LibreOffice-Suite-Base/C4/Access-data-sources/Kannada
From Script | Spoken-Tutorial
Time | Narration |
00:00 | ‘ಲಿಬರ್ ಆಫಿಸ್ ಬೇಸ್’ ನ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ. |
00:04 | ಈ ಟ್ಯುಟೋರಿಯಲ್ ನಲ್ಲಿ, ನಾವು: |
00:08 | ಇತರ ಡೇಟಾ-ಸೋರ್ಸ್ ಗಳನ್ನು ಆಕ್ಸೆಸ್ ಮಾಡಲು, |
00:10 | '.odb' ಡೇಟಾಬೇಸ್ ಗಳನ್ನು ನೋಂದಾಯಿಸಲು, |
00:15 | ಡೇಟಾ ಸೋರ್ಸ್ ಗಳನ್ನು ನೋಡಲು |
00:17 | ಮತ್ತು ರೈಟರ್ ನಲ್ಲಿ ಡೇಟಾ ಸೋರ್ಸ್ ಗಳನ್ನು ಬಳಸಲು ಕಲಿಯಲಿದ್ದೇವೆ. |
00:22 | ಬೇಸ್ ನಲ್ಲಿ ಇತರ ಡೇಟಾ ಸೋರ್ಸ್ ಗಳನ್ನು ನಾವು ಹೇಗೆ ಆಕ್ಸೆಸ್ ಮಾಡಬಹುದೆಂದು ನೋಡೋಣ. |
00:28 | ಬೇಸ್ ಡೇಟಾಬೇಸ್ ಗಳಲ್ಲದೆ, ಇತರ ಡೇಟಾ ಸೋರ್ಸ್ ಗಳನ್ನು ಆಕ್ಸೆಸ್ ಮಾಡಲು ಲಿಬರ್ ಆಫಿಸ್ ಅನುವು ಮಾಡಿಕೊಡುತ್ತದೆ. |
00:37 | ಅಲ್ಲದೆ, ಇತರ ಲಿಬರ್ ಆಫಿಸ್ ಡಾಕ್ಯುಮೆಂಟ್ ಗಳಿಗೆ ಲಿಂಕ್ ಮಾಡಲು ಸಹ ಇದು ಅನುವು ಮಾಡಿ ಕೊಡುತ್ತದೆ. |
00:43 | ಉದಾಹರಣೆಗೆ, ಲಿಬರ್-ಆಫಿಸ್ ಬೇಸ್ ಒಳಗಿನಿಂದ ನಾವು ಸ್ಪ್ರೆಡ್-ಶೀಟ್ ಅಥವಾ ಟೆಕ್ಸ್ಟ್ ಡಾಕ್ಯುಮೆಂಟ್ ಅನ್ನು ನಾವು ಆಕ್ಸೆಸ್ ಮಾಡಬಹುದು. |
00:53 | ನಂತರ ಅವುಗಳನ್ನು ಲಿಬರ್-ಆಫಿಸ್ ರೈಟರ್ ಡಾಕ್ಯುಮೆಂಟ್ ಗೆ ಲಿಂಕ್ ಮಾಡಬಹುದು. |
00:58 | ಉದಾಹರಣೆಗಾಗಿ, ನಾವು ಲಿಬರ್ ಆಫಿಸ್ ಕ್ಯಾಲ್ಕ್ ಬಳಸಿ, ಒಂದು ಮಾದರಿ ಸ್ಪ್ರೆಡ್ ಶೀಟ್ ರಚಿಸೋಣ. |
01:06 | Start Menu >> All Programs ಮೇಲೆ ಕ್ಲಿಕ್ ಮಾಡಿ, LibreOffice Suite menu ತೆರೆಯಿರಿ. |
01:16 | ಲಿಬರ್ ಆಫಿಸ್ ಈಗಾಗಲೇ ತೆರೆದಿದ್ದಲ್ಲಿ, ನಾವು ಹೊಸ ಸ್ಪ್ರೆಡ್ ಶೀಟ್ ಅನ್ನು ತೆರೆಯಲು, ಕ್ರಮವಾಗಿ File, New ಮತ್ತು Spreadsheet ಮೇಲೆ ಕ್ಲಿಕ್ ಮಾಡಬಹುದು. |
01:30 | ಚಿತ್ರದಲ್ಲಿ ತೋರಿಸಿರುವಂತೆ, ಈಗ ಸ್ಪ್ರೆಡ್ ಶೀಟ್ ನಲ್ಲಿ, ಒಂದಷ್ಟು ಸ್ಯಾಂಪಲ್ ಡೇಟಾವನ್ನು ಟೈಪ್ ಮಾಡೋಣ. |
01:46 | ಮತ್ತು, ಡೈರೆಕ್ಟರಿ ಯಲ್ಲಿ ಈ ಸ್ಪ್ರೆಡ್ ಶೀಟ್ ಅನ್ನು ‘LibraryMembers’ ಎಂದು ಸೇವ್ ಮಾಡೋಣ. |
01:54 | ನಾವು ಈ ಸ್ಥಾನವನ್ನು ನೆನಪಿಡೋಣ. ಏಕೆಂದರೆ, ನಮ್ಮ ಉದಾಹರಣೆಯಲ್ಲಿ ನಂತರ ಈ ಫೈಲ್ ಬಳಸಬೇಕಾಗುತ್ತದೆ. |
02:02 | ನಾವು ಈ ಕ್ಯಾಲ್ಕ್ ವಿಂಡೋ ಮುಚ್ಚುವೆವು. |
02:07 | ಸರಿ. ಈ ಸ್ಪ್ರೆಡ್ ಶೀಟ್ ಅನ್ನು, ಲಿಬರ್ ಆಫಿಸ್ ಬೇಸ್ ನಿಂದ ಹೇಗೆ ಆಕ್ಸೆಸ್ ಮಾಡಬಹುದೆಂದು ನೋಡೋಣ. |
02:15 | ಇದನ್ನು ಮಾಡಲು, Windows Start ಮೆನುವಿನಿಂದ Base ಅನ್ನು (ಬೇಸ್) ತೆರೆಯಿರಿ. |
02:25 | ಒಂದುವೇಳೆ, ಲಿಬರ್ ಆಫಿಸ್ ಬೇಸ್ ಈಗಾಗಲೇ ತೆರೆದಿದ್ದರೆ, ನಾವು ಕ್ರಮವಾಗಿ File, New ಮತ್ತು Database ಮೇಲೆ ಕ್ಲಿಕ್ ಮಾಡುವೆವು. |
02:36 | ಈಗ ಇದು Database Wizard ಅನ್ನು ತೆರೆಯುತ್ತದೆ. |
02:39 | ಇಲ್ಲಿ ನಾವು ‘Connect to an existing database’ ಮೇಲೆ ಕ್ಲಿಕ್ ಮಾಡುವೆವು. |
02:45 | ನಂತರ ಡ್ರಾಪ್ ಡೌನ್ ಮೇಲೆ ಕ್ಲಿಕ್ ಮಾಡುವೆವು. |
02:48 | ಬೇಸ್ ಆಕ್ಸೆಸ್ ಮಾಡಬಹುದಾದ ವಿವಿಧ ಡೇಟಾಬೇಸ್ ಸೋರ್ಸ್ ಗಳನ್ನು ಈ ಪಟ್ಟಿಯಲ್ಲಿ ಗಮನಿಸಿ. |
02:55 | ನಾವಿಲ್ಲಿ Spreadsheet ಮೇಲೆ, ನಂತರ |
02:59 | Next ಬಟನ್ ಮೇಲೆ ಕ್ಲಿಕ್ ಮಾಡುವೆವು. |
03:02 | ಈಗ, ಬ್ರೌಸ್ ಬಟನ್ ಬಳಸಿ, ಹಿಂದೆ ನಾವು ಸೇವ್ ಮಾಡಿದ ಸ್ಥಳದಲ್ಲಿ ಸ್ಪ್ರೆಡ್ ಶೀಟ್ ಅನ್ನು ಗುರುತಿಸೋಣ. |
03:10 | ಸ್ಪ್ರೆಡ್ ಶೀಟ್ ಗಾಗಿ ಪಾಸ್ವರ್ಡ್ ಇದ್ದಲ್ಲಿ, ಅದನ್ನು ಸಹ ಕೊಡಬೇಕು. |
03:16 | ಇಲ್ಲಿ ನಮಗೆ ಇದರ ಅಗತ್ಯವಿಲ್ಲ. |
03:19 | ನಾವೀಗ Next ಬಟನ್ ಮೇಲೆ ಕ್ಲಿಕ್ ಮಾಡೋಣ. |
03:22 | ಈಗ ಈ ಸ್ಪ್ರೆಡ್-ಶೀಟ್ ಅನ್ನು ನಾವು ಡೇಟಾ-ಸೋರ್ಸ್ ಎಂದು ನೋಂದಾಯಿಸೋಣ |
03:27 | ಮತ್ತು ಎಡಿಟ್ ಮಾಡಲು ಇದನ್ನು ತೆರೆಯೋಣ. |
03:32 | Finish ಬಟನ್ ಮೇಲೆ ಕ್ಲಿಕ್ ಮಾಡೋಣ. |
03:36 | ಈಗ, ಇಲ್ಲಿ ನಾವು ಒಂದು ಡೇಟಾಬೇಸ್ ಹೆಸರನ್ನು ಒದಗಿಸೋಣ. "LibraryMembers" ಎಂದು ಟೈಪ್ ಮಾಡೋಣ. |
03:44 | “Save as type” ಅನ್ನು ಗಮನಿಸಿ: ಇದು “ODF Database” ಎನ್ನುತ್ತದೆ. ಅಂದರೆ ಇಲ್ಲಿ ಇದು '.odb' ಆಗಿದೆ. |
03:56 | ಮತ್ತು ಇದನ್ನು ಸ್ಪ್ರೆಡ್ ಶೀಟ್ ಇರುವ ಸ್ಥಳದಲ್ಲೇ ಸೇವ್ ಮಾಡೋಣ. |
04:01 | ಹೀಗೆ ನಾವು ಸ್ಪ್ರೆಡ್ ಶೀಟ್ ಅನ್ನು, ಬೇಸ್ ನಲ್ಲಿ ಡೇಟಾ ಸೋರ್ಸ್ ಆಗಿ ನೋಂದಾಯಿಸಿದ್ದೇವೆ. |
04:07 | ನಾವೀಗ ಮುಖ್ಯ ಬೇಸ್ ವಿಂಡೋದಲ್ಲಿ ಇದ್ದೇವೆ. |
04:11 | ಇಲ್ಲಿ, ಎಡ ಪ್ಯಾನಲ್ ನಲ್ಲಿ Tables ಐಕಾನ್ ಮೇಲೆ ಕ್ಲಿಕ್ ಮಾಡೋಣ. |
04:16 | ‘Sheet1’, Sheet2, ಮತ್ತು 'Sheet3' ಎಂಬ ಟೇಬಲ್ ಗಳನ್ನು ಗಮನಿಸಿ. |
04:23 | Sheet1 ಅನ್ನು ತೆರೆಯಲು, ಅದರ ಮೇಲೆ ಡಬಲ್-ಕ್ಲಿಕ್ ಮಾಡೋಣ. ಸ್ಪ್ರೆಡ್ ಶೀಟ್ ನ ಡೇಟಾ ಇಲ್ಲಿದೆ. |
04:31 | ಸ್ಪ್ರೆಡ್ ಶೀಟ್ ಅನ್ನು ಆಕ್ಸೆಸ್ ಮಾಡುವ ಈ ವಿಧಾನದಲ್ಲಿ, ನಾವು ಇಲ್ಲಿಂದ ಯಾವುದೇ ಬದಲಾವಣೆ ಮಾಡಲು ಸಾಧ್ಯವಿಲ್ಲ. |
04:39 | ನಾವು ಕೇವಲ ಡೇಟಾಅನ್ನು ನೋಡಬಹುದು ಅಥವಾ ಇರುವ ಡೇಟಾವನ್ನು ಆಧರಿಸಿ ಕ್ವೆರಿ ಅಥವಾ ರಿಪೋರ್ಟ್ ಗಳನ್ನು ಇಲ್ಲಿಂದ ರಚಿಸಬಹುದು. |
04:47 | ಹೀಗಾಗಿ, ಬದಲಾವಣೆಗಳನ್ನು ನೇರವಾಗಿ ಸ್ಪ್ರೆಡ್ ಶೀಟ್ ನಲ್ಲಿಯೇ ಮಾಡಬೇಕಾಗುತ್ತದೆ. |
04:54 | '.odb' ಡೇಟಾಬೇಸ್ ಗಳನ್ನು ನೋಂದಾಯಿಸುವುದು. |
04:59 | OpenOffice.org ಯಂತಹ ಇತರ ಪ್ರೋಗ್ರಾಂಗಳಿದ್ದು ಇವು '.odb' ಡೇಟಾಬೇಸ್ ಗಳನ್ನು ರಚಿಸುತ್ತವೆ. |
05:11 | ಇವುಗಳನ್ನು ಲಿಬರ್ ಆಫಿಸ್ ಬೇಸ್ ಒಳಗೆ ಬಳಸಲು, ಇವುಗಳನ್ನು ನಾವು ಮೊದಲಿಗೆ ಬೇಸ್ ನಲ್ಲಿ ನೋಂದಾಯಿಸಬೇಕು. |
05:19 | ಯಾವುದೇ '.odb' ಡೇಟಾಬೇಸ್ ಅನ್ನು ನೋಂದಾಯಿಸಲು, ನಾವು ಬೇಸ್ ತೆರೆಯಬೇಕು ಮತ್ತು |
05:28 | Tools, Options, LibreOffice Base ಮತ್ತು Databases ಆರಿಸಬೇಕು. |
05:36 | Registered Databases ಅಡಿಯಲ್ಲಿ, New ಮೇಲೆ ಕ್ಲಿಕ್ ಮಾಡಿ. |
05:42 | ಡೇಟಾಬೇಸ್ ಇರುವಲ್ಲಿಗೆ ಬ್ರೌಸ್ ಮಾಡಿ, ನೋಂದಾಯಿತ ಹೆಸರು ಸರಿ ಇರುವುದನ್ನು ಖಚಿತಪಡಿಸಿಕೊಳ್ಳಿ |
05:51 | OK ಬಟನ್ ಮೇಲೆ ಕ್ಲಿಕ್ ಮಾಡಿ. |
05:55 | ಲಿಬರ್ ಆಫಿಸ್ ನಲ್ಲಿ ಡೇಟಾ ಸೋರ್ಸ್ ಗಳನ್ನು ಹೇಗೆ ವೀಕ್ಷಿಸಬಹುದೆಂದು ನಾವು ನೋಡೋಣ. |
06:01 | ಇದಕ್ಕಾಗಿ, ಬೇಸ್ ನಲ್ಲಿ ನಾವು ನೋಂದಾಯಿಸಿರುವ ಮಾದರಿ ಸ್ಪ್ರೆಡ್ ಶೀಟ್ ಅನ್ನು ಪರಿಗಣಿಸೋಣ. |
06:07 | ಈಗ ನಾವಿದನ್ನು ಲಿಬರ್ ಆಫಿಸ್ ರೈಟರ್ ಅಥವಾ ಕ್ಯಾಲ್ಕ್ ನಲ್ಲಿ ಬಳಸಬಹುದು. |
06:12 | ಉದಾಹರಣೆಗೆ, ಇದನ್ನು ʻಲಿಬರ್ ಆಫಿಸ್ ರೈಟರ್ʼ ಒಳಗೆ ಹೇಗೆ ವೀಕ್ಷಿಸಬಹುದೆಂದು ನೋಡೋಣ. |
06:19 | ಮೊದಲಿಗೆ, ʻಬೇಸ್ʼ ವಿಂಡೋದಲ್ಲಿ ನಾವು ರೈಟರ್ ಅನ್ನು ತೆರೆಯೋಣ. |
06:24 | ಇದಕ್ಕಾಗಿ, ಕ್ರಮವಾಗಿ File, New ಮತ್ತು Text Document ಮೇಲೆ ಕ್ಲಿಕ್ ಮಾಡೋಣ. |
06:33 | ನಾವೀಗ Writer ವಿಂಡೋದಲ್ಲಿದ್ದೇವೆ. |
06:36 | ಲಭ್ಯವಿರುವ ಡೇಟಾ ಸೋರ್ಸ್ ಗಳನ್ನು ನೋಡಲು, ನಾವು ಮೇಲ್ಗಡೆ View ಮೆನು ಮೇಲೆ, ನಂತರ Data Sources ಮೇಲೆ ಕ್ಲಿಕ್ ಮಾಡುತ್ತೇವೆ. |
06:46 | ಇದರ ಬದಲಿಗೆ ನಾವು F4 ಕೀ ಯನ್ನು ಒತ್ತಬಹುದು. |
06:52 | ನಾವು ಈಗಷ್ಟೇ ರಚಿಸಿದ "LibraryMembers" ಸೇರಿದಂತೆ, ನೋಂದಾಯಿತ ಡೇಟಾಬೇಸ್ ಗಳ ಲಿಸ್ಟ್ ಅನ್ನು ಮೇಲ್ಗಡೆ ಎಡಭಾಗದಲ್ಲಿ ಕಾಣಬಹುದು. |
07:03 | ಡೇಟಾಬೇಸ್ ಅನ್ನು ನೋಡಲು, ಅದರ ಹೆಸರಿನ ಎಡಭಾಗದಲ್ಲಿರುವ ಅಧಿಕ ಚಿಹ್ನೆಯ ಮೇಲೆ ಕ್ಲಿಕ್ ಮಾಡಿ, ಅದನ್ನು ದೊಡ್ಡದು ಮಾಡುತ್ತೇವೆ. |
07:14 | ಮತ್ತು, ಟೇಬಲ್ ಗಳನ್ನು ನಾವು ದೊಡ್ಡದು ಮಾಡುತ್ತೇವೆ. |
07:18 | ಇಲ್ಲಿ ಶೀಟ್ 1, 2 ಮತ್ತು 3 ಇವೆ. |
07:24 | ನಾವೀಗ Sheet 1 ಮೇಲೆ ಕ್ಲಿಕ್ ಮಾಡೋಣ. |
07:28 | ಹೀಗೆ, ರೈಟರ್ ವಿಂಡೋದ ಮೇಲ್ಗಡೆ ಬಲಭಾಗದಲ್ಲಿ ನಮ್ಮ ಡೇಟಾವನ್ನು ಕಾಣಬಹುದು. |
07:36 | ನಮ್ಮ ಉದಾಹರಣೆಯ ರೈಟರ್ ಡಾಕ್ಯುಮೆಂಟ್ ನಲ್ಲಿ, ಈ ಡೇಟಾವನ್ನು ನಾವು ಹೇಗೆ ಬಳಸಬಹುದೆಂದು ಈಗ ನೋಡೋಣ. |
07:43 | ಮೇಲಿನ ಟೇಬಲ್ ನಿಂದ ಎಲ್ಲಾ ಡೇಟಾವನ್ನು ನಾವು ಬಳಸಲು ಇಚ್ಛಿಸಿದಲ್ಲಿ, ಮೊದಲಿಗೆ ನಾವು ಅಲ್ಲಿರುವ ಎಲ್ಲಾ ರೆಕಾರ್ಡ್ ಗಳನ್ನು ಆಯ್ಕೆಮಾಡುವೆವು. |
07:55 | ಇದಕ್ಕಾಗಿ, ನಾವು ಮೊದಲ ರೆಕಾರ್ಡ್ ನಲ್ಲಿಯ ಮೊದಲ ಕಾಲಂನ ಎಡಕ್ಕೆ ಇರುವ ಬೂದು ಬಣ್ಣದ ಸೆಲ್ ಮೇಲೆ ಕ್ಲಿಕ್ ಮಾಡೋಣ. |
08:05 | ನಂತರ, Shift ಕೀ ಒತ್ತಿಹಿಡಿದು ಕೊನೆಯ ರೆಕಾರ್ಡ್ ನಲ್ಲಿಯ ಮೊದಲ ಕಾಲಂನ ಎಡಕ್ಕೆ ಇರುವ ಬೂದು ಬಣ್ಣದ ಸೆಲ್ ಮೇಲೆ ನಾವು ಕ್ಲಿಕ್ ಮಾಡುತ್ತೇವೆ. |
08:17 | ಎಲ್ಲಾ ಡೇಟಾ ಹೈಲೈಟ್ ಆಗಿರುವುದನ್ನು ಗಮನಿಸಿ. |
08:21 | ನಾವೀಗ ಕ್ಲಿಕ್ ಮತ್ತು ಡ್ರಾಗ್ ಮಾಡಿ ಕೆಳಗಿರುವ ರೈಟರ್ ಡಾಕ್ಯುಮೆಂಟ್ ಮೇಲೆ ಇದನ್ನು ಡ್ರಾಪ್ ಮಾಡುವೆವು. |
08:30 | ನಂತರ, ನಾವು “Insert Database columns” ಎಂಬ ಪಾಪ್- ಅಪ್ ವಿಂಡೋ ನೋಡಬಹುದು. |
08:37 | ಹೀಗೆ ಇಲ್ಲಿ, ನಾವು ಮೇಲ್ಗಡೆ “Table” ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡುವೆವು. |
08:42 | ನಂತರ, ಎಲ್ಲಾ ಫೀಲ್ಡ್ ಗಳನ್ನು ಎಡದಿಂದ ಬಲಗಡೆ ಲಿಸ್ಟ್ ಗೆ ಸರಿಸಲು, ನಾವು ಡಬಲ್- ಆರೋ ಬಟನ್ ಮೇಲೆ ಕ್ಲಿಕ್ ಮಾಡುವೆವು. |
08:52 | ಇಲ್ಲಿರುವ ವಿವಿಧ ಆಯ್ಕೆಗಳನ್ನು ಗಮನಿಸಿ. |
08:56 | ಸದ್ಯಕ್ಕೆ, ನಾವು OK ಬಟನ್ ಮೇಲೆ ಕ್ಲಿಕ್ ಮಾಡುವೆವು. |
09:00 | ಇಲ್ಲಿ, ನಾವು ಡಾಕ್ಯುಮೆಂಟ್ ನಲ್ಲಿ ಡೇಟಾದ ಇಡೀ ಟೇಬಲ್ ನೋಡಬಹುದು. |
09:05 | ನಂತರ, ನಾವು ಪ್ರತ್ಯೇಕ ಫೀಲ್ಡ್ ಗಳನ್ನು ಹೇಗೆ ಸೇರಿಸಬಹುದೆಂದು ನೋಡೋಣ. |
09:13 | ನಾವೀಗ ರೈಟರ್ ಡಾಕ್ಯುಮೆಂಟ್ ನ ಮೇಲ್ಗಡೆ ಹೋಗಿ, ಎರಡು ಬಾರಿ Enter ಕೀ ಯನ್ನುಒತ್ತೋಣ. ಮತ್ತೆ ಮೇಲ್ತುದಿಯ ಎಡಗಡೆಗೆ ಹೋಗಿ. |
09:22 | ಇಲ್ಲಿ, "Member Name" ಕೋಲನ್ ಎಂದು ಟೈಪ್ ಮಾಡೋಣ. |
09:28 | ನಂತರ, ಮೇಲ್ಗಡೆ ಬಲಕ್ಕೆ ಡೇಟಾ ಸೋರ್ಸ್ ಜಾಗದಲ್ಲಿ “Name” ಕಾಲಂ ಮೇಲೆ ಕ್ಲಿಕ್ ಮಾಡೋಣ. |
09:36 | ಈಗ ಟೈಪ್ ಮಾಡಿದ ಟೆಕ್ಸ್ಟ್ ಪಕ್ಕಕ್ಕೆ ಇದನ್ನು ಕ್ಲಿಕ್, ಡ್ರ್ಯಾಗ್, ಮತ್ತು ಡ್ರಾಪ್ ಮಾಡೋಣ. |
09:43 | ನಂತರ Tab ಕೀ ಒತ್ತುವೆವು. "Phone number" ಕೋಲನ್ ಎಂದು ಟೈಪ್ ಮಾಡೋಣ. |
09:51 | ಇಲ್ಲಿ ಏನು ಮಾಡಬೇಕೆಂದು ನಮಗೆ ತಿಳಿದಿದೆ... ಅಲ್ಲವೇ? |
09:55 | ಮೇಲಿನಿಂದ Phone ಕಾಲಂ ಅನ್ನು ಕ್ಲಿಕ್ ಮತ್ತು ಡ್ರ್ಯಾಗ್ ಮಾಡಿ, ನಮ್ಮ ಟೆಕ್ಸ್ಟ್ ನ ಪಕ್ಕಕ್ಕೆ ಡ್ರಾಪ್ ಮಾಡುವೆವು. |
10:04 | ನಂತರ, ಮೊದಲ ರೆಕಾರ್ಡ್ ನ ಎಡಗಡೆಗೆ ಇರುವ ಬೂದು ಬಣ್ಣದ ಸೆಲ್ ಅನ್ನು ಕ್ಲಿಕ್ ಮಾಡಿ, ಮೊದಲನೆಯ ರೆಕಾರ್ಡ್ ಅನ್ನು ಹೈಲೈಟ್ ಮಾಡೋಣ. |
10:13 | ಆಮೇಲೆ, “Data to Fields” ಐಕಾನ್ ಮೇಲೆ ಕ್ಲಿಕ್ ಮಾಡುವೆವು. |
10:19 | ಇದನ್ನು ಮೇಲ್ಗಡೆ “Table Data” ಟೂಲ್- ಬಾರ್ ನಲ್ಲಿ, “Formatting” ಟೂಲ್- ಬಾರ್ ಕೆಳಗಡೆ ಕಾಣಬಹುದು. |
10:27 | ಮೇಲಿರುವ ಟೇಬಲ್ ನಲ್ಲಿಯ ಡೇಟಾ ಈಗ ರೈಟರ್ ಡಾಕ್ಯುಮೆಂಟ್ ನಲ್ಲಿ ಇರುವುದನ್ನು ಗಮನಿಸಿ. |
10:35 | ಇನ್ನೊಂದು ರೆಕಾರ್ಡ್ ಅನ್ನು ತರಲು, ನಾವು ಅದನ್ನು ಕೇವಲ ಹೈಲೈಟ್ ಮಾಡಬೇಕು ಮತ್ತು “Data to Fields” ಐಕಾನ್ ಅನ್ನು ಮತ್ತೆ ಬಳಸಬೇಕು. |
10:46 | ಹೀಗೆ, ನಾವು ಲಿಬರ್ ಆಫಿಸ್ ಡಾಕ್ಯುಮೆಂಟ್ ಗಳ ಒಳಗೆ, ಡೇಟಾ ಸೋರ್ಸ್ ಗಳನ್ನು ಬಳಸಲು ಕಲಿತೆವು. |
10:54 | ಇದರೊಂದಿಗೆ, “Accessing other Data Sources in LibreOffice Base” ಎಂಬ ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ. |
11:01 | ಸಂಕ್ಷಿಪ್ತವಾಗಿ, ನಾವು: |
11:05 | ಇತರ ಡೇಟಾ ಸೋರ್ಸ್ ಗಳನ್ನು ಆಕ್ಸೆಸ್ ಮಾಡಲು, |
11:07 | “.odb” ಡೇಟಾಬೇಸ್ ಗಳನ್ನು ನೋಂದಾಯಿಸಲು, |
11:12 | ಡೇಟಾ ಸೋರ್ಸ್ ಗಳನ್ನು ವೀಕ್ಷಿಸಲು, |
11:14 | ಮತ್ತು ರೈಟರ್ ನಲ್ಲಿ ಡೇಟಾ- ಸೋರ್ಸ್ ಗಳನ್ನು ಬಳಸಲು ಕಲಿತೆವು. |
11:19 | ‘ಸ್ಪೋಕನ್ ಟ್ಯುಟೋರಿಯಲ್’ ಪ್ರೊಜೆಕ್ಟ್, |
11:23 | ರಾಷ್ಟ್ರೀಯ ಸಾಕ್ಷರತಾ ಮಿಷನ್, ICT, MHRD ಮೂಲಕ ಭಾರತ ಸರ್ಕಾರದ ನೆರವು ಪಡೆದಿದೆ. |
11:30 | ಈ ಪ್ರೊಜೆಕ್ಟ್ ಅನ್ನು ಸಂಯೋಜಿಸಿದವರು: http://spoken-tutorial.org. |
11:35 | ಕೆಳಗಿನ ಲಿಂಕ್ ನಲ್ಲಿ ಈ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಿದೆ. |
11:44 | ಈ ಸ್ಕ್ರಿಪ್ಟ್ ನ ಅನುವಾದಕರು ಮಂಗಳೂರಿನಿಂದ ಮೆಲ್ವಿನ್, ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.
ಧನ್ಯವಾದಗಳು. |