LibreOffice-Suite-Draw/C2/Basics-of-working-with-objects/Kannada
From Script | Spoken-Tutorial
Time | Narration |
00:02 | ಲಿಬ್ರೆ ಆಫಿಸ್ ಡ್ರಾನಲ್ಲಿನ ಬೇಸಿಕ್ಸ್ ಆಫ್ ವರ್ಕಿಂಗ್ ವಿಥ್ ಆಬ್ಜೆಕ್ಟ್ಸ್ ಎಂಬ ಸ್ಪೊಕನ್ ಟ್ಯುಟೊರಿಯಲ್ ಗೆ ಸ್ವಾಗತ. |
00:08 | ಈ ಟ್ಯುಟೊರಿಯಲ್ ನಲ್ಲಿ ನಾವು |
00:11 | ಆಬ್ಜೆಕ್ಟ್ ಗಳ ಕಟ್, ಕಾಪಿ,ಪೇಸ್ಟ್, |
00:14 | ಹ್ಯಾಂಡಲ್ ಗಳನ್ನು ಬಳಸಿ ಆಬ್ಜೆಕ್ಟ್ ಗಳನ್ನು ರೀಸೈಸ್ ಮಾಡುವುದು, |
00:17 | ಆಬ್ಜೆಕ್ಟ್ ಗಳ ಜೊಡಣೆ, |
00:19 | ಆಬ್ಜೆಕ್ಟ್ ಗಳ ಗ್ರೂಪ್ ಮತ್ತು ಅನ್ ಗ್ರೂಪ್, |
00:21 | ಗ್ರೂಪ್ ನಲ್ಲಿರುವ ಪ್ರತ್ಯೇಕ ಆಬ್ಜೆಕ್ಟ್ ಗಳನ್ನು ಎಡಿಟ್ ಮಾಡುವುದು, |
00:24 | ಗ್ರೂಪ್ ನಲ್ಲಿರುವ ಆಬ್ಜೆಕ್ಟ್ ಗಳನ್ನು ಮೂವ್ ಮಾಡುವುದು ಇತ್ಯಾದಿಗಳನ್ನು ಕಲಿಯಲಿದ್ದೆವೆ. |
00:28 | ಇಲ್ಲಿ ನಾವು ಉಬುಂಟು ಲಿನಕ್ಸ್ ೧೦.೦೪ ಮತ್ತು ಲಿಬ್ರೆ ಆಫಿಸ್ ಸ್ಯೂಟ್ ೩.೩.೪ ನ್ನು ಬಳಸುತ್ತಿದ್ದೆವೆ. |
00:37 | ನಾವೀಗಾಗಲೇ ಡೆಸ್ಕ್ ಟಾಪ್ ನಲ್ಲಿ ಸೇವ್ ಮಾಡಿರುವ “WaterCycle” ಎಂಬ ಫೈಲನ್ನು ತೆರೆಯೊಣ. |
00:42 | ಈಗ ಚಿತ್ರಕ್ಕೆ ಇನ್ನೂ ಮೂರು ಮೋಡಗಳನ್ನು ಕಾಪಿ ಮಾಡಿ ಪೇಸ್ಟ್ ಮಾಡೊಣ. |
00:47 | ಮೊದಲಿಗೆ ಮೋಡವನ್ನು ಸೆಲೆಕ್ಟ್ ಮಾಡಿ, ನಂತರ ಕಾಂಟೆಕ್ಸ್ಟ್ ಮೆನು ವಿಗಾಗಿ ರೈಟ್ ಕ್ಲಿಕ್ ಮಾಡಿ ಅಲ್ಲಿ Copy ಯ ಮೇಲೆ ಕ್ಲಿಕ್ ಮಾಡಿ, |
00:54 | ನಂತರ ಕರ್ಸರನ್ನು ಪೇಜ್ ಮೇಲಿಟ್ಟು ಕಾಂಟೆಕ್ಸ್ಟ್ ಮೆನು ವಿಗಾಗಿ ರೈಟ್ ಕ್ಲಿಕ್ ಮಾಡಿ ನಂತರ Paste ನ ಮೇಲೆ ಕ್ಲಿಕ್ ಮಾಡಿ. |
01:02 | ಇಲ್ಲಿ ನಾವು ಒಂದೇ ಮೋಡವನ್ನು ಕಾಣಬಹುದು ! |
01:05 | ಆದರೆ ನಾವು ಕಾಪಿ ಮಾಡಿ ಪೇಸ್ಟ್ ಮಾಡಿದ ಮೋಡವು ಎಲ್ಲಿದೆ? |
01:08 | ಕಾಪಿ ಮಾಡಿ ಪೇಸ್ಟ್ ಮಾಡಿದ ಮೋಡವು ಮೂಲ ಮೊಡದ ಮೇಲೆಯೇ ಪೇಸ್ಟ್ ಆಗಿದೆ ! |
01:13 | ನಾವೀಗ ಮೋಡವನ್ನು ಸೆಲೆಕ್ಟ್ ಮಾಡಿ ಮೂವ್ ಮಾಡೊಣ. |
01:17 | ಈಗ ಅದೇ ತರಹದ ಮತ್ತೊಂದು ಮೊಡವನ್ನು ಮಾಡೋಣ. |
01:21 | ಮೊಡವನ್ನು ಸೆಲೆಕ್ಟ್ ಮಾಡಿ ನಂತರ ಕಾಂಟೆಕ್ಸ್ಟ್ ಮೆನುವಿಗಾಗಿ ರೈಟ್ ಕ್ಲಿಕ್ ಮಾಡಿ ನಂತರ “Copy” ಯ ಮೇಲೆ ಕ್ಲಿಕ್ ಮಾಡಿ. |
01:26 | ಮತ್ತೆ ಕಾಂಟೆಕ್ಸ್ಟ್ ಮೆನುವಿಗಾಗಿ ರೈಟ್ ಕ್ಲಿಕ್ ಮಾಡಿ ಮತ್ತು “Paste” ನ ಮೇಲೆ ಕ್ಲಿಕ್ ಮಾಡಿ. |
01:30 | ಈಗ ಕಾಪಿ ಮಾಡಿದ ಮೋಡವನ್ನು ಸೆಲೆಕ್ಟ್ ಮಾಡಿ ಮತ್ತು ಎಡಕ್ಕೆ ಮೂವ್ ಮಾಡಿ. |
01:37 | ನಾವು ಈ ಕೆಲಸಕ್ಕೆ ಶಾರ್ಟ್ ಕಟ್ ಕೀ ಗಳನ್ನು ಕೂಡ ಬಳಸಬಹುದಾಗಿದೆ. |
01:41 | ಕಾಪಿ ಮಾಡಲು CTRL+C |
01:44 | ಪೆಸ್ಟ್ ಮಾಡಲು CTRL+V |
01:47 | ಕಟ್ ಮಾಡಲು CTRL+X |
01:50 | ಮೊದಲಿಗೆ ಮೋಡವನ್ನು ಸೆಲೆಕ್ಟ್ ಮಾಡಿ ನಂತರ CTRL ಮತ್ತು C ಕೀ ಗಳನ್ನು ಏಕಕಾಲದಲ್ಲಿ ಒತ್ತಿ. |
01:55 | ಈಗ ಮೋಡವು ಕಾಪಿ ಯಾಗಿದೆ. |
01:57 | ಪೆಸ್ಟ್ ಮಾಡಲು CTRL ಮತ್ತು V ಕೀ ಗಳನ್ನು ಏಕಕಾಲದಲ್ಲಿ ಒತ್ತಿ. |
02:02 | ಮೊಡವನ್ನು ಸೆಲೆಕ್ಟ್ ಮಾಡಿ ಮತ್ತು ನೀವು ಇಷ್ಟ ಪಟ್ಟ ಜಾಗಕ್ಕೆ ಮೂವ್ ಮಾಡಿ. |
02:08 | ಈ ಟ್ಯುಟೋರಿಯಲ್ ನ್ನು ನಿಲ್ಲಿಸಿ ಮತ್ತು ಕೆಳಗೆ ಹೇಳಿರುವ ಅಸೈನ್ಮೆಟ್ ಮಾಡಿ. |
02:11 | ಎರಡು ಪೇಜ್ ಗಳನ್ನು ನಿಮ್ಮ ಡ್ರಾ ಫೈಲ್ ನಲ್ಲಿಜೊಡಿಸಿ. |
02:14 | ಮೊದಲನೇ ಪೇಜ್ ನಲ್ಲಿ ಎರಡು ಆಬ್ಜೆಕ್ಟ್ ಗಳ ಚಿತ್ರ ಬಿಡಿಸಿ. |
02:18 | ಆ ಚಿತ್ರವನ್ನುಮೊದಲನೇ ಪೇಜ್ ನಿಂದ ಎರಡನೇ ಪೇಜ್ ಗೆ ಕಾಪಿ ಮಾಡಿ. |
02:22 | ಕಾಪಿ ಮಾಡಿದ ಚಿತ್ರವು ಎಲ್ಲಿದೆ ಎಂದು ನೋಡಿ. |
02:25 | ಚಿತ್ರವನ್ನು ಕಟ್ ಮತ್ತು ಪೇಸ್ಟ್ ಮಾಡಿ. ನೀವೀ ಕೆಲಸಕ್ಕೆ ಶಾರ್ಟ್ ಕಟ್ ಗಳನ್ನು ಬಳಸಬಹುದು. |
02:31 | ಕಾಪಿ ಮಾಡಿದ ಚಿತ್ರವು ಕಟ್ ಮಾಡಿದ ಪ್ರಭಾವದಿಂದ ಆಗಿದೆಯೇ ಎಂದು ಪರೀಕ್ಷಿಸಿ. |
02:36 | ನಾವೀಗ ಮೊಡದ ಗಾತ್ರವನ್ನು ಕಡಿಮೆ ಮಾಡೊಣ. |
02:38 | ಮೊದಲಿಗೆ ಸೆಲೆಕ್ಟ್ ಮಾಡಿ |
02:40 | ಈಗ ಹ್ಯಾಂಡಲ್ಸ್ ಗಳು ಕಾಣಿಸುತ್ತಿವೆ. |
02:43 | ನಂತರ ಕರ್ಸರನ್ನು ಕಾಣುತ್ತಿರುವ ಒಂದು ಹ್ಯಾಂಡಲ್ ನ ಮೇಲೆ ಬಾಣದ ತುದಿಯು ಕಾಣುವ ತನಕ ಇರಿಸಿ. . |
02:50 | ಈಗ ಮೊಡದ ಗಾತ್ರವನ್ನು ಕಡಿಮೆ ಮಾಡಲು ಮೌಸ್ ನ ಲೆಫ್ಟ್ ಬಟನ್ ಹಿಡಿದು ಬಾಣವನ್ನು ಒಳಮುಖವಾಗಿ ಎಳೆಯಿರಿ. |
02:57 | ಗಾತ್ರವನ್ನು ಹೆಚ್ಚಿಸಲು ಬಾಣದ ಗುರುತನ್ನು ಹೊರಮುಖವಾಗಿ ಎಳೆಯಿರಿ. |
03:00 | ಬಾಣದ ಗುರುತನ್ನು ದೊಡ್ಡದಾಗಿ ಮಾಡಲು, ಮೊದಲಿಗೆ ಸೆಲೆಕ್ಟ್ ಮಾಡಿ. |
03:04 | ಈಗ ಕರ್ಸರ್ ರನ್ನು ಹ್ಯಾಂಡಲ್ ಒಂದರ ಮೇಲೆ ಮೂವ್ ಮಾಡಿ. |
03:07 | ಈಗ ಒಂದು ಚಿಕ್ಕ ಪಾರದರ್ಶಕ ಬಾಣದ ಗುರುತು ಚೌಕದೊಂದಿಗೆ ಕರ್ಸರ್ ನ ಕೆಳಗೆ ಕಾಣಸಿಗುತ್ತದೆ. |
03:14 | ಈಗ ಕೀಬೋರ್ಡ್ ನ ಶಿಫ್ಟ್ ಕೀ ಯನ್ನು ಒತ್ತಿರಿ. ಮೌಸ್ ನ ಎಡ ಬಟನ್ ನ್ನು ಹಿಡಿಯಿರಿ ಮತ್ತು ಬಾಣದ ಗುರುತಿನ ಹ್ಯಾಂಡಲ್ ಬಳಸುತ್ತ ಕೆಳಗೆ ಎಳೆಯಿರಿ. |
03:25 | ರೀ ಸೈಜ್ ಮಾಡುವ ಪ್ರಕ್ರಿಯೆಗೆ ಶಿಫ್ಟ್ ಕೀ ಯನ್ನು ಬಳಸಿದ್ದಲ್ಲಿ ಸುಲಭದಲ್ಲಿ ಆಗುತ್ತದೆ, ಅಲ್ಲವೇ? |
03:32 | ಹ್ಯಾಂಡಲ್ಸ್ ಬಳಸಿ ಆಬ್ಜೆಕ್ಟ್ಸ್ ರೀಸೈಜ್ ಮಾಡುವ ಪ್ರಕ್ರಿಯೆಗೆ “ಡೈನಮಿಕ್ ರೀಸೈಜ್” ಎಂದು ಹೆಸರು. |
03:38 | ಅಂದರೆ ನಾವಿಲ್ಲಿ ಯಾವುದೇ ಖಚಿತವಾದ ಮಾಪನಗಳನ್ನು ಬಳಸುವುದಿಲ್ಲ. |
03:42 | ಮುಂದಿನ ಟ್ಯುಟೊರಿಯಲ್ ಗಳಲ್ಲಿ ನಾವು ಖಚಿತವಾಗಿ ರೀ ಸೈಜ್ ಮಾಡುವುದನ್ನು ಕಲಿಯಲಿದ್ದೆವೆ. |
03:47 | ಇದೇ ವಿಧಾನದಲ್ಲಿ ಆಯತದ ಅಗಲವನ್ನು ಹೆಚ್ಚಿಸೋಣ. |
03:52 | ಆಯತವನ್ನು ಸೆಲೆಕ್ಟ್ ಮಾಡಿ, ಶಿಫ್ಟ್ ಕೀ ಯನ್ನು ಪ್ರೆಸ್ ಮಾಡಿ ಮತ್ತು ಮೇಲಕ್ಕೆ ಎಳೆಯಿರಿ. |
03:59 | ಡ್ರಾ ವಿಂಡೋನ ಕೆಳಗಿರುವ ಸ್ಟೇಟಸ್ ಬಾರ್ ನ್ನು ನೋಡಿ. |
04:03 | ಗಮನಿಸಿ, ನಾವು ರೀ ಸೈಜ್ ಮಾಡಿದಾಗ ಆಯತದ ಅಳತೆಯು ಬದಲಾಗಿದೆ. |
04:09 | ಬದಲಾದ ಸ್ಥಾನ ಮತ್ತು ಅಳತೆಯು ಸ್ಟೇಟಸ್ ಬಾರ್ ನಲ್ಲಿ ಕಾಣಸಿಗುತ್ತದೆ. |
04:16 | ಈಗ ಇಲ್ಲಿ ತೊರಿಸಿರುವಂತೆ ಮೊಡಗಳನ್ನು ಮತ್ತು ಸೂರ್ಯನನ್ನು ಜೋಡಿಸೊಣ. |
04:20 | ಮೊಡಗಳನ್ನು ಗುರುತಿಸಲು ಅವುಗಳಿಗೆ ಎಡದಿಂದ ೧, ೨, ೩, ೪, ಎಂದು ಹೆಸರಿಸೋಣ. |
04:29 | ಸಂಖ್ಯೆಗಳನ್ನು ಅಳವಡಿಸಲು, ಮೊಡವನ್ನು ಸೆಲೆಕ್ಟ್ ಮಾಡಿ ಡಬಲ್ ಕ್ಲಿಕ್ ಮಾಡಿ ಮತ್ತು ೧ ನ್ನು ಟೈಪ್ ಮಾಡಿ. |
04:36 | ಉಳಿದ ಮೊಡಗಳಿಗೂ ಸಂಖ್ಯೆಗಳನ್ನು ನಮೂದಿಸಿ. |
04:44 | ಈಗ ೪ ನೇ ಮೊಡವನ್ನು ಸೆಲೆಕ್ಟ್ ಮಾಡಿ ಅದನ್ನು ಸೂರ್ಯನ ಮೇಲೆ ಇಡೋಣ. |
04:49 | ಈ ಮೊಡವನ್ನು ಸೂರ್ಯನ ಹಿಂದೆ ಇರಿಸಲು, ಕಾಂನ್ಟೆಕ್ಸ್ಟ್ ಮೆನುವಿಗಾಗಿ ರೈಟ್ ಕ್ಲಿಕ್ ಮಾಡಿ. |
04:55 | “Arrange” ನ್ನು ಕ್ಲಿಕ್ ಮಾಡಿ ಮತ್ತು “Send Backward” ನ್ನು ಸೆಲೆಕ್ಟ್ ಮಾಡಿ. |
04:58 | ಈಗ ೪ ನೇ ಮೊಡವು ಸೂರ್ಯನ ಹಿಂದಿದೆ. |
05:02 | “Send Backward” ಕೀ ಯು ಕಾಣುತ್ತಿರುವ ಆಬ್ಜೆಕ್ಟ್ ಅನ್ನು ಒಂದು ಹಂತ ಹಿಂಬದಿಗೆ ಕಳಿಸುತ್ತದೆ. |
05:07 | ಈಗ ೩ ನೇ ಮೊಡವನ್ನು ಸೆಲೆಕ್ಟ್ ಮಾಡಿ ಅದನ್ನು ಸೂರ್ಯನ ಮೇಲೆ ಇಡೋಣ. |
05:12 | ಕಾಂನ್ಟೆಕ್ಸ್ಟ್ ಮೆನುವಿಗಾಗಿ ರೈಟ್ ಕ್ಲಿಕ್ ಮಾಡಿ. “Arrange” ನ್ನು ಕ್ಲಿಕ್ ಮಾಡಿ, ಮತ್ತು “Send to back” ಅನ್ನು ಸೆಲೆಕ್ಟ್ ಮಾಡಿ. |
05:18 | ಈಗ ೩ ನೇ ಮೊಡವು ಸೂರ್ಯನ ಮತ್ತು ೪ ನೇ ಮೊಡದ ಹಿಂದಿದೆ. |
05:23 | “Send to back” ಕೀ ಯು ಓಬ್ಜೆಕ್ಟ್ ಅನ್ನು ಉಳಿದೆಲ್ಲವುದಕ್ಕಿಂತ ಹಿಂದಕ್ಕೆ ಕಳಿಸುತ್ತದೆ. |
05:28 | ಸ್ಲೈಡ್ ನಲ್ಲಿ ತೊರಿಸಿರುವಂತೆ ಮೊಡಗಳ ಜೊಡಣೆ ಈಗ ಸರಳವಾಗಿದೆ. |
05:32 | ೪ ನೇ ಮೊಡವನ್ನು ಸೆಲೆಕ್ಟ್ ಮಾಡಿ, ಕಾಂಟೆಕ್ಸ್ಟ್ ಮೆನುವಿಗಾಗಿ ರೈಟ್ ಕ್ಲಿಕ್ ಮಾಡಿ, “Arrange” ನ್ನು ಕ್ಲಿಕ್ ಮಾಡಿ ಮತ್ತು “Bring to front” ನ್ನು ಸೆಲೆಕ್ಟ್ ಮಾಡಿ. |
05:40 | “Bring to front” ಕಿ ಯು ಆಬ್ಜೆಕ್ಟ್ ನ್ನು ಎಲ್ಲದಕ್ಕಿಂತ ಮುಂದಕ್ಕೆ ತರುತ್ತದೆ. |
05:44 | ಮತ್ತೆ ೩ ನೇ ಮೊಡವನ್ನು ಸೆಲೆಕ್ಟ್ ಮಾಡಿ, ಕಾಂಟೆಕ್ಸ್ಟ್ ಮೆನುವಿಗಾಗಿ ರೈಟ್ ಕ್ಲಿಕ್ ಮಾಡಿ, “Arrange” ನ್ನು ಕ್ಲಿಕ್ ಮಾಡಿ ಮತ್ತು “Bring forward” ನ್ನು ಸೆಲೆಕ್ಟ್ ಮಾಡಿ. |
05:52 | “Bring forward” ಕೀ ಯು ಓಬ್ಜೆಕ್ಟ್ ಅನ್ನು ಒಂದು ಹಂತ ಮುಂದಕ್ಕೆ ತರುತ್ತದೆ. |
05:57 | ಈಗ ೨ ನೇ ಮೊಡವನ್ನುಸೆಲೆಕ್ಟ್ ಮಾಡಿ ಮತ್ತು ೧ ನೇ ಮೊಡದ ಮೆಲೆ ಇಡಿ. |
06:01 | ಈಗ ಸ್ಲೈಡ್ ನಲ್ಲಿ ತೊರಿಸಿರುವಂತೆ ಮೋಡಗಳನ್ನು ಜೊಡಿಸಲಾಗಿದೆ. |
06:07 | ನಂತರ ಮೊಡಗಳ ಸಂಖ್ಯೆಯನ್ನು ಡಿಲೀಟ್ ಮಾಡೊಣ. |
06:10 | ಹಾಗೆ ಮಾಡಲು ಮೊಡವನ್ನು ಸೆಲೆಕ್ಟ್ ಮಾಡಿ ಮತ್ತು ಡಬಲ್ ಕ್ಲಿಕ್ ಮಾಡಿ. ನಂತರ ಸಂಖ್ಯೆಯನ್ನು ಸೆಲೆಕ್ಟ್ ಮಾಡಿ ಕೀಬೋರ್ಡ್ ನಲ್ಲಿರುವ ಡಿಲೀಟ್ ಕೀಯನ್ನು ಒತ್ತಿ. |
06:23 | ಅಸೈನ್ಮೆಟ್ ಮಾಡಲು ಈ ಟ್ಯುಟೊರಿಯಲ್ ಅನ್ನು ಇಲ್ಲಿಗೆ ನಿಲ್ಲಿಸಿ. |
06:26 | ಒಂದು ವೃತ್ತ, ಚೌಕ ಮತ್ತು ನಕ್ಷತ್ರ ವನ್ನು ಬಿಡಿಸಿ ಈ ಕೆಳಗೆ ತೋರಿಸಿರುವಂತೆ ಜೊಡಿಸಿ. |
06:32 | Arrange ಮೆನು ವಿನಲ್ಲಿರುವ ಎಲ್ಲಾ ಆಯ್ಕೆಗಳನ್ನು ಪ್ರತಿಯೊಂದು ಚಿತ್ರದ ಮೇಲೆ ಪ್ರಯೋಗಿಸಿ. |
06:38 | ಪ್ರತಿಯೊಂದು ವಿಕಲ್ಪದಲ್ಲೂ ಚಿತ್ರದ ಸ್ಥಾನವು ಬದಲಾಗುವುದನ್ನು ಗಮನಿಸಿ. |
06:44 | ಈಗ ಸ್ಲೈಡ್ ನಲ್ಲಿ ತೋರಿಸಿರುವಂತೆ ಚಿತ್ರಗಳನ್ನು ಜೋಡಿಸಿ ಮತ್ತು ಹಿಂದೆ ಮುಂದೆ ಮಾಡಲು “To front” ಮತ್ತು “To back” ಆಯ್ಕೆ ಗಳನ್ನು ಬಳಸಿ. |
06:53 | ನಂತರ ಸ್ಲೈಡ್ ನಲ್ಲಿ ತೊರಿಸಿರುವಂತೆ ವಾಟರ್ ಸರ್ಕಲ್ ರೆಖಾಚಿತ್ರಕ್ಕೆ ಮರಗಳನ್ನು ಜೋಡಿಸೊಣ. |
06:59 | ನಾವು ಮರದ ಚಿತ್ರವನ್ನು Block Arrow ಮತ್ತು Explosion ಗಳನ್ನು ಬಳಸಿ ಚಿತ್ರಿಸಬಹುದು. |
07:05 | Insert ಅನ್ನು ಕ್ಲಿಕ್ ಮಾಡಿ ನಂತರ Slide ಅನ್ನು ಕ್ಲಿಕ್ ಮಾಡುವ ಮೂಲಕ ಈ ಸ್ಲೈಡ್ ಗೆ ಒಂದು ಹೊಸ ಡ್ರಾ ಪೆಜ್ ನ್ನು ಜೊಡಿಸೋಣ. |
07:11 | ಇದು ನಮ್ಮ ಫೈಲ್ ಗೆ ಒಂದು ಹೊಸ ಪೇಜ್ ನ್ನು ಜೋಡಿಸುತ್ತದೆ. |
07:15 | ಮರದ ಬುಡವನ್ನು ಚಿತ್ರಿಸಲು, ಡ್ರಾಯಿಂಗ್ ಟೂಲ್ ಬಾರ್ ನಲ್ಲಿರುವ “Block Arrows” ನ್ನು ಸೆಲೆಕ್ಟ್ ಮಾಡಿ. |
07:21 | ಲಭ್ಯವಿರುವ ಆಕಾರಗಳಿಗಾಗಿ ಸಣ್ಣ ಕಪ್ಪು ತ್ರಿಕೋನದ ಮೇಲೆ ಕ್ಲಿಕ್ ಮಾಡಿ ಮತ್ತು “Split Arrow” ವನ್ನು ಸೆಲೆಕ್ಟ್ ಮಾಡಿ. |
07:28 | ಕರ್ಸರ್ ನ್ನು ಪೇಜ್ ಮೇಲಿಡಿ, ಮೌಸ್ ನ ಎಡ ಬಟನ್ ಒತ್ತಿಡಿದು ಕೆಳಮುಖವಾಗಿ ಮತ್ತು ಹೊರಮುಖವಾಗಿ ಎಳೆಯಿರಿ. |
07:35 | ನೀವೀಗ ಎರಡು ರೆಂಬೆಗಳಿರುವ ಮರದ ಬುಡದ ಚಿತ್ರ ಬಿಡಿಸಿರುವಿರಿ. |
07:39 | ಈಗ ರೆಂಬೆಗಳಿಗೆ ಎಲೆಗಳನ್ನು ಸೇರಿಸೋಣ. |
07:42 | ಡ್ರಾಯಿಂಗ್ ಟೂಲ್ ಬಾರ್ ನಲ್ಲಿರುವ ನಕ್ಷತ್ರಗಳನ್ನು ಸೆಲೆಕ್ಟ್ ಮಾಡಿ. |
07:45 | ನಂತರ ಸಣ್ಣ ಕಪ್ಪು ತ್ರಿಕೋಣದ ಮೇಲೆ ಕ್ಲಿಕ್ ಮಾಡಿ ಮತ್ತು “Explosion” ನ್ನು ಸೆಲೆಕ್ಟ್ ಮಾಡಿ. |
07:51 | ಈಗ ಡ್ರಾ ಪೇಜ್ ಗೆ ಬನ್ನಿ, ಕರ್ಸರ್ ನ್ನು ಎಡ ರೆಂಬೆಯ ಮೇಲಿಟ್ಟು, ಆಕಾರ ನೀಡಲು ಮೌಸ್ ನ ಎಡ ಬಟನ್ ಹಿಡಿದು ಎಡಮುಖವಾಗಿ ಎಳೆಯಿರಿ. |
08:01 | ನಾವೀಗ ಮರಕ್ಕೆ ಎಲೆಗಳನ್ನು ಜೋಡಿಸಿದ್ದೇವೆ. |
08:04 | ನಾವೀಗ ಮಾಡಿದ ಆಕಾರವನ್ನು ಮರದ ಬಲರೆಂಬೆಗೂ ಕೂಡ ಕಾಪಿ ಮಾಡಬೇಕಿದೆ. |
08:09 | ಆಕಾರವನ್ನು ಸೆಲೆಕ್ಟ್ ಮಾಡಿ. |
08:11 | ಕೀ ಬೊರ್ಡ್ ನಲ್ಲಿ, ಕಾಪಿ ಮಾಡಲು CTRL+C ಪ್ರೆಸ್ ಮಾಡಿ. |
08:15 | ನಂತರ ಪೇಸ್ಟ್ ಮಾಡಲು CTRL+V ಪ್ರೆಸ್ ಮಾಡಿ. |
08:19 | ಈಗ ಆಕಾರವನ್ನು ಮರದ ಬಲರೆಂಬೆಗೆ ಮೂವ್ ಮಾಡಿ. |
08:22 | ನಾವೀಗ ಮರದ ಚಿತ್ರವನ್ನು ಬಿಡಿಸಿದ್ದೇವೆ ! |
08:25 | ಮರವನ್ನು ಸೆಲೆಕ್ಟ್ ಮಾಡಿ ಅದನ್ನು ಕೆಳಭಾಗಕ್ಕೆ ಕೊಂಡೊಯ್ಯೋಣ. |
08:28 | ಕೇವಲ ಮರದ ಬುಡವು ಮಾತ್ರ ಮೂವ್ ಆಗುತ್ತಿದೆ. ಎಲೆಗಳು ಆಗುತ್ತಿಲ್ಲ! |
08:32 | ಇಲ್ಲಿ ಮರದ ಬುಡ ಮತ್ತು ಎಲೆಗಳು ಭಿನ್ನ ಭಿನ್ನ ಆಕಾರಗಳಾಗಿವೆ. |
08:38 | ಮರದ ಬುಡವನ್ನು ಹಿಂದೆ ಇದ್ದ ಸ್ಥಾನಕ್ಕೆ ಕೊಂಡೊಯ್ಯೋಣ. |
08:41 | ನಾವೀಗ ಮರದ ಬುಡ ಮತ್ತು ಎಲೆಗಳ ಒಂದೊಂದೇ ಘಟಕವನ್ನು ಒಂದು ಗುಂಪನ್ನಾಗಿ ಮಾಡುವುದನ್ನು ಕಲಿಯೋಣ. |
08:47 | ಗುಂಪಿನಲ್ಲಿ ಮಾಡಿದ ಬದಲಾವಣೆಯು ಆ ಗುಂಪಿನಲ್ಲಿರುವ ಎಲ್ಲಾ ವಸ್ತುಗಳಲ್ಲು ಕೂಡ ಬದಲಾವಣೆಯನ್ನು ತರುತ್ತದೆ. |
08:53 | ಮೊದಲಿಗೆ ಪೇಜ್ ಮೇಲೆ ಕ್ಲಿಕ್ ಮಾಡಿ, ಈಗ ಯಾವುದೇ ವಸ್ತುಗಳು ಆಯ್ಕೆಯಾಗಿಲ್ಲ. |
08:58 | ನಂತರ ಡ್ರಾಯಿಂಗ್ ಟೂಲ್ ಬಾರ್ ನಿಂದ “Select” ನ್ನು ಕ್ಲಿಕ್ ಮಾಡಿ. |
09:02 | ಕರ್ಸರನ್ನು ಪೇಜ್ ಗೆ ಮೂವ್ ಮಾಡಿ ಮತ್ತು ಕ್ಲಿಕ್ ಮಾಡಿ. |
09:05 | ಈಗ ಮೌಸ್ ನ ಎಡ ಬಟನ್ ಒತ್ತಿ ಚಿತ್ರದಲ್ಲಿರುವ ಎಲ್ಲಾ ವಸ್ತುಗಳು ಸೆಲೆಕ್ಟ್ ಆಗುವ ಹಾಗೆ ಎಳೆಯಿರಿ. |
09:11 | ಚುಕ್ಕೆಗಳುಳ್ಳ ಆಯತಾಕಾರವು ನಿಮಗೆ ಕಾಣುತ್ತಿದೆ. |
09:14 | ಆಯತದಲ್ಲಿರುವ ಎಲ್ಲಾ ಮರದ ಅವಯವಗಳು ಸೆಲೆಕ್ಟ್ ಆಗಿವೆಯೇ ಎಂದು ಖಚಿತಪಡಿಸಿಕೊಳ್ಳಿ. |
09:20 | ಅಲ್ಲದೆ, ನೀವು ಶಿಫ್ಟ್ ಯನ್ನು ಹಿಡಿದು ಕ್ಲಿಕ್ ಮಾಡುವುದರ ಮೂಲಕ ಎರಡಕ್ಕಿಂತ ಹೆಚ್ಚು ವಸ್ತುಗಳನ್ನು ಸೆಲೆಕ್ಟ್ ಮಡಬಹುದು. |
09:28 | ಕಾಂಟೆಕ್ಸ್ಟ್ ಮೆನುಗಾಗಿ ರೈಟ್ ಕ್ಲಿಕ್ ಮಾಡಿ ಮತ್ತು “Group” ನ್ನು ಸೆಲೆಕ್ಟ್ ಮಾಡಿ. |
09:32 | ಈಗ ಮರದ ಯಾವುದೇ ಅವಯವದ ಮೇಲೆ ಕ್ಲಿಕ್ ಮಾಡಿ. |
09:36 | ಆವುಗಳು ಒಂದೇ ಗಣವಾಗಿರುವುದರಿಂದ ಹ್ಯಾಂಡಲ್ಸ್ ಗಳು ಕಾಣುತ್ತಿವೆ. |
09:40 | ಈ ವಸ್ತುಗಳೆಲ್ಲಾ ಈಗ ಒಂದೇ ಘಟಕವಾಗಿ ಮಾರ್ಪಟ್ಟಿವೆ. |
09:45 | ಅವುಗಳನ್ನು ಪ್ರತ್ಯೇಕ ವಸ್ತುಗಳನ್ನಾಗಿ ಮಾಡಲು, ಮರವನ್ನು ಸೆಲೆಕ್ಟ್ ಮಾಡಿ, ರೈಟ್ ಕ್ಲಿಕ್ ಮಾಡಿ ಮತ್ತು “UnGroup” ನ್ನು ಸೆಲೆಕ್ಟ್ ಮಾಡಿ. |
09:52 | ಈಗ ಚಿತ್ರಗಳು ಅನ್ ಗ್ರೂಪ್ ಆಗಿವೆ ಮತ್ತು ಪ್ರತ್ಯೇಕ ಘಟಕಗಳಾಗಿವೆ. |
09:56 | ಈಗ ಮತ್ತೆ ಅವುಗಳನ್ನು ಗ್ರೂಪ್ ಮಾಡೋಣ. |
09:58 | ಶಿಫ್ಟ್ ಕೀ ಯನ್ನು ಪ್ರೆಸ್ ಮಾಡಿ ಮತ್ತು ಒಂದೊಂದಾಗಿ ಎಲ್ಲಾ ಚಿತ್ರಗಳನ್ನು ಸೆಲೆಕ್ಟ್ ಮಾಡಿ. |
10:03 | ರೈಟ್ ಕ್ಲಿಕ್ ಮಾಡಿ ಮತ್ತು “Group” ನ್ನು ಸೆಲೆಕ್ಟ್ ಮಾಡಿ. |
10:06 | ಈಗ ನಮ್ಮ ಮಖ್ಯವಾದ ಡ್ರಾಯಿಂಗ್ ಪೇಜ್ ಆದ ಮೊದಲನೇ ಪುಟಕ್ಕೆ ಈ ಮರವನ್ನು ಕಾಪಿ ಮಾಡೋಣ. |
10:10 | ಕಾಪಿ ಮಾಡಲು Ctrl ಮತ್ತು C ಯನ್ನು ಒತ್ತಿ, ಮತ್ತು ಮೊದಲನೇ ಪೇಜ್ ಮೇಲೆ ಕ್ಲಿಕ್ ಮಾಡಿ, ಪೇಸ್ಟ್ ಮಾಡಲು Ctrl ಮತ್ತು V ಯನ್ನು ಬಳಸಿ. |
10:17 | ಈಗ, ಗ್ರೂಪ್ ನಲ್ಲಿರುವ ಒಂದು ಪ್ರತ್ಯೇಕ ಚಿತ್ರವನ್ನು ಎಡಿಟ್ ಮಾಡಬೇಕೆಂದುಕೊಳ್ಳಿ. ಏನು ಮಾಡುವುದಾವಾಗ ? |
10:23 | ಚಿತ್ರಗಳನ್ನು ಅನ್ ಗ್ರೂಪ್ ಮತ್ತು ರೀ ಗ್ರೂಪ್ ಮಾಡದೇ ಎಡಿಟ್ ಮಾಡುವ ಒಂದು ಸುಲಭವಾದ ಕ್ರಿಯೆಯನ್ನು ತೋರಿಸುತ್ತೇನೆ ನೋಡಿ. |
10:30 | ಗ್ರೂಪ್ ಅನ್ನು ಸೆಲೆಕ್ಟ್ ಮಾಡಿ ಮತ್ತು ಕಾಂಟೆಕ್ಸ್ಟ್ ಮೆನುವಿಗಾಗಿ ರೈಟ್ ಕ್ಲಿಕ್ ಮಾಡಿ. |
10:33 | “Enter Group” ನ್ನು ಸೆಲೆಕ್ಟ್ ಮಾಡಿ. |
10:35 | ಗಮನಿಸಿ, ನಾವು ಸೆಲೆಕ್ಟ್ ಮಾಡಿದ ಚಿತ್ರವನ್ನು ಬಿಟ್ಟು ಉಳಿದೆಲ್ಲಾ ಚಿತ್ರಗಳು ನಿಷ್ಕಿಯವಾಗಿವೆ. |
10:39 | ಈಗ ಈ ಗ್ರೂಪ್ ನಲ್ಲಿರುವ ಪ್ರತ್ಯೇಕ ಚಿತ್ರವನ್ನು ಎಡಿಟ್ ಮಾಡಬಹುದಾಗಿದೆ. |
10:43 | ಉದಾಹರಣೆಗೆ ಮರದ ಬಲಭಾಗದ ಎಲೆಗಳನ್ನು ಸೆಲೆಕ್ಟ್ ಮಾಡಿ ಅದರ ಗಾತ್ರವನ್ನು ಚಿಕ್ಕದಾಗಿಸೋಣ. |
10:51 | ಮುಂದಿನ ಪ್ರಕ್ರಿಯೆಗಾಗಿ Ctrl+ Z ಪ್ರೆಸ್ ಮಾಡಿ ಅನ್ ಡೂ ಮಾಡೋಣ. |
10:56 | ನಾವೀಗ ಈ ವಾಟರ್ ಸೈಕಲ್ ಚಿತ್ರಕ್ಕೆ ಅಳವಡಿಸಲು ಬೇಕಾಗುವ ಗಾತ್ರಕ್ಕೆ ಈ ಮರದ ಗಾತ್ರವನ್ನು ಕುಗ್ಗಿಸಬೇಕಿದೆ. |
11:02 | ನಾವೀಗ ಗ್ರೂಪ್ ನ “ಎಡಿಟ್” ಮೋಡ್ ನಿಂದ ಹೊರಬರಬೇಕಿದೆ. |
11:05 | ಗ್ರೂಪ್ ನಿಂದ ಹೊರಬರಲು, ಕರ್ಸರನ್ನು ಪೇಜ್ ನ ಮೇಲಿಟ್ಟು ರೈಟ್ ಕ್ಲಿಕ್ ಮಾಡಿ ಮತ್ತು “Exit Group” ನ್ನು ಸೆಲೆಕ್ಟ್ ಮಾಡಿ. |
11:13 | ನಾವೀಗ ಗ್ರುಪ್ ನ “ಎಡಿಟ್” ಮೊಡ್ ನಿಂದ ಹೊರ ಬಂದ್ದಿದ್ದೇವೆ. |
11:16 | ಮರವನ್ನು ಸೆಲೆಕ್ಟ್ ಮಾಡಿ ಮತ್ತು ಕರ್ಸರನ್ನು ಕೆಳಗಿನ ಬಲ ಹ್ಯಾಂಡಲ್ ಕಡೆಗೆ ಮೂವ್ ಮಾಡಿ. |
11:21 | ಕರ್ಸರ್, ರೀ ಸೈಜ್ ಆರೋ ಆಗಿ ಬದಲಾಗುತ್ತದೆ. |
11:24 | ಆರೋ ವನ್ನು ಒಳಮುಖವಾಗಿ ಎಳೆಯಿರಿ. |
11:26 | ನಾವೀಗ ಮರದ ಗಾತ್ರವನ್ನು ಕುಗ್ಗಿಸಿದ್ದೇವೆ. |
11:29 | ಈ ಚಿತ್ರಕ್ಕೆ ಇನ್ನೂ ಮೂರು ಮರದ ಚಿತ್ರಗಳನ್ನು ಜೋಡಿಸೋಣ. |
11:32 | ಮರವನ್ನು ಸೆಲೆಕ್ಟ್ ಮಾಡಿ, ಕಾಪಿ ಮಾಡಲು Ctrl ಮತ್ತು C ಯನ್ನು ಪ್ರೆಸ್ ಮಾಡಿ ಹಾಗೂ, ಪೇಸ್ಟ್ ಮಾಡಲು Ctrl ಮತ್ತು Vಯನ್ನು ಮೂರು ಬಾರಿ ಪ್ರೆಸ್ ಮಾಡಿ. |
11:39 | ಇದರಿಂದ ಮರದ ಮೂರು ಪ್ರತಿಕೃತಿಗಳು ಸಿಗುತ್ತವೆ. |
11:41 | ನಾವೀಗ ಅವುಗಳನ್ನು ಬೆಕಾದ ಜಾಗಕ್ಕೆ ಕೊಂಡೊಯ್ಯೋಣ. |
11:45 | ಈ ಕ್ರಿಯೆಯನ್ನು ಮರಗಳಿಗೂ ಅನುವರ್ತಿಸೋಣ. |
11:51 | ನೆನಪಿರಲಿ, ಒಂದೊಂದು ಮರವೂ ಕೂಡ ಮೂರು ಪ್ರತ್ಯೇಕ ಚಿತ್ರಗಳಿಂದ ಆಗಿದೆ. |
11:55 | ಪ್ರತಿಯೊಂದು ಮರವು ಒಂದೊಂದು ಗ್ರೂಪ್ ಆಗಿದೆ. |
11:58 | ನಾವೀಗ ಚಿತ್ರಗಳಿಂದ ಕೂಡಿದ ಗ್ರೂಪ್ ಗಳನ್ನು ಮಾಡಿದ್ದೇವೆ. |
12:01 | ನಾವೀಗ ಚಿತ್ರದಲ್ಲಿ ನೀರನ್ನು ಬಿಡಿಸೋಣ. |
12:04 | ನೀರಿನ ಪರಿಣಾಮ ನೀಡಲು, ಚಿತ್ರದಲ್ಲಿನ ಆಯತಕ್ಕೆ ಒಂದು ತ್ರಿಕೋಣವನ್ನು ಹಾಗೂ ಅದಕ್ಕೊಂದು ಕರ್ವ್ ನ್ನು ಜೋಡಿಸಬೇಕು. |
12:12 | ತ್ರಿಕೋಣವನ್ನು ಬಿಡಿಸಲು “Drowing ಟೂಲ್ ಬಾರ್” ನಿಂದ “Basic Shapes” ನ್ನು ಸೆಲೆಕ್ಟ್ ಮಾಡಿ. |
12:18 | ಚಿಕ್ಕ ಕಪ್ಪು ತ್ರಿಕೋಣದ ಮೇಲೆ ಕ್ಲಿಕ್ ಮಾಡಿ ಮತ್ತು “Right Triangle” ನ್ನು ಸೆಲೆಕ್ಟ್ ಮಾಡಿ. |
12:24 | ಅದನ್ನು ಬಿಡಿಸಿ ಮತ್ತು ಆಯತದ ಪಕ್ಕದಲ್ಲಿ ಜೋಡಿಸಿ. |
12:28 | ನೀರಿನ ಪರಿಣಾಮವನ್ನು ಚಿತ್ರಿಸಲು ತಿರುವುಗಳಿಂದ ಕೂಡಿರುವ ಕರ್ವ್ ನ್ನು ಬಿಡಿಸಿ. |
12:34 | “Drowing ಟೂಲ್ ಬಾರ್” ನಿಂದ “Curve” ಸೆಲೆಕ್ಟ್ ಮಾಡಿ, ಈಗ “Freeform Line, Filled” ನ್ನು ಕ್ಲಿಕ್ ಮಾಡಿ. |
12:42 | ನಂತರ ಕರ್ಸರ್ ನ್ನು ಆಯತದ ಮೇಲಿಟ್ಟು ಮೌಸ್ ನ ಎಡ ಬಟನ್ ಹಿಡಿದು ಕೆಳಮುಖವಾಗಿ ಎಳೆಯಿರಿ. |
12:49 | ಹರಿಯುವ ನೀರಿನ ಹಾಗೆ ಕಾಣಲು ಅದಕ್ಕೆ ನಾವೀಗ ಕರ್ವ್ ನ್ನು ಜೋಡಿಸೋಣ. |
12:56 | ತ್ರಿಕೋಣ ಮತ್ತು ಕರ್ವ್ ಗಳಿಂದ ನೀರಿನ ಚಿತ್ರಣ ಬಂದಿದೆ, ಎಲ್ಲವನ್ನು ಕೂಡಿಸಿ ಒಂದೇ ಚಿತ್ರವನ್ನಾಗಿ ಗ್ರೂಪ್ ಮಾಡೋಣ. |
13:03 | Drawing ಟೂಲ್ ಬಾರ್ ನಲ್ಲಿ Select ನ್ನು ಕ್ಲಿಕ್ ಮಾಡಿ. |
13:07 | ಈಗ ಕರ್ಸರ್ ನ್ನು ಪೇಜ್ ಮೇಲಿಟ್ಟು ಎಡ ಮೌಸ್ ಬಟನ್ ನ್ನು ಒತ್ತಿಡಿದು ತ್ರಿಕೋಣ ಮತ್ತು ಕರ್ವ್ ಗಳನ್ನು ಸೇರಿಸಿಕೊಳ್ಳಿ. |
13:16 | ರೈಟ್ ಕ್ಲಿಕ್ ಮಾಡಿ ಮತ್ತು Group ನ್ನು ಸೆಲೆಕ್ಟ್ ಮಾಡಿ. |
13:18 | ನಾವೀಗ ವಾಟರ್ ಸೈಕಲ್ ನ ಮೂಲಭೂತ ರೂಪುರೇಖೆಯನ್ನು ತಯಾರಿಸಿದ್ದೇವೆ. |
13:23 | ನಿಮಗಿಲ್ಲಿ ಅಭ್ಯಾಸವಿದೆ. |
13:26 | ನೀವೇ ಸ್ವಂತವಾಗಿ ಈ ಚಿತ್ರವನ್ನು ತಯಾರಿಸಿ. |
13:30 | ಇಲ್ಲಿಗೆ ಚಿತ್ರ ಬಿಡಿಸುವ ಈ ಟ್ಯುಟೋರಿಯಲ್ ಮುಗಿಯಿತು. |
13:33 | ಈ ಟ್ಯುಟೋರಿಯಲ್ ನಲ್ಲಿ ನೀವು ಚಿತ್ರಬಿಡಿಸುವ ಮೂಲಭೂತ ಅಂಶವನ್ನು ಕಲಿತಿದ್ದೀರಿ. |
13:39 | ನೀವು, ಚಿತ್ರಗಳನ್ನು ಕಟ್, ಕಾಪಿ ಮತ್ತು ಪೇಸ್ಟ್ ಮಾಡುವುದು, |
13:42 | ಹ್ಯಾಂಡಲ್ಸ್ ಬಳಸಿ ಚಿತ್ರಗಳನ್ನು ರೀ-ಸೈಜ್ ಮಾಡುವುದು, |
13:46 | ಚಿತ್ರಗಳ ಜೋಡಣೆ, |
13:48 | ಚಿತ್ರಗಳ ಗ್ರೂಪ್ ಮತ್ತು ಅನ್ ಗ್ರೂಪ್, |
13:50 | ಗ್ರೂಪ್ ನಲ್ಲಿರುವ ಪ್ರತ್ಯೇಕ ಚಿತ್ರಗಳ ಎಡಿಟ್, |
13:53 | ಗ್ರೂಪ್ ನಲ್ಲಿರುವ ಆಬ್ಜೆಕ್ಟ್ ಗಳನ್ನು ಮೂವ್ ಮಾಡುವುದು ಇತ್ಯಾದಿಗಳನ್ನು ಕಲಿತಿದ್ದೀರಿ. |
13:57 | ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋವನ್ನು ನೋಡಿ. |
14:01 | ಇದು ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಸಾರಾಂಶವನ್ನು ತಿಳಿಸುತ್ತದೆ. |
14:04 | ನಿಮ್ಮಲ್ಲಿ ಉತ್ತಮ ಬ್ಯಾಂಡ್ ವಿಡ್ಥ್ ಇಲ್ಲವಾದಲ್ಲಿ ಇದನ್ನು ಡೌನ್ ಲೋಡ್ ಮಾಡಿ ನೋಡಿ. |
14:08 | ಸ್ಪೋಕನ್ ಟ್ಯುಟೊರಿಯಲ್ ಗಣವು ಈ ಪಾಠವನ್ನಾಧಾರಿಸಿ ಕಾರ್ಯಶಾಲೆಯನ್ನು ನಡೆಸುತ್ತದೆ. |
14:14 | ಯಾರು ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ. |
14:18 | ಹೆಚ್ಚಿನ ಮಾಹಿತಿಗಾಗಿ contact at spoken hyphen tutorial dot org ಎಂಬ ಈ-ಮೇಲ್ ಮೂಲಕ ಸಂಪರ್ಕಿಸಿ. |
14:24 | ಈ ಪಾಠವು ಟಾಕ್ ಟು ಎ ಟೀಚರ್ ಎಂಬ ಪರಿಯೋಜನೆಯ ಭಾಗವಾಗಿದೆ. |
14:28 | ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ. |
14:36 | ಇದರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆಳಗಿರುವ ಲಿಂಕ್ ಅನ್ನು ನೋಡಿ spoken hyphen tutorial dot org slash NMEICT hyphen Intro |
14:47 | ಈ ಪಾಠದ ಅನುವಾದಕ ಶೃಂಗೇರಿಯಿಂದ ದಯಾನಂದ ಮತ್ತು ಪ್ರವಾಚಕ ಐಐಟಿ ಯಿಂದ ವಾಸುದೇವ. ಸಹಯೊಗಕ್ಕಾಗಿ ಧನ್ಯವಾದಗಳು. |