Java/C2/Installing-Eclipse/Kannada

From Script | Spoken-Tutorial
Jump to: navigation, search
Time Narration
00:01 ಲಿನಕ್ಸ್ ನಲ್ಲಿ ಎಕ್ಲಿಪ್ಸ್ ಅನ್ನು ಇನ್ಸ್ಟಾಲ್ ಮಾಡುವುದರ ಬಗ್ಗೆ ಇರುವ ಈ ಸ್ಪೋಕನ್ ಟ್ಯಿಉಟೋರಿಯಲ್ ಗೆ ನಿಮಗೆ ಸ್ವಾಗತ
00:06 ಈ ಟ್ಯುಟೋರಿಯಲ್ ನಲ್ಲಿ ನೀವು ಉಬಂಟು ಹಾಗು ರೆಡ್ ಹಾಟ್ ಆಪರೆಟಿಂಗ್ ಸಿಸ್ಟಮ್ ಗಳಲ್ಲಿ ಎಕ್ಲಿಪ್ಸ್ ಅನ್ನು ಹೇಗೆ ಇನ್ಸ್ಟಾಲ್ ಮಾಡುವುದು ಎಂಬುದನ್ನು ಕಲಿಯಲಿದ್ದೀರಿ.
00:15 ಈ ಟ್ಯುಟೋರಿಯಲ್ ನಲ್ಲಿ ನಾವು Ubuntu 11.10 ಅನ್ನು ಉಪಯೋಗಿಸುತ್ತಿದ್ದೇವೆ.
00:20 ಈ ಟ್ಯುಟೋರಿಯಲ್ ಅನ್ನು ಅನುಸರಿಸಲು ನಿಮ್ಮಲ್ಲಿ,
00:22 ಇಂಟರ್ನೆಟ್ ಸಂಪರ್ಕವಿರಬೇಕು ಹಾಗೂ ಲಿನಕ್ಸ್ ನಲ್ಲಿ ಟರ್ಮಿನಲ್ ಅನ್ನು ಉಪಯೋಗಿಸುವುದು ಗೊತ್ತಿರಬೇಕು.
00:28 ನೀವು root ನಲ್ಲಿ ಪ್ರವೇಶಿಸಿರಬೇಕು ಅಥವಾ sudo ಅನುಮತಿಯನ್ನು ಹೊಂದಿರಬೇಕು.
00:32 ನಿಮಗೆ ರೂಟ್ ಹಾಗೂ ಸೂಡೋ ನ ಬಗ್ಗೆ ಗೊತ್ತಿರದಿದ್ದಲ್ಲಿ ಚಿಂತಿಸಬೇಡಿ,
00:36 ನೀವು ಟ್ಯುಟೋರಿಯಲ್ ನಲ್ಲಿ ಮುಂದುವರಿಯಬಹುದು.
00:39 ನೀವು ಪ್ರೊಕ್ಸಿ ಯನ್ನು ಉಪಯೋಗಿಸುವ ನೆಟ್ವರ್ಕ್ ನಲ್ಲಿದ್ದರೆ, ನೀವು ಪ್ರೊಕ್ಸಿಯನ್ನು ಉಪಯೋಗಿಸಲೇಬೇಕಾಗುತ್ತದೆ.
00:45 ಇಲ್ಲವಾದಲ್ಲಿ, ಇದಕ್ಕೆ ಸಂಬಂಧಿಸಿದ ಟ್ಯುಟೋರಿಯಲ್ ಗಾಗಿ ಇಲ್ಲಿ ತೋರಿಸಿರುವ ವೆಬ್ಸೈಟ್ ಗೆ ಭೇಟಿಕೊಡಿ.
00:51 ನಾವು ಇಲ್ಲಿ ತೋರಿಸಿರುವ ಕಮಾಂಡ್ ಗಳನ್ನು ಉಪಯೋಗಿಸಿಕೊಂಡು ಉಬಂಟುವಿನಲ್ಲಿ ಎಕ್ಲಿಪ್ಸ್ ನ ಇನ್ಸ್ಟಾಲ್ ಅನ್ನು ಮಾಡೋಣ.
00:55 ಹಾಗೂ ರೆಡ್ ಹಾಟ್ ನಲ್ಲಿ ಇನ್ಸ್ಟಾಲ್ ಮಾಡಲು ಬೇಕಾದ ಕೆಲವು ಸಣ್ಣ ಬದಲಾವಣೆಗಳ ಬಗ್ಗೂ ಕಲಿಯೋಣ.
01:05 ಈಗ ಟರ್ಮಿನಲ್ ಓಪನ್ ಮಾಡೋಣ.
01:07 Control, Alt ಮತ್ತು t ಅನ್ನು ಒಟ್ಟಿಗೆ ಒತ್ತಿ.
01:10 ಇದರಿಂದ ಉಬಂಟುವಿನಲ್ಲಿ ಟರ್ಮಿನಲ್ ಓಪನ್ ಆಗುತ್ತದೆ.
01:18 ನೀವು ಪ್ರೊಕ್ಸಿಯನ್ನು ಉಪಯೋಗಿಸುವ ನೆಟ್ವರ್ಕ್ ನಲ್ಲಿದ್ದರೆ ನೀವು ಅದನ್ನು ಟರ್ಮಿನಲ್ ನಲ್ಲಿ ಸಟ್ ಮಾಡಬೇಕಾಗುತ್ತದೆ.
01:23 ನಿಮಗೆ ಪ್ರೊಕ್ಸಿ ಏನೆಂದು ಗೊತ್ತಿರದಪಕ್ಷದಲ್ಲಿ ನೀವು ಉಪಯೋಗಿಸುತ್ತಿರುವ ನೆಟ್ವರ್ಕ್ ಗೆ ಪ್ರೊಕ್ಸಿ ಬೇಕಾಗಿಲ್ಲವೆಂದರ್ಥ.
01:28 ಹಾಗಾಗಿ ನೀವು ಈ ಹಂತವನ್ನು ಬಿಟ್ಟು ಮುಂದೆ ಹೋಗಿ.
01:30 ಯಾರು ಪ್ರೊಕ್ಸಿಯನ್ನು ಉಪಯೋಗಿಸುತ್ತಿರುವಿರೋ ಅವರು ಇದನ್ನು ಸೆಟ್ ಮಾಡಬೇಕು.
01:34 ಪ್ರೊಕ್ಸಿಯಲ್ಲಿ ಎರಡು ವಿಧಗಳಿವೆ.
01:36 ಒಂದಕ್ಕೆ ಯೂಸರ್ ನೇಮ್ ಮತ್ತು ಪಾಸ್ವರ್ಡ್ ಬೇಕಾದರೆ ಇನ್ನೊಂದಕ್ಕೆ ಬೇಕಾಗಿಲ್ಲ.
01:40 ಸಂಬಂಧಪಟ್ಟವರಿಂದ ನೀವು ಉಪಯೋಗಿಸುತ್ತಿರುವ ಪ್ರೊಕ್ಸಿ ಯಾವ ತರಹದ್ದೆಂದು ತಿಳಿದುಕೊಳ್ಳಿ.
01:45 ಟರ್ಮಿನಲ್ ನಲ್ಲಿ sudo ಸ್ಪೇಸ್ ಹೈಫನ್ (-) s ಎಂದು ಟೈಪ್ ಮಾಡಿ.
01:52 ಕೇಳಿದಲ್ಲಿ ಪಾಸ್ವರ್ಡ್ ಟೈಪ್ ಮಾಡಿ.
01:57 ಗಮನಿಸಿ, ನೀವು ಪಾಸ್ವರ್ಡ್ ಟೈಪ್ ಮಾಡಿದಾಗ ಇಲ್ಲಿ ಆಸ್ಟ್ರಿಸ್ಕ್ ಅಥವಾ ಬೆರೆ ಯಾವುದೇ ಚಿಹ್ನೆಗಳು ಕಾಣುವುದಿಲ. Enter ಒತ್ತಿ.
02:06 ಗಮನಿಸಿ, ಪ್ರೊಮ್ಪ್ಟ್ ನ ಚಿಹ್ನೆಯು ಡಾಲರ್ ನಿಂದ ಹ್ಯಾಷ್ ಗೆ ಬದಲಾಗಿದೆ.
02:14 ಈಗ export ಸ್ಪೇಸ್ http ಅಂಡರ್ಸ್ಕೋರ್ (_) proxy ಈಕ್ವಲ್ ಟು (=) http ಕೋಲನ್ (:) ಸ್ಲಾಶ್ ಸ್ಲಾಶ್ (//) tsuser ಕೋಲನ್ (:) tspwd@10.24.0.2 ಕೋಲನ್ (:) 8080 ಎಂದು ಟೈಪ್ ಮಾಡಿ.
02:47 ಈ ಕಮಾಂಡ್ ನಲ್ಲಿ, tsuser ಎಂಬುದು ಪ್ರೊಕ್ಸಿ ಅಥೆಂಟಿಕೇಶನ್ ನ ಯೂಸರ್ ನೇಮ್ ಆಗಿದೆ ಹಾಗೂ tspwd ಎಂಬುದು ಪಾಸ್ವರ್ಡ್ ಆಗಿದೆ.
02:55 ಇದನ್ನು ನಿಮಗೆ ಸರಿಹೊಂದುವಂತೆ ಬದಲಾಯಿಸಿಕೊಳ್ಳಿ.
02:59 10.24.0.2 ಎಂಬುದು ಪ್ರೊಕ್ಸಿ ಯ ಹೋಸ್ಟ್ ಅಡ್ಡ್ರೆಸ್ ಆಗಿದೆ ಹಾಗೂ 8080 ಎಂಬುದು ಪೋರ್ಟ್ ನಂಬರ್ ಆಗಿದೆ.
03:07 ಈ ಡೀಟೇಲ್ ಗಳನ್ನೂ ನಿಮಗೆ ಸರಿಹೊಂದುವಂತೆ ಬದಲಾಯಿಸಬಹುದು. Enter ಒತ್ತಿ.
03:14 ಕೆಲವೊಂದು ಸಂದರ್ಭದಲ್ಲಿ ನೆಟ್ವರ್ಕ್ ಗೆ ಅಥೆಂಟಿಕೇಶನ್ ನ ಅಗತ್ಯವಿರುವುದಿಲ್ಲ.
03:18 ಅಂಥಹ ಸಂದರ್ಭದಲ್ಲಿ ಯೂಸರ್ ನೇಮ್ ಹಾಗೂ ಪಾಸ್ವರ್ಡ್ ನ ಸ್ಥಾನವನ್ನು ಖಾಲಿ ಬಿಡಬಹುದು.
03:22 ನನ್ನ ಪ್ರೊಕ್ಸಿ ಗೆ ಅಥೆಂಟಿಕೇಶನ್ ನ ಅಗತ್ಯವಿಲ್ಲದೇ ಇರುವುದರಿಂದ ನಾನು ಆ ಡೀಟೇಲ್ ಗಳನ್ನು ತೆಗೆಯುತ್ತೇನೆ.
03:28 ಹಿಂದಿನ ಕಮಾಂಡ್ ಅನ್ನು ಪಡೆಯಲು ಅಪ್ ಏರೋ ವನ್ನು ಕ್ಲಿಕ್ ಮಾಡಿ ಹಾಗೂ ಯೂಸರ್ ನೇಮ್ ಹಾಗೂ ಪಾಸ್ವರ್ಡ್ ಅನ್ನು ತೆಗೆಯಿರಿ.
03:35 ಹಾಗೂ Enter ಒತ್ತಿ. ಈ ಕಮಾಂಡ್ http proxy ಯನ್ನು ಸೆಟ್ ಮಾಡುತ್ತದೆ. ನಾವೀಗ https proxy ಯನ್ನು ಹೇಗೆ ಸೆಟ್ ಮಾಡುವುದೆಂದು ನೋಡೋಣ.
03:44 ಹಿಂದಿನ ಕಮಾಂಡ್ ಅನ್ನು ಪಡೆಯಲು ಅಪ್ ಏರೋ ಕೀಯನ್ನು ಒತ್ತಿ ಹಾಗೂ http ಯನ್ನು https ಗೆ ಬದಲಾಯಿಸಲು s ಎಂದು ಟೈಪ್ ಮಾಡಿ Enter ಒತ್ತಿ.
03:54 ನಾವೀಗ ಯಶಸ್ವಿಯಾಗಿ ಪ್ರೊಕ್ಸಿಯನ್ನು ಸೆಟ್ ಮಾಡಿದೆವು.
03:58 Ctrl + D ಯನ್ನು ಒತ್ತಿ ನಾರ್ಮಲ್ ಪ್ರಾಮ್ಪ್ಟ್ ಗೆ ಹಿಂತಿರುಗೋಣ.
04:02 ಸ್ಕ್ರೀನ್ ಅನ್ನು ಕ್ಲಿಯರ್ ಮಾಡಲು clear ಎಂದು ಟೈಪ್ ಮಾಡಿ Enter ಒತ್ತಿ.
04:11 ಈಗ ನಾವು ಎಕ್ಲಿಪ್ಸ್ ಅನ್ನು ಇನ್ಸ್ಟಾಲ್ ಮಾಡಬಹುದು.
04:14 sudo ಸ್ಪೇಸ್ apt ಹಫನ್ (-) get ಸ್ಪೇಸ್ update ಎಂದು ಟೈಪ್ ಮಾಡಿ.
04:25 ಈ ಕಮಾಂಡ್ ಉಪಲಭ್ಯವಿರುವ ಎಲ್ಲಾ ಸಾಫ್ಟ್ವೇರ್ ಗಳ ಸೂಚಿಯನ್ನು ನಮ್ಮ ಮುಂದಿಡುತ್ತದೆ. Enter ಒತ್ತಿ.
04:33 ಸಾಫ್ಟ್ವೇರ್ ನ ಸೂಚಿಯನ್ನು ಮುಂದಿಡಲು ನಿಮ್ಮ ಇಂಟರ್ನೆಟ್ ನ ವೇಗದ ಗತಿಯನ್ನು ಅವಲಂಬಿಸಿ ಸ್ವಲ್ಪ ಸಮಯವನ್ನು ತೆಗೆದುಕೊಳ್ಳುತ್ತದೆ.
04:45 ಯಾವಾಗ ಟರ್ಮಿನಲ್ ನಲ್ಲಿ ಡಾಲರ್ ಪ್ರೊಮ್ಪ್ಟ್ ಬರುತ್ತದೋ ಆಗ ಈ ಕಾರ್ಯವು ಮುಗಿಯಿತೆಂದರ್ಥ. ಸ್ಕ್ರೀನ್ ಕ್ಲಿಯರ್ ಮಾಡಲು clear ಎಂದು ಟೈಪ್ ಮಾಡಿ Enter ಒತ್ತಿ.
04:55 sudo ಸ್ಪೇಸ್ apt ಹೈಫನ್ (-) get ಸ್ಪೇಸ್ install ಸ್ಪೇಸ್ eclipse ಎಂದು ಟೈಪ್ ಮಾಡಿ Enter ಒತ್ತಿ.
05:10 ಈ ಕಮಾಂಡ್ ನಮ್ಮ ಸಿಸ್ಟಮ್ ನಲ್ಲಿ ಎಕ್ಲಿಪ್ಸ್ ಸಾಫ್ಟ್ವೇರ್ ಅನ್ನು ನಮ್ಮ ಮುಂದಿಡುತ್ತದೆ ಹಾಗೂ ಅದನ್ನು ಇನ್ಸ್ಟಾಲ್ ಮಾಡುತ್ತದೆ.
05:15 Needs to get 10.8 Mb ಎಂದು ಬರೆದಿರುವ ಲೈನ್ ಅನ್ನು ಗಮನಿಸಿ.
05:22 ನಿಮ್ಮ ಸಿಸ್ಟಮ್ ಗೆ ಹಾಗೂ ಇಂಟರ್ನೆಟ್ ಗೆ ಅನುಗುಣವಾಗಿ ಈ ಸಂಖ್ಯೆಯು ಬೇರೆಯಿರುತ್ತದೆ.
05:27 ಪ್ಯಾಕೇಜ್ ಅನ್ನು ಲಿಸ್ಟ್ ಮಾಡಲು ತೆಗೆದುಕೊಳ್ಳುವ ಸಮಯವು ಕೂಡಾ ಬೇರೆ ಬೇರೆಯಾಗಿರುತ್ತದೆ.
05:30 Y ಅಥವಾ N ಎಂಬ ಪ್ರಾಮ್ಪ್ಟ್ ನಲ್ಲಿ y ಎಂದು ಟೈಪ್ ಮಾಡಿ Enter ಒತ್ತಿ.
05:39 ಬೇಕಾದ ಎಲ್ಲಾ ಪ್ಯಾಕೇಜ್ ಗಳು ಡೌನ್ಲೋಡ್ ಆದವು ಹಾಗು ಸಿಸ್ಟಮ್ ನಲ್ಲಿ ಅನ್ ಪ್ಯಾಕ್ ಆದವು.
05:59 ಯಾವಾಗ ಟರ್ಮಿನಲ್ ಎಂಬುದು ಡಾಲರ್ ಪ್ರಾಮ್ಪ್ಟ್ ಗೆ ಬರುತ್ತದೊ ಆಗ ಇನ್ಸ್ಟಾಲೇಶನ್ ಆಯಿತೆಂದರ್ಥ.
06:05 ಈಗ ನಾವು ಎಕ್ಲಿಪ್ಸ್ ಎಂಬುದು ಇನ್ಸ್ಟಾಲ್ ಆಯಿತೇ ಮತ್ತು ಅದು ನಮ್ಮ ಸಿಸ್ಟಮ್ ನಲಿ ಇದೆಯೇ ಎಂದು ಪರಿಶೀಲಿಸೋಣ.
06:10 Alt ಮತ್ತು F2 ಅನ್ನು ಒಟ್ಟಿಗೇ ಒತ್ತಿ. ಇಲ್ಲಿ ಡಯಲಾಗ್ ಬಾಕ್ಸ್ ನಲ್ಲಿ Eclipse ಎಂದು ಟೈಪ್ ಮಾಡಿ Enter ಒತ್ತಿ.
06:22 ಇದು eclipse application ಅನ್ನು ಪ್ರಾರಂಭಿಸುತ್ತದೆ. ಎಕ್ಲಿಪ್ಸ್ ಎಂಬುದು ಇನ್ಸ್ಟಾಲ್ ಆಗಿರದ ಪಕ್ಷದಲ್ಲಿ ಎಪ್ಲಿಕೇಶನ್ ಒಪನ್ ಆಗುವುದಿಲ್ಲ.
06:31 ಇಲ್ಲಿ ನಾವು Workspace Launcher ಎಂಬ ಪ್ರೊಮ್ಪ್ಟ್ ಅನ್ನು ಪಡೆಯುತ್ತೇವೆ. ಮುಂದುವರೆಯಲು OK ಎಂಬಲ್ಲಿ ಕ್ಲಿಕ್ ಮಾಡಿ.
06:40 ಈಗ ನಾವು Welcome to Eclipse ಎಂಬ ಪೇಜ್ ಅನ್ನು ಪಡೆಯುತ್ತೇವೆ. ಅಂದರೆ ಎಕ್ಲಿಪ್ಸ್ ಎಂಬುದು ಯಶಸ್ವಿಯಾಗಿ ನಮ್ಮ ಸಿಸ್ಟಮ್ ನಲ್ಲಿ ಇನ್ಸ್ಟಾಲ್ ಆಗಿದೆ ಎಂದರ್ಥ.
06:53 ಉಬಂಟುವಿನಲ್ಲಿ ಹೇಗೋ ಹಾಗೇ ಡೆಬಿಯೆನ್, ಕುಬಂಟು ಹಾಗೂ ಕ್ಸುಬಂಟು ವಿನಲ್ಲೂ ಕೂಡಾ ಎಕ್ಲಿಪ್ಸ್ ಅನ್ನು ಇನ್ಸ್ಟಾಲ್ ಮಾಡಬಹುದಾಗಿದೆ.
07:04 ರೆಡ್ ಹ್ಯಾಟ್ ನಲ್ಲೂ ಕೂಡಾ ಉಬಂಟುವಿನಲ್ಲಿ ಹೇಗೋ ಹಾಗೇ ಎಕ್ಲಿಪ್ಸ್ ಅನ್ನು ಇನ್ಸ್ಟಾಲ್ ಮಾಡಬಹುದು.
07:09 ಆದರೆ ಕೇವಲ ಸಾಫ್ಟ್ವೇರ್ ಅನ್ನು ಪಡೆಯಲು ಹಾಗು ಇನ್ಸ್ಟಾಲ್ ಮಾಡಲು ಇರುವ ಕಮಾಂಡ್ ನಲ್ಲಿ ವ್ಯತ್ಯಾಸವಿದೆ.
07:13 ಇಲ್ಲಿ ಸಾಫ್ಟ್ವೇರ್ ನ ಸೂಚಿಯನ್ನು ಪಡೆಯಲು sudo ಸ್ಪೇಸ್ yum ಸ್ಪೇಸ್ update ಎಂಬ ಕಮಾಂಡ್ ಅನ್ನು ಉಪಯೋಗಿಸಿ.
07:19 ಎಕ್ಲಿಪ್ಸ್ ಅನ್ನು ಇನ್ಸ್ಟಾಲ್ ಮಾಡಲು sudo ಸ್ಪೇಸ್ yum ಸ್ಪೇಸ್ install ಸ್ಪೇಸ್ eclipse ಎಂಬ ಕಮಾಂಡ್ ಅನ್ನು ಉಪಯೋಗಿಸಿ.
07:27 ರೆಡ್ ಹ್ಯಾಟ್ ನಲ್ಲಿ ಹೇಗೋ ಹಾಗೇ ಫೆಡೋರಾ, ಸೆಂಟೋಸ್ ಹಾಗೂ ಸುಸೆ ಲಿನಕ್ಸ್ ನಲ್ಲೂ ಕೂಡಾ ಎಕ್ಲಿಪ್ಸ್ ಅನ್ನು ಇನ್ಸ್ಟಾಲ್ ಮಾಡಬಹುದಾಗಿದೆ.
07:37 ಈಗ ನಾವು ಈ ಪಾಠದ ಕೊನೆಗೆ ಬಂದಿದ್ದೇವೆ.
07:39 ನಾವಿಲ್ಲಿ ಎಕ್ಲಿಪ್ಸ್ ಅನ್ನು ಉಬಂಟು ಹಾಗು ಅದರ ಸಮಾನ ಆಪರೇಟಿಂಗ್ ಸಿಸ್ಟಮ್ ನಲ್ಲಿ ಮತ್ತು ರೆಡ್ ಹ್ಯಾಟ್ ಹಾಗೂ ಅದರ ಸಮಾನ ಆಪರೇಟಿಂಗ್ ಸಿಸ್ಟಮ್ ನಲ್ಲಿ ಹೇಗೆ ಇನ್ಸ್ಟಾಲ್ ಮಾಡುವುದೆಂದು ತಿಳಿದೆವು.
07:49 ಈ ಟ್ಯುಟೋರಿಯಲ್ ನ ಅಭ್ಯಾಸಕ್ಕಾಗಿ,
07:52 ಎಕ್ಲಿಪ್ಸ್ ನ ಸಮಾನ ಇನ್ಸ್ಟಾಲೇಶನ್ ಪ್ರಕ್ರಿಯೆಯನ್ನು ಹೊಂದಿರುವ ಬೇರೆ ಆಪರೇಟಿಂಗ್ ಸಿಸ್ಟಮ್ ಗಳನ್ನು ಹುಡುಕಿ.
07:59 ಈ ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ನ ಬಗ್ಗೆ ಹೆಚ್ಚು ತಿಳಿಯಲು ದಯವಿಟ್ಟು ಈ ಲಿಂಕ್ ನಲ್ಲಿ ಸಿಗುವ ವೀಡಿಯೋ ವನ್ನು ನೋಡಿ.
08:04 ಇದು ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ನ ಸಾರಾಂಶವನ್ನು ಹೇಳುತ್ತದೆ.
08:07 ನಿಮ್ಮಲ್ಲಿ ಉತ್ತಮ ಬ್ಯಾಂಡ್ವಿಡ್ಥ್ ಇಲ್ಲವಾದಲ್ಲಿ ನೀವಿದನ್ನು ಡೌನ್ಲೋಡ್ ಮಾಡಿ ಕೂಡಾ ನೋಡಬಹುದು.
08:12 ಈ ಪಾಠವನ್ನಾಧಾರಿಸಿ ಸ್ಪೋಕನ್ ಟ್ಯುಟೊರಿಯಲ್ ಗಣವು ಕಾರ್ಯಶಾಲೆಯನ್ನು ನಡೆಸುತ್ತದೆ.
08:16 ಯಾರು ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ.
08:19 ಹೆಚ್ಚಿನ ಮಾಹಿತಿಗಾಗಿ contact@spoken-tutorial.org ಈ ಈ-ಮೇಲ್ ಮೂಲಕ ಸಂಪರ್ಕಿಸಿ.
08:26 ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ Talk to a Teacher ಎಂಬ ಪರಿಯೋಜನೆಯ ಭಾಗವಾಗಿದೆ.
08:30 ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ.
08:36 ಹೆಚ್ಚಿನ ಮಾಹಿತಿಗಾಗಿ spoken hyphen tutorial dot org slash NMEICT hyphen Intro ಇಲ್ಲಿ ನೋಡಿ.
08:42 ಈ ಪಾಠದ ಅನುವಾದಕ ಮತ್ತು ಪ್ರವಾಚಕ ಐ. ಐ. ಟಿ ಬಾಂಬೆ ಯಿಂದ ವಾಸುದೇವ.

ಧನ್ಯವಾದಗಳು.

Contributors and Content Editors

PoojaMoolya, Vasudeva ahitanal