LibreOffice-Installation/C2/LibreOffice-Suite-Installation-on-Linux-OS/Kannada

From Script | Spoken-Tutorial
Jump to: navigation, search
Time Narration
00:01 ಎಲ್ಲರಿಗೂ ನಮಸ್ಕಾರ. Installation of LibreOffice Suite ಎಂಬ ಈ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:07 ಈ ಟ್ಯುಟೋರಿಯಲ್ ನಲ್ಲಿ, ನಾವು Linux OS ನಲ್ಲಿ LibreOffice Suite ಅನ್ನು ಹೇಗೆ ಇನ್ಸ್ಟಾಲ್ ಮಾಡುವುದೆಂದು ಕಲಿಯುವೆವು.
00:14 ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು:

Linux OS ಆವೃತ್ತಿ 14.04 ಮತ್ತು Firefox ವೆಬ್ ಬ್ರೌಸರ್ ಇವುಗಳನ್ನು ಬಳಸುತ್ತಿದ್ದೇನೆ. ನೀವು, ನಿಮಗೆ ಇಷ್ಟವಾದ ಯಾವುದೇ ವೆಬ್-ಬ್ರೌಸರ್ ಅನ್ನು ಬಳಸಬಹುದು.

00:27 ಈ ಟ್ಯುಟೋರಿಯಲ್ ಅನ್ನು Linux OS ನಲ್ಲಿ ಅನುಸರಿಸಲು, ನೀವು ಇವುಗಳನ್ನು ತಿಳಿದಿರಬೇಕು:

ಟರ್ಮಿನಲ್ (Terminal) ಕಮಾಂಡ್ ಗಳು ಮತ್ತು ಸಿನಾಪ್ಟಿಕ್ ಪ್ಯಾಕೇಜ್ ಮ್ಯಾನೇಜರ್ (Synaptic Package Manager).

00:35 ಇಲ್ಲದಿದ್ದರೆ, ಸಂಬಂಧಿತ ಟ್ಯುಟೋರಿಯಲ್ ಗಳನ್ನು, ಈ ವೆಬ್ಸೈಟ್ ನ Linux ಸರಣಿಯಲ್ಲಿ ನೋಡಿ.
00:40 LibreOffice Suite ಅನ್ನು (ಲಿಬ್ರೆ ಆಫೀಸ್ ಸ್ವೀಟ್) ಇನ್ಸ್ಟಾಲ್ ಮಾಡುವುದರೊಂದಿಗೆ ನಾವು ಆರಂಭಿಸೋಣ.
00:45 'ಸಿನಾಪ್ಟಿಕ್ ಪ್ಯಾಕೇಜ್ ಮ್ಯಾನೇಜರ್' ಅನ್ನು ಬಳಸಿ, LibreOffice Suite ಅನ್ನು ಡೌನ್ಲೋಡ್ ಹಾಗೂ ಇನ್ಸ್ಟಾಲ್ ಮಾಡಬಹುದು.
00:51 ಹೆಚ್ಚಿನ ಮಾಹಿತಿಗಾಗಿ, ಸಂಬಂಧಿತ ಟ್ಯುಟೋರಿಯಲ್ ಅನ್ನು Linux ಸ್ಪೋಕನ್- ಟ್ಯುಟೋರಿಯಲ್ ಸರಣಿಯಲ್ಲಿ ನೋಡಿ.
00:57 ನಂತರ, ಟರ್ಮಿನಲ್ ಅನ್ನು ಬಳಸಿ LibreOffice Suite ಅನ್ನು ಹೇಗೆ ಇನ್ಸ್ಟಾಲ್ ಮಾಡುವುದೆಂದು ನಾವು ಕಲಿಯೋಣ.
01:03 ಮೊದಲು, ನಾನು Firefox ವೆಬ್-ಬ್ರೌಸರ್ ಅನ್ನು ತೆರೆಯುತ್ತೇನೆ.
01:07 ಅಡ್ರೆಸ್ ಬಾರ್ ನಲ್ಲಿ, ಹೀಗೆ ಟೈಪ್ ಮಾಡಿ: www.LibreOffice.org/download ಮತ್ತು Enter ಅನ್ನು ಒತ್ತಿ.
01:19 ತಕ್ಷಣ ನಮ್ಮನ್ನು download ಪೇಜ್ ಗೆ ಕಳಿಸಲಾಗುತ್ತದೆ.
01:24 LibreOffice Suite ಅನ್ನು ಡೌನ್ಲೋಡ್ ಮಾಡಲು, ಇಲ್ಲಿ Download ಬಟನ್ ಅನ್ನು ನೀವು ನೋಡಬಹುದು.
01:30 ಡೀಫಾಲ್ಟ್ ಆಗಿ, ಲಿಬ್ರೆ ಆಫೀಸ್ ನ ಇತ್ತೀಚಿನ ಆವೃತ್ತಿಯನ್ನು ನಮ್ಮ ಡೀಫಾಲ್ಟ್ OS ಗಾಗಿ ಇಲ್ಲಿ ತೋರಿಸಲಾಗಿದೆ.
01:36 ನಾನು, Linux OS ನಲ್ಲಿ ರೆಕಾರ್ಡ್ ಮಾಡುತ್ತಿದ್ದೇನೆ. ಹೀಗಾಗಿ, ಇದು Linux ಗಾಗಿ, ಲಿಬ್ರೆ ಆಫೀಸ್ ನ ಇತ್ತೀಚಿನ ಆವೃತ್ತಿಯನ್ನು ತೋರಿಸುತ್ತದೆ.
01:45 ಆದರೆ, ನಮ್ಮ OS ಗೆ ಇದು ಸೂಕ್ತವಾಗಿದೆ ಎಂದು ಈ ಸಾಫ್ಟ್ವೇರ್ ಅನ್ನು ನಾವು ಡೌನ್ಲೋಡ್ ಮಾಡಬಹುದು.
01:51 ನಾವು OS ಅನ್ನು ಅಥವಾ LibreOffice ಆವೃತ್ತಿಯನ್ನು ಹೇಗೆ ಬದಲಾಯಿಸುತ್ತೇವೆ? Download ಬಟನ್ ನ ಮೇಲ್ಗಡೆ ಇರುವ “change” ಎಂಬ ಲಿಂಕ್ ನ ಮೇಲೆ ಸುಮ್ಮನೆ ಕ್ಲಿಕ್ ಮಾಡಿ.
02:01 ನಮ್ಮನ್ನು ಇನ್ನೊಂದು ಪೇಜ್ ಗೆ ಕಳಿಸಲಾಗುತ್ತದೆ. ಇಲ್ಲಿ, ನಾವು ವಿವಿಧ OS ಗಳಿಗಾಗಿ Download ಆಯ್ಕೆಯನ್ನು ನೋಡಬಹುದು. ನಮ್ಮ ಅಗತ್ಯಕ್ಕೆ ಸೂಕ್ತವಾದದ್ದನ್ನು ನಾವು ಆಯ್ದುಕೊಳ್ಳಬಹುದು.
02:12 ಇಲ್ಲಿ, ನಮಗೆ ಇನ್ಸ್ಟಾಲ್ ಮಾಡಬೇಕಾಗಿರುವ LibreOffice Suite ನ ಆವೃತ್ತಿಯನ್ನು ಸಹ ನಾವು ಆಯ್ದುಕೊಳ್ಳಬಹುದು.
02:18 ನನ್ನ ಮಷಿನ್ 64-bit, Ubuntu Linux ಇರುವುದರಿಂದ, ನಾನು Linux x64 ಬ್ರ್ಯಾಕೆಟ್ ನಲ್ಲಿ deb - ಇದನ್ನು ಆಯ್ದುಕೊಳ್ಳುವೆನು.
02:26 ಹೀಗೆ ಮಾಡಿದ ಮೇಲೆ, ಮತ್ತೆ ನಮ್ಮನ್ನು download ಪೇಜ್ ಗೆ ಕಳಿಸಲಾಗುತ್ತದೆ.
02:31 ಗಮನಿಸಿ, LibreOffice ಮತ್ತು OS ನ ಡೀಫಾಲ್ಟ್ ಆವೃತ್ತಿಗಳು ಈಗ ನಮ್ಮ ಆಯ್ಕೆಯಂತೆಯೆ ಆಗಿವೆ.
02:40 ನಾವು Download ಬಟನ್ ಮೇಲೆ ಕ್ಲಿಕ್ ಮಾಡೋಣ.
02:43 ಹೀಗೆ ಮಾಡುವುದರಿಂದ, Save As ಎಂಬ ಡೈಲಾಗ್-ಬಾಕ್ಸ್ ತೆರೆದುಕೊಳ್ಳುತ್ತದೆ.
02:46 OK ಬಟನ್ ಮೇಲೆ ಕ್ಲಿಕ್ ಮಾಡಿ. ಡೌನ್ಲೋಡ್ ಆರಂಭವಾಗುವುದು. ಇಂಟರ್ನೆಟ್ ನ ಗತಿಗೆ ಅನುಸಾರವಾಗಿ, ಇದು ಸ್ವಲ್ಪ ಸಮಯವನ್ನು ತೆಗೆದುಕೊಳ್ಳಬಹುದು.
02:55 ಡೌನ್ಲೋಡ್ ಆಗುವುದು ಮುಗಿದಾಗ, ಟರ್ಮಿನಲ್ ಅನ್ನು ತೆರೆಯಿರಿ. ಇದನ್ನು ನಾವು ಕೀಬೋರ್ಡ್ ಮೇಲಿನ Ctrl, Alt, T ಕೀಗಳನ್ನು ಒಟ್ಟಿಗೇ ಒತ್ತಿ ಮಾಡಬಹುದು.
03:05 ಟರ್ಮಿನಲ್ ನಲ್ಲಿ, ಹೀಗೆ ಟೈಪ್ ಮಾಡಿ: cd space Downloads ಮತ್ತು Enter ಅನ್ನು ಒತ್ತಿ.
03:13 ನಂತರ, ls ಎಂದು ಟೈಪ್ ಮಾಡಿ ಮತ್ತು Enter ಅನ್ನು ಒತ್ತಿ.
03:17 ಡೌನ್ಲೋಡ್ ಆಗಿರುವ ಒಂದು 'LibreOffice suite' ಫೈಲ್ ಅನ್ನು, tar.gz ಫಾರ್ಮ್ಯಾಟ್ ನಲ್ಲಿ ನಾವು ನೋಡಬಹುದು.
03:24 ಈಗ Ctrl + L ಕೀಗಳನ್ನು ಒತ್ತಿ ನಾನು ಸ್ಕ್ರೀನ್ ಅನ್ನು ಖಾಲಿ ಮಾಡುತ್ತೇನೆ.
03:29 ನಂತರ, ಹೀಗೆ ಟೈಪ್ ಮಾಡಿ: tar space -zxvf space ಮತ್ತು ಫೈಲ್ ನೇಮ್ ಹಾಗೂ Enter ಅನ್ನು ಒತ್ತಿ.
03:43 ನಂತರ, ಹೀಗೆ ಟೈಪ್ ಮಾಡಿ: cd space file name ಮತ್ತು Enter ಅನ್ನು ಒತ್ತಿ.
03:51 ಈಗ, ಹೀಗೆ ಟೈಪ್ ಮಾಡಿ: cd ದೊಡ್ಡಕ್ಷರಗಳಲ್ಲಿ DEBS ಮತ್ತು Enter ಅನ್ನು ಒತ್ತಿ.
03:59 ಕೊನೆಯಲ್ಲಿ, ಹೀಗೆ ಟೈಪ್ ಮಾಡಿ: sudo space dpkg -i space *.deb ಮತ್ತು Enter ಅನ್ನು ಒತ್ತಿ.
04:14 ನಿಮ್ಮ ಸಿಸ್ಟಂ ನ ಪಾಸ್ವರ್ಡ್ ಅನ್ನು ಟೈಪ್ ಮಾಡಿ ಮತ್ತು Enter ಅನ್ನು ಒತ್ತಿ.
04:19 Enter ಅನ್ನು ಒತ್ತಿದ ನಂತರ, LibreOffice Suite ನ ಇನ್ಸ್ಟಾಲೇಶನ್ ಆರಂಭವಾಗುವುದು.
04:26 ಇನ್ಸ್ಟಾಲೇಶನ್ ಸ್ವಲ್ಪ ಸಮಯವನ್ನು ತೆಗೆದುಕೊಳ್ಳುವುದು. ಇನ್ಸ್ಟಾಲೇಶನ್ ಪೂರ್ಣಗೊಂಡ ನಂತರ, ಟರ್ಮಿನಲ್ ಅನ್ನು ಮುಚ್ಚಿ (ಕ್ಲೋಸ್ ಮಾಡಿ).
04:34 dash home ಗೆ ಹೋಗಿ ಮತ್ತು ಸರ್ಚ್-ಬಾರ್ ಫೀಲ್ಡ್ ನಲ್ಲಿ office ಎಂದು ಟೈಪ್ ಮಾಡಿ.
04:40 Base, Calc, Impress, Writer, Draw ಮತ್ತು Math ಗಳಂತಹ ವಿವಿಧ LibreOffice Suite ಘಟಕಗಳನ್ನು ನೀವು ನೋಡುವಿರಿ.
04:51 ನಿಮ್ಮ Linux ಸಿಸ್ಟಂ ನ ಮೇಲೆ, LibreOffice Suite ಯಶಸ್ವಿಯಾಗಿ ಇನ್ಸ್ಟಾಲ್ ಅಗಿರುವುದನ್ನು ಇದು ಸೂಚಿಸುತ್ತದೆ.
04:58 ಈ ಟ್ಯುಟೋರಿಯಲ್ ನಲ್ಲಿ ಇರುವುದು ಇಷ್ಟೇ. ಸಂಕ್ಷಿಪ್ತವಾಗಿ,
05:02 ಈ ಟ್ಯುಟೋರಿಯಲ್ ನಲ್ಲಿ, Ubuntu Linux OS ನಲ್ಲಿ LibreOffice Suite ಅನ್ನು ಇನ್ಸ್ಟಾಲ್ ಹೇಗೆ ಮಾಡುವುದು ಎಂದು ನಾವು ಕಲಿತಿದ್ದೇವೆ.
05:09 ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋ 'ಸ್ಪೋಕನ್ ಟ್ಯುಟೋರಿಯಲ್' ಪ್ರಕಲ್ಪದ ಸಾರಾಂಶವಾಗಿದೆ. ದಯವಿಟ್ಟು ಇದನ್ನು ವೀಕ್ಷಿಸಿ.
05:16 ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ತಂಡವು ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ಆನ್ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. ವಿವರಗಳಿಗಾಗಿ ದಯವಿಟ್ಟು ನಮಗೆ ಬರೆಯಿರಿ.
05:29 ಇದು NMEICT, MHRD ಮೂಲಕ ಭಾರತ ಸರ್ಕಾರದ ಅನುದಾನವನ್ನು ಪಡೆದಿದೆ. ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು, ಕೆಳಗೆ ತೋರಿಸಿದ ಲಿಂಕ್ ನಲ್ಲಿ ಲಭ್ಯವಿದೆ:
05:43 ಈ ಟ್ಯುಟೋರಿಯಲ್ ನ ಸ್ಕ್ರಿಪ್ಟ್, ಸ್ಪೋಕನ್ ಟ್ಯುಟೋರಿಯಲ್ ತಂಡದ ಕೊಡುಗೆಯಾಗಿದೆ.

ಸ್ಕ್ರಿಪ್ಟ್ ನ ಅನುವಾದಕಿ IIT Bombay ಯಿಂದ ಸಂಧ್ಯಾ ಪುಣೇಕರ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ. ವಂದನೆಗಳು.

Contributors and Content Editors

Sandhya.np14