Java-Business-Application/C2/Creating-and-viewing-inventories/Kannada
From Script | Spoken-Tutorial
Time | Narration |
00:01 | Creating and viewing inventories ಎನ್ನುವ ‘ಸ್ಪೋಕನ್ ಟ್ಯುಟೋರಿಯಲ್’ಗೆ ನಿಮಗೆ ಸ್ವಾಗತ. |
00:07 | ಈ ‘ಟ್ಯುಟೋರಿಯಲ್’ನಲ್ಲಿ ನಾವು- |
00:09 | * ‘ಅಡ್ಮಿನ್ ಪೇಜ್’ಗೆ ರಿಡೈರೆಕ್ಟ್ ಮಾಡುವುದು, ಲಾಗ್-ಇನ್ ಪೇಜನ್ನು ಮಾರ್ಪಡಿಸುವುದು, |
00:14 | * ಪುಸ್ತಕದ (book) ಎಲ್ಲ ವಿವರಗಳನ್ನು ಪಡೆದುಕೊಳ್ಳುವುದು, |
00:17 | * ಎರವಲು ಪಡೆದ (borrowed book) ಪುಸ್ತಕದ ವಿವರಗಳನ್ನು ಪಡೆದುಕೊಳ್ಳುವುದು ಹಾಗೂ |
00:20 | * ಲಾಗ್-ಇನ್ ಮಾಡಿದ ‘ಯೂಸರ್’ನು ಎರವಲು ಪಡೆದ ಪುಸ್ತಕಗಳನ್ನು ತೋರಿಸುವುದು ಇತ್ಯಾದಿಗಳನ್ನು ಕಲಿಯುವೆವು. |
00:25 | ಇಲ್ಲಿ ನಾವು- |
00:27 | * Ubuntu version 12.04 (ಉಬಂಟು ಆವೃತ್ತಿ ಹನ್ನೆರಡು ಪಾಯಿಂಟ್ ಸೊನ್ನೆ ನಾಲ್ಕು), |
00:29 | * Netbeans IDE 7.3 (ನೆಟ್ ಬೀನ್ಸ್ ಐ-ಡಿ-ಇ ಏಳು ಪಾಯಿಂಟ್ ಮೂರು), |
00:32 | * JDK 1.7 (ಜೆ-ಡಿ-ಕೆ ಒಂದು ಪಾಯಿಂಟ್ ಏಳು) ಹಾಗೂ |
00:34 | * Firefox web-browser 21.0 (ಫೈರ್ ಫಾಕ್ಸ್ ವೆಬ್ ಬ್ರೌಸರ್ ಇಪ್ಪತ್ತೊಂದು ಪಾಯಿಂಟ್ ಸೊನ್ನೆ) ಇವುಗಳನ್ನು ಬಳಸುತ್ತಿದ್ದೇವೆ. |
00:38 | ನೀವು, ನಿಮಗೆ ಇಷ್ಟವಾದ ಯಾವುದೇ ವೆಬ್-ಬ್ರೌಸರ್ ಅನ್ನು ಉಪಯೋಗಿಸಬಹುದು. |
00:42 | ಈ ಟ್ಯುಟೋರಿಯಲ್ ಅನ್ನು ಅನುಸರಿಸಲು, ನಿಮಗೆ- |
00:45 | * ‘Java Servlet’ ಗಳು ಹಾಗೂ JSP ಗಳು |
00:50 | * ಡೇಟಾಬೇಸ್ ಹಾಗೂ ಫೀಲ್ಡ್ ಗಳ ವ್ಯಾಲಿಡೇಶನ್ ಬಗ್ಗೆ ಪರಿಚಯವಿರಬೇಕು. |
00:53 | ಇಲ್ಲದಿದ್ದರೆ, ಸಂಬಂಧಿತ ಟ್ಯುಟೋರಿಯಲ್ ಗಳಿಗಾಗಿ ದಯವಿಟ್ಟು ನಮ್ಮ ವೆಬ್ಸೈಟ್ ಗೆ ಭೆಟ್ಟಿಕೊಡಿ. |
00:57 | ಈಗ, ನಾವು NetBeans IDE ಗೆ ಬದಲಾಯಿಸೋಣ. |
01:01 | ನಾನು Books ಎಂಬ ಟೇಬಲ್ ಅನ್ನು ರಚಿಸಿದ್ದೇನೆ. |
01:04 | ಟೇಬಲ್ ನಲ್ಲಿಯ ವಿವಿಧ ಫೀಲ್ಡ್ ಗಳನ್ನು ನೀವು ನೋಡಬಹುದು. |
01:08 | ಈ ಟೇಬಲ್ ನಲ್ಲಿ ನಾನು ‘10 books’ ಎಂದು ಸೇರಿಸಿದ್ದೇನೆ. |
01:12 | ಎರವಲು ಪಡೆದ ಪುಸ್ತಕಗಳನ್ನು ಸ್ಟೋರ್ ಮಾಡಲು, ನಾನು Checkout ಎಂಬ ಟೇಬಲ್ ಅನ್ನು ರಚಿಸಿದ್ದೇನೆ. |
01:18 | Checkout ಎಂಬ ಟೇಬಲ್ ನಲ್ಲಿ, ನಾನು 5 ನಮೂದುಗಳನ್ನು (entries) ಸೇರಿಸಿದ್ದೇನೆ. |
01:24 | Book ಹಾಗೂ Checkout ಗಳಿಗಾಗಿ ನಾನು ಮಾಡೆಲ್ ಗಳನ್ನು ಸಹ ರಚಿಸಿದ್ದೇನೆ. |
01:29 | Book.java ಎಂಬುದು ಬುಕ್ ನ ಮಾಡೆಲ್ ಆಗಿದೆ. |
01:32 | ಮತ್ತು Checkout.java ಎಂಬುದು ಚೆಕ್-ಔಟ್ ನ ಮಾಡೆಲ್ ಆಗಿದೆ. |
01:37 | ಈಗ ಬ್ರೌಸರ್ ಗೆ ಬನ್ನಿ. |
01:40 | ನಾವು admin (ಅಡ್ಮಿನ್) ಎಂದು ಲಾಗ್-ಇನ್ ಮಾಡೋಣ. |
01:43 | ಹೀಗೆ ಮಾಡಲು, ನಾನು UserName ಹಾಗೂ Password ಗಳನ್ನು ‘admin’ ಎಂದು ಟೈಪ್ ಮಾಡಿ ಆಮೇಲೆ Sign In ಎನ್ನುವುದರ ಮೇಲೆ ಕ್ಲಿಕ್ ಮಾಡುವೆನು. |
01:51 | ನಾವು Admin Section Page ಗೆ ಬರುತ್ತೇವೆ ಎನ್ನುವುದನ್ನು ನೋಡಬಹುದು. |
01:55 | ನಾವು ಈ ಪೇಜ್ ಗೆ ಹಿಂದಿರುಗುವೆವು. ಈಗ ನಾವು Netbeans IDE ಗೆ ಬದಲಾಯಿಸೋಣ. |
02:02 | Admin Page ಗೆ ರಿಡೈರೆಕ್ಟ್ ಮಾಡಲು, GreetingServlet ಅನ್ನು ನಾವು ಹೇಗೆ ಮಾರ್ಪಡಿಸಿದೆವು ಎಂಬುದನ್ನು ನಾವು ನೋಡುವೆವು. |
02:08 | GreetingServlet.java ಅನ್ನು ನಾವು ನೋಡೋಣ. |
02:13 | username ಮತ್ತು password ಗಳು ‘admin’ ಎಂದು ಆಗಿವೆಯೇ ಎನ್ನುವುದನ್ನು ಇಲ್ಲಿ ನಾವು ಪರಿಶೀಲಿಸುತ್ತೇವೆ. |
02:19 | ‘ಹೌದು’ ಎಂದಾದರೆ, ಆಗ ನಾವು adminsection.jsp ಗೆ ರಿಡೈರೆಕ್ಟ್ ಮಾಡುತ್ತೇವೆ. |
02:25 | RequestDispatcher ಅನ್ನು ಬಳಸಿ, ಬೇರೊಂದು ಪೇಜ್ ಗೆ ಹೇಗೆ ‘ಫಾರ್ವರ್ಡ್’ ಮಾಡುವುದೆಂದು ನಾವು ಈಗಾಗಲೇ ನೋಡಿದ್ದೇವೆ. |
02:32 | ಈಗ, ಬ್ರೌಸರ್ ಗೆ ಹಿಂದಿರುಗಿ. |
02:35 | ಇಲ್ಲಿ ನಮಗೆ ಎರಡು ಆಯ್ಕೆಗಳಿವೆ. |
02:37 | ನಾವು List Books ಗಾಗಿ ಇರುವ ‘ರೇಡಿಯೊ ಬಟನ್’ ನ ಮೇಲೆ ಕ್ಲಿಕ್ ಮಾಡುವೆವು. |
02:41 | ನಂತರ Submit ಬಟನ್ ನ ಮೇಲೆ ಕ್ಲಿಕ್ ಮಾಡುತ್ತೇವೆ. |
02:44 | ಇಲ್ಲಿ, ಎಲ್ಲ Books ಗಳ ಲಿಸ್ಟ್ ಇರುವುದನ್ನು ನಾವು ನೋಡಬಹುದು. |
02:49 | ಇದು Book Id, BookName, Author Name, ISBN, Publisher, Total Copies ಹಾಗೂ Available copies ಗಳಂತಹ ಎಲ್ಲ ವಿವರಗಳನ್ನು ಹೊಂದಿದೆ. |
02:59 | ಇದನ್ನು ಹೇಗೆ ಮಾಡಲಾಗುತ್ತದೆ ಎನ್ನುವುದನ್ನು ಈಗ ನಾನು ತೋರಿಸುವೆನು. |
03:03 | IDE ಗೆ ಬದಲಾಯಿಸಿ. |
03:05 | ಈಗ, ನಾವು ‘adminsection ಡಾಟ್ jsp’ ಗೆ ಬರೋಣ. |
03:10 | ಇಲ್ಲಿ ಎರಡು ‘ರೇಡಿಯೊ ಬಟನ್’ಗಳಿವೆ. |
03:14 | ಮೊದಲನೆಯದು ಎಲ್ಲ books ಗಳನ್ನು ಲಿಸ್ಟ್ ಮಾಡಲು ಇರುತ್ತದೆ. |
03:19 | ‘adminsection ಡಾಟ್ jsp’ಯಲ್ಲಿ, ‘form action’ ಇಕ್ವಲ್ ಟು ‘AdminSection’ ಎಂದು ಇರುವುದನ್ನು ನಾವು ನೋಡಬಹುದು. |
03:28 | ಈಗ, ‘AdminSection ಡಾಟ್ java’ ಅನ್ನು ಓಪನ್ ಮಾಡಿ. |
03:32 | ಇಲ್ಲಿ, ನಾವು ಕ್ಲಿಕ್ ಮಾಡಿದ ಆಯ್ಕೆಯನ್ನು ಇದು ಪರಿಶೀಲಿಸುತ್ತದೆ. |
03:36 | ನಾವು List Books ನ ಮೇಲೆ ಕ್ಲಿಕ್ ಮಾಡಿದ್ದೇವೆ. |
03:39 | ಹೀಗಾಗಿ, ‘ಕ್ವೆರೀ’ಯ ಈ ಭಾಗವು ಎಕ್ಸಿಕ್ಯೂಟ್ ಮಾಡಲ್ಪಡುವುದು. |
03:44 | Books table ನಿಂದ ‘ಬುಕ್’ಗಳನ್ನು ಪಡೆದುಕೊಳ್ಳಲು, ನಾವು ‘ಕ್ವೆರೀ’ಯನ್ನು ಎಕ್ಸಿಕ್ಯೂಟ್ ಮಾಡುತ್ತೇವೆ. |
03:49 | ನಂತರ, ಪುಸ್ತಕಗಳ ವಿವರಗಳನ್ನು ಸ್ಟೋರ್ ಮಾಡಲು, ನಾವು ArrayList ಅನ್ನು ಕ್ರಿಯೇಟ್ ಮಾಡುತ್ತೇವೆ. |
03:55 | ಆಮೇಲೆ, ನಾವು result set ನ ಮೂಲಕ ‘ಇಟರೇಟ್’ ಮಾಡುತ್ತೇವೆ. |
03:59 | ನಾವು Book ಎನ್ನುವ ಆಬ್ಜೆಕ್ಟ್ ಅನ್ನು ಕ್ರಿಯೇಟ್ ಮಾಡುತ್ತೇವೆ. |
04:03 | Book ಆಬ್ಜೆಕ್ಟ್ ನಲ್ಲಿ, ನಾವು Book ID ಯನ್ನು ಸೆಟ್ ಮಾಡುತ್ತೇವೆ. |
04:08 | ಹೀಗೆಯೇ, Book ಆಬ್ಜೆಕ್ಟ್ ನಲ್ಲಿ, ‘ಬುಕ್’ನ ಉಳಿದ ಅಟ್ರಿಬ್ಯೂಟ್ ಗಳನ್ನು ನಾವು ಸೆಟ್ ಮಾಡುತ್ತೇವೆ. |
04:16 | ಆಮೇಲೆ ನಾವು, book ಆಬ್ಜೆಕ್ಟ್ ಅನ್ನು, books ಎನ್ನುವ ಲಿಸ್ಟ್ ನಲ್ಲಿ ಸೇರಿಸುತ್ತೇವೆ. |
04:21 | ಆಮೇಲೆ ನಾವು, request ನಲ್ಲಿ, ArrayList books ಅನ್ನು ಸೆಟ್ ಮಾಡುತ್ತೇವೆ. |
04:26 | ನಂತರ RequestDispatcher ಅನ್ನು ಬಳಸಿ, request ಅನ್ನು listBooks.jsp ಗೆ ಫಾರ್ವರ್ಡ್ ಮಾಡುತ್ತೇವೆ. |
04:33 | ಈಗ ನಾವು listBooks.jsp ಗೆ ಬರುತ್ತೇವೆ. |
04:38 | ಈ ಪೇಜ್ನಲ್ಲಿ ‘ಅಡ್ಮಿನ್’, ಪುಸ್ತಕಗಳ ಲಿಸ್ಟ್ ಅನ್ನು ನೋಡಲು ಸಾಧ್ಯವಿದೆ. |
04:43 | ಇಲ್ಲಿ, ಮೊದಲು, ನಾವು request ನಿಂದ books ಅನ್ನು ಪಡೆದುಕೊಳ್ಳುತ್ತೇವೆ. |
04:48 | ಈ HTML ಟೇಬಲ್, ಪುಸ್ತಕಗಳ (books) ವಿವರಗಳನ್ನು ತೋರಿಸುವುದು. |
04:54 | ಹೀಗೆ, ನಾವು book list ಮೂಲಕ ‘ಇಟರೇಟ್’ ಮಾಡುವೆವು. |
04:58 | ಇಲ್ಲಿ ನಾವು ಪುಸ್ತಕದ Book ID ಯನ್ನು ತೋರಿಸುತ್ತೇವೆ. |
05:02 | ಹೀಗೆಯೇ, ನಾವು book ನ ಇನ್ನಿತರ ಅಟ್ರಿಬ್ಯೂಟ್ ಗಳನ್ನು ತೋರಿಸುತ್ತೇವೆ. |
05:07 | ಬುಕ್ ಗಳ ಲಿಸ್ಟನ್ನು ನಾವು ಈ ರೀತಿಯಾಗಿ ತೋರಿಸುತ್ತೇವೆ. |
05:11 | ಈಗ, ಬ್ರೌಸರ್ ಗೆ ಹಿಂದಿರುಗಿ. |
05:14 | List Borrowed Books ಎನ್ನುವುದರ ಮೇಲೆ ಕ್ಲಿಕ್ ಮಾಡಿ. |
05:17 | ಮತ್ತು Submit ಬಟನ್ ನ ಮೇಲೆ ಕ್ಲಿಕ್ ಮಾಡಿ. |
05:20 | ‘ಇಶ್ಯೂ’ ಮಾಡಲಾದ ಎಲ್ಲ Books ಗಳ ಒಂದು ಲಿಸ್ಟ್ ಅನ್ನು ನಾವು ನೋಡುತ್ತೇವೆ. |
05:24 | ಇದು, Transaction ID, Book ID ಮತ್ತು Username ಗಳಂತಹ ವಿವರಗಳನ್ನು ಹೊಂದಿದೆ. |
05:29 | ಈಗ, ನಾನು IDE ಗೆ ಹಿಂದಿರುಗುವೆನು, |
05:32 | ಮತ್ತು ಇದರ ಕೋಡ್ ಅನ್ನು ನಿಮಗೆ ತೋರಿಸುವೆನು. |
05:35 | AdminSection.java ಗೆ ಹೋಗಿ. |
05:38 | ನಾವು List Borrowed Books ನ ಮೇಲೆ ಕ್ಲಿಕ್ ಮಾಡಿದ್ದೆವು. |
05:42 | ಹೀಗಾಗಿ, menuSelection ಇಕ್ವಲ್ ಟು List Borrowed books. |
05:47 | ಈ ಹಂತಗಳು, List Books ಗಾಗಿ ನಾವು ನೋಡಿದಂತೆಯೇ ಆಗಿವೆ. |
05:53 | Checkout table ನಿಂದ ‘ಬಾರೋ’ ಮಾಡಿದ ಪುಸ್ತಕಗಳ (borrowed books) ವಿವರಗಳನ್ನು ತರಲು, ನಾವು ಕ್ವೆರೀಯನ್ನು ಎಕ್ಸಿಕ್ಯೂಟ್ ಮಾಡುತ್ತೇವೆ. |
05:59 | ನಂತರ, ‘borrowed books’ನ ಮೂಲಕ ನಾವು ‘ಇಟರೇಟ್’ ಮಾಡುತ್ತೇವೆ. |
06:02 | ಮತ್ತು ಇದನ್ನು request ನಲ್ಲಿ, Checkout ಅಟ್ರಿಬ್ಯೂಟ್ ಎಂದು ಸೆಟ್ ಮಾಡುತ್ತೇವೆ. |
06:07 | ಈಗ ನಾವು 'listBorrowedBooks.jsp’ ಗೆ ಬರುತ್ತೇವೆ. |
06:12 | ಇಲ್ಲಿ ನಾವು, request ನಿಂದ checkout ಅನ್ನು ಪಡೆದುಕೊಳ್ಳುತ್ತೇವೆ. |
06:17 | Checkout ಲಿಸ್ಟ್ ನ ಮೂಲಕ ನಾವು ‘ಇಟರೇಟ್’ ಮಾಡುತ್ತೇವೆ. |
06:20 | ಮತ್ತು, ಇಲ್ಲಿ ನಾವು Checkout ನ ಅಟ್ರಿಬ್ಯೂಟ್ ಗಳನ್ನು ತೋರಿಸುತ್ತೇವೆ. |
06:25 | Borrowed Books ಅನ್ನು ನಾವು ಹೀಗೆ ಪ್ರದರ್ಶಿಸುತ್ತೇವೆ. |
06:28 | ಈಗ, ಮತ್ತೆ ಬ್ರೌಸರ್ ಗೆ ಬದಲಾಯಿಸಿ. |
06:30 | ‘borrowed books’ ಪೇಜ್ನಲ್ಲಿ, ಇನ್ನೊಂದು ಲಿಸ್ಟ್ ಇದೆ. |
06:36 | ಇದು, ‘ಇಸ್ಸ್ಯೂ’ ಮಾಡಲಾದ ಮತ್ತು ‘ಕರೆಂಟ್ ಡೇಟ್’, ‘ರಿಟರ್ನ್ ಡೇಟ್’ಅನ್ನು ಮೀರಿದ books ಗಳ ಲಿಸ್ಟ್ ಆಗಿದೆ. |
06:43 | ‘ಕೋಡ್’ ಅನ್ನು ನೋಡಲು IDE ಗೆ ಬದಲಾಯಿಸಿ. |
06:46 | ನಾವು Borrowed Books ಗಾಗಿ ಮಾಡಿದ ರೀತಿಯಲ್ಲಿಯೇ ಇದನ್ನು ಮಾಡಲಾಗಿದೆ. |
06:50 | SQL ‘ಕ್ವೆರೀ’ಯಲ್ಲಿ ಮಾತ್ರ ವ್ಯತ್ಯಾಸವು ಇರುತ್ತದೆ. |
06:56 | ‘ಕ್ವೆರೀ’ಯಲ್ಲಿ ನಾವು, ‘return_date less than now() order by transaction_Id’ ಎನ್ನುವ ಕಂಡಿಶನ್ ಅನ್ನು ಕೊಡುತ್ತೇವೆ. |
07:05 | ಈಗ ನಾನು, ಸಾಮಾನ್ಯ ಬಳಕೆದಾರನಿಗಾಗಿ (user) ಇಂಟರ್ಫೇಸ್ ಅನ್ನು ನಿಮಗೆ ತೋರಿಸುವೆನು. |
07:10 | ಆದ್ದರಿಂದ, ಬ್ರೌಸರ್ ಗೆ ಬದಲಾಯಿಸಿ. |
07:12 | - ‘ಲಾಗ್-ಇನ್ ಪೇಜ್’ ಗೆ ಹಿಂದಿರುಗಿ. |
07:15 | ನಾನು ‘mdhusein’ ಎಂದು ಲಾಗ್-ಇನ್ ಮಾಡುವೆನು. |
07:20 | ಪಾಸ್ವರ್ಡ್ ಅನ್ನು ‘welcome’ ಎಂದು ಟೈಪ್ ಮಾಡಿ. |
07:22 | ಮತ್ತು ‘Sign In’ ಮೇಲೆ ಕ್ಲಿಕ್ ಮಾಡಿ. |
07:25 | ನಾವು Success Greeting Page ಅನ್ನು ಪಡೆಯುತ್ತೇವೆ. |
07:28 | ಇದು, ‘ಯೂಸರ್’ನಿಂದ ಈಗ ಸಧ್ಯಕ್ಕೆ ಎರವಲು ಪಡೆದ ‘ಬುಕ್’ಗಳನ್ನು ಹೊಂದಿದೆ. |
07:32 | ಇದು Transaction ID, User Name, Book ID ಹಾಗೂ Return Date ನಂತಹ ವಿವರಗಳನ್ನು ಹೊಂದಿದೆ. |
07:39 | ಈಗ, ನಾವು IDE ಗೆ ಹಿಂದಿರುಗೋಣ. |
07:43 | ಈಗ, ನಾವು GreetingServlet.java ಗೆ ಹೋಗುತ್ತೇವೆ. |
07:47 | ‘ಅಡ್ಮಿನ್’ಗಾಗಿ ಮಾಡಿದಂತೆಯೇ, ನಾವು ‘ಇಶ್ಯೂ’ ಮಾಡಲಾದ (issued) ಪುಸ್ತಕಗಳನ್ನು ತೋರಿಸುತ್ತೇವೆ. |
07:53 | ಇಲ್ಲಿರುವ ವ್ಯತ್ಯಾಸವೆಂದರೆ, ನಾವು ಲಾಗ್-ಇನ್ ಮಾಡಿದ ಯೂಸರ್ ನಿಗಾಗಿ ಪುಸ್ತಕಗಳನ್ನು ತೋರಿಸಬೇಕಾಗಿದೆ. |
08:02 | ಈ ಲೈನ್ ನಿಂದ ನನಗೆ username ಸಿಗುತ್ತದೆ. |
08:05 | ನಂತರ, |
08:10 | username ಹಾಗೂ ಲಾಗ್-ಇನ್ ಮಾಡಿದ ಯೂಸರ್ ಎರಡೂ ಒಂದೇ ಆಗಿದ್ದರೆ, ನಾವು ‘ಬಾರೋ’ ಮಾಡಿದ ಪುಸ್ತಕಗಳ ವಿವರಗಳನ್ನು ಪಡೆದುಕೊಳ್ಳುತ್ತೇವೆ. |
08:14 | ಹೀಗಾಗಿ, ನಾವು ಆ ‘ಯೂಸರ್’ಗಾಗಿ ‘ಇಸ್ಸ್ಯೂ’ ಮಾಡಲಾದ ಪುಸ್ತಕಗಳ ಲಿಸ್ಟ್ ಅನ್ನು ಪಡೆಯುತ್ತೇವೆ. |
08:20 | ಆಮೇಲೆ, ‘successGreeting ಡಾಟ್ jsp’ ಯಲ್ಲಿ, ನಾವು ಲಿಸ್ಟ್ ಅನ್ನು ಪ್ರದರ್ಶಿಸುತ್ತೇವೆ. |
08:27 | ನಿಮ್ಮ ‘successGreeting ಡಾಟ್ jsp’ ಹೀಗೆ ಕಾಣುವುದು. |
08:32 | ಈ ಟ್ಯುಟೋರಿಯಲ್’ನಲ್ಲಿ ನಾವು, |
08:35 | * ‘ಅಡ್ಮಿನ್ ಪೇಜ್’ಗೆ ರಿಡೈರೆಕ್ಟ್ ಮಾಡಲು ಲಾಗ್-ಇನ್ ಪೇಜನ್ನು ಮಾರ್ಪಡಿಸುವುದು |
08:39 | * ಪುಸ್ತಕದ ವಿವರಗಳನ್ನು ಪಡೆದುಕೊಳ್ಳುವುದು |
08:42 | *ಎರವಲು ಪಡೆದ ಪುಸ್ತಕದ ವಿವರಗಳನ್ನು ಪಡೆದುಕೊಳ್ಳುವುದು |
08:45 | ಮತ್ತು * ಲಾಗ್-ಇನ್ ಮಾಡಿದ ‘ಯೂಸರ್’ನು ಎರವಲು ಪಡೆದ (borrow) ಪುಸ್ತಕಗಳನ್ನು ತೋರಿಸುವುದು ಇತ್ಯಾದಿಗಳನ್ನು ಕಲಿತಿದ್ದೇವೆ. |
08:50 | ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಲಿಂಕ್ನಲ್ಲಿ ಲಭ್ಯವಿರುವ ವೀಡಿಯೋವನ್ನು ನೋಡಿ. |
08:56 | ಇದು ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ಸಾರಾಂಶವಾಗಿದೆ. |
08:59 | ನಿಮಗೆ ಒಳ್ಳೆಯ ‘ಬ್ಯಾಂಡ್ವಿಡ್ತ್’ ಸಿಗದಿದ್ದರೆ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು. |
09:04 | ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ತಂಡವು: |
09:06 | ‘ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ. |
09:09 | ಆನ್-ಲೈನ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. |
09:13 | ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ. contact@spoken-tutorial.org |
09:20 | ‘ಸ್ಪೋಕನ್ ಟ್ಯುಟೋರಿಯಲ್’ ಪ್ರಕಲ್ಪವು, ‘ಟಾಕ್ ಟು ಎ ಟೀಚರ್’ ಪ್ರಕಲ್ಪದ ಒಂದು ಭಾಗವಾಗಿದೆ. |
09:24 | ಇದು ಭಾರತ ಸರ್ಕಾರದ ICT, MHRD ಮೂಲಕ ‘ರಾಷ್ಟ್ರೀಯ ಸಾಕ್ಷರತಾ ಮಿಶನ್’ನ ಆಧಾರವನ್ನು ಪಡೆದಿದೆ. |
09:30 | ಈ ಮಿಶನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗೆ ತೋರಿಸಿದ ಲಿಂಕ್ ನಲ್ಲಿ ಲಭ್ಯವಿದೆ. http://spoken-tutorial.org/NMEICT-Intro |
09:40 | Library Management System ಎಂಬುದು ಪ್ರಮುಖ ಸಾಫ್ಟ್ವೇರ್ ಆದ MNC ಯ, Corporate Social Responsibility programme ನ ಮೂಲಕದ ಕೊಡುಗೆಯಾಗಿದೆ. |
09:49 | ಈ ಸ್ಪೋಕನ್ ಟ್ಯುಟೋರಿಯಲ್ ಗಾಗಿ ಅವರು ವಿಷಯವನ್ನು ಸಹ ಮೌಲ್ಯಾಂಕಿತಗೊಳಿಸಿದ್ದಾರೆ (validated). |
09:53 | IIT Bombay ಯಿಂದ, ‘ಸ್ಕ್ರಿಪ್ಟ್’ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ವಾಸುದೇವ. |
09:57 | ವಂದನೆಗಳು. |