ನು ಒಂದಕ್ಕೆ ಸೆಟ್ ಮಾಡಿ. ಮತ್ತು OK. ಯನ್ನು ಕ್ಲಿಕ್ ಮಾಡಿ. |
01:57 | ನಾವೀಗ ಡೀಫಾಲ್ಟ್ ಫಾಂಟ್ ಗಾತ್ರವನ್ನು ೨೪ ಕ್ಕೆ ಸೆಟ್ ಮಾಡೋಣ. |
02:02 | ಮೈನ್ ಮೆನುವಿನಿಂದ Format ಮತ್ತು Character ಅನ್ನು ಆಯ್ಕೆ ಮಾಡೋಣ. |
02:06 | Character ಎನ್ನುವ ಡೈಲಾಗ್-ಬಾಕ್ಸ್ ಕಾಣಸಿಗುತ್ತದೆ. |
02:10 | Fonts ಟಾಬ್ ಅನ್ನು ಕ್ಲಿಕ್ ಮಾಡಿ ಮತ್ತು ಅದರಲ್ಲಿನ Size ಫೀಲ್ಡ್ ನಲ್ಲಿ ಸ್ಕ್ರೋಲ್ ಡೌನ್ ಮಾಡುತ್ತ ೨೪ ಅನ್ನು ಸೆಲೆಕ್ಟ್ ಮಾಡಿ ಮತ್ತುOK ಯನ್ನು ಕ್ಲಿಕ್ ಮಾಡಿ. |
02:18 | ಇದರಿಂದ ಶೇಪ್ಸ್ ನ ಒಳಗಡೆ ಬರೆದ ಟೆಕ್ಸ್ಟ್ ಗಳು ಸ್ಪಷ್ಟವಾಗಿ ಗೋಚರಿಸುತ್ತದೆ ಎಂಬುವುದನ್ನು ಖಚಿತಪಡಿಸಬಹುದು. |
02:24 | ಈಗ ನಾವು ಮನೆ ಬಿಡಿಸುವುದರಿಂದ ಆರಂಭಿಸೋಣ. |
02:28 | ಮನೆಯನ್ನು ತೋರಿಸಲು ಚೌಕವನ್ನು ಸೇರಿಸೋಣ ಮತ್ತು ಅದರೊಳಗಡೆ "Home" ಎಂದು ಬರೆಯೋಣ. |
02:37 | ನಂತರ, ಮನೆಯ ಬಲಭಾಗ ದಲ್ಲಿ ಉದ್ಯಾನ ವನ್ನು ಬಿಡಿಸೋಣ. |
02:42 | ಉದ್ಯಾನವು ವಕ್ರ-ಆಕಾರದ ಆಯಾತವಾಗಿದೆ. ಮತ್ತು ಎಡಬದಿಯು ಬಲಬದಿಗಿಂತ ಅಗಲವಾಗಿದೆ. |
02:51 | ನಾವೀಗ ಪಾಲಿಗಾನ್ ನ್ನು, ಅದರ ಪ್ರಾತಿನಿಧ್ಯವನ್ನು ತೋರ್ಪ್ ಡಿಸಲು ಬಳಸೋಣ. ಪಾಲಿಗಾನ್ ನನ್ನು ಬಿಡಿಸಲು, Drawing ಟೂಲ್ ಬಾರ್ ಗೆ ಹೋಗೊಣ. |
02:58 | Curve ನ ಮೇಲೆ ಕ್ಲಿಕ್ ಮಾಡಿ ಮತ್ತು ಐಕಾನ್ ನ ಪಕ್ಕದಲ್ಲಿರುವ ಸಣ್ಣ ಕಪ್ಪು ಬಣ್ಣದ ಬಾಣದ ಗುರುತನ್ನು ಕ್ಲಿಕ್ ಮಾಡಿ. |
03:04 | ಈಗ, Polygon filled ಅನ್ನು ಆಯ್ಕೆಮಾಡಿ. |
03:08 | ಕರ್ಸರ್ ಅನ್ನು Draw ಪುಟದ ಮೇಲಿಡಿ. ಮೌಸ್ ನ ಎಡ ಬಟನ್ ಅನ್ನು ಹಿಡಿದಿಟ್ಟುಕ್ಕೊಂಡು ಕರ್ಸರ್ ಅನ್ನು ಕೆಳಗಡೆ ಎಳೆಯಿರಿ. ನಂತರ ಮೌಸ್ ಬಟನ್ ಅನ್ನು ಬಿಡಿ. |
03:18 | ನಾವೀಗ ಸರಳ ರೇಖೆಯನ್ನುಬಿಡಿಸಿದೆವು. ಮೌಸ್ ಅನ್ನು ಲಂಬ ತ್ರಿಕೋನ ಆಕಾರ ಬರುವವರೆಗೂ ಬಲಕ್ಕೆ ಎಳೆಯಿರಿ. |
03:26 | ಮೌಸ್ ನ ಎಡ ಬಟನ್ ಅನ್ನು ಕ್ಲಿಕ್ ಮಾಡಿ ಮತ್ತು ಮೌಸ್ ಅನ್ನು ಮೇಲ್ಮುಖವಾಗಿ ಎಳೆಯಿರಿ. ಈಗ, ಮೌಸ್ ನ ಎಡ ಬಟನ್ ಅನ್ನು ಎರಡು ಬಾರಿ ಕ್ಲಿಕ್ ಮಾಡಿ. |
03:35 | ನೀವು ಪಾಲಿಗಾನ್ ನನ್ನುಬಿಡಿಸಿದ್ದೀರಿ. ಈಗ ಅದರೊಳಗಡೆ "Park" ಎಂದು ಬರೆಯಿರಿ. |
03:41 | Park ನ ಪಕ್ಕದಲ್ಲಿ ಒಂದು Commercial Complex ಇದೆ. ಇದು ಕೂಡಾ ವಕ್ರವಾದ ಆಕಾರದ ಪಾಲಿಗಾನ್. ನಾವೀಗ ಅದನ್ನು ಬಿಡಿಸೋಣ! |
03:50 | Drawing ಟೂಲ್ ಬಾರ್ ಗೆ ಹೋಗಿ. Curve ಐಕಾನ್ ನ ಪಕ್ಕದಲ್ಲಿರುವ ಸಣ್ಣ ಕಪ್ಪು ಬಾಣದ ಗುರುತನ್ನು ಕ್ಲಿಕ್ ಮಾಡಿ ಮತ್ತುPolygon filled ಅನ್ನು ಕ್ಲಿಕ್ ಮಾಡಿ. |
04:00 | Draw ಪುಟದಲ್ಲಿ ಕರ್ಸರ್ ಅನ್ನು ಇಡಿ. ಎಡ ಮೌಸ್ ಬಟನ್ ನನ್ನು ಹಿಡಿಯುತ್ತಾ ಕೆಳಗಡೆ ಎಳೆಯಿರಿ. |
04:07 | ಈಗ, ಮೌಸ್ ಬಟನ್ ಅನ್ನು ಬಿಡಿ. ನೀವು ಸರಳ ರೇಖೆಯನ್ನು ನೋಡುವಿರಿ. ಮೌಸ್ ಅನ್ನು ತ್ರಿಕೋಣ ಆಕಾರ ಬರುವವರೆಗೆ ಎಡಬದಿ ಕೊಂಡೊಯ್ಯಿರಿ. |
04:19 | ಎಡ-ಮೌಸ್-ಬಟನ್ ನನ್ನು ಕ್ಲಿಕ್ ಮಾಡಿ ಮತ್ತು ಮೌಸ್ ಅನ್ನು ಮೇಲ್ಮುಖವಾಗಿ ಎಳೆಯಿರಿ. ಈಗ Shift ಕೀ ಯನ್ನು ಹಿಡಿದಿಟ್ಟುಕೊಳ್ಳುತ್ತಾ ಕರ್ಸರ್ ಅನ್ನು ಒಳಮುಖವಾಗಿ ಎಳೆಯಿರಿ. |
04:31 | ಎಡ ಮೌಸ್ ಬಟನ್ ಅನ್ನು ಎರಡು ಬಾರಿ ಕ್ಲಿಕ್ ಮಾಡಿ. |
04:35 | ನೀವೀಗ ಇನ್ನೊಂದು ಪಾಲಿಗಾನ್ ಅನ್ನು ಎಳೆದಿದ್ದೀರಿ. ನಾವೀಗ ಅದರೊಳಗಡೆ "Commercial Complex" ಎಂದು ಬರೆಯೋಣ. |
04:45 | ನಿಲುಗಡೆ ಪ್ರದೇಶವನ್ನು Drawing ಟೂಲ್ ಬಾರ್ ನಿಂದ ಬಿಡಿಸಲು ಈ ಹಿಂದಿನ ಹಂತವನ್ನು ಅನುಸರಿಸೋಣ, ಮೊದಲಿಗೆ Polygon filled ನ್ನು ಆಯ್ಕೆ ಮಾಡಿರಿ. ನಂತರ ಕರ್ಸರ್ ಅನ್ನು Draw ಪುಟ ದ ಮೇಲಿಡಿ. ಮತ್ತು ಪಾಲಿಗಾನ್ ಅನ್ನು ಬಿಡಿಸಿ. |
05:02 | ಈಗ, ನಾವು "Parking Lot" ಎಂದು ಅದರೊಳಗಡೆ ಬರೆಯೋಣ. |
05:08 | ನೆನಪಿಡಿ ನೀವೀಗ ನಿಮಿಗಿಷ್ಟ ಬಂದಷ್ಟು ಪಾರ್ಶ್ವಗಳ (ಕೋನಗಳ) ಪಾಲಿಗಾನ್ ಅನ್ನು ಬಿಡಿಸಬಹುದು. |
05:14 | ಈ ಟ್ಯುಟೋರಿಯಲ್ ಅನ್ನು ನಿಲ್ಲಿಸಿ ಮತ್ತು ಈ ಅಸೈನ್ಮೆಂಟ್ ಅನ್ನು ಪ್ರಯತ್ನಿಸಿ. ಐದು ಪಾರ್ಶ್ವದ, ಆರು ಪಾರ್ಶ್ವದ ಮತ್ತು ಹತ್ತು ಪಾರ್ಶ್ವದ ಪಾಲಿಗಾನ್ ಅನ್ನು ಬಿಡಿಸಿ. |
05:23 | ಮನೆಯ ಬಲಬದಿಯಲ್ಲಿ ಒಂದು Rresidential Complex ಇದ್ದು, ಅದು ಆಯತಾಕಾರದಲ್ಲಿದೆ. |
05:30 | Drawing ಟೂಲ್ ಬಾರ್ ನಿಂದ Rectangle ಅನ್ನು ಆಯ್ಕೆ ಮಾಡಿ. |
05:35 | ನಂತರ ಮೌಸ್ ಅನ್ನು Draw ಪುಟದ ಮೇಲಿಡಿ ಮತ್ತು ಅದನ್ನು ಎಳೆಯುತ್ತ ಆಯತಾಕಾರವನ್ನು ಬಿಡಿಸಿ. |
05:41 | ನಾವಿದನ್ನು "Residential Complex" ಎಂದು ಹೆಸರಿಸೋಣ. |
05:45 | ಈ ಪ್ರದೇಶದಲ್ಲೊಂದು Play Ground ಕೂಡ ಇದೆ. ಇದರ ಆಕಾರವು ಉದ್ದನೆಯ ಆಯತಾಕಾರವಾಗಿದೆ. |
05:53 | Drawing ಟೂಲ್ ಬಾರ್ ನಿಂದ Polygon 45 degree Filled ಅನ್ನು ಸೆಲೆಕ್ಟ್ ಮಾಡಿ. |
05:59 | ಕರ್ಸರ್ ಅನ್ನುDraw ಪುಟದ ಮೇಲಿಡಿ. ಎಡ ಮೌಸ್ ಬಟನ್ ಅನ್ನು ಕ್ಲಿಕ್ ಮಾಡಿ ಮತ್ತು ಕೆಳಗಡೆ ಎಳೆಯಿರಿ ಮತ್ತು ಬಿಡಿ. |
06:07 | ಮೌಸ್ ಅನ್ನು ಕ್ಲಿಕ್ ಮಾಡಿ ಮತ್ತು ಬಲಬದಿ ಕೊಂಡೊಯ್ದು ಬಿಡಿ. ಈಗ ಮೌಸ್ ಅನ್ನು ಕ್ಲಿಕ್ ಮಾಡಿ ಮೇಲ್ಮುಖವಾಗಿ ಎಳೆಯುತ್ತಾ ಆಯತವನ್ನು ಪೂರ್ಣಗೊಳಿಸಿ. |
06:17 | ಎಡ ಮೌಸ್ ಬಟನ್ ಅನ್ನು ಎರಡು ಬಾರಿ ಕ್ಲಿಕ್ ಮಾಡಿ. |
06:21 | ನೀವೀಗ ಇನ್ನೊಂದು ಪಾಲಿಗಾನ್ ಅನ್ನು ಬಿಡಿಸಿದಿರಿ! |
06:25 | ನಾವೀಗ "Play Ground" ಎಂದು ಅದರೊಳಗಡೆ ಬರೆಯೋಣ. |
06:30 | ಈಗ, ನಾವು ಆಟದ ಮೈದಾನದ ಪಕ್ಕ Lake ಅನ್ನು ಬಿಡಿಸೋಣ. |
06:35 | Drawing ಟೂಲ್ ಬಾರ್ ನಿಂದ Freeform Line filled ಅನ್ನು ಆಯ್ಕೆ ಮಾಡಿ. |
06:40 | Draw ಪುಟದಲ್ಲಿ, ಎಡ-ಮೌಸ್-ಬಟನ್ ಅನ್ನು ಒತ್ತಿರಿ ಮತ್ತು ಮೌಸ್ ಅನ್ನು ಅಪ್ರದಕ್ಷಿಣವಾಗಿ ತಿರುಗಿಸಿ. ಎಡ-ಮೌಸ್-ಬಟನ್ ಅನ್ನು ಬಿಡಿ. |
06:52 | ನಾವು ಸರೋವರವನ್ನು ಬಿಡಿಸಿದೆವು. ಈಗ ಅದರೊಳಗಡೆ "Lake" ಎಂದು ಬರೆಯೋಣ. |
06:58 | ಈ ಪ್ರದೇಶದ ಕೊನೆಯ ಕಟ್ಟಡ School. School campus ಕೂಡ ಪಾಲಿಗಾನ್ ರೂಪದಲ್ಲಿದೆ. |
07:07 | ಈಗ ಇದನ್ನು ನಮ್ಮ ನಕ್ಷೆಯಲ್ಲಿ ಬಿಡಿಸೋಣ. ಪುನಃ Drawing ಟೂಲ್ ಬಾರ್ ನಿಂದ Polygon 45 degree filled ಅನ್ನು ಆಯ್ಕೆಮಾಡೋಣ. |
07:17 | ನಂತರ, ನಾವು ಕರ್ಸರ್ ಅನ್ನು Draw ಪುಟದ ಮೇಲಿಡೋಣ ಮತ್ತು ಪಾಲಿಗಾನ್ ಅನ್ನು ಬಿಡಿಸೋಣ. ಕೊನೆಯಲ್ಲಿ, ಪಾಲಿಗಾನ್ ಅನ್ನು ಪೂರ್ತಿಗೊಳಿಸುತ್ತಾ ಮೌಸ್ ಅನ್ನು ಎರಡು ಬಾರಿ ಕ್ಲಿಕ್ ಮಾಡೋಣ. |
07:28 | ಈಗ ಅದರೊಳಗಡೆ "School Campus" ಎಂದು ಬರೆಯಿರಿ. |
07:34 | ನಾವೀಗ ಟೆಕ್ಸ್ಟ್ ಬಾಕ್ಸ್ ಅನ್ನು ಸೇರಿಸೋಣ ಮತ್ತು ಅದರೊಳಗಡೆ "School Main Gates" ಎಂದು ಬರೆಯೋಣ. |
07:44 | ನಾವೀಗ ಟೆಕ್ಸ್ಟ್-ಬಾಕ್ಸ್ ಅನ್ನು ತಿರುಗಿಸೋಣ ಮತ್ತು ಸರಿಯಾದ ಸ್ಥಾನದಲ್ಲಿಡೋಣ. |
07:48 | ಈಗ, ಮೈನ್ ಮೆನುವಿನಿಂದ Modify ಅನ್ನು ಆಯ್ಕೆಮಾಡಿ ಮತ್ತು Rotate ಅನ್ನು ಕ್ಲಿಕ್ ಮಾಡಿ. |
07:54 | handle ನ ಬಣ್ಣವು ಕೆಂಪು ಬಣ್ಣಕ್ಕೆ ತಿರುಗಿರುವುದನ್ನು ಗುರುತಿಸಿ. ಇದು ನಾವು Rotate ಮೋಡ್ ನಲ್ಲಿರುವದನ್ನು ಸೂಚಿಸುತ್ತದೆ. |
08:02 | ನೀವು ಎರಡು ಬದಿ ಬಾಣದ ಗುರುತು ಹೊಂದಿರುವ ಚಿಕ್ಕ ವ್ರತ್ತ ಖಂಡವನ್ನು ನೋಡಿದಿರಾ? ನಾವದನ್ನು ಬಾಕ್ಸ್ ಅನ್ನು ತಿರುಗಿಸಲು ಉಪಯೋಗಿಸುತ್ತೇವೆ. |
08:09 | ನಾವೀಗ ಕರ್ಸರ್ ಅನ್ನು ಟೆಕ್ಸ್ಟ್-ಬಾಕ್ಸ್ ನ ಬಲ ಮೇಲ್ಬದಿಯಲ್ಲಿರುವ ಕೊನೆಯ handle ನ ಮೇಲಿಡೋಣ. . |
08:17 | Rotation curve ಕಾಣಸಿಗುತ್ತದೆ. |
08:21 | ಎಡ-ಮೌಸ್ ಬಟನ್ ಅನ್ನು ಒತ್ತಿ. ಕರ್ವ್ ಅನ್ನು, ಅದು ಸರಿಯಾದ ಸ್ಥಾನದಲ್ಲಿ ಇರಿಸುವವವರೆಗೆ ಪ್ರದಕ್ಷಿಣಾಕಾರವಾಗಿ ಎಳೆಯಿರಿ. |
08:30 | ಈಗ, 'Rotate' mode ನಿಂದ ಹೊರಬರಲು Draw ಪುಟದ ಎಲ್ಲಿಯಾದರೂ ಕ್ಲಿಕ್ ಮಾಡಿ. |
08:36 | ನಾವೀಗ ಶಾಲೆಯ ಅಡ್ಡಪ್ರವೇಶವನ್ನು ಸಹ ತೋರಿಸೋಣ. |
08:41 | ಈ ಹಿಂದಿನ ಹಂತದಂತೆಯೇ, ಟೆಕ್ಸ್ಟ್ ಬಾಕ್ಸ್ ಅನ್ನು ಬರೆಯೋಣ ಮತ್ತು ಅದರೊಳಗಡೆ "School Side Entrance" ಎಂದು ನಮೂದಿಸೋಣ. |
08:50 | ಈಗ, ಬಾಣದ ಗುರುತನ್ನು ಉಪಯೋಗಿಸಿಕೊಂಡು ದಿಕ್ಕುಗಳನ್ನು ಬರೆಯೋಣ. ಮನೆಯಿಂದ ನಾವು ಬಲಬದಿಗೆ ತಿರುಗಬೇಕು. |
08:57 | Drawing ಟೂಲ್ ಬಾರ್ ನಿಂದ Line Ends with Arrow ಅನ್ನು ಆಯ್ಕೆ ಮಾಡೋಣ. |
09:02 | ಈಗ ನಾವು Draw ಪುಟಕ್ಕೆ ಹೋಗೋಣ ಮತ್ತು ರೇಖೆಯನ್ನು ಎಳೆಯೋಣ. |
09:08 | ನಂತರ ರೆಸಿಡೆನ್ಶಿಯಲ್ ಕಾಂಪ್ಲೆಕ್ಸ್ ನ ಬಳಿ ನಡೆಯೋಣ. ಮತ್ತು ಎಡಬದಿ ತಿರುಗೋಣ. |
09:14 | ನಾವೀಗ ಮಾರ್ಗವನ್ನು ತೋರಿಸಲು ಇನ್ನೊಂದು ರೇಖೆಯನ್ನು ಎಳೆಯೋಣ. |
09:19 | ನಂತರ, ಆಟದ ಮೈದಾನದ ನಂತರ ಬಲಕ್ಕೆ ತಿರುಗಿ, ಕೆಳಕ್ಕೆ ನಡೆಯಿರಿ. |
09:25 | ನಂತರ ಶಾಲೆಯ ಮುಖ್ಯದ್ವಾರ ತಲುಪಲು ಪುನಃ ಬಲಬದಿ ತಿರುಗಿ. |
09:32 | ನಾವು ನಮ್ಮ ಮೊದಲನೇ ಮಾರ್ಗವನ್ನು ಬಿಡಿಸಿದೆವು. ಎರಡು ವಿಧವಾದ ಕರ್ವ್ಸ್ ಮತ್ತು ಪಾಲಿಗಾನ್ ಗಳನ್ನು ಬಿಡಿಸಿಬಹುದು ಎನ್ನುವುದನ್ನು ನೀವಿಲ್ಲಿ ಗಮನಿಸಿರಬಹುದು. |
09:41 | ಮೊದಲನೆಯದು Filled ಎನ್ನುವ ಆಯ್ಕೆಯನ್ನು ಉಪಯೋಗಿಸಿಕೊಂಡು ಮತ್ತು ಇನ್ನೊಂದು fill ಆಯ್ಕೆಯ ಹೊರತಾಗಿ. ಯಾವಾಗ ನೀವು Filled ಆಯ್ಕೆಯನ್ನು ಉಪಯೋಗಿಸುತ್ತೀರೋ ಆಗ ಕರ್ವ್ ಬಣ್ಣದಿಂದ ತುಂಬಿರುತ್ತದೆ. |
09:52 | ಕರ್ವ್ ಅನ್ನು ಬಿಡಿಸಲು, Curve ಟೂಲ್ ಬಾರ್ ನ ಪ್ರತಿಯೊಂದು ಆಯ್ಕೆಯು ಸಹ ಭಿನ್ನವಾದ ಮೌಸ್ ಕಾರ್ಯಾಚರಣೆಯ ಮಾದರಿಯನ್ನು ಹೊಂದಿರುವುದನ್ನೂ ನೀವು ಗಮನಿಸಿರಬಹುದು. |
10:02 | ಇಲ್ಲಿ ನಿಮಗಾಗಿ ಒಂದು ಅಸೈನ್ಮೆಂಟ್ ಇದೆ. Curve ಟೂಲ್ ಬಾರ್ ನ ಎಲ್ಲಾ ಆಯ್ಕೆಗಳನ್ನು ಉಪಯೋಗಿಸಿಕೊಂಡು ಕರ್ವ್ಸ್ ಮತ್ತು ಪಾಲಿಗಾನ್ ಅನ್ನು ಬಿಡಿಸಿ. |
10:10 | ಹೇಗೆ ಕರ್ಸರ್ ನ ಆಕಾರ ಮತ್ತು ಮೌಸ್ ನ ಕಾರ್ಯಾಚರಣೆ, ಕರ್ವ್ ಮತ್ತು ಪಾಲಿಗಾನ್ ನ ಪ್ರತಿಯೊಂದು ಆಯ್ಕೆಯೊಂದಿಗೆ ಬದಲಾಗುತ್ತದೆ ಎನ್ನುವುದನ್ನು ಗಮನಿಸಿ. |
10:20 | Filled ನ ಆಯ್ಕೆಯಲ್ಲಿ ನೀವು ಬಣ್ಣವನ್ನು ಬದಲಾಯಿಸಬಹದು ಎನ್ನುವುದನ್ನು ಪರಿಶೀಲಿಸಿ. |
10:25 | ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋವನ್ನು ವೀಕ್ಷಿಸಿ. ಇದು “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ಸಾರಾಂಶವಾಗಿದೆ. |
10:31 | ನಿಮಗೆ ಒಳ್ಳೆಯ ‘ಬ್ಯಾಂಡ್ವಿಡ್ತ್’ ಸಿಗದಿದ್ದರೆ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು.
ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ತಂಡವು: ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ. ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. |
10:45 | ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ. contact@spoken-tutorial. org |
10:51 | "ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪವು “ಟಾಕ್ ಟು ಎ ಟೀಚರ್” ಪ್ರಕಲ್ಪದ ಒಂದು ಭಾಗವಾಗಿದೆ. ಇದು ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ. |
11:04 | ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗೆ ತೋರಿಸಿದ ಲಿಂಕ್ ನಲ್ಲಿ ಲಭ್ಯವಿರುತ್ತದೆ.
http://spoken-tutorial. org\NMEICT-Intro |
11:14 | ಈ ಟ್ಯುಟೋರಿಯಲ್ ಅನುವಾದಕ ಹಾಗೂ ಪ್ರವಾಚಕ ಐ ಐ ಟಿ ಬಾಂಬೆಯಿಂದ ವಾಸುದೇವ.ಧನ್ಯವಾದಗಳು. |