Blender/C2/The-Blender-Interface/Kannada
From Script | Spoken-Tutorial
Time | Narration |
00:03 | ಬ್ಲೆಂಡರ್ ಟ್ಯುಟೋರಿಯಲ್ ಸರಣಿಗೆ ಸ್ವಾಗತ. |
00:07 | ಈ ಟ್ಯುಟೋರಿಯಲ್ ಬ್ಲೆಂಡರ್ 2.59 ನಲ್ಲಿಯ ಬ್ಲೆಂಡರ್ ಇಂಟರ್ಫೇಸ್ ನ ಮೂಲಭೂತ ವಿವರಣೆಯ ಕುರಿತು ಇದೆ. |
00:15 | ಈ ಸ್ಕ್ರಿಪ್ಟ್ ನ ಅನುವಾದಕಿ ಐ ಐ ಟಿ ಬಾಂಬೆಯಿಂದ ಸಂಧ್ಯಾ ಪುಣೇಕರ್. |
00:22 | ಈ ಟ್ಯುಟೋರಿಯಲ್ ನೋಡಿದ ನಂತರ ನಾವು ಬ್ಲೆಂಡರ್ ಇಂಟರ್ಫೇಸ್ ನ ವಿವಿಧ ವಿಂಡೋಗಳು, |
00:29 | ಪ್ರತಿಯೊಂದು ವಿಂಡೋಗಾಗಿ ನಿಗದಿ ಮಾಡಿದ ಪ್ಯಾರಾಮೀಟರ್ ಗಳು ಮತ್ತು ಟ್ಯಾಬ್ ಗಳು, 3D ವ್ಯೂ ನಲ್ಲಿ ಒಂದು ಒಬ್ಜೆಕ್ಟ್ ಅನ್ನು ಹೇಗೆ ಆಯ್ಕೆಮಾಡುವುದು, |
00:37 | ಮತ್ತು ಒಬ್ಜೆಕ್ಟ್ ಅನ್ನು X,Y & Z ದಿಕ್ಕುಗಳಲ್ಲಿ ಹೇಗೆ ಚಲಿಸುವದು ಎಂಬೀ ಮುಂತಾದವುಗಳ ಬಗ್ಗೆ ತಿಳಿಯುವೆವು. |
00:44 | ಬ್ಲೆಂಡರ್ ಅನ್ನು ಪ್ರಾರಂಭಿಸುವ ಬಗೆಯನ್ನು ನೀವು ತಿಳಿದಿದ್ದೀರಿ ಎಂದು ನಾನು ಭಾವಿಸುತ್ತೇನೆ. |
00:48 | ಇಲ್ಲದಿದ್ದಲ್ಲಿ ದಯವಿಟ್ಟು ಬ್ಲೆಂಡರ್ ಅನ್ನು ಪಡೆಯುವದರ ಬಗ್ಗೆ ಇರುವ ನಮ್ಮ ಹಿಂದಿನ ಟ್ಯುಟೋರಿಯಲ್ಸ್ ನೋಡಿರಿ. |
00:56 | ಇದು 3D ಪ್ಯಾನೆಲ್ ಆಗಿದೆ. |
00:58 | 3D ವ್ಯೂ ನಲ್ಲಿ ಡಿಫಾಲ್ಟ್ ಆಗಿ ಮೂರು ಒಬ್ಜೆಕ್ಟ್ ಗಳು ಇವೆ. |
01:03 | ಒಂದು ಕ್ಯೂಬ್, ಒಂದು ಲ್ಯಾಂಪ್ ಮತ್ತು ಒಂದು ಕ್ಯಾಮೆರಾ |
01:10 | ಕ್ಯೂಬ್ ಈಗಾಗಲೇ ಡಿಫಾಲ್ಟ್ ನಿಂದ ಆಯ್ಕೆಯಾಗಿದೆ. |
01:15 | ಲ್ಯಾಂಪ್ ಆಯ್ಕೆಮಾಡಲು ರೈಟ್ ಕ್ಲಿಕ್ ಮಾಡಿ. |
01:19 | ಕ್ಯಾಮೆರಾ ಆಯ್ಕೆಮಾಡಲು ರೈಟ್ ಕ್ಲಿಕ್ ಮಾಡಿ. |
01:23 | ಹೀಗೆ 3D ವ್ಯೂ ನಲ್ಲಿ ಯಾವುದೇ ಒಬ್ಜೆಕ್ಟ್ ಅನ್ನು ಆಯ್ಕೆಮಾಡಲು ಆ ಒಬ್ಜೆಕ್ಟ್ ನ ಮೇಲೆ ರೈಟ್ ಕ್ಲಿಕ್ ಮಾಡಬೇಕು. |
01:31 | ಕ್ಯೂಬ್ ಅನ್ನು ಆಯ್ಕೆಮಾಡಲು ರೈಟ್ ಕ್ಲಿಕ್ ಮಾಡಿ. |
01:35 | ಕ್ಯೂಬ್ ನ ಮಧ್ಯದಲ್ಲಿ ವಿಲೀನವಾಗುವ ಈ ಮೂರು ಬಣ್ಣದ ಬಾಣಗಳು 3D ಟ್ರಾನ್ಸ್ಫಾರ್ಮ್ ಮ್ಯಾನಿಪ್ಯುಲೇಟರ್ ಅನ್ನು ಪ್ರತಿನಿಧಿಸುತ್ತವೆ. |
01:44 | ಈ ಮ್ಯಾನಿಪ್ಯುಲೇಟರ್ ವಸ್ತುವನ್ನು ನಿರ್ದಿಷ್ಟ ಆಕ್ಸಿಸ್ನಲ್ಲಿ ಚಲಿಸಲು ಸಹಾಯ ಮಾಡುತ್ತದೆ. |
01:51 | ಕೆಂಪು ಬಣ್ಣವು X ಆಕ್ಸಿಸ್ ಅನ್ನು ಪ್ರತಿನಿಧಿಸುತ್ತದೆ. |
01:55 | ಹಸಿರು Y ಆಕ್ಸಿಸ್ ಅನ್ನು ಪ್ರತಿನಿಧಿಸುತ್ತದೆ. |
01:59 | ಮತ್ತು ನೀಲಿ Z ಆಕ್ಸಿಸ್ ಅನ್ನು ಪ್ರತಿನಿಧಿಸುತ್ತದೆ. |
02:05 | ಲೆಫ್ಟ್ ಕ್ಲಿಕ್ ಮಾಡಿ ಮತ್ತು ಹಸಿರು ಹ್ಯಾಂಡಲ್ ಹಿಡಿಯಿರಿ ಮತ್ತು ನಿಮ್ಮ ಮೌಸ್ ಅನ್ನು ಎಡದಿಂದ ಬಲಕ್ಕೆ ಒಯ್ಯಿರಿ. |
02:15 | ಕೀಬೋರ್ಡ್ ಶಾರ್ಟಕಟ್ ಗಾಗಿ G&Y ಒತ್ತಿ. |
02:22 | ಈ ಒಬ್ಜೆಕ್ಟ್ Y ಆಕ್ಸಿಸ್ ನ ದಿಕ್ಕಿನಲ್ಲಿ ಮಾತ್ರ ಚಲಿಸುವದನ್ನು ನಾವು ನೋಡುತ್ತೇವೆ. |
02:32 | ಹಾಗೆಯೇ, ನೀಲಿ ಹ್ಯಾಂಡಲ್ ಬಳಸಿ ಒಬ್ಜೆಕ್ಟ್ ಅನ್ನು Z ಆಕ್ಸಿಸ್ ನ ಉದ್ದಕ್ಕೂ ಚಲಿಸಿ. |
02:45 | ಕೀಬೋರ್ಡ್ ಶಾರ್ಟಕಟ್ ಗಾಗಿ G&Z ಒತ್ತಿ. |
02:56 | ಈಗ ಒಬ್ಜೆಕ್ಟ್ ಅನ್ನು X ಆಕ್ಸಿಸ್ ನ ಉದ್ದಕ್ಕೂ ಚಲಿಸಲು ಪ್ರಯತ್ನಿಸಿ. |
03:08 | ಕೀಬೋರ್ಡ್ ಶಾರ್ಟಕಟ್ ಗಾಗಿ G&X ಒತ್ತಿ. |
03:23 | ಕೆಂಪು ಬಾಕ್ಸ್ ನಿಂದ ಆವರಿಸಲ್ಪಟ್ಟ ವಿಸ್ತೀರ್ಣವು 3D ವ್ಯೂ ಇದೆ. |
03:32 | 3D ವ್ಯೂ ನ ಕೆಳಗಿನ ಎಡ ಮೂಲೆಗೆ ಹೋಗಿ. |
03:36 | View ನ ಮೇಲೆ ಲೆಫ್ಟ್ ಕ್ಲಿಕ್ ಮಾಡಿ. 3D ವ್ಯೂ ಗಾಗಿ ಹಲವಾರು ವ್ಯೂ ಆಪ್ಶನ್ ಗಳಿರುವ ಒಂದು ಲಿಸ್ಟ್ ಇಲ್ಲಿ ಇದೆ. |
03:46 | Top ಮೇಲೆ ಲೆಫ್ಟ್ ಕ್ಲಿಕ್ ಮಾಡಿ. ಕೀಬೋರ್ಡ್ ಶಾರ್ಟಕಟ್ ಗಾಗಿ ನಂಪ್ಯಾಡ್ 7 ಒತ್ತಿರಿ. |
03:52 | 3D ವ್ಯೂ ಯುಸರ್ ಪರ್ಸ್ಪೆಕ್ಟಿವ್ ನಿಂದ ಟಾಪ್ ವ್ಯೂ ಗೆ ಬದಲಾಯಿಸುತ್ತದೆ. |
03:57 | ನಾವು ಟಾಪ್ ವ್ಯೂ ನಿಂದ ನಮ್ಮ ಒಬ್ಜೆಕ್ಟ್ ಅನ್ನು ನೋಡಬಹುದು. |
04:03 | Select ಮೇಲೆ ಲೆಫ್ಟ್ ಕ್ಲಿಕ್ ಮಾಡಿ. 3D ವ್ಯೂ ನಲ್ಲಿಯ ಎಲ್ಲ ಒಬ್ಜೆಕ್ಟ್ ಗಳಿಗಾಗಿ ಆಯ್ದುಕೊಳ್ಳಲು ವಿವಿಧ ಆಯ್ಕೆಗಳಿರುವ ಒಂದು ಲಿಸ್ಟ್ ಇಲ್ಲಿ ಇದೆ. |
04:18 | Object ಮೇಲೆ ಲೆಫ್ಟ್ ಕ್ಲಿಕ್ ಮಾಡಿ. ಆಕ್ಟಿವ್ ಒಬ್ಜೆಕ್ಟ್ ಅನ್ನು ಎಡಿಟ್ ಮಾಡಲು ವಿವಿಧ ಆಯ್ಕೆಗಳಿರುವ ಒಂದು ಲಿಸ್ಟ್ ಇಲ್ಲಿ ಇದೆ. |
04:35 | 3D ವ್ಯೂ ನ ಎಡಗಡೆಗೆ ಒಬ್ಜೆಕ್ಟ್ ಟೂಲ್ಸ್ ಪ್ಯಾನೆಲ್ ಇದೆ. |
04:41 | 3D ವ್ಯೂ ನಲ್ಲಿಯ ಆಕ್ಟಿವ್ ಒಬ್ಜೆಕ್ಟ್ ನ್ನು ಮಾರ್ಪಡಿಸಲು ಉಪಯೋಗಿಸುವ ವಿವಿಧ ಟೂಲ್ಸ್ ಗಳನ್ನು ಈ ಪ್ಯಾನೆಲ್ ನಲ್ಲಿ ಲಿಸ್ಟ್ ಮಾಡಿದೆ. |
04:49 | ಟೂಲ್ಸ್ ಭಿನ್ನವಾದ ವಿಭಾಗಗಳಲ್ಲಿ ಗುಂಪುಮಾಡಲ್ಪಟ್ಟಿವೆ. |
04:52 | ಟ್ರಾನ್ಸ್ಫಾರ್ಮ್, ಒಬ್ಜೆಕ್ಟ್, ಶೇಡಿಂಗ್, ಕೀಫ್ರೇಮ್ಸ್, ಮೋಶನ್ ಪಾಥ್ಸ್, ರಿಪೀಟ್, ಗ್ರೀಸ್ ಪೆನ್ಸಿಲ್. |
05:13 | ಉದಾಹರಣೆಗೆ, 3D ವ್ಯೂ ನಲ್ಲಿ ನಾವು ಲ್ಯಾಂಪ್ ನ್ನು ಸ್ಥಾನಾಂತರಿಸೋಣ. |
05:19 | ಲ್ಯಾಂಪ್ ಆಯ್ಕೆಮಾಡಲು ರೈಟ್ ಕ್ಲಿಕ್ ಮಾಡಿ. |
05:23 | ಒಬ್ಜೆಕ್ಟ್ ಟೂಲ್ಸ್ ಪ್ಯಾನೆಲ್ ಗೆ ಹೋಗಿ. |
05:28 | ಒಬ್ಜೆಕ್ಟ್ ಟೂಲ್ಸ್ ಪ್ಯಾನೆಲ್ ನಲ್ಲಿ ಲ್ಯಾಂಪ್ ಗಾಗಿ ಆಯ್ಕೆಗಳನ್ನು ನೀವು ಕಾಣಬಹುದು. |
05:35 | Translate ಮೇಲೆ ಲೆಫ್ಟ್ ಕ್ಲಿಕ್ ಮಾಡಿ ಮತ್ತು ನಿಮ್ಮ ಮೌಸ್ ಅನ್ನು ಅತ್ತಿತ್ತ ಒಯ್ಯಿರಿ. |
05:41 | ಮೌಸ್ನ ಚಲನೆಯ ದಿಕ್ಕಿನಲ್ಲಿ ಲ್ಯಾಂಪ್ ಚಲಿಸುತ್ತದೆ. |
05:46 | ಟ್ರಾನ್ಸ್ಲೇಟ್ ಅನ್ನು ರದ್ದುಮಾಡಲು ಸ್ಕ್ರೀನ್ ಮೇಲೆ ರೈಟ್ ಕ್ಲಿಕ್ ಮಾಡಿ ಅಥವಾ ನಿಮ್ಮ ಕೀಬೋರ್ಡ್ ಮೇಲಿನ Esc ಒತ್ತಿ. |
05:57 | 3D ವ್ಯೂ ನ ಬಲಬದಿಗೆ ಡಿಫಾಲ್ಟ್ ನಿಂದ ಅಡಗಿಕೊಂಡಿರುವ ಇನ್ನೊಂದು ಪ್ಯಾನೆಲ್ ಇದೆ. |
06:04 | ಈ ಅಡಗಿಕೊಂಡಿರುವ ಪ್ಯಾನೆಲ್ ಅನ್ನು ಓಪನ್ ಮಾಡಲು 3D ವ್ಯೂ ನ ಮೇಲ್ಗಡೆಯ ಬಲ ಮೂಲೆಯಲ್ಲಿರುವ ಪ್ಲಸ್ ಸೈನ್ ಮೇಲೆ ಲೆಫ್ಟ್ ಕ್ಲಿಕ್ ಮಾಡಿ. |
06:12 | ಕೀಬೋರ್ಡ್ ಶಾರ್ಟಕಟ್ ಗಾಗಿ N ಒತ್ತಿರಿ. |
06:17 | ಈ ಹೆಚ್ಚಿನ ಒಬ್ಜೆಕ್ಟ್ ಟ್ರಾನ್ಸ್ಫಾರ್ಮ್ ಪ್ಯಾನೆಲ್, ಪ್ರೊಪರ್ಟೀಸ್ ವಿಂಡೋದಲ್ಲಿಯ ಒಬ್ಜೆಕ್ಟ್ ಪ್ಯಾನೆಲ್ನ ಹಾಗೆಯೇ ಇದೆ. |
06:25 | ಒಬ್ಜೆಕ್ಟ್ ಪ್ಯಾನೆಲ್ಅನ್ನು ಮುಂದಿನ ಟ್ಯುಟೋರಿಯಲ್ಸ್ ಗಳಲ್ಲಿ ನಾವು ವಿವರವಾಗಿ ನೋಡುವೆವು. |
06:30 | ಸದ್ಯಕ್ಕೆ ನಾವು ಈ ಹೆಚ್ಚಿನ ಪ್ಯಾನೆಲ್ಅನ್ನು ಬಚ್ಚಿಡೋಣ ಹಾಗೂ ಡಿಫಾಲ್ಟ್ 3D ವ್ಯೂ ಗೆ ಹೋಗೋಣ. |
06:37 | ನಿಮ್ಮ ಮೌಸ್ ಕರ್ಸರ್ ಅನ್ನು ಹೆಚ್ಚಿನ ಒಬ್ಜೆಕ್ಟ್ ಟ್ರಾನ್ಸ್ಫಾರ್ಮ್ ಪ್ಯಾನೆಲ್ನ ಎಡ ಅಂಚಿಗೆ ಸರಿಸಿ. |
06:44 | ಎರಡು ತಲೆ ಇರುವ ಒಂದು ಬಾಣ ಕಾಣಿಸಿಕೊಳ್ಳುವದು. |
06:48 | ಲೆಫ್ಟ್ ಕ್ಲಿಕ್ ಮಾಡಿ ಮತ್ತು ನಿಮ್ಮ ಮೌಸ್ಅನ್ನು ಬಲಬದಿಗೆ ಎಳೆಯಿರಿ. |
06:52 | ಈ ಹೆಚ್ಚಿನ ಒಬ್ಜೆಕ್ಟ್ ಟ್ರಾನ್ಸ್ಫಾರ್ಮ್ ಪ್ಯಾನೆಲ್ ಮತ್ತೆ ಬಚ್ಚಿಟ್ಟುಕೊಂಡಿತು. |
06:59 | ಈ ಪ್ಯಾನೆಲ್ ಅನ್ನು ಬಚ್ಚಿಡಲು ಅಥವಾ ತೆಗೆಯಲು ನೀವು ಕೀಬೋರ್ಡ್ ಶಾರ್ಟಕಟ್ N ಸಹ ಬಳಸಬಹುದು. |
07:07 | 3D ವ್ಯೂನ ಬಗ್ಗೆ ಹೆಚ್ಚು ತಿಳಿಯಲು Types of Windows - 3D view (ಟೈಪ್ಸ್ ಆಫ್ ವಿಂಡೋಸ್-3D ವ್ಯೂ) ಎನ್ನುವ ಟ್ಯುಟೋರಿಯಲ್ ನೋಡಿ. |
07:18 | ಕೆಂಪು ಬಾಕ್ಸ್ ನಿಂದ ಆವರಿಸಲ್ಪಟ್ಟ ಕ್ಷೇತ್ರವು ಇನ್ಫೋ ಪ್ಯಾನೆಲ್ ಆಗಿದೆ. |
07:23 | ಇದು ನಮ್ಮ ಬ್ಲೆಂಡರ್ ಇಂಟರ್ಫೇಸ್ನ ಎಲ್ಲಕ್ಕಿಂತ ಮೇಲೆ ಇರುವ ಪ್ಯಾನೆಲ್. ಇನ್ಫೋ ಪ್ಯಾನೆಲ್ ಮೇನ್ ಮೆನ್ಯುವನ್ನು ಒಳಗೊಂಡಿದೆ. |
07:33 | File ಮೇಲೆ ಲೆಫ್ಟ್ ಕ್ಲಿಕ್ ಮಾಡಿ. |
07:36 | ಈ ಮೆನ್ಯು ಕ್ರಿಯೇಟಿಂಗ್ ಎ ನ್ಯೂ ಫೈಲ್, ಒಪನಿಂಗ್ an ಎಕ್ಸಿಸ್ಟಿಂಗ್ ಫೈಲ್, ಸೇವಿಂಗ್ ದ ಫೈಲ್, ಯೂಸರ್ ಪ್ರೆಫರೆನ್ಸಸ್, ಇಂಪೋರ್ಟಿಂಗ್ ಆರ್ ಎಕ್ಸ್ಪೋರ್ಟಿಂಗ್ ಅ ಫೈಲ್ ಮುಂತಾದ ಫೈಲ್ ಆಪ್ಶನ್ಸ್ ಒಳಗೊಂಡಿದೆ. |
07:57 | Add ಮೇಲೆ ಲೆಫ್ಟ್ ಕ್ಲಿಕ್ ಮಾಡಿ. |
08:00 | ಒಬ್ಜೆಕ್ಟ್ ರಿಪೊಜಿಟರಿ ಇಲ್ಲಿದೆ. |
08:04 | ಈ ಮೆನ್ಯು ಉಪಯೋಗಿಸಿ ನಾವು ಹೊಸ ಒಬ್ಜೆಕ್ಟ್ ಗಳನ್ನು 3D ವ್ಯೂ ಗೆ ಸೇರಿಸಬಹುದು. |
08:10 | ಕೀಬೋರ್ಡ್ ಶಾರ್ಟಕಟ್ ಗಾಗಿ Shift & A ಒತ್ತಿ. |
08:18 | ಈಗ 3D ವ್ಯೂಗೆ ಒಂದು ಪ್ಲೇನ್ add ಮಾಡೋಣ. |
08:23 | 3D ಕರ್ಸರ್ ಅನ್ನು ಚಲಿಸಲು ಸ್ಕ್ರೀನ್ ಮೇಲೆ ಎಲ್ಲಿಯಾದರೂ ಲೆಫ್ಟ್ ಕ್ಲಿಕ್ ಮಾಡಿ |
08:29 | ನಾನು ಈ ಸ್ಥಳವನ್ನು ಆರಿಸಿಕೊಳ್ಳುತ್ತಿದ್ದೇನೆ. |
08:34 | ADD ಮೆನ್ಯು ಮೇಲೆ ತರಲು Shift & A ಒತ್ತಿ. |
08:39 | Mesh. Plane ಮೇಲೆ ಲೆಫ್ಟ್ ಕ್ಲಿಕ್ ಮಾಡಿ. |
08:44 | 3D ಕರ್ಸರ್ ಇರುವಲ್ಲಿ ಒಂದು ಹೊಸ ಪ್ಲೇನ್ 3D ವ್ಯೂಗೆ ಸೇರಿಸಲ್ಪಟ್ಟಿತು. |
08:51 | 3D ಕರ್ಸರ್ ಬಗ್ಗೆ ತಿಳಿಯಲು ದಯವಿಟ್ಟು Navigation – 3D cursor (ನೇವಿಗೇಶನ್ - 3D ಕರ್ಸರ್) ಎನ್ನುವ ಟ್ಯುಟೋರಿಯಲ್ ನೋಡಿ. |
09:00 | ಹೀಗೆಯೇ ನೀವು ಇನ್ನೂ ಹೆಚ್ಚು ಹೊಸ ಒಬ್ಜೆಕ್ಟ್ ಗಳನ್ನು 3D ವ್ಯೂ ಗೆ ಸೇರಿಸಲು ಪ್ರಯತ್ನಿಸಬಹುದು. |
09:13 | ಈಗ ನಾವು ಇನ್ಫೋ ಪ್ಯಾನೆಲ್ ಗೆ ಮರಳಿ ಹೋಗೋಣ. |
09:16 | ರೆಂಡರ್ ಮೆನ್ಯು ಓಪನ್ ಮಾಡಲು Render ಮೇಲೆ ಲೆಫ್ಟ್ ಕ್ಲಿಕ್ ಮಾಡಿ |
09:21 | Render ನಲ್ಲಿ ರೆಂಡರ್ ಇಮೇಜ್, ರೆಂಡರ್ ಅನಿಮೇಶನ್, ಶೋ ಆರ್ ಹೈಡ್ ರೆಂಡರ್ ವ್ಯೂ ಮುಂತಾದ ರೆಂಡರ್ ಆಪ್ಶನ್ ಗಳಿವೆ. |
09:34 | ಮುಂದಿನ ಟ್ಯುಟೋರಿಯಲ್ ಗಳು ರೆಂಡರ್ ಸೆಟ್ಟಿಂಗ್ಸ್ ಅನ್ನು ವಿವರವಾಗಿ ಒಳಗೊಂಡಿವೆ. |
09:40 | ಈ ಇನ್ಫೋ ಪ್ಯಾನೆಲ್ ಬಗ್ಗೆ ಇನ್ನೂ ಹೆಚ್ಚು ತಿಳಿಯಲು Type of Windows - File Browser and Info Panel (ಟೈಪ್ ಆಫ್ ವಿಂಡೋಸ್ – ಫೈಲ್ ಬ್ರೌಸರ್ ಆಂಡ್ ಇನ್ಫೋ ಪ್ಯಾನೆಲ್) ಎನ್ನುವ ಟ್ಯುಟೋರಿಯಲ್ ನೋಡಿರಿ. |
09:55 | ಕೆಂಪು ಬಾಕ್ಸ್ನ ಒಳಗಿನ ಕ್ಷೇತ್ರವು ಔಟ್ಲೈನರ್ ಪ್ಯಾನೆಲ್ ಆಗಿದೆ. |
10:00 | ಇದು ಬ್ಲೆಂಡರ್ ಇಂಟರ್ಫೇಸ್ ನ ಮೇಲ್ಗಡೆಯ ಬಲ ಮೂಲೆಯಲ್ಲಿ ಇರುತ್ತದೆ. |
10:07 | 3D ವ್ಯೂನಲ್ಲಿ ಇರುವ ಎಲ್ಲ ಒಬ್ಜೆಕ್ಟ್ಗಳ ಲಿಸ್ಟ್ ನ್ನು ಔಟ್ಲೈನರ್ ನೀಡುತ್ತದೆ. |
10:14 | ಔಟ್ಲೈನರ್ ಬಗ್ಗೆ ಇನ್ನೂ ಹೆಚ್ಚು ತಿಳಿಯಲು Types of Windows – Outliner (ಟೈಪ್ಸ್ ಆಫ್ ವಿಂಡೋಸ್ - ಔಟ್ಲೈನರ್) ಎನ್ನುವ ಟ್ಯುಟೋರಿಯಲ್ ನೋಡಿರಿ. |
10:26 | ಕೆಂಪು ಬಾಕ್ಸ್ನ ಒಳಗಿನ ಕ್ಷೇತ್ರವು ಪ್ರಾಪರ್ಟೀಸ್ ವಿಂಡೋ ಆಗಿದೆ. |
10:31 | ಈ ವಿಂಡೋ ದೊಡ್ಡ ಸಂಖ್ಯೆಯ ಟೂಲ್ಸ್ ಮತ್ತು ಸೆಟಿಂಗ್ಸ್ ಹೊಂದಿರುವ ಪ್ಯಾನೆಲ್ಗಳ ಒಂದು ಶ್ರೇಣಿಯನ್ನೇ ಒಳಗೊಂಡಿದೆ. |
10:38 | ಬ್ಲೆಂಡರ್ ನಲ್ಲಿ ಕೆಲಸ ಮಾಡುವಾಗ ನಾವು ಈ ಪ್ಯಾನೆಲ್ ಗಳನ್ನು ಅನೇಕ ಬಾರಿ ಉಪಯೋಗಿಸುವೆವು. |
10:44 | ಪ್ರಾಪರ್ಟೀಸ್ ವಿಂಡೋ, ಇದು ಬ್ಲೆಂಡರ್ ಇಂಟರ್ಫೇಸ್ ನ ಕೆಳಗಡೆಯ ಬಲ ಮೂಲೆಯಲ್ಲಿ, ಔಟ್ಲೈನರ್ ವಿಂಡೋದ ಕೆಳಗೆ ಇದೆ. |
10:53 | ಪ್ರಾಪರ್ಟೀಸ್ ವಿಂಡೋ ಬಗ್ಗೆ ಇನ್ನೂ ಹೆಚ್ಚು ತಿಳಿಯಲು Types of Windows - Properties Part 1 and 2 (ಟೈಪ್ಸ್ ಆಫ್ ವಿಂಡೋಸ್ – ಪ್ರಾಪರ್ಟೀಸ್ ಪಾರ್ಟ್ 1 ಆಂಡ್ 2 ) ಎನ್ನುವ ಟ್ಯುಟೋರಿಯಲ್ ನೋಡಿರಿ. |
11:06 | ಇದೇ ಟೈಂಲೈನ್. |
11:10 | ಇದು 3D ವ್ಯೂ ನ ಕೆಳಗೆ ಇದೆ. |
11:15 | ಇಲ್ಲಿ ನಾವು ಅನಿಮೇಶನ್ ಗಾಗಿ ಫ್ರೇಮ್ ರೇಂಜ್ ನೋಡಬಹುದು. |
11:21 | ಸದ್ಯಕ್ಕೆ ಯಾವ ಫ್ರೇಮ್ ಮೇಲೆ ನೀವು ಕೆಲಸ ಮಾಡುತ್ತಿರುವಿರಿ ಎಂದು ಈ ಹಸಿರು ಲಂಬ ರೇಖೆಯು ನಿಮಗೆ ಹೇಳುತ್ತದೆ. |
11:28 | ನೀವು ಇದನ್ನು ಫ್ರೇಮ್ ರೇಂಜ್ನ ಉದ್ದಕ್ಕೂ ಒಯ್ಯಬಹುದು. |
11:33 | ಲೆಫ್ಟ್ ಕ್ಲಿಕ್ ಮಾಡಿ ಮತ್ತು ಹಸಿರು ಗೆರೆಯನ್ನು ಹಿಡಿದುಕೊಳ್ಳಿ. |
11:36 | ಈಗ ನಿಮ್ಮ ಮೌಸ್ಅನ್ನು ಒಯ್ಯಿರಿ. |
11:43 | ಫ್ರೇಮ್ ಅನ್ನು ದೃಢೀಕರಿಸಲು ಲೆಫ್ಟ್ ಕ್ಲಿಕ್ ನ್ನು ಬಿಡಿ. |
11:50 | ಸ್ಟಾರ್ಟ್ 1 ನಮ್ಮ ಅನಿಮೇಶನ್ ರೇಂಜ್ನ ಆರಂಭದ ಫ್ರೇಮ್ ಅನ್ನು ಪ್ರತಿನಿಧಿಸುತ್ತದೆ. |
11:58 | ಎಂಡ್ 250 ನಮ್ಮ ಅನಿಮೇಶನ್ ರೇಂಜ್ನ ಕೊನೆಯ ಫ್ರೇಮ್ ಅನ್ನು ಪ್ರತಿನಿಧಿಸುತ್ತದೆ. |
12:10 | ಇವು ನಮ್ಮ ಅನಿಮೇಶನ್ ಗಾಗಿ ಇರುವ ಪ್ಲೇಬ್ಯಾಕ್ ಆಯ್ಕೆಗಳು. |
12:16 | ಟೈಂಲೈನ್ ಬಗ್ಗೆ ಇನ್ನೂ ಹೆಚ್ಚು ತಿಳಿಯಲು Types of Windows –Timeline (ಟೈಪ್ಸ್ ಆಫ್ ವಿಂಡೋಸ್ - ಟೈಂಲೈನ್) ಈ ಟ್ಯುಟೋರಿಯಲ್ ನೋಡಿರಿ. |
12:25 | ಇದು ಬ್ಲೆಂಡರ್ ಇಂಟರ್ಫೇಸ್ ನ ಒಂದು ಸಂಕ್ಷಿಪ್ತ ಅವಲೋಕನ. |
12:30 | ಡಿಫಾಲ್ಟ್ ನಿಂದ ಬ್ಲೆಂಡರ್ನ ವರ್ಕಸ್ಪೇಸ್ ನಲ್ಲಿರುವ ಈ ಎಲ್ಲಾ ವಿಂಡೋಗಳನ್ನು ಹೊರತುಪಡಿಸಿ |
12:35 | ಯಾವುದೇ ಹಂತದಲ್ಲಿ ಮೆನ್ಯುನಿಂದ ಆಯ್ದುಕೊಳ್ಳಬಹುದಾದ ಬೇರೆ ವಿಂಡೋಗಳು ಸಹ ಇವೆ. |
12:42 | ಮುಂದಿನ ಟ್ಯುಟೋರಿಯಲ್ಸ್ ಗಳಲ್ಲಿ ಈ ಎಲ್ಲ ವಿಂಡೋಗಳ ಬಗ್ಗೆ ವಿಸ್ತಾರವಾದ ವಿವರಣೆಯನ್ನು ಒದಗಿಸಲಾಗಿದೆ. |
12:51 | ಈಗ 3D ವ್ಯೂ ನಲ್ಲಿರುವ ಪ್ರತಿಯೊಂದು ಒಬ್ಜೆಕ್ಟ್ ನ್ನು ಆಯ್ಕೆಮಾಡಲು ಪ್ರಯತ್ನಿಸಿ. |
12:57 | 3D ಟ್ರಾನ್ಸ್ಫಾರ್ಮ್ ಮ್ಯಾನಿಪ್ಯುಲೇಟರ್ ಉಪಯೋಗಿಸಿ ಕ್ಯೂಬ್ ನ್ನು X,Y ಮತ್ತು Z ದಿಕ್ಕುಗಳಲ್ಲಿ ಒಯ್ಯಿರಿ. |
13:06 | ವ್ಯೂ ಟ್ಯಾಬ್ ನ್ನು ಪರಿಶೋಧಿಸಿ; ಒಬ್ಜೆಕ್ಟ್ ಟೂಲ್ಸ್ ಪ್ಯಾನೆಲ್ ನಲ್ಲಿಯ Translate ನ್ನು ಬಳಸಿ ಕ್ಯಾಮೆರಾವನ್ನು 3D ವ್ಯೂನಲ್ಲಿ ತಿರುಗಿಸಿ. |
13:20 | ಈ ಟ್ಯುಟೋರಿಯಲ್ ರಾಷ್ಟ್ರೀಯ ಸಾಕ್ಷರತಾ ಮಿಶನ್, ICT ಯ ಆಧಾರದಿಂದ ಮತ್ತು Project Oscar ಅವರಿಂದ ತಯಾರಿಸಲ್ಪಟ್ಟಿದೆ. |
13:28 | ಇದರ ಬಗ್ಗೆ ಹೆಚ್ಚಿನ ಮಾಹಿತಿ ಕೆಳಗಿನ ಲಿಂಕ್ ಗಳ ಮೇಲೆ ಲಭ್ಯವಿದೆ. |
13:33 | oscar.iitb.ac.in, ಮತ್ತು spoken-tutorial.org/NMEICT-Intro. |
13:47 | ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವು |
13:49 | ಸ್ಪೋಕನ್ ಟ್ಯುಟೋರಿಯಲ್ಸ್ ಬಳಸಿಕೊಂಡು ಕಾರ್ಯಶಾಲೆಗಳನ್ನು ನಡೆಸುತ್ತದೆ. |
13:53 | ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. |
13:57 | ಹೆಚ್ಚಿನ ವಿವರಗಳಿಗೆ ದಯವಿಟ್ಟು contact@spoken-tutorial.org ಇಲ್ಲಿ ಸಂಪರ್ಕಿಸಿ. |
14:06 | ಪ್ರವಾಚಕ ಐ ಐ ಟಿ ಬಾಂಬೆಯಿಂದ ವಾಸುದೇವ. ಧನ್ಯವಾದಗಳು. |