LibreOffice-Suite-Base/C2/Enter-and-update-data-in-a-form/Kannada
From Script | Spoken-Tutorial
Time | Narration |
00:02 | ‘ಲಿಬರ್ ಆಫಿಸ್ ಬೇಸ್’ ನ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ. |
00:06 | ಈ ಟ್ಯುಟೋರಿಯಲ್ ನಲ್ಲಿ ನಾವು, |
00:09 | ʻಫಾರ್ಮ್ʼ ನಲ್ಲಿ ಡೇಟಾ ನಮೂದಿಸಲು ಮತ್ತು ಅಪ್ಡೇಟ್ ಮಾಡಲು ಕಲಿಯುವೆವು. |
00:12 | ಕಳೆದ ಟ್ಯುಟೋರಿಯಲ್ ನಲ್ಲಿ ನಾವು, ಫಾರ್ಮ್ ಗೆ ʻಫಾರ್ಮ್ ಕಂಟ್ರೋಲ್ಸ್ʼ ಸೇರಿಸುವುದನ್ನು ಕಲಿತೆವು. |
00:19 | ಈ ಟ್ಯುಟೋರಿಯಲ್ ನಲ್ಲಿ, ನಾವು ಫಾರ್ಮ್ ಅನ್ನು ಬಳಸಿ ಡೇಟಾವನ್ನು ನಮೂದಿಸಲು ಮತ್ತು ಅಪ್ಡೇಟ್ ಮಾಡಲು ಕಲಿಯೋಣ. |
00:27 | ಇದನ್ನು ಮಾಡುವ ಮೊದಲು, ನಮ್ಮ ಫಾರ್ಮ್ ಡಿಸೈನ್ ಗೆ ಇನ್ನೂ ಮೂರು ಮಾರ್ಪಾಡುಗಳನ್ನು ಮಾಡೋಣ. |
00:36 | 'LibreOffice Base' ಪ್ರೋಗ್ರಾಂ ಈಗಾಗಲೇ ತೆರೆದಿರದಿದ್ದಲ್ಲಿ ಅದನ್ನು ನಾವು ಮೊದಲಿಗೆ ತೆರೆಯೋಣ. |
00:51 | ಮತ್ತು ನಮ್ಮ 'Library database' ಅನ್ನು |
00:54 | 'File' ಮೆನು ಅಡಿಯಲ್ಲಿ 'Open' ಅನ್ನು ಕ್ಲಿಕ್ ಮಾಡಿ ತೆರೆಯೋಣ. |
00:58 | ನಾವೀಗ Library database ನಲ್ಲಿದ್ದೇವೆ. |
01:02 | ಮತ್ತು, ನಾವೀಗ 'Books Issued to Members' ಫಾರ್ಮ್ ತೆರೆಯುವೆವು. |
01:07 | ಇದನ್ನು ಮಾಡಲು, ಎಡ ಪ್ಯಾನೆಲ್ ನಲ್ಲಿ 'Forms' ಐಕಾನ್ ಮೇಲೆ ಕ್ಲಿಕ್ ಮಾಡೋಣ. ನಂತರ ಬಲ ಪ್ಯಾನೆಲ್ ನಲ್ಲಿ 'Books Issued to Members' ಫಾರ್ಮ್ ಮೇಲೆ ರೈಟ್-ಕ್ಲಿಕ್ ಮಾಡೋಣ. |
01:20 | ನಂತರ 'Edit' ಮೇಲೆ ಕ್ಲಿಕ್ ಮಾಡೋಣ. |
01:24 | ನಾವೀಗ 'Form Design' ವಿಂಡೋದಲ್ಲಿದ್ದೇವೆ. |
01:28 | ಇಲ್ಲಿ, ಫಾರ್ಮ್ ಚಿಕ್ಕದು ಹಾಗೂ ಚೊಕ್ಕಾಗಿ ಕಾಣುವಂತೆ ರಿಸೈಜ್ ಮಾಡೋಣ. |
01:36 | ಇದಕ್ಕಾಗಿ, ನಮ್ಮ 'ಫಾರ್ಮ್' ವಿಂಡೋದ ಎತ್ತರ ಮತ್ತು ಉದ್ದವನ್ನು ಕಡಿಮೆ ಮಾಡೋಣ. |
01:43 | ಫಾರ್ಮ್ ವಿಂಡೋದ ಮೇಲ್ಭಾಗ ಮತ್ತು ಬದಿಗಳಲ್ಲಿ ಕ್ಲಿಕ್, ಡ್ರ್ಯಾಗ್ ಮತ್ತು ಡ್ರಾಪ್ ಮಾಡುವ ಮೂಲಕ ನಾವಿದನ್ನು ಮಾಡಲಿದ್ದೇವೆ. |
01:51 | ನಂತರ, ನಮ್ಮ ಫಾರ್ಮ್ ನಲ್ಲಿ ಶೀರ್ಷಿಕೆಯ ಫಾಂಟ್ ಅನ್ನು ಬದಲಾಯಿಸೋಣ. |
01:57 | ಮೇಲ್ತುದಿಯಲ್ಲಿರುವ 'Formatting toolbar' ನಲ್ಲಿ ಫಾಂಟ್ ಅನ್ನು 'Arial Black', Size 12 ಕ್ಕೆ ಬದಲಾಯಿಸೋಣ. |
02:12 | ಕೊನೆಯಲ್ಲಿ, 'ಫಾರ್ಮ್ ಕಂಟ್ರೋಲ್ಸ್' ನ 'Tab Order' ಅನ್ನು ನೋಡೋಣ. |
02:19 | ಫಾರ್ಮ್ ಕಂಟ್ರೋಲ್ಸ್ ನಲ್ಲಿ, ಕೀಬೋರ್ಡ್ ಟ್ಯಾಬ್ ಕೀಗಳನ್ನು ಬಳಸಿ, ನಿರ್ದಿಷ್ಟ ಕ್ರಮದಲ್ಲಿ ನ್ಯಾವಿಗೇಟ್ ಮಾಡಲು ಇದು ನಮಗೆ ಸಹಾಯ ಮಾಡುತ್ತದೆ. |
02:29 | ಉದಾಹರಣೆಗೆ, ಮೇಲ್ತುದಿಯಿಂದ ಕೆಳತುದಿಯವರೆಗೆ. |
02:33 | ಇದನ್ನು ಟ್ಯಾಬ್ ಆರ್ಡರ್ ಎಂದು ಕರೆಯಲಾಗುತ್ತದೆ. |
02:37 | 'Base', ಫಾರ್ಮ್ ನಲ್ಲಿ ಫಾರ್ಮ್ ಕಂಟ್ರೋಲ್ಸ್ ನ ಟ್ಯಾಬ್ ಆರ್ಡರ್ ಅನ್ನು ಮೇಲ್ತುದಿಯಿಂದ ಕೆಳತುದಿಯವರೆಗೆ ತಂತಾನೆ ಸೆಟ್ ಮಾಡುತ್ತದೆ. |
02:47 | ಆದರೆ ಒಂದಷ್ಟು ಟೆಕ್ಸ್ಟ್ ಬಾಕ್ಸ್ ಗಳನ್ನು ತೆಗೆದು, ಎರಡು ಹೊಸ ಲಿಸ್ಟ್ ಬಾಕ್ಸ್ ಗಳು ಮತ್ತು ನಾಲ್ಕು 'ಬಟನ್' ಗಳನ್ನು ಸೇರಿಸಿರುವುದರಿಂದ, ನಾವು ಟ್ಯಾಬ್ ಆರ್ಡರ್ ಅನ್ನು ಅಸ್ತವ್ಯಸ್ತಗೊಳಿಸಿರಬಹುದು. |
03:00 | ಆದ್ದರಿಂದ ಇದನ್ನು ನಾವು ಈಗಲೆ ಸರಿಪಡಿಸೋಣ. |
03:05 | ಸಾಮಾನ್ಯವಾಗಿ ವಿಂಡೋದ ಕೆಳಭಾಗದಲ್ಲಿ ಕಂಡುಬರುವ 'Form Design' ಟೂಲ್ ಬಾರ್ ನಲ್ಲಿ, ನಾವು ಐಕಾನ್ ಗಳನ್ನು ಬ್ರೌಸ್ ಮಾಡುವೆವು. |
03:16 | ಮತ್ತು ಟೂಲ್- ಟಿಪ್, 'Activation order' ಎಂದು ಹೇಳುತ್ತಿರುವ ಐಕಾನ್ ಅನ್ನು ನೋಡುವೆವು. |
03:25 | ಈ ಐಕಾನ್ ಮೇಲೆ ಕ್ಲಿಕ್ ಮಾಡೋಣ. |
03:29 | ಈಗ, 'Tab Order' ಎಂಬ ಶೀರ್ಷಿಕೆಯ ಒಂದು ಸಣ್ಣ ಪಾಪ್-ಅಪ್ ವಿಂಡೋ ಅನ್ನು ನಾವು ಕಾಣುತ್ತೇವೆ. |
03:38 | ಈ ಫಾರ್ಮ್ ಕಂಟ್ರೋಲ್ಸ್ ಅನ್ನು ವ್ಯವಸ್ಥೆಗೊಳಿಸಲು, ನಾವು ಈ ಐಟಂಗಳನ್ನು ಕ್ಲಿಕ್, ಡ್ರ್ಯಾಗ್ ಮತ್ತು ಡ್ರಾಪ್ ಮಾಡಬಹುದು. |
03:46 | ಅಥವಾ, ನಾವು 'Move up' ಅಥವಾ 'Move down' ಬಟನ್ ಗಳನ್ನು ಬಳಸಬಹುದು. |
03:52 | ಹೀಗೆ, ಈ ಚಿತ್ರದಲ್ಲಿ ತೋರಿಸಿದಂತೆ ಟ್ಯಾಬ್-ಆರ್ಡರ್ ಅನ್ನು ವ್ಯವಸ್ಥೆಗೊಳಿಸೋಣ. <pause> |
04:04 | ನಮ್ಮ ಕೆಲಸ ಮುಗಿಯಿತು. ಈಗ, ಈ ಬದಲಾವಣೆಗಳನ್ನು 'ಸೇವ್' ಮಾಡಲು 'OK' ಬಟನ್ ಮೇಲೆ ಕ್ಲಿಕ್ ಮಾಡೋಣ. |
04:12 | ಸರಿ, ಈಗ 'Control S' ಒತ್ತಿ, ನಮ್ಮ ಫಾರ್ಮ್ ಅನ್ನು ಸೇವ್ ಮಾಡೋಣ. |
04:19 | ನಂತರ ನಾವು 'ಫಾರ್ಮ್' ವಿಂಡೋ ಅನ್ನು ಮುಚ್ಚೋಣ. |
04:24 | ಇಲ್ಲಿಗೆ ನಮ್ಮ ಫಾರ್ಮ್ ಡಿಸೈನ್ ಕೆಲಸ ಮುಗಿಯಿತು. |
04:29 | ಈಗ, ನಮ್ಮ ಫಾರ್ಮ್ ಅನ್ನು ಪರೀಕ್ಷಿಸೋಣ. |
04:33 | ಮೇನ್ Base ವಿಂಡೋದಲ್ಲಿ, 'Books Issued to Members' ಫಾರ್ಮ್ ಮೇಲೆ ಡಬಲ್- ಕ್ಲಿಕ್ ಮಾಡಿ ಅದನ್ನು ತೆರೆಯೋಣ. |
04:42 | ಈಗ ಫಾರ್ಮ್, ಡೇಟಾ-ಎಂಟ್ರಿ ಮೋಡ್ ನಲ್ಲಿ ತೆರೆದಿದೆ. |
04:47 | 'Form to track Books issued to Members' ಎಂದು ಹೇಳುವ ಶೀರ್ಷಿಕೆಯನ್ನು ಗಮನಿಸಿ. |
04:54 | ಮತ್ತು ಇಲ್ಲಿ, 'book Ids' ಮತ್ತು 'member Ids' ಬದಲಿಗೆ ನಾವು ‘book title’ ಮತ್ತು ‘member name’ ಅನ್ನು ಕಾಣಬಹುದು. |
05:03 | ಇದು 'Books Issued' ಟೇಬಲ್ ನ ಮೊದಲ ರೆಕಾರ್ಡ್ ಆಗಿದೆ; 'Book title' ಗಾಗಿ, 'An Autobiography' ಅನ್ನು ಮತ್ತು |
05:15 | 'Member name' ಗಾಗಿ, 'Nisha Sharma' ಅನ್ನು ಹೈಲೈಟ್ ಮಾಡಿರುವುದನ್ನು ನಾವು ಕಾಣಬಹುದು. |
05:21 | ಮತ್ತು ಉಳಿದ ಫೀಲ್ಡ್ ಗಳನ್ನು ಸಹ ನಾವು ನೋಡಬಹುದು. |
05:25 | ನಾವೀಗ ಕೆಳಭಾಗದಲ್ಲಿ ಇರುವ 'Form Navigation' ಟೂಲ್ ಬಾರ್ ಐಕಾನ್ ಗಳನ್ನು ಬಳಸಿ ಎಲ್ಲಾ ರೆಕಾರ್ಡ್ ಗಳನ್ನು ನೋಡಬಹುದು. |
05:45 | ಈಗ ಎರಡನೇ 'ರೆಕಾರ್ಡ್' ಗೆ ಹೋಗೋಣ. |
05:49 | ಇಲ್ಲಿ ಸದಸ್ಯ ಜೇಕಬ್ ರಾಬಿನ್ 'Macbeth' ಎಂಬ ಪುಸ್ತಕವನ್ನು ಪಡೆದಿದ್ದಾರೆ ಎಂದು ನಾವು ನೋಡಬಹುದು. ಅವರೀಗ ಈ ಪುಸ್ತಕವನ್ನು ಹಿಂದಿರುಗಿಸುತ್ತಿದ್ದಾರೆ ಎಂದು ಭಾವಿಸೋಣ. |
06:01 | ಈಗ, ಈ ಮಾಹಿತಿಯನ್ನು ಈ ರೆಕಾರ್ಡ್ ನಲ್ಲಿ ಅಪ್ಡೇಟ್ ಮಾಡೋಣ. |
06:07 | ಇದಕ್ಕಾಗಿ ನಾವು, ನಿಜವಾದ ವಾಪಸಾತಿ ದಿನಾಂಕವನ್ನು ಟೈಪ್ ಮಾಡುತ್ತೇವೆ, ಉದಾಹರಣೆಗೆ - 7/7/11 |
06:17 | ಮತ್ತು 'Checked In' ಫೀಲ್ಡ್ ಅನ್ನು ಗುರುತು ಹಾಕುತ್ತೇವೆ. |
06:21 | ಈ ಮಾಹಿತಿಯನ್ನು 'ಸೇವ್' ಮಾಡಲು, ನಾವು ಇಲ್ಲಿ ಇಟ್ಟಿರುವ 'Save Record' ಬಟನ್ ಅನ್ನು ಒತ್ತುತ್ತೇವೆ. |
06:30 | ಈ ಬಟನ್ ಈಗ ಮಂಕಾಗಿರುವುದನ್ನು ಗಮನಿಸಿ. ಅಂದರೆ ಇದನ್ನು ಈಗ ನಿಷ್ಕ್ರಿಯಗೊಳಿಸಲಾಗಿದೆ. |
06:38 | ಆದರೆ ನಾವು ಈ ರೆಕಾರ್ಡ್ ಅನ್ನು ಮತ್ತೆ 'ಎಡಿಟ್' ಮಾಡಿದಾಗ, ಈ ಬಟನ್ ಮತ್ತೆ ಸಕ್ರಿಯ (ಎನೇಬಲ್) ಆಗುತ್ತದೆ. |
06:45 | ಸರಿ, ನಾವೀಗ 'Undo changes' ಬಟನ್ ಅನ್ನು ಪರೀಕ್ಷಿಸೋಣ. |
06:50 | ಇದಕ್ಕಾಗಿ, 'Book Title - Conquest of Self' ಮೇಲೆ ಕ್ಲಿಕ್ ಮಾಡಿ. ನಂತರ 'Actual Return Date' ಫೀಲ್ಡ್ ನಲ್ಲಿ 5/7/11 ಎಂದು ಟೈಪ್ ಮಾಡಿ, ನಾವು ರೆಕಾರ್ಡ್ ಅನ್ನು ಎಡಿಟ್ ಮಾಡೋಣ. |
07:06 | 'Save record' ಬಟನ್ ಮತ್ತು 'Undo changes' ಬಟನ್ ಗಳೆರಡೂ ಬಳಕೆಗಾಗಿ ಎನೇಬಲ್ ಆಗಿರುವುದನ್ನು ಗಮನಿಸಿ. |
07:15 | ನಾವು, ಈಗ 'Undo Changes' ಬಟನ್ ಮೇಲೆ ಕ್ಲಿಕ್ ಮಾಡಿ, ಏನಾಗುತ್ತದೆ ಎಂಬುದನ್ನು ನೋಡೋಣ. |
07:22 | ನಾವು ಕೊನೆಗೆ ಮಾಡಿದ ಬದಲಾವಣೆಗಳನ್ನು ಅನ್-ಡು ಮಾಡಲಾಗಿದೆ. 'Conquest of Self' ಬದಲಿಗೆ 'Macbeth' ಹೈಲೈಟ್ ಆಗಿದ್ದು, 'Actual return date' 7/7/11 ಆಗಿರುವುದನ್ನು ಗಮನಿಸಿ. |
07:37 | ನಾವೀಗ 'Delete Record' ಬಟನ್ ಮೇಲೆ ಕ್ಲಿಕ್ ಮಾಡೋಣ. ಅಂದರೆ ನಾವೀಗ ಈ ಎರಡನೇ ರೆಕಾರ್ಡ್ ಅನ್ನು ಡಿಲೀಟ್ ಮಾಡಲು ಯತ್ನಿಸುತ್ತಿದ್ದೇವೆ. |
07:47 | ಡಿಲೀಟ್ ಗಳ ಬಗ್ಗೆ 'Base' ಜಾಗರೂಕವಾಗಿದೆ. ಹೀಗಾಗಿ ನಮ್ಮನ್ನು ಎಚ್ಚರಿಸಿ ಅದು ದೃಢೀಕರಣವನ್ನು ಕೇಳುತ್ತದೆ. |
07:55 | ಸದ್ಯಕ್ಕೆ, ನಾವು 'Yes' ಬಟನ್ ಮೇಲೆ ಕ್ಲಿಕ್ ಮಾಡೋಣ. |
08:02 | ನಿಜವಾಗಿಯೂ 'ರೆಕಾರ್ಡ್' ಡಿಲೀಟ್ ಆಗಿದೆ, ಸ್ಕ್ರೀನ್ ನಿಂದ ಕಾಣೆಯಾಗಿದೆ ಮತ್ತು ಇದರ ಜಾಗದಲ್ಲಿ ಮುಂದಿನ ರೆಕಾರ್ಡ್ ಅನ್ನು ನಾವು ನೋಡಬಹುದು. |
08:13 | ಕೊನೆಯದಾಗಿ, ಫಾರ್ಮ್ ನಲ್ಲಿ ಕೊನೆಯ ಬಟನ್ ಆಗಿರುವ 'New record' ಮೇಲೆ ಕ್ಲಿಕ್ ಮಾಡಿ ಒಂದು ಹೊಸ ರೆಕಾರ್ಡ್ ಅನ್ನು ಸೇರಿಸೋಣ. |
08:22 | ಕೆಲವು ವ್ಯಾಲ್ಯೂಗಳನ್ನು ಟೈಪ್ ಮಾಡೋಣ. |
08:26 | 'Issue-Id' ತಂತಾನೆ ಉಂಟಾಗುವ ಫೀಲ್ಡ್ ಆಗಿರುವುದರಿಂದ ನಾವು ಅದನ್ನು ಬಿಟ್ಟು ಬಿಡುತ್ತೇವೆ. |
08:33 | ಹಾಗೂ ಇಲ್ಲಿ, ಚಿತ್ರದಲ್ಲಿ ತೋರಿಸಿರುವಂತೆ ಡೇಟಾವನ್ನು ಸೇರಿಸುತ್ತೇವೆ. |
08:42 | ನಮೂದುಗಳನ್ನು ಸೇವ್ ಮಾಡಲು, 'Save Record' ಬಟನ್ ಮೇಲೆ ಕ್ಲಿಕ್ ಮಾಡಿ. |
08:47 | ಇದು ಹೀಗಿದೆ ನೋಡಿ. ಡೇಟಾವನ್ನು ನಮೂದಿಸಿ ಮತ್ತು ಅಪ್ಡೇಟ್ ಮಾಡಿ ನಾವು 'ಫಾರ್ಮ್' ಅನ್ನು ಪರೀಕ್ಷಿಸಿದ್ದೇವೆ. |
08:54 | ಇಲ್ಲೊಂದು ಅಸೈನ್ಮೆಂಟ್ ಇದೆ – ಸದಸ್ಯರ ಮಾಹಿತಿಯನ್ನು ತೋರಿಸಲು 'form' ಒಂದನ್ನು ತಯಾರಿಸಿ. |
09:00 | ಫಾರ್ಮ್ ಚಿಕ್ಕದು ಹಾಗೂ ಚೊಕ್ಕದಾಗಿ ಇರುವಂತೆ ಮಾಡಿ. |
09:03 | ಫಾಂಟ್ ಅನ್ನು 'bold' ಮಾಡಿ. |
09:07 | 'Save' ಮತ್ತು 'New record' ಬಟನ್ ಗಳನ್ನು ಸೇರಿಸಿ. |
09:10 | ಇಲ್ಲಿಗೆ ನಾವು Form Data in LibreOffice Base ಎಂಬ ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ. |
09:17 | ಸಂಕ್ಷಿಪ್ತವಾಗಿ, ನಾವು 'ಫಾರ್ಮ್' ನಲ್ಲಿ: |
09:20 | ಡೇಟಾವನ್ನು ನಮೂದಿಸಲು ಮತ್ತು ಅಪ್ಡೇಟ್ ಮಾಡಲು ಕಲಿತೆವು. |
09:23 | ‘ಸ್ಪೋಕನ್ ಟ್ಯುಟೋರಿಯಲ್’ ಪ್ರೊಜೆಕ್ಟ್, ‘ಟಾಕ್ ಟು ಎ ಟೀಚರ್’ ಪ್ರೊಜೆಕ್ಟ್ ನ ಒಂದು ಭಾಗವಾಗಿದೆ. ಇದು ರಾಷ್ಟ್ರೀಯ ಸಾಕ್ಷರತಾ ಮಿಷನ್, ICT, MHRD, ಭಾರತ ಸರ್ಕಾರದ ನೆರವು ಪಡೆದಿದೆ. |
09:34 | ಈ ಪ್ರೊಜೆಕ್ಟ್ ಅನ್ನು ಸಂಯೋಜಿಸಿದವರು: http://spoken-tutorial.org.
ಕೆಳಗಿನ ಲಿಂಕ್ ನಲ್ಲಿ ಈ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಿದೆ. |
09:44 | ಈ ಸ್ಕ್ರಿಪ್ಟ್ ನ ಅನುವಾದಕ ಮಂಗಳೂರಿನಿಂದ ಮೆಲ್ವಿನ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.
ಧನ್ಯವಾದಗಳು. |