C-and-Cpp/C2/Nested-If-And-Switch-Statement/Kannada
From Script | Spoken-Tutorial
Time | Narration |
00:01 | ಸಿ ಮತ್ತು ಸಿ ಪ್ಲಸ್ ಪ್ಲಸ್ (C++) ನಲ್ಲಿ ನೆಸ್ಟೆಡ್ ಇಫ್ ಮತ್ತು ಸ್ವಿಚ್ ಸ್ಟೇಟ್ಮೆಂಟ್ ಎಂಬ ಈ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
00:07 | ಈ ಟ್ಯುಟೋರಿಯಲ್ ನಲ್ಲಿ ನಾವು ಕಲಿಯುವ ಅಂಶಗಳು: |
00:09 | ನೆಸ್ಟೆಡ್ ಇಫ್ ಸ್ಟೇಟ್ಮೆಂಟ್ ಮತ್ತು ಸ್ವಿಚ್ ಸ್ಟೇಟ್ಮೆಂಟ್ ಗಳನ್ನು ಉಪಯೋಗಿಸುವುದು ಹೇಗೆ? |
00:13 | ಇದನ್ನು ನಾವು ಉದಾಹರಣೆಯೊಂದಿಗೆ ಮಾಡೋಣ. |
00:17 | ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡುವಾಗ, ನಾನು ಉಬುಂಟು ಆಪರೇಟಿಂಗ್ ಸಿಸ್ಟಮ್ ನ 11.10 ನೇ ಆವೃತ್ತಿ ಮತ್ತು gcc ಮತ್ತು g++ ಕಂಪೈಲರ್ ನ 4.6.1 ನೇ ಆವೃತ್ತಿಯನ್ನು ಅನ್ನು ಉಪಯೋಗಿಸಿದ್ದೇನೆ. |
00:30 | ಮೊದಲು, ನೆಸ್ಟೆಡ್ ಇಫ್ ಮತ್ತು ಸ್ವಿಚ್ ಸ್ಟೇಟ್ಮೆಂಟ್ ಗಳನ್ನು ಬರೆಯುವ ಬಗೆಯನ್ನು, ಉದಾಹರಣೆಯೊಂದಿಗೆ ಕಲಿಯೋಣ. |
00:36 | ನಾನೀಗಾಗಲೇ ಪ್ರೊಗ್ರಾಮ್ ಅನ್ನು ಎಡಿಟರ್ ನಲ್ಲಿ ಟೈಪ್ ಮಾಡಿದ್ದೇನೆ. ಅದನ್ನು ನೋಡೋಣ. |
00:40 | ಈ ಪ್ರೊಗ್ರಾಮ್ ನಲ್ಲಿ, ಇಂಟಿಜರ್ ನ ರೇಂಜ್ ಅನ್ನು ಚೆಕ್ ಮಾಡುವ ಬಗೆಯನ್ನು ತಿಳಿಯೋಣ. |
00:45 | ನಮ್ಮ ಫೈಲ್ ನ ಹೆಸರು, ನೆಸ್ಟೆಡ್ ಇಫ್ ಎಂಬುದನ್ನು ಗಮನದಲ್ಲಿಡಿ. |
00:50 | ಕೋಡ್ ಅನ್ನು ವಿವರಿಸುತ್ತೇನೆ. |
00:52 | ಇದು ನಮ್ಮ ಹೆಡರ್ ಫೈಲ್. |
00:54 | ಇದು ನಮ್ಮ ಮೈನ್ ಫಂಕ್ಷನ್. |
00:56 | ಮೈನ್ ಫಂಕ್ಷನ್ ನ ಒಳಗೆ x ಮತ್ತು y ಎಂದು ಎರಡು ಇಂಟಿಜರ್ ವೇರಿಯೇಬಲ್ ಗಳನ್ನು ಡಿಕ್ಲೇರ್ ಮಾಡಿದ್ದೇವೆ. |
01:02 | ಇಲ್ಲಿ, ಸೊನ್ನೆಯಿಂದ ಮೂವತ್ತೊಂಭತ್ತರ ನಡುವಿನ ಒಂದು ಸಂಖ್ಯೆ ಕೊಡಲು ಯೂಸರ್ ಗೆ ಪ್ರಾಂಪ್ಟ್ ಮಾಡುತ್ತೇವೆ. |
01:08 | y ನ ಮೌಲ್ಯವನ್ನು ಯೂಸರ್ ಇಂದ ಇನ್ಪುಟ್ ತೆಗೆದುಕೊಳ್ಳುತ್ತೇವೆ. |
01:12 | ಇದು ನಮ್ಮ ಕಂಡೀಶನ್. |
01:14 | ಇಲ್ಲಿ, y ಅಪಾನ್ (upon) ಹತ್ತು, ಸೊನ್ನೆಯೇ ಎಂಬುದನ್ನು ಚೆಕ್ ಮಾಡುತ್ತೇವೆ. |
01:19 | ಕಂಡೀಶನ್ ಸರಿಯಾಗಿದ್ದಲ್ಲಿ, ಯು ಹ್ಯಾವ್ ಎಂಟರ್ಡ್ ಎ ನಂಬರ್ ಇನ್ ದ ರೇಂಜ್ ಝೀರೋ ಟು ನೈನ್ ಎಂದು ಪ್ರಿಂಟ್ ಮಾಡುತ್ತೇವೆ. |
01:25 | ಇದು ನಮ್ಮ ಎಲ್ಸ್ ಇಫ್ ಕಂಡೀಶನ್. |
01:28 | ಇಲ್ಲಿ, y upon ಹತ್ತು, ಒಂದಕ್ಕೆ ಸಮವೇ ಎಂದು ಚೆಕ್ ಮಾಡುತ್ತೇವೆ. |
01:32 | ಕಂಡೀಶನ್ ಸರಿಯಾಗಿದ್ದಲ್ಲಿ, |
01:34 | ಯು ಹ್ಯಾವ್ ಎಂಟರ್ಡ್ ಎ ನಂಬರ್ ಇನ್ ದ ರೇಂಜ್ ಟೆನ್ ಟು ನೈಂಟೀನ್ ಎಂದು ಪ್ರಿಂಟ್ ಮಾಡುತ್ತೇವೆ. |
01:39 | ಈ ಎಲ್ಸ್ ಇಫ್(elseif) ಕಂಡೀಶನ್ ನಲ್ಲಿ, ಸಂಖ್ಯೆಯು ಇಪ್ಪತ್ತು ಮತ್ತು ಇಪ್ಪತ್ತೊಂಭತ್ತರ ನಡುವಿನದೇ? ಎಂದು ಚೆಕ್ ಮಾಡುತ್ತೇವೆ, |
01:45 | ಮತ್ತು ಇಲ್ಲಿ, ಸಂಖ್ಯೆಯು ಮೂವತ್ತರಿಂದ ಮೂವತ್ತೊಂಭತ್ತರ ನಡುವೆ ಇದೆಯೇ ಎಂದು ನೋಡುತ್ತೇವೆ. |
01:51 | ಇದು ನಮ್ಮ ಎಲ್ಸ್ ಕಂಡೀಶನ್. |
01:53 | ಮೇಲಿನ ಎಲ್ಲಾ ಕಂಡೀಶನ್ ಗಳೂ ತಪ್ಪಾಗಿದ್ದಲ್ಲಿ, |
01:55 | ನಂಬರ್ ನಾಟ್ ಇನ್ ರೇಂಜ್ ಎಂದು ಪ್ರಿಂಟ್ ಮಾಡುತ್ತೇವೆ. |
01:58 | ಮತ್ತು, ಇದು ನಮ್ಮ ರಿಟರ್ನ್ ಸ್ಟೇಟ್ಮೆಂಟ್. |
02:01 | ಈಗ, ಪ್ರೊಗ್ರಾಮ್ ಅನ್ನು ಎಕ್ಸಿಕ್ಯೂಟ್ ಮಾಡೋಣ. |
02:03 | ನಿಮ್ಮ ಕೀಬೋರ್ಡ ನಲ್ಲಿ Ctrl, Alt ಮತ್ತು T ಕೀ ಗಳನ್ನು ಒಮ್ಮೆಗೇ ಒತ್ತಿ, ಟರ್ಮಿನಲ್ ವಿಂಡೊ ಅನ್ನು ಓಪನ್ ಮಾಡಿ. |
02:12 | ಎಕ್ಸಿಕ್ಯೂಟ್ ಮಾಡಲು, “gcc”ಸ್ಪೇಸ್ ನೆಸ್ಟೆಡ್ (nested) ಹೈಫನ್ (-) ಇಫ್ಡಾಟ್ c ಸ್ಪೇಸ್ ಹೈಫನ್ (-) ಒ (O) ಸ್ಪೇಸ್ nested ಎಂದು ಟೈಪ್ ಮಾಡಿ, Enter ಕೀ ಯನ್ನು ಒತ್ತಿ. |
02:23 | ಡಾಟ್ ಸ್ಲ್ಯಾಶ್ nested ಎಂದು ಟೈಪ್ ಮಾಡಿ. Enter ಕೀ ಯನ್ನು ಒತ್ತಿ. |
02:28 | ಎಂಟರ್ ಎ ನಂಬರ್ ಬಿಟ್ವೀನ್ ಝೀರೋ ಟು ಥರ್ಟಿ ನೈನ್ ಎಂದು ಕಾಣಬಹುದು. |
02:32 | ನಾನು ಹನ್ನೆರಡು ಎಂದು ಎಂಟರ್ ಮಾಡುತ್ತೇನೆ. |
02:34 | ಯು ಹ್ಯಾವ್ ಎಂಟರ್ಡ್ ದ ನಂಬರ್ ಇನ್ ದ ರೇಂಜ್ ಆಫ್ ಟೆನ್ ಟು ನೈಂಟೀನ್ ಎಂದು ಔಟ್ ಪುಟ್ ತೋರಿಸುತ್ತದೆ. |
02:40 | ಈಗ ಮತ್ತೊಂದು ಸಂಖ್ಯೆಯನ್ನು ಎಂಟರ್ ಮಾಡೋಣ. |
02:42 | ಮತ್ತೆ ಎಕ್ಸಿಕ್ಯೂಟ್ ಮಾಡೋಣ. ಅಪ್ ಆರೋ (up arrow) ಕೀ ಯನ್ನು ಒತ್ತಿ. Enter ಕೀ ಯನ್ನು ಒತ್ತಿ. |
02:48 | ಈ ಬಾರಿ ನಾನು ಐದು ಎಂದು ಕೊಡುತ್ತೇನೆ. |
02:50 | ಯು ಹ್ಯಾವ್ ಎಂಟರ್ಡ್ ಇನ್ ದ ರೇಂಜ್ ಆಫ್ ಝೀರೋ ಟು ನೈನ್ ಎಂದು ಔಟ್ ಪುಟ್ ನೋಡಬಹುದು. |
02:56 | ಸ್ವಿಚ್ ಸ್ಟೇಟ್ಮೆಂಟ್ ಉಪಯೋಗಿಸಿ, ಕಂಡೀಶನಲ್ ಎಕ್ಸಿಕ್ಯೂಶನ್ ಅನ್ನು ಇನ್ನೊಂದು ರೀತಿಯಲ್ಲೂ ಮಾಡಬಹುದು. |
03:02 | ಇದನ್ನು ಹೇಗೆ ಮಾಡುವುದೆಂದು ನೋಡೋಣ. |
03:05 | ನಾವು ಇದೇ ಪ್ರೊಗ್ರಾಮ್ ನಲ್ಲಿ, ಸ್ವಿಚ್ ಸ್ಟೇಟ್ಮೆಂಟ್ ಉಪಯೋಗಿಸಿ ನೋಡೋಣ. |
03:08 | ನಾನೀಗಾಗಲೇ ಪ್ರೊಗ್ರಾಮ್ ಅನ್ನು ಒಪನ್ ಮಾಡಿದ್ದೇನೆ. |
03:10 | ನಮ್ಮ ಟೆಕ್ಸ್ಟ್ ಎಡಿಟರ್ ಗೆ ಹಿಂತಿರುಗೋಣ. |
03:13 | ಇದನ್ನು ನಾನು ಹಿಂದಿನ ಪ್ರೊಗ್ರಾಮ್ ನಲ್ಲಿ ವಿವರಿಸಿದ್ದೇನೆ. |
03:16 | ಹಾಗಾಗಿ, ನಾನು ಸ್ವಿಚ್ ಸ್ಟೇಟ್ಮೆಂಟ್ ಅನ್ನು ವಿವರಿಸುತ್ತೇನೆ. |
03:20 | ಇಲ್ಲಿ, ನಾವು ಇನ್ಪುಟ್ ಆದ y ಅನ್ನು ಹತ್ತರಿಂದ ಭಾಗಿಸುತ್ತೇವೆ ಮತ್ತು ಉತ್ತರವನ್ನು x ಎಂಬ ವೇರಿಯೇಬಲ್ ನಲ್ಲಿ ಇಡುತ್ತೇವೆ. |
03:28 | ಅಂದರೆ, ಭಾಗಲಬ್ಧವನ್ನು x ನಲ್ಲಿ ಇಡುತ್ತೇವೆ. |
03:32 | ಭಾಗಲಬ್ಧದಿಂದ, ಸಂಖ್ಯೆಯ ರೇಂಜ್ ಅನ್ನು ಕಂಡುಹಿಡಿಯಬಹುದು. |
03:36 | ಇಲ್ಲಿ, ವೇರಿಯೇಬಲ್ x ಅನ್ನು ಚೆಕ್ ಮಾಡಲು ಸ್ವಿಚ್ ಕಮಾಂಡ್ ಗೆ ಸೂಚಿಸಬಹುದು. |
03:41 | ಇದು ಕೇಸ್ ಝೀರೋ(case 0). case 0 ಪೂರೈಸಿದರೆ, |
03:45 | ಯು ಹ್ಯಾವ್ ಎಂಟರ್ಡ್ ದ ನಂಬರ್ ಇನ್ ದ ರೇಂಜ್ ಆಫ್ ಝೀರೋ ಟು ನೈನ್ ಎಂದು ಪ್ರಿಂಟ್ ಮಾಡುತ್ತೇವೆ. |
03:51 | case ಪೂರೈಸಿದರೆ, ಲೂಪ್ ನಿಂದ ಹೊರಬರಲು, ಬ್ರೇಕ್ ಅನ್ನು ಸೇರಿಸುತ್ತೇವೆ. |
03:55 | ಪ್ರತೀ ಬಾರಿ ಲೂಪ್ ಅನ್ನು ಬ್ರೇಕ್ ಮಾಡಬೇಕು. |
03:58 | ಏಕೆಂದರೆ, ಒಂದು ಬಾರಿಗೆ, ಒಂದೇ ಕಂಡೀಶನ್ ಮಾತ್ರ ಸರಿಯಾಗಿರಲು ಸಾಧ್ಯ. |
04:03 | ಇದು case 1. case 1 ಎಂದರೆ, x ನ ಮೌಲ್ಯ ಒಂದು ಆಗಿದ್ದರೆ, ಯು ಹ್ಯಾವ್ ಎಂಟರ್ಡ್ ದ ನಂಬರ್ ಇನ್ ದ ರೇಂಜ್ ಆಫ್ ಟೆನ್ ಟು ನೈನ್ಟೀನ್ ಎಂದು ಪ್ರಿಂಟ್ ಮಾಡುತ್ತೇವೆ. |
04:12 | ಇದು case 2. |
04:14 | ಇಲ್ಲಿ, ಯು ಹ್ಯಾವ್ ಎಂಟರ್ಡ್ ದ ನಂಬರ್ ಇನ್ ದ ರೇಂಜ್ ಆಫ್ ಟ್ವೆಂಟಿ ಟು ಟ್ವೆಂಟೀನೈನ್ ಎಂದು ಪ್ರಿಂಟ್ ಮಾಡುತ್ತೇವೆ. |
04:20 | ಮತ್ತು, ಇದು case 3. ಇಲ್ಲಿ, ಸಂಖ್ಯೆಯು ಮೂವತ್ತು ಮತ್ತು ಮೂವತ್ತೊಂಭತ್ತರ ನಡುವೆ ಇದೆಯೇ ಎಂದು ಚೆಕ್ ಮಾಡುತ್ತೇವೆ. |
04:26 | ಇದು ಡಿಫಾಲ್ಟ್ ಕೇಸ್. ಮೇಲಿನ ಯಾವುದೇ ಕಂಡೀಶನ್ ಪೂರೈಸದಿದ್ದಲ್ಲಿ ಏನು ಮಾಡಬೇಕು ಎಂದು ಡಿಫಾಲ್ಟ್ ಕೇಸ್ ಸೂಚಿಸುತ್ತದೆ. |
04:36 | ಇಲ್ಲಿ, ನಂಬರ್ ನಾಟ್ ಇನ್ ರೇಂಜ್ ಎಂದು ಪ್ರಿಂಟ್ ಮಾಡುತ್ತೇವೆ. |
04:39 | ಇದು ನಮ್ಮ ರಿಟರ್ನ್ ಸ್ಟೇಟ್ಮೆಂಟ್. |
04:41 | ಪ್ರೊಗ್ರಾಮ್ ಅನ್ನು ಎಕ್ಸಿಕ್ಯೂಟ್ ಮಾಡೋಣ. |
04:43 | ಟರ್ಮಿನಲ್ ಗೆ ಹಿಂತಿರುಗಿ. |
04:46 | gcc ಸ್ಪೇಸ್ switch ಡಾಟ್ c ಸ್ಪೇಸ್ ಹೈಫನ್ ಒ ಸ್ಪೇಸ್ switch ಎಂದು ಟೈಪ್ ಮಾಡಿ. Enter ಕೀಯನ್ನು ಒತ್ತಿ. |
04:55 | ಡಾಟ್ ಸ್ಲ್ಯಾಶ್ switch ಎಂದು ಟೈಪ್ ಮಾಡಿ. Enter ಕೀಯನ್ನು ಒತ್ತಿ. |
05:00 | ಝೀರೋ ಮತ್ತು ಮೂವತ್ತೊಂಭತ್ತರ ನಡುವಿನ ನಂಬರ್ ಅನ್ನು ಎಂಟರ್ ಮಾಡಬೇಕು. ನಾನು ಮೂವತ್ತೈದು ಎಂದು ಕೊಡುತ್ತೇನೆ. |
05:06 | ಯು ಹ್ಯಾವ್ ಎಂಟರ್ಡ್ ದ ನಂಬರ್ ಇನ್ ದ ರೇಂಜ್ ಆಫ್ ಥರ್ಟಿ ಟು ಥರ್ಟಿ ನೈನ್ ಎಂದು ಔಟ್ ಪುಟ್ ತೋರಿಸುತ್ತದೆ. |
05:10 | ಈಗ, ನಾವು, ಪ್ರೊಗ್ರಾಮ್ ಅನ್ನು c++ನಲ್ಲಿ ಹೇಗೆ ಎಕ್ಸಿಕ್ಯೂಟ್ ಮಾಡುವುದೆಂದು ನೋಡೋಣ. |
05:16 | ಟೆಕ್ಸ್ಟ್ ಎಡಿಟರ್ ಗೆ ಹಿಂತಿರುಗಿ. |
05:18 | ನಮ್ಮ ಫೈಲ್ ನ ಹೆಸರು ನೆಸ್ಟೆಡ್ ಹೈಫನ್ ಇಫ್ ಡಾಟ್ cpp ಎಂದು ಗಮನಿಸಿ. |
05:23 | ಇಲ್ಲಿ, ಲಾಜಿಕ್ ಮತ್ತು ಇಂಪ್ಲಿಮೆಂಟೇಶನ್ c ಯಲ್ಲಿ ಇರುವಂತೆಯೇ ಇರುತ್ತದೆ. |
05:27 | ಕೆಲವು ವ್ಯತ್ಯಾಸಗಳು ಇಂತಿವೆ. |
05:30 | ಹೆಡರ್ ಫೈಲ್, ಎಸ್ಟಿಡಿಐಒ ಡಾಟ್ h ನ ಬದಲು ಐಒಸ್ಟ್ರೀಮ್, |
05:35 | ಇಲ್ಲಿ ಯೂಸಿಂಗ್ ನೇಂಸ್ಪೇಸ್ ಎಸ್ಟಿಡಿ, ಎಂದು ಯೂಸಿಂಗ್ ಸ್ಟೇಟ್ಮೆಂಟ್ಅನ್ನು ಸೇರಿಸಿದ್ದೇವೆ. |
05:41 | ಮತ್ತು ಪ್ರಿನ್ಟ್ ಎಫ್ ಮತ್ತು ಸ್ಕ್ಯಾನ್ ಎಫ್ ನ ಬದಲು ಸಿಔಟ್ ಮತ್ತು ಸಿಇನ್ ಅನ್ನು ಉಪಯೋಗಿಸಿದ್ದೇವೆ. |
05:46 | ಉಳಿದ ಕೋಡ್ c ಪ್ರೊಗ್ರಾಮ್ ನಂತೆಯೇ ಇರುವುದನ್ನು ನೋಡಬಹುದು. |
05:51 | ಕೋಡ್ ಅನ್ನು ಎಕ್ಸಿಕ್ಯೂಟ್ ಮಾಡೋಣ. |
05:53 | ಟೆರ್ಮಿನಲ್ ಗೆ ಹಿಂತಿರುಗಿ. |
05:56 | g++ ಸ್ಪೇಸ್ ನೆಸ್ಟೆಡ್ ಹೈಫನ್ ಇಫ್ ಡಾಟ್ cppಸ್ಪೇಸ್ ಹೈಫನ್ ಒ ಸ್ಪೇಸ್ ನೆಸ್ಟೆಡ್ ಒನ್ ಎಂದು ಟೈಪ್ ಮಾಡಿ. Enter ಕೀ ಯನ್ನು ಒತ್ತಿ. |
06:07 | ಡಾಟ್ ಸ್ಲ್ಯಾಶ್ ನೆಸ್ಟೆಡ್ ಒನ್ ಎಂದು ಟೈಪ್ ಮಾಡಿ ಎಂಟರ್ ಒತ್ತಿ. |
06:11 | ಎಂಟರ್ ಎ ನಂಬರ್ ಬಿಟ್ವೀನ್ ಝೀರೋ ಎಂಡ್ ಥರ್ಟಿ ನೈನ್. ನಾನು ನಲ್ವತ್ತು ಎಂದು ಕೊಡುತ್ತೇನೆ. |
06:16 | ನಂಬರ್ ನಾಟ್ ಇನ್ ರೇಂಜ್ ಎಂದು ಔಟ್ ಪುಟ್ ತೋರಿಸುತ್ತದೆ. |
06:20 | ಈಗ, ಸ್ವಿಚ್ ಪ್ರೊಗ್ರಾಮ್ ಅನ್ನು c++ನಲ್ಲಿ ನೋಡೋಣ. |
06:24 | ಎಡಿಟರ್ ಗೆ ಹಿಂತಿರುಗಿ. |
06:27 | ಇಲ್ಲಿಯೂ ಲಾಜಿಕ್ ಮತ್ತು ಇಂಪ್ಲಿಮೆಂಟೇಶನ್ c ಪ್ರೊಗ್ರಾಮ್ ನಂತೆಯೇ ಇರುತ್ತದೆ. |
06:31 | ಹೆಡರ್ ಫೈಲ್ ಐಒಸ್ಟ್ರೀಮ್ ಎಂದಿರುವುದನ್ನು ನೋಡಿ. |
06:34 | ಇದು ಯೂಸಿಂಗ್ ಸ್ಟೇಟ್ಮೆಂಟ್, |
06:37 | ಮತ್ತು ಸಿಔಟ್ ಮತ್ತು ಸಿಇನ್ ಫಂಕ್ಷನ್ ಗಳನ್ನು ಬದಲಾಯಿಸಿದ್ದೇವೆ. |
06:41 | ಉಳಿದ ಕೋಡ್ ನಮ್ಮ ಸ್ವಿಚ್ ಡಾಟ್ c ಪ್ರೊಗ್ರಾಮ್ ನಂತೆಯೇ ಇದೆ. |
06:45 | ಎಕ್ಸಿಕ್ಯೂಟ್ ಮಾಡೋಣ.ಟರ್ಮಿನಲ್ ಗೆ ಹಿಂತಿರುಗಿ. |
06:48 | g++ ಸ್ಪೇಸ್ switch ಡಾಟ್ cpp ಸ್ಪೇಸ್ ಹೈಫನ್ ಒಸ್ಪೇಸ್ switch1 ಎಂದು ಟೈಪ್ ಮಾಡಿ. Enter ಕೀಯನ್ನು ಒತ್ತಿ. |
06:58 | ಡಾಟ್ ಸ್ಲ್ಯಾಶ್ ಸ್ವಿಚ್ ಒನ್ ಎಂದು ಟೈಪ್ ಮಾಡಿ. Enter ಕೀಯನ್ನು ಒತ್ತಿ. |
07:02 | ಎಂಟರ್ ಎ ನಂಬರ್ ಬಿಟ್ವೀನ್ ಝೀರೋ ಎಂಡ್ ಥರ್ಟಿ ನೈನ್. |
07:05 | ನಾನು ಇಪ್ಪತ್ತೈದು ಎಂದು ಕೊಡುತ್ತೇನೆ. |
07:09 | ಯು ಹ್ಯಾವ್ ಎಂಟರ್ಡ್ ದ ನಂಬರ್ ಇನ್ ದ ರೇಂಜ್ ಆಫ್ ಟ್ವೆಂಟಿ ಟು ಟ್ವೆಂಟಿನೈನ್ ಎಂದು ಔಟ್ ಪುಟ್ ತೋರಿಸುತ್ತದೆ. |
07:15 | ಈಗ ನಮ್ಮ ಸ್ಲೈಡ್ ಗೆ ಹಿಂದಿರುಗೋಣ. |
07:18 | ಸ್ವಿಚ್ ಮತ್ತು ನೆಸ್ಟೆಡ್ ಇಫ್ ಸ್ಟೇಟ್ಮೆಂಟ್ ಗಳನ್ನು ಹೋಲಿಸೋಣ. |
07:23 | ಎಕ್ಸ್ಪ್ರೆಶನ್ ನ ಉತ್ತರದ ಮೇರೆಗೆ, ಸ್ವಿಚ್ ಸ್ಟೇಟ್ಮೆಂಟ್ ರನ್ ಆಗುತ್ತದೆ. |
07:28 | ಎಕ್ಸ್ಪ್ರೆಶನ್ ಸರಿಯಿದ್ದಲ್ಲಿ ಮಾತ್ರ ನೆಸ್ಟೆಡ್ ಇಫ್ ಸ್ಟೇಟ್ಮೆಂಟ್ ರನ್ ಆಗುತ್ತದೆ. |
07:34 | ಸ್ವಿಚ್ ನಲ್ಲಿ, ವೇರಿಯೇಬಲ್ ನ ವಿವಿಧ ಮೌಲ್ಯಗಳನ್ನು ಕೇಸ್ ಎಂದು ಪರಿಗಣಿಸುತ್ತೇವೆ. |
07:39 | ನೆಸ್ಟೆಡ್ ಇಫ್ ನಲ್ಲಿ, ವೇರಿಯೇಬಲ್ ನ ಪ್ರತಿಯೊಂದು ಮೌಲ್ಯಕ್ಕೂ ಒಂದು ಕಂಡೀಶನಲ್ ಸ್ಟೇಟ್ಮೆಂಟ್ ಬರೆಯಬೇಕು. |
07:45 | ಸ್ವಿಚ್ ಸ್ಟೇಟ್ಮೆಂಟ್, ಇಂಟಿಜರ್ ಮೌಲ್ಯಗಳನ್ನು ಮಾತ್ರ ಚೆಕ್ ಮಾಡುತ್ತದೆ. |
07:50 | ಇಂಟಿಜರ್ ಮತ್ತು ಫಂಕ್ಷನಲ್ ಮೌಲ್ಯಗಳೆರಡನ್ನೂ ನೆಸ್ಟೆಡ್ ಇಫ್ ಚೆಕ್ ಮಾಡುತ್ತದೆ. |
07:55 | ಇಲ್ಲಿಗೆ ನಮ್ಮ ಟ್ಯುಟೋರಿಯಲ್ ಅಂತ್ಯಗೊಳ್ಳುತ್ತದೆ. |
07:58 | ಸಾರಾಂಶ ತಿಳಿಯೋಣ. |
08:00 | ಈ ಟ್ಯುಟೋರಿಯಲ್ ನಲ್ಲಿ ನಾವು ತಿಳಿದ ಅಂಶಗಳು: ನೆಸ್ಟೆಡ್ ಇಫ್ ಸ್ಟೇಟ್ಮೆಂಟ್. ಉದಾಹರಣೆಗೆ : ಎಲ್ಸ್ ಇಫ್ ವೈ ಡಿವೈಡೆಡ್ ಬೈ ಟೆನ್ ಈಕ್ವಲ್ಸ್ ಟು ಝೀರೋ, |
08:08 | ಸ್ವಿಚ್ ಸ್ಟೇಟ್ಮೆಂಟ್. ಉದಾಹರಣೆಗೆ : ಸ್ವಿಚ್ x, |
08:12 | ಮತ್ತು ನೆಸ್ಟೆಡ್ ಇಫ್ ಮತ್ತು ಸ್ವಿಚ್ ಸ್ಟೇಟ್ಮೆಂಟ್ ಗಳ ವ್ಯತ್ಯಾಸ. |
08:16 | ನೌಕರರ ವಯಸ್ಸು ಇಪ್ಪತ್ತರಿಂದ ಅರವತ್ತರ ನಡುವೆ ಇದೆಯೇ ಎಂದು ಪರೀಕ್ಷಿಸಲು ಒಂದು ಪ್ರೊಗ್ರಾಮ್ ಅನ್ನು ಅಸೈನ್ಮೆಂಟ್ ಆಗಿ ಬರೆಯಿರಿ. |
08:23 | ಕೆಳಗಿನ ಲಿಂಕ್ ನಲ್ಲಿರುವ ವೀಡಿಯೋವನ್ನು ನೋಡಿರಿ. |
08:26 | ಇದು ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ಅನ್ನು ವಿವರಿಸುತ್ತದೆ. |
08:29 | ಒಳ್ಳೆಯ ಬ್ಯಾಂಡ್ ವಿಡ್ತ್ ಇಲ್ಲದಿದ್ದಲ್ಲಿ ನೀವು ಇದನ್ನು ಡೌನ್ ಲೋಡ್ ಮಾಡಿ ನೋಡಬಹುದು. |
08:33 | ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ಟೀಮ್,ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಉಪಯೋಗಿಸಿ ಕಾರ್ಯಗಾರವನ್ನು ನಡೆಸುತ್ತದೆ. |
08:38 | ಆನ್ ಲೈನ್ ಪರೀಕ್ಷೆಯಲ್ಲಿ ತೇರ್ಗಡೆಹೊಂದಿದವರಿಗೆ ಸರ್ಟಿಫಿಕೇಟ್ ಕೊಡುತ್ತದೆ. |
08:42 | ಹೆಚ್ಚಿನ ಮಾಹಿತಿಗಾಗಿ, contact@spoken-tutorial.org ಗೆ ಬರೆಯಿರಿ. |
08:49 | ಸ್ಪೋಕನ್ ಟ್ಯುಟೋರಿಯಲ್, ಟಾಕ್ ಟು ಎಟೀಚರ್ ಪ್ರೊಜಕ್ಟ್ ನ ಒಂದು ಭಾಗವಾಗಿದೆ. |
08:52 | ಇದು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯಿಂದ ಬೆಂಬಲಿತವಾಗಿದೆ. |
08:58 | ಈ ನಿಯೋಗದ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯು ಕೆಳಗಿನ ಲಿಂಕ್ ನಲ್ಲಿ ದೊರೆಯುತ್ತದೆ. |
09:04 | ಈ ಟ್ಯುಟೋರಿಯಲ್ ನ ಅನುವಾದಕಿ ಬೆಂಗಳೂರಿನಿಂದ ಚೇತನಾ ಮತ್ತು ಪ್ರವಾಚಕ ಐ ಐ ಟಿ ಬಾಂಬೆಯಿಂದ ವಾಸುದೇವ. ಧನ್ಯವಾದಗಳು. |