Koha-Library-Management-System/C2/Create-a-SuperLibrarian/Kannada

From Script | Spoken-Tutorial
Jump to: navigation, search
Time
Narration
00:01 How to create a Superlibrarian ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:06 ಈ ಟ್ಯುಟೋರಿಯಲ್ ನಲ್ಲಿ, ನಾವು: Patron category ಯನ್ನು ಸೇರಿಸಲು,
00:11 Patron ಅನ್ನು ಕ್ರಿಯೇಟ್ ಮಾಡಲು,
00:14 Superlibrarian ಅನ್ನು ಕ್ರಿಯೇಟ್ ಮಾಡಲು ಮತ್ತು
00:17 ಒಂದು ನಿರ್ದಿಷ್ಟ ಮೊಡ್ಯೂಲ್ ಗಾಗಿ, ಸ್ಟಾಫ್ ಗೆ ಆಕ್ಸೆಸ್ ಅನ್ನು ಕೊಡಲು ಕಲಿಯುವೆವು.
00:22 ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು:

Ubuntu Linux OS 16.04 ಮತ್ತು Koha ಆವೃತ್ತಿ 16.05 ಇವುಗಳನ್ನು ಬಳಸುತ್ತಿದ್ದೇನೆ.

00:35 ಈ ಟ್ಯುಟೋರಿಯಲ್ ಅನ್ನು ಅನುಸರಿಸಲು, ನೀವು ಲೈಬ್ರರಿ ಸೈನ್ಸ್ ಅನ್ನು ತಿಳಿದಿರಬೇಕು.
00:42 ಈ ಟ್ಯುಟೋರಿಯಲ್ ಅನ್ನು ಅಭ್ಯಾಸ ಮಾಡಲು, ನೀವು Koha ಅನ್ನು ನಿಮ್ಮ ಸಿಸ್ಟಂ ನಲ್ಲಿ ಇನ್ಸ್ಟಾಲ್ ಮಾಡಿರಬೇಕು.
00:48 ಮತ್ತು, Koha ದಲ್ಲಿ ನೀವು Admin ಆಕ್ಸೆಸ್ ಅನ್ನು (access) ಸಹ ಹೊಂದಿರಬೇಕು.
00:53 ಹೆಚ್ಚಿನ ವಿವರಗಳಿಗಾಗಿ, ದಯವಿಟ್ಟು ಈ ವೆಬ್ಸೈಟ್ ನಲ್ಲಿ Koha spoken tutorial ಸರಣಿಯನ್ನು ನೋಡಿ.
01:00 Patron category ಯನ್ನು ಸೇರಿಸುವುದು ಹೇಗೆ ಎಂದು ಕಲಿಯುವುದರ ಮೂಲಕ ನಾವು ಆರಂಭಿಸೋಣ.
01:05 ನಿಮ್ಮ database administrator username ಮತ್ತು password ಗಳನ್ನು ಬಳಸಿ Koha ದಲ್ಲಿ ಲಾಗ್-ಇನ್ ಮಾಡಿ.
01:13 Koha Administration ಮೇಲೆ ಕ್ಲಿಕ್ ಮಾಡಿ.
01:18 Patrons and circulation ನ ಅಡಿಯಲ್ಲಿ, Patron categories ಮೇಲೆ ಕ್ಲಿಕ್ ಮಾಡಿ.
01:24 Patron categories ಎಂಬ ಒಂದು ಹೊಸ ಪೇಜ್ ತೆರೆದುಕೊಳ್ಳುತ್ತದೆ.
01:28 New Category ಮೇಲೆ ಕ್ಲಿಕ್ ಮಾಡಿ.
01:31 New category ಎಂಬ ಒಂದು ಹೊಸ ಪೇಜ್ ತೆರೆದುಕೊಳ್ಳುತ್ತದೆ. ಕೆಲವು ವಿವರಗಳನ್ನು ತುಂಬಲು ಇದು ನಮಗೆ ಸೂಚಿಸುತ್ತದೆ.
01:38 ಮೊದಲೇ ಹೇಳಿದಂತೆ, ಕೆಂಪು ಬಣ್ಣದಲ್ಲಿ ಗುರುತಿಸಲಾದ ಫೀಲ್ಡ್ ಗಳು ಕಡ್ಡಾಯವಾಗಿವೆ ಎಂದು ಗಮನಿಸಿ.
01:45 ನಾನು ಇಲ್ಲಿ ಕೆಲವು ವಿವರಗಳನ್ನು ತುಂಬಿದ್ದೇನೆ. ದಯವಿಟ್ಟು ಇದೇ ರೀತಿ ಮಾಡಿ.
01:51 Category type: ಗಾಗಿ, ಡ್ರಾಪ್-ಡೌನ್ ಲಿಸ್ಟ್ ನಿಂದ Staff ಅನ್ನು ಆಯ್ಕೆಮಾಡಿ.
01:57 Branches limitation: ಗಾಗಿ, All Branches ಅನ್ನು ಆಯ್ಕೆಮಾಡಿ.
02:02 ಆಮೇಲೆ, ಪೇಜ್ ನ ಕೆಳಗೆ ಇರುವ Save ಮೇಲೆ ಕ್ಲಿಕ್ ಮಾಡಿ.
02:07 ನಾವು ನಮೂದಿಸಿದ category ಹೆಸರು, Patron categories ಪೇಜ್ ನ ಮೇಲೆ ಕಾಣಿಸಿಕೊಳ್ಳುತ್ತದೆ.
02:14 ಇಲ್ಲಿ ಅದು Library Staff ಎಂದು ಹೇಳುತ್ತದೆ.
02:19 ಇದರೊಂದಿಗೆ, ಒಂದು Patron Category ಯನ್ನು ರಚಿಸಲಾಗಿದೆ.
02:23 ನಂತರ, Patron ಅನ್ನು ಹೇಗೆ ಸೇರಿಸಬೇಕೆಂದು ನಾವು ಕಲಿಯುವೆವು
02:28 ಮೇಲ್ತುದಿಯ ಎಡಮೂಲೆಯಲ್ಲಿ Home ಮೇಲೆ ಕ್ಲಿಕ್ ಮಾಡಿ.
02:32 Create a Patron ಎಂದು ನಮಗೆ ಸೂಚಿಸುವ ಒಂದು ಡೈಲಾಗ್-ಬಾಕ್ಸ್ ನೊಂದಿಗೆ, Koha home ಪೇಜ್ ತೆರೆದುಕೊಳ್ಳುತ್ತದೆ.
02: 39 Patron ಅನ್ನು ಕ್ರಿಯೇಟ್ ಮಾಡುವುದು ಕಡ್ಡಾಯವಾಗಿದೆ. ಇಲ್ಲದಿದ್ದರೆ, database administrator ಎಂದು ಇದ್ದಾಗ, Koha ದ ಕೆಲವು ಭಾಗಗಳು ಕೆಲಸ ಮಾಡುವುದಿಲ್ಲ.
02:50 ಡೈಲಾಗ್-ಬಾಕ್ಸ್ ನಲ್ಲಿ ಸೂಚಿಸಿದಂತೆ, Create Patron ಮೇಲೆ ಕ್ಲಿಕ್ ಮಾಡಿ.
02:56 ಪರ್ಯಾಯವಾಗಿ, Koha home page ನಲ್ಲಿ, ನೀವು Patrons ಮೇಲೆ ಕ್ಲಿಕ್ ಮಾಡಬಹುದು.
03:02 ನಾನು Create Patron ಮೇಲೆ ಕ್ಲಿಕ್ ಮಾಡುತ್ತೇನೆ.
03:06 ಒಂದು ಹೊಸ ಪೇಜ್ ತೆರೆದುಕೊಳ್ಳುತ್ತದೆ. New Patron ಎಂಬ ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
03:12 ಡ್ರಾಪ್-ಡೌನ್ ನಿಂದ, ನಾನು Library Staff ಅನ್ನು ಆಯ್ಕೆಮಾಡುತ್ತೇನೆ.
03:17 ಒಂದು ಹೊಸ ಪೇಜ್ - Add patron (Library Staff), ತೆರೆದುಕೊಳ್ಳುತ್ತದೆ.
03:22 ಈಗ, ವಿವಿಧ ವಿಭಾಗಗಳ ಅಡಿಯಲ್ಲಿ ಅಗತ್ಯವಿರುವ ಈ ವಿವರಗಳನ್ನು ಭರ್ತಿ ಮಾಡಿ:

Patron identity,

Main address,

Contact ಇತ್ಯಾದಿ.

03:34 ಇಲ್ಲಿ ತೋರಿಸಿರುವಂತೆ, ನಾನು ಕೆಲವು ವಿವರಗಳನ್ನು ತುಂಬಿದ್ದೇನೆ.
03:39 ಇಲ್ಲಿ ಪಟ್ಟಿ ಮಾಡಿದ ಯಾವುದೇ 'ಫೀಲ್ಡ್' ಗಾಗಿ, ನಿಮ್ಮ ಹತ್ತಿರ ಮಾಹಿತಿ ಇಲ್ಲದಿದ್ದರೆ, ಆಗ ಅದನ್ನು ಹಾಗೇ ಖಾಲಿ ಬಿಡಿ.
03:47 ವೀಡಿಯೊವನ್ನು ನಿಲ್ಲಿಸಿ ಮತ್ತು ಎಲ್ಲಾ ವಿವರಗಳನ್ನು ಭರ್ತಿ ಮಾಡಿ. ನಂತರ ವೀಡಿಯೊವನ್ನು ಮತ್ತೆ ಆರಂಭಿಸಿ.
03:53 Library management ವಿಭಾಗದ ಅಡಿಯಲ್ಲಿ, Card Number ಎಂಬ ಫೀಲ್ಡ್ ಅನ್ನು ಗುರುತಿಸಿ.
04:01 ಗಮನಿಸಿ, ಸಂಖ್ಯೆ 1, Koha ದಿಂದ ತಂತಾನೇ ರಚಿತವಾಗಿದೆ (auto-generated).
04:07 ಆದ್ದರಿಂದ, ನಿಮ್ಮ ಕೋಹಾ ಇಂಟರ್ಫೇಸ್ ನಲ್ಲಿ ನೀವು ಬೇರೆ ಸಂಖ್ಯೆಯನ್ನು ನೋಡುವಿರಿ.
04:13 ನಂತರ Library ಇದೆ.
04:16 ಡ್ರಾಪ್-ಡೌನ್ ನಿಂದ, ನಾನು Spoken Tutorial Library ಯನ್ನು ಆಯ್ಕೆಮಾಡುವೆನು.
04:21 ನೆನಪಿಸಿಕೊಳ್ಳಿ: Spoken Tutorial Library ಯನ್ನು ಈ ಸರಣಿಯಲ್ಲಿ ಮೊದಲು ರಚಿಸಲಾಗಿತ್ತು.
04:28 ನೀವು ಬೇರೆ ಹೆಸರನ್ನು ಕೊಟ್ಟಿದ್ದರೆ, ಇಲ್ಲಿ ಆ ಹೆಸರನ್ನು ಆಯ್ಕೆಮಾಡಿ.
04:34 Category ಗಾಗಿ, ಡ್ರಾಪ್-ಡೌನ್ ನಿಂದ ನಾನು Library Staff ಅನ್ನು ಆಯ್ಕೆಮಾಡುವೆನು.
04:40 OPAC/Staff login ವಿಭಾಗದ ಅಡಿಯಲ್ಲಿ, Username ಹಾಗೂ Password ಗಳನ್ನು ಕೊಡಿ.
04:47 ಪ್ರತಿಯೊಬ್ಬ ಹೊಸ ಯೂಸರ್ ನು, ಹೊಸ Username ಹಾಗೂ Password ಗಳನ್ನು ಕ್ರಿಯೇಟ್ ಮಾಡಬೇಕು.
04:53 ನಾನು Username ಅನ್ನು Bella ಎಂದು,
04:57 Password ಅನ್ನು library ಎಂದು ಕೊಡುವೆನು.
05:00 Confirm password: ಫೀಲ್ಡ್ ನಲ್ಲಿ, ಮತ್ತೊಮ್ಮೆ ಇದೇ ಪಾಸ್ವರ್ಡ್ ಅನ್ನು ಕೊಡಿ.
05:06 username ಹಾಗೂ ಪಾಸ್ವರ್ಡ್ ಅನ್ನು ನೆನಪಿಟ್ಟುಕೊಳ್ಳಿ.
05:10 Staff ಗೆ ರೈಟ್ಸ್/ಪರ್ಮಿಶನ್ಸ್ ಕೊಡಲು, ನಂತರ ಇದನ್ನು ಬಳಸಲಾಗುತ್ತದೆ.
05:17 ಎಲ್ಲಾ ವಿವರಗಳನ್ನು ತುಂಬಿದ ನಂತರ, ಪೇಜ್ ನ ಮೇಲ್ತುದಿಗೆ ಹೋಗಿ ಮತ್ತು Save ಮೇಲೆ ಕ್ಲಿಕ್ ಮಾಡಿ.
05:25 Patron ನ ಹೆಸರು ಮತ್ತು card number ನೊಂದಿಗೆ, ಒಂದು ಹೊಸ ಪೇಜ್ ತೆರೆದುಕೊಳ್ಳುತ್ತದೆ.
05:31 ಈ ಸಂದರ್ಭದಲ್ಲಿ, ಮೊದಲೇ ನಮೂದಿಸಿದಂತೆ, ಪೇಜ್ card number 1 ಜೊತೆಗೆ, Patron ಅನ್ನು Ms Bella Tony ಎಂದು ಹೊಂದಿದೆ.
05:41 ವಿಭಾಗಗಳನ್ನು ಎಡಿಟ್ ಮಾಡಲು, ಆಯಾ ವಿಭಾಗಗಳ ಕೆಳಭಾಗದಲ್ಲಿರುವ Edit ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
05:49 ಈಗ ನಾವು Patrons ಗೆ, ಪರ್ಮಿಶನ್ ಗಳನ್ನು ಹೇಗೆ ಕೊಡಬೇಕೆಂದು ಕಲಿಯೋಣ.
05:55 ಅದೇ ಪೇಜ್ ನಲ್ಲಿ, More ಎಂಬ ಟ್ಯಾಬ್ ಅನ್ನು ಗುರುತಿಸಿ ಮತ್ತು Set Permissions ಮೇಲೆ ಕ್ಲಿಕ್ ಮಾಡಿ.
06:03 Set permissions for Bella Tony, ಎಂಬ ಶೀರ್ಷಿಕೆಯೊಂದಿಗೆ ಒಂದು ಹೊಸ ಪೇಜ್ ತೆರೆದುಕೊಳ್ಳುತ್ತದೆ.
06:09 (superlibrarian) Access to all librarian functions ಗಾಗಿ ಚೆಕ್-ಬಾಕ್ಸ್ ಅನ್ನು ಕ್ಲಿಕ್ ಮಾಡಿ.
06:16 ನಂತರ, ಪೇಜ್ ನ ಕೆಳಗೆ ಇರುವ Save ಮೇಲೆ ಕ್ಲಿಕ್ ಮಾಡಿ.
06:21 ಈಗ, ಎಲ್ಲಾ ಲೈಬ್ರರಿ ಫಂಕ್ಷನ್ ಗಳಿಗೆ ಆಕ್ಸೆಸ್ ಅನ್ನು ಹೊಂದಿರುವ, Superlibrarian Ms Bella Tony ಯನ್ನು ಕ್ರಿಯೇಟ್ ಮಾಡಲಾಗಿದೆ.
06:30 superlibrarian ಅಕೌಂಟ್ ನೊಂದಿಗೆ, ನಾವು ಒಬ್ಬ ಸ್ಟಾಫ್ ಗೆ ರೈಟ್ಸ್ ಅಥವಾ ಪರ್ಮಿಶನ್ಸ್ ಅನ್ನು ಕೊಡಬಹುದು.
06:37 ಆದ್ದರಿಂದ, Koha Library Management System ನಲ್ಲಿ ಇದು ಒಂದು ಪ್ರಮುಖ ಪಾತ್ರವಾಗಿದೆ.
06:43 ಒಂದು ನಿರ್ದಿಷ್ಟ 'ಮೊಡ್ಯೂಲ್' ಗಾಗಿ, 'ಸ್ಟಾಫ್' ಗೆ ಆಕ್ಸೆಸ್ ಅನ್ನು ಹೇಗೆ ಕೊಡಬೇಕು ಎಂದು ಈಗ ನಾವು ಕಲಿಯೋಣ.
06:50 ನಿಮ್ಮ ಈಗಿನ Database administrative user ಎಂಬ ಸೆಶನ್ ನಿಂದ ಲಾಗ್ ಔಟ್ ಮಾಡಿ.
06:56 ಇದನ್ನು ಮಾಡಲು, ಮೇಲಿನ ಬಲಮೂಲೆಗೆ ಹೋಗಿ ಮತ್ತು No Library Set ಮೇಲೆ ಕ್ಲಿಕ್ ಮಾಡಿ.
07:03 ಡ್ರಾಪ್-ಡೌನ್ ನಿಂದ, Log out ಮೇಲೆ ಕ್ಲಿಕ್ ಮಾಡಿ.
07:08 ಈಗ, Superlibrarian ಅಕೌಂಟ್ ನಿಂದ ಲಾಗ್-ಇನ್ ಮಾಡಿ.
07:13 Superlibrarian , ಬೇರೆ ಯಾವುದೇ 'ಮೊಡ್ಯೂಲ್'ಅನ್ನು ಆಕ್ಸೆಸ್ ಮಾಡಲು, ಇನ್ನೊಬ್ಬ 'ಸ್ಟಾಫ್' ಗೆ ರೈಟ್ಸ್ ಅಥವಾ ಪರ್ಮಿಶನ್ಸ್ ಅನ್ನು ಕೊಡಬಹುದು.
07:22 ಉದಾಹರಣೆಗೆ - Cataloging module, Circulation module,
07:27 Serial Control', Acquisition ಇತ್ಯಾದಿ.
07:32 ಮೊದಲು ವಿವರಿಸಿದಂತೆ, ಒಂದು Patron ಅನ್ನು ಕ್ರಿಯೇಟ್ ಮಾಡಿ.
07:36 New Patron ಎಂಬ ಟ್ಯಾಬ್ ಮೇಲೆ ಕ್ಲಿಕ್ ಮಾಡಿ. ಡ್ರಾಪ್-ಡೌನ್ ನಿಂದ Library Staff ಅನ್ನು ಆಯ್ಕೆಮಾಡಿ.
07:43 Salutation ಅನ್ನು Ms. ಎಂದು ಆಯ್ಕೆಮಾಡಿ. Surname ಅನ್ನು Samruddhi ಎಂದು ಕೊಡಿ.
07:51 Category ಗಾಗಿ, ಡ್ರಾಪ್-ಡೌನ್ ನಿಂದ Library Staff ಅನ್ನು ಆಯ್ಕೆಮಾಡಿ.
07:57 ಬೇರೆ ಯಾವುದೇ ಆಯ್ಕೆಯನ್ನು ಆರಿಸಿಕೊಳ್ಳಬೇಡಿ.
08:01 OPAC/Staff login ವಿಭಾಗದ ಅಡಿಯಲ್ಲಿ, Username ಅನ್ನು Samruddhi ಮತ್ತು Password ಅನ್ನು patron ಎಂದು ಕೊಡಿ.
08:13 Confirm password: ಫೀಲ್ಡ್ ನಲ್ಲಿ, ಮತ್ತೊಮ್ಮೆ ಇದೇ ಪಾಸ್ವರ್ಡ್ ಅನ್ನು ಕೊಡಿ.
08:19 username ಹಾಗೂ ಪಾಸ್ವರ್ಡ್ ಅನ್ನು ನೆನಪಿಟ್ಟುಕೊಳ್ಳಿ. ಏಕೆಂದರೆ, ಮುಂದೆ staff ಎಂದು ಲಾಗ್-ಇನ್ ಮಾಡಲು ಇವುಗಳನ್ನು ಬಳಸಲಾಗುವುದು.
08:27 ಎಲ್ಲಾ ವಿವರಗಳನ್ನು ತುಂಬಿದ ನಂತರ, ಪೇಜ್ ನ ಮೇಲ್ತುದಿಯಲ್ಲಿರುವ Save ಮೇಲೆ ಕ್ಲಿಕ್ ಮಾಡಿ.
08:34 ಈಗ, ಈ ನಿರ್ದಿಷ್ಟ Patron ಗೆ ಪರ್ಮಿಶನ್ಸ್ ಕೊಡಿ.
08:39 More ಎಂಬ ಟ್ಯಾಬ್ ಗೆ ಹೋಗಿ. ಮತ್ತು Set Permissions ಮೇಲೆ ಕ್ಲಿಕ್ ಮಾಡಿ.
08:45 Set permissions for Samruddhi ಎಂಬ ಶೀರ್ಷಿಕೆಯೊಂದಿಗೆ ಒಂದು ಹೊಸ ಪೇಜ್ ತೆರೆದುಕೊಳ್ಳುತ್ತದೆ.
08:52 ಇದು ನಾವು ಕ್ರಿಯೇಟ್ ಮಾಡಿದ Patron ನ ಹೆಸರು ಆಗಿದೆ.
08:57 (circulate) Check out and check in items ಗಾಗಿ, ಚೆಕ್-ಬಾಕ್ಸ್ ನ ಮೇಲೆ ಕ್ಲಿಕ್ ಮಾಡಿ.
09:04 ಆಮೇಲೆ, (catalogue) Required for staff login ಗಾಗಿ, ಚೆಕ್-ಬಾಕ್ಸ್ ನ ಮೇಲೆ ಕ್ಲಿಕ್ ಮಾಡಿ.
09:12 ಅಲ್ಲದೇ, (borrowers) Add, modify and view patron information ಮೇಲೆ ಕ್ಲಿಕ್ ಮಾಡಿ.
09:19 ನಂತರ, ಇಲ್ಲಿ ಅಧಿಕ ಚಿಹ್ನೆಯ ಮೇಲೆ ಕ್ಲಿಕ್ ಮಾಡಿ.
09:24 reserveforothers Place and modify holds for patrons ಮೇಲೆ ಕ್ಲಿಕ್ ಮಾಡಿ.
09:31 ನಂತರ, Edit catalog ಎಂಬ ಟ್ಯಾಬ್ ಗೆ ಬನ್ನಿ.
09:35 ಅಧಿಕ ಚಿಹ್ನೆಯ ಮೇಲೆ ಕ್ಲಿಕ್ ಮಾಡಿ. ಮತ್ತು, (editcatalogue) Edit catalog (Modify bibliographic/holdings data) ಮೇಲೆ ಕ್ಲಿಕ್ ಮಾಡಿ.
09:46 ನಂತರ, Acquisition ಎಂಬ ಟ್ಯಾಬ್ ಗೆ ಬನ್ನಿ. ಅಧಿಕ ಚಿಹ್ನೆಯ ಮೇಲೆ ಕ್ಲಿಕ್ ಮಾಡಿ. ಮತ್ತು, (acquisition) Acquisition and/or suggestion management ಮೇಲೆ ಕ್ಲಿಕ್ ಮಾಡಿ.
09:59 ಆಮೇಲೆ, tools ಟ್ಯಾಬ್ ಗಾಗಿ, ಇಲ್ಲಿರುವ ಅಧಿಕ ಚಿಹ್ನೆಯ ಮೇಲೆ ಕ್ಲಿಕ್ ಮಾಡಿ.
10:05 ಮತ್ತು, (batch_upload_patron_images) Upload patron images in a batch or one at a time ಮೇಲೆ ಕ್ಲಿಕ್ ಮಾಡಿ.
10:16 ನಂತರ, (edit_patrons) Perform batch modification of patrons ಮೇಲೆ ಕ್ಲಿಕ್ ಮಾಡಿ.
10:24 ಅಲ್ಲದೇ, (import_patrons) Import patron data ಅನ್ನು ಆಯ್ಕೆಮಾಡಿ.
10:30 ಆಮೇಲೆ, Edit authorities ಮೇಲೆ ಸಹ ಕ್ಲಿಕ್ ಮಾಡಿ.
10:36 ನಂತರ, (reports), Allow access to the reports module ಎಂಬ ಟ್ಯಾಬ್ ಗೆ ಬನ್ನಿ.
10:43 ಅಧಿಕ ಚಿಹ್ನೆಯ ಮೇಲೆ ಕ್ಲಿಕ್ ಮಾಡಿ ಮತ್ತು (execute _reports) Execute SQL reports ಅನ್ನು ಆಯ್ಕೆಮಾಡಿ.
10:52 ನಂತರ, ಪೇಜ್ ನ ಕೆಳಗೆ ಇರುವ Save ಮೇಲೆ ಕ್ಲಿಕ್ ಮಾಡಿ.
10:57 ಇದರೊಂದಿಗೆ, ನಾವು Ms. Samruddhi ಎಂಬ ಹೆಸರಿನ 'ಲೈಬ್ರರಿ ಸ್ಟಾಫ್' ಗೆ, ಅಗತ್ಯವಿರುವ ಎಲ್ಲಾ ರೈಟ್ಸ್ ಅನ್ನು (ಹಕ್ಕುಗಳನ್ನು) ಕೊಟ್ಟಿದ್ದೇವೆ.
11:06 ಈಗ, superlibrarian ಅಕೌಂಟ್ ನಿಂದ ಲಾಗ್-ಔಟ್ ಮಾಡಿ.
11:11 ಹೀಗೆ ಮಾಡಲು, ಮೇಲಿನ ಬಲಮೂಲೆಗೆ ಹೋಗಿ. spoken tutorial library ಮೇಲೆ ಕ್ಲಿಕ್ ಮಾಡಿ. ಡ್ರಾಪ್-ಡೌನ್ ನಿಂದ Log out ಮೇಲೆ ಕ್ಲಿಕ್ ಮಾಡಿ.
11:23 ಇದರೊಂದಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ.
11:27 ಸಂಕ್ಷಿಪ್ತವಾಗಿ, ಈ ಟ್ಯುಟೋರಿಯಲ್ ನಲ್ಲಿ ನಾವು:
11:33 Patron category ಯನ್ನು ಸೇರಿಸಲು,

Patron ಅನ್ನು ಕ್ರಿಯೇಟ್ ಮಾಡಲು,

11:39 Superlibrarian ಅನ್ನು ಕ್ರಿಯೇಟ್ ಮಾಡಲು ಮತ್ತು

ಒಂದು ನಿರ್ದಿಷ್ಟ ಮೊಡ್ಯೂಲ್ ಗಾಗಿ, ಸ್ಟಾಫ್ ಗೆ ಆಕ್ಸೆಸ್ ಅನ್ನು ಕೊಡಲು ಕಲಿತಿದ್ದೇವೆ.

11:47 ಅಸೈನ್ಮೆಂಟ್ ಗಾಗಿ - ಒಂದು ಹೊಸ Patron Category- 'Research Scholar’ ಅನ್ನು ಸೇರಿಸಿ.
11:54 Superlibrarian ಗಾಗಿ ಅಸೈನ್ಮೆಂಟ್: ಈ ಕೆಳಗಿನ ರೋಲ್ ಗಳಿಗಾಗಿ ಒಂದು ಹೊಸ Staff ಅನ್ನು ಸೇರಿಸಿ -
12:01 ಎಲ್ಲಾ Cataloging rights ಕೊಡಿ,

ಮತ್ತು ಎಲ್ಲಾ Acquisition rights ಸೇರಿಸಿ.

12:09 ಈ ಲಿಂಕ್ ನಲ್ಲಿರುವ ವಿಡಿಯೋ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಸಾರಾಂಶವಾಗಿದೆ. ದಯವಿಟ್ಟು ಡೌನ್ಲೋಡ್ ಮಾಡಿ ವೀಕ್ಷಿಸಿ.
12:17 ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ತಂಡವು ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ಪ್ರಮಾಣ ಪತ್ರಗಳನ್ನು ಕೊಡುತ್ತದೆ. ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ನಮಗೆ ಬರೆಯಿರಿ.
12:28 ದಯವಿಟ್ಟು ನಿಮ್ಮ ಪ್ರಶ್ನೆಗಳನ್ನು ನಿಮಿಷ ಮತ್ತು ಸೆಕೆಂಡುಗಳೊಂದಿಗೆ ಈ ಫೋರಂನಲ್ಲಿ ಪೋಸ್ಟ್ ಮಾಡಿ.
12:32 ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್, NMEICT, MHRD, ಭಾರತ ಸರ್ಕಾರದಿಂದ ಧನಸಹಾಯವನ್ನು ಪಡೆದಿದೆ. ಈ ಮಿಶನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಲಿಂಕ್ ನಲ್ಲಿ ಲಭ್ಯವಿದೆ.
12:45 ಈ ಸ್ಕ್ರಿಪ್ಟ್ ನ ಅನುವಾದಕಿ IIT Bombay ಯಿಂದ ಸಂಧ್ಯಾ ಪುಣೇಕರ್ ಮತ್ತು ಧ್ವನಿ ಶ್ರೀ ನವೀನ್ ಭಟ್ಟ, ಉಪ್ಪಿನಪಟ್ಟಣ.

ಧನ್ಯವಾದಗಳು.

Contributors and Content Editors

Sandhya.np14