Koha-Library-Management-System/C2/How-to-create-a-library/Kannada
From Script | Spoken-Tutorial
|
|
00:01 | How to create a Library in Koha ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
00:07 | ಈ ಟ್ಯುಟೋರಿಯಲ್ ನಲ್ಲಿ ನಾವು, library ಮತ್ತು Group ಗಳನ್ನು ಹೇಗೆ ಕ್ರಿಯೇಟ್ ಮಾಡುವುದೆಂದು ಕಲಿಯುವೆವು. |
00:16 | ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು:
Ubuntu Linux Operating System 16.04 |
00:24 | ಮತ್ತು Koha ಆವೃತ್ತಿ 16.05 ಇವುಗಳನ್ನು ಬಳಸುತ್ತಿದ್ದೇನೆ. |
00:29 | ಈ ಟ್ಯುಟೋರಿಯಲ್ ಅನ್ನು ಅನುಸರಿಸಲು, ನೀವು ಲೈಬ್ರರಿ ಸೈನ್ಸ್ ಅನ್ನು ತಿಳಿದಿರಬೇಕು. |
00:35 | ಈ ಟ್ಯುಟೋರಿಯಲ್ ಅನ್ನು ಅಭ್ಯಾಸ ಮಾಡಲು, ನೀವು Koha ಅನ್ನು ನಿಮ್ಮ ಸಿಸ್ಟಂ ನಲ್ಲಿ ಇನ್ಸ್ಟಾಲ್ ಮಾಡಿರಬೇಕು. |
00:41 | ಮತ್ತು, Koha ದಲ್ಲಿ ನೀವು Admin ಆಕ್ಸೆಸ್ ಅನ್ನು (access) ಹೊಂದಿರಬೇಕು. |
00:46 | ಹೆಚ್ಚಿನ ವಿವರಗಳಿಗಾಗಿ, ದಯವಿಟ್ಟು ಈ ವೆಬ್ಸೈಟ್ ನಲ್ಲಿ Koha spoken tutorial ಸರಣಿಯನ್ನು ನೋಡಿ. |
00:53 | ಈಗ ನಾವು ಆರಂಭಿಸೋಣ. ನನ್ನ ಸಿಸ್ಟಂನಲ್ಲಿ, ಈಗಾಗಲೇ Koha ಅನ್ನು ಇನ್ಸ್ಟಾಲ್ ಮಾಡಿದ್ದೇನೆ. |
00:59 | Koha ಇಂಟರ್ಫೇಸ್ ಗೆ ನಾನು ಬದಲಾಯಿಸುತ್ತೇನೆ. |
01:03 | ಇನ್ಸ್ಟಾಲ್ಲೇಶನ್ ಸಮಯದಲ್ಲಿ ಕೊಟ್ಟಿರುವ username ಮತ್ತು password ಗಳನ್ನು ಬಳಸಿ Koha ದಲ್ಲಿ ಲಾಗ್-ಇನ್ ಮಾಡಿ. |
01:10 | ನನ್ನ ಸಿಸ್ಟಂನಲ್ಲಿ, ನಾನು Username ಅನ್ನು koha underscore library ಎಂದು ಕೊಟ್ಟಿದ್ದೇನೆ. |
01:17 | ಈಗ, conf.xml ಫೈಲ್ ನಿಂದ ಪಡೆದ ಪಾಸ್ವರ್ಡ್ ಅನ್ನು ಟೈಪ್ ಮಾಡಿ. |
01:25 | Koha ಮೇನ್ ಪೇಜ್ ತೆರೆದುಕೊಳ್ಳುತ್ತದೆ. |
01:27 | ಗಮನಿಸಿ, Koha ಅನ್ನು ಸೆಟ್-ಅಪ್ ಮಾಡುವಾಗ - ನಾವು ಕೋಹಾದಲ್ಲಿ ಕ್ರಿಯೇಟ್ ಮಾಡುವ ಪ್ರತಿಯೊಂದು Branch library ಯ ವಿವರಗಳನ್ನು ಸೇರಿಸಬೇಕು. |
01:38 | ನಂತರ ಈ ಡೇಟಾಅನ್ನು ಕೋಹಾದ ಹಲವಾರು ಏರಿಯಾಗಳಲ್ಲಿ ಬಳಸಲಾಗುವುದು. |
01:43 | ಈಗ, ನಾವು ಒಂದು ಹೊಸ 'ಲೈಬ್ರರಿ'ಯನ್ನು ಸೇರಿಸೋಣ. |
01:47 | Koha ಇಂಟರ್ಫೇಸ್ ಗೆ ಹಿಂದಿರುಗಿ. |
01:50 | Home ಗೆ ಹೋಗಿ ಮತ್ತು Koha Administration ಮೇಲೆ ಕ್ಲಿಕ್ ಮಾಡಿ. |
01:56 | Basic parameters ಎಂಬ ವಿಭಾಗವನ್ನು ಗುರುತಿಸಿ. |
02:00 | Libraries and groups ಮೇಲೆ ಕ್ಲಿಕ್ ಮಾಡಿ. |
02:04 | ಒಂದು ಹೊಸ 'ಲೈಬ್ರರಿ'ಯನ್ನು ಸೇರಿಸಲು, '+ New Library' ಎಂಬ ಟ್ಯಾಬ್ ಮೇಲೆ ಕ್ಲಿಕ್ ಮಾಡಿ. |
02:10 | ನಾವು groups ವಿಭಾಗವನ್ನು ಸಧ್ಯಕ್ಕೆ ಹಾಗೇ ಬಿಡುವೆವು. |
02:15 | ಈ ಪೇಜ್ ನಲ್ಲಿ, ಕೆಂಪು ಬಣ್ಣದಲ್ಲಿ ಗುರುತಿಸಲಾದ ಎಲ್ಲಾ ಫೀಲ್ಡ್ ಗಳು ಕಡ್ಡಾಯವಾಗಿವೆ ಎಂಬುದನ್ನು ಗಮನಿಸಿ. |
02:21 | ನಾನು ಇಲ್ಲಿ ಮಾಡಿದಂತೆ, ನಿಮ್ಮ ಲೈಬ್ರರಿಗಾಗಿ Library code ಹಾಗೂ Name ಫೀಲ್ಡ್ ಗಳನ್ನು ತುಂಬಿ. |
02:29 | ಗಮನಿಸಬೇಕಾದ ಕೆಲವು ಮುಖ್ಯ ವಿಷಯಗಳು - Library code ನಲ್ಲಿ ಸ್ಪೇಸ್ ಇರಬಾರದು. |
02:36 | ಮತ್ತು, ಇದು 10 ಅಕ್ಷರಗಳಿಗಿಂತ ಕಡಿಮೆ ಇರಬೇಕು. |
02:40 | 'ಡೇಟಾಬೇಸ್' ನಲ್ಲಿ, ಈ ಕೋಡ್ ಅನ್ನು ಏಕಮಾತ್ರ ಗುರುತಿನಂತೆ ಬಳಸಲಾಗುತ್ತದೆ. |
02:46 | ಮುಂದಿನ ವಿಭಾಗದಲ್ಲಿ, Address, phone number ಗಳಂತಹ ನಮ್ಮ ಲೈಬ್ರರಿಯ ಸಂಪರ್ಕದ ವಿವರಗಳನ್ನು ನಾವು ತುಂಬಬೇಕು. |
02:58 | ಇಲ್ಲಿ ತೋರಿಸಿರುವಂತೆ ನಾನು ವಿವರಗಳನ್ನು ತುಂಬಿದ್ದೇನೆ. |
03:01 | ಇಲ್ಲಿ ಪಟ್ಟಿ ಮಾಡಿದ ಯಾವುದೇ 'ಫೀಲ್ಡ್' ಗಾಗಿ ನಿಮ್ಮ ಹತ್ತಿರ ಮಾಹಿತಿ ಇರದಿದ್ದರೆ, ಅದನ್ನು ಖಾಲಿ ಬಿಟ್ಟುಬಿಡಿ. |
03:08 | ಹೀಗೆಯೇ, ಈ ಪೇಜ್ ನಲ್ಲಿ ನಿಮ್ಮ ಲೈಬ್ರರಿಯ ವಿವರಗಳನ್ನು ಭರ್ತಿ ಮಾಡಿ. |
03:13 | ನಿಮ್ಮ ಲೈಬ್ರರಿಗಾಗಿ ನಂತರ ಕಸ್ಟಮ್ ಪ್ರಕಟಣೆಗಳನ್ನು ಮಾಡಲು, address ಹಾಗೂ phone ವಿವರಗಳನ್ನು ಬಳಸಬಹುದು. |
03:20 | ಸದಸ್ಯರು ಲೈಬ್ರರಿಯನ್ನು ಸಂಪರ್ಕಿಸಲು ಬಯಸಿದಾಗ, ಅವರು ಸಹ ಈ ವಿವರಗಳನ್ನು ಬಳಸಬಹುದು. |
03:26 | Email id ಫೀಲ್ಡ್ ಕಡ್ಡಾಯವಾಗಿಲ್ಲ ಎಂದು ನೀವು ನೋಡಬಹುದು. |
03:31 | ಆದಾಗ್ಯೂ, ನೀವು ರಚಿಸುವ ಲೈಬ್ರರಿಗಾಗಿ email id ಯನ್ನು ಹೊಂದಿರುವುದು ಬಹಳ ಮುಖ್ಯವಾಗಿದೆ. |
03:38 | ಈ email id ಯಿಂದ, ಸದಸ್ಯರಿಗೆ ನೋಟಿಸ್ ಗಳು ಹೋಗುತ್ತವೆ ಮತ್ತು ಅವರಿಂದ ಬರುತ್ತವೆ. |
03:45 | Gmail id ಯನ್ನು ಮೇಲ್ ಕಳುಹಿಸಲು ಮತ್ತು / ಅಥವಾ ಮೇಲ್ ಪಡೆಯಲು ಸುಲಭವಾಗಿ ಕಾನ್ಫಿಗರ್ ಮಾಡಬಹುದು. ಆದ್ದರಿಂದ ಇದು ಸೂಕ್ತವಾಗಿದೆ. |
03:54 | Email id ಫೀಲ್ಡ್ ನ ಕೆಳಗೆ, Reply-To ಮತ್ತು Return-Path ಫೀಲ್ಡ್ ಗಳಿವೆ. |
04:01 | ಸೂಚನೆಗಳ ಎಲ್ಲಾ ಪ್ರತ್ಯುತ್ತರಗಳಿಗಾಗಿ ನೀವು ಇನ್ನೊಂದು ಡೀಫಾಲ್ಟ್ 'ಇಮೇಲ್ ಅಡ್ರೆಸ್ ' ಅನ್ನು ಸೂಚಿಸಲು ಬಯಸಿದರೆ, ನೀವು ಅದನ್ನು ಇಲ್ಲಿ ಮಾಡಬಹುದು. |
04:11 | ನಾನು Reply-To email id ಅನ್ನು stlibreoffice@gmail.com ಎಂದು ಸೇರಿಸುವೆನು. |
04:20 | ಇದನ್ನು ಖಾಲಿ ಬಿಟ್ಟರೆ, ಆಗ ಎಲ್ಲಾ ಪ್ರತ್ಯುತ್ತರಗಳು (reply) ಮೇಲೆ ಕೊಟ್ಟಿರುವ 'ಇಮೇಲ್ ಐಡಿ' ಗೆ ಹೋಗುತ್ತವೆ. |
04:27 | ಈಗ Return-Path- ಈ ಇಮೇಲ್-ಅಡ್ರೆಸ್ ಗೆ, ಎಲ್ಲಾ ಬೌನ್ಸ್ ಆದ ಮೆಸೇಜ್ ಗಳು ಹೋಗುತ್ತವೆ. |
04:34 | ಇದನ್ನು ಖಾಲಿ ಬಿಟ್ಟರೆ, ಆಗ ಎಲ್ಲಾ ಬೌನ್ಸ್ ಆದ ಮೆಸೇಜ್ ಗಳು ಮೇಲೆ ಕೊಟ್ಟಿರುವ 'ಇಮೇಲ್ ಐಡಿ' ಗೆ ಹೋಗುತ್ತವೆ. |
04:42 | ಆದ್ದರಿಂದ, ಮೂರು ವಿಭಿನ್ನ 'ಇಮೇಲ್ ಐಡಿ' ಗಳನ್ನು- |
04:48 | Email id , |
04:50 | Reply-To ಹಾಗೂ |
04:52 | Return-Path ಗಳಿಗಾಗಿ ಬಳಸಬಹುದು. |
04:55 | ಆದಾಗ್ಯೂ, ಕೇವಲ ಒಂದೇ ಒಂದು 'ಇಮೇಲ್ ಐಡಿ' ಅನ್ನು ಮಾತ್ರ ಒದಗಿಸಿದರೆ, Koha ಅದನ್ನು ಮೂರು ಫೀಲ್ಡ್ ಗಳಿಗೂ ಬಳಸುತ್ತದೆ. |
05:04 | ನಂತರ, ನಾನು ಇಲ್ಲಿ ಮಾಡಿದಂತೆ, ಫೀಲ್ಡ್ ನಲ್ಲಿ ನಿಮ್ಮ ಲೈಬ್ರರಿಯ URL ಅನ್ನು ಉಲ್ಲೇಖಿಸಿ. |
05:10 | URL ಫೀಲ್ಡ್ ಅನ್ನು ತುಂಬಿದ ಮೇಲೆ, OPACನಲ್ಲಿ ಆ ನಿರ್ದಿಷ್ಟ ಲೈಬ್ರರಿಯ ಹೆಸರನ್ನು 'ಹೋಲ್ಡಿಂಗ್ಸ್ ಟೇಬಲ್' ನಲ್ಲಿ ಲಿಂಕ್ ಮಾಡಲಾಗುವುದು. |
05:18 | ಇದರ ನಂತರ, ನಾವು OPAC info ಅನ್ನು ತುಂಬಬೇಕು. |
05:23 | ಇದು, ನಿಮ್ಮ ಲೈಬ್ರರಿಯ ಬಗ್ಗೆ ನೀವು ಮಾಹಿತಿಯನ್ನು ಕೊಡಬೇಕಾದ ಸ್ಥಳವಾಗಿದೆ. |
05:28 | ನಾನು ಇಲ್ಲಿ ನನ್ನ ಲೈಬ್ರರಿಯ ಬಗ್ಗೆ ಸ್ವಲ್ಪ ಮಾಹಿತಿಯನ್ನು ಕೊಟ್ಟಿದ್ದೇನೆ. |
05:33 | holdings table ನಲ್ಲಿ, ಲೈಬ್ರರಿಯ ಹೆಸರಿನ ಮೇಲೆ ನಾವು ಕರ್ಸರ್ ಅನ್ನು ಸರಿಸುವಾಗ ಈ ಮಾಹಿತಿಯು OPAC ನಲ್ಲಿ ಕಾಣಿಸುತ್ತದೆ. |
05:41 | ಈ ಫೀಲ್ಡ್ ನಲ್ಲಿ, ಒಂದು ನಿರ್ದಿಷ್ಟವಾದ ಬ್ರ್ಯಾಂಚ್ ಲೈಬ್ರರಿಗಾಗಿ URL ಅನ್ನು ಹಾಕಿದರೆ, ಆಗ ಪುಸ್ತಕವು ಲಭ್ಯವಿರುವ ಬ್ರ್ಯಾಂಚ್ ಲೈಬ್ರರಿಯನ್ನು OPAC ನಮಗೆ ತಿಳಿಸುತ್ತದೆ. |
05:52 | 'ಹೈಪರ್ ಲಿಂಕ್ ಅಡ್ರೆಸ್' ಮಾಹಿತಿಯನ್ನು ಪಡೆಯಲು, ಮೌಸ್ ಅನ್ನು ಲಿಂಕ್ ನ ಮೇಲೆ ನಡೆದಾಡಿಸಿ. |
05:58 | ಪುಸ್ತಕವನ್ನು ಕೊಡಬಹುದಾದ ನಿರ್ದಿಷ್ಟ branch ಲೈಬ್ರರಿಯ ವಿಳಾಸವನ್ನು ಇದು ಕೊಡುವುದು. |
06:05 | ನಾವು Koha ಇಂಟರ್ಫೇಸ್ ಗೆ ಹಿಂದಿರುಗೋಣ. |
06:09 | ನಂತರ ಇಲ್ಲಿ IP address ಇದೆ. |
06:12 | ನೀವು Koha admin access ಅನ್ನು ಒಂದು ನಿರ್ದಿಷ್ಟ IP address ಗೆ ನಿರ್ಬಂಧಿಸಲು ಬಯಸಿದರೆ, ನೀವು ಆ IP ಯನ್ನು ಇಲ್ಲಿ ಸೂಚಿಸಬಹುದು. |
06:22 | ಇಲ್ಲದಿದ್ದರೆ, ನೀವು ಅದನ್ನು ಖಾಲಿ ಬಿಡಬಹುದು. |
06:25 | ನಾನು ಇದನ್ನು ಖಾಲಿ ಬಿಡುತ್ತೇನೆ. |
06:28 | ಕೊನೆಯದಾಗಿ, ನಾವು Notes ಫೀಲ್ಡ್ ಅನ್ನು ಹೊಂದಿದ್ದೇವೆ. |
06:32 | ನಂತರ ರೆಫರೆನ್ಸ್ ಮಾಡಲು, ಇಲ್ಲಿ ನೀವು ಯಾವುದೇ ಟಿಪ್ಪಣಿಗಳನ್ನು ಭರ್ತಿ ಮಾಡಬಹುದು. |
06:37 | OPAC ನಲ್ಲಿ ಇವುಗಳನ್ನು ಪ್ರದರ್ಶಿಸಲಾಗುವುದಿಲ್ಲ. |
06:40 | ಎಲ್ಲ ವಿವರಗಳನ್ನು ನಮೂದಿಸಿದ ನಂತರ, Submit ಬಟನ್ ಮೇಲೆ ಕ್ಲಿಕ್ ಮಾಡಿ. |
06:46 | ಹೊಸದಾಗಿ ಸೇರಿಸಲಾದ ಲೈಬ್ರರಿಯ ಹೆಸರು Libraries ಪೇಜ್ ನಲ್ಲಿ ಕಾಣಿಸಿಕೊಳ್ಳುತ್ತದೆ. |
06:51 | ಇಲ್ಲಿ, ಇದು Spoken Tutorial Library ಆಗಿದೆ. |
06:55 | ಈಗ, Group Library ಆಯ್ಕೆಯನ್ನು ಯಾವಾಗ ಬಳಸಬೇಕು ಎಂಬುದನ್ನು ನಾವು ನೋಡೋಣ. |
07:00 | ನಿಮಗೆ ಒಂದು ಹೊಸ group ಅನ್ನು ಸೇರಿಸಬೇಕಾಗಿದ್ದರೆ, '+ New Group' ಎಂಬ ಟ್ಯಾಬ್ ನ ಮೇಲೆ ಕ್ಲಿಕ್ ಮಾಡಿ. |
07:07 | ನೀವು ಕೆಲವು ಬ್ರ್ಯಾಂಚ್ ಲೈಬ್ರರಿಗಳನ್ನು ಹೊಂದಿದ್ದೀರಿ ಎಂದುಕೊಳ್ಳಿ. ಉದಾ - ರಸಾಯನಶಾಸ್ತ್ರ ಲೈಬ್ರರಿ, ಭೌತಶಾಸ್ತ್ರ ಲೈಬ್ರರಿ ಮತ್ತು ಜೀವಶಾಸ್ತ್ರ ಲೈಬ್ರರಿ. ಮತ್ತು, ನೀವು ಅವುಗಳನ್ನು ಗ್ರುಪ್ ಮಾಡಬೇಕು ಎಂದು ಬಯಸುತ್ತೀರಿ. |
07:19 | ಇಂತಹ ಸನ್ನಿವೇಶದಲ್ಲಿ, Group Library ಎಂಬ ಆಯ್ಕೆಯನ್ನು ಬಳಸಿ. |
07:24 | ಈ ಗ್ರುಪ್ ಅನ್ನು Science library ಎಂದು ಹೆಸರಿಸಿ. ಇದು ಮೇನ್ ಲೈಬ್ರರಿಯ ಅಡಿಯಲ್ಲಿ ಬರುತ್ತದೆ. |
07:31 | ಹೋಲಿಕೆ ಮತ್ತು / ಅಥವಾ ಅಂತಹುದೇ ಗುಣಲಕ್ಷಣಗಳ ಆಧಾರದ ಮೇಲೆ, ಗ್ರುಪ್ ಗಳನ್ನು ಮಾಡಬಹುದು. |
07:40 | ನಿಮ್ಮ ಈ ಸೆಶನ್ ನಿಂದ Database administrative user ಎಂದು ಲಾಗ್-ಔಟ್ ಮಾಡಿ. |
07:45 | ಹೀಗೆ ಮಾಡಲು, ಮೇಲಿನ ಬಲ ಮೂಲೆಗೆ ಹೋಗಿ ಮತ್ತು No Library Set ಮೇಲೆ ಕ್ಲಿಕ್ ಮಾಡಿ. |
07:52 | ಡ್ರಾಪ್-ಡೌನ್ ನಿಂದ, Log out ಮೇಲೆ ಕ್ಲಿಕ್ ಮಾಡಿ. |
07:57 | ಇದರೊಂದಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ. |
08:01 | ಸಂಕ್ಷಿಪ್ತವಾಗಿ, |
08:03 | ಈ ಟ್ಯುಟೋರಿಯಲ್ ನಲ್ಲಿ ನಾವು, library ಯನ್ನು ಮತ್ತು ಒಂದು ಹೊಸ Group ಅನ್ನು ಕ್ರಿಯೇಟ್ ಮಾಡಲು ಕಲಿತಿದ್ದೇವೆ. |
08:11 | ಒಂದು ಅಸೈನ್ಮೆಂಟ್- ಒಂದು ಹೊಸ ಲೈಬ್ರರಿ ಯನ್ನು ಮತ್ತು ಒಂದು ಹೊಸ group ಅನ್ನು ಕ್ರಿಯೇಟ್ ಮಾಡಿ. |
08:17 | ಈ ಲಿಂಕ್ ನಲ್ಲಿರುವ ವಿಡಿಯೋ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಸಾರಾಂಶವಾಗಿದೆ. ದಯವಿಟ್ಟು ಡೌನ್ಲೋಡ್ ಮಾಡಿ ವೀಕ್ಷಿಸಿ. |
08:25 | ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ತಂಡವು ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ಪ್ರಮಾಣ ಪತ್ರಗಳನ್ನು ಕೊಡುತ್ತದೆ. ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ನಮಗೆ ಬರೆಯಿರಿ. |
08:35 | Forum for specific questions:
ಈ 'ಸ್ಪೋಕನ್ ಟ್ಯುಟೋರಿಯಲ್' ನಲ್ಲಿ ನೀವು ಪ್ರಶ್ನೆಗಳನ್ನು ಹೊಂದಿದ್ದೀರಾ? |
08:42 | ದಯವಿಟ್ಟು ಈ ಸೈಟ್ ಗೆ ಭೇಟಿ ನೀಡಿ. ನೀವು ಪ್ರಶ್ನೆಯನ್ನು ಹೊಂದಿರುವ ನಿಮಿಷ ಮತ್ತು ಸೆಕೆಂಡ್ ಗಳನ್ನು ಆಯ್ಕೆಮಾಡಿ. |
08:49 | ನಿಮ್ಮ ಪ್ರಶ್ನೆಯನ್ನು ಸಂಕ್ಷಿಪ್ತವಾಗಿ ವಿವರಿಸಿ. |
08:51 | ನಮ್ಮ ತಂಡದಿಂದ ಯಾರಾದರೂ ಅವುಗಳಿಗೆ ಉತ್ತರಿಸುತ್ತಾರೆ. |
08:55 | Forum for specific questions: |
08:58 | 'ಸ್ಪೋಕನ್ ಟ್ಯುಟೋರಿಯಲ್ ಫೋರಮ್', ಈ ಟ್ಯುಟೋರಿಯಲ್ ಕುರಿತು ನಿರ್ದಿಷ್ಟ ಪ್ರಶ್ನೆಗಳಿಗಾಗಿ ಇರುತ್ತದೆ. |
09:03 | ದಯವಿಟ್ಟು ಸಂಬಂಧವಿಲ್ಲದ ಮತ್ತು ಸಾಮಾನ್ಯ ಪ್ರಶ್ನೆಗಳನ್ನು ಅಲ್ಲಿ ಪೋಸ್ಟ್ ಮಾಡಬೇಡಿ. |
09:08 | ಇದು ಗೊಂದಲವನ್ನು ಕಡಿಮೆ ಮಾಡಲು ಸಹಾಯಮಾಡುತ್ತದೆ. |
09:11 | ಕಡಿಮೆ ಗೊಂದಲವಿದ್ದಾಗ, ನಾವು ಈ ಚರ್ಚೆಗಳನ್ನು ವಿವರಣೆಗಾಗಿ ಬಳಸಬಹುದು. |
09:17 | ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್, NMEICT, MHRD, ಭಾರತ ಸರ್ಕಾರದಿಂದ ಧನಸಹಾಯವನ್ನು ಪಡೆದಿದೆ. |
09:23 | ಈ ಮಿಶನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಲಿಂಕ್ ನಲ್ಲಿ ಲಭ್ಯವಿದೆ. |
09:28 | ಈ ಸ್ಕ್ರಿಪ್ಟ್ ನ ಅನುವಾದಕಿ IIT Bombay ಯಿಂದ ಸಂಧ್ಯಾ ಪುಣೇಕರ್ ಮತ್ತು ಧ್ವನಿ ಶ್ರೀ ನವೀನ್ ಭಟ್ಟ, ಉಪ್ಪಿನಪಟ್ಟಣ.
ಧನ್ಯವಾದಗಳು. |