FrontAccounting-2.4.7/C2/Overview-of-FrontAccounting/Kannada

From Script | Spoken-Tutorial
Jump to: navigation, search
Time Narration
00:01 Overview of FrontAccounting ಎಂಬ ಸ್ಪೋಕನ್ ಟ್ಯುಟೋರಿಯಲ್ಗೆ ಸ್ವಾಗತ.
00:06 ಈ ಟ್ಯುಟೋರಿಯಲ್ನಲ್ಲಿ ನಾವು:

FrontAccounting,

00:11 FrontAccounting ನ ಗುಣಲಕ್ಷಣಗಳು ಮತ್ತು
00:14 ಈ ಸರಣಿಯಲ್ಲಿಯ ವಿವಿಧ ಟ್ಯುಟೋರಿಯಲ್ಗಳಲ್ಲಿ ಲಭ್ಯವಿರುವ ವಿಷಯಗಳ ಕುರಿತು ಕಲಿಯಲಿದ್ದೇವೆ.
00:19 ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು ನಾನು:

ಉಬಂಟು ಲಿನಕ್ಸ್ ಒ.ಎಸ್ ಆವೃತ್ತಿ 16.04 ಮತ್ತು FrontAccounting ಆವೃತ್ತಿ 2.4.7 ಅನ್ನು ಬಳಸುತ್ತಿದ್ದೇನೆ.

00:31 ಈ ಟ್ಯುಟೋರಿಯಲ್ ಅನುಸರಿಸಲು ನೀವು, ಹೈಯರ್ ಸೆಕೆಂಡರಿ ಕಾಮರ್ಸ್ ಮತ್ತು ಅಕೌಂಟಿಂಗ್ ಹಾಗೂ ಬುಕ್-ಕೀಪಿಂಗ್ ತತ್ವಗಳ ಬಗ್ಗೆ ತಿಳಿದಿರಬೇಕು.
00:40 FrontAccounting, ಓಪನ್-ಸೋರ್ಸ್ ಹಾಗೂ ವೆಬ್ ಆಧರಿತ ಅಕೌಂಟಿಂಗ್ ಸಾಫ್ಟ್ವೇರ್ ಆಗಿದೆ.
00:45 ಇದು ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಸೂಕ್ತವಾಗಿದೆ.
00:49 ಅಲ್ಲದೆ ಲೀನಕ್ಸ್, ವಿಂಡೋಸ್ ಮತ್ತು ಮ್ಯಾಕ್ ಅಪರೇಟಿಂಗ್ ಸಿಸ್ಟಂಗಳಲ್ಲಿ ಇದು ಕಾರ್ಯ ನಿರ್ವಹಿಸುತ್ತದೆ.
00:54 ಜತೆಗೆ ಅಕೌಂಟಿಂಗ್ ಕೆಲಸಗಳನ್ನು ಸ್ವಯಂಚಾಲಿತವಾಗಿ ನಿರ್ವಹಿಸುತ್ತದೆ.
00:57 ಹಾಗೂ ಎರರ್ ಗಳ ಸಾಧ್ಯತೆಗಳನ್ನು ಕಡಿಮೆ ಮಾಡುತ್ತದೆ.
01:00 FrontAccounting ವೃತ್ತಿಪರ ಔಟ್ಪುಟ್ ಅನ್ನು ನೀಡುತ್ತದೆ.
01:03 ಇದು ಬಳಸಲು ಸಿದ್ಧವಿರುವ ಅನೇಕ ರಿಪೋರ್ಟ್ಗಳನ್ನು ಹೊಂದಿದೆ.
01:07 ಇದು ವ್ಯವಹಾರದ ಎಲ್ಲಾ ಅಂಶಗಳ ನಿರ್ವಹಣೆಗೆ ಸಹಕರಿಸುತ್ತದೆ.

ಅಂದರೆ ಜಾಬ್ ಕೋಸ್ಟಿಂಗ್ ನಿಂದ ಇನ್ವೆಂಟರಿ ಮ್ಯಾನೇಜ್ಮೆಂಟ್ ಮತ್ತು ಫಿನಾನ್ಶಿಯಲ್ ಸ್ಟೇಟ್ಮೆಂಟ್ಗಳ ತನಕ..

01:16 FrontAccounting ಅನ್ನು ಅಕೌಂಟಂಟ್ಗಳು, ಫೈನಾನ್ಸ್ ವೃತ್ತಿಪರರು,
01:21 ವಾಣಿಜ್ಯ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಬಳಸಬಹುದು.
01:24 ನಾವೀಗ ಈ ಸರಣಿಯಲ್ಲಿಯ ಪ್ರತ್ಯೇಕ ಟ್ಯುಟೋರಿಯಲ್ಗಳನ್ನು ಇಲ್ಲಿ ಸಂಕ್ಷಿಪ್ತವಾಗಿ ನೋಡೋಣ.
01:30 ಈ ಸರಣಿಯ ಮೊದಲ ಟ್ಯುಟೋರಿಯಲ್ -

ಉಬಂಟು ಲೀನಕ್ಸ್ ಅಪರೇಟಿಂಗ್ ಸಿಸ್ಟಂನಲ್ಲಿ, FrontAccounting ನ ಇನ್ಸ್ಟಾಲೇಶನ್,

01:38 ಇನ್ಸ್ಟಾಲೇಶನ್ನ ಪೂರ್ವಾಪೇಕ್ಷಿತಗಳು ಅಪಾಚೆ, PHP5 ಮತ್ತು MySQL ಸರ್ವರ್,
01:46 FrontAccounting ಗೆ ಡೇಟಾಬೇಸ್ ರಚಿಸುವುದು ಇವುಗಳ ಬಗ್ಗೆ ವಿವರಿಸುತ್ತದೆ.
01:50 ಈ ಟ್ಯುಟೋರಿಯಲ್ನ ನಸುನೋಟ ಇಲ್ಲಿದೆ.
Add Audio @01:54 from tutorial Installation of FrontAccounting on Linux OS timing- 12:26 to 12:40 ---
02:10 ಮುಂದಿನ ಟ್ಯುಟೋರಿಯಲ್, 'Installation of FrontAccounting on Windows OS'.
02:16 ಈ ಟ್ಯುಟೋರಿಯಲ್:

FrontAccounting ಸಾಫ್ಟ್ವೇರ್ ಅನ್ನು ಡೌನ್ಲೋಡ್ ಮಾಡುವುದು,

02:21 FrontAccounting ಗಾಗಿ ಡೇಟಾಬೇಸ್ ರಚಿಸುವುದು ಮತ್ತು

ವಿಂಡೋಸ್ ಒ.ಎಸ್ ನಲ್ಲಿ FrontAccounting ಅನ್ನು ಇನ್ಸ್ಟಾಲ್ ಮಾಡುವುದನ್ನು ಕಲಿಸುತ್ತದೆ.

02:28 ಈ ಟ್ಯುಟೋರಿಯಲ್ನತ್ತ ಗಮನ ಹರಿಸೋಣ.

---Add the audio @02:32 from the tutorial nstallation of FrontAccounting on Window OS timing 08:10 to 08:30---

02:54 ಮುಂದಿನ ಟ್ಯುಟೋರಿಯಲ್, 'Setup in FrontAccounting' ಆಗಿದೆ.
02:58 ಇಲ್ಲಿ ನಾವು:

FrontAccounting ಇಂಟರ್ಫೇಸ್,

03:03 ಸೆಟಪ್ ಟ್ಯಾಬ್ನಲ್ಲಿಯ ವಿವಿಧ ಮೋಡ್ಯುಲ್ಗಳು,
03:06 ನಮ್ಮದೇ ಆರ್ಗನೈಸೇಶನ್ ಅಥವಾ ಕಂಪನಿಯನ್ನು ರಚಿಸಲು,
03:10 ಯೂಸರ್ ಅಕೌಂಟ್ಗಳ ಸೆಟಪ್,
03:13 ಆಕ್ಸೆಸ್ ಪರ್ಮಿಶನ್ಗಳ ಸೆಟಪ್ ಮತ್ತು ಡಿಸ್ಪ್ಲೇ ಸೆಟಪ್ ಇವುಗಳ ಬಗ್ಗೆ ಕಲಿಯುತ್ತೇವೆ.
03:19 ಈ ಟ್ಯುಟೋರಿಯಲ್ನ ನಸುನೋಟ ಇಲ್ಲಿದೆ.

---Add the audio @03:23, from the tutorial Setup in FrontAccounting timing- 03:43 to 03:57 ---

03:38 ಮುಂದಿನ ಟ್ಯುಟೋರಿಯಲ್, ʻFrontAccounting ನಲ್ಲಿ ಬ್ಯಾಂಕಿಂಗ್ ಮತ್ತು ಜನರಲ್ ಲೆಡ್ಜರ್ʼ ಆಗಿದೆ.
03:43 ಇದು ನಮಗೆ:

ಜನರಲ್ ಲೆಡ್ಜರ್ ಕ್ಲಾಸುಗಳು,

03:46 ಜನರಲ್ ಲೆಡ್ಜರ್ ಗ್ರೂಪುಗಳು,
03:49 ಜನರಲ್ ಲೆಡ್ಜರ್ ಅಕೌಂಟ್ಗಳನ್ನು,
03:52 ರಚಿಸಲು ಕಲಿಸುತ್ತದೆ.
03:55 ಈ ಟ್ಯುಟೋರಿಯಲ್ ಅನ್ನು ನಾವೀಗ ಪ್ಲೇ ಮಾಡೋಣ.

---Add the audio@03:58, from the tutorial Banking and General Ledger in FrontAccounting: timing - 02:22 to 02:37 ---

04:15 ಮುಂದಿನ ಟ್ಯುಟೋರಿಯಲ್, ʻFrontAccounting ನಲ್ಲಿ ಜರ್ನಲ್ ಎಂಟ್ರಿ ಮತ್ತು ಬ್ಯಾಲನ್ಸ್ ಶೀಟ್ʼ ಆಗಿದೆ.
04:20 ಇಲ್ಲಿ ನಾವು:

ಜರ್ನಲ್ ಎಂಟ್ರಿಯನ್ನು ಪಾಸ್ ಮಾಡಲು,

04:24 ಬ್ಯಾಲನ್ಸ್ ಶೀಟ್ನಲ್ಲಿ ಅದರ ರಿಫ್ಲೆಕ್ಷನ್ ನೋಡಲು ಮತ್ತು

ಟ್ರಾನ್ಸಾಕ್ಶನ್ ಅನ್ನು ವಾಯ್ಡ್ ಮಾಡಲು ಕಲಿಯುವೆವು.

04:30 ಈ ಟ್ಯುಟೋರಿಯಲ್ ಅನ್ನು ಪ್ಲೇ ಮಾಡುತ್ತೇನೆ.
04:34 ----Add the audio@ from the tutorial Journal Entry and Balance sheet in FrontAccounting timing : 02:44 to 03:06 ----
04:57 ಮುಂದಿನ ಟ್ಯುಟೋರಿಯಲ್, FrontAccounting ನಲ್ಲಿ ಐಟಂಗಳು ಮತ್ತು ಇನ್ವೆಂಟರಿಯ ಬಗ್ಗೆ ವಿವರಿಸುತ್ತದೆ.
05:02 ಈ ಟ್ಯುಟೋರಿಯಲ್ನಲ್ಲಿ ನಾವು:

ಯೂನಿಟ್ಸ್ ಆಫ್ ಮೆಜರ್, ಐಟಂಗಳು,

05:08 ಐಟಂ ಕೆಟಗರಿ ಮತ್ತು ಸೇಲ್ಸ್ ಪ್ರೈಸಿಂಗ್ ಇವುಗಳನ್ನು ಸೆಟ್ ಮಾಡಲು ಕಲಿಯಲಿದ್ದೇವೆ.
05:12 ಈ ಟ್ಯುಟೋರಿಯಲ್ನತ್ತ ನೋಡೋಣ.

---Add the audio @05:15 from the tutorial Items and Inventory in FrontAccounting timing : 03:28 to 03:47 ---

05:36 ಮುಂದಿನ ಟ್ಯುಟೋರಿಯಲ್, FrontAccounting ನಲ್ಲಿ ಟ್ಯಾಕ್ಸ್ಗಳು ಮತ್ತು ಬ್ಯಾಂಕ್ ಅಕೌಂಟ್ಗಳ ಬಗ್ಗೆ ಇದೆ.
05:41 ಇಲ್ಲಿ ನಾವು:

ಹೊಸದಾದ ಟ್ಯಾಕ್ಸ್ ಅನ್ನು ಸೇರಿಸಲು,

05:45 ಬ್ಯಾಂಕ್ ಅಕೌಂಟ್ಗಳನ್ನು ರೂಪಿಸಲು,
05:47 ಡಿಪೋಸಿಟ್ಗಳನ್ನು ಸೇರಿಸಲು,
05:49 ಬ್ಯಾಂಕ್ ಅಕೌಂಟ್ಗೆ ಹಣವನ್ನು ವರ್ಗಾಯಿಸಲು ಮತ್ತು
05:52 ಬ್ಯಾಂಕ್ ಅಕೌಂಟ್ ಅನ್ನು ಹೊಂದಿಸಿ ನೋಡಲು (ರಿಕನ್ಸೈಲ್) ಮಾಡಲು ಕಲಿಯಲಿದ್ದೇವೆ.
05:55 ಈ ಟ್ಯುಟೋರಿಯಲ್ನ ಕಿರುನೋಟ ಇಲ್ಲಿದೆ.

--- Add the audio @05:58 from the tutorial Taxes and Bank Accounts in FrontAccounting timing :02:28 to 02:51 ---

06:22 ಮುಂದಿನ ಟ್ಯುಟೋರಿಯಲ್, FrontAccounting ನಲ್ಲಿ ಸೇಲ್ಸ್ಗಾಗಿ ಸೆಟಪ್ ಮಾಡುವುದರ ಬಗ್ಗೆ ಇದೆ.
06:27 ಇದು ಸೇಲ್ಸ್ ಟೈಪ್ಗಳ ಸೆಟಪ್,
06:31 ಸೇಲ್ಸ್ ಪರ್ಸನ್ಗಳು, ಸೇಲ್ಸ್ ಏರಿಯಾಗಳು,
06:35 ಕಸ್ಟಮರ್ಗಳು ಮತ್ತು ಬ್ರಾಂಚ್ಗಳನ್ನು ಸೇರಿಸುವುದು ಮತ್ತು ನಿರ್ವಹಿಸುವುದನ್ನು ವಿವರಿಸುತ್ತದೆ.
06:40 ಈ ಟ್ಯುಟೋರಿಯಲ್ನ ಕಿರುನೋಟ ಇಲ್ಲಿದೆ.

---Add the audio @06:43 from the tutorial Setup for Sales in FrontAccounting timing :02:33 to 02:50 ---

07:01 ಮುಂದಿನ ಟ್ಯುಟೋರಿಯಲ್, FrontAccounting ನಲ್ಲಿ ಸೇಲ್ಸ್ ಆರ್ಡರ್ ಕೊಡುವುದರ ಬಗ್ಗೆ ವಿವರಿಸುತ್ತದೆ.
07:06 ಇಲ್ಲಿ ನಾವು:

ಸೇಲ್ಸ್ ಕೊಟೇಶನ್ ಎಂಟ್ರಿ, ಸೇಲ್ಸ್ ಆರ್ಡರ್ ಎಂಟ್ರಿ,

07:14 ಡೆಲಿವರಿ ಮಾಡುವುದು ಮತ್ತು ಸೇಲ್ಸ್ ಆರ್ಡರ್ ಇನ್ಕ್ವೈರಿಯನ್ನು ಮಾಡಲು ಕಲಿಯಲಿದ್ದೇವೆ.
07:19 ಈ ಟ್ಯುಟೋರಿಯಲ್ನ ಕಿರುನೋಟ ಇಲ್ಲಿದೆ.

--- Add the audio @07:22 from the tutorial Place Sales Order in FrontAccounting timing :03:46 to 04:05 ---

07:43 ಮುಂದಿನ ಟ್ಯುಟೋರಿಯಲ್, FrontAccounting ನಲ್ಲಿ ಪರ್ಚೇಸ್ ಗಳು ಮತ್ತು ರಿಪೋರ್ಟ್ ಗಳನ್ನು ವಿವರಿಸಲಿದೆ.
07:49 ಇಲ್ಲಿ ನಾವು:

ಸಪ್ಲೈಯರ್ಗಳನ್ನು ಸೇರಿಸಲು,

07:53 ಪರ್ಚೇಸ್ ಆರ್ಡರ್ ಎಂಟ್ರಿ ಮಾಡಲು,
07:56 ಸಪ್ಲೈಯರ್ಗಳ ಇನ್ವಾಯ್ಸ್ ತಯಾರಿಸಲು ಮತ್ತು ಟ್ರಾನ್ಸಾಕ್ಷನ್ಗಳ ಕುರಿತು ವಿವಿಧ ರಿಪೋರ್ಟ್ಗಳನ್ನು ತಯಾರಿಸಲು ಕಲಿಯುವೆವು.
08:04 ಈ ಟ್ಯುಟೋರಿಯಲ್ ಅನ್ನು ನೋಡೋಣ.
Add the audio @08:07 from the tutorial Purchases and Reports in FrontAccounting timing : 04:47 to 05:02---
08:24 ಈ ಟ್ಯುಟೋರಿಯಲ್ಗಳು, ಅಕೌಂಟಿಂಗ್ನ ಬಗ್ಗೆ ಅವಶ್ಯಕ ವಿಷಯಗಳನ್ನು ವಿವರಿಸುತ್ತವೆ.
08:29 ಭವಿಷ್ಯದಲ್ಲಿ, ಈ ಸರಣಿಗೆ ನಾವು ಇನ್ನೂ ಹೆಚ್ಚಿನ ವಿಷಯಗಳನ್ನು ಸೇರಿಸಬಹುದು.
08:34 ಇವು FrontAccounting ನಲ್ಲಿ ಕೆಲವು ಮುಂದುವರಿದ ಚಟುವಟಿಕೆಗಳನ್ನು ಒಳಗೊಂಡಿರಬಹುದು.
08:39 ಇದರೊಂದಿಗೆ ನಾವು ಈ ಟ್ಯುಟೋರಿಯಲ್ನ ಕೊನೆಗೆ ತಲುಪಿದ್ದೇವೆ. ಈಗ ನಾವು ಸಂಕ್ಷೇಪಿಸೋಣ.
08:44 ಈ ಟ್ಯುಟೋರಿಯಲ್ ನಲ್ಲಿ ನಾವು FrontAccounting. ಕುರಿತು ಕಲಿತೆವು ಮತ್ತು ಈ ಸರಣಿಯ ವಿವಿಧ ಟ್ಯುಟೋರಿಯಲ್ಗಳ ಮೇಲೆ ಬೆಳಕು ಹರಿಸಿದೆವು.
08:52 ಈ ಕೆಳಗಿನ ಲಿಂಕ್ ನಲ್ಲಿ ಇರುವ ವೀಡಿಯೊ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಸಾರಾಂಶವಾಗಿದೆ. ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ವೀಕ್ಷಿಸಿ.
08:59 ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡವು ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ಪ್ರಮಾಣಪತ್ರಗಳನ್ನು ಕೊಡುತ್ತದೆ. ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಮಗೆ ಪತ್ರ ಬರೆಯಿರಿ.
09:07 ಈ ಸ್ಪೋಕನ್ ಟ್ಯುಟೋರಿಯಲ್ ಕುರಿತು ನಿಮಗೆ ಏನಾದರೂ ಪ್ರಶ್ನೆಗಳಿವೆಯೇ?

ದಯವಿಟ್ಟು ಈ ಸೈಟ್ಗೆ ಭೇಟಿ ನೀಡಿ.

09:12 ನಿಮಗೆ ಪ್ರಶ್ನೆ ಇರುವಲ್ಲಿ ನಿಮಿಷ ಮತ್ತು ಸೆಕೆಂಡನ್ನು ಆರಿಸಿ. ನಿಮ್ಮ ಪ್ರಶ್ನೆಯನ್ನು ಸಂಕ್ಷಿಪ್ತವಾಗಿ ವಿವರಿಸಿ.
09:19 ನಮ್ಮ ತಂಡದಿಂದ ಯಾರಾದರೂ ಒಬ್ಬರು ಅದಕ್ಕೆ ಉತ್ತರಿಸುತ್ತಾರೆ.
09:22 ಸ್ಪೋಕನ್ ಟ್ಯುಟೋರಿಯಲ್ ಫಾರಂ, ಈ ಟ್ಯುಟೋರಿಯಲ್ ಕುರಿತು ನಿರ್ದಿಷ್ಟ ಪ್ರಶ್ನೆಗಳಿಗೆ ಮೀಸಲಾಗಿದೆ.
09:27 ದಯವಿಟ್ಟು ಅವುಗಳಲ್ಲಿ ಸಂಬಂಧವಿಲ್ಲದ ಮತ್ತು ಸಾಮಾನ್ಯ ಪ್ರಶ್ನೆಗಳನ್ನು ಪೋಸ್ಟ್ ಮಾಡಬೇಡಿ.
09:32 ಇದು ಗೊಂದಲವನ್ನು ಕಡಿಮೆ ಮಾಡಲು ಸಹಕರಿಸುತ್ತದೆ. ಕಡಿಮೆ ಗೊಂದಲವಿದ್ದರೆ ನಾವು ಈ ಚರ್ಚೆಯನ್ನು ಕಲಿಕೆಯ ವಸ್ತುವಾಗಿ ಬಳಸಬಹುದು.
09:41 ‘ಸ್ಪೋಕನ್ ಟ್ಯುಟೋರಿಯಲ್’ ಪ್ರೊಜೆಕ್ಟ್, MHRD, ಭಾರತ ಸರ್ಕಾರದ ನೆರವು ಪಡೆದಿದೆ.

ಈ ಸ್ಕ್ರಿಪ್ಟ್ ನ ಅನುವಾದಕರು ಮಂಗಳೂರಿನಿಂದ ಮೆಲ್ವಿನ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ. ಧನ್ಯವಾದಗಳು.

Contributors and Content Editors

Melkamiyar, Sandhya.np14