Java/C2/Using-this-keyword/Kannada
From Script | Spoken-Tutorial
Time | Narration |
00:02 | ಜಾವಾ-ದಲ್ಲಿthisದಿಸ್ ಕೀ ವರ್ಡ್ ಅನ್ನು ಉಪಯೋಗಿಸುವ ಕುರಿತಾದ ಟ್ಯುಟೋರಿಯಲ್ ಗೆ ನಿಮಗೆಲ್ಲಾ ಸ್ವಾಗತ. |
00:07 | ಈ ಟ್ಯುಟೋರಿಯಲ್ ನಲ್ಲಿ ನಾವು |
00:09 | this ದಿಸ್ ಕೀವರ್ಡ್ –ಅನ್ನು ಉಪಯೋಗಿಸುವದು |
00:11 | thisದಿಸ್ ಕೀವರ್ಡ್-ಅನ್ನು field ಫೀಲ್ಡ್ ಗಳ ಜೊತೆಗೆ ಉಪಯೋಗಿಸುವುದು. |
00:14 | “thisದಿಸ್” ಕೀವರ್ಡ್-ಅನ್ನು ಕನ್ಸ್-ಟ್ರಕ್ಟರ್-ಗಳ ಬದಲಾವಣೆಗಾಗಿ ಉಪಯೋಗಿಸುವದನ್ನು ಕಲಿಯುತ್ತೇವೆ. |
00:17 | ಇಲ್ಲಿ ನಾವು,
Ubuntu version 11.10(ಉಬಂಟು ವರ್ಶನ್ ೧೧.೧೦) jdk 1.6 (ಜೆ.ಡಿ.ಕೆ ೧.೬) Eclipse 3.7.0 (ಎಕ್ಲಿಪ್ಸ್ ೩.೭.೦) ಗಳನ್ನು ಉಪಯೋಗಿಸುತ್ತೇವೆ. |
00:28 | ಈ ಟ್ಯುಟೋರಿಯಲ್ ಅನ್ನು ಕಲಿಯಲು ನೀವು, |
00:30 | ಜಾವಾದಲ್ಲಿ ಎಕ್ಲಿಪ್ಸ್ ಅನ್ನು ಉಪಯೋಗಿಸಿ ಕನ್ಸ್-ಟ್ರಕ್ಟರ್ ಗಳನ್ನು ರಚಿಸುವ ಕುರಿತು ತಿಳಿದಿರಬೇಕು. |
00:34 | ತಿಳಿಯದಿದ್ದರೆ ಸಂಬಂಧಪಟ್ಟ ಟ್ಯುಟೊರಿಯಲ್ ಗಾಗಿ ಕೆಳಕಂಡ ಅಂತರ್ಜಾಲವನ್ನು ಭೇಟಿಕೊಡಿ. |
00:40 | ಈಗ ನಾವು “thisದಿಸ್” ಕೀವರ್ಡ್-ನ ಉಪಯೋಗವನ್ನು ನೋಡೋಣ. |
00:44 | ಕನ್ಸ್-ಟ್ರಕ್ಟರ್-ನಲ್ಲಿ thisದಿಸ್ಎನ್ನುವದು ಪ್ರಸ್ತುತ objectಒಬ್ಜೆಕ್ಟ್ ಅನ್ನು ತಿಳಿಸುತ್ತದೆ. |
00:48 | thisದಿಸ್ ಅನ್ನು ಉಪಯೋಗಿಸಿ ಕನ್ಸ್-ಟ್ರಕ್ಟರ್ ನಲ್ಲಿ ನಾವು ಪ್ರಸ್ತುತ ಒಬ್ಜೆಕ್ಟ್ ನ ಯಾವುದೇ ಮೆಂಬರ್-ಅನ್ನು ರೆಫರ್ ಮಾಡಬಹುದು. |
00:55 | ಈಗ ನಾವು “ದಿಸ್ this” ಕೀವರ್ಡ್-ನ ಉಪಯೋಗವನ್ನು ಫೀಲ್ಡ್-ಗಳ ಜೊತೆಗೆ ನೋಡೊಣ. |
01:00 | thisದಿಸ್ ಕೀವರ್ಡ್ ಹೆಸರಿನ ಗೊಂದಲಗಳನ್ನು ತಪ್ಪಿಸಲು ಸಹಾಯಮಾಡುತ್ತದೆ. |
01:07 | ನಾವು ಇಲ್ಲಿ ಅಂತಹ ಉದಾಹರಣೆ ಒಂದನ್ನು ನೋಡಬಹುದು. |
01:10 | ಅದಕ್ಕಾಗಿ ನಾವು ಎಕ್ಲಿಪ್ಸ್ ಅನ್ನು ತೆರೆಯೋಣ. |
01:17 | Student class ಎನ್ನುವ ಹಿಂದಿನ ಟ್ಯುಟೊರಿಯಲ್ ನ ರಚನೆಯನ್ನು ತೆರೆಯೋಣ. |
01:23 | ಡೀಫಾಳ್ಟ್ ಕನ್ಸ್-ಟ್ರಕ್ಟರ್ ಅನ್ನು ಕಮೆಂಟ್ ಮಾಡಿ ಮತ್ತು ಕನ್ಸ್ಟ್ರಕ್ಟರ್ ಅನ್ನು ಒಂದು ಪೆರಾಮೀಟರ್ ಜೊತೆಗೆ ಕಮೆಂಟ್ ಮಾಡಿ. |
01:40 | ಮೊದಲ ಎರಡು ಒಬ್ಜೆಕ್ಟ್ ಗಳ ಕೋಡ್ ಅನ್ನೂ ಕಮೆಂಟ್ ಮಾಡಿ. |
02:03 | ಈಗ “ಪೆರಾಮೀಟರೈಜ್ಡ್ ಕನ್ಸ್-ಟ್ರಕ್ಟರ್” ಅನ್ನು ಗುರುತಿಸಿ. |
02:11 | the_roll_number ಮತ್ತು the_name ಇವು ಕನ್ಸ್-ಟ್ರಕ್ಟರ್-ಗೆ ಕಳಿಸಿದ ಆರ್ಗ್ಯುಮೆಂಟ್-ಗಳಾಗಿವೆ. |
02:20 | roll_number ಮತ್ತು name ಗಳು ಇನ್ಸ್ಟೆಂಟ್ ವೆರಿಯೆಬಲ್-ಗಳು. |
02:26 | ಈಗ ನಾನು roll_number ಮತ್ತುnameಗಳಿಗೆ ಆರ್ಗ್ಯುಮೆಂಟ್ ಗಳನ್ನು ಬದಲಿಸುತ್ತೇನೆ. |
02:39 | ಹಾಗಾಗಿ ನಾವು ಕನ್ಸ್-ಟ್ರಕ್ಟರ್-ನಲ್ಲಿ : |
02:42 | roll_number ಸಮ roll_number ಮತ್ತು name ಸಮ name ಎಂದು ಹೊಂದಿದ್ದೇವೆ. |
02:55 | ಫೈಲ್ ಅನ್ನು ಸೇವ್ ಮಾಡಿ ಮತ್ತು ರನ್ ಮಾಡಿ. ಅದಕ್ಕಾಗಿ Ctrl S ಒತ್ತಿ ಮತ್ತು Ctrl F11 ಒತ್ತಿ. |
03:04 | ನಾವು ಈ ಕೆಳಗಿನ ಪರಿಣಾಮವನ್ನು ಪಡೆಯುತ್ತಿದ್ದೇವೆ: |
03:07 | I am a Parameterized Constructor”
0 null |
03:12 | ಈಗ ಕೋಡ್ ಗೆ ಬನ್ನಿರಿ. |
03:17 | ನಾವು ಕೋಡ್ ನಲ್ಲಿ ೨ ಎಚ್ಚರಿಕೆ ಗಳನ್ನು ಕಾಣುತ್ತಿದ್ದೇವೆ. |
03:20 | ನಿಮ್ಮ ಮೌಸ್ ಎಚ್ಚರಿಕೆ ಚಿಹ್ನೆಯ ಮೇಲಿದೆ. |
03:23 | The assignment to the variable roll_number has no effect. ಎಂದು ನಾವು ಕಾಣಬಹುದು. |
03:29 | ಮತ್ತು The assignment to the variable name has no effect ಎಂದೂ ಕಾಣಬಹುದು. |
03:33 | ಇದು ಏಕೆಂದರೆ ಕನ್ಸ್-ಟ್ರಕ್ಟರ್ ಗಳಾದ roll_number ಮತ್ತು name ಗಳು ಲೊಕಲ್ ವೇರಿಯೇಬಲ್ ಗಳಾಗಿವೆ. |
03:40 | ಲೋಕಲ್ ವೇರಿಯೇಬಲ್ ಅಂದರೆ ಒಂದು ಮೆಥಡ್ ಅಥವಾ ಬ್ಲೋಕ್ ಗಳಲ್ಲಿ ಪಡೆಯಬಹುದಾದ ವೇರಿಯೇಬಲ್ ಎಂದರ್ಥ. |
03:47 | ಇಲ್ಲಿ, roll_number ಮತ್ತು name ಇವು 11 ಮತ್ತು Raju ಎಂಬ ಬೆಲೆ ಪಡೆಯುತ್ತದೆ. |
03:54 | ಏಕೆಂದರೆ ನಾವು11 ಮತ್ತು Raju ಎಂಬ ಬೆಲೆಯನ್ನು ಕನ್ಸ್-ಟ್ರಕ್ಟರ್ ಗೆ ಕಳಿಸಿದ್ದೇವೆ. |
04:01 | ಆದರೆ ಒಮ್ಮೆ ಅವು ಕನ್ಸ್-ಟ್ರಕ್ಟರ್ ನಿಂದ ಹೊರಬಂದರೆ ಅವನ್ನು ಬಳಸಲು ಆಗುವದಿಲ್ಲ. |
04:06 | ಹಾಗೇ roll_number ಮತ್ತು name ಎನ್ನುವದು ಇನ್ಸ್ಟೆನ್ಸ್-ವೇರಿಯೇಬಲ್ ಆಗಿದೆ. |
04:13 | ಅವು ಒಮ್ಮೆ ಒಬ್ಜೆಕ್ಟ್ ರಚನೆ ಆದಾಗಲೇ 0 ಮತ್ತುnull ಬೆಲೆಗೆ ಇನಿಶಿಯಲೈಜ್ ಆಗಿದೆ. |
04:18 | ಹಾಗಾಗಿ ನಾವು 0 ಮತ್ತು null ಎಂಬ ಫಲಿತಾಂಶವನ್ನು ಪಡೆದಿದ್ದೇವೆ. |
04:21 | ಈಗ ನಾವು ಕನ್ಸ್-ಟ್ರಕ್ಟರ್ ನಲ್ಲಿ ಸಣ್ಣ ಬದಲಾವಣೆಯನ್ನು ಮಾಡೋಣ. |
04:29 | ಅದಕ್ಕಾಗಿ this . roll_number = roll_number ಎಂದು ಟಾಯಿಪ್ ಮಾಡಿ. |
04:37 | ಮತ್ತು this .name = name ಎಂದೂ ಕೂಡಾ ಟಾಯಿಪ್ ಮಾಡಿ. |
04:44 | ಈಗ ಫಾಯಿಲ್ ಅನ್ನು ಸೇವ್ ಮಾಡಿ ಮತ್ತು ರನ್ ಮಾಡಿ . ಅದಕ್ಕಾಗಿ ctrl S ಮತ್ತು Ctrl F11 ಗಳನ್ನು ಒತ್ತಿರಿ. |
04:51 | ನಾವು ಈಕೆಳಗಿನ ಪರಿಣಾಮವನ್ನು ಪಡೆದಿದ್ದೇವೆ. |
04:53 | I am Parameterized Constructor
11 ಮತ್ತು Raju |
04:58 | ಇದಕ್ಕೆ ಕಾರಣ this.roll_number ಮತ್ತು this.name ಇವು roll_number ಮತ್ತು name ಇವಕ್ಕೆ ರೆಫರ್ ಆಗಿವೆ. |
05:12 | ಮತ್ತು ಇಲ್ಲಿ roll_number ಮತ್ತು name ಗಳು ಮೆಥಡ್-ನಲ್ಲಿ ಕಳಿಸಲ್ಪಟ್ಟ ಆರ್ಗ್ಯುಮೆಂಟ್-ಗಳಾಗಿವೆ. |
05:19 | ಲೋಕಲ್ ಮತ್ತು ಇನ್ಸ್ಟೆನ್ಸ್ ವೇರಿಯೇಬಲ್-ಗಳ ನಡುವಿನ ಗೊಂದಲದ ನಿವಾರಣೆಗೆ ನಾವು ಈ ಕೀವರ್ಡ್ ಅನ್ನು ಉಪಯೋಗಿಸುತ್ತೇವೆ. |
05:29 | ಈಗ ನಾವು ಕನ್ಸ್-ಟ್ರಕ್ಟರ್ ಗಳ ಬದಲಾವಣೆಗಾಗಿ “thisದಿಸ್” ಕೀವರ್ಡ್ ನ ಉಪಯೋಗವನ್ನು ಕುರಿತು ತಿಳಿಯೋಣ. |
05:34 | ನಾವು “thisದಿಸ್” ಕೀವರ್ಡ್ ಅನ್ನು ಕನ್ಸ್-ಟ್ರಕ್ಟರ್ ಒಂದರ ಒಳಗೆ ಮತ್ತೊಂದನ್ನು ಕಾಲ್ ಮಾಡಲು ಉಪಯೋಗಿಸಬಹುದು. |
05:39 | ಆದರೆ ಕನ್ಸ್-ಟ್ರಕ್ಟರ್ ಮಾತ್ರ ಅದೇ ಕ್ಲಾಸ್-ನಲ್ಲಿ ಇರಬೇಕು. |
05:43 | ಇದನ್ನು explicit constructor invocation (ಎಕ್ಸ್ಪ್ಲಿಸಿಟ್ ಕನ್ಸ್-ಟ್ರಕ್ಟರ್ ಇನ್ವೋಕೇಶನ್ ) ಎನ್ನುವರು. |
05:46 | ಸರಿ, ನಾವೀಗ ಹಿಂದೆ ಮಾಡಿ ಇಟ್ಟಿರುವ Student ಕ್ಲಾಸ್-ಗೆ ಮರಳೋಣ. |
05:53 | ಅದಕ್ಕಾಗಿ ಈಗ ಕಮೆಂಟ್ ಗಳನ್ನು ತೆಗೆಯಿರಿ. |
06:28 | ಮೊದಲ ಎರಡು ಕನ್ಸ್-ಟ್ರಕ್ಟರ್-ಗಳಲ್ಲಿ ಇನ್ಸ್ಟೆನ್ಸ್ ವೇರಿಯೇಬಲ್ ಗಳನ್ನು ಅವುಗಳ ಬೆಲೆ ನಿಗಧಿಪಡಿಸಲು ಈಗ ಇವನ್ನು ಕಮೆಂಟ್ ಮಾಡಿ. |
06:52 | ನಂತರ ದ್ವಿತೀಯ ಮತ್ತು ತೃತೀಯ ಒಬ್ಜೆಕ್ಟ್-ಗಳನ್ನು ರಚಿಸುವ ಭಾಗವನ್ನು ಕಮೆಂಟ್ ಮಾಡಿ. |
07:08 | ಈಗ ಮೊದಲು ಪೆರಾಮೀಟರ್-ಗಳಿಲ್ಲದ ಕನ್ಸ್-ಟ್ರಕ್ಟರ್ ಗೆ ಬನ್ನಿ. |
07:16 | ಕರ್ಲಿ ಬ್ರೆಕೆಟ್-ಗಳ ನಂತರ ಬ್ರೆಕೆಟ್-ನಲ್ಲಿ11 ಮತ್ತು ಸೆಮಿಕೋಲನ್ ಗಳನ್ನು ಬರೆಯಿರಿ. |
07:28 | ಎರಡನೇ ಕನ್ಸ್-ಟ್ರಕ್ಟರ್ ನಲ್ಲಿ “ this(ದಿಸ್) ಬ್ರೆಕೆಟ್-ನಲ್ಲಿ 11 ಕೊಮಾ ಡಬಲ್-ಕ್ವೋಟ್ಸ್-ನಲ್ಲಿ Raju ಸೆಮಿಕೋಲನ್” ಎಂದು ಟಾಯಿಪ್ ಮಾಡಿ. |
07:42 | ಈಗ ಫಾಯಿಲ್-ಅನ್ನು ಸೇವ್-ಮಾಡಿ ರನ್-ಮಾಡಿ. ಅದಕ್ಕಾಗಿ Ctrl S ಮತ್ತು Ctrl F11 ಗಳನ್ನು ಒತ್ತಿ. |
07:49 | ನಾವು ಈ ಕೆಳಗಿನ ಪರಿಣಾಮವನ್ನು ಪಡೆದಿದ್ದೇವೆ. |
07:51 | I am a Parameterized Constructor |
07:54 | I am a constructor with a single parameter |
07:57 | I am Default Constructor
11 ಮತ್ತು Raju |
08:02 | ಈಗ ನಾನು ಫಲಿತಾಂಶದ ಕುರಿತು ವಿವರಿಸುತ್ತೇನೆ. |
08:08 | ನಾವು ಒಬ್ಜೆಕ್ಟ್-ಅನ್ನು ರಚಿಸಿದಾಗ , ಅದಕ್ಕೆ ಸಂಬಂಧಿಸಿದ ಕನ್ಸ್-ಟ್ರಕ್ಟರ್ ಕಾಲ್ ಆಗುತ್ತದೆ. |
08:13 | ಇಲ್ಲಿನ ಕನ್ಸ್-ಟ್ರಕ್ಟರ್, ಆರ್ಗ್ಯೂಮೆಂಟ್ ಇಲ್ಲದ ಕನ್ಸ್-ಟ್ರಕ್ಟರ್ ಆಗಿದೆ. |
08:20 | ಇಲ್ಲಿ ನಿಯಂತ್ರಣ ಕನ್ಸ್ಟ್ರಕ್ಟರ್-ನ ಮೊದಲ ಸಾಲಿಗೆ ಬರುತ್ತದೆ. |
08:24 | ಇದು “this ಬ್ರೆಕೆಟ್-ನಲ್ಲಿರುವ 11” ಎಂಬ ಸ್ಟೇಟ್-ಮೆಂಟ್ ಅನ್ನು ಸಂಧಿಸುತ್ತದೆ. |
08:26 | ಆದ್ದರಿಂದ ಇದು ಸಿಂಗಲ್-ಇಂಟಿಜರ್-ಆರ್ಗ್ಯೂಮೆಂಟ್ ಅನ್ನು ಸ್ವೀಕರಿಸುವ ಕನ್ಸ್-ಟ್ರಕ್ಟರ್ ಅನ್ನು ಕಾಲ್ ಮಾಡುತ್ತದೆ. |
08:36 | ನಂತರ ನಿಯಂತ್ರಣವು “ಬ್ರೆಕೆಟ್-ನಲ್ಲಿರುವ 11 ಕೊಮಾ Raju” ಎಂಬಲ್ಲಿಗೆ ಬರುತ್ತದೆ. |
08:44 | ಆದ್ದರಿಂದ ಇದು ಒಂದು ಇಂಟೀಜರ್ ಮತ್ತು ಒಂದು ಸ್ಟ್ರಿಂಗ್ ಆರ್ಗ್ಯೂಮೆಂಟ್-ಗಳನ್ನು ಸ್ವೀಕರಿಸುವ ಕನ್ಸ್-ಟ್ರಕ್ಟರ್ ಅನ್ನು ಕಾಲ್ ಮಾಡುತ್ತದೆ. |
08:53 | ಹಾಗಾಗಿ ಈ ಕನ್ಸ್ಟ್ರಕ್ಟರ್ ಎಕ್ಸಿಕ್ಯೂಟ್ ಆಗಿ , ನಾವು I am Parameterized Constructorಎಂಬ ಫಲಿತವನ್ನು ಪಡೆದಿದ್ದೇವೆ. |
09:02 | ಈಗ ಇನ್ಸ್ಟೆನ್ಸ್ ವೇರಿಯೇಬಲ್ ಗಳು 11 ಮತ್ತು Raju ಇವಕ್ಕೆ ಇನಿಶಿಯಲ್ ಆಗುತ್ತವೆ. ಏಕೆಂದರೆ ನಾವು ಅದನ್ನು ಮುಂದೆ ಕಳಿಸಿದ್ದೇವೆ. |
09:11 | ಈಗ, ನಿಯಂತ್ರಣವು ಕಾಲಿಂಗ್ ಕನ್ಸ್-ಟ್ರಕ್ಟರ್ ಗೆ ಮರಳುತ್ತದೆ. |
09:16 | ಹಾಗಾಗಿ ಎರಡನೇ ಕನ್ಸ್-ಟ್ರಕ್ಟರ್ ಎಕ್ಸಿಕ್ಯೂಟ್ ಆಗುತ್ತದೆ. |
09:19 | ಹಾಗಾಗಿ ನಾವು I am constructor with a single parameter ಎಂಬ ಫಲಿತವನ್ನು ಪಡೆದಿದ್ದೇವೆ. |
09:25 | ನಂತರ, ನಿಯಂತ್ರಣವು ಮೊದಲನೇ ಕನ್ಸ್-ಟ್ರಕ್ಟರ್-ಗೆ ಹೋಗಿ ಅದನ್ನು ಎಕ್ಸಿಕ್ಯೂಟ್ ಮಾಡುತ್ತದೆ. |
09:30 | ಹಾಗಾಗಿ ನಾವು I am a default constructor ಎಂಬ ಫಲಿತವನ್ನು ಪಡೆಯುತ್ತೇವೆ. |
09:36 | ನಂತರ StudentDetail ಎಂಬ ಮೆಥಡ್ ಎಕ್ಸಿಕ್ಯೂಟ್ ಆಗುತ್ತದೆ. |
09:42 | ಅದಕ್ಕಾಗಿ ನಾವು, 11 ಮತ್ತು Raju ಎಂದು ಪಡೆದಿದ್ದೇವೆ. |
09:45 | ಈಗ ನಾವು ಸಣ್ಣ ಬದಲಾವಣೆಯನ್ನು ಮಾಡೋಣ. |
09:47 | thisದಿಸ್ ಸ್ಟೆಟ್-ಮೆಂಟ್ ಅನ್ನು ಕನ್ಸ್-ಟ್ರಕ್ಟರ್ ನ ಕೊನೆಯಲ್ಲಿ ಬರುವಂತೆ ಮಾಡಿ. |
10:00 | ನಮಗೆ ಕಂಪೈಲರ್ ದೋಷವನ್ನು ತೋರಿಸುತ್ತದೆ. |
10:03 | ಮೌಸ್ ಈಗ ದೋಷ ಚಿಹ್ನೆಯ ಮೇಲಿದೆ. |
10:06 | ನಾವು ಈ ದೋಷವನ್ನು ಹೊಂದಿದ್ದೇವೆ: ಕನ್ಸ್-ಟ್ರಕ್ಟರ್ ನಲ್ಲಿ ಮೊದಲನೇ ಸ್ಟೇಟ್-ಮೆಂಟ್ “ಕನ್ಸ್-ಟ್ರಕ್ಟರ್ ಕಾಲ್”ಆಗಿರಲೇಬೇಕು. |
10:12 | ಅದಕ್ಕಾಗಿ ನಾವು ಇದನ್ನು ಕನ್ಸ್-ಟ್ರಕ್ಟರ್ ನ ಮೊದಲ ಸಾಲಾಗಿ ಮಾಡಬೇಕು. |
10:16 | ಇದನ್ನು ಕನ್ಸ್-ಟ್ರಕ್ಟರ್ ನ ಮೊದಲ ಸಾಲಾಗಿ ಮಾಡಿಬಿಡಿ. |
10:27 | ಈಗ ದೊಷ ಇಲ್ಲದಿರುವದನ್ನು ನಾವು ಕಾಣುತ್ತೇವೆ. |
10:31 | ಹೀಗೆ ಈ ಟ್ಯುಟೋರಿಯಲ್-ನಲ್ಲಿ ನಾವು , |
10:35 | thisದಿಸ್ ಕೀವರ್ಡ್ ಅನ್ನು ಫೀಲ್ಡ್ ಗಳ ಜೊತೆಗೆ ಉಪಯೋಗಿಸುವದನ್ನು, |
10:38 | thisದಿಸ್ ಕೀವರ್ಡ್ ಅನ್ನು ಕನ್ಸ್-ಟ್ರಕ್ಟರ್ ಗಳ ಬದಲಾವಣೆಗಾಗಿ ಉಪಯೋಗಿಸುವದನ್ನೂ, |
10:41 | ಕನ್ಸ್-ಟ್ರಕ್ಟರ್ ಒಂದರಲ್ಲಿ “thisದಿಸ್” ಕೀವರ್ಡ್ ಹೇಗೆ ಉಪಯೋಗಿಸಲ್ಪಡಬೇಕು ಎಂಬುದನ್ನೂ ಕಲಿತೆವು. |
10:45 | ಸ್ವಂತ ಅಭ್ಯಾಸಕ್ಕಾಗಿ, ಮೊದಲೇ ಮಾಡಿಟ್ಟಿರುವ Employeಎಂಪ್ಲೊಯೀ ಕ್ಲಾಸ್ ನಲ್ಲಿ: |
10:49 | ಎರಡು ಪೆರಾಮೀಟರ್-ಗಳಿರುವ ಕನ್ಸ್-ಟ್ರಕ್ಟರ್ ಒಂದನ್ನು ರಚಿಸಿ. |
10:52 | thisದಿಸ್ ಕೀವರ್ಡ್ ಅನ್ನು ಇನ್ಸ್ಟೆನ್ಸ್ ವೇರಿಯೇಬಲ್-ಗಳನ್ನು ಇನಿಶಿಯಲ್ ಮಾಡಲು ಉಪಯೋಗಿಸಿ. |
10:57 | ಹಾಗೇ ಪೆರಾಮೀಟರ್ ಇಲ್ಲದ ಮತ್ತು ಒಂದು ಪೆರಾಮೀಟರ್ ಇರುವ ಕನ್ಸ್-ಟ್ರಕ್ಟರ್ ಅನ್ನು ರಚಿಸಿ. |
11:01 | ಟ್ಯುಟೋರಿಯಲ್ ನಲ್ಲಿ ತಿಳಿಸಿರುವಂತೆ ಕನ್ಸ್-ಟ್ರಕ್ಟರ್ ಗಳ ಬದಲಾವಣೆಗಾಗಿ “thisದಿಸ್” ಕೀವರ್ಡ್ ಅನ್ನು ಬಳಸಿ ಪ್ರಯತ್ನಿಸಿ. |
11:07 | ಸ್ಪೋಕನ್ ಟ್ಯುಟೋರಿಯಲ್ ಕುರಿತು ಹೆಚ್ಚಿನ ಮಾಹಿತಿಗಾಗಿ, |
11:09 | ಕೆಳಗಿನ ಲಿಂಕ್-ನಲ್ಲಿರುವ ವೀಡಿಯೊ ನೋಡಿ. [1] |
11:12 | ಇದು ಸ್ಪೋಕನ್-ಟ್ಯುಟೋರಿಯಲ್ ಕುರಿತು ಪೂರ್ಣ ಮಾಹಿತಿ ನೀಡುತ್ತದೆ. |
11:16 | ನಿಮ್ಮಲ್ಲಿ ಉತ್ತಮ ಬ್ಯಾಂಡ್-ವಿಡ್ತ್ ಇರದಿದ್ದರೆ ಡೌನ್-ಲೋಡ್ ಮಾಡಿಕೊಂಡೂ ನೋಡಬಹುದು. |
11:19 | ಸ್ಪೋಕನ್-ಟ್ಯುಟೋರಿಯಲ್ ಪ್ರೊಜೆಕ್ಟ್ ತಂಡ , |
11:23 | ಸ್ಪೋಕನ್-ಟ್ಯುಟೋರಿಯಲ್ ಅನ್ನು ಬಳಸಿ ಕಾರ್ಯಾಗಾರವನ್ನೂ ನಡೆಸುತ್ತದೆ. |
11:26 | ಅಂತರ್ಜಾಲಾಧಾರಿತ ಪರೀಕ್ಷೆಯಲ್ಲಿ ಉತೀರ್ಣರಾದವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ. |
11:30 | ಹೆಚ್ಚಿನ ಮಾಹಿತಿಗಾಗಿ contact@spoken-tutorial.org ಎಂಬಲ್ಲಿಗೆ ಮೇಲ್ ಕಳುಹಿಸಿ. |
11:36 | ಸ್ಪೋಕನ್ ಟ್ಯುಟೋರಿಯಲ್ ಯೋಜನೆ ಟಾಕ್ ಟು ಎ ಟೀಚರ್ ಯೋಜನೆಯ ಭಾಗವಾಗಿದೆ. |
11:40 | ಇದು ಭಾರತ ಸರಕಾರದ , MHRD, ನ್ಯಾಶನಲ್ ಮಿಶನ್ ಓನ್ ಎಜುಕೇಶನ್ ಥ್ರೂ ICT ಯಿಂದ ಪ್ರಾಯೋಜಿಸಲ್ಪಟ್ಟಿದೆ. |
11:46 | ಹೆಚ್ಚಿನ ಮಾಹಿತಿಯನ್ನು http://spoken-tutorial.org/NMEICT-Intro ಇಲ್ಲಿಂದ ಪಡೆಯಿರಿ. |
11:55 | ನಾವು ಟ್ಯುಟೋರಿಯಲ್ ನ ಕೊನೆಯಲ್ಲಿದ್ದೇವೆ. |
11:58 | ಕೇಳಿದ್ದಕ್ಕೆ ಧನ್ಯವಾದ. ಅನುವಾದಕ ಮತ್ತು ವಾಚಕ ವಿದ್ವಾನ್ ನವೀನ್ ಭಟ್ಟ ಉಪ್ಪಿನಪಟ್ಟಣ. |