C-and-Cpp/C2/Scope-Of-Variables/Kannada

From Script | Spoken-Tutorial
Jump to: navigation, search
Time Narration
00:01 ಸಿ ಮತ್ತು ಸಿ ಪ್ಲಸ್ ಪ್ಲಸ್ ನಲ್ಲಿ ಸ್ಕೋಪ್ ಆಫ್ ವೇರಿಯೇಬಲ್ ಎಂಬ ಟ್ಯುಟೋರಿಯಲ್ ಗೆ ಸ್ವಾಗತ.
00:08 ಈ ಟ್ಯುಟೋರಿಯಲ್ ನಲ್ಲಿ ನಾವು ಕಲಿಯುವ ಅಂಶಗಳು:
00:11 ಸ್ಕೋಪ್ ಆಫ್ ವೇರಿಯೇಬಲ್ ಎಂದರೇನು?
00:13 ಗ್ಲೋಬಲ್ ವೇರಿಯೇಬಲ್ ಎಂದರೇನು?
00:16 ಲೋಕಲ್ ವೇರಿಯೇಬಲ್ ಎಂದರೇನು?
00:19 ಕೆಲವು ಉದಾಹರಣೆಗಳು ಹಾಗೂ,
00:22 ಕೆಲವು ಸಾಮಾನ್ಯವಾಗಿ ಆಗುವ ಎರರ್ ಗಳನ್ನೂ ಮತ್ತು ಅವುಗಳ ಪರಿಹಾರವನ್ನೂ ನೋಡೋಣ.
00:27 ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡುವಾಗ, ನಾನು ಉಬುಂಟು ಆಪರೇಟಿಂಗ್ ಸಿಸ್ಟಮ್ ನ 11.04 ನೇ ಆವೃತ್ತಿ ಮತ್ತು gcc ಮತ್ತು g++ ಕಂಪೈಲರ್ ನ 4.6.1 ನೇ ಆವೃತ್ತಿಯನ್ನು ಉಪಯೋಗಿಸಿದ್ದೇನೆ.
00:41 ಸ್ಕೋಪ್ ಆಫ್ ವೇರಿಯೇಬಲ್ ಅನ್ನು ಪೀಠಿಕೆಯೊಂದಿಗೆ ಪ್ರಾರಂಭಿಸೋಣ.
00:47 ಇದು, ಒಂದು ನಿರ್ದಿಷ್ಟ ವೇರಿಯೇಬಲ್ ಅನ್ನು ಯಾವ ಪ್ರದೇಶದಲ್ಲಿ ಉಪಯೋಗಿಸಬಹುದು ಎಂಬುದನ್ನು ನಿರ್ದೇಶಿಸುತ್ತದೆ.
00:54 ವೇರಿಯೇಬಲ್ ಅನ್ನು ಡಿಕ್ಲೇರ್ ಮಾಡಿರುವ ಸ್ಥಳ ಮತ್ತು ಟೈಪ್ ಗಳ ಆಧಾರದಲ್ಲಿ, ಇದನ್ನು ಎರಡು ವರ್ಗಗಳಾಗಿ ವಿಂಗಡಿಸಲಾಗಿದೆ.
00:59 ಗ್ಲೋಬಲ್ ವೇರಿಯೇಬಲ್ ಮತ್ತು ಲೋಕಲ್ ವೇರಿಯೇಬಲ್
01:05 ಈಗ ನಾವು ಉದಾಹರಣೆಯನ್ನು ನೋಡೋಣ.
01:07 ನಾನೀಗಾಗಲೇ ಪ್ರೊಗ್ರಾಮ್ ಅನ್ನು ಎಡಿಟರ್ ನಲ್ಲಿ ಟೈಪ್ ಮಾಡಿದ್ದೇನೆ.
01:10 ಅದನ್ನು ಒಪನ್ ಮಾಡುತ್ತೇನೆ.
01:14 ನಮ್ಮ ಫೈಲ್ ನ ಹೆಸರು ಸ್ಕೋಪ್ ಡಾಟ್ ಸಿ ಎಂದು ಗಮನದಲ್ಲಿಡಿ.
01:19 ಈಗ ಕೋಡ್ ಅನ್ನು ವಿವರಿಸುತ್ತೇನೆ.
01:23 ಇದು ನಮ್ಮ ಹೆಡರ್ ಫೈಲ್.
01:26 ಇಲ್ಲಿ ನಾವು ಎರಡು ಗ್ಲೋಬಲ್ ವೇರಿಯೇಬಲ್ a ಮತ್ತು b ಗಳನ್ನು ಡಿಕ್ಲೇರ್ ಮಾಡಿದ್ದೇವೆ.
01:32 ಮತ್ತು, ಅದನ್ನು ಐದು ಮತ್ತು ಎರಡು ಮೌಲ್ಯದೊಂದಿಗೆ ಇನಿಶಿಯಲೈಸ್ ಮಾಡಿದ್ದೇವೆ.
01:39 ಗ್ಲೋಬಲ್ ವೇರಿಯೇಬಲ್ ಅನ್ನು ಪ್ರೊಗ್ರಾಮ್ ನ ಎಲ್ಲ ಫಂಕ್ಷನ್ ಗಳೂ ಉಪಯೋಗಿಸಬಹುದು.
01:44 ಇವುಗಳನ್ನು ಎಲ್ಲ ಫಂಕ್ಷನ್ ನ ಹೊರಗೆ ಮತ್ತು ಮೈನ್ ಫಂಕ್ಷನ್ ನ ಮೇಲೆ ಡಿಕ್ಲೇರ್ ಮಾಡಬೇಕು.
01:51 ಇವು ಗ್ಲೋಬಲ್ ಸ್ಕೋಪ್ ಹೊಂದಿವೆ.
01:53 ಇಲ್ಲಿ, ನಾವು add ಫಂಕ್ಷನ್ ಅನ್ನು ವಿತೌಟ್ ಆರ್ಗ್ಯುಮೆಂಟ್ಸ್ ಆಗಿ ಡಿಕ್ಲೇರ್ ಮಾಡಿದ್ದೇವೆ.
01:59 ಇಲ್ಲಿ, ಸಮ್ ಎಂಬುದು ಲೋಕಲ್ ವೇರಿಯೇಬಲ್, ಇದನ್ನು add ಫಂಕ್ಷನ್ ನ ಒಳಗೆ ಡಿಕ್ಲೇರ್ ಮಾಡಲಾಗಿದೆ.
02:07 ಲೋಕಲ್ ವೇರಿಯೇಬಲ್ ಎಂಬುದು ಯಾವ ಫಂಕ್ಷನ್ ನ ಒಳಗೆ ಡಿಕ್ಲೇರ್ ಮಾಡಲ್ಪಟ್ಟಿದೆಯೋ, ಅಲ್ಲಿ ಮಾತ್ರ ಉಪಯೋಗಿಸಬಹುದು.
02:13 ಈ ವೇರಿಯೇಬಲ್ ಗಳು ಒಂದು ಬ್ಲಾಕ್ ನ ಒಳಗೆ ಡಿಕ್ಲೇರ್ ಆಗಿವೆ.
02:16 ಇವು ಲೋಕಲ್ ಸ್ಕೋಪ್ ಹೊಂದಿವೆ.
02:19 a ಮತ್ತು b ಯ ಮೊತ್ತವು ಸಮ್ ಎಂಬ ವೇರಿಯೇಬಲ್ ನಲ್ಲಿರುತ್ತವೆ. ಇಲ್ಲಿ ನಾವು ಸಮ್ ಅನ್ನು ಪ್ರಿಂಟ್ ಮಾಡುತ್ತೇವೆ.
02:29 ಇದು ನಮ್ಮ ಮೈನ್ ಫಂಕ್ಷನ್.
02:33 add ಫಂಕ್ಷನ್ ಅನ್ನು ಕಾಲ್ ಮಾಡಿ, ಎಕ್ಸಿಕ್ಯೂಟ್ ಮಾಡುತ್ತೇವೆ.
02:38 ಮತ್ತು ಇದು ನಮ್ಮ ರಿಟರ್ನ್ ಸ್ಟೇಟ್ಮೆಂಟ್.
02:40 ಈಗ save ಒತ್ತಿ.
02:43 ಪ್ರೊಗ್ರಾಮ್ ಅನ್ನು ಎಕ್ಸಿಕ್ಯೂಟ್ ಮಾಡೋಣ.
02:45 ನಿಮ್ಮ ಕೀಬೋರ್ಡ ನಲ್ಲಿ Ctrl, Alt ಮತ್ತು T ಕೀ ಗಳನ್ನು ಒಂದೇ ಬಾರಿಗೆ ಒತ್ತಿ, ಟರ್ಮಿನಲ್ ವಿಂಡೊ ಅನ್ನು ಓಪನ್ ಮಾಡಿ.
02:55 ಕಂಪೈಲ್ ಮಾಡಲು, “gcc” ಸ್ಪೇಸ್ ಸ್ಕೋಪ್ ಡಾಟ್ c ಸ್ಪೇಸ್ ಹೈಫನ್(-) ಒ (O) ಸ್ಪೇಸ್ ಎಸ್ ಸಿ ಒ ಎಂದು ಟೈಪ್ ಮಾಡಿ, Enter ಒತ್ತಿ.
03:05 ಎಕ್ಸಿಕ್ಯೂಟ್ ಮಾಡಲು ಡಾಟ್ ಸ್ಲ್ಯಾಶ್ ಎಸ್ ಸಿ ಒಎಂದು ಟೈಪ್ ಮಾಡಿ, Enter ಒತ್ತಿ.
03:10 ಸಮ್ ಆಫ್ a ಎಂಡ್ b ಈಸ್ ಸವೆನ್ ಎಂದು ಔಟ್ ಪುಟ್ ತೋರಿಸುತ್ತದೆ.
03:16 ಈಗ ಇದೇ ಪ್ರೊಗ್ರಾಮ್ ಅನ್ನು ಸಿ ಪ್ಲಸ್ ಪ್ಲಸ್ ನಲ್ಲಿ ಹೇಗೆ ಎಕ್ಸಿಕ್ಯೂಟ್ ಮಾಡುವುದೆಂದು ನೋಡೋಣ.
03:20 ನಮ್ಮ ಪ್ರೊಗ್ರಾಮ್ ಗೆ ಹಿಂತಿರುಗಿ. ಮೊದಲು Shift, Ctrl ಮತ್ತು S ಅನ್ನು ಒಂದೇ ಬಾರಿಗೆ ಒತ್ತಿ.
03:31 ಈಗ ಫೈಲ್ ಅನ್ನು ಡಾಟ್ ಸಿಪಿಪಿ ಎಂಬ ಎಕ್ಸ್ಟೆಂಶನ್ ನೊಂದಿಗೆ ಸೇವ್ ಮಾಡಿ.
03:41 ಮೊದಲು ಹೆಡರ್ ಫೈಲ್ ಅನ್ನು ಐಒಸ್ಟ್ರೀಮ್ ಎಂದು ಬದಲಾಯಿಸೋಣ.
03:47 ಯೂಸಿಂಗ್ ಸ್ಟೇಟ್ಮೆಂಟ್ ಅನ್ನು ಇಲ್ಲಿ ಸೇರಿಸೋಣ. Save ಒತ್ತಿ.
03:58 ಗ್ಲೋಬಲ್ ಮತ್ತು ಲೋಕಲ್ ವೇರಿಯೇಬಲ್ ನ ಡಿಕ್ಲೇರೇಶನ್, ಸಿ ಪ್ಲಸ್ ಪ್ಲಸ್ ನಲ್ಲಿ ಇದೇ ರೀತಿ ಇರುತ್ತದೆ.
04:03 ಹಾಗಾಗಿ ಬದಲಾಯಿಸುವ ಅಗತ್ಯವಿಲ್ಲ.
04:07 printf ಸ್ಟೇಟ್ಮೆಂಟ್ ಬದಲಾಗಿ ಸಿಔಟ್ ಸ್ಟೇಟ್ಮೆಂಟ್ ಬರೆಯಿರಿ.
04:13 ಫಾರ್ಮಾಟ್ ಸ್ಪೆಸಿಫೈರ್ ಮತ್ತು ಬ್ಯಾಕ್ ಸ್ಲ್ಯಾಶ್ ಎನ್ ಗಳನ್ನು ಡಿಲೀಟ್ ಮಾಡಿ.
04:17 ”,” (comma) ಅನ್ನು ಡಿಲೀಟ್ ಮಾಡಿ.
04:19 ಈಗ, ಎರಡು ಒಪನಿಂಗ್ ಆಂಗಲ್ ಬ್ರಾಕೆಟ್ ಅನ್ನು ಟೈಪ್ ಮಾಡಿ.
04:22 ಕ್ಲೋಸಿಂಗ್ ಬ್ರಾಕೆಟ್ ಅನ್ನು ಡಿಲೀಟ್ ಮಾಡಿ, ಮತ್ತೆ ಎರಡು ಒಪನಿಂಗ್ ಆಂಗಲ್ ಬ್ರಾಕೆಟ್ ಅನ್ನು ಟೈಪ್ ಮಾಡಿ.
04:26 ಮತ್ತು, ಡಬಲ್ ಕೋಟ್ಸ್ ನ ಒಳಗೆ ಬ್ಯಾಕ್ ಸ್ಲ್ಯಾಷ್ ಎನ್ ಎಂದು ಟೈಪ್ ಮಾಡಿ. Save ಒತ್ತಿ.
04:35 ಪ್ರೊಗ್ರಾಮ್ ಅನ್ನು ಎಕ್ಸಿಕ್ಯೂಟ್ ಮಾಡೋಣ.
04:39 ನಮ್ಮ ಟರ್ಮಿನಲ್ ಗೆ ಹಿಂತಿರುಗಿ,
04:42 ಕಂಪೈಲ್ ಮಾಡಲು, ಜಿ ಪ್ಲಸ್ ಪ್ಲಸ್ ಸ್ಕೋಪ್ ಡಾಟ್ ಸಿಪಿಪಿ ಹೈಫನ್ ಒ ಎಸ್ ಸಿ ಒ ಒನ್ ಎಂದು ಟೈಪ್ ಮಾಡಿ.
04:52 ಎಸ್ ಸಿ ಒ ಎಂಬ ಔಟ್ ಪುಟ್ ಫೈಲ್, ಓವರ್ ರೈಟ್ ಆಗದಿರಲು, ಇಲ್ಲಿ ಎಸ್ ಸಿ ಒ ಒನ್ ಎಂದು ಟೈಪ್ ಮಾಡಿದ್ದೇವೆ.
05:04 ಈಗ, Enter ಒತ್ತಿ.
05:07 ಎಕ್ಸಿಕ್ಯೂಟ್ ಮಾಡಲು ಡಾಟ್ ಸ್ಲ್ಯಾಶ್ ಎಸ್ ಸಿ ಒ ಒನ್ ಎಂದು ಟೈಪ್ ಮಾಡಿ.
05:14 ಸಮ್ ಆಫ್ a ಎಂಡ್ b ಈಸ್ ಸವೆನ್ ಎಂದು ಔಟ್ ಪುಟ್ ತೋರಿಸುತ್ತದೆ.
05:19 ಇದು ನಮ್ಮ ಸಿ ಕೋಡ್ ನಂತಿರುವುದನ್ನು ನೋಡಬಹುದು.
05:27 ಈಗ ನಾವು ಸಾಮಾನ್ಯವಾಗಿ ಆಗುವ ಕೆಲವು ಎರರ್ ಗಳನ್ನು ನೋಡೋಣ.
05:31 ನಮ್ಮ ಪ್ರೊಗ್ರಾಮ್ ಗೆ ಹಿಂತಿರುಗಿ, ಇಲ್ಲಿ ನಾನು a ಎಂಬ ವೇರಿಯೇಬಲ್ ಅನ್ನು ಪುನಃ ಡಿಕ್ಲೇರ್ ಮಾಡುತ್ತೇನೆ ಎಂದೆಣಿಸಿ.
05:41 ಇಂಟ್ a ಸೆಮಿಕೊಲನ್ ಎಂದು ಟೈಪ್ ಮಾಡಿ.
05:45 Save ಒತ್ತಿ, ನಾವು ವೇರಿಯೇಬಲ್ a ಯನ್ನು ಮೈನ್ ಫಂಕ್ಷನ್ ನ ಮೇಲೆ ಹಾಗೂ add ಫಂಕ್ಷನ್ ನ ನಂತರ ಡಿಕ್ಲೇರ್ ಮಾಡಿದ್ದೇವೆ.
05:55 ಏನಾಗುತ್ತದೆ ಎಂದು ನೋಡೋಣ.
05:57 ನಮ್ಮ ಟರ್ಮಿನಲ್ ಗೆ ಹಿಂತಿರುಗಿ.
06:01 ಮೊದಲಿನಂತೆ ಕಂಪೈಲ್ ಮಾಡಿ.
06:05 ರಿಡೆಫಿನಿಶನ್ ಆಫ್ ಇಂಟ್ a, ಇಂಟ್ a ಪ್ರಿವಿಯಸ್ಲಿ ಡೆಫೈಂಡ್ ಹಿಯರ್ ಎಂದು ಎರರ್ ನೋಡಬಹುದು. ನಮ್ಮ ಪ್ರೊಗ್ರಾಮ್ ಗೆ ಹಿಂತಿರುಗಿ.
06:18 a ಎಂಬುದು ಗ್ಲೋಬಲ್ ವೇರಿಯೇಬಲ್.
06:20 ಇದು ಗ್ಲೋಬಲ್ ಸ್ಕೋಪ್ ಹೊಂದಿದೆ.
06:22 ಈಗಾಗಲೇ ಈ ವೇರಿಯೇಬಲ್ ಗ್ಲೋಬಲ್ ಆಗಿ ಡಿಕ್ಲೇರ್ ಆಗಿರುವುದರಿಂದ, ನಾವು, ಈ ವೇರಿಯೇಬಲ್ ಅನ್ನು ಪುನಃ ಡಿಕ್ಲೇರ್ ಮಾಡಲು ಆಗುವುದಿಲ್ಲ.
06:27 ನಾವು, ವೇರಿಯೇಬಲ್ a ಯನ್ನು ಲೋಕಲ್ ಆಗಿ ಮಾತ್ರ ಡಿಕ್ಲೇರ್ ಮಾಡಬಹುದು.
06:34 ಈ ಎರರ್ ಅನ್ನು ಸರಿಪಡಿಸೋಣ.
06:36 ಇದನ್ನು ಡಿಲೀಟ್ ಮಾಡಿ.
06:39 Save ಒತ್ತಿ.
06:41 ಮತ್ತೆ ಎಕ್ಸಿಕ್ಯೂಟ್ ಮಾಡೋಣ. ಟರ್ಮಿನಲ್ ಗೆ ಹಿಂತಿರುಗಿ.
06:45 ಮೊದಲಿನಂತೆ ಕಂಪೈಲ್ ಮಾಡಿ, ಮೊದಲಿನಂತೆ ಎಕ್ಸಿಕ್ಯೂಟ್ ಮಾಡಿ.
06:49 ಹೌದು, ಇದು ಕೆಲಸ ಮಾಡುತ್ತಿದೆ.
06:52 ಇಲ್ಲಿಗೆ, ಈ ಟ್ಯುಟೋರಿಯಲ್ ಮುಗಿಯುತ್ತದೆ.
06:56 ಸಾರಾಂಶ ತಿಳಿಯೋಣ.
06:58 ಈ ಟ್ಯುಟೋರಿಯಲ್ ನಲ್ಲಿ ನಾವು ತಿಳಿದ ಅಂಶಗಳು:
07:00 ವೇರಿಯೇಬಲ್ ನ ಸ್ಕೋಪ್,
07:02 ಗ್ಲೋಬಲ್ ವೇರಿಯೇಬಲ್, ಉದಾಹರಣೆ ಗೆ ಇಂಟ್ a ಇಸ್ ಈಕ್ವಲ್ ಟು ಫೈವ್ ಮತ್ತು
07:07 ಲೋಕಲ್ ವೇರಿಯೇಬಲ್ ಉದಾಹರಣೆಗೆ ಇಂಟ್ ಸಮ್.
07:12 ಎರಡು ಸಂಖ್ಯೆಗಳ ವ್ಯತ್ಯಾಸವನ್ನು ಪ್ರಿಂಟ್ ಮಾಡಲು ಒಂದು ಪ್ರೊಗ್ರಾಮ್ ಅನ್ನು ಅಸೈನ್ಮೆಂಟ್ ಆಗಿ ಬರೆಯಿರಿ.
07:19 ಕೆಳಗಿನ ಲಿಂಕ್ ನಲ್ಲಿರುವ ವೀಡಿಯೋವನ್ನು ನೋಡಿರಿ.
07:22 ಇದು ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ಅನ್ನು ವಿವರಿಸುತ್ತದೆ.
07:25 ಒಳ್ಳೆಯ ಬ್ಯಾಂಡ್ ವಿಡ್ತ್ ಇಲ್ಲದಿದ್ದಲ್ಲಿ ನೀವು ಇದನ್ನು ಡೌನ್ ಲೋಡ್ ಮಾಡಿ ನೋಡಬಹುದು.
07:30 ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ಟೀಮ್,
07:32 ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಉಪಯೋಗಿಸಿ ಕಾರ್ಯಗಾರವನ್ನು ನಡೆಸುತ್ತದೆ.
07:35 ಆನ್ ಲೈನ್ ಟೆಸ್ಟ್ ನಲ್ಲಿ ತೇರ್ಗಡೆಹೊಂದಿದವರಿಗೆ ಸರ್ಟಿಫಿಕೇಟ್ ಕೊಡುತ್ತದೆ.
07:40 ಹೆಚ್ಚಿನ ಮಾಹಿತಿಗಾಗಿ, ಕಾಂಟಾಕ್ಟ್ ಆಟ್ (at)ಸ್ಪೋಕನ್ ಹೈಫನ್ (-) ಟ್ಯುಟೋರಿಯಲ್ ಡಾಟ್ ಆರ್ಗ್ ಗೆ ಬರೆಯಿರಿ.
07:47 ಸ್ಪೋಕನ್ ಟ್ಯುಟೋರಿಯಲ್, ಟಾಕ್ ಟು ಎ ಟೀಚರ್ ಪ್ರೊಜಕ್ಟ್ ನ ಒಂದು ಭಾಗವಾಗಿದೆ.
07:52 ಇದು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯಿಂದ ಬೆಂಬಲಿತವಾಗಿದೆ.
08:00 ಈ ನಿಯೋಗದ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯು ಕೆಳಗಿನ ಲಿಂಕ್ ನಲ್ಲಿ ದೊರೆಯುತ್ತದೆ.
08:04 ಈ ಟ್ಯುಟೋರಿಯಲ್ ನ ಅನುವಾದಕಿ ಚೇತನಾ ಮತ್ತು ಪ್ರವಾಚಕ ಐ ಐ ಟಿ ಬಾಂಬೆಯಿಂದ ವಾಸುದೇವ. ಧನ್ಯವಾದಗಳು.

Contributors and Content Editors

PoojaMoolya, Vasudeva ahitanal