Jmol-Application/C3/Script-Console-and-Script-Commands/Kannada
From Script | Spoken-Tutorial
Time | Narration |
00:01 | Jmol Application (ಜೆ-ಮೊಲ್ ಅಪ್ಲಿಕೇಶನ್) ನಲ್ಲಿ, Script console and script commands (ಸ್ಕ್ರಿಪ್ಟ್ ಕಾನ್ಸೋಲ್ ಆಂಡ್ ಸ್ಕ್ರಿಪ್ಟ್ ಕಮಾಂಡ್ಸ್) ಎಂಬ ಈ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
00:08 | ಈ ಟ್ಯುಟೋರಿಯಲ್ ನಲ್ಲಿ, ನಾವು: |
00:11 | 'ಸ್ಕ್ರಿಪ್ಟ್ ಕಮಾಂಡ್'ಗಳ ಬಗ್ಗೆ, |
00:13 | 'ಸ್ಕ್ರಿಪ್ಟ್ ಕಾನ್ಸೋಲ್' ವಿಂಡೋಅನ್ನು ಹೇಗೆ ಬಳಸುವುದು, |
00:16 | 'ಸ್ಕ್ರಿಪ್ಟ್ ಕಮಾಂಡ್'ಗಳನ್ನು ಬಳಸಿ ಮಾಡೆಲ್ ನ ಡಿಸ್ಪ್ಲೇಅನ್ನು ಬದಲಾಯಿಸುವುದು, |
00:21 | ಟೆಕ್ಸ್ಟ್ ನ ಸಾಲುಗಳನ್ನು ಪ್ಯಾನೆಲ್ ನ ಮೇಲೆ ತೋರಿಸುವುದು, ಇತ್ಯಾದಿಗಳನ್ನು ಕಲಿಯುವೆವು. |
00:24 | ಈ ಟ್ಯುಟೋರಿಯಲ್ ಅನ್ನು ಅನುಸರಿಸಲು - |
00:26 | ಜೆ-ಮೊಲ್ ಅಪ್ಲಿಕೇಶನ್ ನಲ್ಲಿ, |
00:27 | ಮೊಲೆಕ್ಯುಲರ್ ಮಾಡೆಲ್ ಗಳನ್ನು ಕ್ರಿಯೇಟ್ ಮತ್ತು ಎಡಿಟ್ ಮಾಡುವುದನ್ನು ನೀವು ತಿಳಿದಿರಬೇಕು. |
00:32 | ಇಲ್ಲದಿದ್ದರೆ, ಸಂಬಂಧಪಟ್ಟ ಟ್ಯುಟೋರಿಯಲ್ ಗಳನ್ನು ನಮ್ಮ ವೆಬ್ಸೈಟ್ ನಲ್ಲಿ ನೋಡಿ. |
00:37 | ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು: |
00:39 | Ubuntu OS, ಆವೃತ್ತಿ 12.04, |
00:44 | Jmol ಆವೃತ್ತಿ, 12.2.2, |
00:47 | Java ಆವೃತ್ತಿ 7, ಇವುಗಳನ್ನು ಬಳಸುತ್ತಿದ್ದೇನೆ. |
00:51 | 'ಜೆ-ಮೊಲ್' ಪ್ಯಾನೆಲ್ ನ ಮೇಲಿನ ಡಿಸ್ಪ್ಲೇಯನ್ನು- |
00:55 | ಮೆನ್ಯು ಬಾರ್ ನಲ್ಲಿಯ ಆಯ್ಕೆಗಳು, |
00:57 | ಪಾಪ್-ಅಪ್ ಮೆನ್ಯುನಲ್ಲಿಯ ಆಯ್ಕೆಗಳು ಅಥವಾ |
01:00 | ಸ್ಕ್ರಿಪ್ಟ್ ಕಾನ್ಸೋಲ್ ನ ಮೇಲಿನ ಸ್ಕ್ರಿಪ್ಟಿಂಗ್ ಕಮಾಂಡ್ ಗಳನ್ನು ಬಳಸಿ ಮಾರ್ಪಡಿಸಬಹುದು. |
01:04 | ಹಿಂದಿನ ಟ್ಯುಟೋರಿಯಲ್ ಗಳಲ್ಲಿ, ಮೆನ್ಯು ಬಾರ್ ಹಾಗೂ ಪಾಪ್-ಅಪ್ ಮೆನ್ಯುಗಳನ್ನು ಬಳಸಿ ಡಿಸ್ಪ್ಲೇಯನ್ನು ಮಾರ್ಪಡಿಸಲು ನಾವು ಕಲಿತಿದ್ದೇವೆ. |
01:13 | ಈ ಟ್ಯುಟೋರಿಯಲ್ ನಲ್ಲಿ, ನಾವು 'ಸ್ಕ್ರಿಪ್ಟ್ ಕಮಾಂಡ್'ಗಳನ್ನು ಬಳಸಲು ಕಲಿಯುವೆವು. |
01:18 | ಕಮಾಂಡ್ ಗಳ ಸಮೂಹವನ್ನು (set) 'ಸ್ಕ್ರಿಪ್ಟ್ ಕಮಾಂಡ್' ಎಂದು ಕರೆಯಲಾಗುತ್ತದೆ. |
01:22 | 'ಸ್ಕ್ರಿಪ್ಟ್ ಕಮಾಂಡ್'ಗಳು, ಪ್ಯಾನೆಲ್ ನ ಮೇಲಿನ ಮಾಡೆಲ್ ನ ಡಿಸ್ಪ್ಲೇಯನ್ನು ನಿಯಂತ್ರಿಸುತ್ತವೆ. |
01:27 | ' ಜೆ-ಮೊಲ್', 'RasMol' ಎಂಬ ಪ್ರೊಗ್ರಾಂಅನ್ನು ಆಧರಿಸಿದ ಕಮಾಂಡ್ ಲ್ಯಾಂಗ್ವೇಜ್ ಅನ್ನು ಬಳಸುತ್ತದೆ. |
01:32 | ಇಂತಹ ಕಮಾಂಡ್ ಗಳನ್ನು ಬರೆಯುವುದನ್ನು 'ಸ್ಕ್ರಿಪ್ಟಿಂಗ್' ಎಂದು ಕರೆಯಲಾಗುತ್ತದೆ. |
01:36 | 'ಜೆ-ಮೊಲ್'ನ 'ಸ್ಕ್ರಿಪ್ಟಿಂಗ್' ಭಾಷೆ ಹಾಗೂ 'ಸ್ಕ್ರಿಪ್ಟ್ ಕಮಾಂಡ್'ಗಳ ಲಿಸ್ಟ್ ಇವುಗಳ ಡಾಕ್ಯೂಮೆಂಟೇಶನ್, ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುತ್ತದೆ. |
01:44 | ಈಗ, 'ಸ್ಕ್ರಿಪ್ಟ್ ಕಮಾಂಡ್'ಗಳನ್ನು ಹೇಗೆ ಬಳಸುವುದು? |
01:47 | ‘ಸ್ಕ್ರಿಪ್ಟ್ ಕಮಾಂಡ್’ಗಳನ್ನು 'ಸ್ಕ್ರಿಪ್ಟ್ ಕಾನ್ಸೋಲ್ ವಿಂಡೋ'ದಲ್ಲಿ ಟೈಪ್ ಮಾಡಲಾಗುತ್ತದೆ. |
01:53 | 'ಸ್ಕ್ರಿಪ್ಟ್ ಕನ್ಸೋಲ್', 'ಜೆ-ಮೊಲ್'ನ 'ಕಮಾಂಡ್ ಲೈನ್ ಇಂಟರ್ಫೇಸ್' ಆಗಿದೆ. |
01:58 | ಇದು, ಮೆನ್ಯುಬಾರ್ ನ ಮೇಲೆ 'File' ಹಾಗೂ 'Console' ಆಯ್ಕೆಗಳ ಅಡಿಯಲ್ಲಿ ಲಭ್ಯವಿದೆ. |
02:03 | ಇದು 'ಜೆ-ಮೊಲ್ ಅಪ್ಪ್ಲಿಕೇಶನ್ ವಿಂಡೋ' ಇದ್ದು, ಸ್ಕ್ರೀನ್ ನ ಮೇಲೆ 'ಪ್ರೊಪೇನ್'ನ ಒಂದು ಮಾಡೆಲ್ ಇದೆ. |
02:08 | ನಾವು ಈಗ ಡಿಸ್ಪ್ಲೇಯನ್ನು ಬದಲಾಯಿಸಲು, 'ಸ್ಕ್ರಿಪ್ಟ್ ಕಾನ್ಸೋಲ್'ಅನ್ನು ಬಳಸಲು ಕಲಿಯೋಣ. |
02:12 | 'ಸ್ಕ್ರಿಪ್ಟ್ ಕಾನ್ಸೋಲ್ ವಿಂಡೋ'ಅನ್ನು ಓಪನ್ ಮಾಡಲು, ಮೆನ್ಯೂ ಬಾರ್ ನಲ್ಲಿಯ 'File' ಮೆನ್ಯೂ ಮೇಲೆ ಕ್ಲಿಕ್ ಮಾಡಿ. |
02:19 | ಡ್ರಾಪ್-ಡೌನ್ ನಲ್ಲಿ, ಕೆಳಗೆ ಸ್ಕ್ರೋಲ್ ಮಾಡಿ ಮತ್ತು 'Console' ನ ಮೇಲೆ ಕ್ಲಿಕ್ ಮಾಡಿ. |
02:24 | ಸ್ಕ್ರೀನ್ ನ ಮೇಲೆ 'Jmol script console' (ಜೆ-ಮೊಲ್ ಸ್ಕ್ರಿಪ್ಟ್ ಕಾನ್ಸೋಲ್) ಎಂಬ ವಿಂಡೋ ತೆರೆದುಕೊಳ್ಳುತ್ತದೆ. |
02:29 | 'ಸ್ಕ್ರಿಪ್ಟ್ ಕಾನ್ಸೋಲ್ ವಿಂಡೋ', ಕಮಾಂಡ್ ಗಳನ್ನು ಟೈಪ್ ಮಾಡಲು ಒಂದು ಟೆಕ್ಸ್ಟ್ ಏರಿಯಾಅನ್ನು ಹೊಂದಿದೆ. |
02:34 | ವಿಂಡೋದ ಕೆಳಭಾಗದಲ್ಲಿ, 'ಸ್ಕ್ರಿಪ್ಟ್ ಎಡಿಟರ್ ವಿಂಡೋ'ಅನ್ನು ಓಪನ್ ಮಾಡಲು ಒಂದು ಬಟನ್ ಇರುತ್ತದೆ. |
02:40 | 'Variables, Clear, History' ಹಾಗೂ 'State' ಎಂಬ ಬೇರೆ ಬಟನ್ ಗಳು ಸಹ ಈ ವಿಂಡೋದ ಮೇಲೆ ಇರುತ್ತವೆ. |
02:49 | ಲಭ್ಯವಿರುವ ‘ಸ್ಕ್ರಿಪ್ಟ್ ಕಮಾಂಡ್’ಗಳ ಲಿಸ್ಟ್ ಅನ್ನು ತೋರಿಸುವ ಪೇಜನ್ನು ಓಪನ್ ಮಾಡಲು, 'Help' ಬಟನ್ ನ ಮೇಲೆ ಕ್ಲಿಕ್ ಮಾಡಿ. |
02:57 | ಈ ವಿಂಡೋಅನ್ನು ಕ್ಲೋಸ್ ಮಾಡಲು, 'OK' ಎಂಬ ಬಟನ್ ನ ಮೇಲೆ ಕ್ಲಿಕ್ ಮಾಡಿ. |
03:01 | ಈಗ ನಾವು ಕೆಲವು ಸರಳವಾದ ‘ಸ್ಕ್ರಿಪ್ಟ್ ಕಮಾಂಡ್’ಗಳನ್ನು ಬರೆಯಲು ಪ್ರಯತ್ನಿಸೋಣ. |
03:05 | ಈ ಕಮಾಂಡ್ ಗಳನ್ನು ಹೇಗೆ ಬರೆಯುವುದು? |
03:08 | 'ಸ್ಕ್ರಿಪ್ಟ್ ಕಾನ್ಸೋಲ್ ವಿಂಡೋದಲ್ಲಿ', $ (ಡಾಲರ್) ಪ್ರಾಂಪ್ಟ್ ನ ನಂತರ ಕಮಾಂಡ್ ಅನ್ನು ಟೈಪ್ ಮಾಡಿ. |
03:13 | ‘ಸ್ಕ್ರಿಪ್ಟ್ ಕಮಾಂಡ್’ಗಳು ಕಮಾಂಡ್ ವರ್ಡ್ ನಿಂದ ಆರಂಭವಾಗುತ್ತವೆ. |
03:17 | ನಂತರ, ಸ್ಪೇಸ್ ನಿಂದ ಬೇರ್ಪಡಿಸಲ್ಪಟ್ಟ ಪ್ಯಾರಾಮೀಟರ್ ಗಳನ್ನು ಹೊಂದಿವೆ |
03:22 | ಮತ್ತು, 'ಎಂಡ್ ಆಫ್ ಲೈನ್ ಕ್ಯಾರೆಕ್ಟರ್' ಅಥವಾ ಸೆಮಿಕೋಲನ್ ನಿಂದ ಕೊನೆಗೊಳ್ಳುತ್ತವೆ. |
03:27 | ನೀವು ಕಮಾಂಡ್ ಅನ್ನು ಟೈಪ್ ಮಾಡಿ ಮುಗಿಸುವವರೆಗೆ ಅದು ಕೆಂಪು ಬಣ್ಣದಲ್ಲಿ ಕಾಣಿಸಿಕೊಳ್ಳುತ್ತದೆ. |
03:33 | ಕಮಾಂಡ್ ಅನ್ನು ಸಕ್ರಿಯಗೊಳಿಸಲು, ಕೀಬೋರ್ಡ್ ಮೆಲೆ 'Enter' ಕೀಯನ್ನು ಒತ್ತಿ. |
03:37 | ಕಾನ್ಸೋಲನ್ನು ದೊಡ್ಡದನ್ನಾಗಿಸಲು, ನಾನು 'Kmag screen magnifier' (ಕೆಮ್ಯಾಗ್ ಸ್ಕ್ರೀನ್ ಮ್ಯಾಗ್ನಿಫೈಯರ್) ಅನ್ನು ಬಳಸುತ್ತಿದ್ದೇನೆ. |
03:44 | ಉದಾಹರಣೆಗೆ, ಪ್ರೊಪೇನ್ ನಲ್ಲಿಯ ಎಲ್ಲ ಕಾರ್ಬನ್ ಗಳ ಬಣ್ಣವನ್ನು ಆರೇಂಜ್ ಬಣ್ಣಕ್ಕೆ ಬದಲಾಯಿಸಲು, ಕರ್ಸರ್ ಅನ್ನು 'ಸ್ಕ್ರಿಪ್ಟ್ ಕಾನ್ಸೋಲ್' ವಿಂಡೋದ ಮೇಲೆ ಇರಿಸಿ. |
03:53 | ಡಾಲರ್ ಪ್ರಾಂಪ್ಟ್ ನ ಬದಿಯಲ್ಲಿ ಹೀಗೆ ಟೈಪ್ ಮಾಡಿ: select carbon ಸೆಮಿಕೋಲನ್ color atoms orange |
04:05 | ಕೀಬೋರ್ಡ್ ಮೇಲಿನ 'Enter' ಕೀಯನ್ನು ಒತ್ತಿ. |
04:08 | ಪ್ಯಾನೆಲ್ ನ ಮೇಲಿನ ಪ್ರೊಪೇನ್ ಮಾಡೆಲ್ ನಲ್ಲಿ, ಈಗ ಎಲ್ಲ ಕಾರ್ಬನ್ ಗಳು ಆರೇಂಜ್ ಬಣ್ಣದಲ್ಲಿ ಇವೆ. |
04:14 | ಈಗ, ಎಲ್ಲ ಬಾಂಡ್ ಗಳ ಬಣ್ಣವನ್ನು ನೀಲಿಗೆ ಬದಲಾಯಿಸಲು, |
04:18 | ಡಾಲರ್ ಪ್ರಾಂಪ್ಟ್ ನ ಬದಿಯಲ್ಲಿ ಹೀಗೆ ಟೈಪ್ ಮಾಡಿ: |
04:20 | select all bonds ಸೆಮಿಕೋಲನ್ color bonds blue |
04:26 | 'Enter' ಅನ್ನು ಒತ್ತಿ. |
04:29 | ಪ್ರೊಪೇನ್ ಮಾಡೆಲ್ ನಲ್ಲಿ ಎಲ್ಲ ಬಾಂಡ್ ಗಳು ಈಗ ನೀಲಿ ಬಣ್ಣದಲ್ಲಿವೆ ಎಂಬುದನ್ನು ಗಮನಿಸಿ. |
04:35 | ನಂತರ, ನಾವು ಬಾಂಡ್ ಗಳ ಸೈಜನ್ನು ಬದಲಾಯಿಸೋಣ. |
04:39 | ಡಾಲರ್ ಪ್ರಾಂಪ್ಟ್ ನ ಬದಿಯಲ್ಲಿ ಹೀಗೆ ಟೈಪ್ ಮಾಡಿ: “wireframe 0.05” |
04:45 | ಬಾಂಡ್ ಗಳ ತ್ರಿಜ್ಯವನ್ನು 'ಆಂಗ್ಸ್ಟ್ರಾಂ'ಗಳಲ್ಲಿ (angstroms) ಸೂಚಿಸಲು ದಶಮಾಂಶ ಸಂಖ್ಯೆಯನ್ನು ಬಳಸಲಾಗುತ್ತದೆ. 'Enter' ಅನ್ನು ಒತ್ತಿ. |
04:53 | 'ಪ್ರೊಪೇನ್' ಮಾಡೆಲ್ ನಲ್ಲಿ, ಬಾಂಡ್ ಗಳ ಸೈಜ್ ನಲ್ಲಿಯ ಬದಲಾವಣೆಯನ್ನು ಗಮನಿಸಿ. |
04:58 | ಹೀಗೆಯೇ, ಬಾಂಡ್ ಗಳ ಸೈಜನ್ನು ಹೆಚ್ಚಿಸಲು, ಪ್ರಾಂಪ್ಟ್ ನ ಬದಿಯಲ್ಲಿ ಹೀಗೆ ಟೈಪ್ ಮಾಡಿ: 'wireframe 0.1' |
05:07 | ಮತ್ತೊಮ್ಮೆ, ಬಾಂಡ್ ಗಳ ಸೈಜ್ ನಲ್ಲಿಯ ಬದಲಾವಣೆಯನ್ನು ಗಮನಿಸಿ. |
05:12 | ಪರಮಾಣುಗಳ ಸೈಜನ್ನು ಬದಲಾಯಿಸಲು, ನಾವು 'spacefill' ಎಂಬ ಕಮಾಂಡ್ ಅನ್ನು ಮತ್ತು ಆನಂತರ ಒಂದು ದಶಮಾಂಶ ಸಂಖ್ಯೆಯನ್ನು ಬಳಸುವೆವು. |
05:20 | ಡಾಲರ್ ಪ್ರಾಂಪ್ಟ್ ನ ಬದಿಯಲ್ಲಿ ಹೀಗೆ ಟೈಪ್ ಮಾಡಿ: "spacefill 0.2" |
05:26 | ದಶಮಾಂಶ ಸಂಖ್ಯೆಯು ಪರಮಾಣುವಿನ ತ್ರಿಜ್ಯವನ್ನು 'ಆಂಗ್ಸ್ಟ್ರಾಂ'ಗಳಲ್ಲಿ (angstroms) ಪ್ರತಿನಿಧಿಸುತ್ತದೆ. |
05:30 | 'Enter' ಅನ್ನು ಒತ್ತಿ. |
05:33 | ಪ್ರೊಪೇನ್ ಅಣುವಿನಲ್ಲಿ, ಪರಮಾಣುಗಳ ಗಾತ್ರವು ಕಡಿಮೆ ಆಗುವುದನ್ನು ಗಮನಿಸಿ. |
05:39 | ಹೀಗೆಯೇ, ಪರಮಾಣುಗಳ ಗಾತ್ರವನ್ನು ಹೆಚ್ಚಿಸಲು ಹೀಗೆ ಟೈಪ್ ಮಾಡಿ: |
05:43 | 'spacefill 0.5' |
05:46 | 'Enter' ಅನ್ನು ಒತ್ತಿ. |
05:48 | ಪರಮಾಣುಗಳ ಗಾತ್ರದಲ್ಲಿಯ ಬದಲಾವಣೆಯನ್ನು ನೀವು ನೋಡಬಹುದು. |
05:51 | ಪರ್ಯಾಯವಾಗಿ, ನಾವು 'cpk' ಎಂಬ ಕಮಾಂಡ್ ಅನ್ನು, ನಂತರ ಪರ್ಸೆಂಟೇಜ್ ಅಥವಾ ದಶಮಾಂಶ ಸಂಖ್ಯೆಯನ್ನು ಸಹ ಬಳಸಬಹುದು. |
05:59 | ಪರ್ಸೆಂಟೇಜ್, ಪರಮಾಣುವಿನ 'ವ್ಯಾಂಡರ್ವಾಲ್ಸ್' (vanderwaals) ರೇಡಿಯಸ್ ಅನ್ನು ಪ್ರತಿನಿಧಿಸುತ್ತದೆ. |
06:04 | ಉದಾಹರಣೆಗೆ, ಹೀಗೆ ಟೈಪ್ ಮಾಡಿ: 'cpk 20%' ಹಾಗೂ 'Enter' ಅನ್ನು ಒತ್ತಿ. |
06:11 | ಪರಮಾಣುಗಳ ಸೈಜ್ ನಲ್ಲಿಯ ಬದಲಾವಣೆಯನ್ನು ಗಮನಿಸಿ. |
06:15 | ಜೆ-ಮೊಲ್ ಪ್ಯಾನೆಲ್ ನ ಮೇಲೆ, ಟೆಕ್ಸ್ಟ್ ನ ಸಾಲುಗಳನ್ನು ತೋರಿಸಲು ಕಮಾಂಡ್ ಗಳನ್ನು ಬರೆಯಲು ಸಾಧ್ಯವಿದೆ. |
06:22 | ಟೆಕ್ಸ್ಟ್ ಗಾಗಿ, ಕಮಾಂಡ್ ಲೈನ್ 'set echo' ನೊಂದಿಗೆ ಆರಂಭವಾಗುತ್ತದೆ. |
06:27 | ನಂತರ, ಸ್ಕ್ರೀನ್ ಮೇಲಿನ ಟೆಕ್ಸ್ಟ್ ನ ಸ್ಥಾನ ಇರುತ್ತದೆ. |
06:31 | ಉದಾಹರಣೆಗೆ- ನಾವು ಪ್ಯಾನೆಲ್ ನ ಮೇಲ್ತುದಿಯ ಮಧ್ಯದಲ್ಲಿ, ಅಣುವಿನ ಹೆಸರನ್ನು 'Propane' (ಪ್ರೊಪೇನ್) ಎಂದು ತೋರಿಸುವೆವು. |
06:39 | ಆದ್ದರಿಂದ, ಹೀಗೆ ಟೈಪ್ ಮಾಡಿ: set echo top center ಸೆಮಿಕೋಲನ್ echo Propane ಮತ್ತು 'Enter' ಅನ್ನು ಒತ್ತಿ. |
06:48 | ನಾವು ಪ್ಯಾನೆಲ್ ನ ಮೇಲ್ತುದಿಯ ಮಧ್ಯದಲ್ಲಿ ತೋರಿಸಲಾದ 'Propane' ಎಂಬ ಟೆಕ್ಸ್ಟ್ ಅನ್ನು ನೋಡಬಹುದು. |
06:54 | ಪ್ಯಾನೆಲ್ ನ ಮೇಲೆ, ಟೆಕ್ಸ್ಟ್ ನ ಬೇರೆ ಸಾಲುಗಳನ್ನು ಕೂಡ ನಾವು ತೋರಿಸಬಹುದು. |
06:58 | ಉದಾಹರಣೆಗೆ, ನನಗೆ ಟೆಕ್ಸ್ಟ್ ಪ್ಯಾನೆಲ್ ನ ಕೆಳಗಡೆ, ಎಡಮೂಲೆಯಲ್ಲಿ ಬೇಕಾಗಿದೆ. |
07:04 | ಡಾಲರ್ ಪ್ರಾಂಪ್ಟ್ ನ ಬದಿಯಲ್ಲಿ ಹೀಗೆ ಟೈಪ್ ಮಾಡಿ: |
07:06 | set echo bottom left ಸೆಮಿಕೋಲನ್ echo This is a model of Propane |
07:15 | 'Enter' ಅನ್ನು ಒತ್ತಿ. |
07:17 | ನಾವು ಟೆಕ್ಸ್ಟ್ ನ ಸಾಲನ್ನು ಪ್ಯಾನೆಲ್ ನ ಕೆಳಗಡೆ ಎಡಮೂಲೆಯಲ್ಲಿ ನೋಡಬಹುದು. |
07:22 | ತೋರಿಸಲಾದ ಟೆಕ್ಸ್ಟ್ ನ ಕಲರ್, ಸೈಜ್ ಹಾಗೂ ಫಾಂಟ್ ಗಳನ್ನು ಬದಲಾಯಿಸಲು ಸಹ ಸಾಧ್ಯವಿದೆ. |
07:29 | ಉದಾಹರಣೆಗೆ, ನನಗೆ ಟೆಕ್ಸ್ಟ್, 'Arial Italic ' (ಏರಿಯಲ್ ಇಟಾಲಿಕ್) ಎಂಬ ಫಾಂಟ್ ನಲ್ಲಿ ಬೇಕಾಗಿದೆ. |
07:34 | ಡಾಲರ್ ಪ್ರಾಂಪ್ಟ್ ನ ಬದಿಯಲ್ಲಿ ಹೀಗೆ ಟೈಪ್ ಮಾಡಿ: 'font echo 20 Arial italic' |
07:42 | 'Enter' ಅನ್ನು ಒತ್ತಿ. |
07:43 | ಇದು, ಟೆಕ್ಸ್ಟ್ ಅನ್ನು 'Arial Italic' ಫಾಂಟ್ ಗೆ ಪರಿವರ್ತಿಸುವುದು. |
07:48 | ಟೆಕ್ಸ್ಟ್ ನ ಬಣ್ಣವನ್ನು ಬದಲಾಯಿಸಲು, ನಾವು 'color echo' ಆನಂತರ ಆ ಬಣ್ಣದ ಹೆಸರನ್ನು ಬಳಸುವೆವು. |
07:55 | ಆದ್ದರಿಂದ ಹೀಗೆ ಟೈಪ್ ಮಾಡಿ: color echo yellow ಮತ್ತು 'Enter' ಅನ್ನು ಒತ್ತಿ. |
08:01 | ಫಾಂಟ್ ಕಲರ್ ನಲ್ಲಿಯ ಬದಲಾವಣೆಗಳನ್ನು ಗಮನಿಸಿ. |
08:05 | ಹೀಗೆಯೇ, ನೀವು ಇನ್ನೂ ಹೆಚ್ಚು ಕಮಾಂಡ್ ಗಳನ್ನು ಹುಡುಕಿ ನೋಡಿ ಮತ್ತು ಬದಲಾವಣೆಗಳನ್ನು ಗಮನಿಸಿ. |
08:11 | ಸಂಕ್ಷಿಪ್ತವಾಗಿ, |
08:13 | ಈ ಟ್ಯುಟೋರಿಯಲ್ ನಲ್ಲಿ, ನಾವು: |
08:15 | ‘ಸ್ಕ್ರಿಪ್ಟ್ ಕಮಾಂಡ್’ಗಳು ಮತ್ತು |
08:17 | 'ಸ್ಕ್ರಿಪ್ಟ್ ಕಾನ್ಸೋಲ್' ಗಳ ಬಗ್ಗೆ ಕಲಿತಿದ್ದೇವೆ. |
08:18 | ನಾವು: |
08:19 | ‘ಸ್ಕ್ರಿಪ್ಟ್ ಕಮಾಂಡ್’ಗಳನ್ನು ಬಳಸಿ, ಮಾಡೆಲ್ ನ ಡಿಸ್ಪ್ಲೇ ಪ್ರಾಪರ್ಟೀಗಳನ್ನು ಬದಲಾಯಿಸಿ ಮತ್ತು |
08:24 | ಪ್ಯಾನೆಲ್ ನ ಮೇಲೆ ಟೆಕ್ಸ್ಟ್ ನ ಸಾಲುಗಳನ್ನು ತೋರಿಸಲು ಸಹ ಕಲಿತಿದ್ದೇವೆ. |
08:28 | ಒಂದು ಅಸೈನ್ಮೆಂಟ್: |
08:30 | '3-methyl-pentane' (ಥ್ರೀ ಮಿಥೈಲ್ ಪೆಂಟೇನ್) ನ ಒಂದು ಮಾಡೆಲ್ ಅನ್ನು ರಚಿಸಿ. |
08:33 | ಈ ಕೆಳಗಿನವುಗಳನ್ನು ಮಾಡಲು, ‘ಸ್ಕ್ರಿಪ್ಟ್ ಕಮಾಂಡ್’ಗಳನ್ನು ಬಳಸಿ. |
08:36 | ಎಲ್ಲ ಹೈಡ್ರೋಜನ್ ಗಳ ಬಣ್ಣವನ್ನು ನೀಲಿ ಬಣ್ಣಕ್ಕೆ ಬದಲಾಯಿಸಿ. |
08:40 | ಎಲ್ಲ ಬಾಂಡ್ ಗಳ ಬಣ್ಣವನ್ನು ಕೆಂಪು ಬಣ್ಣಕ್ಕೆ ಬದಲಾಯಿಸಿ |
08:43 | ಮತ್ತು ಅಣುವನ್ನು ಸ್ಪಿನ್ ಆಗಲು ಸೆಟ್ ಮಾಡಿ. |
08:46 | ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವಿಡಿಯೋಅನ್ನು ನೋಡಿ. |
08:49 | ಇದು ಸ್ಪೋಕನ್ ಟ್ಯುಟೋರಿಯಲ್ ಪ್ರೋಜೆಕ್ಟ್ ನ ಸಾರಾಂಶವಾಗಿದೆ. |
08:52 | ನಿಮ್ಮಲ್ಲಿ ಸರಿಯಾದ ಬ್ಯಾಂಡ್ವಿಡ್ತ್ ಇಲ್ಲದಿದ್ದಲ್ಲಿ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು. |
08:57 | ‘ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ಟೀಮ್’: |
08:59 | ‘ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ. |
09:02 | ‘ಆನ್ ಲೈನ್ ಟೆಸ್ಟ್’ನಲ್ಲಿ ಉತ್ತೀರ್ಣರಾದವರಿಗೆ ಸರ್ಟಿಫಿಕೇಟ್ ಅನ್ನು ಕೊಡಲಾಗುತ್ತದೆ. |
09:06 | ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಇಲ್ಲಿಗೆ ಬರೆಯಿರಿ:
contact@spoken-tutorial.org |
09:13 | ‘ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್’, ‘ಟಾಕ್ ಟು ಎ ಟೀಚರ್ ಪ್ರೊಜೆಕ್ಟ್’ ನ ಒಂದು ಭಾಗವಾಗಿದೆ. |
09:17 | ಇದು ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದಿಂದ ಬೆಂಬಲಿಸಲ್ಪಟ್ಟಿದೆ. |
09:24 | ಈ ಮಿಷನ್ನಿನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿದೆ. [2] |
09:30 | IIT Bombay ಯಿಂದ, ‘ಸ್ಕ್ರಿಪ್ಟ್’ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕಿ ಗ್ಲೋರಿಯಾ.
ವಂದನೆಗಳು. |