DWSIM-3.4/C2/Introduction-to-Flowsheeting/Kannada

From Script | Spoken-Tutorial
Jump to: navigation, search
Time
Narration
00:01 DWSIMನಲ್ಲಿ Introduction to Flowsheeting ಎಂಬ spoken tutorialಗೆ ನಿಮಗೆ ಸ್ವಾಗತ.
00:07 ಈ ಟ್ಯುಟೋರಿಯಲ್-ನಲ್ಲಿ ನಾವು, mixer (ಮಿಕ್ಸರ್) ಅನ್ನು ಸಿಮ್ಯುಲೇಟ್ ಮಾಡುವೆವು.
00:10 'ಫ್ಲ್ಯಾಶ್ ಸೆಪರೇಟರ್' (flash separator) ನಿಂದ ಅದನ್ನು ಮುಂದುವರೆಸುವೆವು ಮತ್ತು
00:12 ’ಟೂ ಫೇಸ್ ಫೀಡ’ ಅನ್ನು ಹೇಗೆ ಕೊಡುವುದು ಎಂಬುದನ್ನು ಕಲಿಯುವೆವು.
00:16 ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು ನಾನು DWSIM 3.4 ಅನ್ನು ಬಳಸುತ್ತೇನೆ.
00:20 ಈ ಟ್ಯುಟೋರಿಯಲ್-ಅನ್ನು ಅಭ್ಯಾಸ ಮಾಡಲು, ನಿಮಗೆ DWSIM ತಿಳಿದಿರಬೇಕು.
00:24 ಇದನ್ನು ಕಲಿಯಲು ಅಗತ್ಯವಿರುವ ಟ್ಯುಟೋರಿಯಲ್-ಗಳು ಈ ಕೆಳಗಿನ ವೆಬ್ಸೈಟ್ ನಲ್ಲಿ ಲಭ್ಯವಿರುತ್ತವೆ:

spoken hyphen tutorial dot org

00:31 ನಾನು DWSIM ಅನ್ನು ತೆರೆಯುತ್ತೇನೆ.
00:33 ಎರಡು material stream (ಮಟೀರಿಯಲ್ ಸ್ಟ್ರೀಮ್) ಗಳೊಂದಿಗೆ flow-begin ಎಂಬ ಫೈಲ್ ಅನ್ನು ನಾನು ಈಗಾಗಲೇ ತೆರೆದಿದ್ದೇನೆ.
00:40 ಹಾಗೂ Raoult’s law (ರೌಲ್ಟ್ಸ್ ಲಾ) ಮತ್ತು CGS system ಗಳನ್ನು ಆಯ್ಕೆ ಮಾಡಿದ್ದೇನೆ.
00:43 ಇದಕ್ಕಾಗಿ ನಾನು File ಮೆನುವಿನಲ್ಲಿ Open ಆಯ್ಕೆಯನ್ನು ಕ್ಲಿಕ್ ಮಾಡಿದ್ದೇನೆ. ಇದನ್ನು ಕ್ಲೋಸ್ ಮಾಡುತ್ತೇನೆ.
00:53 ಈ ಫೈಲ್ ನಮ್ಮ spoken tutorial ವೆಬ್ಸೈಟ್ ನಲ್ಲಿ ಲಭ್ಯವಿರುತ್ತದೆ.
00:56 ಈ ಫೈಲ್ ಅನ್ನು ನೀವು ಡೌನ್-ಲೋಡ್ ಮಾಡಿ ಬಳಸಬಹುದು ಅಥವಾ ಬೇಕಾದ ಮಾಹಿತಿಯನ್ನು ಸ್ವತಃ ನಮೂದಿಸಬಹುದು.
01:02 flowsheet ಕ್ಯಾನ್ವಾಸ್ ನಲ್ಲಿ Inlet1 ಮತ್ತು Inlet2 ಎಂಬ ಎರಡು ಸ್ಟ್ರೀಮ್-ಗಳನ್ನು ನೋಡಬಹುದು.
01:08 ಈ ಫೈಲ್-ನ ಸಾರಾಂಶವನ್ನು ಮುಂದಿನ ಸ್ಲೈಡ್ ವಿವರಿಸುತ್ತದೆ.
01:13 ಈ ಸ್ಟ್ರೀಮ್-ಗಳನ್ನು ನಾವು ಸೇರಿಸಿದಾಗ, ನಮಗೆ equimolar composition (ಇಕ್ವಿಮೋಲಾರ್ ಕಾಂಪೋಸಿಶನ್) ಸಿಗುತ್ತದೆ.
01:17 DWSIMನ ಲೆಕ್ಕಾಚಾರಗಳನ್ನು ಸುಲಭವಾಗಿ ಪರಿಶೀಲಿಸಲು ನಾವು ಈ ವ್ಯಾಲ್ಯುಗಳನ್ನು ಆಯ್ಕೆ ಮಾಡಿದ್ದೇವೆ.
01:23 DWSIMಗೆ ಹಿಂದಿರುಗೋಣ.
01:25 ಈಗ ಸ್ಟ್ರೀಮ್-ಗಳಲ್ಲಿ ವೇಪರ್ ಇರುವಂತೆ ಮಾಡಲು ಅವುಗಳನ್ನು ನಾವು ಮಾರ್ಪಡಿಸುವೆವು.
01:31 Inlet 1 ಅನ್ನು ಆಯ್ಕೆಮಾಡಿ.
01:34 Properties ಟ್ಯಾಬ್-ನ ಮೇಲೆ ಇರುವ Specification ಅನ್ನು ಕ್ಲಿಕ್ ಮಾಡಿ.
01:40 ಡೌನ್-ಆರೋ ಅನ್ನು ಒತ್ತಿ Pressure and Vapor Fraction ಅನ್ನು ಆಯ್ಕೆ ಮಾಡಿ.
01:46 ಕೆಳಗೆ ಸ್ಕ್ರೋಲ್ ಮಾಡಿ ಮತ್ತು Molar Fraction (Vapor Phase) ಇರುವಲ್ಲಿಗೆ ಹೋಗಿ.
01:53 ಇಲ್ಲಿ 1 ಎಂದು ಟೈಪ್ ಮಾಡಿ, ಅರ್ಥಾತ್, ಪೂರ್ಣ ಸ್ಟ್ರೀಮ್ ವೇಪರ್ ಆಗಿದೆ.
02:00 ಹೀಗೆಯೇ, Inlet2, 50% Molar Fraction ಹೊಂದಿರುವಂತೆ ಮಾಡಿ.
02:13 ಈಗ, ನಾವು flowsheetನಲ್ಲಿ ಒಂದು ಮಿಕ್ಸರ್-ಅನ್ನು ಸೇರಿಸೋಣ.
02:17 Object Paletteನಲ್ಲಿ Mixer ಅನ್ನು ಹುಡುಕಿ. ಅದು ಮೂರನೇ ನಮೂದು ಆಗಿದೆ.
02:22 ಅದನ್ನು ಕ್ಲಿಕ್ ಮಾಡಿ ಫ್ಲೋಶೀಟ್-ಕಡೆಗೆ ಎಳೆಯಿರಿ.
02:24 ನಾವೀಗ mixer ನ ಹೆಸರನ್ನು ಬದಲಾಯಿಸೋಣ.
02:29 Appearance ಟ್ಯಾಬ್ ನ ಮೇಲೆ ಕ್ಲಿಕ್ ಮಾಡಿ. ಡಿಫಾಲ್ಟ್ ಹೆಸರನ್ನು ಡಿಲಿಟ್ ಮಾಡಿ ಮತ್ತು Mixer ಎಂದು ಟೈಪ್ ಮಾಡಿ.
02:36 ಈಗ, ನಾವು ಮಿಕ್ಸರ್-ಗಾಗಿ ಒಂದು output stream ಅನ್ನು ಸೇರಿಸೋಣ.
02:40 Material Stream ಮೇಲೆ ಕ್ಲಿಕ್ ಮಾಡಿ ಅದನ್ನು ಫ್ಲೋಶೀಟ್-ಕಡೆಗೆ ಎಳೆಯಿರಿ.
02:45 ಆಟೋಮೇಟಿಕ್ ಪಾಪ್-ಅಪ್ ಅನ್ನು ಕ್ಲೋಸ್ ಮಾಡುತ್ತೇವೆ ಮತ್ತು ಇದರಲ್ಲಿಏನನ್ನೂ ಸೇರಿಸುವುದಿಲ್ಲ. ಏಕೆಂದರೆ, ಈ ಔಟ್-ಪುಟ್ ಸ್ಟ್ರೀಮ್-ಗಳಿಗೆ ನಾವು ಯಾವುದೇ ವಿವರಗಳನ್ನು ಕೊಡಬಾರದು.
02:54 ನಾವು ಈ ಸ್ಟ್ರೀಮ್-ನ ಹೆಸರನ್ನು mixer-out ಎಂದು ಬದಲಾಯಿಸುವೆವು.
03:03 ನಾನು mixer ಗೆ ಸ್ಟ್ರೀಮ್-ಗಳನ್ನು ಜೋಡಿಸುತ್ತೇನೆ.
03:05 ನಾನು mixer ಅನ್ನು ಒಮ್ಮೆ ಕ್ಲಿಕ್ ಮಾಡುತ್ತೇನೆ.
03:08 Selected Object ವಿಂಡೋ-ನಲ್ಲಿ Properties ಕಾಣಿಸಿಕೊಳ್ಳುತ್ತದೆ.
03:12 ಮಿಕ್ಸರ್, ಸುಮಾರು 6 inlet streamಗಳನ್ನು ಹೊಂದಿರುವುದನ್ನು ನೀವು ನೋಡಬಹುದು.
03:19 ನಾವು Inlet Stream 1 ನ ಮೇಲೆ ಕ್ಲಿಕ್ ಮಾಡೋಣ.
03:23 ಮೆನ್ಯು ಅನ್ನು ಸೂಚಿಸುವ ಒಂದು ಡೌನ್-ಆರೋ ಕಾಣಿಸುತ್ತದೆ.
03:27 ಈ ಆರೋ ಅನ್ನು ಕ್ಲಿಕ್ ಮಾಡಿ, Inlet1 ಅನ್ನು ಆಯ್ಕೆಮಾಡಿ.
03:32 ಹೀಗೆಯೇ, Inlet2 ಅನ್ನು Inlet Stream 2ಗೆ ಸೇರಿಸಿ.
03:37 ಇಲ್ಲಿ, Connected to Outlet ಎಂದು ಸೂಚಿಸುವ ಔಟ್ಲೆಟ್ ಪೋರ್ಟ್-ಅನ್ನು ಹುಡುಕಿ.
03:43 ಅದರ ಮೇಲೆ ಕ್ಲಿಕ್ ಮಾಡಿ ಮತ್ತು mixer-out ಅನ್ನು ಆಯ್ಕೆ ಮಾಡಿ.
03:49 ಒಂದೇ ಸಾಲಿನಲ್ಲಿ stream ಗಳನ್ನು ಇರಿಸಲು ಅವುಗಳನ್ನು ನಾವು ಸರಿಸಬಹುದು.
03:54 mixer ಕೆಂಪುಬಣ್ಣದಲ್ಲಿದೆ, ಏಕೆಂದರೆ ಅದರ ವ್ಯಾಲ್ಯೂಗಳನ್ನು ಇನ್ನೂ ಕಂಡುಹಿಡಿದಿಲ್ಲ.
03:58 configure simulation ಬಟನ್-ನ ಬಲಭಾಗದಲ್ಲಿ Calculator ಇದೆ.
04:02 ಅದು ಹಲವಾರು ಆಯ್ಕೆಗಳನ್ನು ಹೊಂದಿದೆ.
04:03 ಮೊದಲನೆಯದು ಸಾಲ್ವರ್-ಅನ್ನು activate ಮಾಡಲು ಇರುವ play ಬಟನ್ ಆಗಿದೆ. ಇದನ್ನು ಕ್ಲಿಕ್ ಮಾಡಿ.
04:09 ಇದರ ಬಲಭಾಗದಲ್ಲಿರುವ ಎರಡು ಬಟನ್-ಗಳು Recalculate ಮಾಡಲು ಇರುತ್ತವೆ. ಈ ಬಟನ್ ಅನ್ನು ಕ್ಲಿಕ್ ಮಾಡಿ.
04:17 mixer ಈಗ ನೀಲಿ ಬಣ್ಣದಲ್ಲಿದೆ, ಅಂದರೆ ಅದರ ವ್ಯಾಲ್ಯೂಗಳನ್ನು ಕಂಡುಹಿಡಿಯಲಾಗಿದೆ.
04:22 ಈಗ, mixer-out ಸ್ಟ್ರೀಮ್ ನ ಮೇಲೆ ಕ್ಲಿಕ್ ಮಾಡಿ.
04:27 ಕಂಡುಹಿಡಿಯಲಾದ ವ್ಯಾಲ್ಯುಗಳನ್ನು Properties ಟ್ಯಾಬ್-ನಲ್ಲಿ ನಾವು ನೋಡಬಹುದು.
04:31 ಇದರ ಕಂಪೋಸಿಷನ್, ನಮಗೆ ಬೇಕಾದ ಹಾಗೆಯೇ ಇದೆ ಎಂಬುದನ್ನು ಪರಿಶೀಲಿಸಬಹುದು.
04:37 Mixture ನ ಮೇಲೆ ಡಬಲ್ ಕ್ಲಿಕ್ ಮಾಡಿ.
04:40 ಅದು ' ಇಕ್ವಿಮೋಲಾರ್ ಕಾಂಪೋಸಿಶನ್' (equimolar composition) ಅನ್ನು ಹೊಂದಿದೆ.
04:43 flash separator ಅನ್ನು ನಾವು ಇನ್ಸರ್ಟ್ ಮಾಡೋಣ.
04:47 Object Palette ನಲ್ಲಿ ಕೆಳಗೆ ಸ್ಕ್ರೋಲ್ ಮಾಡೋಣ.
04:51 ಇಲ್ಲಿ Separator Vessel ಇದೆ.
04:56 ಅದನ್ನು VLE, LLE ಮತ್ತು VLLE ಸಿಸ್ಟಮ್-ಗಳನ್ನು ಸಿಮುಲೇಟ್ ಮಾಡಲು ಬಳಸಲಾಗುತ್ತದೆ.
05:01 ಅದನ್ನು ಕ್ಲಿಕ್ ಮಾಡಿ ಫ್ಲೋಶೀಟ್-ಗೆ ಎಳೆಯಿರಿ.
05:06 ನಾವು ಎರಡು ಔಟ್-ಪುಟ್ ಸ್ಟ್ರೀಮ್-ಗಳನ್ನು ಸೆಪರೇಟರ್-ಗೆ ಕನೆಕ್ಟ್ ಮಾಡಬೇಕಾಗಿದೆ.
05:10 material stream ಅನ್ನು ಎಳೆಯೋಣ (ಡ್ರಾಗ್ ಮಾಡೋಣ).
05:13 ಅದನ್ನು ಹಾಗೆಯೇ ಇಟ್ಟುಬಿಡೋಣ, ಏಕೆಂದರೆ ಅದರ ಪ್ರಾಪರ್ಟಿಗಳನ್ನು ಇನ್ನೂ ಕಂಡುಹಿಡಿಯಬೇಕಿದೆ.
05:20 ಅದನ್ನು Vapour ಎಂದು ಹೆಸರಿಸೋಣ.
05:27 ಹೀಗೆಯೇ, ಇನ್ನೊಂದು ಸ್ಟ್ರೀಮ್-ಅನ್ನು ಕ್ರಿಯೇಟ್ ಮಾಡಿ, ಅದನ್ನು Liquid ಎನ್ನೋಣ.
05:32 ಈಗ ನಾವು ಸ್ಟ್ರೀಮ್-ಗಳನ್ನು Separatorಗೆ ಸೇರಿಸೋಣ.
05:36 ಮೊದಲ ಇನ್ಪುಟ್ ಪೋರ್ಟ್-ನಲ್ಲಿ, ನಾವು mixer-out ಅನ್ನು ಕನೆಕ್ಟ್ ಮಾಡೋಣ.
05:44 ಒಟ್ಟಾರೆ ಇನ್ನೂ ಐದು ಇನ್ಪುಟ್ ಸ್ಟ್ರೀಮ್-ಗಳನ್ನು ನಾವು ಸೇರಿಸಬಹುದು.
05:47 separator , ಎಲ್ಲ ಸ್ಟ್ರೀಮ್-ಗಳನ್ನು ಸೇರಿಸುತ್ತದೆ (ಮಿಕ್ಸ್ ಮಾಡುತ್ತದೆ) ಮತ್ತು ಬೇರ್ಪಡಿಸುತ್ತದೆ. ವಾಸ್ತವವಾಗಿ, ಪ್ರತ್ಯೇಕವಾದ ಮಿಕ್ಸರ್-ನ ಅವಶ್ಯಕತೆ ಇಲ್ಲ.
05:54 energy streamಅನ್ನು ಕನೆಕ್ಟ್ ಮಾಡಲು ಒಂದು ಪೋರ್ಟ್ ಕೂಡ ಇದೆ.
05:59 ನಾವದನ್ನೀಗ ನೋಡಬಹುದು.
06:02 ಇವುಗಳನ್ನು ಅಸೈನ್ಮೆಂಟ್ ವಿಭಾಗದಲ್ಲಿ ನೋಡೋಣ.
06:07 ನಾವು Vapour ಸ್ಟ್ರೀಮ್ ಅನ್ನು Vapour outlet ಪೋರ್ಟ್-ಗೆ ಸೇರಿಸೋಣ.
06:13 ಹಾಗೆಯೇ, Liquid ಸ್ಟ್ರೀಮ್ ಅನ್ನು ಸೇರಿಸಿ.
06:21 ಸರಿಯಾದ ಜೋಡಣೆಗಾಗಿ, ಮತ್ತೊಮ್ಮೆ ಐಟಮ್-ಗಳನ್ನು ಸರಿಸೋಣ.
06:26 DWSIM ತಾನಾಗಿಯೇ ಲೆಕ್ಕವನ್ನು ಪೂರ್ಣಗೊಳಿಸಿತೆಂಬುದನ್ನು ಗಮನಿಸಿ.
06:31 ಇದಕ್ಕಾಗಿ Recalculate ಬಟನ್ ಅನ್ನು ಕೂಡ ನೀವು ಬಳಸಬಹುದು.
06:35 ವಾಸ್ತವವಾಗಿ, ನಿಮಗೆ ಸಂದೇಹವಿದ್ದಾಗಲೆಲ್ಲ ಇದನ್ನು ಮಾಡಬಹುದು.
06:39 ಸೆಪರೇಟರ್-ನಲ್ಲಿ, vapor ಮತ್ತು liquid ಸರಿಯಾಗಿ ಬೇರ್ಪಟ್ಟಿವೆಯೇ ಎಂಬುದನ್ನು ನಾವೀಗ ಪರೀಕ್ಷಿಸೋಣ.
06:45 ನಾವು Vapour ಸ್ಟ್ರೀಮ್-ನ ವೇಪರ್ ಫೇಜ್ ಮೋಲ್ ಫ್ರಾಕ್ಷನ್ಸ್-ಗಳನ್ನು (vapor phase mole fractions) ನೋಡೋಣ.
06:52 Benzeneನ ಮೋಲ್ ಫ್ರಾಕ್ಷನ್ 0.54 ಆಗಿದೆ.
06:56 mixer-out ನ ವ್ಯಾಲ್ಯೂಗಳ ಜೊತೆಗೆ ಇದು ಹೊಂದುತ್ತದೆಯೋ ಎಂದು ಪರಿಶೀಲಿಸೋಣ.
07:04 DWSIM ತಾನಾಗಿಯೇ vapor ವ್ಯಾಲ್ಯು ಅನ್ನು ತೋರಿಸುತ್ತದೆ ಎಂಬುದನ್ನು ನೋಡುವಿರಿ. benzene mole fraction 0.54 ಆಗಿದೆ.
07:13 Separator ನಮಗೆ ಬೇಕಾದ ಹಾಗೆ ಕೆಲಸ ಮಾಡುತ್ತದೆ ಎಂಬುದಕ್ಕೆ ಇದು ಪ್ರಮಾಣವಾಗಿದೆ.
07:18 Mixer ನ ಕಾರ್ಯನಿರ್ವಹಣೆಯ ಬಗೆಗೂ ನಾವು ಪರಿಶೀಲಿಸಬಹುದು.
07:22 ನಿರೀಕ್ಷಿಸಿದಂತೆ, Mixture ನ ಕಂಪೋಸಿಷನ್, ಇಕ್ವಿಮೋಲಾರ್ ಆಗಿದೆ ಎಂಬುದನ್ನು ನೋಡುವಿರಿ.
07:29 ಇನ್ನುಳಿದವುಗಳನ್ನು ಅಸೈನ್ಮೆಂಟ್ ವಿಭಾಗದಲ್ಲಿ ನೋಡೋಣ.
07:34 ನಾವು ಈ ಫೈಲ್ ಅನ್ನು Save as ಆಯ್ಕೆಯನ್ನು ಬಳಸಿ ಸೇವ್ ಮಾಡೋಣ.
07:39 ನಾನು flow-endಎಂದು ಸೇವ್ ಮಾಡುತ್ತೇನೆ.
07:46 ನಿಮ್ಮ ಫೈಲ್ ಅನ್ನು ಆಗಾಗ ಸೇವ್ ಮಾಡಿ ಎಂದು ನಾನು ಸಲಹೆ ಕೊಡುತ್ತೇನೆ.
07:49 ಸಂಕ್ಷಿಪ್ತವಾಗಿ,
07:52 ನಾವು ಸರಳವಾದ ಒಂದು ಫ್ಲೋಶೀಟ್ ಅನ್ನು ವ್ಯಾಖ್ಯಾನಿಸಿದೆವು.
07:54 ಮಿಕ್ಸ್ಡ್ ಫೀಡ್ ಅನ್ನು (mixed feed) ರಚಿಸುವುದರ ಬಗ್ಗೆ ವಿವರಿಸಿದೆವು.
07:58 mixer ಮತ್ತು separator ಗಳನ್ನು ಪರಿಚಯಸಿದೆವು.
08:00 ಅವುಗಳನ್ನು ಕನೆಕ್ಟ್ ಮಾಡುವ ಬಗೆಯನ್ನು ತೋರಿಸಿದೆವು.
08:02 ಮತ್ತು, ಸಿಮುಲೇಟ್ ಮಾಡುವುದು ಹೇಗೆ ಎಂಬುದನ್ನು ಸಹ ಕಲಿತೆವು.
08:04 ನಾನು ಕೆಲವು ಅಸೈನ್ಮೆಂಟ್ ಗಳನ್ನು ಕೊಡುತ್ತೇನೆ.
08:07 ಈ ಸ್ಲೈಡ್-ನಲ್ಲಿರುವ ಅಸೈನ್ಮೆಂಟ್ mass balancesಗೆ ಸಂಬಂಧಿಸಿದೆ.
08:10 ಸ್ಟ್ರೀಮ್ಸ್ ಮತ್ತು ಉಪಕರಣಗಳನ್ನು ತೋರಿಸಲು ನಾನು ನೀಲಿ ಬಣ್ಣವನ್ನು ಬಳಸುತ್ತೇನೆ.
08:15 ನಾವು ಮುಂದಿನ ಅಸೈನ್ಮೆಂಟ್-ಗೆ ಹೋಗೋಣ.
08:16 ನೀವು ಈ ಸ್ಲೈಡ್-ನಲ್ಲಿ ಹೇಳಿರುವ ಹಾಗೆ ಮೋಲ್ ಫ್ರಾಕ್ಷನ್-ಗಳನ್ನು ಪರೀಕ್ಷಿಸಬೇಕು.
08:20 ಮೂರನೇ ಅಸೈನ್-ಮೆಂಟ್, Separatorಗೆ ಸಂಬಂಧಿಸಿದೆ.
08:25 ಸ್ಟ್ರೀಮ್-ಗಳನ್ನು ಸೇರಿಸಲು ಅದನ್ನು ಬಳಸಬಹುದೆಂದು ನಾವು ಹಿಂದೆಯೇ ಹೇಳಿದ್ದೇವೆ.
08:30 mixer ಮತ್ತು mixer-out ಗಳನ್ನು ತೆಗೆದುಹಾಕಿ, ಮತ್ತು ಪುನಃ ಅದನ್ನು ಪ್ರಯತ್ನಿಸಿ.
08:35 ಮುಂದಿನ ಅಸೈನ್ಮೆಂಟ್-ನಲ್ಲಿ, ನೀವು ಸೆಪರೇಷನ್ ಅನ್ನು ಇನ್ನೂ ಹೆಚ್ಚಿನ ತಾಪಮಾನದಲ್ಲಿ ಮಾಡುವಿರಿ.
08:41 Separator ಮೇಲೆ ಕ್ಲಿಕ್ ಮಾಡಿ. ಮೇಲಕ್ಕೆ ಸ್ಕ್ರೋಲ್ ಮಾಡೋಣ.
08:46 Override separation temperature ಅನ್ನು true ಗೆ ಬದಲಾಯಿಸೋಣ.
08:52 ಈಗ ಸಿಗುವ ಫೀಲ್ಡ್-ನಲ್ಲಿ, ವ್ಯಾಲ್ಯು ಅನ್ನು 100 ಎಂದು ಬದಲಾಯಿಸಿ.
08:59 Object Paletteನಿಂದ Energy streamಅನ್ನು Flowsheetಗೆ ಎಳೆದು ತನ್ನಿ. ಇದು ಹೊಸ ಸ್ಟ್ರೀಮ್ ಆಗಿದೆ.
09:07 ನಾನು ಹಿಂದೆ ತೋರಿಸಿದಂತೆ, ಈ ಸ್ಟ್ರೀಮ್-ಅನ್ನು SeparatorEnergy Streamಗೆ ಸೇರಿಸಿ.
09:13 ಸಿಮುಲೇಟ್ ಮಾಡಿ ಮತ್ತು ನಿಮ್ಮ ಫಲಿತಾಂಶವನ್ನು ವಿಶ್ಲೇಷಿಸಿ.
09:16 ಈ ಸ್ಲೈಡ್ ನಲ್ಲಿ ಇದರ ಸಾರಾಂಶ ಇದೆ.
09:22 ಈ ವೀಡಿಯೋ, ಸ್ಪೋಕನ್-ಟ್ಯುಟೋರಿಯಲ್ ಪ್ರೊಜೆಕ್ಟ್ ನ ಸಾರಾಂಶವಾಗಿದೆ.
09:26 ಒಂದು ವೇಳೆ ನಿಮ್ಮಲ್ಲಿ ಒಳ್ಳೆಯ ಬ್ಯಾಂಡ್-ವಿಡ್ತ್ ಇಲ್ಲದಿದ್ದಲ್ಲಿ, ನೀವು ಇದನ್ನು ಡೌನ್-ಲೋಡ್ ಮಾಡಿ ನೋಡಬಹುದು.
09:31 ನಾವು ಸ್ಪೋಕನ್-ಟ್ಯುಟೋರಿಯಲ್ ಗಳನ್ನು ಉಪಯೋಗಿಸಿ ಕಾರ್ಯಾಶಾಲೆಗಳನ್ನು ನಡೆಸುತ್ತೇವೆ, ಪ್ರಮಾಣಪತ್ರಗಳನ್ನು ನೀಡುತ್ತೇವೆ. ದಯವಿಟ್ಟು ನಮ್ಮನ್ನು ಸಂಪರ್ಕಿಸಿ.
09:37 Spoken Tutorial ಬಗ್ಗೆ ನಿಮಗೆ ಪ್ರಶ್ನೆಗಳಿವೆಯೇ ?
09:39 ನಿಮಗೆ ಪ್ರಶ್ನೆ ಇರುವ minute ಮತ್ತು second ಅನ್ನು ಆಯ್ಕೆ ಮಾಡಿ.
09:43 ನಿಮ್ಮ ಪ್ರಶ್ನೆಯನ್ನು ಸಂಕ್ಷೇಪವಾಗಿ ಕೇಳಿ.
09:45 FOSSEE ತಂಡದ ಯಾರಾದರೊಬ್ಬರು ಅದಕ್ಕೆ ಉತ್ತರಿಸುತ್ತಾರೆ. ದಯವಿಟ್ಟು ಈ ವೆಬ್ಸೈಟ್ ಗೆ ಭೇಟಿ ನೀಡಿ.
09:51 ಜನಪ್ರಿಯ ಪುಸ್ತಕಗಳಲ್ಲಿಯ ಉತ್ತರಿಸಲಾದ ಉದಾಹರಣೆಗಳ ಕೋಡಿಂಗ್-ಅನ್ನು FOSSEE ತಂಡವು ಸಂಯೋಜನೆ ಮಾಡುತ್ತದೆ.
09:55 ಇದನ್ನು ಮಾಡುವವರಿಗೆ ನಾವು ಗೌರವಧನ ಮತ್ತು ಪ್ರಮಾಣಪತ್ರಗಳನ್ನು ನೀಡುತ್ತೇವೆ.
10:00 ಹೆಚ್ಚಿನ ಮಾಹಿತಿಗಾಗಿ, ಈ ವೆಬ್ಸೈಟ್ ಅನ್ನು ನೋಡಿ.
10:04 FOSSEE ತಂಡವು ಕಮರ್ಷಿಯಲ್ ಸಿಮುಲೇಟರ್ ಲ್ಯಾಬ್-ಗಳನ್ನು DWSIMಗೆ ಮೈಗ್ರೇಟ್ ಮಾಡಲು ಸಹಾಯ ಮಾಡುತ್ತದೆ.
10:09 ಇದನ್ನು ಮಾಡುವವರಿಗೆ ನಾವು ಗೌರವಧನ ಮತ್ತು ಪ್ರಮಾಣಪತ್ರಗಳನ್ನು ನೀಡುತ್ತೇವೆ.
10:13 ಹೆಚ್ಚಿನ ಮಾಹಿತಿಗಾಗಿ, ಈ ವೆಬ್ಸೈಟ್ ನೋಡಿ.
10:17 ಸ್ಪೋಕನ್-ಟ್ಯುಟೋರಿಯಲ್ ಮತ್ತು FOSSEE ಪ್ರಕಲ್ಪಗಳು ಭಾರತ ಸರ್ಕಾರದ NMEICT, MHRD ವತಿಯಿಂದ ಅನುದಾನವನ್ನು ಪಡೆದಿವೆ.
10:23 ಈ ಟ್ಯುಟೋರಿಯಲ್-ನ ಅನುವಾದಕರು ಬೆಂಗಳೂರಿನಿಂದ ಡಾ. ಉದಯನ ಹೆಗಡೆ ಹಾಗೂ ಪ್ರವಾಚಕಿ ಗ್ಲೋರಿಯಾ.

ಧನ್ಯವಾದಗಳು.

Contributors and Content Editors

Nancyvarkey, Sandhya.np14, Udayana