Firefox/C2/Introduction/Kannada
From Script | Spoken-Tutorial
Time | Narration |
00:00 | Mozilla Firefox ನ ಪರಿಚಯಾತ್ಮಕವಾದ ಈ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ |
00:05 | ಈ ಟ್ಯುಟೋರಿಯಲ್ ನಲ್ಲಿ ಕೆಳಕಂಡ ವಿಷಯಗಳು ಒಳಗೊಂಡಿರುತ್ತವೆ. |
00:10 | Mozilla Firefox ಎಂದರೇನು ? |
00:12 | Firefox ಏಕೆ? |
00:14 | ಆವೃತ್ತಿಗಳು, System ನ ಅವಶ್ಯಕತೆಗಳು, Firefox ಅನ್ನು ಡೌನ್‌ಲೋಡ್ ಮತ್ತು ಇನ್ಸ್ಟಾಲ್ ಮಾಡುವುದು, ವೆಬ್‌ಸೈಟ್ ನ ಭೇಟಿ, ಇತ್ಯಾದಿ. |
00:21 | Mozilla Firefox ಅಥವಾ Firefox ಎನ್ನುವುದು ಉಚಿತ ಮತ್ತು ಮುಕ್ತವಾಗಿ ದೊರಕುವ ವೆಬ್ ಬ್ರೌಸರ್ ಆಗಿದೆ. |
00:27 | ಇದು ಉಬುಂಟು ಲಿನಕ್ಸ್‌ಗೆ ಪೂರ್ವನಿಯೋಜಿತವಾದ ವೆಬ್‌ಬ್ರೌಸರ್ ಆಗಿದ್ದು ಇಂಟರ್ನೆಟ್ ಗೆ ದ್ವಾರದಂತೆ ಕಾರ್ಯನಿರ್ವಹಿಸುತ್ತದೆ. |
00:33 | ಇದು ಇಂಟರ್‌ನೆಟ್‌ನ ವೆಬ್ ಪೇಜ್ ಗಳನ್ನು ನೋಡಲು ಮತ್ತು ವೆಬ್ ಪೇಜ್ಗಳ ಮೂಲಕ ಸಂಚರಿಸಿಲು ಸಹಕರಿಸುತ್ತದೆ. |
00:39 | ಇಷ್ಟೇ ಅಲ್ಲದೆ ಗೂಗಲ್, ಯಾಹೂ ಸರ್ಚ್, ಬಿಂಗ್ ಮುಂತಾದ ಸರ್ಚ್ ಎಂಜಿನ್‌ಗಳ ಮೂಲಕ ಕೂಡಾ ವೆಬ್ ಪೇಜ್ಗಳನ್ನು ಹುಡುಕುತ್ತದೆ. |
00:47 | Firefox ಎನ್ನುವುದು, Mozilla Foundation ಎಂಬ ಲಾಭ ನಿರಪೇಕ್ಷ ಸಂಸ್ಥೆಯಲ್ಲಿ ಸ್ವಯಂಸೇವಕ ಪ್ರೊಗ್ರಾಮರ್ ಗಳಿಂದ ರಚಿಸಲ್ಪಟ್ಟಿದೆ. |
00:54 | Mozilla ದ ಸಂಪೂರ್ಣ ಮಾಹಿತಿಗಾಗಿ mozilla.org ಅನ್ನು ಸಂಪರ್ಕಿಸಿ |
00:59 | Firefox ಎನ್ನುವುದು ವಿಂಡೋಸ್, ಮ್ಯಾಕ್ ಓ.ಎಸ್.ಎಕ್ಸ್ ಮತ್ತು ಲಿನಕ್ಸ್ ಆಪರೇಟಿಂಗ್ ಸಿಸ್ಟಮ್ ಗಳಲ್ಲಿ ಕೆಲಸ ಮಾಡುತ್ತದೆ. |
01:05 | ಉಬುಂಟುವಿಗಿರುವ ಬೇರೆ ಜನಪ್ರಿಯ ವೆಬ್ ಬ್ರೌಸರ್ ಗಳೆಂದರೆ, Konqueror, Google Chrome ಮತ್ತು Opera |
01:12 | ಈ ತರಗತಿಯಲ್ಲಿ ನಾವು Ubuntu 10.04 ರಲ್ಲಿ Firefox ನ ವರ್ಷನ್ 7.0 ನ್ನು ಬಳಸುತ್ತೇವೆ. |
01:20 | Firefox ಎನ್ನುವುದು ಬ್ರೌಸಿಂಗನ್ನು ಉತ್ತಮಗೊಳಿಸುವುದರ ಜೊತೆಗೆ ವೇಗ, ಗೌಪ್ಯತೆ ಮತ್ತು ಇತ್ತೀಚಿನ ತಂತ್ರಜ್ಞಾನವನ್ನೂ ಒದಗಿಸುತ್ತದೆ. |
01:27 | ಇದು ಟ್ಯಾಬ್ಡ್ ವಿಂಡೋಸ್, ಅಂತರ್ ನಿರ್ಮಿತ ಸ್ಪೆಲ್ ಚೆಕ್, ಪಾಪಪ್ ಬ್ಲಾಕರ್, ಎಕೀಕೃತ ವೆಬ್‌ಸರ್ಚ್, ಫಿಶಿಂಗ್ ಸುರಕ್ಷತೆ ಮುಂತಾದ ವಿವಿಧ ವೈಶಿಷ್ಟ್ಯಗಳನ್ನೊಳಗೊಂಡಿದೆ. |
01:39 | Firefox, ಶೀಘ್ರ ವೆಬ್‌ಬ್ರೌಸಿಂಗ್‌ನ ಜೊತೆಗೆ ಗ್ರಾಫಿಕ್ಸ್‌ನ ಕ್ಷಿಪ್ರ ರೆಂಡರಿಂಗ್, ಉತ್ತಮ ಗುಣಮಟ್ಟದ ಪೇಜ್ ಲೋಡಿಂಗನ್ನು ಒದಗಿಸುತ್ತದೆ. |
01:45 | ಅಲ್ಲದೆ ವಂಚಕ ವೆಬ್ ಸೈಟ್ಗಳು, ಸ್ಪೈವೇರ್ ಮತ್ತು ವೈರಸ್‌ಗಳು, ಟ್ರೋಜನ್ ಅಥವಾ ಇತರ ಮಾಲ್ವೇರ್ಗಳ ವಿರುದ್ಧ ವಿವಿಧ ಬಗೆಯ ಸುರಕ್ಷತೆಯನ್ನು ಮತ್ತು ಗೌಪ್ಯತೆಯನ್ನು ಸಹ ಒದಗಿಸುತ್ತದೆ. |
01:56 | ಬಳಕೆದಾರರಿಂದ ಸೃಷ್ಟಿಸಲ್ಪಟ್ಟ add-ons ಗಳು ಮತ್ತು ಸರಳವಾಗಿ ಇನ್ಸ್‌ಟಾಲ್ ಮಾಡಬಲ್ಲ ಸಾವಿರಾರು ಥೀಮ್ಸ್‌ಗಳನ್ನು ಗ್ರಾಹಕರ ಇಚ್ಚೆಗನುಗುಣವಾಗಿ ನೀಡುತ್ತದೆ. |
02:06 | Firefox ಅನ್ನು ಲಿನಕ್ಸ್ ನ ಓ.ಎಸ್ ಗಳಾದ ಫೆಡೋರ, ಉಬುಂಟು, ರೆಡ್ ಹ್ಯಾಟ್, ಡೆಬಿಯನ್ ಮತ್ತು ಸುಸಿ ನಲ್ಲಿ ಚಾಲನೆಗೊಳಿಸಲು ಬೇಕಾದ ಸಿಸ್ಟಂನ ಅಗತ್ಯಗಳು ಇಲ್ಲಿದೆ. |
02:16 | ನಿಮಗೆ Firefox ಅನ್ನು Ubuntu 10.04 ರಲ್ಲಿ ಚಾಲನೆಗೊಳಿಸಲು ಮುಂದೆಕಾಣುವ ಲೈಬ್ರರೀಸ್ ಅಥವಾ ಪ್ಯಾಕೇಜಸ್ ಗಳು ಬೇಕಾಗುತ್ತವೆ. |
02:24 | GTK+ 2.10 ಅಥವಾ ಹೆಚ್ಚಿನದ್ದು, |
02:29 | GLib 2.12 ಅಥವಾ ಹೆಚ್ಚಿನದ್ದು, |
02:32 | libstdc++ 4.3 ಅಥವಾ ಹೆಚ್ಚಿನದ್ದು, |
02:37 | Pango 1.14 ಅಥವಾ ಹೆಚ್ಚಿನದ್ದು, |
02:40 | X.Org 1.7 ಅಥವಾ ಹೆಚ್ಚಿನದ್ದು, |
02:44 | ಮತ್ತು ಬೇಕಾಗಿರುವ ಹಾರ್ಡ್‌ವೇರ್ ನ ಅಗತ್ಯತೆ, ಪೆಂಟಿಯಂ ೪ ಅಥವಾ ಮೇಲ್ಪಟ್ಟದ್ದು, ೫೧೨ ಎಮ್‌ಬಿ RAM, ೨೦೦ ಎಮ್‌ಬಿಯಷ್ಟು ಹಾರ್ಡ್‌ಡ್ರೈವ್ ನ ಜಾಗ. |
02:55 | ಸಿಸ್ಟಂನ ಅಗತ್ಯಗಳ ಸಂಪೂರ್ಣ ಮಾಹಿತಿಗೆ ಪರದೆಯಲ್ಲಿ ತೋರಿಸಿರುವ Firefox ನ ವೆಬ್‌ಸೈಟ್‌ಗೆ ಭೇಟಿಕೊಡಿ. |
03:02 | ಈಗ ಪರದೆಯಲ್ಲಿ ತೋರಿಸಿರುವ mozilla.com ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿಕೊಟ್ಟು Mozilla Firefox ಅನ್ನು ಡೌನ್‌ಲೋಡ್ ಮಾಡಿ ಇನ್‌ಸ್ಟಾಲ್ ಮಾಡೋಣ. |
03:11 | ಇಲ್ಲಿ ನಾವು ಯಾವಾಗಲೂ Firefox ನ ಇತ್ತೀಚಿನ ಆವೃತ್ತಿಯನ್ನು ಕಾಣುತ್ತೇವೆ. |
03:15 | ಅಥವಾ ಇನ್ನೂ ಹೆಚ್ಚಿನ ಮಾಹಿತಿಗಾಗಿ ಹಸಿರು ಪ್ರದೇಶದ ಕೆಳಗಿನ “All Systems and Languages” ಎಂಬ ಲಿಂಕ್ ನ ಮೇಲೆ ಕ್ಲಿಕ್ ಮಾಡಬಹುದು. |
03:23 | Mozilla ಸುಮಾರು ೭೦ ಭಾಷೆಗಳಲ್ಲಿ Firefox ಅನ್ನು ನೀಡುತ್ತಿದೆ ಎಂದು ಗಮನಿಸಿ. |
03:28 | ಇಲ್ಲಿ ನಾವು ಹಿಂದಿ ಅಥವಾ ಬಂಗಾಳಿಯಂತಹ ಸ್ಥಳೀಯ ಆವೃತ್ತಿಗಳನ್ನೂ ಡೌನ್‌ಲೋಡ್ ಮಾಡಬಹುದು. |
03:33 | ನಾವು Windows, Mac ಅಥವಾ Linux ಆಪರೇಟಿಂಗ್ ಸಿಸ್ಟಂಗಳನ್ನು ವಿವಿಧ ಐಕಾನ್‌ಗಳ ಮೇಲೆ ಕ್ಲಿಕ್ ಮಾಡುವುದರಿಂದ ಆರಿಸಿಕೊಳ್ಳಬಹುದಾಗಿದೆ. |
03:42 | Ubuntu Linux ನಲ್ಲಿ ಫೈಲ್ ಸೇವ್ ಮಾಡಲು ಮೊದಲು ಜಾಗವನ್ನು ಆರಿಸಿಕೊಳ್ಳಿ. (ಪೂರ್ವನಿಯೋಜಿತವಾಗಿ ನಿಮ್ಮ ಹೋಮ್ ಫೋಲ್ಡರ್‌ನಲ್ಲಿನ ಡೌನ್‌ಲೋಡ್ ಡೈರೆಕ್ಟರಿಯು ಆಯ್ಕೆಯಾಗಿರುತ್ತದೆ) |
03:51 | ಈಗ ನೀವು ಪಾಪ್-ಅಪ್ ವಿಂಡೋನಲ್ಲಿ ಕಾಣಿಸುತ್ತಿರುವ “Save File” ಆಯ್ಕೆಯನ್ನು ಆರಿಸಿಕೊಂಡು “Ok” ಬಟ್ಟನ್ ಮೇಲೆ ಕ್ಲಿಕ್ ಮಾಡಬಹುದು. |
03:58 | ಇದು Firefox ದಾಖಲೆಯನ್ನು ಹೋಮ್ ಡೈರೆಕ್ಟರಿಯ ಕೆಳಗಿನ ಡೌನ್‌ಲೋಡ್ಸ್ ಡೈರೆಕ್ಟರಿಯಲ್ಲಿ ರಕ್ಷಿಸುತ್ತದೆ. |
04:06 | ಟರ್ಮಿನಲ್ ವಿಂಡೋ ತೆರೆಯಿರಿ ಮತ್ತು ನಿಮ್ಮ ಡೌನ್‌ಲೋಡ್ಸ್ ಡೈರೆಕ್ಟರಿಗೆ ಹೋಗಲು ಮುಂದಿನ ಆದೇಶವನ್ನು ಟೈಪ್ ಮಾಡಿ :cd ~/Downloads |
04:17 | ಈಗ ಎಂಟರ್ ಕೀಯನ್ನು ಒತ್ತಿ. |
04:19 | ಡೌನ್‌ಲೋಡ್ ಮಾಡಿರುವ ಅಂಶವನ್ನು ಎಕ್ಸ್‌ಟ್ರ್ಯಾಕ್ಟ್ ಮಾಡಲು ಮುಂದಿನ ಆದೇಶವನ್ನು ಟೈಪ್ ಮಾಡಿ :tar xjf firefox-7.0.1.tar.bz2 |
04:35 | ಈಗ ಎಂಟರ್ ಕೀಯನ್ನು ಒತ್ತಿ. |
04:38 | ಇದು Firefox 7.0 ಅನ್ನು ಚಾಲನೆಗೊಳಿಸಲು ಬೇಕಾದ ಫೈಲ್ಗಳನ್ನು ಎಕ್ಸ್‌ಟ್ರ್ಯಾಕ್ಟ್ ಮಾಡಲು ಪ್ರಾರಂಭಿಸುತ್ತದೆ. |
04:44 | ಟರ್ಮಿನಲ್ ವಿಂಡೋನಲ್ಲಿ cd firefox ಎಂಬ ಆದೇಶವನ್ನು ಟೈಪ್ ಮಾಡುವ ಮೂಲಕ Firefox directory ಗೆ ಹೋಗಿ. |
04:52 | ಈಗ ಎಂಟರ್ ಕೀಯನ್ನು ಒತ್ತಿ. |
04:54 | ಇದು ನಿಮ್ಮನ್ನು Firefox directory ಗೆ ಕೊಂಡೊಯ್ಯುತ್ತದೆ. |
04:58 | Firefox ಬ್ರೌಸರನ್ನು ಆರಂಭ ಮಾಡಲು ./firefox ಎಂದು ಆದೇಶವನ್ನು ಟೈಪ್ ಮಾಡಿ ಎಂಟರ್ ಕೀಯನ್ನು ಒತ್ತಿ. |
05:06 | ಪ್ರಸ್ತುತ ಡೈರೆಕ್ಟರಿ ನಿಮ್ಮ ಹೋಮ್ ಡೈರೆಕ್ಟರಿ ಆಗಿಲ್ಲದಿದ್ದ ಪಕ್ಷದಲ್ಲಿ ಬದಲಿಯಾಗಿ ನೀವು ಮುಂದೆಕಾಣಿಸುವ ಆದೇಶವನ್ನು ಬಳಸಿ Firefox ನ್ನು ಲಾಂಚ್ ಮಾಡಬಹದು. |
05:15 | ~/Downloads/firefox/firefox |
05:21 | ಪೂರ್ವನಿಯೋಜಿತವಾಗಿ ಹೋಮ್‌ಪೇಜನ್ನು ಹೇಗೆ ಸ್ಥಾಪಿಸುವುದು ಎಂದು ನಾವು ಆಮೇಲೆ ನೋಡುತ್ತೇವೆ. |
05:25 | ಈಗ ಸಧ್ಯಕ್ಕೆ ಉದಾಹರಣೆಗಾಗಿ ನಾವು ಇತ್ತೀಚಿನ ವಾರ್ತೆ ಮತ್ತು ಮಾಹಿತಿಗಳನ್ನು ಒಳಗೊಂಡಿರುವ Rediff.com ಎಂಬ ವೆಬ್ಸೈಟ್ ಗೆ ಹೋಗೊಣ. |
05:33 | ಮೆನ್ಯುಬಾರ್‌ನ ಕೆಳಗಿನ ಅಡ್ರೆಸ್‌ಬಾರ್‌ನಲ್ಲಿ www.rediff.com ಎಂದು ಟೈಪ್ ಮಾಡಿ |
05:40 | Rediff.com ವೆಬ್‌ಸೈಟ್ ನ ಹೋಂಪೇಜ್‌ನ ವಿಷಯಗಳು ಪ್ರದರ್ಶಿಸಲ್ಪಡುತ್ತವೆ. |
05:47 | ಈಗ, ಈ ಪುಟದಿಂದ ನಾವು ವಿವಿಧ ಲಿಂಕ್ಸ್‌ಗಳಿಗೆ ಸಂಚರಿಸಿ ಅಲ್ಲಿನ ಪುಟಗಳ ವಿಷಯವನ್ನು ನೋಡಬಹುದು. |
05:53 | ಈಗ ಮೊದಲು ಹೆಡ್‌ಲೈನ್ಸ್ ಟ್ಯಾಬ್‌ನ ಕೆಳಗಿರುವ ಮೊದಲ ಲಿಂಕ್ ಮೇಲೆ ಕ್ಲಿಕ್ ಮಾಡೋಣ. |
05:58 | ಹೀಗೆ ನಾವು Firefox ಅನ್ನು ಬಳಸಿಕೊಂಡು ವೆಬ್‌ಸೈಟ್‌ಗಳಿಗೆ ಭೇಟಿಕೊಟ್ಟು ನಂತರ ಅಲ್ಲಿಂದ ಇತರ ಪುಟಗಳಲ್ಲಿ ಸಂಚರಿಸಿಬಹುದು. |
06:05 | ಮುಂದಿನ ತರಗತಿಗಳಲ್ಲಿ ನಾವು Firefox interface ಮತ್ತು ಇತರ ಹಲವು ವೈಶಿಷ್ಟ್ಯಗಳ ಬಗ್ಗೆ ಹೆಚ್ಚು ಕಲಿಯುತ್ತೇವೆ. |
06:12 | ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೊ ನೋಡಿ. http://spoken-tutorial.org/What_is_a_Spoken_Tutorial |
06:16 | ಇದು ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಸಾರಾಂಶವನ್ನು ತಿಳಿಸುತ್ತದೆ. |
06:19 | ನಿಮ್ಮ ಬಳಿ ಉತ್ತಮ ಬ್ಯಾಂಡ್‌ವಿಡ್ತ್ ಇಲ್ಲದಿದ್ದಲ್ಲಿ ನೀವು ಡೌನ್‌ಲೋಡ್ ಮಾಡಿಕೊಂಡು ನೋಡಬಹುದು. |
06:24 | ಸ್ಪೋಕನ್ ಟ್ಯುಟೋರಿಯಲ್ ಗಣವು ಈ ಪಾಠವನ್ನಾಧಾರಿಸಿ ಕಾರ್ಯಶಾಲೆಗಳನ್ನು ಆಯೋಜಿಸುತ್ತದೆ. |
06:29 | ಆನ್‌ಲೈನ್ ಪರೀಕ್ಷೆಯನ್ನು ಪಾಸ್ ಮಾಡಿದವರಿಗೆ ಪ್ರಮಾಣಪತ್ರವನ್ನು ನೀಡುತ್ತದೆ. |
06:33 | ಹೆಚ್ಚಿನ ಮಾಹಿತಿಗಾಗಿ contact@spoken-tutorial.org ಈ ಈ-ಮೇಲ್ ಮೂಲಕ ಸಂಪರ್ಕಿಸಿ. |
06:39 | ಈ ಪಾಠವು Talk to a Teacher ಎಂಬ ಪರಿಯೋಜನೆಯ ಭಾಗವಾಗಿದೆ. |
06:44 | ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ. |
06:51 | ಹೆಚ್ಚಿನ ಮಾಹಿತಿಗಾಗಿ spoken hyphen tutorial dot org slash NMEICT hyphen Intro ಇಲ್ಲಿ ನೋಡಿ. |
07:02 | ಈ ಪಾಠವು ದೇಸೀ ಕ್ರ್ಯೂ ಸೊಲ್ಯುಶನ್ಸ್ ನಿಂದ ಅನುವಾದಿಸಲ್ಪಟ್ಟಿದ್ದು, ಇದರ ಪ್ರವಾಚಕ ಐ.ಐ.ಟಿ. ಬಾಂಬೆ ಇಂದ ವಾಸುದೇವ. |
07:08 | ಧನ್ಯವಾದಗಳು. |