LibreOffice-Suite-Base/C2/Create-reports/Kannada

From Script | Spoken-Tutorial
Jump to: navigation, search
Time Narration
00:00 ’ಲಿಬರ್ ಆಫಿಸ್ ಬೇಸ್’ ನ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ.
00:03 ಈ ಟ್ಯುಟೋರಿಯಲ್‌ ನಲ್ಲಿ ನಾವು:
00:07 ರಿಪೋರ್ಟ್ ರಚಿಸಲು, ರಿಪೋರ್ಟ್ ಫೀಲ್ಡ್ ಗಳನ್ನು ಆಯ್ಕೆಮಾಡಲು, ಲೇಬಲ್ ಮಾಡಲು ಮತ್ತು ವರ್ಗೀಕರಿಸಲು,
00:12 ರಿಪೋರ್ಟ್ ಲೇಔಟ್, ಮತ್ತು ಸ್ಟಾಟಿಕ್‌ ಅಥವಾ ಡೈನಾಮಿಕ್‌ ರಿಪೋರ್ಟ್‌ ವಿಧವನ್ನು ಆಯ್ಕೆಮಾಡಲು ಕಲಿಯಲಿದ್ದೇವೆ.
00:19 ಇದಕ್ಕಾಗಿ, ನಮ್ಮ ಪರಿಚಿತ “ಲೈಬ್ರರಿ” ಡೇಟಾಬೇಸ್‌ ಉದಾಹರಣೆಯನ್ನು ಪರಿಗಣಿಸೋಣ.
00:27 ಇಲ್ಲಿ, ಈ “Lbrary” ಡೇಟಾಬೇಸ್‌ ನಲ್ಲಿ, ನಾವು ಪುಸ್ತಕಗಳು ಮತ್ತು ಸದಸ್ಯರ ಕುರಿತು ಮಾಹಿತಿಯನ್ನು ಶೇಖರಿಸಿದ್ದೇವೆ.
00:36 ಅಲ್ಲದೆ, ಸದಸ್ಯರಿಗೆ ನೀಡಿರುವ ಪುಸ್ತಕಗಳನ್ನು ಟ್ರ್ಯಾಕ್‌ ಮಾಡಲು ನಾವು ಒಂದು ಟೇಬಲ್‌ ಅನ್ನು ಸಹ ಹೊಂದಿದ್ದೇವೆ.
00:42 ಹಿಂದಿನ ಟ್ಯುಟೋರಿಯಲ್‌ ಗಳಲ್ಲಿ ನಾವು, ಫಾರ್ಮ್‌ ಗಳು ಮತ್ತು ಕ್ವೆರಿಗಳನ್ನು ರಚಿಸಲು ಕಲಿತೆವು.
00:48 ರಿಪೋರ್ಟ್‌ ತಯಾರಿಸುವುದನ್ನು ಕಲಿಯುವ ಮೊದಲು, ರಿಪೋರ್ಟ್‌ ಅಂದರೆ ಏನು ಎಂದು ತಿಳಿದುಕೊಳ್ಳೋಣ.
00:56 ಕ್ವೆರಿಯಂತೆಯೇ, ರಿಪೋರ್ಟ್‌ ಸಹ ಡೇಟಾಬೇಸ್‌ ನಿಂದ ಮಾಹಿತಿಯನ್ನು ಮರಳಿ ಪಡೆಯುವ ಇನ್ನೊಂದು ವಿಧಾನವಾಗಿದೆ.
01:05 ಓದಲು ಅಥವಾ ಪ್ರಿಂಟ್ ಮಾಡಲು ಸುಲಭವಾಗುವಂತೆ, ಇದರ ಲೇಔಟ್‌ ಹಾಗೂ ನೋಟವನ್ನು ನಾವು ಕಸ್ಟಮೈಸ್‌ ಮಾಡಬಹುದು.
01:14 ಡೇಟಾಬೇಸ್‌ ನ ಟೇಬಲ್‌ ಗಳು ಅಥವಾ ಕ್ವೆರಿಗಳಿಂದ ರಿಪೋರ್ಟ್‌ ಗಳನ್ನು ರಚಿಸಬಹುದು.
01:21 ಅವು ಟೇಬಲ್‌ ನಲ್ಲಿಯ ಅಥವಾ ಕ್ವೆರಿಯಲ್ಲಿಯ ಎಲ್ಲಾ ಫೀಲ್ಡ್‌ ಗಳನ್ನು ಅಥವಾ ಫೀಲ್ಡ್‌ ಗಳ ಆಯ್ದ ಗ್ರುಪ್‌ ಗಳನ್ನು ಸಹ ಹೊಂದಿರಬಹುದು.
01:32 ರಿಪೋರ್ಟ್‌ ಗಳಲ್ಲಿ ಸ್ಟಾಟಿಕ್‌ ಮತ್ತು ಡೈನಾಮಿಕ್ ಎಂಬ ಎರಡು ವರ್ಗಗಳಿವೆ.
01:38 ಸ್ಟಾಟಿಕ್‌-ರಿಪೋರ್ಟ್‌ ಅನ್ನು ನೋಡಲು ತೆರೆದಾಗ, ಇದು
01:42 ರಿಪೋರ್ಟ್‌ ತಯಾರಿಸುವಾಗ ಇದ್ದ ಡೇಟಾವನ್ನೇ ಯಾವಾಗಲೂ ತೋರಿಸುತ್ತದೆ.
01:48 ಇದನ್ನು ಸ್ನ್ಯಾಪ್‌-ಶಾಟ್‌ ಎಂದು ಸಹ ಕರೆಯಲಾಗುತ್ತದೆ.
01:52 ಆದರೆ ಡೈನಾಮಿಕ್‌ ರಿಪೋರ್ಟ್‌ ಅನ್ನು ನೋಡಲು ತೆರೆದಾಗ, ಇದು ಡೇಟಾಬೇಸ್‌ ನ ಪ್ರಸ್ತುತ ಡೇಟಾವನ್ನೇ ತೋರಿಸುತ್ತದೆ.
02:00 ಸರಿ, ನಾವೀಗ ಒಂದು ಸ್ಯಾಂಪಲ್‌ ರಿಪೋರ್ಟ್‌ ಅನ್ನು ತಯಾರಿಸೋಣ.
02:05 'Library' ಡೇಟಾಬೇಸ್ ನಲ್ಲಿ,
02:08 ಎಡ ಪ್ಯಾನೆಲ್‌ ನಲ್ಲಿ ‘Reports’ ಐಕಾನ್‌ ಮೇಲೆ ಕ್ಲಿಕ್‌ ಮಾಡೋಣ.
02:12 ಈಗ ಬಲ ಪ್ಯಾನೆಲ್‌ ನಲ್ಲಿ, ‘Use Wizard to create report’ ಮೇಲೆ ಕ್ಲಿಕ್‌ ಮಾಡೋಣ.
02:18 ರಿಪೋರ್ಟ್‌ ಗಳನ್ನು ತಯಾರಿಸಲು, ಇದೊಂದು ಸುಲಭ ಮತ್ತು ಶೀಘ್ರ ವಾದ ಆಯ್ಕೆಯಾಗಿದೆ.
02:24 ನಾವೀಗ ‘Report Builder’ ಎಂಬ ಒಂದು ಹೊಸ ವಿಂಡೋವನ್ನು ನೋಡುತ್ತಿದ್ದೇವೆ.
02:31 ಅಲ್ಲದೆ ಎಡಗಡೆಯಲ್ಲಿ 6 ಹಂತಗಳನ್ನು ಪಟ್ಟಿ ಮಾಡಿರುವ ವಿಜಾರ್ಡ್‌ ಅನ್ನು ನಾವು ಕಾಣಬಹುದು.
02:39 ಕಳೆದ ಟ್ಯುಟೋರಿಯಲ್‌ ನಲ್ಲಿ ನಾವು ತಯಾರಿಸಿದ 'History of books issued to the Library members’ ಎಂಬ ಕ್ವೆರಿಯನ್ನು ಆಧರಿಸಿ
02:47 ರಿಪೋರ್ಟ್ ಒಂದನ್ನು ತಯಾರಿಸಲು ನಾವು ವಿಜಾರ್ಡ್‌ ನತ್ತ ಗಮನಹರಿಸೋಣ.
02:51 ನಾವೀಗ ‘Step 1 - Field Selection’ ನಲ್ಲಿದ್ದೇವೆ.
02:56 ಇಲ್ಲಿ ನಾವು ರಿಪೋರ್ಟ್‌ ಡೇಟಾದ ಮೂಲವನ್ನು ಸೂಚಿಸಲಿದ್ದೇವೆ. ಇದು ಒಂದು ಟೇಬಲ್‌ ಅಥವಾ ಕ್ವೆರಿ ಆಗಿರಬಹುದು.
03:05 ನಂತರ ಮೇಲ್ಗಡೆ ಇರುವ ಡ್ರಾಪ್‌ ಡೌನ್‌ ಲಿಸ್ಟ್‌ ನಿಂದ ನಮ್ಮ ಕ್ವೆರಿ ‘History of Books Issued to Members’ ಅನ್ನು ಆಯ್ಕೆ ಮಾಡೋಣ.
03:14 ಈಗ ಎಡಗಡೆಯಲ್ಲಿ, ಕ್ವೆರಿಯಲ್ಲಿ ಲಭ್ಯವಿರುವ ಫೀಲ್ಡ್‌ ಗಳ ಪಟ್ಟಿಯನ್ನು ನೋಡುತ್ತೇವೆ.
03:21 ನಮ್ಮ ರಿಪೋರ್ಟ್‌ ನಲ್ಲಿ ಎಲ್ಲಾ ಫೀಲ್ಡ್‌ ಗಳು ಇರಬೇಕು. ಇದಕ್ಕಾಗಿ ನಾವು ಬಲಗಡೆಯ ಡಬಲ್‌ – ಆರೋ ಬಟನ್‌ ಮೇಲೆ ಕ್ಲಿಕ್‌ ಮಾಡುವೆವು.
03:30 ಮುಂದಿನ ಹಂತಕ್ಕೆ ಹೋಗಲು ಇಲ್ಲಿ ‘Next’ ಬಟನ್‌ ಮೇಲೆ ಕ್ಲಿಕ್‌ ಮಾಡೋಣ.
03:35 ‘Step 2. Labelling Fields’.
03:39 ಚಿತ್ರದಲ್ಲಿ ತೋರಿಸಿರುವಂತೆ, ಈಗ ಲೇಬಲ್‌ ಟೆಕ್ಸ್ಟ್‌-ಬಾಕ್ಸ್‌ ಗಳಲ್ಲಿ ಈ ವಿವರಣಾತ್ಮಕ ಲೇಬಲ್‌ ಗಳನ್ನು ಟೈಪ್‌ ಮಾಡೋಣ.
03:50 ಸರಿ, ಈಗ ನಾವು ‘Next’ ಬಟನ್‌ ಮೇಲೆ ಕ್ಲಿಕ್‌ ಮಾಡೋಣ.
03:55 ಇಲ್ಲಿ ನಾವು ‘Step 3 – Grouping’ ನಲ್ಲಿದ್ದೇವೆ.
03:59 ಆಯ್ದ ಫೀಲ್ಡ್‌ ಗಳ ಸೆಟ್‌ ಮೂಲಕ, ಡೇಟಾವನ್ನು ಗುಂಪುಗೂಡಿಸುವ ಅಗತ್ಯವಿದ್ದಾಗ ಇದನ್ನು ಬಳಸಲಾಗುತ್ತದೆ.
04:05 ಉದಾಹರಣೆಗೆ – ನಮ್ಮ ರಿಪೋರ್ಟ್‌ ನಲ್ಲಿ ‘Book title’ ಗಳ ಮೂಲಕ ನಾವು ಡೇಟಾವನ್ನು ವರ್ಗೀಕರಿಸಬಹುದು.
04:12 ನಾವು ಇದನ್ನು ಮಾಡಿದಾಗ, ಬುಕ್‌ ಟೈಟಲ್‌ ಮತ್ತು ಆ ಪುಸ್ತಕವನ್ನು ಪಡೆದ ಎಲ್ಲಾ ಸದಸ್ಯರನ್ನು ನಾವು ರಿಪೋರ್ಟ್‌ ನಲ್ಲಿ ನೋಡಬಹುದು.
04:22 ನಂತರ ನಾವು ಮುಂದಿನ ಬುಕ್‌ ಟೈಟಲ್‌ ಅನ್ನು ನೋಡುವೆವು..ಹೀಗೆ.
04:27 ಸದ್ಯಕ್ಕೆ, ನಾವು ನಮ್ಮ ರಿಪೋರ್ಟ್‌ ಅನ್ನು ಸರಳವಾಗಿಡೋಣ.
04:31 ಈಗ ‘Next’ ಬಟನ್‌ ಮೇಲೆ ಕ್ಲಿಕ್‌ ಮಾಡೋಣ.
04:36 ಈಗ ನಾವು 'Step 4 - Sorting Options' ನಲ್ಲಿದ್ದೇವೆ.
04:41 ಇದೀಗ ನಾವು ಡೇಟಾವನ್ನು ಕಾಲಾನುಕ್ರಮದಲ್ಲಿ ವರ್ಗೀಕರಿಸಿ
04:46 ನಂತರ ಬುಕ್‌-ಟೈಟಲ್‌ ಪ್ರಕಾರ ಏರಿಕೆ ಕ್ರಮದಲ್ಲಿ ವರ್ಗೀಕರಿಸೋಣ.
04:52 ಇದಕ್ಕಾಗಿ, ನಾವು ‘Sort by’ ಡ್ರಾಪ್‌-ಡೌನ್‌ ಬಾಕ್ಸ್‌ ಮೇಲೆ, ನಂತರ
04:58 ‘Issue Date’ ಮೇಲೆ ಕ್ಲಿಕ್‌ ಮಾಡುವೆವು.
05:03 ನಂತರ ಎರಡನೇ ಡ್ರಾಪ್‌-ಡೌನ್‌ ಬಾಕ್ಸ್‌ ಮೇಲೆ, ಆಮೇಲೆ
05:08 ‘Book Title’ ಮೇಲೆ ಕ್ಲಿಕ್‌ ಮಾಡುವೆವು.
05:12 ಈಗ ‘Next’ ಬಟನ್‌ ಮೇಲೆ ಕ್ಲಿಕ್‌ ಮಾಡೋಣ.
05:16 ಸರಿ. ‘Step 5- Choose Layout’.
05:20 ರಿಪೋರ್ಟ್‌ ಹೇಗಿರಬೇಕು ಮತ್ತು ಹೇಗೆ ಕಾಣಬೇಕು ಎಂದು ಇಲ್ಲಿ ಕಸ್ಟಮೈಸ್‌ ಮಾಡಬಹುದು.
05:25 ನಾವೀಗ ‘Columnar, single-column’ ಲೇಔಟ್‌ ಲಿಸ್ಟ್‌ ಮೇಲೆ ಕ್ಲಿಕ್‌ ಮಾಡೋಣ.
05:31 ಹಿನ್ನೆಲೆಯ ‘Report Builder’ ರಿಫ್ರೆಶ್‌ ಆಗಿರುವುದನ್ನು ಗಮನಿಸಿ.
05:36 ಎಡಗಡೆಯಲ್ಲಿ ಎಲ್ಲಾ ಲೇಬಲ್‌ ಗಳು ಮತ್ತು ಬಲಗಡೆಯಲ್ಲಿ ಅವುಗಳಿಗೆ ಸಂಬಂಧಿಸಿದ ಫೀಲ್ಡ್‌ ಗಳನ್ನು ಇದು ತೋರಿಸುತ್ತದೆ.
05:43 ನಾವೀಗ ‘Columnar, two columns’ ಮೇಲೆ ಕ್ಲಿಕ್‌ ಮಾಡೋಣ.
05:48 ಎರಡು ಕಾಲಂ ನ ಲೇಔಟ್‌ ತೋರಿಸಲು ಕೆಳಗಿನ ವಿಂಡೋ ಮತ್ತೆ ರಿಫ್ರೆಶ್‌ ಆಗಿದೆ.
05:54 ಈ ರೀತಿ, ಬೇಸ್‌ ವಿಜಾರ್ಡ್‌ ಒದಗಿಸುವ ಯಾವುದೇ ಲೇಔಟ್‌ ಅನ್ನು ನಾವು ಆರಿಸಬಹುದು.
06:02 ನಂತರ ನಮ್ಮ ಅಗತ್ಯತೆಗೆ ತಕ್ಕಂತೆ ನಾವು ಇದನ್ನು ಮಾರ್ಪಡಿಸಬಹುದು.
06:07 ಸದ್ಯಕ್ಕೆ ನಾವು ಮೊದಲ ಐಟಂ ‘Tabular’ ಮೇಲೆ ಕ್ಲಿಕ್‌ ಮಾಡಿ
06:12 ನಂತರ ‘Next’ ಬಟನ್‌ ಮೇಲೆ ಕ್ಲಿಕ್‌ ಮಾಡೋಣ.
06:16 ಸರಿ, ಕೊನೆಯ 'Step - Create Report'.
06:20 ನಾವು ಇಲ್ಲಿ ನಮ್ಮ ರಿಪೋರ್ಟ್‌ ಗೆ "Books Issued to Members: Report History" ಎಂಬ ವಿವರಣಾತ್ಮಕ ಶೀರ್ಷಿಕೆಯನ್ನು ಕೊಡೋಣ.
06:30 ನಮ್ಮ ರಿಪೋರ್ಟ್‌, ಯಾವಾಗಲೂ ಡೇಟಾಬೇಸ್‌ ನಿಂದ ಇತ್ತೀಚಿನ ಡೇಟಾ ತೋರಿಸುವಂತೆ ನಾವು ಅದನ್ನು ತಯಾರಿಸೋಣ.
06:38 ರಿಪೋರ್ಟ್‌ ಅನ್ನು ನೋಡಲು ತೆರೆದಾಗಲೆಲ್ಲ ನಾವು ಇತ್ತೀಚಿನ ಡೇಟಾವನ್ನು ನೋಡಲು ಇಚ್ಛಿಸುತ್ತೇವೆ.
06:45 ಇದಕ್ಕಾಗಿ ನಾವು ‘Dynamic Report’ ಆಯ್ಕೆಯ ಮೇಲೆ ಕ್ಲಿಕ್‌ ಮಾಡೋಣ.
06:52 ಸರಿ, ನಮ್ಮ ರಿಪೋರ್ಟ್‌ ಈಗ ತಯಾರಾಗಿದೆ. ‘Create Report now’ ಎಂಬ ಆಯ್ಕೆಯ ಮೇಲೆ ಕ್ಲಿಕ್‌ ಮಾಡೋಣ.
06:59 ಕೊನೆಯದಾಗಿ ‘Finish’ ಬಟನ್‌ ಮೇಲೆ ಕ್ಲಿಕ್‌ ಮಾಡೋಣ.
07:05 ನಾವೀಗ ಹೊಸ ವಿಂಡೋವನ್ನು ನೋಡುತ್ತಿದ್ದೇವೆ ಹಾಗೂ ಇದು ಈಗಷ್ಟೇ ತಯಾರು ಮಾಡಿದ ರಿಪೋರ್ಟ್‌ ಆಗಿದೆ.
07:12 ಗಮನಿಸಿ: ಇದು ಮೇಲ್ಗಡೆ ಫೀಲ್ಡ್‌-ಲೇಬಲ್‌ ಗಳನ್ನು, ಬೋಲ್ಡ್‌ ಫಾಂಟ್‌ ನಲ್ಲಿ ಹೊಂದಿದ್ದು ಡೇಟಾವನ್ನು ಟೇಬಲ್ ನ ರೂಪದಲ್ಲಿ ಪಟ್ಟಿ ಮಾಡಲಾಗಿದೆ.
07:24 ಅಲ್ಲದೆ, ಇದನ್ನು ‘Issue Date’ ಫೀಲ್ಡ್‌ ನ ಪ್ರಕಾರ ಏರಿಕೆ ಕ್ರಮದಲ್ಲಿ, ಅಂದರೆ ಕಾಲಾನುಕ್ರಮದಲ್ಲಿ, ನಂತರ 'Book Title' ಪ್ರಕಾರ ಏರಿಕೆ ಕ್ರಮದಲ್ಲಿ ವರ್ಗೀಕರಣ ಮಾಡಲಾಗಿದೆ.
07:38 ಹೀಗೆ, ಲೈಬ್ರರಿ ಸದಸ್ಯರಿಗೆ ಕಾಲಾನುಕ್ರಮದಲ್ಲಿ ನೀಡಿರುವ ಪುಸ್ತಕಗಳ ರಿಪೋರ್ಟ್‌ ಅನ್ನು ನಾವು ತಯಾರಿಸಿದ್ದೇವೆ.
07:46 ಮುಂದಿನ ಟ್ಯುಟೋರಿಯಲ್‌ ನಲ್ಲಿ, ನಮ್ಮ ರಿಪೋರ್ಟ್‌ ಅನ್ನು ಮಾರ್ಪಡಿಸಲು ಕಲಿಯುವೆವು.
07:52 ಇಲ್ಲೊಂದು ಅಸೈನ್‌ಮೆಂಟ್‌ ಇದೆ:
07:54 ಲೈಬ್ರರಿಯಲ್ಲಿರುವ ಎಲ್ಲಾ ಪುಸ್ತಕಗಳನ್ನು, ಅವುಗಳ ಪಬ್ಲಿಷರ್‌ ಗಳ ಪ್ರಕಾರ ವರ್ಗೀಕರಿಸಿದ ಒಂದು ರಿಪೋರ್ಟ್‌ ಅನ್ನು ತಯಾರಿಸಿ.
08:01 ‘Publishers’ ಮತ್ತು ‘Book titles’ ಎರಡೂ ಏರಿಕೆ ಕ್ರಮದಲ್ಲಿ ಇರಬೇಕು.
08:07 ‘ಕಾಲಮ್ನಾರ್‌, ಸಿಂಗಲ್‌ ಕಾಲಂ ಲೇಔಟ್‌’ ಅನ್ನು ಬಳಸಿ.
08:11 ಇಲ್ಲಿಗೆ ನಾವು ‘ಲಿಬರ್ ಆಫಿಸ್ ಬೇಸ್’ ನಲ್ಲಿ ‘Create reports’ ಎಂಬ ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ.
08:17 ಸಂಕ್ಷಿಪ್ತವಾಗಿ ನಾವು:
08:21 ರಿಪೋರ್ಟ್‌ ಅನ್ನು ತಯಾರಿಸಲು, ರಿಪೋರ್ಟ್‌ ಫೀಲ್ಡ್‌ ಗಳ ಆಯ್ಕೆ, ಲೇಬಲ್‌ ಮಾಡುವುದು ಮತ್ತು ವರ್ಗೀಕರಣ,
08:25 ರಿಪೋರ್ಟ್‌ ಲೇಔಟ್‌ ನ ಆಯ್ಕೆ ಮತ್ತು ಸ್ಟಾಟಿಕ್‌ ಅಥವಾ ಡೈನಾಮಿಕ್‌ ರಿಪೋರ್ಟ್‌ ವಿಧವನ್ನು ಆರಿಸಲು ಕಲಿತೆವು.
08:31 ‘ಸ್ಪೋಕನ್ ಟ್ಯುಟೋರಿಯಲ್’ ಪ್ರೊಜೆಕ್ಟ್, ರಾಷ್ಟ್ರೀಯ ಸಾಕ್ಷರತಾ ಮಿಷನ್, ICT, MHRD ಮೂಲಕ ಭಾರತ ಸರ್ಕಾರದ ನೆರವು ಪಡೆದಿದೆ.
08:42 ಈ ಪ್ರೊಜೆಕ್ಟ್ ಅನ್ನು ಸಂಯೋಜಿಸಿದವರು: http://spoken-tutorial.org.
08:48 ಕೆಳಗಿನ ಲಿಂಕ್ ನಲ್ಲಿ ಈ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಿದೆ.
08:51 ಈ ಸ್ಕ್ರಿಪ್ಟ್ ನ ಅನುವಾದಕರು ಮಂಗಳೂರಿನಿಂದ ಮೆಲ್ವಿನ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.

ಧನ್ಯವಾದಗಳು.

Contributors and Content Editors

Sandhya.np14