KTurtle/C3/Question-Glues/Kannada
From Script | Spoken-Tutorial
Time | Narration |
00:01 | ನಮಸ್ಕಾರ. KTurtle ನ Question Glues ಎಂಬ ಈ ಟ್ಯುಟೋರಿಯಲ್-ಗೆ ನಿಮಗೆ ಸ್ವಾಗತ.. |
00:08 | ಈ ಟ್ಯುಟೋರಿಯಲ್-ನಲ್ಲಿ ನಾವು, and, not ಎಂಬ ಕ್ವೆಶ್ಚನ್ ಗ್ಲೂಸ್-ಗಳನ್ನು ಕಲಿಯಲಿದ್ದೇವೆ. |
00:16 | ಈ ಟ್ಯುಟೋರಿಯಲ್-ಅನ್ನು ತಯಾರಿಸಲು ನಾನು ಉಬಂಟು ಲಿನಕ್ಸ್ OS ನ 12.04 ನೇ ಆವೃತ್ತಿಯನ್ನು ಮತ್ತು KTurtle 0.8.1 ಬೀಟಾ ಎಂಬ ಆವೃತ್ತಿಯನ್ನು ಉಪಯೋಗಿಸುತ್ತಿದ್ದೇನೆ. |
00:29 | ನಿಮಗೆ Kturtle ನ ಪ್ರಾಥಮಿಕ ಮಾಹಿತಿ ಮತ್ತು Kturtleನ “if-else” ಸ್ಟೇಟ್-ಮೆಂಟ್-ನ ಮಾಹಿತಿ ಇದೆಯೆಂದು ನಾವು ಅಂದುಕೊಂಡಿದ್ದೇವೆ. |
00:39 | ಅದಿಲ್ಲವಾದರೆ, ಅದಕ್ಕೆ ಸಂಬಂಧಿಸಿದ ಟುಟೋರಿಯಲ್-ಗಳಿಗಾಗಿ ದಯವಿಟ್ಟು ನಮ್ಮ ಜಾಲಪುಟ http://spoken-tutorial.org ನೋಡಿ. |
00:46 | ಆರಂಭಿಸುವುದಕ್ಕಿಂತ ಮೊದಲು ಕ್ವೆಶ್ಚನ್ ಗ್ಲೂಸ್-ಗಳ ಬಗೆಗೆ ವಿವರಿಸುತ್ತೇನೆ. |
00:51 | ಕ್ವೆಶ್ಚನ್ ಗ್ಲೂಸ್ ಪದಗಳು, ನಮಗೆ ಚಿಕ್ಕ ಪ್ರಶ್ನೆಗಳನ್ನು ಒಂದು ದೊಡ್ಡ ಪ್ರಶ್ನೆಗೆ ಗ್ಲೂ ಮಾಡಲು ಸಮರ್ಥವಾಗಿವೆ. |
01:00 | “and”, “or” ಮತ್ತು “not” ಇವುಗಳು ಕೆಲವು ಗ್ಲೂ ಪದಗಳು. ಗ್ಲೂ ಪದಗಳು if-else ನಿಬಂಧನೆಗಳೊಂದಿಗೆ ಒಟ್ಟಿಗೆ ಬಳಸಲ್ಪಡುತ್ತವೆ. |
01:11 | ಒಂದು ಹೊಸ KTurtleನ ಅಪ್ಲಿಕೇಷನ್ ತೆರೆಯೋಣ. |
01:15 | Dash homeನ ಮೇಲೆ ಕ್ಲಿಕ್ ಮಾಡಿ. |
01:18 | ಸರ್ಚ್ ಬಾರ್-ನಲ್ಲಿ KTurtle ಎಂದು ಟೈಪ್ ಮಾಡೋಣ. |
01:22 | ಮತ್ತು Option ಮೇಲೆ ಕ್ಲಿಕ್ ಮಾಡಿ. |
01:24 | and ಎನ್ನುವ ಗ್ಲೂ ಪದದಿಂದ ಈ ಟ್ಯುಟೋರಿಯಲ್ ಅನ್ನು ಆರಂಭಿಸೋಣ. |
01:28 | ಈಗಾಗಲೇ ನನ್ನ ಹತ್ತಿರ text editor ನಲ್ಲಿ ಒಂದು ಪ್ರೋಗ್ರಾಮ್ ಇದೆ. |
01:33 | ನಾನು text editorನಿಂದ ಕೋಡ್ ಅನ್ನು ಕಾಪಿ ಮಾಡಿ KTurtle editor ನಲ್ಲಿ paste ಮಾಡುತ್ತೇನೆ. |
01:40 | ದಯವಿಟ್ಟು ಇಲ್ಲಿ ಟ್ಯುಟೋರಿಯಲ್ ಅನ್ನು ನಿಲ್ಲಿಸಿ, ಮತ್ತು ಪ್ರೋಗ್ರಾಮ್ ಅನ್ನು ನಿಮ್ಮ KTurtle editor ನಲ್ಲಿ ಟೈಪ್ ಮಾಡಿ. |
01:46 | ಪ್ರೋಗ್ರಾಂ ಟೈಪ್ ಆದ ನಂತರ ಟ್ಯುಟೋರಿಯಲ್ ಅನ್ನು ಮತ್ತೆ ಆರಂಭಿಸಿ. |
01:50 | ನಾನು ಪ್ರೋಗ್ರಾಮ್ ಟೆಕ್ಸ್ಟ್ ಸ್ವಲ್ಪ ಅಸ್ಪಷ್ಟವಾಗಿರುವ ಕಾರಣ ಅದನ್ನು ಝೂಮ್ ಮಾಡುತ್ತೇನೆ. |
01:56 | ಕೋಡ್ ಅನ್ನು ನೋಡೋಣ. |
01:59 | reset ಕಮಾಂಡ್ ಟರ್ಟಲ್ ಅನ್ನು ಡೀಫಾಲ್ಟ್ ಸ್ಥಿತಿಯಲ್ಲಿ ಸೆಟ್ ಮಾಡುತ್ತದೆ. |
02:04 | ಪ್ರೋಗ್ರಾಂನಲ್ಲಿ message" ಎಂಬ ಕೀವರ್ಡ್ ನ ನಂತರದ ಎರಡು ಉದ್ಧರಣ ಚಿಹ್ನೆಗಳ ನಡುವೆ ಇರುವ ವಿಷಯವು ಮೆಸೆಜ್ ಎನಿಸಿಕೊಳ್ಳುತ್ತದೆ. |
02:10 | “message” ಕಮಾಂಡ್ “string” ಅನ್ನು ಇನ್-ಪುಟ್ ರೂಪದಲ್ಲಿ ತೆಗೆದುಕೊಳ್ಳುತ್ತದೆ. |
02:14 | ಇದು string ನಿಂದ ಟೆಕ್ಸ್ಟ್ ಅನ್ನು ಜೊತೆ ಮಾಡಿಕೊಂಡೇ ಒಂದು ಪಾಪಪ್ ಡಯಲಾಗ್ ಬಾಕ್ಸ್ ಅನ್ನು ತೋರಿಸುತ್ತದೆ. ಮತ್ತು non null strings ಗಾಗಿ ಒಂದು ಬೀಪ್ ಅನ್ನು ಉಂಟುಮಾಡುತ್ತದೆ. |
02:24 | $a, $b ಮತ್ತು $c (ಎ, ಬಿ ಮತ್ತು ಸೀ) ವೆರಿಯಬಲ್ಸ್-ಗಳು ಯೂಸರ್-ನ ಇನ್-ಪುಟ್ ಅನ್ನು ಸಂಗ್ರಹಿಸುತ್ತವೆ. |
02:30 | “ask” ಎಂಬ ಕಮಾಂಡ್, ವೇರಿಯಬಲ್ಸ್ ನಲ್ಲಿ ಇನ್-ಪುಟ್ ಅನ್ನು ಸಂಗ್ರಹಿಸಲು ಅಪೇಕ್ಷಿಸುತ್ತದೆ. |
02:36 | if(($a+$b>$c) ಎ ಪ್ಲಸ್ ಬಿ ಗ್ರೇಟರ್ದೆನ್ ಸಿ ಮತ್ತು ($b+$c>$a) ಬಿ ಪ್ಲಸ್ ಸಿ ಗ್ರೇಟರ್ದೆನ್ ಎ ಮತ್ತು ($c+$a>$b) ಸಿ ಪ್ಲಸ್ ಎ ಗ್ರೇಟರ್ದೆನ್ ಬಿ ಎಂಬುದು “if” ನಿಬಂಧನೆಗಳನ್ನು ಪರಿಶೀಲಿಸುತ್ತದೆ. |
02:49 | “and” ನಿಂದ ಗ್ಲೂ ಮಾಡಿದ ಎರಡು ಪ್ರಶ್ನೆಗಳು ಸರಿಯಾಗಿದ್ದರೆ, ಪರಿಣಾಮ true ಆಗುತ್ತದೆ. |
02:55 | if(($a !=$b) ಎ ನಾಟ್ ಈಕ್ವಲ್ಟು ಬಿ ಮತ್ತು ($b != $c) ಬಿ ನಾಟ್ ಈಕ್ವಲ್ಟು ಸಿ ಮತ್ತು ($c != $a)) ಸಿ ನಾಟ್ ಈಕ್ವಲ್ಟು ಎ if ನಿಬಂಧನೆಗಳನ್ನು ಪರಿಶೀಲಿಸುತ್ತದೆ. |
03:05 | ಮೇಲಿರುವ 'if' ನಿಬಂಧನೆ true ಆದಾಗ, ಕಂಟ್ರೋಲ್ nested if ನೆಸ್ಟೆಡ್ ಇಫ್ ಬ್ಲಾಕ್ -ನ ಒಳಗೆ ಚಲಿಸುತ್ತದೆ. |
03:12 | ಇದು ತ್ರಿಕೋಣದ ಭಾಗಗಳು ಅಸಮಾನವಾಗಿದೆಯೇ ಎಂಬುದನ್ನು ಪರಿಶೀಲಿಸುತ್ತದೆ. |
03:17 | fontsize 18 print ಕಮಾಂಡಿನ ಮೂಲಕ ಉಪಯೋಗಿಸಿದ ಫಾಂಟ್ ಸೈಜ್ ಅನ್ನು ಸೆಟ್ ಮಾಡುತ್ತದೆ. |
03:22 | go 10,100 ಎಂಬ ಕಮಾಂಡ್ Turtle ಗೆ ಕ್ಯಾನ್ವಾಸಿನ ಎಡಭಾಗದಿಂದ 10 pixels ಮತ್ತು ಮೇಲ್ಭಾಗದಿಂದ 100 pixels ಗಳಷ್ಟು ಮುಂದೆ ಸಾಗುವಂತೆ ಆದೇಶಿಸುತ್ತದೆ. |
03:35 | if ನಿಬಂಧನೆಯ ಪರಿಶೀಲನೆಯಾದ ಮೇಲೆ print ಕಮಾಂಡ್ string ಅನ್ನು ತೋರಿಸುತ್ತದೆ. |
03:41 | ಬ್ಲಾಕ್-ನಲ್ಲಿರುವ if ನಿಬಂಧನೆಯು ತಪ್ಪಾಗಿದ್ದರೆ, else ಕಮಾಂಡ್ else ನಿಬಂಧನೆಯನ್ನು ಪರಿಶೀಲಿಸುತ್ತದೆ. |
03:48 | else ನಿಬಂಧನೆಯ ಪರಿಶೀಲನೆಯಾದ ಮೇಲೆ print ಕಮಾಂಡ್ string ಅನ್ನು ತೋರಿಸುತ್ತದೆ. |
03:54 | else ಕಮಾಂಡ್ ಕೊನೆಯ ನಿಬಂಧನೆಯನ್ನು ಪರಿಶೀಲಿಸುತ್ತದೆ. |
03:57 | ಇಲ್ಲಿ ಮೇಲೆ ಹೇಳಿದ ನಿಬಂಧನೆ ತಪ್ಪಾಗಿದ್ದಾಗ ಮಾತ್ರ else ಪರಿಶೀಲಿಸಲ್ಪಡುತ್ತದೆ. |
04:03 | else ನಿಬಂಧನೆಯ ಪರಿಶೀಲನೆಯಾದ ಮೇಲೆ print ಕಮಾಂಡ್ string ಅನ್ನು ತೋರಿಸುತ್ತದೆ. ನಾನು ಎಲ್ಲಾ ನಿಬಂಧನೆಗಳನ್ನು ಪರಿಶೀಲಿಸುವುದಕ್ಕಾಗಿ ಕೋಡ್ ಅನ್ನು ರನ್ ಮಾಡುತ್ತೇನೆ. |
04:12 | ಪ್ರೋಗ್ರಾಮ್ ಅನ್ನು ರನ್ ಮಾಡುವುದಕ್ಕಾಗಿ Run ಬಟನ್ ಮೇಲೆ ಕ್ಲಿಕ್ ಮಾಡೋಣ. |
04:15 | ಒಂದು ಡಯಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ. OK ಕ್ಲಿಕ್ ಮಾಡುತ್ತೇನೆ. |
04:20 | AB ಯ ಉದ್ದಕ್ಕಾಗಿ 5 ಅನ್ನು ಎಂಟರ್ ಮಾಡೋಣ ಮತ್ತು OK ಕ್ಲಿಕ್ ಮಾಡೋಣ. |
04:25 | BC ಯ ಉದ್ದಕ್ಕಾಗಿ 8 ಅನ್ನು ಎಂಟರ್ ಮಾಡೋಣ ಮತ್ತು OK ಕ್ಲಿಕ್ ಮಾಡೋಣ. |
04:29 | AC ಯ ಉದ್ದಕ್ಕಾಗಿ 9 ಅನ್ನು ಎಂಟರ್ ಮಾಡೋಣ ಮತ್ತು OK ಕ್ಲಿಕ್ ಮಾಡೋಣ. |
04:33 | ಕ್ಯಾನ್ವಾಸಿನ ಮೇಲೆ “A scalene triangle” (ಎ ಸ್ಕೆಲೇನ್ ಟ್ರ್ಯಾಂಗಲ್) ಕಾಣಿಸುತ್ತದೆ. |
04:37 | ಪುನಃ ರನ್ ಮಾಡೋಣ. |
04:40 | ಒಂದು ಡಯಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ. OK ಕ್ಲಿಕ್ ಮಾಡುತ್ತೇನೆ. |
04:44 | AB ಯ ಉದ್ದಕ್ಕಾಗಿ 5 ಅನ್ನು ಎಂಟರ್ ಮಾಡೋಣ ಮತ್ತು OK ಕ್ಲಿಕ್ ಮಾಡೋಣ, BC ಯ ಉದ್ದಕ್ಕಾಗಿ 6 ಅನ್ನು ಎಂಟರ್ ಮಾಡೋಣ ಮತ್ತು OK ಕ್ಲಿಕ್ ಮಾಡೋಣ, AC ಯ ಉದ್ದಕ್ಕಾಗಿ 6 ಅನ್ನು ಎಂಟರ್ ಮಾಡೋಣ ಮತ್ತು OK ಕ್ಲಿಕ್ ಮಾಡೋಣ. |
04:58 | ಕ್ಯಾನ್ವಾಸಿನ ಮೇಲೆ “ Not a scalene triangle” ನಾಟ್ ಅ ಸ್ಕೆಲೇನ್ ಟ್ರ್ಯಾಂಗಲ್ ಕಾಣಿಸುತ್ತದೆ. |
05:02 | ಡೀಫಾಲ್ಟ್ ನಿಬಂಧನೆಯನ್ನು ಪರಿಶೀಲಿಸುವುದಕ್ಕಾಗಿ ಪುನಃ ರನ್ ಮಾಡೋಣ. |
05:06 | ಒಂದು ಡಯಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ. OK ಕ್ಲಿಕ್ ಮಾಡುತ್ತೇನೆ. |
05:11 | AB ಯ ಉದ್ದಕ್ಕಾಗಿ 1 ಅನ್ನು ಎಂಟರ್ ಮಾಡೋಣ ಮತ್ತು OK ಕ್ಲಿಕ್ ಮಾಡೋಣ. |
05:16 | BC ಯ ಉದ್ದಕ್ಕಾಗಿ 1 ಅನ್ನು ಎಂಟರ್ ಮಾಡೋಣ ಮತ್ತು OK ಕ್ಲಿಕ್ ಮಾಡೋಣ. |
05:20 | AC ಯ ಉದ್ದಕ್ಕಾಗಿ 2 ಅನ್ನು ಎಂಟರ್ ಮಾಡೋಣ ಮತ್ತು OK ಕ್ಲಿಕ್ ಮಾಡೋಣ. |
05:24 | ಕ್ಯಾನ್ವಾಸಿನ ಮೇಲೆ " Does not satisfy triangle's inequality " ಡಸ್ ನಾಟ್ ಸಾಟೀಸ್ಫೈ ಟ್ರ್ಯಾಂಗಲ್ಸ್ ಇನೀಕ್ವಾಲಿಟಿ ಎಂದು ಕಾಣಿಸುತ್ತದೆ. |
05:30 | ಈಗ ಈ ಪ್ರೋಗ್ರಾಮ್ ಅನ್ನು ಕ್ಲಿಯರ್ ಮಾಡೋಣ. ನಾನು clear ಕಮಾಂಡ್ ಅನ್ನು ಟೈಪ್ ಮಾಡುತ್ತೇನೆ. clear ಕಮಾಂಡ್, ಕ್ಯಾನ್ವಾಸನ್ನು ಸ್ವಚ್ಛಗೊಳಿಸುತ್ತದೆ, |
05:40 | ಈಗ 'not ನಿಬಂಧನೆಯೊಂದಿಗೆ ಕೆಲಸ ಮಾಡೋಣ. |
05:43 | ಈಗ ನಾನು text editor ನಿಂದ ಪ್ರೋಗ್ರಾಂ ಅನ್ನು ಕಾಪಿ ಮಾಡುತ್ತೇನೆ. ಮತ್ತು ಅದನ್ನು KTurtle editor ನಲ್ಲಿ ಪೇಸ್ಟ್ ಮಾಡುತ್ತೇನೆ . |
05:51 | ದಯವಿಟ್ಟು ಇಲ್ಲಿ ಟ್ಯುಟೋರಿಯಲ್ ಅನ್ನು ನಿಲ್ಲಿಸಿ, ಮತ್ತು ನಿಮ್ಮ KTurtle editor ನಲ್ಲಿ ಪ್ರೋಗ್ರಾಂ ಟೈಪ್ ಮಾಡಿ. |
05:56 | ಪ್ರೋಗ್ರಾಮ್ ಅನ್ನು ಟೈಪ್ ಮಾಡಿದ ನಂತರ ಟ್ಯುಟೋರಿಯಲ್ ಅನ್ನು ಮತ್ತೆ ಆರಂಭ ಮಾಡೋಣ. |
06:01 | ನಾನು ಪ್ರೋಗ್ರಾಂ ಟೆಕ್ಸ್ಟ್ ಅನ್ನು ಝೂಮ್ ಮಾಡುತ್ತೇನೆ ಮತ್ತು ಪ್ರೋಗ್ರಾಮ್ ಅನ್ನು ವಿವರಿಸುತ್ತೇನೆ. |
06:05 | reset ಕಮಾಂಡ್ “Turtle” ಅನ್ನು default ಸ್ಥಿತಿಯಲ್ಲಿ ಸೆಟ್ ಮಾಡುತ್ತದೆ. |
06:09 | $a, $b ಮತ್ತು $c (ಎ ಬಿ ಮತ್ತು ಸೀ) ವೆರಿಯಬಲ್ಸ್-ಗಳು ಯೂಸರ್-ನ ಇನ್-ಪುಟ್ ಅನ್ನು ಸಂಗ್ರಹಿಸುತ್ತವೆ. |
06:15 | if not (($a==$b) ಇಫ್ ನಾಟ್ ಎ ಈಸ್ ಈಕ್ವಲ್ಟು ಈಕ್ವಲ್ಟು ಬಿ ಮತ್ತು ($b==$c) ಬೀ ಈಸ್ ಈಕ್ವಲ್ಟು ಈಕ್ವಲ್ಟು ಸೀ ಮತ್ತು ($c==$a)) ಸೀ ಈಸ್ ಈಕ್ವಲ್ಟು ಈಕ್ವಲ್ಟು ಎ, if not ನಿಬಂಧನೆಯನ್ನು ಪರಿಶೀಲಿಸುತ್ತದೆ. |
06:27 | not ಎನ್ನುವುದು ಒಂದು ವಿಶಿಷ್ಟವಾದ ಗ್ಲೂ ಪದ. ಇದು ತನ್ನ ಓಪರೆಂಡ್ ನ ತಾರ್ಕಿಕ ಸ್ಥಿತಿಯನ್ನು ವಿಪರೀತಗೊಳಿಸುತ್ತದೆ. |
06:36 | ಉದಾಹರಣೆಗಾಗಿ ಕೊಟ್ಟಿರುವ ನಿಬಂಧನೆಯು ಸರಿಯಾಗಿದ್ದರೆ, not ಎನ್ನುವುದು ತಪ್ಪನ್ನಾಗಿ ಮಾಡುತ್ತದೆ. |
06:42 | ಮತ್ತು ನಿಬಂಧನೆಯು ತಪ್ಪಾಗಿರುವಾಗ output ಸರಿ ( true )ಯಾಗಿರುತ್ತದೆ. |
06:48 | if not ನಿಬಂಧನೆಯ ಪರಿಶೀಲನೆಯಾದ ಮೇಲೆ print ಕಮಾಂಡ್ string ಅನ್ನು ತೋರಿಸುತ್ತದೆ. |
06:55 | if ನಿಬಂಧನೆಯು ತಪ್ಪಾದಾಗ else ಕಮಾಂಡ್ ಉತ್ಪತ್ತಿಯಾಗುತ್ತದೆ. |
07:01 | else ನಿಬಂಧನೆಯ ಪರಿಶೀಲನೆಯಾದ ಮೇಲೆ print ಕಮಾಂಡ್ string ಅನ್ನು ತೋರಿಸುತ್ತದೆ. |
07:07 | go 100,100 ಎಂಬ ಕಮಾಂಡ್, Turtle ಗೆ ಕ್ಯಾನ್ವಾಸಿನ ಎಡಭಾಗದಿಂದ 100 pixels ಮತ್ತು ಮೇಲ್ಭಾಗದಿಂದ 100 pixels ಗಳಷ್ಟು ಮುಂದೆ ಸಾಗುವಂತೆ ಆದೇಶಿಸುತ್ತದೆ. |
07:20 | repeat 3{turnright 120 forward 100} ರಿಪೀಟ್ ಥ್ರೀ ಆವರಣದ ಒಳಗೆ ಟ್ರು ರೈಟ್ ೧೨೦ ಫಾರ್ವರ್ಡ್ ೧೦೦, ಎಂಬ ಕಮಾಂಡ್ ಕ್ಯಾನ್ವಾಸಿನ ಮೇಲೆ ಒಂದು ಸಮಭುಜ ತ್ರಿಕೋಣವನ್ನು ತಯಾರಿಸಲು turtle ಗೆ ಆದೇಶ ನೀಡುತ್ತದೆ. |
07:32 | ನಾನು ಎಲ್ಲಾ ನಿಬಂಧನೆಗಳನ್ನು ಪರಿಶೀಲಿಸುವುದಕ್ಕಾಗಿ ಪ್ರೋಗ್ರಾಮ್ ಅನ್ನು ರನ್ ಮಾಡುತ್ತೇನೆ. |
07:36 | ಕೋಡ್ ಅನ್ನು ರನ್ ಮಾಡಲು F5 ಒತ್ತಿ. |
07:40 | AB ಯ ಉದ್ದಕ್ಕಾಗಿ 6 ಅನ್ನು ಎಂಟರ್ ಮಾಡೋಣ ಮತ್ತು OK ಕ್ಲಿಕ್ ಮಾಡೋಣ. |
07:45 | BC ಯ ಉದ್ದಕ್ಕಾಗಿ 5 ಅನ್ನು ಎಂಟರ್ ಮಾಡೋಣ ಮತ್ತು OK ಕ್ಲಿಕ್ ಮಾಡೋಣ. |
07:48 | AC ಯ ಉದ್ದಕ್ಕಾಗಿ 7 ಅನ್ನು ಎಂಟರ್ ಮಾಡೋಣ ಮತ್ತು OK ಕ್ಲಿಕ್ ಮಾಡೋಣ. |
07:54 | ಕ್ಯಾನ್ವಾಸಿನ ಮೇಲೆ “Triangle is not equilateral” ಟ್ರ್ಯಾಂಗಲ್ ಈಸ್ ನಾಟ್ ಈಕ್ವಲೇಟರಲ್ ಎಂದು ಕಾಣಿಸುತ್ತದೆ. |
07:58 | ಪುನಃ ರನ್ ಮಾಡೋಣ. AB ಯ ಉದ್ದಕ್ಕಾಗಿ 5 ಅನ್ನು ಎಂಟರ್ ಮಾಡೋಣ ಮತ್ತು OK ಕ್ಲಿಕ್ ಮಾಡೋಣ. |
08:05 | BC ಯ ಉದ್ದಕ್ಕಾಗಿ 5 ಅನ್ನು ಎಂಟರ್ ಮಾಡೋಣ ಮತ್ತು OK ಕ್ಲಿಕ್ ಮಾಡೋಣ. |
08:09 | AC ಯ ಉದ್ದಕ್ಕಾಗಿ 5 ಅನ್ನು ಎಂಟರ್ ಮಾಡೋಣ ಮತ್ತು OK ಕ್ಲಿಕ್ ಮಾಡೋಣ. |
08:13 | ಕ್ಯಾನ್ವಾಸಿನ ಮೇಲೆ “Triangle is equilateral” ಟ್ರ್ಯಾಂಗಲ್ ಈಸ್ ಈಕ್ವಲೇಟರಲ್ ಎಂದು ಕಾಣಿಸುತ್ತದೆ. ಕ್ಯಾನ್ವಾಸಿನ ಮೇಲೆ ಒಂದು ಸಮಭುಜ ತ್ರಿಕೋಣ ತಯಾರಾಗಿದೆ. |
08:21 | ಇದರೊಂದಿಗೆ ಈಗ ನಾವು ಈ ಟ್ಯುಟೋರಿಯಲ್-ನ ಕೊನೆಯ ಹಂತಕ್ಕೆ ಬಂದಿದ್ದೇವೆ. |
08:25 | ಸಂಕ್ಷೇಪವಾಗಿ. |
08:28 | ಈ ಟ್ಯುಟೋರಿಯಲ್-ನಲ್ಲಿ ನಾವು ಕ್ವೆಶ್ಚನ್ ಗ್ಲೂಸ್-ಗಳಾದ and ಮತ್ತು not ಅನ್ನು ಕಲಿತಿದ್ದೇವೆ. |
08:35 | ಅಸೈನ್-ಮೆಂಟ್- ಆಗಿ, ನಾನು ನಿಮಗೆ ಕ್ವೆಶ್ಚನ್ ಗ್ಲೂ “or” ಅನ್ನು ಬಳಸಿ ಲಂಬಕೋನ ತ್ರಿಭುಜದ ಪರಿಕಲ್ಪನೆಯನ್ನು ನಿರ್ಧರಿಸಲು ಪ್ರೋಗ್ರಾಂ ಬರೆಯಲು ಸೂಚಿಸುತ್ತೇನೆ. |
08:48 | if or ನಿಬಂಧನೆಯ ಸಂರಚನೆ : |
08:51 | if ಆವರಣದ ಒಳಗೆ condition or ಆವರಣದ ಒಳಗೆ condition or ಆವರಣದ ಒಳಗೆ condition. |
08:59 | ಕರ್ಲಿ ಬ್ರ್ಯಾಕೆಟ್ ನ ಒಳಗೆ do something. |
09:02 | else ಕರ್ಲಿ ಬ್ರ್ಯಾಕೆಟ್ ನ ಒಳಗೆ do something. |
09:06 | ಈ URLನಲ್ಲಿ ಸಿಗುವ ವಿಡಿಯೋ-ಅನ್ನು ನೋಡಿ. http://spoken-tutorial.org/What is a Spoken Tutorial |
09:10 | ಇದು ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಅನ್ನು ಸಂಕ್ಷೇಪವಾಗಿ ತಿಳಿಸುತ್ತದೆ. |
09:13 | ಒಂದು ವೇಳೆ ನಿಮ್ಮಲ್ಲಿ ಒಳ್ಳೆಯ ಬ್ಯಾಂಡ್-ವಿಡ್ತ್ ಇಲ್ಲದಿದ್ದಲ್ಲಿ, ನೀವು ಡೌನ್-ಲೋಡ್ ಮಾಡಿ ನೋಡಬಹುದು. |
09:18 | ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಟೀಮ್ : |
09:20 | ಸ್ಪೋಕನ್ ಟ್ಯುಟೋರಿಯಲ್-ಗಳನ್ನು ಉಪಯೋಗಿಸಿ ಕಾರ್ಯಾಗಾರಗಳನ್ನು ನಡೆಸುತ್ತದೆ. |
09:23 | ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನೂ ಕೊಡುತ್ತದೆ. |
09:27 | ಹೆಚ್ಚಿನ ವಿವರಣೆಗಾಗಿ, contact@spoken-tutorial.org ಗೆ ಬರೆಯಿರಿ. |
09:34 | ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್, ಟಾಕ್ ಟು ಎ ಟೀಚರ್ ಪ್ರಾಜೆಕ್ಟ್ ನ ಒಂದು ಭಾಗ. |
09:38 | ಇದು ಭಾರತ ಸರ್ಕಾರದ MHRDಯ ICTಮಾಧ್ಯಮದ ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್-ನಿಂದ ಸಮರ್ಥಿತವಾಗಿದೆ. |
09:44 | ಈ ಸಂಸ್ಥೆಯ ಬಗ್ಗೆ ಹೆಚ್ಚಿನ ಮಾಹಿತಿ ಈ ಲಿಂಕ್-ನಲ್ಲಿ ಸಿಗುತ್ತದೆ - http://spoken-tutorial.org/NMEICT-Intro ] |
09:49 | ಈ ಪಾಠದ ಅನುವಾದಕಿ ಬೆಂಗಳೂರಿನಿಂದ ನಾಗರತ್ನಾ ಹೆಗಡೆ ಹಾಗೂ ಪ್ರವಾಚಕ ಐಐಟಿ ಬಾಂಬೆಯಿಂದ ವಾಸುದೇವ. ಧನ್ಯವಾದಗಳು.
ಭಾಗವಹಿಸಿದ್ದಕ್ಕಾಗಿ ಧನ್ಯವಾದಗಳು. |