Java/C2/Relational-Operations/Kannada

From Script | Spoken-Tutorial
Jump to: navigation, search
Time Narration
00:01 ಜಾವಾ ದಲ್ಲಿನ ರಿಲೇಷನಲ್ ಆಪರೇಟರ್ಸ್ ಬಗೆಗಿನ ಟ್ಯುಟೋರಿಯಲ್ ಗೆ ಸ್ವಾಗತ.
00:07 ಈ ಟ್ಯುಟೋರಿಯಲ್ ನಲ್ಲಿ ನಾವು,
00:09 ಬೂಲಿಯನ್ ಡೇಟಾ ಟೈಪ್, ರಿಲೇಷನಲ್ ಆಪರೇಟರ್ಸ್ ಮತ್ತು
00:12 ರಿಲೇಷನಲ್ ಆಪರೇಟರ್ಸ್ ಅನ್ನು ಉಪಯೋಗಿಸಿ ಡೇಟಾವನ್ನು ಕಂಪೇರ್ ಮಾಡುವುದು ಹೇಗೆಂದು ಕಲಿಯಲಿದ್ದೇವೆ.
00:17 ಈ ಟ್ಯುಟೋರಿಯಲ್ ನಲ್ಲಿ ನಾವು

ಉಬುಂಟು 11.10 (ಹನ್ನೊಂದು ಬಿಂದು ಹತ್ತು), ಜೆಡಿಕೆ 1.6 (ಒಂದು ಬಿಂದು ಆರು) ಮತ್ತು ಎಕ್ಲಿಪ್ಸ್ 3.7 (ಮೂರು ಬಿಂದು ಏಳು) ಅನ್ನು ಉಪಯೋಗಿಸುತ್ತಿದ್ದೇವೆ.

00:26 ಈ ಟ್ಯುಟೋರಿಯಲ್ ಅನ್ನು ಅಭ್ಯಸಿಸಲು ನೀವು ಜಾವಾದಲ್ಲಿನ ಡೇಟಾ ಟೈಪ್ಗಳ ಬಗ್ಗೆ ತಿಳಿದಿರಬೇಕು.
00:31 ತಿಳಿಯದಿದ್ದಲ್ಲಿ, ಸಂಬಂಧಿಸಿದ ಟ್ಯುಟೋರಿಯಲ್ ಗಾಗಿ ಈ ಕೆಳಗಿನ ವೆಬ್ಸೈಟ್ ಗೆ ಭೇಟಿ ಕೊಡಿ.
00:39 ರಿಲೇಷನಲ್ ಆಪರೇಟರ್ಸನ್ನು ಕಂಡೀಷನ್ಸಗಳನ್ನು ಪರಿಶೀಲಿಸಲು ಉಪಯೋಗಿಸಲಾಗುತ್ತದೆ.
00:43 ಅವುಗಳ ಔಟ್ಪುಟ್ boolean data type (ಬೂಲಿಯನ್ ಡೇಟಾ ಟೈಪ್)ನ ವೇರಿಯೇಬಲ್ ಆಗಿದೆ.
00:48 ಬೂಲಿಯನ್ ಡೇಟಾ ಟೈಪ್ ನ ಗಾತ್ರ 1 bit (ಒಂದು ಬಿಟ್) ಆಗಿರುತ್ತದೆ.
00:51 ಇದು ಎರಡು ವ್ಯಾಲ್ಯೂಗಳನ್ನು ಮಾತ್ರ ಸಂಗ್ರಹಿಸುತ್ತದೆ.
00:54 true ಅಥವಾ false
00:56 ಕಂಡಿಷನ್ ಸರಿ ಇದ್ದಾಗ ಔಟ್ ಪುಟ್ true ಎಂದಿರುತ್ತದೆ.
00:59 ಕಂಡಿಷನ್ ಸರಿ ಇಲ್ಲದಿದ್ದಾಗ ಔಟ್ ಪುಟ್ false ಎಂದಿರುತ್ತದೆ.
01:06 ಇಲ್ಲಿ ರಿಲೇಷನಲ್ ಆಪರೇಟರ್ಸ್ ಗಳ ಪಟ್ಟಿ ಇದೆ.
01:10 greater than (ಗ್ರೇಟರ್ ದೆನ್)
01:12 less than (ಲೆಸ್ ದೆನ್), equal to (ಸಮ)
00:14 greater than or equal to (ಗ್ರೇಟರ್ ದೆನ್ ಅಥವಾ ಸಮ), less than or equal to (ಲೆಸ್ ದೆನ್ ಅಥವಾ ಸಮ)
01:17 not equal to (ಸಮವಿಲ್ಲ)
01:19 ಪ್ರತಿಯೊಂದನ್ನು ಸವಿಸ್ತಾರವಾಗಿ ತಿಳಿಯೋಣ.
01:22 ಎಕ್ಲಿಪ್ಸನ್ನು ಪ್ರಾರಂಭಿಸಿ.
01:27 ನಾವೀಗ ಎಕ್ಲಿಪ್ಸ್ IDE (ಐಡಿಇ) ಮತ್ತು ಉಳಿದ ಕೋಡ್ ಗಳಿಗೆ ಅವಶ್ಯಕವಿರುವ ಸ್ಕೆಲಿಟನ್ ಅನ್ನು ಹೊಂದಿದ್ದೇವೆ.
01:33 ನಾನು BooleanDemo (ಬೂಲಿಯನ್ ಡೆಮೋ) ಹೆಸರಿನ ಪಾಠವನ್ನು ತಯಾರಿಸಿದ್ದೇನೆ, ಮತ್ತು ಮೈನ್ ಮೆಥಡ್ ಅನ್ನು ಸೇರಿಸಿದ್ದೇನೆ.
01:38 ಈಗ ಕೆಲವು ಎಕ್ಸ್ಪ್ರೆಷನ್ ಗಳನ್ನು ಸೇರಿಸೋಣ.
01:41 boolean b ; (ಬೂಲಿಯನ್ ಬಿ) ಎಂದು ಟೈಪ್ ಮಾಡಿ.
01:47 ಕೀವರ್ಡ್ ಆಗಿರುವ ಬೂಲಿಯನ್, ಬಿ ವೇರಿಯೇಬಲ್ ನ ಡೇಟಾ ಟೈಪ್ ಬೂಲಿಯನ್ ಎಂದು ಘೋಷಿಸುತ್ತದೆ.
01:53 ನಮ್ಮ ಕಂಡೀಷನ್ನಿನ ಫಲಿತಾಂಶವನ್ನು ಬಿ ನಲ್ಲಿ ಸಂಗ್ರಹಿಸೋಣ.
01:58 ವೇಯ್ಟ್ ವೇರಿಯೇಬಲ್ಲನ್ನು ವಿವರಿಸೋಣ ಮತ್ತು ಆ ವೇರಿಯೇಬಲ್ಲನ್ನು ಉಪಯೋಗಿಸಿ ಕಂಡೀಷನ್ನನ್ನು ಪರಿಶೀಲಿಸೋಣ.
02:05 int weight =45(ಇಂಟ್ ವೇಯ್ಟ್ ಸಮ ನಲವತ್ತೈದು);
02:13 ವೇಯ್ಟ್ ನಲ್ಲಿರುವ ಮೌಲ್ಯ 40 (ನಲವತ್ತಕ್ಕಿಂತ) ಹೆಚ್ಚಿದೆಯೇ ಎಂದು ಪರಿಶೀಲಿಸೋಣ.
02:18 b =weight (ಬಿ ಸಮ ವೇಯ್ಟ್) greater than(ಗ್ರೇಟರ್ ದೆನ್) 40 (ನಲವತ್ತು);
02:28 ಈ ಸ್ಟೇಟ್ಮೆಂಟ್ ವೇರಿಯೇಬಲ್ಲಿನ ಮೌಲ್ಯ ನಲವತ್ತಕ್ಕಿಂತ ಹೆಚ್ಚಿದೆಯೇ ಎಂದು ಪರಿಶೀಲಿಸಬೇಕು ಮತ್ತು ರಿಸಲ್ಟನ್ನು ಬಿ ನಲ್ಲಿ ಸಂಗ್ರಹಿಸಬೇಕೆಂದು ಹೇಳುತ್ತದೆ.
02:37 ನಾವೀಗ ಬಿ ನ ಮೌಲ್ಯವನ್ನು ಪ್ರಿಂಟ್ ಮಾಡೋಣ
02:41 System.out.println(b) (ಸಿಸ್ಟಮ್ ಡಾಟ್ ಔಟ್ ಡಾಟ್ ಪ್ರಿಂಟ್ ಎಲ್.ಎನ್ (ಬಿ));
02:49 ಸೇವ್ ಮತ್ತು ರನ್ ಮಾಡಿ
02:59 ನಾವು ನೋಡುವಂತೆ ಔಟ್ ಪುಟ್ True (ಟ್ರೂ) ಆಗಿದೆ.
03:02 ಮೌಲ್ಯವು ನಲವತ್ತಕ್ಕಿಂತ ಕಡಿಮೆ ಇದ್ದರೆ ಏನಾಗುತ್ತದೆಂದು ನೋಡೋಣ.
03:07 ವೇಯ್ಟನ್ನು ೩೦(ಮೂವತ್ತಕ್ಕೆ) ಬದಲಿಸಿ.
03:12 ಸೇವ್ ಮತ್ತು ರನ್ ಮಾಡಿ
03:20 ನಿರೀಕ್ಷಿಸಿದಂತೆ ಔಟ್ ಪುಟ್ False(ಫಾಲ್ಸ್) ಆಗಿರುವುದನ್ನು ನೋಡಬಹುದು.
03:24 ಈ ರೀತಿಯಾಗಿ greater than (ಗ್ರೇಟರ್ ದೇನ್) ಚಿಹ್ನೆಯನ್ನು ಒಂದರ ಮೌಲ್ಯವು ಮತ್ತೊಂದಕ್ಕಿಂತ ಹೆಚ್ಚಿದೆಯೇ' ಎಂದು ಪರಿಶೀಲಿಸಲು ಉಪಯೋಗಿಸುತ್ತೇವೆ.
03:30 ಅದೇ ರೀತಿಯಾಗಿ less than (ಲೆಸ್ ದೇನ್) ಚಿಹ್ನೆಯನ್ನು ಒಂದರ ಮೌಲ್ಯ ಮತ್ತೊಂದಕ್ಕಿಂತ ಕಡಿಮೆ ಇದೆಯೇ ಎಂದು ಪರಿಶೀಲಿಸಲು ಉಪಯೋಗಿಸುತ್ತೇವೆ.
03:37 ನಾವು greater than (ಗ್ರೇಟರ್ ದೇನ್) ಅನ್ನು less than (ಲೆಸ್ ದೇನ್) ಚಿಹ್ನೆಗೆ ಬದಲಿಸೋಣ.
03:43 ಅಂದರೆ ನಾವು weight (ವೇಯ್ಟ್) ನ ಮೌಲ್ಯ ೪೦ (ನಲವತ್ತಕ್ಕಿಂತ) ಕಡಿಮೆ ಇದೆಯೇ ಎಂದು ಪರಿಶೀಲಿಸುತ್ತಿದ್ದೇವೆ.
03:48 ಸೇವ್ ಮತ್ತು ರನ್ ಮಾಡಿ
03:56 ನಾವು ನೋಡುವ ಹಾಗೆ, ನಿರೀಕ್ಷಿಸಿದಂತೆ ಔಟ್ ಪುಟ್ True (ಟ್ರೂ) ಆಗಿದೆ.
04:01 ನಾವು ವೈಟ್ ನ ಮೌಲ್ಯವನ್ನು ೪೫ ಕ್ಕೆ ಬದಲಿಸೋಣ ಮತ್ತು ಔಟ್ ಪುಟ್ ಅನ್ನು ನೋಡೋಣ.
04:09 ಸೇವ್ ಮತ್ತು ರನ್ ಮಾಡಿ
04:16 ನಾವು False (ಫಾಲ್ಸ್)ಅನ್ನು ಪಡೆದದ್ದನ್ನು ನೋಡುತ್ತೇವೆ. ಏಕೆಂದರೆ ಕಂಡೀಷನ್ ಇರುವುದು
04:21 ೪೦ (ನಲವತ್ತಕ್ಕಿಂತ) ಕಡಿಮೆ ಇರುವ ವೈಟ್ ಸರಿಯಲ್ಲ ಎಂದು.
04:25 ನಾವೀಗ ಮೌಲ್ಯವು ಮತ್ತೊಂದಕ್ಕೆ ಸಮವಾಗಿದ್ದರೆ ಹೇಗೆ ಪರಿಶೀಲಿಸುವುದೆಂದು ನೋಡೋಣ.
04:31 ಹಾಗೆ ಮಾಡಲು, ನಾವು ಎರಡು ಈಕ್ವಲ್ ಟು ಚಿಹ್ನೆಯನ್ನು ಉಪಯೋಗಿಸುತ್ತೇವೆ
04:35 less than (ಲೆಸ್ ದೇನ್) ಚಿಹ್ನೆಯನ್ನು double equal to (ಡಬಲ್ ಈಕ್ವಲ್ ಟು) ಚಿಹ್ನೆಗೆ ಬದಲಿಸಿ.
04:41 ಸೇವ್ ಮತ್ತು ರನ್ ಮಾಡಿ
04:48 ನಾವು ನೋಡುವ ಹಾಗೆ, ಔಟ್ ಪುಟ್ False ಏಕೆಂದರೆ ವೈಟ್ ನ ಮೌಲ್ಯ ೪೦ ಕ್ಕೆ ಸಮನಾಗಿಲ್ಲ.
04:55 ನಾವೀಗ ವೇಯ್ಟ್ ನ್ನು ೪೦ ಕ್ಕೆ ಬದಲಿಸಿ ಔಟ್ ಪುಟ್ ಅನ್ನು ನೋಡೋಣ.
05:01 ಸೇವ್ ಮತ್ತು ರನ್ ಮಾಡಿ.
05:08 ನಾವು ನೋಡುವ ಹಾಗೆ, ಔಟ್ ಪುಟ್ ಟ್ರೂ ಆಗಿದೆ.
05:12 ಈ ರೀತಿಯಾಗಿ Double equal to (ಡಬಲ್ ಈಕ್ವಲ್ ಟು) ಅನ್ನು ಸಮತೆಯನ್ನು ಪರಿಶೀಲಿಸಲು ಉಪಯೋಗಿಸುತ್ತೇವೆ.
05:16 ದಯವಿಟ್ಟು ಜಾಗರೂಕರಾಗಿರಿ, ಏಕೆಂದರೆ ಆಗಾಗ ಸಮತೆಯನ್ನು ಪರಿಶೀಲಿಸಲು single equal to (ಸಿಂಗಲ್ ಈಕ್ವಲ್ ಟು) ಚಿಹ್ನೆಯನ್ನು ಬಳಸುತ್ತಾರೆ.
05:22 ಮತ್ತು ಇದು ಅನಾವಶ್ಯಕವಾದ ತಪ್ಪುಗಳಿಗೆ ಆಸ್ಪದ ಕೊಡುತ್ತದೆ.
05:26 ನಂತರ less than (ಲೆಸ್ ದೆನ್) ಅಥವಾ equal to (ಈಕ್ವಲ್ ಟು) ವನ್ನು ಪರಿಶೀಲಿಸುವುದು ಹೇಗೆಂದು ನೋಡೋಣ.
05:30 ಅದನ್ನು ಮಾಡಲು, ನಾವು ಲೆಸ್ ದೆನ್ ಚಿಹ್ನೆಯ ನಂತರ ಈಕ್ವಲ್ ಟು ಚಿಹ್ನೆಯನ್ನು ಉಪಯೋಗಿಸುತ್ತೇವೆ.
05:35 ಡಬಲ್ ಈಕ್ವಲ್ ಟು ಚಿಹ್ನೆಯನ್ನು ಲೆಸ್ ದೆನ್ ಈಕ್ವಲ್ ಟು ಚಿಹ್ನೆಗೆ ಬದಲಿಸಿ.
05:42 ಸೇವ್ ಮತ್ತು ರನ್ ಮಾಡಿ
05:50 ನಿರೀಕ್ಷಿಸಿದಂತೆ ಔಟ್ ಪುಟ್ True (ಟ್ರು) ಆಗಿದೆ.
05:53 ಈಗ ಲೆಸ್ ದೆನ್ ನ ಪರಿಶೀಲನೆ ಆಗಿದೆಯೇ ಎಂದು ನೋಡಲು ವೇಯ್ಟ್ ನ ಮೌಲ್ಯವನ್ನು ಬದಲಿಸೋಣ.
05:59 ೪೦ (ನಲವತ್ತನ್ನು) ೩೦ (ಮೂವತ್ತಕ್ಕೆ) ಬದಲಿಸಿ.
06:04 ಸೇವ್ ಮತ್ತು ರನ್ ಮಾಡಿ
06:14 ವೇಯ್ಟ್ ೪೦ ಕ್ಕೆ ಸಮವಿಲ್ಲದಿದ್ದರೂ ನಾವು ಔಟ್ ಪುಟ್ ಟ್ರೂ ಬಂದಿರುವುದನ್ನು ನೋಡುತ್ತೇವೆ, ಏಕೆಂದರೆ ಇದು ನಲವತ್ತಕ್ಕಿಂತ ಕಡಿಮೆಯಿದೆ.
06:22 ವೈಟ್ ನ ಮೌಲ್ಯ ನಲವತ್ತಕ್ಕಿಂತ ಹೆಚ್ಚಾಗಿದ್ದರೆ ಏನಾಗುತ್ತದೆಂದು ನೋಡೋಣ.
06:27 ವೈಟ್ ನ ಮೌಲ್ಯ ಐವತ್ತಿರಲಿ. ಸೇವ್ ಮತ್ತು ರನ್ ಮಾಡಿ.
06:39 ನಾವು ನೋಡುವ ಹಾಗೆ, ಔಟ್ ಪುಟ್ False ಆಗಿದೆ ಏಕೆಂದರೆ ವೇಯ್ಟ್ ನ ಮೌಲ್ಯ ೪೦ ಕ್ಕೆ ಸಮವಿಲ್ಲ.
06:44 ಮತ್ತು ಅದು ೪೦ ಕ್ಕಿಂತ ಕಡಿಮೆಯೂ ಇಲ್ಲ.
06:48 ಅದೇ ರೀತಿಯಾಗಿ ಗ್ರೇಟರ್ ದೆನ್ ಚಿಹ್ನೆಯ ನಂತರ ಸಮ ಚಿಹ್ನೆಯನ್ನು ಗ್ರೇಟರ್ ದೆನ್ ಅಥವಾ ಈಕ್ವಲ್ ಟು ವನ್ನು ಪರಿಶೀಲಿಸಲು ಉಪಯೋಗಿಸುತ್ತೇವೆ.
06:55 ಇದನ್ನು ಪ್ರಯತ್ನಿಸೋಣ.
06:57 less than equal to (ಲೆಸ್ ದೆನ್ ಈಕ್ವಲ್ ಟು) ವನ್ನು greater than equal to (ಗ್ರೇಟರ್ ದೆನ್ ಈಕ್ವಲ್ ಟು) ಗೆ ಬದಲಿಸಿ.
07:04 ಸೇವ್ ಮತ್ತು ರನ್ ಮಾಡಿ
07:10 ನಾವು ನೋಡುವ ಹಾಗೆ, ಔಟ್ ಪುಟ್ true (ಟ್ರು) ಆಗಿದೆ ಏಕೆಂದರೆ ವೈಟ್ ೪೦ ಕ್ಕಿಂತ ಹೆಚ್ಚಿದೆ.
07:16 ನಾವು ವೇಯ್ಟ್ ನ ಮೌಲ್ಯವನ್ನು ೪೦ ಕ್ಕಿಂತ ಕಡಿಮೆ ೩೦ ಕ್ಕೆ ಬದಲಿಸೋಣ.
07:25 ಸೇವ್ ಮತ್ತು ರನ್ ಮಾಡಿ
07:32 ಔಟ್ ಪುಟ್ ಫಾಲ್ಸ್ ಎಂದು ಪಡೆದೆವು ಏಕೆಂದರೆ ವೈಟ್ ನ ಮೌಲ್ಯ ೪೦ ಕ್ಕಿಂತ ಹೆಚ್ಚೂ ಇಲ್ಲ ೪೦ ರ ಸಮವೂ ಇಲ್ಲ.
07:39 ನಂತರ, ನಾಟ್ ಈಕ್ವಲ್ ಟು ವನ್ನು ಪರಿಶೀಲಿಸುವುದು ಹೇಗೆಂದು ನೋಡೋಣ.
07:46 ಇದನ್ನು ಆಶ್ಚರ್ಯ ಸೂಚಕ ಚಿಹ್ನೆಯ ನಂತರ ಸಮ ಚಿಹ್ನೆಯನ್ನು ಉಪಯೋಗಿಸಿ ಮಾಡಲಾಗುತ್ತದೆ.
07:53 ಗ್ರೇಟರ್ ದೆನ್ ಅನ್ನು ಆಶ್ಚರ್ಯ ಸೂಚಕ ಚಿಹ್ನೆಗೆ ಬದಲಿಸಿ.
07:59 ಈ ಸ್ಟೇಟ್ಮೆಂಟ್ ವೇಯ್ಟ್ ನ ಮೌಲ್ಯ ೪೦ ಕ್ಕೆ ಸಮ ಇಲ್ಲವೇ ಎಂದು ಪರಿಶೀಲಿಸಿ ರಿಸಲ್ಟನ್ನು ಬಿ ನಲ್ಲಿ ಸಂಗ್ರಹಿಸಿ ಎಂದು ಹೇಳುತ್ತದೆ.
08:08 ಸೇವ್ ಮತ್ತು ರನ್ ಮಾಡಿ
08:16 ನಾವು ನೋಡುವ ಹಾಗೆ, ಔಟ್ ಪುಟ್ ಟ್ರು ಆಗಿದೆ. ಏಕೆಂದರೆ ವೇಯ್ಟ್ ನ ಮೌಲ್ಯ ೪೦ ಕ್ಕೆ ಸಮನಾಗಿಲ್ಲ.
08:23 ವೇಯ್ಟ್ ನ ಮೌಲ್ಯವನ್ನು ೪೦ ಕ್ಕೆ ಬದಲಿಸಿ ಔಟ್ ಪುಟ್ ಅನ್ನು ನೋಡೋಣ.
08:28 ೩೦ ರಿಂದ ೪೦ ಕ್ಕೆ ಬದಲಿಸಿ.
08:31 ಸೇವ್ ಮತ್ತು ರನ್ ಮಾಡಿ
08:38 ಔಟ್ ಪುಟ್ ಫಾಲ್ಸ್ ಎಂದಿದೆ. ಏಕೆಂದರೆ ವೇಯ್ಟ್ ನ ಕಂಡೀಷನ್ ೪೦ ಕ್ಕೆ ಸಮವಿಲ್ಲ ಎನ್ನುವುದು ತಪ್ಪು.
08:45 ನಾಟ್ ಈಕ್ವಲ್ ಟು ಕಂಡೀಷನ್ ಈಕ್ವಲ್ ಟು ಕಂಡೀಷನ್ನಿಗೆ ವಿರುದ್ದವೆಂದು ತಿಳಿಯಬಹುದು.
08:50 ಈ ರೀತಿಯಾಗಿ ನಾವು ಜಾವಾದಲ್ಲಿನ ಡಾಟಾವನ್ನು ಹೋಲಿಸಿಲು ವಿಭಿನ್ನ ರೀತಿಯ ರಿಲೇಷನಲ್ ಆಪರೇಟರ್ಸನ್ನು ಉಪಯೋಗಿಸುತ್ತೇವೆ.
08:58 ನಾವೀಗ ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದೆವು.
09:01 ಈ ಟ್ಯುಟೋರಿಯಲ್ ನಲ್ಲಿ ನಾವು, ಬೂಲಿಯನ್ ಡಾಟಾ ಟೈಪ್
09:06 ರಿಲೇಷನಲ್ ಆಪರೇಟರ್ಸ್ ಮತ್ತು
09:08 ಎರಡು ಮೌಲ್ಯಗಳನ್ನು ಹೋಲಿಸಲು ರಿಲೇಷನಲ್ ಆಪರೇಟರ್ಸ್ ಅನ್ನು ಹೇಗೆ ಉಪಯೋಗಿಸುವುದು ಎಂದು ಕಲಿತೆವು.
09:13 ಈ ಟ್ಯುಟೋರಿಯಲ್ ನ ಅಸೈನ್ಮೆಂಟ್ ರೂಪದಲ್ಲಿ, ಎರಡು ಎಕ್ಸ್ಪ್ರೆಷನ್ ಗಳು ಸಮವಾಗಿರುತ್ತವೆಯೇ? ಎಂದು ಕಂಡುಹಿಡಿಯಿರಿ.
09:23 ಈ ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ನ ಬಗ್ಗೆ ಹೆಚ್ಚು ತಿಳಿಯಲು
09:23 ದಯವಿಟ್ಟು ಈ ಲಿಂಕ್ ನಲ್ಲಿ ಸಿಗುವ ವೀಡಿಯೋ ವನ್ನು ನೋಡಿ.
09:28 ಇದು ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ನ ಸಾರಾಂಶವನ್ನು ಹೇಳುತ್ತದೆ.
09:31 ನಿಮ್ಮಲ್ಲಿ ಉತ್ತಮ ಬ್ಯಾಂಡ್ವಿಡ್ಥ್ ಇಲ್ಲವಾದಲ್ಲಿ ನೀವಿದನ್ನು ಡೌನ್ಲೋಡ್ ಮಾಡಿ ಕೂಡಾ ನೋಡಬಹುದು.
09:36 ಈ ಪಾಠವನ್ನಾಧಾರಿಸಿ
09:38 ಸ್ಪೋಕನ್ ಟ್ಯುಟೋರಿಯಲ್ ಗಣವು ಕಾರ್ಯಶಾಲೆಯನ್ನು ನಡೆಸುತ್ತದೆ.
09:40 ಯಾರು ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ.

ಹೆಚ್ಚಿನ ಮಾಹಿತಿಗಾಗಿ contact@spoken-tutorial.org ಈ ಈ-ಮೇಲ್ ಮೂಲಕ ಸಂಪರ್ಕಿಸಿ.

09:50 ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ Talk to a Teacher ಎಂಬ ಪರಿಯೋಜನೆಯ ಭಾಗವಾಗಿದೆ.
09:54 ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ.
10:00 ಹೆಚ್ಚಿನ ಮಾಹಿತಿಗಾಗಿ spoken hyphen tutorial dot org slash NMEICT hyphen Intro ಇಲ್ಲಿ ನೋಡಿ.
10:05 ಈ ಪಾಠದ ಅನುವಾದಕ ಬೆಂಗಳೂರಿನಿಂದ ರುಕ್ಮಾಂಗದ ಆರ್ಯ ಹಾಗೂ ಪ್ರವಾಚಕ ಐ ಐ ಟಿ ಬಾಂಬೆಯಿಂದ ವಾಸುದೇವ. ಧನ್ಯವಾದಗಳು.

Contributors and Content Editors

PoojaMoolya, Vasudeva ahitanal