Git/C2/The-git-checkout-command/Kannada
From Script | Spoken-Tutorial
|
|
00:01 | git checkout command (ಗಿಟ್ ಚೆಕ್-ಔಟ್ ಕಮಾಂಡ್) ಎಂಬ 'ಸ್ಪೋಕನ್ ಟ್ಯುಟೋರಿಯಲ್'ಗೆ ನಿಮಗೆ ಸ್ವಾಗತ. |
00:06 | ಈ ಟ್ಯುಟೋರಿಯಲ್ ನಲ್ಲಿ, ನಾವು: * ಒಂದಕ್ಕಿಂತ ಹೆಚ್ಚು ಫೈಲ್ ಗಳನ್ನು ‘ಗಿಟ್ ರಿಪಾಸಿಟರಿ’ಗೆ ಸೇರಿಸುವುದು |
00:12 | 'ಗಿಟ್ ರಿಪಾಸಿಟರಿ'ಯಿಂದ ಫೈಲನ್ನು ತೆಗೆದುಹಾಕುವುದು |
00:16 | ತೆಗೆದುಹಾಕಿದ ಫೈಲನ್ನು ಪುನಃ ಸೇರಿಸುವುದು |
00:18 | ಫೈಲ್ ನಲ್ಲಿ ಮಾಡಿದ ಬದಲಾವಣೆಗಳನ್ನು ತ್ಯಜಿಸುವುದು ಮತ್ತು |
00:21 | ಹಿಂದಿನ ಪರಿಷ್ಕರಣೆಗೆ (ರಿವಿಜನ್) ಹಿಂದಿರುಗುವುದು ಇತ್ಯಾದಿಗಳ ಬಗ್ಗೆ ಕಲಿಯುವೆವು. |
00:25 | ಈ ಟ್ಯುಟೋರಿಯಲ್ ಗಾಗಿ, ನಾನು: 'Ubuntu Linux' (ಉಬಂಟು ಲಿನಕ್ಸ್) 14.04 |
00:31 | 'Git' 2.3.2. ಮತ್ತು 'gedit' ಟೆಕ್ಸ್ಟ್ ಎಡಿಟರ್ ಇವುಗಳನ್ನು ಬಳಸುತ್ತಿದ್ದೇನೆ. |
00:36 | ನಿಮಗೆ ಇಷ್ಟವಾದ ಯಾವುದೇ ಎಡಿಟರ್ ಅನ್ನು ನೀವು ಬಳಸಬಹುದು. |
00:40 | ಈ ಟ್ಯುಟೋರಿಯಲ್ ಅನ್ನು ಅನುಸರಿಸಲು, ನೀವು ಟರ್ಮಿನಲ್ ನ ಮೇಲೆ ಲಿನಕ್ಸ್ ಕಮಾಂಡ್ ಗಳನ್ನು ರನ್ ಮಾಡಲು ತಿಳಿದಿರಬೇಕು. |
00:47 | ಇಲ್ಲದಿದ್ದಲ್ಲಿ, ಸಂಬಂಧಿತ 'Linux' ಟ್ಯುಟೋರಿಯಲ್ ಗಳಿಗಾಗಿ ದಯವಿಟ್ಟು ನಮ್ಮ ವೆಬ್ಸೈಟ್ ಅನ್ನು ನೋಡಿ. |
00:52 | ಈಗ, ನಾವು ಒಂದಕ್ಕಿಂತ ಹೆಚ್ಚು ಫೈಲ್ ಗಳನ್ನು ‘ಗಿಟ್ ರಿಪೊಸಿಟರಿ’ಗೆ ಹೇಗೆ ಸೇರಿಸುವುದು ಎಂಬುದನ್ನು ನೋಡೋಣ. |
00:58 | ಟರ್ಮಿನಲ್ ಅನ್ನು ಓಪನ್ ಮಾಡಲು 'Ctrl+Alt+T' ಕೀಗಳನ್ನು ಒಟ್ಟಿಗೇ ಒತ್ತಿ. |
01:02 | ನಾವು ಈಮೊದಲು ಕ್ರಿಯೇಟ್ ಮಾಡಿದ "mywebpage" ಎಂಬ ನಮ್ಮ ‘ಗಿಟ್ ರಿಪಾಸಿಟರಿ’ಯ ಒಳಗೆ ಹೋಗುವೆವು. |
01:09 | ಹೀಗೆ ಟೈಪ್ ಮಾಡಿ: 'cd space mywebpage' ಮತ್ತು 'Enter' ಅನ್ನು ಒತ್ತಿ. |
01:14 | ಇಲ್ಲಿ ಪ್ರದರ್ಶಿಸಲು, ನಾನು 'html' ಫೈಲ್ ಗಳನ್ನು ಬಳಸುವುದನ್ನು ಮುಂದುವರೆಸುವೆನು. |
01:19 | ನೀವು, ನಿಮಗೆ ಇಷ್ಟವಾದ ಯಾವುದೇ ಪ್ರಕಾರದ ಫೈಲನ್ನು ಬಳಸಬಹುದು. |
01:23 | ನಾವು ಈಗ ಎರಡು 'html' (ಎಚ್ ಟಿ ಎಮ್ ಎಲ್) ಫೈಲ್ ಗಳನ್ನು ಕ್ರಿಯೇಟ್ ಮಾಡುವೆವು. |
01:27 | ಆದ್ದರಿಂದ, ಹೀಗೆ ಟೈಪ್ ಮಾಡಿ: 'gedit space mystory.html space mynovel.html space ampersand'. |
01:37 | ಪ್ರಾಂಪ್ಟ್ ಅನ್ನು ಮುಕ್ತಗೊಳಿಸಲು ನಾವು & (ಆಂಪರ್ಸಂಡ್) ಅನ್ನು ಬಳಸುತ್ತೇವೆ. 'Enter' ಅನ್ನು ಒತ್ತಿ. |
01:43 | ನಾನು ಮೊದಲು ಸೇವ್ ಮಾಡಿದ ನನ್ನ 'Writer' ಡಾಕ್ಯೂಮೆಂಟ್ ನಿಂದ ಸ್ವಲ್ಪ ಕೋಡ್ ಅನ್ನು ಈ ಫೈಲ್ ಗಳಲ್ಲಿ ಕಾಪಿ ಮತ್ತು ಪೇಸ್ಟ್ ಮಾಡುವೆನು. |
01:50 | ನಾವು ಈ ಫೈಲ್ ಗಳನ್ನು ಸೇವ್ ಮಾಡೋಣ. |
01:53 | 'ಟರ್ಮಿನಲ್' ನಲ್ಲಿ, 'git space status' ಎಂದು ಟೈಪ್ ಮಾಡಿ, 'Enter' ಅನ್ನು ಒತ್ತಿ ಮತ್ತು ಮೊದಲು 'Git ಸ್ಟ್ಯಾಟಸ್' ಅನ್ನು ನೋಡಿ. |
02:03 | ಅದು ಎರಡು ಅನ್ಟ್ರ್ಯಾಕ್ಡ್ (untracked) ಫೈಲ್ ಗಳನ್ನು ತೋರಿಸುತ್ತದೆ. |
02:06 | ನಾವು ಈಗ ಅನ್ಟ್ರ್ಯಾಕ್ಡ್ ಫೈಲ್ ಗಳನ್ನು ಟ್ರ್ಯಾಕಿಂಗ್ ಗಾಗಿ ಸೇರಿಸುವೆವು. |
02:10 | ಹೀಗೆ ಟೈಪ್ ಮಾಡಿ: 'git space add space dot' ಮತ್ತು 'Enter' ಅನ್ನು ಒತ್ತಿ. |
02:17 | 'git add dot' ಕಮಾಂಡ್, ಎಲ್ಲ ಅನ್ಟ್ರ್ಯಾಕ್ಡ್ ಫೈಲ್ ಗಳನ್ನು 'ಸ್ಟೇಜಿಂಗ್ ಏರಿಯಾ'ಗೆ ಸೇರಿಸುವುದು. |
02:23 | ಹೀಗಾಗಿ, "mystory.html" ಹಾಗೂ "mynovel.html" ಈ ಎರಡು ಫೈಲ್ ಗಳನ್ನು ‘ಸ್ಟೇಜಿಂಗ್ ಏರಿಯಾ’ ಗೆ ಸೇರಿಸಲಾಗಿದೆ. |
02:32 | 'git space status' ಎಂದು ಟೈಪ್ ಮಾಡಿ ಮತ್ತು ‘Enter’ ಅನ್ನು ಒತ್ತುವುದರ ಮೂಲಕ ನಾವು 'Git ಸ್ಟ್ಯಾಟಸ್' ಅನ್ನು ಮತ್ತೊಮ್ಮೆ ಪರೀಕ್ಷಿಸೋಣ. |
02:40 | ಈಗ, ‘ಗಿಟ್ ರಿಪಾಸಿಟರಿ’ಯ ‘ಸ್ಟೇಜಿಂಗ್ ಏರಿಯಾ’ಗೆ ನಮ್ಮ ಎರಡೂ ಫೈಲ್ ಗಳು ಸೇರಿಸಲ್ಪಟ್ಟಿವೆ ಎಂಬುದನ್ನು ನಾವು ನೋಡಬಹುದು. |
02:47 | ನಾವು 'mystory.html' ಹಾಗೂ 'mynovel.html' ಎಂಬ ನಮ್ಮ ಫೈಲ್ ಗಳಿಗೆ ಹಿಂದಿರುಗೋಣ. |
02:54 | ಈಗ, ನಾವು ಈ ಎರಡು ಫೈಲ್ ಗಳಿಗೆ ಇನ್ನೂ ಕೆಲವು ಸಾಲು ಕೋಡ್ ಅನ್ನು ಸೇರಿಸುವೆವು. |
03:00 | ಹಿಂದಿನಂತೆ, ನನ್ನ 'Writer' ಡಾಕ್ಯೂಮೆಂಟ್ ನಿಂದ ನಾನು ಕಾಪಿ-ಪೇಸ್ಟ್ ಮಾಡುವೆನು. |
03:05 | ಮತ್ತೊಮ್ಮೆ ಫೈಲ್ ಗಳನ್ನು ಸೇವ್ ಮಾಡಿ ಹಾಗೂ ಮುಚ್ಚಿ. |
03:08 | 'git space status' ಎಂದು ಟೈಪ್ ಮಾಡಿ ಮತ್ತು ‘Enter’ ಅನ್ನು ಒತ್ತುವುದರ ಮೂಲಕ ನಾವು 'Git ಸ್ಟ್ಯಾಟಸ್'ಅನ್ನು ಮತ್ತೊಮ್ಮೆ ಪರೀಕ್ಷಿಸೋಣ. |
03:16 | ಇದು “Changes not staged for commit” ಹಾಗೂ “modified: mynovel.html" ಮತ್ತು "mystory.html” ಎಂದು ತೋರಿಸುತ್ತದೆ. |
03:26 | ನಾವು ಮಾಡಿದ ಬದಲಾವಣೆಗಳನ್ನು ‘ಸ್ಟೇಜಿಂಗ್ ಏರಿಯಾ’ಗೆ ಸೇರಿಸಲಾಗಿಲ್ಲ ಎಂದು ಇದರ ಅರ್ಥ. |
03:32 | ನಾವು ಈಗ ನಮ್ಮ ಕೆಲಸವನ್ನು ಈ ಹಂತದಲ್ಲಿ 'ಕಮಿಟ್' ಮಾಡೋಣ. |
03:36 | ಆದ್ದರಿಂದ, ಹೀಗೆ ಟೈಪ್ ಮಾಡಿ: ‘git space commit space hyphen a space hyphen m space’ ಡಬಲ್ ಕೋಟ್ಸ್ ನಲ್ಲಿ “Added two files” ಮತ್ತು 'Enter' ಅನ್ನು ಒತ್ತಿ. |
03:50 | ಕಮಿಟ್ ಮಾಡುವ ಮೊದಲು, ನಾವು ಮಾರ್ಪಡಿಸಿದ ಫೈಲ್ ಗಳನ್ನು ‘ಸ್ಟೇಜಿಂಗ್ ಏರಿಯಾ’ಗೆ ಸೇರಿಸಲಿಲ್ಲ ಮತ್ತು |
03:57 | ನಾವು ಹಿಂದಿನ ಟ್ಯುಟೋರಿಯಲ್ ನಲ್ಲಿ ನೋಡಿದಂತೆ, 'ಕಮಿಟಿಂಗ್ ಮೆಸೇಜ್' ಗಾಗಿ ಎಡಿಟರ್ ಸಹ ತೆರೆದುಕೊಳ್ಳಲಿಲ್ಲ ಎಂಬುದನ್ನು ಗಮನಿಸಿ. |
04:03 | ಏಕೆಂದರೆ, ಇಲ್ಲಿ ನಾವು 'ಹೈಫನ್ a' ಮತ್ತು 'ಹೈಫನ್ m' ಫ್ಲ್ಯಾಗ್ ಗಳನ್ನು ಬಳಸಿದ್ದೇವೆ. |
04:10 | ಈ ಫ್ಲ್ಯಾಗ್ ಗಳು ಇರುವದು ಏತಕ್ಕಾಗಿ? |
04:13 | ನಮ್ಮ ಸ್ಲೈಡ್ ಗಳಿಗೆ ಹಿಂತಿರುಗಿ. |
04:15 | ಎಲ್ಲ ಮಾರ್ಪಡಿಸಿದ ಫೈಲ್ ಗಳನ್ನು ‘ಸ್ಟೇಜಿಂಗ್ ಏರಿಯಾ’ಗೆ ಸೇರಿಸಲು 'ಹೈಫನ್ a' ಫ್ಲ್ಯಾಗ್ ಅನ್ನು ಬಳಸಲಾಗುವುದು. |
04:21 | ನಾವು 'ಹೈಫನ್ a' ಫ್ಲ್ಯಾಗ್ ಅನ್ನು ಬಳಸಿದಾಗ, ಮಾರ್ಪಡಿಸಿದ ಫೈಲ್ ಗಳನ್ನು ‘ಸ್ಟೇಜಿಂಗ್ ಏರಿಯಾ’ ಗೆ ಸೇರಿಸಲು ನಮಗೆ ಮತ್ತೆ 'git add' ಕಮಾಂಡ್ ಅನ್ನು ಬಳಸುವ ಅವಶ್ಯಕತೆ ಇಲ್ಲ. |
04:30 | 'ಕಮಾಂಡ್ ಲೈನ್' ನಲ್ಲಿ 'ಕಮಿಟ್ ಮೆಸೇಜ್' ಅನ್ನು ಕೊಡಲು, 'ಹೈಫನ್ m' ಫ್ಲ್ಯಾಗ್ ಅನ್ನು ಬಳಸಲಾಗುತ್ತದೆ. |
04:36 | ನಾವು 'ಹೈಫನ್ a' ಮತ್ತು 'ಹೈಫನ್ m' ಫ್ಲ್ಯಾಗ್ ಗಳನ್ನು 'ಹೈಫನ್ am' ಎಂದು ಬಳಸಬಹುದು. |
04:42 | 'ಟರ್ಮಿನಲ್'ಗೆ ಹಿಂದಿರುಗಿ. |
04:45 | 'git space log' ಎಂದು ಟೈಪ್ ಮಾಡಿ, 'Enter' ಅನ್ನು ಒತ್ತಿ ಮತ್ತು 'Git log' ಅನ್ನು ನೋಡಿ. |
04:52 | 'ಕಮಿಟ್' ಗಳ ಪಟ್ಟಿಯನ್ನು ನೀವು ನೋಡಬಹುದು. |
04:54 | ಇತ್ತೀಚಿನ 'ಕಮಿಟ್' ಗಳನ್ನು ಮೊದಲು ಪಟ್ಟಿ ಮಾಡಲಾಗಿದೆ ಎಂಬುದನ್ನು ಗಮನಿಸಿ. |
04:58 | ಎಂದರೆ, ಕಮಿಟ್ ಗಳನ್ನು ಕಾಲಾನುಕ್ರಮದಲ್ಲಿ ಪಟ್ಟಿ ಮಾಡಲಾಗಿದೆ. |
05:03 | ಒಂದುವೇಳೆ ನೀವು ‘ಗಿಟ್ ರಿಪಾಸಿಟರಿ’ ಗೆ ತಪ್ಪು ಫೈಲನ್ನು ಸೇರಿಸಿದ್ದರೆ, ಅದನ್ನು ಸುಲಭವಾಗಿ ತೆಗೆದುಹಾಕಬಹುದು. |
05:10 | ಉದಾಹರಣೆಗೆ, ನನಗೆ 'mypage.html' ಫೈಲನ್ನು ತೆಗೆದುಹಾಕಬೇಕಾಗಿದೆ. |
05:16 | ಹೀಗೆ ಟೈಪ್ ಮಾಡಿ: 'git space rm space hyphen hyphen cached space mypage dot html' ಮತ್ತು 'Enter' ಅನ್ನು ಒತ್ತಿ. |
05:26 | ಈ ಕಮಾಂಡ್, 'mypage.html' ಫೈಲನ್ನು ‘ಸ್ಟೇಜಿಂಗ್ ಏರಿಯಾ’ದಿಂದ ತೆಗೆದುಹಾಕುವುದು. |
05:32 | 'git space status' ಎಂದು ಟೈಪ್ ಮಾಡಿ ಮತ್ತು ‘Enter’ ಅನ್ನು ಒತ್ತುವುದರ ಮೂಲಕ ನಾವು 'Git ಸ್ಟ್ಯಾಟಸ್'ಅನ್ನು ಈಗ ಪರೀಕ್ಷಿಸುವೆವು. |
05:40 | 'mypage.html' ಫೈಲ್, ಅನ್ಟ್ರ್ಯಾಕ್ಡ್ ಇದೆ ಎಂದು ಇದು ಹೇಳುತ್ತಿದೆ. |
05:45 | ಈಗ, 'rm space mypage dot html' ಎಂದು ಟೈಪ್ ಮಾಡಿ ಹಾಗೂ 'Enter' ಅನ್ನು ಒತ್ತುವುದರ ಮೂಲಕ |
05:49 | ನಾವು ಫೈಲ್ ಸಿಸ್ಟಂನಿಂದ ಫೈಲನ್ನು ತೆಗೆದುಹಾಕಬಹುದು. |
05:55 | ಈ ಕಮಾಂಡ್, 'mywebpage' ಫೋಲ್ಡರ್ ನಿಂದ ಫೈಲನ್ನು ಪೂರ್ತಿಯಾಗಿ ತೆಗೆದುಹಾಕುವುದು. |
06:00 | ಈಗ, ನಾವು ‘ಗಿಟ್ ರಿಪಾಸಿಟರಿ’ ಯಿಂದ ಫೈಲನ್ನು ತೆಗೆದುಹಾಕಲಾಗಿದೆಯೇ ಎಂದು ಪರೀಕ್ಷಿಸುವೆವು. |
06:06 | ಆದ್ದರಿಂದ, ಹೀಗೆ ಟೈಪ್ ಮಾಡಿ: 'git space status' ಮತ್ತು 'Enter' ಅನ್ನು ಒತ್ತಿ. |
06:12 | ಇದು “deleted: mypage.html” ಎಂಬ ಮೆಸೇಜನ್ನು ತೋರಿಸುತ್ತದೆ. |
06:16 | ಈಗ, "ls" ಎಂದು ಟೈಪ್ ಮಾಡಿ 'Enter' ಅನ್ನು ಒತ್ತಿ ಹಾಗೂ ಫೈಲ್ ಗಳನ್ನು ಲಿಸ್ಟ್ ಮಾಡಿ. |
06:21 | ಇಲ್ಲಿ, 'mypage.html' ಫೈಲನ್ನು ಡಿಲೀಟ್ ಮಾಡಿರುವುದರಿಂದ ಇನ್ನುಮುಂದೆ ನಾವು ಅದನ್ನು ನೋಡಲು ಸಾಧ್ಯವಿಲ್ಲ. |
06:28 | ಈ ಹಂತದಲ್ಲಿ, ನಾವು ನಮ್ಮ ಕೋಡ್ ಅನ್ನು ಫ್ರೀಜ್ ಮಾಡೋಣ. |
06:32 | 'ಕಮಿಟ್' ಮಾಡಲು, ಹೀಗೆ ಟೈಪ್ ಮಾಡಿ: 'git space commit space hyphen am space' ಡಬಲ್ ಕೋಟ್ಸ್ ನಲ್ಲಿ “Deleted mypage.html” ಹಾಗೂ 'Enter' ಅನ್ನು ಒತ್ತಿ. |
06:45 | ನಾವು 'git space log' ಎಂದು ಟೈಪ್ ಮಾಡಿ, 'Enter' ಅನ್ನು ಒತ್ತಿ, 'Git log' ಅನ್ನು ನೋಡೋಣ. |
06:51 | ಹೊರಬರಲು ನಿಮ್ಮ ಕೀಬೋರ್ಡ್ ಮೇಲಿನ 'q' ಕೀಯನ್ನು ಒತ್ತಿ. |
06:55 | ಇಲ್ಲಿ, ನಾವು ಕಮಿಟ್ ಮೆಸೇಜನ್ನು ಓದಿ ಇತ್ತೀಚೆಗಿನ ಕಮಿಟ್ ಅನ್ನು ನೋಡಬಹುದು. |
06:59 | ಈಗ, ಒಂದುವೇಳೆ, ಆಕಸ್ಮಿಕವಾಗಿ ನಾವು 'mypage.html' ಅನ್ನು ಡಿಲೀಟ್ ಮಾಡಿದ್ದರೆ ಮತ್ತು ಅದನ್ನು ಈಗ ಮರಳಿ ಪಡೆಯಬೇಕಾಗಿದ್ದರೆ, |
07:08 | ನಾವು ಏನು ಮಾಡಬಹುದು? |
07:09 | ಹಿಂದಿನ ಕಮಿಟ್ ಗಳಿಂದ ಡಿಲೀಟ್ ಮಾಡಿದ ಫೈಲನ್ನು ನಾವು ಮರಳಿ ಪಡೆಯಬಹುದು. |
07:13 | “Added two files” ಎಂಬ 'ಕಮಿಟ್ ಮೆಸೇಜ್' ಅನ್ನು ಹೊಂದಿರುವ ಎರಡನೆಯ 'ಕಮಿಟ್'ನಿಂದ ನಾವು ನಮ್ಮ ಫೈಲನ್ನು ಮರಳಿ ಪಡೆಯೋಣ. |
07:20 | ಎರಡನೆಯ 'ಕಮಿಟ್ ಹ್ಯಾಶ್' ನ ಮೊದಲ ಐದು ಅಂಕಿಗಳನ್ನು ಆಯ್ಕೆಮಾಡಿ |
07:24 | ಮತ್ತು ಅವುಗಳನ್ನು ಕಾಪಿ ಮಾಡಲು 'Ctrl + Shift + C' ಕೀಗಳನ್ನು ಒತ್ತಿ. |
07:28 | ಮೊದಲ ಐದು ಅಂಕಿಗಳು ಇದ್ದರೆ ಸಾಕು. |
07:31 | ಆದರೆ, ನೀವು ಇಷ್ಟಪಟ್ಟರೆ ಐದಕ್ಕಿಂತ ಹೆಚ್ಚು ಅಂಕಿಗಳನ್ನು ಸಹ ಕಾಪಿ ಮಾಡಬಹುದು. |
07:36 | ಹೀಗೆ ಟೈಪ್ ಮಾಡಿ: 'git space checkout space' ಹಾಗೂ 'ಕಮಿಟ್ ಹ್ಯಾಶ್' ಅನ್ನು ಪೇಸ್ಟ್ ಮಾಡಲು 'Ctrl + Shift + V' ಕೀಗಳನ್ನು ಒತ್ತಿ. |
07:45 | ಈಗ, ಫೈಲ್ ನ ಹೆಸರನ್ನು " mypage.html" ಎಂದು ಟೈಪ್ ಮಾಡಿ ಮತ್ತು 'Enter' ಅನ್ನು ಒತ್ತಿ. |
07:51 | 'git space status' ಎಂದು ಟೈಪ್ ಮಾಡಿ, 'Enter' ಅನ್ನು ಒತ್ತಿ, 'Git status' ಅನ್ನು ನೋಡಿ. |
07:58 | ಈಗ, ನೀವು 'mypage.html' ಫೈಲನ್ನು ನೋಡಬಹುದು. |
08:02 | ನಾವು ಈ ಹಂತದಲ್ಲಿ ನಮ್ಮ ಕೆಲಸವನ್ನು 'ಕಮಿಟ್' ಮಾಡೋಣ. |
08:05 | ನಾವು ಯಾವುದೇ ಫೈಲನ್ನು ಸೇರಿಸಿದಾಗ ಅಥವಾ ತೆಗೆದುಹಾಕಿದಾಗಲೆಲ್ಲ, ನಮ್ಮ ಕೆಲಸವನ್ನು 'ಕಮಿಟ್' ಮಾಡುವುದು ಬಹಳ ಮುಖ್ಯವಾಗಿದೆ ಎಂಬುದನ್ನು ಗಮನಿಸಿ. |
08:12 | ಹೀಗೆ ಟೈಪ್ ಮಾಡಿ: 'git space commit space hyphen am space “Restored mypage.html” ' ಹಾಗೂ 'Enter' ಅನ್ನು ಒತ್ತಿ. |
08:22 | ಈಗ “ls” ಎಂದು ಟೈಪ್ ಮಾಡಿ, 'Enter' ಅನ್ನು ಒತ್ತಿ, ಫೈಲ್ ಗಳನ್ನು ಲಿಸ್ಟ್ ಮಾಡಿ. |
08:28 | ನಮ್ಮ ಫೈಲ್ 'mypage.html' ಅನ್ನು ಹಿಂದಿರುಗಿಸಲಾಗಿದೆ ಎಂದು ನಾವು ನೋಡಬಹುದು. |
08:33 | ನಂತರ, ಫೈಲ್ ನಲ್ಲಿ ಮಾಡಿದ ಬದಲಾವಣೆಗಳನ್ನು ಹೇಗೆ ತ್ಯಜಿಸುವುದೆಂದು ನಾವು ನೋಡುವೆವು. |
08:38 | 'gedit space mypage.html space mystory.html space ampersand' ಎಂದು ಟೈಪ್ ಮಾಡಿ, 'Enter' ಅನ್ನು ಒತ್ತಿ, ಫೈಲ್ ಗಳನ್ನು ತೆರೆಯಿರಿ. |
08:50 | 'mypage.html' ಮತ್ತು 'mystory.html' ಗಳಲ್ಲಿ ನಾವು ಕೆಲವು ಬದಲಾವಣೆಗಳನ್ನು ಮಾಡುವೆವು. |
08:58 | ಎರಡೂ ಫೈಲ್ ಗಳಲ್ಲಿ ನಾವು ಕೆಲವು ಸಾಲುಗಳನ್ನು ಸೇರಿಸೋಣ ಹಾಗೂ ತೆಗೆದುಹಾಕೋಣ. |
09:03 | ಆಮೇಲೆ ಫೈಲ್ ಗಳನ್ನು ಸೇವ್ ಮಾಡಿ ಹಾಗೂ ಮುಚ್ಚಿ. |
09:06 | ಕೆಲವು ಸಂದರ್ಭಗಳಲ್ಲಿ, ನಾವು ಈ ಬದಲಾವಣೆಗಳೊಂದಿಗೆ ಮುಂದುವರಿಯಲು ಬಯಸದೆ ಇರಬಹುದು. |
09:11 | ನಮ್ಮ ಕೆಲಸದ ಹಿಂದಿನ ಹಂತಕ್ಕೆ ನಮಗೆ ಹಿಂದಿರುಗಬೇಕಾಗಿದೆ ಎಂದು ಇದರ ಅರ್ಥ. |
09:16 | ಇದನ್ನು ಹೇಗೆ ಮಾಡುವುದು ಎಂಬುದನ್ನು ನಾವು ತಿಳಿಯೋಣ. |
09:19 | ಮೊದಲು, ನಾವು 'git space status' ಎಂದು ಟೈಪ್ ಮಾಡಿ, 'Enter' ಅನ್ನು ಒತ್ತಿ, 'Git status' ಅನ್ನು ನೋಡುವೆವು. |
09:27 | ಕೆಲವು ಫೈಲ್ ಗಳನ್ನು ಮಾರ್ಪಡಿಸಲಾಗಿದೆ ಎಂದು ಇದು ಹೇಳುತ್ತದೆ. |
09:30 | ಈಗ, ಹೀಗೆ ಟೈಪ್ ಮಾಡಿ: 'git space checkout space dot' ಮತ್ತು 'Enter' ಅನ್ನು ಒತ್ತಿ. |
09:37 | ಈ 'ಕಮಾಂಡ್', ನಮ್ಮ ಕೆಲಸದ ಇತ್ತೀಚಿನ ಬದಲಾವಣೆಗಳನ್ನು ಡಿಲೀಟ್ ಮಾಡುವುದು. |
09:41 | 'git space status' ಎಂದು ಟೈಪ್ ಮಾಡಿ, 'Enter' ಅನ್ನು ಒತ್ತಿ, 'Git status' ಅನ್ನು ನೋಡಿ. |
09:48 | ಇದು, “nothing to commit” ಎಂದು ಹೇಳುತ್ತದೆ. |
09:51 | ಬದಲಾವಣೆಗಳು ಇನ್ನೂ ಇಲ್ಲಿ ಇವೆಯೇ ಎಂದು ನೋಡಲು ನಾವು ಫೈಲ್ ಗಳನ್ನು ಪರಿಶೀಲಿಸೋಣ. |
09:57 | ಹೀಗೆ ಟೈಪ್ ಮಾಡಿ: 'gedit space mypage.html space mystory.html &' ಹಾಗೂ 'Enter' ಅನ್ನು ಒತ್ತಿ. |
10:07 | ನಾವು ಮಾಡಿದ ಬದಲಾವಣೆಗಳನ್ನು ತ್ಯಜಿಸಲಾಗಿದೆ ಎಂಬುದನ್ನು ನೋಡಬಹುದು. ಫೈಲ್ ಗಳನ್ನು ಮುಚ್ಚಿಬಿಡಿ. |
10:13 | ಈಗ, ನಾವು 'git space log' ಎಂದು ಟೈಪ್ ಮಾಡಿ, 'Enter' ಅನ್ನು ಒತ್ತಿ, 'Git log' ಅನ್ನು ನೋಡೋಣ. |
10:20 | ಇದು 'ಕಮಿಟ್' ಗಳ ಪಟ್ಟಿಯನ್ನು ತೋರಿಸುತ್ತದೆ. |
10:23 | ಇನ್ನೂ ಹೆಚ್ಚು ನೋಡಲು 'ಡೌನ್-ಆರೋ' ಕೀಯನ್ನು ಒತ್ತಿ. |
10:26 | ಹೊರಬರಲು, ನಿಮ್ಮ ಕೀಬೋರ್ಡ್ ಮೇಲಿನ 'q' ಕೀಯನ್ನು ಒತ್ತಿ. |
10:30 | ಒಂದುವೇಳೆ ನಿಮಗೆ 'ಕಮಿಟ್' ಗಳ ಪಟ್ಟಿಯನ್ನು ಒಂದೇ ಸಾಲಿನಲ್ಲಿ ನೋಡಬೇಕಾಗಿದ್ದರೆ, ಹೀಗೆ ಟೈಪ್ ಮಾಡಿ: 'git space log space hyphen hyphen oneline' ಮತ್ತು 'Enter' ಅನ್ನು ಒತ್ತಿ. |
10:42 | ಇಲ್ಲಿ, ಒಂದೇ ಸಾಲಿನಲ್ಲಿ 'ಕಮಿಟ್' ಗಳ 'ಕಮಿಟ್ ಹ್ಯಾಶ್' ಮತ್ತು 'ಕಮಿಟ್ ಮೆಸೇಜ್' ಗಳಿರುವ ಪಟ್ಟಿಯನ್ನು ನೀವು ನೋಡಬಹುದು. |
10:48 | ನಮ್ಮ ಕೆಲಸದ ಹಿಂದಿನ ರಿವಿಜನ್ ಗೆ ನಾವು ಹೇಗೆ ಹೋಗಬಹುದು? |
10:53 | ಪ್ರಸ್ತುತ, ನಾವು ರಿಪಾಸಿಟರಿಯಲ್ಲಿ ನಾಲ್ಕು 'ಕಮಿಟ್' ಗಳನ್ನು |
10:56 | ಎಂದರೆ, ನಮ್ಮ ಕೆಲಸದ ನಾಲ್ಕು ರಿವಿಜನ್ ಗಳನ್ನು (ಪರಿಷ್ಕರಣೆಗಳನ್ನು) ಹೊಂದಿದ್ದೇವೆ. |
11:01 | ನಮಗೆ “Initial commit” ಹಂತಕ್ಕೆ ಮರಳಿ ಹೋಗಬೇಕಾಗಿದೆ ಎಂದುಕೊಳ್ಳಿ. |
11:05 | ಆದ್ದರಿಂದ, ಹೀಗೆ ಟೈಪ್ ಮಾಡಿ: 'git space checkout space'. ನಂತರ “Initial commit” ನ 'ಕಮಿಟ್ ಹ್ಯಾಶ್'ಅನ್ನು ಕಾಪಿ-ಪೇಸ್ಟ್ ಮಾಡಿ ಮತ್ತು 'Enter' ಅನ್ನು ಒತ್ತಿ. |
11:15 | “ls” ಎಂದು ಟೈಪ್ ಮಾಡಿ 'Enter' ಅನ್ನು ಒತ್ತುವುದರ ಮೂಲಕ ಫೈಲ್ ಗಳನ್ನು ಪಟ್ಟಿಮಾಡಿ. |
11:19 | ಇಲ್ಲಿ, ನಾವು 'mypage.html' ಎಂಬ ಒಂದೇ ಒಂದು ಫೈಲನ್ನು ನೋಡಬಹುದು. ಏಕೆಂದರೆ, ಈ ಹಂತದಲ್ಲಿ ನಮ್ಮ ಹತ್ತಿರ ಈ ಫೈಲ್ ಮಾತ್ರ ಇತ್ತು. |
11:28 | ಈಗ, 'git space log' ಎಂದು ಟೈಪ್ ಮಾಡಿ, 'Enter' ಅನ್ನು ಒತ್ತಿ ಮತ್ತು 'Git log' ಅನ್ನು ನೋಡಿ. |
11:34 | ನಾವು ಮೊದಲನೆಯ 'ಕಮಿಟ್'ಅನ್ನು ಎಂದರೆ “Initial commit” ಅನ್ನು ಮಾತ್ರ ನೋಡಬಹುದು. |
11:39 | ಸದ್ಯದ ರಿವಿಜನ್ ಗೆ ಹಿಂದಿರುಗಲು, ಹೀಗೆ ಟೈಪ್ ಮಾಡಿ: 'git space checkout space master' ಮತ್ತು 'Enter' ಅನ್ನು ಒತ್ತಿ. |
11:48 | ನಾವು 'master' ಎಂಬ ಪದದ ಬಗ್ಗೆ ಮುಂದಿನ ಟ್ಯುಟೊರಿಯಲ್ ಗಳಲ್ಲಿ ಇನ್ನೂ ಹೆಚ್ಚು ತಿಳಿದುಕೊಳ್ಳುವೆವು. |
11:53 | ನಾವು, 'git space log space hyphen hyphen oneline' ಎಂದು ಟೈಪ್ ಮಾಡಿ, |
11:57 | 'Enter' ಅನ್ನು ಒತ್ತಿ, ಮತ್ತೊಮ್ಮೆ 'Git log' ಅನ್ನು ನೋಡೋಣ. |
12:03 | ಈಗ ನೀವು ನಾಲ್ಕೂ 'ಕಮಿಟ್' ಗಳನ್ನು ನೋಡಬಹುದು. ಆದ್ದರಿಂದ, ನಾವು ಈಗ ಇತ್ತೀಚಿನ 'ಸ್ಟೇಜ್' ನಲ್ಲಿ ಇದ್ದೇವೆ. |
12:10 | ನಾವು ಈ ರೀತಿಯಲ್ಲಿ, ನಮ್ಮ ಕೆಲಸದ ಯಾವುದೇ ಹಂತಕ್ಕೆ ಮರಳಿ ಹೋಗಬಹುದು. |
12:14 | ಹಳೆಯ ರಿವಿಜನ್ ಗೆ ಹೋಗಲು ಇನ್ನೊಂದು ರೀತಿಯಿದೆ. |
12:18 | ಹೀಗೆ ಟೈಪ್ ಮಾಡಿ: 'git space reset space hyphen hyphen hard' |
12:23 | ಆಮೇಲೆ, “Initial commit” ನ 'ಕಮಿಟ್ ಹ್ಯಾಶ್'ಅನ್ನು ಕಾಪಿ-ಪೇಸ್ಟ್ ಮಾಡಿ ಮತ್ತು 'Enter' ಅನ್ನು ಒತ್ತಿ. |
12:29 | 'git space log' ಎಂದು ಟೈಪ್ ಮಾಡಿ, 'Enter' ಅನ್ನು ಒತ್ತಿ 'Git log' ಅನ್ನು ನೋಡಿ. |
12:35 | ನಾವು ಈಗ “Initial commit” ಸ್ಟೇಜ್ ನಲ್ಲಿಇದ್ದೇವೆ ಎಂದು ಇದು ತೋರಿಸುತ್ತದೆ. |
12:39 | ಈಗ, ನಾವು ಇತ್ತೀಚಿನ ರಿವಿಜನ್ ಗೆ ಹಿಂದಿರುಗಲು ಪ್ರಯತ್ನಿಸೋಣ. |
12:43 | ಮೊದಲಿನಂತೆ, ಹೀಗೆ ಟೈಪ್ ಮಾಡಿ: 'git space checkout space master' ಹಾಗೂ 'Enter' ಅನ್ನು ಒತ್ತಿ. |
12:51 | ನಮಗೆ ಇತ್ತೀಚಿನ ರಿವಿಜನ್ ಗೆ ಹಿಂದಿರುಗಲು ಸಾಧ್ಯವಾಗುತ್ತಿಲ್ಲ. |
12:55 | ಬದಲಾಗಿ, ನಮಗೆ “Already on 'master'” ಎಂಬ ಮೆಸೇಜ್ ಸಿಗುತ್ತದೆ. |
12:58 | ಇದು ನಮ್ಮ ಇತ್ತೀಚಿನ ರಿವಿಜನ್ ಆಗಿದೆ ಎಂದು ಇದರ ಅರ್ಥ. |
13:02 | ಆದ್ದರಿಂದ, ಗಮನಿಸಿ: ಒಮ್ಮೆ ನಾವು 'git reset hyphen hyphen hard' ಎಂಬ ಕಮಾಂಡ್ ಅನ್ನು ಬಳಸಿದೆವೆಂದರೆ ಇತ್ತೀಚಿನ ಸ್ಟೇಜ್ ಗೆ ನಾವು ಹಿಂದಿರುಗಲು ಸಾಧ್ಯವಿಲ್ಲ. |
13:11 | ಆದ್ದರಿಂದ, ನಾವು ಈ ಕಮಾಂಡ್ ನೊಂದಿಗೆ ತುಂಬಾ ಎಚ್ಚರಿಕೆಯಿಂದ ಇರಬೇಕು. |
13:15 | ಇದರೊಂದಿಗೆ, ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿರುತ್ತೇವೆ. |
13:18 | ಸಂಕ್ಷಿಪ್ತವಾಗಿ, ಈ ಟ್ಯುಟೋರಿಯಲ್ ನಲ್ಲಿ, ನಾವು: * ಒಂದಕ್ಕಿಂತ ಹೆಚ್ಚು ಫೈಲ್ ಗಳನ್ನು ‘ಗಿಟ್ ರಿಪಾಸಿಟರಿ’ ಗೆ ಸೇರಿಸಲು |
13:27 | * ‘ಗಿಟ್ ರಿಪೊಸಿಟರಿ’ ಯಿಂದ ಫೈಲನ್ನು ತೆಗೆದುಹಾಕಲು * ತೆಗೆದುಹಾಕಿದ ಫೈಲನ್ನು ಮರಳಿ ಪಡೆಯಲು |
13:32 | * ಫೈಲ್ ನಲ್ಲಿ ಮಾಡಿದ ಬದಲಾವಣೆಗಳನ್ನು ಅಲಕ್ಷಿಸಲು ಹಾಗೂ * ಮೊದಲಿನ ರಿವಿಜನ್ ಗೆ ಹಿಂದಿರುಗಲು ಕಲಿತಿದ್ದೇವೆ. |
13:39 | ಒಂದು ಅಸೈನ್ಮೆಂಟ್- ಹಿಂದಿನ ಟ್ಯುಟೋರಿಯಲ್ ನ ಅಸೈನ್ಮೆಂಟ್ ನಲ್ಲಿ ನೀವು ಕ್ರಿಯೇಟ್ ಮಾಡಿದ ನಿಮ್ಮ ‘ಗಿಟ್ ರಿಪಾಸಿಟರಿ’ ಗೆ ಹೋಗಿ. |
13:46 | ನಿಮ್ಮ ಟೆಕ್ಸ್ಟ್-ಫೈಲ್ ನಲ್ಲಿ ಕೆಲವು ಬದಲಾವಣೆಗಳನ್ನು ಮಾಡಿ. |
13:49 | ಬದಲಾವಣೆಗಳನ್ನು 'ಕಮಿಟ್' ಮಾಡಿ. |
13:52 | ನಿಮ್ಮ ಹಳೆಯ ಪರಿಷ್ಕರಣೆಗೆ ಹಿಂದಿರುಗಲು ಪ್ರಯತ್ನಿಸಿ. |
13:55 | ನಿಮ್ಮ ಟೆಕ್ಸ್ಟ್ ಫೈಲ್ ನಲ್ಲಿ ಮತ್ತೆ ಕೆಲವು ಬದಲಾವಣೆಗಳನ್ನು ಮಾಡಿ ಮತ್ತು ಈ ಬದಲಾವಣೆಗಳನ್ನು ಅಲಕ್ಷಿಸಲು ಪ್ರಯತ್ನಿಸಿ. |
14:02 | ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವಿಡಿಯೋ, ಸ್ಪೋಕನ್ ಟ್ಯುಟೋರಿಯಲ್ ಪ್ರೋಜೆಕ್ಟ್ ನ ಸಾರಾಂಶವಾಗಿದೆ. ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ವೀಕ್ಷಿಸಿ. |
14:11 | ‘ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್’ ತಂಡವು ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ‘ಆನ್ ಲೈನ್ ಟೆಸ್ಟ್’ ನಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡಲಾಗುತ್ತದೆ. |
14:18 | ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಮಗೆ ಬರೆಯಿರಿ. |
14:22 | ‘ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್’ NMEICT, MHRD, ಭಾರತ ಸರ್ಕಾರದಿಂದ ಅನುದಾನವನ್ನು ಪಡೆದಿದೆ. |
14:29 | ಈ ಮಿಷನ್ನಿನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗಿನ ಲಿಂಕ್ ನಲ್ಲಿ ಲಭ್ಯವಿದೆ: |
14:34 | IIT Bombay ಯಿಂದ, ‘ಸ್ಕ್ರಿಪ್ಟ್’ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ನವೀನ್ ಭಟ್, ಉಪ್ಪಿನಪಟ್ಟಣ.
ವಂದನೆಗಳು. |