Inkscape/C2/Create-and-edit-shapes/Kannada
From Script | Spoken-Tutorial
Time | Narration |
00:00 | ನಮಸ್ಕಾರ, ಕ್ರಿಯೇಟ್ ಆಂಡ್ ಎಡಿಟ್ ಶೇಪ್ಸ್ ಎನ್ನುವ ಇಂಕ್-ಸ್ಕೇಪ್-ನ ಟ್ಯುಟೋರಿಯಲ್ ಗೆ ಸ್ವಾಗತ. |
00:06 | ಈ ಟ್ಯುಟೋರಿಯಲ್ ನಲ್ಲಿ ನಾವು ತಿಳಿಯುವ ಅಂಶಗಳು: ಇಂಕ್ ಸ್ಕೇಪ್ ನ ಬಗೆಗೆ |
00:10 | ಇಂಕ್ ಸ್ಕೇಪ್ ನ ಇಂಟರ್ಫೇಸ್ ಬಗೆಗೆ ಮತ್ತು ಮೂಲಭೂತ ಆಕಾರಗಳನ್ನು ರಚಿಸುವ ಬಗೆ, |
00:16 | ಬಣ್ಣವನ್ನು ತುಂಬುವುದು ಮತ್ತು ಹ್ಯಾಂಡಲ್ ಗಳನ್ನು ಬಳಸಿ ಆಕಾರಗಳನ್ನು ರೂಪಾಂತರಿಸುವ ಬಗೆ. |
00:20 | ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡುವಾಗ, ನಾನು ಉಬುಂಟು ಲಿನಕ್ಸ್ ನ 12.04 ನೇ ಆವೃತ್ತಿಯ ಆಪರೇಟಿಂಗ್ ಸಿಸ್ಟಮ್ ಮತ್ತು ಇಂಕ್ ಸ್ಕೇಪ್ ನ 0.48.4 ನೇ ಆವೃತ್ತಿಯನ್ನು ಉಪಯೋಗಿಸಿದ್ದೇನೆ. |
00:29 | ಡ್ಯಾಶ್ ಹೋಮ್ ಗೆ ಹೋಗಿ, ಇಂಕ್ ಸ್ಕೇಪ್ ಎಂದು ಟೈಪ್ ಮಾಡಿ. |
00:34 | ಲೋಗೋ ಅನ್ನು ಡಬಲ್ ಕ್ಲಿಕ್ ಮಾಡಿ ಇಂಕ್ ಸ್ಕೇಪ್ ಅನ್ನು ಓಪನ್ ಮಾಡಬಹುದು. |
00:38 | ಇಂಟರ್ಫೇಸ್ ನ ಮೇಲೆ, ಮೆನು ಬಾರ್ ಮತ್ತು ಟೂಲ್ ಕಂಟ್ರೋಲ್ ಬಾರ್ ಗಳನ್ನು ನೋಡಬಹುದು. |
00:44 | ಇದರ ನಂತರ, ಮೇಲ್ಭಾಗದಲ್ಲಿ ಮತ್ತು ಪಕ್ಕದಲ್ಲಿ ರೂಲರ್ ಗಳಿರುತ್ತವೆ. |
00:48 | ಇಂಟರ್ಫೇಸ್ ನ ಬಲ ಭಾಗದಲ್ಲಿ, ಕಮಾಂಡ್ ಬಾರ್ ಮತ್ತು ಸ್ನ್ಯಾಪ್ ಕಂಟ್ರೋಲ್ ಬಾರ್ ಗಳನ್ನು ನೋಡಬಹುದು. |
00:54 | ಟೂಲ್ ಬಾಕ್ಸ್, ಇಂಟರ್ಫೇಸ್ ನ ಎಡ ಭಾಗದಲ್ಲಿ ಇರುತ್ತದೆ. |
00:58 | ಮಧ್ಯದಲ್ಲಿರುವುದು ಕ್ಯಾನ್ವಾಸ್. ಇಲ್ಲಿಯೇ ನೀವು ಗ್ರಾಫಿಕ್ಸ್ ಅನ್ನು ರಚಿಸುವುದು. |
01:03 | ಇಂಟರ್ಫೇಸ್ ನ ಕೆಳಭಾಗದಲ್ಲಿ, ಕಲರ್ ಪ್ಯಾಲೆಟ್ ಮತ್ತು ಸ್ಟೇಟಸ್ ಬಾರ್ ಅನ್ನು ನೋಡಬಹುದು. |
01:09 | ಈಗ, ಇಂಕ್ ಸ್ಕೇಪ್ ನಲ್ಲಿ ಕೆಲವು ಮೂಲಭೂತ ಆಕಾರಗಳನ್ನು ರಚಿಸುವುದು ಮತ್ತು ಬದಲಾಯಿಸುವುದನ್ನು ಕಲಿಯೋಣ. |
01:14 | ಮೊದಲಿಗೆ ಸೆಲೆಕ್ಟ್ ಮತ್ತು ಟ್ರ್ಯಾನ್ಸ್ ಫಾರ್ಮ್ ಟೂಲ್ ಬಗೆಗೆ ಕಲಿಯೋಣ. ಇದನ್ನು ಸಾಮಾನ್ಯವಾಗಿ ಸೆಲೆಕ್ಟರ್ ಟೂಲ್ ಎನ್ನುತ್ತಾರೆ. |
01:22 | ಇದು ಬಹಳ ಮುಖ್ಯ ಸಾಧನವಾಗಿದೆ. ಇದು ಟೂಲ್ ಬಾಕ್ಸ್ ನ ಎಡಭಾಗದಲ್ಲಿರುತ್ತದೆ. |
01:28 | ಈ ಸಾಧನದಿಂದ, ಆಬ್ಜೆಕ್ಟ್ ಗಳನ್ನು ಆರಿಸಬಹುದು, ರೂಪಾಂತರಿಸಬಹುದು ಮತ್ತು ಕ್ಯಾನ್ವಾಸ್ ನಲ್ಲಿ ಅವುಗಳ ಸ್ಥಾನ ಬದಲಾಯಿಸಬಹುದು. |
01:34 | ಹೊಸ ಇಂಕ್ ಸ್ಕೇಪ್ ಫೈಲ್ ಅನ್ನು ತೆರೆಯಲು, ಫೈಲ್ ಅನ್ನು ಕ್ಲಿಕ್ ಮಾಡಿ, ನಂತರ ನ್ಯೂ (new) ಎಂಬುದನ್ನು ಆರಿಸಿ, ಡಿಫಾಲ್ಟ್ (default) ಅನ್ನು ಕ್ಲಿಕ್ ಮಾಡಿ. |
01:41 | ಈಗಾಗಲೇ ಇರುವ ಇಂಕ್ ಸ್ಕೇಪ್ ಫೈಲ್ ಅನ್ನು ತೆರೆಯಲು, ಫೈಲ್ ನ ಮೇಲೆ ಕ್ಲಿಕ್ ಮಾಡಿ, ಓಪನ್ ಎಂಬುದನ್ನು ಆರಿಸಿ. |
01:47 | ಈಗಾಗಲೇ ರಚಿಸಿರುವ, ಡ್ರಾಯಿಂಗ್ ಅಂಡರ್ಸ್ಕೋರ್ ಒನ್ ಡಾಟ್ ಎಸ್ ವಿ ಜಿ (drawing_1.svg) ಫೈಲ್ ಅನ್ನು ಓಪನ್ ಮಾಡೋಣ. |
01:53 | ನಾನು ಇದನ್ನು ಡಾಕ್ಯುಮೆಂಟ್ಸ್ ಫೋಲ್ಡರ್ ನಲ್ಲಿ ಸೇವ್ ಮಾಡಿದ್ದೆ. ಬಲಭಾಗದಲ್ಲಿರುವ ಒಪನ್ ಬಟನ್ ಅನ್ನು ಕ್ಲಿಕ್ ಮಾಡಿ. |
02:01 | ನಾವು ಆಯತವನ್ನು ಅನ್ನು ರಚಿಸಿದ್ದೆವು. |
02:04 | ಈಗ ಆಯತವನ್ನು ಕ್ಲಿಕ್ ಮಾಡಿ. |
02:06 | ಸಾಮಾನ್ಯವಾಗಿ, ಆಯತದ ಬಣ್ಣ ಹಸಿರು ಆಗಿರುತ್ತದೆ. |
02:09 | ಬಣ್ಣ ಬದಲಾಯಿಸಲು, ಕೆಳಗಿರುವ ಕಲರ್ ಪ್ಯಾಲೆಟ್ ಅನ್ನು ಬಳಸೋಣ. |
02:14 | ಹಾಗಾಗಿ, ನಾನು, ಕರ್ಸರ್ ಅನ್ನು ಕೆಳಗೆ ಸರಿಸುವೆ ಮತ್ತು ಕೆಂಪು ಬಣ್ಣವನ್ನು ಕ್ಲಿಕ್ ಮಾಡುತ್ತೇನೆ. |
02:18 | ಆಯತದ ಬಣ್ಣ ಬದಲಾಗಿದ್ದನ್ನು ಗಮನಿಸಿ. |
02:22 | ಆಯತದ ಸ್ಥಳ ಬದಲಾವಣೆ ಮಾಡೋಣ. ಹೀಗೆ ಮಾಡಲು, ಆಯತದ ಮೇಲೆ ಎಲ್ಲಿಯಾದರೂ ಕ್ಲಿಕ್ ಮಾಡಿ. |
02:27 | ಈಗ, ಮೌಸ್ ಬಟನ್ ಅನ್ನು ಬಿಡದೆ, ಕ್ಯಾನ್ವಾಸ್ ನ ಮೇಲೆ ನಿಮಗೆ ಬೇಕಾದೆಡೆಗೆ ಎಳೆಯಿರಿ. |
02:33 | ನಂತರ, ಮೌಸ್ ಬಟನ್ ಅನ್ನು ಬಿಡಿ. |
02:37 | ಸರಿಯಾಗಿ ನೋಡಲು, ಝೂಮ್(zoom) ಮಾಡೋಣ. ಇದಕ್ಕಾಗಿ, ಕಂಟ್ರೊಲ್(ctrl) ಕೀಯನ್ನು ಒತ್ತಿ ಮತ್ತು ಮೌಸ್ ನ ಸ್ಕ್ರೋಲ್ ಬಟನ್ ಅನ್ನು ಉಪಯೋಗಿಸಿ. |
02:46 | ಆಯತದ ಸುತ್ತ ಬಾಣಗಳನ್ನು ನೋಡಬಹುದು. ಇವುಗಳನ್ನು ಹ್ಯಾಂಡಲ್ ಗಳು ಎನ್ನುತ್ತಾರೆ, ಇವನ್ನು ಅಳೆಯಲು ಮತ್ತು ತಿರುಗುಸಲು ಬಳಸುತ್ತಾರೆ. |
02:57 | ಕರ್ಸರ್ ಅನ್ನು ಯಾವುದೇ ಹ್ಯಾಂಡಲ್ ನ ಮೇಲೆ ಇಟ್ಟಾಗ, ಹ್ಯಾಂಡಲ್ ನ ಬಣ್ಣ ಬದಲಾಗುತ್ತದೆ. |
03:02 | ಇದು, ಆ ನಿರ್ದಿಷ್ಟ ಹ್ಯಾಂಡಲ್ ಆಯ್ಕೆ ಆಗಿದೆ ಮತ್ತು ಮರುಗಾತ್ರಗೊಳಿಸಲು ಸಿದ್ಧವಾಗಿದೆ ಎಂಬುದನ್ನು ಸೂಚಿಸುತ್ತದೆ. |
03:08 | ಆಯತವನ್ನು ಅಳೆಯಲು ಅಥವಾ ಮರುಗಾತ್ರಗೊಳಿಸಲು, ಯಾವುದೇ ಮೂಲೆಯ ಹ್ಯಾಂಡಲ್ ಅನ್ನು ಕ್ಲಿಕ್ ಮಾಡಿ ಮತ್ತು ಎಳೆಯಿರಿ. |
03:17 | ನೀವು ಅದೇ ಆಕಾರ ಅನುಪಾತವನ್ನು ಇರಿಸಿಕೊಳ್ಳಲು ಬಯಸಿದಲ್ಲಿ, ಮರುಗಾತ್ರಗೊಳಿಸುವಾಗ Ctrl ಕೀ ಯನ್ನು ಹಿಡಿದುಕೊಳ್ಳಿ. |
03:24 | ಆಯತದ ಉದ್ದ ಅಥವಾ ಅಗಲವನ್ನು ಬದಲಾಯಿಸಲು, ಆಯತದ ಪಕ್ಕದ ಹ್ಯಾಂಡಲ್ ಗಳನ್ನು ಬಳಸಿ. |
03:32 | ಹ್ಯಾಂಡಲ್ ಅನ್ನು ಕ್ಲಿಕ್ ಮಾಡಿ, ಎಡ ಅಥವಾ ಬಲಕ್ಕೆ ಎಳೆಯಿರಿ. |
03:39 | ಆಯತದ ಅಗಲದಲ್ಲಿ ಆಗುವ ವ್ಯತ್ಯಾಸವನ್ನು ಗಮನಿಸಿ. |
03:43 | ಈಗ, ಆಯತದ ಉದ್ದವನ್ನು ಬದಲಾಯಿಸೋಣ. |
03:46 | ಹಾಗಾಗಿ, ನಾವು ಆಯತದ ಮೇಲಿನ ಅಥವಾ ಕೆಳಗಿನ ಹ್ಯಾಂಡಲ್ ಅನ್ನು ಕ್ಲಿಕ್ ಮಾಡಿ, ಎಳೆಯೋಣ. |
03:51 | ಆಯತದ ಉದ್ದದಲ್ಲಿ ಆಗುವ ಬದಲಾವಣೆಯನ್ನು ಗಮನಿಸಿ. |
03:54 | ನಾವು ಟೂಲ್ ಕಂಟ್ರೋಲ್ ಬಾರ್ ನಲ್ಲಿರುವ ವಿಡ್ತ್(width) ಮತ್ತು ಹೈಟ್ (height) ಪ್ಯಾರಾಮೀಟರ್ ಗಳನ್ನು ಬದಲಾಯಿಸುವುದರಿಂದ ಕೂಡಾ ಆಯತದ ಎತ್ತರ ಮತ್ತು ಅಗಲವನ್ನು ಬದಲಾಯಿಸಬಹುದು. |
04:03 | ನಾನು ವಿಡ್ತ್ ಅನ್ನು ನಾಲ್ಕುನೂರು ಎಂದು, ಮತ್ತು ಹೈಟ್ ಅನ್ನು ಇನ್ನೂರು ಎಂದೂ ಬದಲಾಯಿಸುತ್ತೇನೆ. |
04:07 | ಈಗ ಆಯತದ ಗಾತ್ರದಲ್ಲಾದ ಬದಲಾವಣೆಯನ್ನು ಗಮನಿಸಿ. |
04:10 | ಇದೇ ರೀತಿ, ಎಕ್ಸ್ ಮತ್ತು ವೈ ಆಕ್ಸಿಸ್ ಅನ್ನು ಬದಲಾಯಿಸುವುದರಿಂದ ಆಬ್ಜೆಕ್ಟ್ ನ ಸ್ಥಳ ಬದಲಾವಣೆ ಮಾಡಬಹುದು. |
04:19 | ಈಗ, ಆಯತವನ್ನು ಹೇಗೆ ತಿರುಗಿಸುವುದು ಎಂಬುದನ್ನು ನೋಡೋಣ. |
04:24 | ಇದನ್ನು ಮಾಡಲು, ಆಯತದ ಮೇಲೆ ಮತ್ತೊಮ್ಮೆ ಕ್ಲಿಕ್ ಮಾಡಿ. |
04:27 | ಈಗ ಮೂಲೆಯಲ್ಲಿರುವ ಹ್ಯಾಂಡಲ್ ನ ಆಕಾರವು ಬದಲಾಗಿ, ತಿರುಗಿಸುವುದಕ್ಕೆ ಸಿದ್ಧವಾಗಿರುವುದನ್ನು ನೋಡಬಹುದು. |
04:34 | ನಾನು ಬಲ ಭಾಗದ ಮೇಲಿನ ಮೂಲೆಯ ಹ್ಯಾಂಡಲ್ ಅನ್ನು ಕ್ಲಿಕ್ ಮಾಡಿ, ಆಯತವನ್ನು ತಿರುಗಿಸುತ್ತೇನೆ. |
04:44 | ನೀವು ಪಕ್ಕದ ಯಾವುದೇ ಹ್ಯಾಂಡಲ್ ಗಳನ್ನು ಕ್ಲಿಕ್ ಮಾಡಿ ಎಳೆದು, ಆಯತವನ್ನು ಓರೆಗೊಳಿಸಬಹುದು. |
04:50 | ನಾನು ಎಡ ಪಕ್ಕದ ಮಧ್ಯದ ಹ್ಯಾಂಡಲ್ ಅನ್ನು ಕ್ಲಿಕ್ ಮಾಡಿ, ಮೇಲೆ ಅಥವಾ ಕೆಳಗೆ ಎಳೆದು ಆಯತವನ್ನು ಓರೆಗೊಳಿಸುತ್ತೇನೆ. |
04:56 | ನಾನು ಮಾಡುತ್ತಿರುವಾಗ ಆಗುವ ಬದಲಾವಣೆಗಳನ್ನು ಗಮನಿಸಿ. |
04:59 | ಇನ್ನೊಂದು ಟ್ಯುಟೋರಿಯಲ್ ನಲ್ಲಿ ನಾವು ಹ್ಯಾಂಡಲ್ ಗಳ ಬಗೆಗೆ ಇನ್ನಷ್ಟು ತಿಳಿಯೋಣ. |
05:04 | ಈಗ ಆಕಾರದ ಆಯ್ಕೆಯನ್ನು ರದ್ದುಗೊಳಿಸೋಣ. |
05:06 | ಹೀಗೆ ಮಾಡಲು, ಕ್ಯಾನ್ವಾಸ್ ನ ಮೇಲೆ ಎಲ್ಲಿಯಾದರೂ ಅಥವಾ ಕ್ಯಾನ್ವಾಸ್ ನ ಗಡಿಯಾಚೆ ಕ್ಲಿಕ್ ಮಾಡಿ. |
05:11 | ಮೌಸ್ ಅನ್ನು ನಾನು ಮತ್ತೆ ಟೂಲ್ ಬಾಕ್ಸ್ ನಲ್ಲಿ ಅದೇ ರೆಕ್ಟ್ಯಾಂಗಲ್ ಗೆ ತರುತ್ತೇನೆ. |
05:17 | ಈ ಟೂಲ್ ಅನ್ನು ಉಪಯೋಗಿಸಿ, ನಾವು ಆಯತಗಳನ್ನು ಮತ್ತು ಚೌಕವನ್ನು ಚಿತ್ರಿಸಬಹುದೆಂದು ಟೂಲ್ ಟಿಪ್ ಹೇಳುತ್ತದೆ. |
05:22 | ಹಾಗಾಗಿ, ಮೊದಲು ಈ ಟೂಲ್ ನ ಮೇಲೆ ಕ್ಲಿಕ್ ಮಾಡುತ್ತೇನೆ. |
05:25 | ಚೌಕವನ್ನು ಚಿತ್ರಿಸಲು, ctrl(ಕಂಟ್ರೋಲ್) ಕೀಯನ್ನು ಒತ್ತಿ, ಕ್ಯಾನ್ವಾಸ್ ನ ಮೇಲೆ ಎಳೆಯಿರಿ. |
05:30 | ಇದರ ಬಣ್ಣವನ್ನು ಗುಲಾಬಿ ಬಣ್ಣಕ್ಕೆ ಬದಲಾಯಿಸೋಣ. |
05:32 | ನಿಮಗೆ ಒಂದು ಅಸೈನ್ಮೆಂಟ್. |
05:34 | ಕ್ರಿಯೇಟ್ ಸರ್ಕಲ್ ಎಂಡ್ ಎಲಿಪ್ಸಸ್ ಎಂಬ ಟೂಲ್ ಅನ್ನು ಟೂಲ್ ಬಾಕ್ಸ್ ನಲ್ಲಿ ಆಯ್ಕೆ ಮಾಡಿ, |
05:38 | ctrl ಕೀಯನ್ನು ಉಪಯೋಗಿಸಿ, ಕ್ಯಾನ್ವಾಸ್ ನ ಮೇಲೆ, ವೃತ್ತವನ್ನು ರಚಿಸಿ. |
05:42 | ಇದಕ್ಕೆ ನೀಲಿ ಬಣ್ಣ ತುಂಬಿ. |
05:44 | ಇದು ನನ್ನ ವೃತ್ತ. |
05:46 | ಈಗ, ಈ ವೃತ್ತವನ್ನು ಹೇಗೆ ರೂಪಾಂತರಿಸುವುದು ಎಂಬುದನ್ನು ಕಲಿಯೋಣ. |
05:49 | ಸ್ಟಾರ್ಟ್ ಮತ್ತು ಎಂಡ್ ಪ್ಯಾರಮೀಟರ್ ಗಳನ್ನು ಬದಲಾಯಿಸಿ, ನೀವು, ವೃತ್ತದ ಆಕಾರವನ್ನು ಕಮಾನು ರೂಪಕ್ಕೆ ತರಬಹುದು. |
05:56 | ಆಕಾರಗಳನ್ನು ಬದಲಾಯಿಸಲು, ಟೂಲ್ ಕಂಟ್ರೋಲ್ ಬಾರ್ ನಲ್ಲಿ ಮೂರು ಆಯ್ಕೆಗಳಿವೆ. |
06:03 | ನಾನೀಗ, ಸ್ಟಾರ್ಟ್ ಪ್ಯಾರಾಮೀಟರ್ ಅನ್ನು ನೂರು ಎಂದು ಮತ್ತು ಎಂಡ್ ಪ್ಯಾರಾಮೀಟರ್ ಅನ್ನು ಮೈನಸ್ ಐವತ್ತು ಎಂದೂ ಬದಲಾಯಿಸುತ್ತೇನೆ. |
06:09 | ವೃತ್ತದ ಆಕಾರವು ಈಗ ಕಮಾನಿನ ರೂಪ ತಳೆದಿರುವುದನ್ನು ನೀವು ಗಮನಿಸಬಹುದು. |
06:14 | ನಾನೀಗ, ಆರ್ಕ್ (arc) ಐಕಾನ್ ಅನ್ನು ಕ್ಲಿಕ್ ಮಾಡುತ್ತೇನೆ. ಆಕಾರದಲ್ಲಿ ಆದ ಬದಲಾವಣೆಯನ್ನು ನಾವು ನೋಡಬಹುದು. |
06:19 | ನಾವು ಸರ್ಕಲ್ ಐಕಾನ್ ಅನ್ನು ಕ್ಲಿಕ್ ಮಾಡಿ, ಆಕಾರವನ್ನು ಪುನಃ ವೃತ್ತವಾಗಿ ಬದಲಾಯಿಸಬಹುದು. |
06:25 | ಈಗ, ಕ್ಯಾನ್ವಾಸ್ ನ ಮೇಲಿರುವ ವೃತ್ತದ ಆಕಾರವನ್ನು ಪರಿಶೀಲಿಸೋಣ. |
06:30 | ಎರಡು ಸ್ಕ್ವೇರ್ ಹ್ಯಾಂಡಲ್ ಗಳು ಮತ್ತು ಎರಡು ಸರ್ಕ್ಯುಲರ್ ಹ್ಯಾಂಡಲ್ ಅಥವಾ ಆರ್ಕ್ ಹ್ಯಾಂಡಲ್ ಗಳನ್ನು ಆಕಾರದ ಮೇಲೆ ಗಮನಿಸಿ. |
06:37 | ಎರಡು ಸ್ಕ್ವೇರ್ ಹ್ಯಾಂಡಲ್ ಗಳನ್ನು ವೃತ್ತದ ಆಕಾರವನ್ನು ದೀರ್ಘವೃತ್ತದ ಆಕಾರಕ್ಕೆ ಬದಲಾಯಿಸಲು ಉಪಯೋಗಿಸಬಹುದು. |
06:44 | ಈ ಹ್ಯಾಂಡಲ್ ಗಳನ್ನು ಮೇಲೆ-ಕೆಳಗೆ ಅಥವಾ ಎಡ-ಬಲಕ್ಕೆ ಎಳೆಯಿರಿ. |
06:53 | ಆಕಾರದಲ್ಲಾಗುವ ಬದಲಾವಣೆಗಳನ್ನು ಗಮನಿಸಿ. |
06:56 | ಎರಡು ಆರ್ಕ್ ಹ್ಯಾಂಡಲ್ ಗಳು ಒಂದರ ಮೇಲೊಂದು ವ್ಯಾಪಿಸುತ್ತವೆ. ಆರ್ಕ್ ಹ್ಯಾಂಡಲ್ ಅನ್ನು ಕ್ಲಿಕ್ ಮಾಡಿ, ಮತ್ತು ಅದನ್ನು ಅಪ್ರದಕ್ಷಿಣವಾಗಿ ತಿರುಗಿಸಿ. |
07:04 | ಈಗ ನಾವು ಎರಡೂ ಆರ್ಕ್ ಹ್ಯಾಂಡಲ್ ಗಳನ್ನೂ ನೋಡಬಹುದು. |
07:08 | ಈ ಆರ್ಕ್ ಹ್ಯಾಂಡಲ್ ಗಳನ್ನು ಉಪಯೋಗಿಸಿ, ವೃತ್ತದ ಆಕಾರವನ್ನು ಕಮಾನಿನ ಆಕಾರವಾಗಿ ಬದಲಾಯಿಸಬಹುದು. |
07:14 | ಇವುಗಳನ್ನು ಪ್ರದಕ್ಷಿಣೆ ಅಥವಾ ಅಪ್ರದಕ್ಷಿಣವಾಗಿ ತಿರುಗಿಸಿ, ಆಕಾರದಲ್ಲಾಗುವ ಬದಲಾವಣೆಗಳನ್ನು ಗಮನಿಸಿ. |
07:24 | ಈಗ, ಟೂಲ್ ಬಾಕ್ಸ್ ನಲ್ಲಿರುವ, ರೆಕ್ಟ್ಯಾಂಗಲ್ ಟೂಲ್ ನ ಮೇಲೆ ಕ್ಲಿಕ್ ಮಾಡಿ, ಮತ್ತು ಚೌಕದ ಮೇಲೆ ಕ್ಲಿಕ್ ಮಾಡಿ. |
07:30 | ಎರಡು ರಿಸೈಸ್ ಹ್ಯಾಂಡಲ್ ಗಳು ಮತ್ತು ಎರಡು ಆರ್ಕ್ ಹ್ಯಾಂಡಲ್ ಗಳನ್ನು, ಆಕಾರದ ಮೇಲಿನ ಬಲ ಮೂಲೆಯಲ್ಲಿ ಗಮನಿಸಿ. |
07:40 | ಮೊದಲಿನಂತೆಯೇ, ಎರಡು ಆರ್ಕ್ ಹ್ಯಾಂಡಲ್ ಗಳು ಒಂದರ ಮೇಲೊಂದು ವ್ಯಾಪಿಸಿವೆ. |
07:43 | ಯಾವುದಾದರೂ ಒಂದು ಆರ್ಕ್ ಹ್ಯಾಂಡಲ್ ನ ಮೇಲೆ ಕ್ಲಿಕ್ ಮಾಡಿ, ಅದನ್ನು ಪ್ರದಕ್ಷಿಣಾಕಾರವಾಗಿ ತಿರುಗಿಸಿ. |
07:48 | ಈಗ, ನಾವು ಎರಡೂ ಆರ್ಕ್ ಹ್ಯಾಂಡಲ್ ಗಳನ್ನೂ ನೋಡಬಹುದು. |
07:51 | ನಾವು, ಈ ಹ್ಯಾಂಡಲ್ ಗಳನ್ನು ಬಳಸಿ, ಚೌಕಗಳಿಗೆ ದುಂಡಾದ ಅಂಚುಗಳನ್ನು ಕೊಡಬಹುದು. |
07:56 | ಅವುಗಳನ್ನು ಪ್ರದಕ್ಷಿಣೆ ಅಥವಾ ಅಪ್ರದಕ್ಷಿಣಾಕಾರವಾಗಿ ತಿರುಗಿಸಿ ಮತ್ತು ಆಕಾರದಲ್ಲಾಗುವ ಬದಲಾವಣೆಗಳನ್ನು ಗಮನಿಸಿ. |
08:02 | ಈಗ, ಟೂಲ್ ಬಾಕ್ಸ್ ನಲ್ಲಿರುವ, ಸ್ಟಾರ್ಸ್ ಎಂಡ್ ಪಾಲಿಗಾನ್ ಟೂಲ್ ಅನ್ನು ಕ್ಲಿಕ್ ಮಾಡಿ, ಒಂದು ಪಾಲಿಗಾನ್ ಅನ್ನು ರಚಿಸೋಣ. |
08:08 | ಇದು ಸರ್ಕಲ್ ಟೂಲ್ ನ ಕೆಳಗೆ ಇದೆ. ಅದನ್ನು ಕ್ಲಿಕ್ ಮಾಡಿ. |
08:13 | ನಾವು ಪಾಲಿಗಾನ್ ಅನ್ನು ಮೊದಲಿನಂತೆಯೇ ರಚಿಸಿ, ಹಸಿರು ಬಣ್ಣ್ವನ್ನು ತುಂಬೋಣ. |
08:20 | ಸಾಮಾನ್ಯವಾಗಿ, ಐದು ಮೂಲೆಯ ಪಾಲಿಗಾನ್ ಅಂದರೆ, ಪಂಚಕೋನಾಕೃತಿ ಆಗುತ್ತದೆ. |
08:24 | ಟೂಲ್ ಕಂಟ್ರೋಲ್ ಬಾರ್ ಅನ್ನು ನೋಡಿ, ಇಲ್ಲಿ, ನಂಬರ್ ಆಫ್ ಕಾರ್ನರ್ಸ್ ಆಫ್ ಪಾಲಿಗಾನ್ ಈಸ್ ಫೈವ್ ಎಂದು ಇರುತ್ತದೆ. |
08:32 | ನೀವು ಈ ಸಂಖ್ಯೆಯನ್ನು ನಾಲ್ಕು ಎಂದು ಬದಲಾಯಿಸಿ, ಚೌಕವನ್ನು ಮತ್ತು ಮೂರು ಎಂದು ಬದಲಾಯಿಸಿ ತ್ರಿಕೋನವನ್ನೂ ರಚಿಸಬಹುದು. |
08:39 | ಹೀಗೆಯೇ, ಇದನ್ನು ಹೆಚ್ಚಿಸಿ, ಪಂಚಕೋನಾಕೃತಿ, ಷಡ್ಭುಜಾಕೃತಿ ಗಳನ್ನು ರಚಿಸಬಹುದು. |
08:44 | ಪಾಲಿಗಾನ್ ನ ಮೇಲೆ ರಿಸೈಸ್ ಹ್ಯಾಂಡಲ್ ಅನ್ನು ಗಮನಿಸಿ. |
08:47 | ಇದನ್ನು, ಪಾಲಿಗಾನ್ ನ ಗಾತ್ರ ಬದಲಾವಣೆಗೆ ಅಥವಾ ತಿರುಗಿಸಲು ಬಳಸಬಹುದು. |
08:52 | ಇದನ್ನು ನಕ್ಷತ್ರ ಆಕಾರಕ್ಕೆ ತರಲು, ಟೂಲ್ ಕಂಟ್ರೋಲ್ ಬಾರ್ ನಲ್ಲಿ, ಪಾಲಿಗಾನ್ ಐಕಾನ್ ನ ಪಕ್ಕಕ್ಕಿರುವ ಸ್ಟಾರ್ ಇಕಾನ್ ಅನ್ನು ಕ್ಲಿಕ್ ಮಾಡಿ, |
09:00 | ನಕ್ಷತ್ರ ಆಕಾರಕ್ಕೆ ಎರಡು ಹ್ಯಾಂಡಲ್ ಗಳು ಇರುವುದನ್ನು ಗಮನಿಸಿ, ತುದಿಯಲ್ಲಿ ಒಂದು ಮತ್ತು ಸಂಧಿಯಲ್ಲಿ ಒಂದು. |
09:06 | ಗಾತ್ರ ಬದಲಾಯಿಸಲು ಅಥವಾ ತಿರುಗಿಸಲು, ಸ್ಟಾರ್ ನ ತುದಿಯಲ್ಲಿರುವ ಹ್ಯಾಂಡಲ್ ಅನ್ನು ಕ್ಲಿಕ್ ಮಾಡಿ ಎಳೆಯಿರಿ. |
09:12 | ಇನ್ನೊಂದು ಹ್ಯಾಂಡಲ್ ಅನ್ನು ಬಳಸಿ, ನಾವು, ನಕ್ಷತ್ರದ ಗಾತ್ರ ಬದಲಾಯಿಸಬಹುದು ಮತ್ತು ಓರೆಗೊಳಿಸಬಹುದು. |
09:17 | ಅದನ್ನು ಕ್ಲಿಕ್ ಮಾಡಿ ಪ್ರದಕ್ಷಿಣಾಕಾರ ಅಥವಾ ಅಪ್ರದಕ್ಷಿಣಾಕಾರವಾಗಿ ತಿರುಗಿಸಿ ಮತ್ತು ರೂಪ ಹಾಗೂ ಗಾತ್ರದಲ್ಲಾಗುವ ಬದಲಾವಣೆಯನ್ನು ಗಮನಿಸಿ. |
09:25 | ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ. ಸಾರಾಂಶ ತಿಳಿಯೋಣ. |
09:30 | ಈ ಟ್ಯುಟೋರಿಯಲ್ ನಲ್ಲಿ, ನಾವು, ಇಂಕ್ ಸ್ಕೇಪ್ ಇಂಟರ್ಫೇಸ ನ ಬಗೆಗೆ ಕಲಿತೆವು. |
09:34 | ನಾವು ಕಲಿತ ಇತರ ಅಂಶಗಳು : ಮೂಲಭೂತ ಆಕಾರಗಳಾದ ಆಯತ, ಚೌಕ, ವೃತ್ತ, ದೀರ್ಘವೃತ್ತ, ಪಾಲಿಗಾನ್ ಮತ್ತು ನಕ್ಷತ್ರಗಳನ್ನು ರಚಿಸುವುದು. |
09:42 | ಆಕಾರಗಳಿಗೆ ಬಣ್ಣವನ್ನು ತುಂಬುವುದು ಮತ್ತು ಹ್ಯಾಂಡಲ್ ಗಳನ್ನು ಬಳಸಿ ಆಕಾರಗಳನ್ನು ಬದಲಾಯಿಸುವುದು. |
09:46 | ನಿಮಗಾಗಿ ಒಂದು ಅಸೈನ್ಮೆಂಟ್ ಇಲ್ಲಿದೆ. |
09:49 | ಒಂದು ನೀಲಿ ಬಣ್ಣದ ಆಯತ, ಒಂದು ಕೆಂಪು ಬಣ್ಣದ ವೃತ್ತ, ಒಂದು ಹಸಿರು ಬಣ್ಣದ ಏಳು ಭುಜದ ನಕ್ಷತ್ರ ಗಳನ್ನು ರಚಿಸಿ. |
09:58 | ನಿಮ್ಮ ಅಸೈನ್ಮೆಂಟ್ ಹೀಗೆ ಕಾಣಬೇಕು. |
10:03 | ಕೆಳಗಿನ ಲಿಂಕ್ ನಲ್ಲಿರುವ ವೀಡಿಯೋವನ್ನು ನೋಡಿರಿ. ಇದು ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ಅನ್ನು ವಿವರಿಸುತ್ತದೆ. |
10:09 | ಒಳ್ಳೆಯ ಬ್ಯಾಂಡ್ ವಿಡ್ತ್ ಇಲ್ಲದಿದ್ದಲ್ಲಿ ನೀವು ಇದನ್ನು ಡೌನ್ ಲೋಡ್ ಮಾಡಿ ನೋಡಬಹುದು. |
10:13 | ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ಟೀಮ್, ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಉಪಯೋಗಿಸಿ ಕಾರ್ಯಗಾರವನ್ನು ನಡೆಸುತ್ತದೆ. ಆನ್ ಲೈನ್ ಪರೀಕ್ಷೆಯಲ್ಲಿ ತೇರ್ಗಡೆಹೊಂದಿದವರಿಗೆ ಸರ್ಟಿಫಿಕೇಟ್ ಕೊಡುತ್ತದೆ. |
10:22 | ಹೆಚ್ಚಿನ ಮಾಹಿತಿಗಾಗಿ, contact@spoken-tutorial.org ಗೆ ಬರೆಯಿರಿ. |
10:28 | ಸ್ಪೋಕನ್ ಟ್ಯುಟೋರಿಯಲ್, ಟಾಕ್ ಟು ಎ ಟೀಚರ್ ಪ್ರೊಜಕ್ಟ್ ನ ಒಂದು ಭಾಗವಾಗಿದೆ. |
10:32 | ಇದು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯಿಂದ ಬೆಂಬಲಿತವಾಗಿದೆ. |
10:38 | ಈ ನಿಯೋಗದ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯು ಸ್ಪೋಕನ್ ಹೈಫನ್ ಟ್ಯುಟೋರಿಯಲ್ ಡಾಟ್ ಒ ಆರ್ ಜಿ ಸ್ಲ್ಯಾಶ್ ಎನ್ ಎಮ್ ಇ ಐ ಸಿ ಟಿ ಹೈಫನ್ ಇಂಟ್ರೊ ಎಂಬ ಲಿಂಕ್ ನಲ್ಲಿ ದೊರೆಯುತ್ತದೆ. |
10:47 | ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ. |
10:50 | ಈ ಟ್ಯುಟೋರಿಯಲ್ ನ ಅನುವಾದಕಿ ಬೆಂಗಳೂರಿನಿಂದ ಚೇತನಾ ಹಾಗೂ ಪ್ರವಾಚಕ ಐ ಐ ಟಿ ಬಾಂಬೆಯಿಂದ ರಾಕೇಶ. ಧನ್ಯವಾದಗಳು. |
Contributors and Content Editors
Chetana, PoojaMoolya, Rakeshkkrao, Sandhya.np14, Vasudeva ahitanal