LaTeX-Old-Version/C2/Bibliography/Kannada
From Script | Spoken-Tutorial
Time | Narration |
00:00 | LaTeX (ಲೇಟೆಕ್) ಮತ್ತು BibTeX (ಬಿಬ್ಟೆಕ್) ಗಳನ್ನು ಬಳಸಿ ರೆಫರೆನ್ಸ್ ಗಳನ್ನು ರಚಿಸುವ ಈ ಸಂಕ್ಷಿಪ್ತ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
00:09 | ನೀವು ಮೊದಲು ಮಾಡಬೇಕಾದದ್ದು, ಈ 'ref.bib' ಫೈಲ್ ನಲ್ಲಿ ಇರುವಂತಹ references ಗಳ ಒಂದು ಡೇಟಾಬೇಸ್ ಅನ್ನು ರಚಿಸುವುದು. |
00:23 | ಈ ಫೈಲ್ ನಲ್ಲಿ ಕೆಳಗೆ ಹೋಗೋಣ ಮತ್ತು ಮೇಲಕ್ಕೆ ಹಿಂತಿರುಗೋಣ. |
00:30 | ಇವುಗಳಲ್ಲಿ ಪ್ರತಿಯೊಂದು 'ರೆಫರೆನ್ಸ್ ಗಳು', ಒಂದು ವಿಶಿಷ್ಟ ಕೀವರ್ಡ್ ನೊಂದಿಗೆ ಪ್ರಾರಂಭವಾಗುತ್ತದೆ. ಉದಾಹರಣೆಗೆ, ಈ 'ರೆಫರೆನ್ಸ್' ನ ಕೀವರ್ಡ್ KMM07 ಆಗಿದೆ. |
00:43 | ನಾನು LaTeX ಫೈಲ್ ಅನ್ನು ತೆರೆಯುತ್ತೇನೆ. LaTeX ಫೈಲ್ ನಲ್ಲಿ, ನಿಮಗೆ 'ರೆಫರೆನ್ಸ್' ಅನ್ನು ಬಳಸಬೇಕಾದ ಸ್ಥಳದಲ್ಲಿ, 'cite key word' ಎಂಬ ಕಮಾಂಡ್ ಅನ್ನು ಕೊಡಿ. |
01:00 | ಉದಾಹರಣೆಗೆ- cite ಕೀವರ್ಡ್. ಇದನ್ನು ನೋಡಿ, cite KMM07, 'ref.bib' ನಲ್ಲಿ ಇದು ನಾವು ನೋಡಿದ ಮೊದಲ 'ರೆಫರೆನ್ಸ್'. |
01:15 | ನಂತರ ನೀವು ಮಾಡಬೇಕಾಗಿರುವ ಕೆಲಸ, 'ರೆಫರೆನ್ಸ್' ಗಳನ್ನು ಹೊಂದಿರುವ ಫೈಲ್ ನ ಹೆಸರನ್ನು 'ಸೋರ್ಸ್ ಫೈಲ್' ನಲ್ಲಿ ಸೇರಿಸುವುದು ಆಗಿದೆ. |
01:23 | ಇಲ್ಲಿ, ನಾನು ಅದನ್ನು ಈ ಡೊಕ್ಯೂಮೆಂಟ್ ನ ಕೊನೆಯಲ್ಲಿ ಸೇರಿಸಿದ್ದೇನೆ - 'bibliography ref'. ಆ 'ರೆಫರೆನ್ಸ್' ಗಳು 'ref.bib' ಫೈಲ್ ನಲ್ಲಿವೆ ಎಂದು ನೆನಪಿಸಿಕೊಳ್ಳಿ. |
01:38 | ಕೊನೆಯದಾಗಿ, ಗ್ರಂಥಸೂಚಿಯ (bibliography) ಯಾವ ಸ್ಟೈಲ್ ಅನ್ನು ಬಳಸಬೇಕೆಂದು ನೀವು ಹೇಳಬೇಕು. |
01:44 | ಅದನ್ನು ಈ ಸೋರ್ಸ್ ಫೈಲ್ ನ ಮೇಲ್ಭಾಗದಲ್ಲಿ ಸೇರಿಸಲಾಗಿದೆ- |
01:48 | ಈ ಕಮಾಂಡ್, 'bibliography style plain'. |
01:53 | ಇಲ್ಲಿ ನಾವು plain ಸ್ಟೈಲ್ ಅನ್ನು ಬಳಸುತ್ತೇವೆ ಎಂದು ಭಾವಿಸಿ. plain styleನಲ್ಲಿ 'ರೆಫರೆನ್ಸ್' ಗಳನ್ನು ರಚಿಸಲು, ಈ ಕೆಳಗಿನ ಕಮಾಂಡ್ ಗಳ ಅನುಕ್ರಮವನ್ನು ಎಕ್ಸೀಕ್ಯೂಟ್ ಮಾಡಬೇಕು. |
02:04 | ಮೊದಲು, 'pdf LaTeX references' ಅನ್ನು ಬಳಸಿ, ಸೋರ್ಸ್ ಫೈಲ್ ಅನ್ನು ಕಂಪೈಲ್ ಮಾಡಿ. |
02:13 | BibTeX references (ಬಿಬ್ ಟೆಕ್ ರೆಫರೆನ್ಸಸ್) ಕಮಾಂಡ್ ಅನ್ನು ಎಕ್ಸೀಕ್ಯೂಟ್ ಮಾಡಿ. |
02:23 | ಮೂರನೆಯದಾಗಿ, pdf LaTeX references ಅನ್ನು ಬಳಸಿ, ಇನ್ನೂ ಎರಡು ಸಲ ಸೋರ್ಸ್ ಫೈಲ್ ಅನ್ನು ಕಂಪೈಲ್ ಮಾಡಿ. |
02:31 | ಒಮ್ಮೆ. ಎರಡು ಸಲ. |
02:35 | 'ರೆಫರೆನ್ಸ್' ಗಳನ್ನು ಈಗ ರಚಿಸಲಾಗಿದೆ, ನಾವು ಹೋಗಿ ನೋಡೋಣ. |
02:40 | ಎರಡನೇ ಪುಟ.. ಇಲ್ಲಿ ಟೆಕ್ಸ್ಟ್ ಇದೆ, ಇಲ್ಲಿ 'ರೆಫರೆನ್ಸ್' ಗಳ ಪಟ್ಟಿ ಇದೆ. ನಾವು ಹಾಗೆ ಕೆಳಗೆ ಹೋಗೋಣ. |
02:58 | plain style, ವರ್ಣಮಾಲೆಯ ಕ್ರಮದಲ್ಲಿ ಮತ್ತು ಕ್ರಮಸಂಖ್ಯೆಯೊಂದಿಗೆ 'ರೆಫರೆನ್ಸ್' ಗಳನ್ನು ಪಟ್ಟಿಮಾಡುತ್ತದೆ. |
03:07 | ಈ ಸಂಖ್ಯೆಗಳನ್ನು, ಮೇನ್ ಟೆಕ್ಸ್ಟ್ ನಲ್ಲಿಯೂ ಬಳಸಲಾಗುತ್ತದೆ. |
03:13 | 'U-n-s-r-t' ಎಂಬ 'ರೆಫರೆನ್ಸ್' ಮಾಡುವ ಸ್ಟೈಲ್, plain style ನ ಹಾಗೆಯೇ ಇದೆ. ಆದರೆ ಒಂದು ವ್ಯತ್ಯಾಸವಿದೆ. |
03:23 | 'u-n-s-r-t' ಅನ್ನು ಇಲ್ಲಿ ಇರಿಸಿ. |
03:31 | 'ರೆಫರೆನ್ಸ್' ಗಳನ್ನು ಮೊದಲು ಉಲ್ಲೇಖಿಸಲಾದ ಕ್ರಮದಲ್ಲಿ ಪಟ್ಟಿಮಾಡಲಾಗಿದೆ. |
03:36 | ನಾವು ಮಾಡಿದಂತೆ, plain ಅನ್ನು 'u-n-s-r-t' ಗೆ ಬದಲಾಯಿಸೋಣ. ನಂತರ LaTeXing ಮತ್ತು BibTeXing ವಿಧಾನವನ್ನು ಪುನರಾವರ್ತಿಸೋಣ. ಮೊದಲನೆಯದಾಗಿ, pdf LaTeX ಅನ್ನು ಬಳಸಿ, ಸೋರ್ಸ್ ಫೈಲ್ ಅನ್ನು LaTeX ಮಾಡಿ. ನಂತರ BibTeX ಅನ್ನು ಬಳಸಿ ಸೋರ್ಸ್ ಫೈಲ್ ಅನ್ನು BibTeX ಮಾಡಿ. ನಂತರ ಸೋರ್ಸ್ ಫೈಲ್ ಅನ್ನು ಮತ್ತೆ ಎರಡು ಬಾರಿ LaTeX ಮಾಡಿ.. ಮೊದಲ ಸಲ, ಎರಡನೇ ಸಲ. |
04:07 | ಈಗ ಏನಾಗಿದೆ ಎಂದು ಗಮನಿಸಿ. |
04:09 | ಪೇಪರ್ ನಲ್ಲಿ ಉಲ್ಲೇಖಿಸಲಾದ ಕ್ರಮದಲ್ಲಿ, ಇದು 'ರೆಫರೆನ್ಸ್' ಗಳನ್ನು ಸೃಷ್ಟಿಸಿದೆ ಎಂದು ನೀವು ನೋಡಬಹುದು. ಉದಾಹರಣೆಗೆ, ಈ ಮೊದಲ 'ರೆಫರೆನ್ಸ್' ಅನ್ನು ಇಲ್ಲಿ ಮೊದಲು ಉಲ್ಲೇಖಿಸಲಾಗಿದೆ. |
04:20 | 'ರೆಫರೆನ್ಸ್' ಎರಡನ್ನು '2' ಎಂದು ಉಲ್ಲೇಖಿಸಲಾಗಿದೆ ಏಕೆಂದರೆ ಇದನ್ನು ಇಲ್ಲಿ ಉಲ್ಲೇಖಿಸಲಾಗಿದೆ. |
04:26 | ಈ ಪಟ್ಟಿಯಲ್ಲಿ ಇದು ಎರಡನೇ ಸ್ಥಾನದಲ್ಲಿದೆ. |
04:30 | ಈ ಪಟ್ಟಿಯಲ್ಲಿ ನಾವು ಕೆಳಗೆ ಹೋಗೋಣ. |
04:39 | ಸರಿ. ಹಿಂದಿರುಗೋಣ. |
04:44 | ಕಂಪ್ಯೂಟರ್ ವಿಜ್ಞಾನಿಗಳು ಬಳಸುವಂತೆ 'ರೆಫರೆನ್ಸ್'ಗಳನ್ನು ತಯಾರಿಸಲು, ಸ್ಟೈಲ್ ಅನ್ನು 'alpha' (ಅಲ್ಫಾ) ಗೆ ಬದಲಾಯಿಸಿ. |
04:52 | ನಾವು ಇದನ್ನು 'alpha' ಗೆ ಬದಲಾಯಿಸೋಣ. |
04:59 | 'ಸೇವ್' ಮಾಡಿ ಮತ್ತು ನಂತರ LaTeXing ಮತ್ತು BibTeXing ವಿಧಾನವನ್ನು ಪುನರಾವರ್ತಿಸಿ. ಎಂದರೆ, pdf LaTeX source file, BibTeX references, pdf LaTeX references ಒಮ್ಮೆ, ಎರಡು ಬಾರಿ. ಇದನ್ನು ಗಮನಿಸಿ. |
05:20 | ಈಗ ನಾವು ರೆಫರೆನ್ಸಿಂಗ್ ನ ಈ ಸ್ಟೈಲ್ ಅನ್ನು ಪಡೆಯುತ್ತೇವೆ. |
05:26 | ನಾವು ಇಲ್ಲಿ ಹೀಗೆ ಕೆಳಗೆ ಹೋಗಿ ನೋಡೋಣ. |
05:31 | OK. |
05:37 | 'ರೆಫರೆನ್ಸ್' ಮಾಡುವ ಇನ್ನೂ ಅನೇಕ ಸ್ಟೈಲ್ ಗಳಿವೆ. ನಾನು ಈಗ ಎರಡು ಫೈಲ್ ಗಳನ್ನು ಡೌನ್ಲೋಡ್ ಮಾಡಿದ್ದೇನೆ: 'Harvard.sty' ಮತ್ತು 'ifac.bst'. |
05:48 | ಕೆಳಗಿನ ಈ ಎರಡು ಬದಲಾವಣೆಗಳನ್ನು ಮಾಡಿ. ಮೊದಲು, ನಾನು ಈಗ ಮಾಡುವ ಹಾಗೆ, use packages ಕಮಾಂಡ್ ನಲ್ಲಿ 'Harvard' ಅನ್ನು (ಹಾರ್ವರ್ಡ್) ಸೇರಿಸಿ. |
05:58 | ಮತ್ತು ನಂತರ style ಅನ್ನು 'ifac'ಗೆ ಬದಲಾಯಿಸಿ. |
06:08 | ಫೈಲ್ ಅನ್ನು ಸೇವ್ ಮಾಡಿ. |
06:13 | ಈಗ, ನಾವು ಮತ್ತೊಮ್ಮೆ LaTeXing ಮತ್ತು BibTeXing ವಿಧಾನವನ್ನು ಮಾಡೋಣ. |
06:18 | Latex, BibTeX, LaTeX ಒಮ್ಮೆ, LaTeX ಎರಡು ಸಲ. |
06:31 | ಈ ಪಿಡಿಎಫ್ ಫೈಲ್ ಅನ್ನು ನಾವು 'ರೆಫರೆನ್ಸ್' ಪಟ್ಟಿ ಎಂದು ಪಡೆಯುತ್ತೇವೆ. |
06:37 | ಒಮ್ಮೆ ನಾವು ಕೆಳಗೆ ಹೋಗೋಣ. |
06:46 | ಇದು ವರ್ಣಮಾಲೆಯ ಅನುಸಾರ ಜೋಡಿಸಲ್ಪಟ್ಟಿದೆ ಆದರೆ plain style ಗೆ ಹೋಲಿಸಿದರೆ ಕ್ರಮಸಂಖ್ಯೆಗಳಿಲ್ಲ. |
06:52 | ಉಲ್ಲೇಖವನ್ನು ಲೇಖಕನ ಹೆಸರು ಮತ್ತು ವರ್ಷದ ಮೂಲಕ ಮಾಡಲಾಗಿದೆ; ಲೇಖಕನ ಹೆಸರು ... ಮತ್ತು ವರ್ಷ. |
07:00 | ಈ ಸ್ಟೈಲ್ ನಲ್ಲಿ, cite-as-noun ಎಂಬ ಒಂದು ವಿಶೇಷವಾದ ಕಮಾಂಡ್ ಇದೆ. ಇದು ಉಲ್ಲೇಖಿಸಲಾದ ವ್ಯಕ್ತಿಯ ಹೆಸರನ್ನು ಬ್ರಾಕೆಟ್ ಗಳ ಹೊರಗೆ, ವಾಕ್ಯದಲ್ಲಿ ಇಡಲು ಸಹಾಯಮಾಡುತ್ತದೆ. |
07:15 | ಇಲ್ಲಿ ನಾವು cite ಅನ್ನು ಮಾತ್ರ ಬಳಸಿದ್ದೇವೆ ಮತ್ತು ಎಲ್ಲಾ ಉಲ್ಲೇಖಗಳನ್ನು ಬ್ರಾಕೆಟ್ ಗಳ ಒಳಗೆ ಮಾತ್ರ ಪಡೆದಿದ್ದೇವೆ ಎಂಬುದನ್ನು ಗಮನಿಸಿ. |
07:22 | ಉದಾಹರಣೆಗಾಗಿ, |
07:28 | ಈ ಎರಡನೆಯ ಪ್ಯಾರಾಗ್ರಾಫ್ ಅನ್ನು ನೋಡಿ. The textbook by 'Cite KMM07'. The textbook by.. ಈ ಎಲ್ಲವೂ ಆವರಣಗಳ ಒಳಗೆ ಬರುತ್ತದೆ. ನಾನು ಇದನ್ನು 'cite-as-noun' ಎಂದು ಬದಲಾಯಿಸುತ್ತೇನೆ ಎಂದುಕೊಳ್ಳಿ. |
07:44 | ಇದನ್ನು ಸೇವ್ ಮಾಡಿ ಮತ್ತು ಕಂಪೈಲ್ ಮಾಡಿ. |
07:50 | ಇದರ ಪರಿಣಾಮವಾಗಿ, ಈಗ, ಈ Moudgalya, ವಾಕ್ಯದಲ್ಲಿ ಬ್ರಾಕೆಟ್ ನ ಹೊರಗೆ ಬಂದಿದೆ. |
07:59 | ನಿಮಗೆ ಬೇರೆ ರೆಫರೆನ್ಸಿಂಗ್ ಸ್ಟೈಲ್ ನ ಅಗತ್ಯವಿದ್ದರೆ, ವೆಬ್ ನಲ್ಲಿ ಹುಡುಕಿ. |
08:04 | ಯಾರಾದರೂ ಈಗಾಗಲೇ 'sty' ಮತ್ತು 'bst' ಫೈಲ್ ಗಳನ್ನು ಬರೆದಿರುವ ಸಾಧ್ಯತೆಗಳಿವೆ. |
08:10 | ಇಲ್ಲಿಗೆ, ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ. ಇದು ಪ್ರೊ. ಕಣ್ಣನ್ ಮೌದ್ಗಲ್ಯ ಅವರ ಕೊಡುಗೆಯಾಗಿದೆ.
ಈ ಸ್ಕ್ರಿಪ್ಟ್ ನ ಅನುವಾದಕಿ, IIT Bombay ಯಿಂದ ಸಂಧ್ಯಾ ಪುಣೇಕರ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ. ವಂದನೆಗಳು. |