LibreOffice-Suite-Calc/C3/Using-Charts-and-Graphs/Kannada
From Script | Spoken-Tutorial
Time | Narration |
00:00 | LibreOffice Calc ನಲ್ಲಿ ಸ್ಪ್ರೆಡ್ ಶೀಟ್ ನಲ್ಲಿ ಚಾರ್ಟ್ (Charts) ಗಳನ್ನು ಸೇರಿಸಲು (Inserting) ಕಲಿಯುವ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ. |
00:07 | ಈ ಟ್ಯುಟೋರಿಯಲ್ ನಲ್ಲಿ ನಾವು: |
00:11 | ಚಾರ್ಟ್ ಗಳನ್ನು ರಚಿಸಲು, ಸರಿಪಡಿಸಲು ಮತ್ತು ಫಾರ್ಮೇಟ್ ಮಾಡಲು, |
00:14 | ಚಾರ್ಟ್ ಗಳ ಗಾತ್ರವನ್ನು ಪುನಃ ಸರಿಪಡಿಸಲು ಮತ್ತು ಚಾಲಿಸಲು (moving) ಕಲಿಯಲಿದ್ದೇವೆ. |
00:18 | ಇಲ್ಲಿ ನಾವು Ubuntu Linux ನ 10.04 ನೇ ಆವೃತ್ತಿ ಮತ್ತು LibreOffice Suite ನ 3.3.4 ನೇ ಆವೃತ್ತಿಯನ್ನು ಅನ್ನು ಬಳಸುತ್ತಿದ್ದೇವೆ. |
00:27 | LibreOffice Calc ನಲ್ಲಿರುವ ವಿವಿಧ ಆಪ್ಷನ್ ಗಳ ಬಗ್ಗೆ ಕಲಿಯೋಣ. |
00:32 | ಚಾರ್ಟ್ ಗಳು ಮಾಹಿತಿಗಳನ್ನು ಓದುಗರಿಗೆ ಸಮರ್ಥವಾಗಿ ತಿಳಿಸುವ ಸಾಧನ. |
00:37 | LibreOffice Calc ನಿಮ್ಮ ದತ್ತಾಂಶಗಳಿಗೆ ಅನುಗುಣವಾದ ಅನೇಕ ರೀತಿಯ ಚಾರ್ಟ್ ಗಳನ್ನು ಒದಗಿಸುತ್ತದೆ. |
00:43 | Calc ಅನ್ನು ಉಪಯೋಗಿಸಿ ಚಾರ್ಟ್ ಗಳನ್ನು ಒಂದು ಮಿತಿಯವರೆಗೆ ವರ್ಗೀಕರಿಸಲೂಬಹುದು. |
00:48 | 'personal finance tracker.ods' ಹಾಳೆಯನ್ನು (sheet) ಅನ್ನು ಒಪನ್ ಮಾಡೊಣ. |
00:53 | ಹಾಳೆಯಲ್ಲಿ ಪಟ್ಟಿಗೊಂಡಿರುವ ಪ್ರತ್ಯೇಕ ವಿಷಯಕ್ಕೆ ಬಳಸಿರುವ (spent) ಮೊತ್ತವನ್ನು ನಮೂದಿಸೋಣ. |
00:59 | “E3” ಕೋಶವನ್ನು ಕ್ಲಿಕ್ ಮಾಡೊಣ ಮತ್ತು “6500” ಎನ್ನುವ ಮೊತ್ತವನ್ನು ಅಲ್ಲಿ ಟೈಪ್ ಮಾಡೊಣ. |
01:06 | ಹಾಗೆಯೇ “E4”,”E5”,”E6” ಮತ್ತು “E7” ಕೋಶಗಳಲ್ಲಿ ಕ್ರಮವಾಗಿ “1000”,”625”,”310” ಮತ್ತು “2700” ಎಂದು ಟೈಪ್ ಮಾಡೋಣ. |
01:26 | ಈಗ ನಾವು ಎಲ್ಲಾ ವಿಷಯಗಳಿಗೆ ಸಂಬಂಧಿಸಿದಂತೆ ಪಡೆದಿರುವ (received) ಮೊತ್ತವನ್ನು ಕೋಶಗಳಲ್ಲಿ ನಮೂದಿಸೋಣ. |
01:31 | “F3” ಕೋಶವನ್ನು ಕ್ಲಿಕ್ ಮಾಡೋಣ ಮತ್ತು “500” ಎಂದು ಮೊತ್ತವನ್ನು ನಮೂದಿಸೋಣ. |
01:37 | ನಂತರ “F4”,”F5”,”F6” ಮತ್ತು “F7” ಕೋಶಗಳಲ್ಲಿ ಕ್ರಮವಾಗಿ “200”,”75”,”10” ಮತ್ತು “700” ಎಂದು ನಮೂದಿಸೋಣ. |
01:54 | ಈ ಕೋಷ್ಟಕಕ್ಕೆ ಚಾರ್ಟ್ ಅನ್ನು ಹೇಗೆ ರಚಿಸುವುದೆಂದು ಕಲಿಯೋಣ. |
01:58 | ಚಾರ್ಟ್ ಅನ್ನು ರಚಿಸುವ ಮೊದಲು ಚಾರ್ಟ್ ನಲ್ಲಿ ಸೇರಿಸಬೇಕಾದ ದತ್ತಾಂಶಗಳನ್ನು ಆಯ್ಕೆ ಮಾಡಿಕೊಳ್ಳಬೇಕು. |
02:04 | “SN” ಕೊಶವನ್ನು ಕ್ಲಿಕ್ ಮಾಡಿ ಮತ್ತು ಮೌಸ್ ನ ಬಟನ್ ಅನ್ನು ಬಿಡದೆ ಕರ್ಸರ್ (cursor) ಅನ್ನು “700”ಮೊತ್ತವಿರುವ ಕೊನೆಯ ಕೋಶದವರೆಗೂ ಎಳೆಯಿರಿ.(drag) |
02:14 | ಈಗ ಮೆನು ಬಾರ್ ನಲ್ಲಿರುವ “Insert” ಆಪ್ಷನ್ ಮೇಲೆ ಕ್ಲಿಕ್ ಮಾಡಿ ನಂತರ “Chart” ಆಪ್ಷನ್ ಮೇಲೆ ಕ್ಲಿಕ್ ಮಾಡಿ. |
02:21 | ಮಾಹಿತಿಗಳೊಂದಿಗಿರುವ ಚಾರ್ಟ್ ಡಿಫಾಲ್ಟ್ ನಿಂದಲೇ ವರ್ಕ್ ಶೀಟ್ ನಲ್ಲಿ ಸೇರಿರುವುದನ್ನು ಗಮನಿಸಿ. |
02:27 | ಅದರೊಂದಿಗೆಯೇ "Chart Wizard" ಡಯಲಾಗ್ ಬಾಕ್ಸ್ ಓಪನ್ ಅಗಿರುತ್ತದೆ. |
02:32 | "Chart Wizard" ನಿಮಗೆ ಡಿಫಾಲ್ಟ್ ಚಾರ್ಟ್ ಆಯ್ಕೆ ಆಗಿರುವುದನ್ನು ತೋರಿಸುತ್ತದೆ. |
02:36 | ನೀವು Chart Wizard ನಲ್ಲಿ ಮಾಡಿರುವ ಬದಲಾವಣೆಗಳನ್ನು ತೋರ್ಪಡಿಸಲು ಡಿಫಾಲ್ಟ್ ಚಾರ್ಟ್ ಅಪ್ ಡೇಟ್ (updates) ಆಗುತ್ತದೆ. |
02:42 | The "Chart Wizard" ಡಯಲಾಗ್ ಬಾಕ್ಸ್ 3 ಮುಖ್ಯ ವಿಭಾಗಗಳನ್ನು ಹೊಂದಿದೆ. ಅವುಗಳು - ಚಾರ್ಟ್ ಅನ್ನು ನಿರ್ಮಿಸಲು ಬೇಕಾದ steps ಗಳು, choice of chart types ಮತ್ತು ಪ್ರತಿಯೊಂದು ಚಾರ್ಟ್ ಗೆ ವಿವಿಧ ವಿಕಲ್ಪಗಳು. |
02:55 | “3D Look” ವಿಕಲ್ಪವನ್ನು ಆಯ್ಕೆ ಮಾಡಿದರೆ, ಚಾರ್ಟ್ ಅನ್ನು 3 ಆಯಾಮಗಳಲ್ಲಿ (dimension) ನೋಡಬಹುದು. |
03:03 | ಈ ವಿಕಲ್ಪವನ್ನು ಆಯ್ಕೆ ಮಾಡಿ ಪರೀಕ್ಷಿಸೋಣ. |
03:05 | “Choose a chart type” ಕ್ಷೇತ್ರದ ಕೆಳಗಿನ “Bar” ವಿಕಲ್ಪವನ್ನು ಕ್ಲಿಕ್ ಮಾಡಿ. |
03:11 | ಈಗ ಮೆಲೀನ ಚಾರ್ಟ್ ನಲ್ಲಿರುವ ದತ್ತಾಂಶಗಳ ಕೋಷ್ಟಕ “Bar” ಶೈಲಿಯಲ್ಲಿ (format) ಪರಿವರ್ತಿತವಾಗಿರುವುದನ್ನು ಗಮನಿಸಿ. |
03:19 | ಹೀಗೆಯೇ ನೀವು “Pie”, <pause> “Area”, <pause> “Bubble” <pause> ವಿಕಲ್ಪಗಳನ್ನು ಕ್ಲಿಕ್ ಮಾಡಬಹುದು |
03:28 | ಮತ್ತು “Choose a chart type” ಕ್ಷೇತ್ರದ ಅಡಿಯಲ್ಲಿರುವ ಇನ್ನಿತರ ವಿಕಲ್ಪಗಳನ್ನು ಬಳಸಿ ನಿಮಗೆ ಬೇಕಾದ ರೀತಿಯಲ್ಲಿ ಚಾರ್ಟ್ ಗಳನ್ನು ಪಡೆಯಬಹುದು. |
03:35 | “Steps” ವಿಕಲ್ಪದ ಅಡಿಯಲ್ಲಿ, ನಾವು “Data Range” ಎನ್ನುವ ಇನ್ನೊಂದು ವಿಕಲ್ಪವನ್ನು ಹೊಂದಿದ್ದೇವೆ. |
03:40 | ಈ ವಿಕಲ್ಪವನ್ನು ಬಳಸಿ, ಚಾರ್ಟ್ ನಲ್ಲಿ ತೋರಿಸಬೇಕಾದ ರೀತಿಯಲ್ಲಿ ನೀವು data range ಅನ್ನು ಕೃತಕವಾಗಿ ಪರಿವರ್ತಿಸಿಕೊಳ್ಳಬಹುದು. |
03:48 | “Data series in columns” ಎನ್ನುವುದು ಮಾಹಿತಿಗಳ ಜೋಡಣೆಗಿರುವ ಡೀಫಾಲ್ಟ್ ಆಪ್ಷನ್. |
03:54 | “Data series in rows” ವಿಕಲ್ಪವನ್ನು ಬಳಸುವ ಮೂಲಕ ನಾವು ನಮಗೆ ಬೆಕಾದ ಜೋಡಣೆಯ ರೀತಿಯನ್ನು ಆಯ್ದುಕೊಳ್ಳಬಹುದು. |
04:02 | ನೀವು chart ನಲ್ಲಿ “Column” ಎಂಬ ಶೈಲಿಯನ್ನು , ನಿಮ್ಮ ದತ್ತಾಂಶಗಳನ್ನು ತೋರ್ಪಡಿಸಲು ಬಳಸಿದಾದಲ್ಲಿ ಇದು ನಿಮಗೆ ಉಪಯುಕ್ತವಾಗುತ್ತದೆ. |
04:10 | ಕೊನೆಯದಾಗಿ , “First row as label” ಎನ್ನುವ ವಿಕಲ್ಪವನ್ನು |
04:24 | ಅಥವಾ “First column as label” ಎನ್ನುವ ವಿಕಲ್ಪವನ್ನು |
04:28 | ಅಥವಾ ಎರಡನ್ನು ಚಾರ್ಟ್ ನ axes ನಲ್ಲಿ labels ಆಗಿ ಬಳಸಬಹುದು. |
04:34 | data series in column ಅನ್ನು ಪುನಃ ಕ್ಲಿಕ್ ಮಾಡಿ. |
04:38 | ಈಗ , ನಮ್ಮ ಚಾರ್ಟ್ ನಲ್ಲಿ , “Received” ಎನ್ನುವ ಹೆಡ್ಡಿಂಗ್ ನ ಅಡಿಯಲ್ಲಿನ ದತ್ತಾಂಶಗಳನ್ನು ತೆಗೆಯಲು ಬಯಸಿದಾದಲ್ಲಿ, “Data range” ಕ್ಷೇತ್ರದ ಒಳಗೆ ಕ್ಲಿಕ್ ಮಾಡಿ |
04:49 | ಮತ್ತು “$A$1 is to $F$7” ಎಂಬ range ನಿಂದ “$A$1 is to $D$7” ಗೆ ಪರಿವರ್ತಿಸೋಣ . |
05:03 | ಇದೀಗ “Received” ಎಂಬ ಹೆಡ್ಡಿಂಗ್ ನ ಅಡಿಯಲ್ಲಿನ ದತಾಂಶಗಳು, ಚಾರ್ಟ್ ನಲ್ಲಿ ಕಾಣದಿರುವುದನ್ನು ಗಮನಿಸಿ. |
05:11 | ಮುಂದೆ, “Data Series” ಎಂಬುವುದರ ಕಾರ್ಯವನ್ನು ಗಮನಿಸೋಣ. |
05:15 | ನಮ್ಮ ಸ್ಪ್ರೆಡ್ ಶೀಟ್ ನಲ್ಲಿನ ದತ್ತಾಂಶಗಳ ಒಟ್ಟು ಸಾಲುಗಳನ್ನು ಪ್ರತಿನಿಧಿಸುತ್ತಿರುವ 5 ಸಾಲಗಳನ್ನು ಗಮನಿಸಿ |
05:21 | “Add” ಮತ್ತು “Remove” ಬಟನ್ ಗಳು ಚಾರ್ಟ್ ನಲ್ಲಿನ ದತ್ತಾಂಶಗಳ ಸಾಲುಗಳನ್ನು ತೆಗೆಯಲು ಅಥವಾ ಸೇರಿಸಲು ಉಪಯುಕ್ತವಾಗಿವೆ. |
05:29 | “Up” ಮತ್ತು “Down” ಬಟನ್ ಗಳನ್ನು ಉಪಯೋಗಿಸಿ ನಾವು ದತ್ತಾಂಶಗಳ ಕ್ರಮವನ್ನು ಪುನಃ ಜೋಡಿಸಬಹುದು. |
05:34 | ಚಾರ್ಟ್ ನಲ್ಲಿ ಯಾವ ದತ್ತಾಂಶಗಳನ್ನು ಹೇಗೆ ಪ್ರತಿನಿಧಿಸಬೇಕು ಎಂಬುವುದನ್ನು ಆಯ್ಕೆ ಮಾಡಿದ ಅನಂತರ ಡಯಲಾಗ್ ಬಾಕ್ಸ್ ನಲ್ಲಿರುವ “Finish” ಬಟನ್ ಅನ್ನು ಕ್ಲಿಕ್ ಮಾಡಿ. |
05:43 | ಸ್ಪ್ರೆಡ್ ಶೀಟ್ ನಲ್ಲಿ ಚಾರ್ಟ್ ಸೇರಲ್ಪಟ್ಟಿರುವುದನ್ನು ಗಮನಿಸಿ. |
05:47 | ಚಾರ್ಟ್ ಅನ್ನು ಸ್ಪ್ರೆಡ್ ಶೀಟ್ ನಲ್ಲಿ ಹೇಗೆ ಸೇರಿಸಬೇಕು ಎನ್ನುವುದನ್ನು ಕಲಿತ ಅನಂತರ, |
05:51 | LibreOffice Calc ನಲ್ಲಿ ಚಾರ್ಟ್ ಅನ್ನು ಫಾರ್ಮೇಟ್ ಮಾಡಲು ಕಲಿಯೋಣ. |
05:56 | “Format” ಮೆನುವಿನಲ್ಲಿ ಫಾರ್ಮೇಟ್ ಮಾಡಲು , |
06:00 | ಮತ್ತು ಚಾರ್ಟ್ ನ ಚಹರೆಯನ್ನು ಪರಿವರ್ತಿಸಲು ಹಲವಾರು ಆಯ್ಕೆಗಳಿದ್ದಾವೆ. |
06:04 | ಸ್ಪ್ರೆಡ್ ಶೀಟ್ ಗೆ ನಾವು ಸೇರಿಸಿರುವ ಚಾರ್ಟ್ ಅನ್ನು ಅಳಿಸೋಣ. |
06:08 | ಚಾರ್ಟ್ ಮೇಲೆ ಎರಡು ಬಾರಿ ಕ್ಲಿಕ್ ಮಾಡಿ, ಚಾರ್ಟ್ ಬೂದು ಬಣ್ಣದಿಂದ ಆವೃತವಾಗಿರುವದನ್ನು ಗಮನಿಸಿ. |
06:13 | ಇದು ಚಾರ್ಟ್ “Edit” (ಬದಲಾವಣೆಗೆ ಸಿದ್ಧವಾದ) ಗೆ ಸಿದ್ಧವಾಗಿರುದನ್ನು ತೋರಿಸುತ್ತದೆ. |
06:18 | ಮೇನ್ ಮೆನುವಿನಲ್ಲಿನ “Format” ಆಪ್ಷನ್ ಅನ್ನು ಕ್ಲಿಕ್ ಮಾಡಿ. |
06:22 | ಡ್ರಾಪ್ ಡೌನ್ ಮೆನು “Format Selection”, “Position and Size”, “Arrangement”, “Chart Wall” , “Chart Area” ಮುಂತಾದ ವಿಕಲ್ಪಗಳನ್ನು ಹೊಂದಿದೆ. |
06:37 | ಈ ವಿಕಲ್ಪಗಳನ್ನು ಚಾರ್ಟ್ ಅನ್ನು ನಿರ್ದಿಷ್ಟ ಸ್ಥಳಗಳಲ್ಲಿ ಇರಿಸಲು, ಚಾರ್ಟ್ ನ ಹಿನ್ನಲೆಯನ್ನು (background) ಮತ್ತು ಶೀರ್ಷಿಕೆಯನ್ನು ವ್ಯವಸ್ಥಾಪಿಸಲು ಮತ್ತು ಅಳಿಸಲು ಉಪಯೋಗಿಸಬಹುದು. |
06:44 | ನಾವು ಕ್ರಮವಾಗಿ ಹೆಚ್ಚಾಗಿ ಬಳಕೆಯಾಗುವ ಫಾರ್ಮೇಟಿಂಗ್ ವಿಕಲ್ಪಗಳ ಬಗ್ಗೆ ಕಲಿಯೋಣ. |
06:49 | “Format Selection” ಎಂಬ ವಿಕಲ್ಪವು “Chart Area” ಎನ್ನುವ ಶೀರ್ಷಿಕೆಯುಳ್ಳ ಡಯಲಾಗ್ ಬಾಕ್ಸ್ ನೊಂದಿಗೆ ಓಪನ್ ಆಗುತ್ತದೆ. |
06:56 | ಅಲ್ಲಿ “Borders”, “Area” ಮತ್ತು “Transparency” ಎನ್ನುವ 3 ಟ್ಯಾಬ್ (tabs) ಗಳು ಇರುವುದನ್ನು ಗಮನಿಸಿ. |
07:03 | ಡೀಫಾಲ್ಟ್ ನಿಂದಲೇ “Borders” ಟ್ಯಾಬ್ ಆಯ್ಕೆ ಆಗಿದೆ. |
07:07 | ಚಾರ್ಟ್ ನ ಅಂಚಿನ ನ ಬಣ್ಣ ಮತ್ತು ಶೈಲಿಯನ್ನು ಬದಲಾಯಿಸೋಣ. |
07:11 | ಹಾಗೆ ಮಾಡಲು, “Style” ಕ್ಷೇತ್ರವನ್ನು ಕ್ಲಿಕ್ ಮಾಡಿ ಮತ್ತು “Continuous” ಅನ್ನು ಆಯ್ಕೆ ಮಾಡಿ. |
07:16 | ಹಾಗೆಯೇ “Color” ಕ್ಷೇತ್ರದಲ್ಲಿ “Green” ನ ಮೆಲೆ ಕ್ಲಿಕ್ ಮಾಡಿ. |
07:21 | “OK” ಬಟನ್ ಅನ್ನು ಕ್ಲಿಕ್ ಮಾಡಿ. |
07:26 | ಅಂಚಿನ ಬಣ್ಣ ಮತ್ತು ಶೈಲಿ ಬದಲಾಗಿರುವುದನ್ನು ಗಮನಿಸಿ. |
07:31 | “Title” ವಿಕಲ್ಪವು ಚಾರ್ಟ್ ನ ಶೀರ್ಷಿಕೆಯನ್ನು ಮತ್ತು axis ಅನ್ನು ಫಾರ್ಮೇಟ್ ಮಾಡುತ್ತದೆ. |
07:36 | “Axis” ಆಪ್ಷನ್ ಚಾರ್ಟ್ ನ ನಿರ್ಮಾಣಕ್ಕೆ ಸಹಕಾರಿಯಾದ ಗೆರೆಗಳನ್ನು (lines) ಫಾರ್ಮೇಟ್ ಮಾಡುತ್ತದೆ. |
07:41 | ಅದರೊಂದಿಗೆ ಪಠ್ಯದ (text) font X ಮತ್ತು Y ಅಕ್ಷಗಳಲ್ಲಿ( axis) ಕಾಣಿಸುತ್ತದೆ. |
07:46 | ಈ ಎಲ್ಲಾ ವಿಕಲ್ಪಗಳನ್ನು ನೀವಾಗಿಯೇ ಅನಂತರ ಅಭ್ಯಸಿಸಿ. |
07:53 | chart area ದ ಹಿನ್ನಲೆಯನ್ನು ಬದಲಾಯಿಸಲೂ ಕೂಡ Calc ನಮಗೆ ಸಹಾಯವನ್ನು ಮಾಡುತ್ತದೆ. |
07:58 | chart area ಎಂದರೆ ಮುಖ್ಯ ಶೀರ್ಷಿಕೆಯನ್ನು ಮತ್ತು ಕೀ (key) ಗಳನ್ನು ಹೊಂದಿರುವ ಚಾರ್ಟ್ ಗ್ರಾಫಿಕ್ ನ ಸುತ್ತಲಿನ ಕ್ಷೇತ್ರ. |
08:05 | chart area ವನ್ನು ಬದಲಾಯಿಸಲು (ಫಾರ್ಮೇಟ್) , “Format” ವಿಕಲ್ಪನ್ನು ಕ್ಲಿಕ್ ಮಾಡಿ ಮತ್ತು “Chart Wall” ಅನ್ನು ಆರಿಸಿ. |
08:12 | “Chart Wall” ಎಂಬ ಶೀರ್ಷಿಕೆಯೊಂದಿಗೆ ಒಂದು ಡಯಲಾಗ್ ಬಾಕ್ಸ್ ಕಾಣಿಸುತ್ತದೆ. |
08:17 | “Style” ಕ್ಷೇತ್ರದಲ್ಲಿ “Continuous” ಎಂದು ಕಾಣುತ್ತದೆ. ಅದನ್ನು ಆಯ್ಕೆ ಮಾಡಿ. |
08:22 | “Color” ಕ್ಷೇತ್ರದಲ್ಲಿ, “Red” ಎಂದು ಕ್ಲಿಕ್ ಮಾಡಿ. |
08:26 | ನಾವು ಗಾತ್ರವನ್ನು ಕೂಡ “0.20”cm ಗೆ ಬದಲಾಯಿಸೋಣ. |
08:31 | “OK” ಬಟನ್ ಅನ್ನು ಕ್ಲಿಕ್ ಮಾಡಿ. |
08:35 | chart area ದ ಶೈಲಿ ಮತ್ತು ಬಣ್ಣ ಬದಲಾಗಿರುವುದನ್ನು ಗಮನಿಸಿ. |
08:41 | ಚಾರ್ಟ್ ನಲ್ಲಿನ ಅಂಶಗಳ (elements) ಗಾತ್ರವನ್ನು ಸರಿಪಡಿಸಲು (resize) ಮತ್ತು ಚಾರ್ಟ್ ಅನ್ನು ಅತ್ತಿತ್ತ ಕೊಂಡೊಯ್ಯಲು (move) ಕಲಿಯೋಣ. |
08:46 | ಚಾರ್ಟ್ ನ ಗಾತ್ರವನ್ನು ಸರಿಪಡಿಸಲು, ಚಾರ್ಟ್ ನ ಮೇಲೆ ಕ್ಲಿಕ್ ಮಾಡಿ. |
08:51 | ಚಾರ್ಟ್ ನ ಸುತ್ತ ಹಸಿರು ಬಣ್ಣದ ಚೌಕಟ್ಟು ಕಾಣುತ್ತದೆ. |
08:54 | ಚಾರ್ಟ್ ನ ಗಾತ್ರ ವನ್ನು ಹೆಚ್ಚಿಸಲು ಅಥವಾ ಕಮ್ಮಿ ಮಾಡಲು, ಚಾರ್ಟ್ ನ 4 ಮೂಲೆಯಲ್ಲಿನ ಚಿನ್ಹೆಗಳನ್ನು ಕ್ಲಿಕ್ ಮಾಡಿ ಎಳೆದು (ಡ್ರ್ಯಾಗ್) ಮಾಡಿ. |
09:03 | ಚಾರ್ಟ್ ಅನ್ನು ಅತ್ತಿತ್ತ ಕೊಂಡೊಯ್ಯಲು (move), ಚಾರ್ಟ್ ಅನ್ನು ಕ್ಲಿಕ್ ಮಾಡಿ. |
09:07 | ಕರ್ಸರ್ ಅನ್ನು ಚಾರ್ಟ್ ನ ಮೇಲೆ ನಿಮಗೆ ಬೇಕಾದಲ್ಲಿ ತೆಗೆದುಕೊಂಡು ಹೋಗಿ. |
09:11 | ಕರ್ಸರ್, ಹಸ್ತದ ಚಿನ್ಹೆಯಾಗಿ ಬದಲಾಗುತ್ತದೆ. |
09:14 | ಅದನ್ನು ಕ್ಲಿಕ್ ಮಾಡಿ ಮತ್ತು ಚಾರ್ಟ್ ಅನ್ನು ನಿಮ್ಮ ಇಷ್ಟವಾದ ಸ್ಥಳಕ್ಕೆ ಕೊಂಡೊಯ್ಯಿರಿ ಮತ್ತು ಈಗ ಮೌಸ್ ನ ಬಟನ್ ಅನ್ನು ಬಿಡಿ. |
09:20 | ನೀವು ಚಾರ್ಟ್ ಅನ್ನು ಸ್ಥಾನಾಂತರಿಸಿದ್ದೀರಿ! |
09:24 | “Position and Size” ಡಯಲಾಗ್ ಬಾಕ್ಸ್ ಅನ್ನು ಬಳಸಿ ಚಾರ್ಟ್ ನ ಗಾತ್ರವನ್ನು ಪುನಃ ನಿಶ್ಚಯಿಸುವುದನ್ನು ಕಲಿಯೋಣ. |
09:30 | ಪುನಃ, ಚಾರ್ಟ್ ನ ಮೇಲೆ ಕ್ಲಿಕ್ ಮಾಡಿ. |
09:33 | ಈಗ ಚಾರ್ಟ್ ನ ಮೇಲೆ ಮೌಸ್ ನ ಬಲ ಬಟನ್ ಅನ್ನು ಕ್ಲಿಕ್ ಮಾಡಿ ಮತ್ತು ಕಾಣಿಸಿಕೊಂಡ ಕಾಂಟೆಕ್ಸ್ಟ್ ಮೆನುವಿನಿಂದ “Position and Size” ಅನ್ನು ಆರಿಸಿ. |
09:40 | “Position and Size” ಡಯಲಾಗ್ ಬಾಕ್ಸ್ ಕಾಣಿಸುತ್ತದೆ. |
09:44 | ಈ ಡಯಲಾಗ್ ಬಾಕ್ಸ್ ನ ವಿವಿಧ ಕ್ಷೇತ್ರಗಳು ಚಾರ್ಟ್ ನ 'X' ಮತ್ತು 'Y' ಸ್ಥಾನಗಳನ್ನು( positions) ಮತ್ತು ಅದರ ಅಗಲ (width) ಮತ್ತು ಎತ್ತರವನ್ನು (height) ನಿರ್ಧರಿಸುತ್ತವೆ. |
09:52 | ಇದೀಗ 'X' ಭುಜವನ್ನು “1.00” ಎಂದು ಮತ್ತು 'Y' ಭುಜವನ್ನು “0.83” ಎಂದು ನಿಶ್ಚಯಿಸೋಣ. |
10:02 | “OK” ಬಟನ್ ಅನ್ನು ಕ್ಲಿಕ್ ಮಾಡಿ. |
10:04 | ಚಾರ್ಟ್ , ನಾವು ನಿರ್ಧರಿಸಿರುವ ಮೌಲ್ಯಗಳಿಗೆ ಅನುಸಾರವಾಗಿ ಚಾರ್ಟ್ ಏರಿಯಾ(chart area) ದ ಒಳಗೆ ಸ್ಥಾನಪಲ್ಲಟವಾಗಿರುವುದನ್ನು ಗಮನಿಸಿ . |
10:12 | ಇಲ್ಲಿಗೆ ಈ ಸ್ಪೋಕನ್ ಟ್ಯುಟೋರಿಯಲ್ ಮುಗಿಯುತ್ತದೆ. |
10:16 | ನಾವಿಲ್ಲಿ ಚಾರ್ಟ್ ಅನ್ನು ರಚಿಸಲು, ಸರಿಪಡಿಸಲು ಮತ್ತು ಅದನ್ನು ಫಾರ್ಮೇಟ್ ಮಾಡಲು ಕಲಿತಿದ್ದೇವೆ. |
10:21 | ಅದರೊಂದಿಗೆ ಚಾರ್ಟ್ ಅನ್ನು ಸ್ಪ್ರೆಡ್ ಶೀಟ್ ನ ಒಳಗೆಯೇ ಗಾತ್ರವನ್ನು ಪುನಾರಚಿಸಲು ಮತ್ತು ಅತ್ತಿತ್ತ ಕೊಂಡೊಯ್ಯಲು ಕಲಿತಿದ್ದೇವೆ. |
10:27 | ನಿಮಗೆ ಅಭ್ಯಸಿಸಲು ಅಸೈನ್ ಮೆಂಟ್ ಅನ್ನು ಕೊಡಲಾಗಿದೆ. |
10:29 | “practice.ods” ಎನ್ನುವ ಸ್ಪ್ರೆಡ್ ಶೀಟ್ ಅನ್ನು ಓಪನ್ ಮಾಡಿ. |
10:34 | ನಿರ್ದಿಷ್ಟ ದತ್ತಾಂಶಕ್ಕೆ "Pie chart" ಅನ್ನು ಒಳ ಸೇರಿಸಿ. |
10:37 | ಅದರ ಗಾತ್ರವನ್ನು ಪುನಾರಚಿಸಿ (Resize) ಸ್ಪ್ರೆಡ್ ಶೀಟ್ ನ ಕೆಳಗಿನ ಬಲ ಮೂಲೆಗೆ ಚಾರ್ಟ್ ಅನ್ನು ಕೊಂಡೊಯ್ಯಿರಿ. |
10:42 | ಈ ಕೆಳಗಿನ ಲಿಂಕ್ ಗಳನ್ನು ಬಳಸಿ ವೀಡಿಯೋಗಳನ್ನು ನೋಡಿ: |
10:46 | ಅಲ್ಲಿ ಸ್ಪೋಕನ್ ಟ್ಯುಟೋರಿಯಲ್ ನ ಸಾರಾಂಶವು ಲಭ್ಯವಾಗುತ್ತದೆ. |
10:50 | ನಿಮಲ್ಲಿ ಉತ್ತಮ bandwidth ಇಲ್ಲವಾದಲ್ಲಿ ಇದನ್ನು ಡೌನ್ ಲೋಡ್ ಮಾಡಿ ನೋಡಿ. |
10:56 | ಈ ಪಾಠವನ್ನಾಧರಿಸಿ ಸ್ಫೋಕನ್ ಟ್ಯುಟೋರಿಯಲ್ ನ ಗಣವು ಕಾರ್ಯಶಾಲೆಯನ್ನು ನಡೆಸುತ್ತದೆ. |
11:00 | ಯಾರು ಆನ್¬-ಲೈನ್ ಪರೀಕ್ಷೆಯಲ್ಲಿ ಉತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ. |
11:04 | ಹೆಚ್ಚಿನ ಮಾಹಿತಿಗಾಗಿ, contact @spoken-tutorial.org ಈ ಈ-ಮೇಲ್ ಮೂಲಕ ಸಂಪರ್ಕಿಸಿ. |
11.11 | ಈ ಪಾಠವು Talk to a Teacher project ಎಂಬ ಪರಿಯೋಜನೆಯ ಭಾಗವಾಗಿದೆ. |
11.15 | ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಶನ್ ICT, MHRD, ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ. |
11.23 | ಈ ಮಿಶನ್ ನ ಬಗೆಗಿನ ಹೆಚ್ಚಿನ ಮಾಹಿತಿಯು spoken hyphen tutorial dot org slash NMEICT hyphen Intro ದಲ್ಲಿ ಲಭ್ಯ. |
11.34 | ಈ ಟ್ಯುಟೋರಿಯಲ್ ನ ಅನುವಾದಕ ಪ್ರಜ್ವಲ್ ಮತ್ತು ಪ್ರವಾಚಕ ಐ.ಐ.ಟಿ ಬಾಂಬೆಯಿಂದ ವಾಸುದೇವ ಧನ್ಯವಾದಗಳು. |