Digital-Divide/C2/First-aid-measures-for-ChickenPox/Kannada
From Script | Spoken-Tutorial
Time | Narration |
00:06 | ಅಶೋಕನು ತನ್ನ ಹೊಲದಿಂದ ಬರುತ್ತಾನೆ ಮತ್ತು ಜ್ವರ ಹಾಗೂ ಶರೀರದಲ್ಲಿಯ ನೋವಿನ ಬಗ್ಗೆ ದೂರುತ್ತಾನೆ. |
00:12 | ಅವನ ಹೆಂಡತಿ ಅನಿತಾ, ಅವನತ್ತ ನೋಡುತ್ತಾಳೆ ಮತ್ತು ಅವನ ಕೈ, ಕಾಲುಗಳ ಮೇಲಿನ ಗುಳ್ಳೆಗಳನ್ನು ಗಮನಿಸುತ್ತಾಳೆ. |
00:18 | ಅವಳು ಗಾಬರಿಯಾಗಿದ್ದಾಳೆ ಮತ್ತು ದೇವತೆಯು ತನ್ನ ಗಂಡನ ಮೇಲೆ ಕೋಪಿಸಿಕೊಂಡಿದ್ದಾಳೆ ಎಂದು ಹೇಳುತ್ತಾಳೆ. |
00:24 | ತನ್ನ ಮಕ್ಕಳಿಗೆ ಬೇಗನೆ ಮನೆಯಿಂದ ಹೊರಗೆ ಹೋಗಲು ಹೇಳುತ್ತಾಳೆ. |
00:29 | ತಾಯಿ ಹಾಗೂ ಮಕ್ಕಳು ಮನೆಯಿಂದ ಹೊರಗೆ ಬಂದು ಹೊರಗಿನಿಂದ ಬಾಗಿಲಿಗೆ ಬೀಗ ಹಾಕುತ್ತಾರೆ. |
00:35 | ಅಷ್ಟರಲ್ಲಿ ಅದೇ ಹಾದಿಯಲ್ಲಿ ಹೋಗುತ್ತಿದ್ದ ಹಳ್ಳಿಯ ಆಸ್ಪತ್ರೆಯ ವೈದ್ಯರು ಅನಿತಾಳನ್ನು ನೋಡಿ ಮಾತನಾಡಿಸುತ್ತಾರೆ. |
00:43 | ಅನಿತಾ ಮತ್ತು ಅವಳ ಮಕ್ಕಳ ಆತಂಕಗೊಡ ಮುಖಗಳನ್ನು ನೋಡಿ ಅದರ ಕಾರಣವನ್ನು ಕೇಳುತ್ತಾರೆ. |
00:51 | ಅನಿತಾ, ತನ್ನ ಗಂಡನ ಮೇಲೆ ದೇವತೆಗೆ ಕೋಪ ಬಂದಿರುವ ಬಗ್ಗೆ ವೈದ್ಯರಿಗೆ ಹೇಳುತ್ತಾಳೆ. |
00:57 | ವೈದ್ಯೆಯು ತನಗೆ ಅನಿತಾಳ ಗಂಡನನ್ನು ನೋಡಬೇಕಾಗಿದೆ ಎಂದು ಹೇಳುತ್ತಾಳೆ. |
01:02 | ಆದರೆ ಅನಿತಾ ಇದಕ್ಕೆ ಸಮ್ಮತಿಸುವುದಿಲ್ಲ. ವೈದ್ಯೆಯು ತನ್ನ ಗಂಡನನ್ನು ನೋಡುವುದು ಬೇಡ ಎಂದು ಹೇಳುತ್ತಾಳೆ. |
01:07 | ವೈದ್ಯೆಯು ಅನಿತಾಳ ಮಾತನ್ನು ಅಲಕ್ಷಿಸಿ ಮನೆಯ ಒಳಗೆ ಹೋಗುತ್ತಾಳೆ. ಅನಿತಾ ಅರೆಮನಸ್ಸಿನಿಂದ ಅನುಸರಿಸುತ್ತಾಳೆ. |
01:15 | ವೈದ್ಯೆಯು ಅಶೋಕನನ್ನು ಪರೀಕ್ಷಿಸಿ ಅವನಿಗೆ 'ಚಿಕನ್ ಪಾಕ್ಸ್' (ಸಿಡುಬು ರೋಗ) ಬಂದಿದೆ ಎಂದು ಹೇಳುತ್ತಾಳೆ. |
01:21 | ಆದರೆ ಅಶೋಕ ಮತ್ತು ಅನಿತಾಗೆ 'ಚಿಕನ್ ಪಾಕ್ಸ್' ಬಗ್ಗೆ ಏನೂ ಗೊತ್ತಿಲ್ಲ. |
01:26 | ಅವರು ಪ್ರಶ್ನಾರ್ಥಕವಾಗಿ ವೈದ್ಯೆಯನ್ನು ನೋಡುತ್ತಾರೆ. |
01:29 | Bridging the Digital Divide ಎಂಬ 'ಸ್ಪೋಕನ್ ಟ್ಯುಟೋರಿಯಲ್'ಗೆ ನಿಮಗೆ ಸ್ವಾಗತ. |
01:34 | ಇಲ್ಲಿ ನಾವು: 'ಚಿಕನ್ ಪಾಕ್ಸ್', ಈ ರೋಗದ ಲಕ್ಷಣಗಳು, ಕಾರಣಗಳು, ಈ ರೋಗ ಬಂದಾಗ ಏನು ಮಾಡಬೇಕು ಮತ್ತು ಏನು ಮಾಡಬಾರದು ಇವುಗಳ ಬಗ್ಗೆ ಚರ್ಚೆ ಮಾಡುವೆವು. |
01:42 | ಮೊದಲು ನಾವು 'ಚಿಕನ್ ಪಾಕ್ಸ್' ಎಂದರೇನು ಎಂಬುದನ್ನು ನೋಡೋಣ. |
01:46 | 'ಚಿಕನ್ ಪಾಕ್ಸ್', ಒಂದು ವೈರಲ್-ಇನ್ಫೆಕ್ಶನ್ (ಅಂಟು ಜಾಡ್ಯ) ಆಗಿದೆ. ಇದರಲ್ಲಿ, ಶರೀರದ ಮೇಲೆ ತುರಿಕೆಯ ಗುಳ್ಳೆಗಳು ಕಾಣಿಸಿಕೊಳ್ಳುತ್ತವೆ. |
01:53 | 'ಚಿಕನ್-ಪಾಕ್ಸ್ ವ್ಯಾಕ್ಸೀನ್' (ಸಿಡುಬಿನ ಚುಚ್ಚುಮದ್ದು) ಈ ರೋಗವನ್ನು ತಡೆಗಟ್ಟಲು ತುಂಬಾ ಸಹಾಯಮಾಡುತ್ತದೆ. |
01:58 | ಚುಚ್ಚುಮದ್ದು ಹಾಕಿಸಿಕೊಂಡರೂ ಸಹ ಕೆಲವರಿಗೆ 'ಚಿಕನ್ ಪಾಕ್ಸ್' ಬರಬಹುದು. ಆದರೆ ಅವರ ಸಂಖ್ಯೆ ಕಡಿಮೆ ಮತ್ತು |
02:03 | ಅವರಲ್ಲಿ ರೋಗವು ಹೆಚ್ಚು ತೀವ್ರವಾಗಿರುವುದಿಲ್ಲ. |
02:06 | ಸಾಮಾನ್ಯವಾಗಿ, 'ಚಿಕನ್ ಪಾಕ್ಸ್' ಸೌಮ್ಯವಾಗಿದ್ದು ಜೀವಕ್ಕೆ ಅಪಾಯವಿರುವುದಿಲ್ಲ. |
02:10 | ಆದರೆ, ಕೆಲವುಸಲ ಇದು ಗಂಭೀರವಾಗಿದ್ದು ರೋಗಿಯನ್ನು ಆಸ್ಪತ್ರೆಗೆ ಸೇರಿಸಬೇಕಾಗುತ್ತದೆ, ರೋಗಿಯು ಸಾಯಲೂಬಹುದು. |
02:18 | 'ಚಿಕನ್ ಪಾಕ್ಸ್': |
02:20 | * ಗರ್ಭಿಣಿ ಸ್ತ್ರೀಯರು |
02:22 | * ನವಜಾತ ಶಿಶುಗಳು |
02:25 | * ಹದಿಹರೆಯದವರು ಹಾಗೂ ವಯಸ್ಕರು ಮತ್ತು |
02:28 | * ಕಡಿಮೆ ರೋಗನಿರೋಧಕ ಶಕ್ತಿಯನ್ನು ಹೊಂದಿದವರಿಗೆ ತಗುಲುವ ಸಾಧ್ಯತೆಗಳಿವೆ. |
02:32 | ನಿಮಗೆ ಒಂದು ಸಲ 'ಚಿಕನ್ ಪಾಕ್ಸ್' ಬಂದು ಹೋಗಿದ್ದರೆ, ಸಾಮಾನ್ಯವಾಗಿ ವೈರಸ್ ಮತ್ತೊಮ್ಮೆ ಕಾಣಿಸಿಕೊಳ್ಳುವುದಿಲ್ಲ. |
02:38 | ಎರಡನೆಯ ಸಲ 'ಚಿಕನ್ ಪಾಕ್ಸ್' ಬಂದರೆ ಅದನ್ನು 'ಶಿಂಗಲ್ಸ್' (shingles) ಎನ್ನುತ್ತಾರೆ. |
02:45 | 'ಚಿಕನ್ ಪಾಕ್ಸ್'ನ ಕೆಲವು ರೋಗಲಕ್ಷಣಗಳನ್ನು ಈಗ ನಾವು ನೋಡೋಣ: |
02:50 | * ಎರಡು ದಿನಗಳಿಗಿಂತ ಹೆಚ್ಚು ಇರುವ ಜ್ವರ |
02:54 | * ಕೆಂಪಾದ, ಬೆಚ್ಚಗಿನ ಮತ್ತು ನೋಯುತ್ತಿರುವ ಚರ್ಮ |
02:58 | * ಮನೆಯಲ್ಲಿಯ ಚಿಕಿತ್ಸೆಯಿಂದ ಉಪಶಮನ ಆಗಲಾರದ ಅತಿಯಾದ ತುರಿಕೆ |
03:03 | * ಎರಡು ವಾರಗಳಿಗಿಂತ ಹೆಚ್ಚು ಅವಧಿಯಲ್ಲಿ ಇರುವ ದದ್ದುಗಳು. |
03:08 | 'ಚಿಕನ್ ಪಾಕ್ಸ್'ನ ಅವಧಿ ಮತ್ತು ಸಾಂಕ್ರಾಮಿಕತೆಯನ್ನು ಈಗ ನಾವು ನೋಡೋಣ. |
03:13 | 'ಚಿಕನ್ ಪಾಕ್ಸ್'ನ ಗುಳ್ಳೆಗಳು, 3 ರಿಂದ 5 ದಿನಗಳಲ್ಲಿ ರೂಪುಗೊಳ್ಳುತ್ತವೆ ಮತ್ತು 7 ರಿಂದ 10 ದಿನಗಳಲ್ಲಿ ಗಡುಸಾಗುತ್ತವೆ. |
03:22 | ಕಾಣಿಸಿಕೊಂಡ 1 ರಿಂದ 2 ದಿನಗಳಲ್ಲಿ ಇದು ಸೋಂಕುರೋಗವಾಗುತ್ತದೆ. |
03:27 | ಎಲ್ಲ ಗುಳ್ಳೆಗಳು ಗಡುಸಾಗುವವರೆಗೆ (ಒಣಗುವವರೆಗೆ) ಇದು ಸೋಂಕುರೋಗವಾಗಿಯೇ ಇರುತ್ತದೆ. |
03:33 | ಇದು ತೀವ್ರವಾದ ಸೋಂಕುರೋಗವಾಗಿದ್ದು, ಒಬ್ಬರಿಂದ ಇನ್ನೊಬ್ಬರಿಗೆ ಬಹಳ ಸುಲಭವಾಗಿ ಹರಡಬಹುದು. |
03:39 | ಈಗ ನಾವು 'ಚಿಕನ್ ಪಾಕ್ಸ್'ನ ಕಾರಣಗಳನ್ನು ನೋಡೋಣ. |
03:47 | ನೀವು 'ಚಿಕನ್ ಪಾಕ್ಸ್'ನ ಗುಳ್ಳೆಯ ದ್ರವವನ್ನು ಮುಟ್ಟುವುದರಿಂದ ಅಥವಾ |
03:52 | ರೋಗಿಯು ನಿಮ್ಮ ಸಮೀಪದಲ್ಲಿ ಕೆಮ್ಮಿದಾಗ ಅಥವಾ ಸೀನಿದಾಗ ನಿಮಗೆ 'ಚಿಕನ್ ಪಾಕ್ಸ್' ಬರಬಹುದು. |
04:00 | ನಿಮಗೆ ಹಿಂದೆ ಯಾವಾಗಲೂ 'ಚಿಕನ್ ಪಾಕ್ಸ್' ಬಂದಿರದಿದ್ದರೆ ಮತ್ತು |
04:03 | 'ಚಿಕನ್ ಪಾಕ್ಸ್' ಲಸಿಕೆಯನ್ನು ಸಹ ತೆಗೆದುಕೊಂಡಿರದಿದ್ದರೆ ಅಪಾಯವು ಹೆಚ್ಚು. |
04:08 | ನಮಗೆ 'ಚಿಕನ್ ಪಾಕ್ಸ್' ಬಂದಾಗ ನಾವು ಏನು ಮಾಡಬೇಕು ಎಂಬುದನ್ನು ಈಗ ನೋಡೋಣ - |
04:14 | * ಅದು 'ಚಿಕನ್ ಪಾಕ್ಸ್' ಆಗಿದೆ ಮತ್ತು ಸೊಳ್ಳೆ/ಕೀಟದ ಕಡಿತವಲ್ಲ ಎಂದು ಖಚಿತಪಡಿಸಿಕೊಳ್ಳಲು ನಿಮ್ಮ ವೈದ್ಯರನ್ನು ಸಂಪರ್ಕಿಸಿ. |
04:20 | * ಮಿತ ಆಹಾರವನ್ನು ಸೇವಿಸಿ, ಮನೆಯಲ್ಲಿ ತಯಾರಿಸಿದ ಆಹಾರವು ಉತ್ತಮ. |
04:26 | * ಮೊದಲ ಕೆಲವು ದಿನ, ತಣ್ಣಗಿನ ಅಥವಾ ಬೆಚ್ಚಗಿನ ನೀರಿನಲ್ಲಿ ಪ್ರತಿ 3-4 ಗಂಟೆಗಳಿಗೊಮ್ಮೆ ಸ್ನಾನ ಮಾಡಿ. |
04:33 | * ಸ್ನಾನದ ನೀರಿಗೆ ಬೇವಿನ ಎಲೆಗಳನ್ನು ಸೇರಿಸಿ, ಇದು ತುರಿಕೆಯನ್ನು ಕಡಿಮೆ ಮಾಡುತ್ತದೆ. |
04:38 | * ಸ್ನಾನವನ್ನು ಮಾಡಿ ಶರೀರವನ್ನು ಮೆತ್ತಗೆ ಒರೆಸಿ. |
04:42 | * ಸಾಕಷ್ಟು ನೀರು, ಎಳನೀರು, ಬಾರ್ಲಿ ಅಥವಾ ಯಾವುದೇ ತಂಪಾಗಿಸುವ ಪಾನೀಯವನ್ನು ಕುಡಿಯಿರಿ. |
04:49 | * ರೋಗವು ಹರಡುವುದನ್ನು ತಡೆಯಲು ರೋಗಿಯ ಬಟ್ಟೆಗಳನ್ನು ಬೇರೆಯಾಗಿ ತೊಳೆಯಿರಿ. |
04:55 | * ನಿಮಗೆ ಮೊದಲು 'ಚಿಕನ್ ಪಾಕ್ಸ್' ಬಂದಿರದಿದ್ದರೆ ಅಥವಾ ಲಸಿಕೆಯನ್ನು ಪಡೆದಿರದಿದ್ದರೆ, ನೀವು ಲಸಿಕೆಯನ್ನು ತೆಗೆದುಕೊಳ್ಳಬೇಕು. |
05:02 | 'ಚಿಕನ್ ಪಾಕ್ಸ್' ಬಂದಾಗ ಏನು ಮಾಡಬಾರದು ಎಂಬುದನ್ನು ಈಗ ನಾವು ನೋಡೋಣ. |
05:08 | ತುರಿಸುವ ಕೆಂಪು ಗುಳ್ಳೆಗಳನ್ನು ಕೆರೆದುಕೊಳ್ಳುವುದನ್ನು ತಪ್ಪಿಸಿ. |
05:10 | ಇದು ಬ್ಯಾಕ್ಟೀರಿಯಾದ ಸೋಂಕುಗಳಿಗೆ ಮತ್ತು ಗಾಯದ ಕಲೆಗಳಿಗೆ ಕಾರಣವಾಗಬಹುದು. |
05:15 | ಬೇರೆಯವರ ಸಂಪರ್ಕದಿಂದ ದೂರವಿರಿ ಏಕೆಂದರೆ ರೋಗ ಅವರಿಗೂ ತಗುಲಬಹುದು. |
05:22 | ಇದರೊಂದಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ. ನೆನಪಿಡಿ, ವೈದ್ಯಕೀಯ ನೆರವನ್ನು ಪಡೆಯುವುದು ಯಾವಾಗಲೂ ಒಳ್ಳೆಯದು. |
05:28 | ಧನ್ಯವಾದಗಳು. |
05:32 | ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋವನ್ನು ವೀಕ್ಷಿಸಿ. |
05:35 | ಇದು “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ಸಾರಾಂಶವಾಗಿದೆ. |
05:39 | ನಿಮಗೆ ಒಳ್ಳೆಯ ‘ಬ್ಯಾಂಡ್ವಿಡ್ತ್’ ಸಿಗದಿದ್ದರೆ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು. |
05:44 | “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ತಂಡವು: * 'ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ. |
05:49 | * ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. |
05:53 | ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ:
contact@spoken-tutorial.org |
06:01 | "ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪವು, “ಟಾಕ್ ಟು ಎ ಟೀಚರ್” ಪ್ರಕಲ್ಪದ ಒಂದು ಭಾಗವಾಗಿದೆ. |
06:05 | ಇದು ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ. |
06:12 | ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುತ್ತದೆ: |
06:22 | ಈ ವೀಡಿಯೋದಲ್ಲಿ, ಅನಿಮೇಶನ್ ಆರತಿ ಅವರದು ಹಾಗೂ ಚಿತ್ರಗಳು ಸೌರಭ್ ಗಾಡ್ಗಿಲ್ ಅವರದ್ದು. |
06:30 | IIT Bombay ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕಿ ಗ್ಲೋರಿಯಾ. |
06:33 | ಧನ್ಯವಾದಗಳು. |