Blender/C2/Installation-Process-for-Windows/Kannada
From Script | Spoken-Tutorial
Time | Narration |
00:04 | ಬ್ಲೆಂಡರ್ ಟ್ಯುಟೋರಿಯಲ್ ಸರಣಿಗೆ ಸ್ವಾಗತ. |
00:08 | ಈ ಟ್ಯುಟೋರಿಯಲ್ ಬ್ಲೆಂಡರ್ 2.59 ನ್ನು ಪಡೆಯುವ ಮತ್ತು ವಿಂಡೋಸ್ ಆಪರೇಟಿಂಗ್ ಸಿಸ್ಟೆಮ್ ನಲ್ಲಿ ಅದನ್ನು ಇನ್ಸ್ಟಾಲ್ ಮಾಡುವ ಹಾಗೂ ನಡೆಸುವ ಕುರಿತು ಇದೆ. |
00:21 | ಈ ಟ್ಯುಟೋರಿಯಲ್ ಗಾಗಿ ನಾನು Windows XP ಆಪರೇಟಿಂಗ್ ಸಿಸ್ಟೆಮ್ ಅನ್ನು ಬಳಸುತ್ತಿದ್ದೇನೆ. |
00:28 | ಈ ಸ್ಕ್ರಿಪ್ಟ್ ನ ಅನುವಾದಕಿ ಐ ಐ ಟಿ ಬಾಂಬೆಯಿಂದ ಸಂಧ್ಯಾ ಪುಣೆಕರ್. |
00:37 | ನಿಮ್ಮ ಇಂಟರ್ನೆಟ್ ಬ್ರೌಸರ್ ಓಪನ್ ಮಾಡಿ. ನಾನು Firefox 3.09 ಉಪಯೋಗಿಸುತ್ತಿದ್ದೇನೆ. ಅಡ್ಡ್ರೆಸ್ ಬಾರ್ ನಲ್ಲಿ www.blender.org ಟೈಪ್ ಮಾಡಿ ಮತ್ತು Enter ಕೀ ಒತ್ತಿ. |
00:54 | ಇದು ನಿಮ್ಮನ್ನು ಅಧಿಕೃತ ಬ್ಲೆಂಡರ್ ವೆಬ್ಸೈಟ್ ಗೆ ಕರೆದೊಯ್ಯುತ್ತದೆ. |
01:01 | ಬ್ಲೆಂಡರ್ ಎಂಬುದು ಉಚಿತ ಹಾಗೂ ಓಪನ್ ಸೋರ್ಸ್ ಆಗಿದೆ. |
01:05 | ಬ್ಲೆಂಡರ್, ವೆಬ್ಸೈಟ್ ನಿಂದ ಎಕ್ಸ್ಟ್ರಾಕ್ಟ್ ಅಥವಾ ಸೋರ್ಸ್ ಕೋಡ್ ಡೌನ್ಲೋಡ್ ಮಾಡಲು ಲಭ್ಯವಿದೆ. |
01:10 | ಇಲ್ಲಿ, ಪೇಜ್ನ ಶೀರ್ಷಿಕೆಯ ಕೆಳಗಡೆ ಡೌನ್ಲೋಡ್ ಬ್ಲೆಂಡರ್ ಎನ್ನುವ ಲಿಂಕ್ ಇದೆ. |
01:15 | ಡೌನ್ಲೋಡ್ ಪೇಜ್ ಗೆ ಹೋಗಲು ನಾವು ಈ ಲಿಂಕ್ ಅನ್ನು ಕ್ಲಿಕ್ ಮಾಡೋಣ. |
01:22 | ನೀವು ನೋಡುವಂತೆ ಇದು ಬ್ಲೆಂಡರ್ ನ ಇತ್ತೀಚಿನ, ಸ್ಥಿರವಾದ ವರ್ಶನ್ ಇದೆ. |
01:28 | ಇಲ್ಲಿ ನಿಮಗೆ 32 bit ಅಥವಾ 64 bit ಇನ್ಸ್ಟಾಲ್ಲರ್ ಎಂದು ಎರಡು ಆಯ್ಕೆಗಳಿವೆ. |
01:39 | ಇವುಗಳಲ್ಲಿ ನಿಮ್ಮ ಮಶಿನ್ ಗೆ ಅನ್ವಯಿಸುವದನ್ನು ನೀವು ಡೌನ್ಲೋಡ್ ಮಾಡಬಹುದು. |
01:44 | 32 bit ಮತ್ತು 64 bit ಸಿಸ್ಟೆಮ್ ಗಳ ಬಗ್ಗೆ ತಿಳಿಯಲು ನಮ್ಮ Blender Hardware Requirements (ಬ್ಲೆಂಡರ್ ಹಾರ್ಡ್ವೇರ್ ರಿಕ್ವೈರ್ಮೆಂಟ್ಸ್) ಎನ್ನುವ ಟ್ಯುಟೋರಿಯಲ್ ನ್ನು ನೋಡಿ. |
01:56 | ಈ ವೆಬ್ಸೈಟ್, ಬ್ಲೆಂಡರ್ ಪ್ರೊಗ್ರಾಮ್ ಫೈಲ್ಸ್ ನ ಝಿಪ್ಪ್ಡ್ ಆರ್ಕೈವ್ ಸಹ ಒದಗಿಸುತ್ತದೆ. |
02:01 | ಬ್ಲೆಂಡರ್ ರನ್ ಮಾಡಲು ಬೇಕಾಗುವ ಎಲ್ಲ ಫೈಲ್ ಗಳನ್ನು ಈ ಆರ್ಕೈವ್ ಒಳಗೊಂಡಿದೆ. |
02:06 | ನೀವು ನಿಮ್ಮ ಆಯ್ಕೆಯ ಫೋಲ್ಡರ್ ಗೆ ಫೈಲ್ಸ್ ಗಳನ್ನು ಅನ್ ಝಿಪ್ ಮತ್ತು ಎಕ್ಸ್ಟ್ರಾಕ್ಟ್ ಮಾಡಿ ಮತ್ತು ಬ್ಲೆಂಡರ್ ಎಕ್ಸಿಕ್ಯುಟೇಬಲ್ ನ್ನು ರನ್ ಮಾಡಿ. |
02:15 | ನಾನು ಈಗ ಮಾಡಿ ತೋರಿಸುತ್ತೇನೆ. |
02:17 | ಇನ್ಸ್ಟಾಲ್ಲರ್ ಹಾಗೂ ಆರ್ಕೈವ್ ಗಳಲ್ಲಿನ ಮುಖ್ಯ ಅಂತರವೆಂದರೆ- |
02:22 | ಡಿಫಾಲ್ಟ್ ಆಗಿ ಇನ್ಸ್ಟಾಲ್ಲರ್ ಬ್ಲೆಂಡರ್ ನ ಅಪ್ಪ್ಲಿಕೇಶನ್ ಫೈಲ್ಸ್ ನ್ನು C ಡ್ರೈವ್ ನ ಪ್ರೊಗ್ರಾಮ್ ಫೈಲ್ಸ್ ನಲ್ಲಿ ಇಡುತ್ತದೆ ಹಾಗೂ ಸ್ಟಾರ್ಟ್ ಮೆನ್ಯುನಲ್ಲಿ ಒಂದು ಐಕಾನ್ ನ್ನು ಸ್ಥಾಪಿಸುತ್ತದೆ. |
02:31 | ಡೆಸ್ಕಟಾಪ್ ಮೇಲೆ ಒಂದು ಐಕಾನ್ ಮತ್ತು ಬ್ಲೆಂಡರ್ ಜೊತೆಗೆ .blend ಫೈಲ್ಸ್ ಅನ್ನು ಸಹ ಓಪನ್ ಮಾಡುತ್ತದೆ. |
02:40 | ಝಿಪ್ ಆರ್ಕೈವ್ ನಲ್ಲಿ ಎಲ್ಲ ಅಪ್ಪ್ಲಿಕೇಶನ್ ಫೈಲ್ಸ್ ಮತ್ತು ಎಕ್ಸಿಕ್ಯೂಟೇಬಲ್ ಬ್ಲೆಂಡರ್ ಫೈಲ್ ಒಂದೇ ಫೋಲ್ಡರ್ ನಲ್ಲಿ ಇದ್ದು |
02:48 | ಕಂಪ್ಯೂಟರ್ ನ ಯಾವದೇ ಡ್ರೈವ್ ಗೆ ಅದನ್ನು ಕಾಪಿ ಮಾಡಬಹುದು. |
02:53 | ಈಗ ನಾನು ನನ್ನ ಮಶಿನ್ ಗೆ ಆರ್ಕೈವ್ ಉಪಯೋಗಿಸಬೇಕೆಂದರೆ ನನಗೆ 32-Bit ಆರ್ಕೈವ್ ಬೇಕು. |
03:02 | 32-Bit ಆರ್ಕೈವ್ ನ ಡೌನ್ಲೋಡ್ ಲಿಂಕ್ ಮೇಲೆ ಲೆಫ್ಟ್ ಕ್ಲಿಕ್ ಮಾಡಿ, ಈಗ ಡೌನ್ಲೋಡ್ ಆರಂಭವಾಗುವದು. |
03:09 | ಈ ಮೊದಲೇ ಹೇಳಿದಂತೆ ನನ್ನ ಇಂಟರ್ನೆಟ್ ಬ್ರೌಸರ್ Firefox 3.09 ಆಗಿದೆ. |
03:16 | ಇಲ್ಲಿ ತೋರಿಸಿದ ಡೌನ್ಲೋಡ್ ನ ಹಂತಗಳು ಬೇರೆ ಇಂಟರ್ನೆಟ್ ಬ್ರೌಸರ್ ಗಳಲ್ಲಿಯೂ ಇದೇ ತರಹ ಇರುತ್ತವೆ. |
03:23 | ಡೌನ್ಲೋಡ್ ನ ಪ್ರೊಗ್ರೆಸ್ ಅನ್ನು ನೀವು ಇಲ್ಲಿ ಕಾಣಬಹುದು. |
03:26 | ಈ ಹಸಿರು ಉದ್ದದ ಪಟ್ಟಿಗಳಿರುವ ಅಡ್ಡವಾದ ಡೌನ್ಲೋಡ್ ಬಾರ್ ಎಷ್ಟು ಡೌನ್ಲೋಡ್ ಆಗಿದೆ ಎಂದು ತೋರಿಸುತ್ತದೆ. |
03:44 | ಡೌನ್ಲೋಡ್ ನ ವೇಗವು ನಿಮ್ಮ ಇಂಟರ್ನೆಟ್ ಕನೆಕ್ಷನ್ ನ್ನು ಅವಲಂಬಿಸಿದೆ. |
03:48 | ದಯವಿಟ್ಟು ಇದು ಮುಗಿಯುವ ವರೆಗೆ ಕಾಯಿರಿ. |
04:02 | ಆರ್ಕೈವ್ ನ್ನು ಎಕ್ಸ್ಟ್ರಾಕ್ಟ್ ಮಾಡಲು ಮೊದಲು download ಮೇಲೆ ರೈಟ್ ಕ್ಲಿಕ್ ಮಾಡಿ. |
04:08 | Open containing folder ಮೇಲೆ ಲೆಫ್ಟ್ ಕ್ಲಿಕ್ ಮಾಡಿ. zip ಮೇಲೆ ಲೆಫ್ಟ್ ಡಬಲ್ ಕ್ಲಿಕ್ ಮಾಡಿ. |
04:16 | ಯಾವುದೇ ವಿಂಡೋಸ್ ಮಶಿನ್ ನಲ್ಲಿ ಡಿಫಾಲ್ಟ್ ಇನ್ಸ್ಟಾಲ್ ಆಗಿರುವ ವಿನ್- ಝಿಪ್ ನಂತಹ ಆರ್ಕೈವರ್ ನಲ್ಲಿ ಅದು ಓಪನ್ ಆಗುವದು. |
04:24 | EXTRACT ಮೇಲೆ ಲೆಫ್ಟ್ ಕ್ಲಿಕ್ ಮಾಡಿ. ಲಿಸ್ಟ್ ನಿಂದ ನಿಮ್ಮ ಡೆಸ್ಟಿನೇಶನ್ ಫೋಲ್ಡರ್ ಆರಿಸಿಕೊಳ್ಳಿ. |
04:32 | ನಾನು My Documents ಗೆ ಎಕ್ಸ್ಟ್ರಾಕ್ಟ್ ಮಾಡುತ್ತಿದ್ದೇನೆ. Extract ಮೇಲೆ ಲೆಫ್ಟ್ ಕ್ಲಿಕ್ ಮಾಡಿ. |
04:40 | ಈ ಹಸಿರು ಪಟ್ಟಿಗಳಿರುವ ಪ್ರೊಗ್ರೆಸ್ ಬಾರ್ ಎಷ್ಟು ಎಕ್ಸ್ಟ್ರಾಕ್ಟ್ ಆಗಿದೆ ಎಂದು ತೋರಿಸುತ್ತದೆ. |
04:56 | ಈಗ ನೀವು ಎಕ್ಸ್ಟ್ರಾಕ್ಟೆಡ್ ಫೋಲ್ಡರ್ ನ್ನು ನಿಮ್ಮ ಸ್ಕ್ರೀನ್ ಮೇಲೆ ನೋಡಬಹುದು. |
05:00 | ಫೋಲ್ಡರ್ ಒಪನ್ ಮಾಡಲು ಲೆಫ್ಟ್ ಡಬಲ್ ಕ್ಲಿಕ್ ಮಾಡಿ. Blender Executable ಮೇಲೆ ಲೆಫ್ಟ್ ಡಬಲ್ ಕ್ಲಿಕ್ ಮಾಡಿ. |
05:08 | ವಿಂಡೋಸ್, ದಿ ಪಬ್ಲಿಶರ್ ಕುಡ್ ನಾಟ್ ಬಿ ವೆರಿಫೈಡ್ ಎನ್ನುವ ಸೆಕ್ಯುರಿಟಿ ವಾರ್ನಿಂಗ್ ತೋರಿಸುತ್ತದೆ. |
05:14 | ಇದಕ್ಕಾಗಿ ಚಿಂತಿಸಬೇಕಿಲ್ಲ. ಹಾಗೆ Run ಬಟನ್ ಮೇಲೆ ಕ್ಲಿಕ್ ಮಾಡಿ. ನೀವು ಮುಂದುವರೆಯುವಿರಿ. |
05:27 | ಈಗ ನಿಮಗೆ ಇನ್ಸ್ಟಾಲ್ಲರ್ ಉಪಯೋಗಿಸಬೇಕೆಂದಿದ್ದರೆ ನಾವು ಮರಳಿ ಬ್ಲೆಂಡರ್ ವೆಬ್ಸೈಟ್ ಗೆ ಹೋಗೋಣ. |
05:35 | ಈ ಪೇಜ್ ನ ಮೇಲ್ಭಾಗದಲ್ಲಿ ಇರುವ Download ಮೇಲೆ ಕ್ಲಿಕ್ ಮಾಡಿ. ಇದು ನಮ್ಮನ್ನು ಡೌನ್ಲೋಡ್ ಪೇಜ್ ಗೆ ಮರಳಿ ಕರೆದೊಯ್ಯುತ್ತದೆ. |
05:44 | ನನ್ನ ಮಶಿನ್ ಗಾಗಿ ನನಗೆ 32-Bit ಇನ್ಸ್ಟಾಲ್ಲರ್ ನ ಅವಶ್ಯಕತೆಯಿದೆ. |
05:48 | ಆದ್ದರಿಂದ ನಾನು 32-Bit ಇನ್ಸ್ಟಾಲ್ಲರ್ ನ Download ಲಿಂಕ್ ಮೇಲೆ ಲೆಫ್ಟ್ ಕ್ಲಿಕ್ ಮಾಡುತ್ತೇನೆ, ಆಗ ಡೌನ್ಲೋಡ್ ಆರಂಭವಾಗುತ್ತದೆ. |
06:03 | ಮಾಡಿ ತೋರಿಸುವದು ಸುಲಭವಾಗಲಿ ಎಂದು ನಾನು ಈಗಾಗಲೆ ಇನ್ಸ್ಟಾಲ್ಲರ್ ನ್ನು ಬ್ಲೆಂಡರ್ ವೆಬ್ಸೈಟ್ ನಿಂದ ನನ್ನ ಮಶಿನ್ ಗೆ ಡೌನ್ಲೋಡ್ ಮಾಡಿದ್ದೇನೆ. |
06:11 | ಈಗ ನಾನು ನಿಮಗೆ ಇನ್ಸ್ಟಾಲ್ಲೇಶನ್ ನ ಹಂತಗಳನ್ನು ಪರಿಚಯ ಮಾಡಿಸುತ್ತೆನೆ. installer ಮೇಲೆ ಲೆಫ್ಟ್ ಡಬಲ್ ಕ್ಲಿಕ್ ಮಾಡಿ. |
06:22 | ವಿಂಡೋಸ್, ದಿ ಪಬ್ಲಿಶರ್ ಕುಡ್ ನಾಟ್ ಬಿ ವೆರಿಫೈಡ್ ಎನ್ನುವ ಸೆಕ್ಯುರಿಟಿ ವಾರ್ನಿಂಗ್ ತೋರಿಸುತ್ತದೆ. |
06:29 | ಇದಕ್ಕಾಗಿ ಚಿಂತಿಸಬೇಕಿಲ್ಲ. Run ಬಟನ್ ಮೇಲೆ ಕ್ಲಿಕ್ ಮಾಡಿ. |
06:35 | ಬ್ಲೆಂಡರ್ ಸೆಟ್-ಅಪ್ ವಿಝಾರ್ಡ್ ಹೀಗೆ ಕಾಣುತ್ತದೆ. |
06:39 | ಇನ್ಸ್ಟಾಲ್ ಮಾಡುವ ಕ್ರಿಯೆಯಲ್ಲಿ ಮುಂದಿನ ಹಂತಕ್ಕೆ ಹೋಗಲು ಇಲ್ಲಿ Next ಮೇಲೆ ಕ್ಲಿಕ್ ಮಾಡಿ. |
06:48 | ಬಹುತರ ಸಾಫ್ಟವೇರ್ ಗಳಂತೆ ಇನ್ಸ್ಟಾಲ್ಲರ್ ಲೈಸೆನ್ಸ್ ಅಗ್ರೀಮೆಂಟ್ ತೋರಿಸುತ್ತದೆ. |
06:53 | ಇನ್ನುಳಿದ ಅಗ್ರೀಮೆಂಟ್ ನೋಡಲು page down ಒತ್ತಿ. |
07:07 | ಇದನ್ನು ಸಂಪೂರ್ಣವಾಗಿ ಓದಲು ನಾನು ಸಲಹೆ ಕೊಡುತ್ತೇನೆ. |
07:11 | ಬ್ಲೆಂಡರ್ ಎಂಬುದು ಉಚಿತ ಹಾಗೂ ಒಪನ್ ಸೋರ್ಸ್ ಆಗಿದೆ ಎಂಬುದನ್ನು ಗಮನಿಸಿ. |
07:14 | ಬ್ಲೆಂಡರ್ ಇನ್ಸ್ಟಾಲ್ ಮಾಡಲು ನೀವು ಈ ಲೈಸೆನ್ಸ್ ಅಗ್ರೀಮೆಂಟ್ ನ್ನು ಒಪ್ಪಿಕೊಳ್ಳಲೇಬೇಕು. |
07:21 | ಮುಂದುವರೆಸಲು ಈಗ I agree ಬಟನ್ ಮೇಲೆ ಕ್ಲಿಕ್ ಮಾಡಿ. |
07:27 | ಈ ಮುಂದಿನ ಹಂತ ನಿಮಗೆ ಇನ್ಸ್ಟಾಲ್ ಮಾಡಲು ಕಾಂಪೋನೆಂಟ್ ಗಳನ್ನು ಆರಿಸಿಕೊಳ್ಳಲು ಅನುಮತಿಸುತ್ತದೆ. |
07:32 | ಡಿಫಾಲ್ಟ್ ಆಗಿ ಆಯ್ಕೆ ಆದ ಎಲ್ಲ ಘಟಕಗಳನ್ನು ಇನ್ಸ್ಟಾಲ್ ಮಾಡಲು ನಾನು ನಿಮಗೆ ಸಲಹೆ ಕೊಡುತ್ತೇನೆ ಹಾಗೂ ಇನ್ಸ್ಟಾಲ್ ಮಾಡುವದನ್ನು ಮುಂದುವರೆಸಲು next ಬಟನ್ ಒತ್ತಿ. |
07:41 | ಇಲ್ಲಿ ನೀವು ಬ್ಲೆಂಡರ್ ಇನ್ಸ್ಟಾಲ್ ಮಾಡುವ ಸ್ಥಳ ಆರಿಸಿಕೊಳ್ಳಲು ಆಯ್ಕೆಗಳಿವೆ. |
07:48 | ಡಿಫಾಲ್ಟ್ ನಿಂದ ಪ್ರೊಗ್ರ್ಯಾಮ್ ಫೈಲ್ಸ್ ಫೋಲ್ಡರ್ ಆಯ್ಕೆಯಾಗಿದೆ. |
07:51 | ಇದು ಬ್ಲೆಂಡರ್ ಇನ್ಸ್ಟಾಲ್ ಮಾಡಲು ಒಳ್ಳೆಯ ಸ್ಥಳ. ಆದ್ದರಿಂದ Install ಬಟನ್ ಒತ್ತಿ. |
08:04 | ಈ ಹಸಿರು ಪಟ್ಟಿಗಳಿರುವ ಪ್ರೊಗ್ರೆಸ್ ಬಾರ್ ಎಷ್ಟು ಇನ್ಸ್ಟಾಲ್ಲೇಶನ್ ಮುಗಿದಿದೆ ಎಂದು ತೋರಿಸುತ್ತದೆ. |
08:10 | ಸಾಮಾನ್ಯವಾಗಿ ಒಂದು ನಿಮಿಷದ ಒಳಗೆ ಇದು ಮುಗಿಯುತ್ತದೆ. |
08:33 | ಬ್ಲೆಂಡರ್ ಸೆಟ್ಅಪ್ ಇಲ್ಲಿಗೆ ಮುಗಿಯಿತು. |
08:36 | ಬ್ಲೆಂಡರ್ ನಿಮ್ಮ ಮಶಿನ್ ನಲ್ಲಿ ಇನ್ಸ್ಟಾಲ್ ಮಾಡಲ್ಪಟ್ಟಿದೆ. |
08:39 | Run Blender ಚೆಕ್ ಬಾಕ್ಸ್ ಸೆಲೆಕ್ಟ್ ಮಾಡಿ ಇಟ್ಟುಕೊಳ್ಳಿ. |
08:42 | Finish ಬಟನ್ ಒತ್ತಿ. |
08:45 | ಬ್ಲೆಂಡರ್ ಸ್ವಯಂಚಾಲಿತವಾಗಿ ರನ್ ಆಗಲು ಆರಂಭಿಸಬೇಕು. |
08:52 | ಇದು ಬ್ಲೆಂಡರ್ ಬೈನರಿ ಯು ಮೂಲ ಎಕ್ಸ್ಟ್ರಾಕ್ಟ್ ಮಾಡಿದ ಡಿರೆಕ್ಟರಿ ಯಲ್ಲಿ ಇದ್ದರೆ ಮಾತ್ರ. |
08:57 | ಹೆಚ್ಚಿನ ಅವಲಂಬನೆಗಳಿಲ್ಲದೆ ಬ್ಲೆಂಡರ್ ಸ್ವತಂತ್ರವಾಗಿ ರನ್ ಆಗುವದು. |
09:03 | ಯಾವದೇ ಸಿಸ್ಟೆಮ್ ಲೈಬ್ರರಿ ಅಥವಾ ಸಿಸ್ಟೆಮ್ ಪ್ರಿಫರೆನ್ಸಸ್ ನ್ನು ಮಾರ್ಪಡಿಸಲಾಗಿಲ್ಲ. |
09:10 | ಈ ಟ್ಯುಟೋರಿಯಲ್ ನಲ್ಲಿ ವಿಂಡೋಸ್ ಆಪರೇಟಿಂಗ್ ಸಿಸ್ಟೆಮ್ ನಲ್ಲಿ ಬ್ಲೆಂಡರ್ ನ್ನು ಹೇಗೆ ಇನ್ಸ್ಟಾಲ್ ಮಾಡುವದೆಂದು ನಾವು ಕಲಿತಿದ್ದೇವೆ. |
09:19 | ಈಗ ಬ್ಲೆಂಡರ್ ವೆಬ್ಸೈಟ್ ನಿಂದ ಬ್ಲೆಂಡರ್ ನ್ನು ಡೌನ್ಲೋಡ್ ಮಾಡಲು ಪ್ರಯತ್ನಿಸಿ ಹಾಗೂ ನಿಮ್ಮ ಮಶಿನ್ ನಲ್ಲಿ ಬ್ಲೆಂಡರ್ ನ್ನು ಇನ್ಸ್ಟಾಲ್ ಹಾಗೂ ರನ್ ಮಾಡಿ. |
09:28 | ಈ ಟ್ಯುಟೋರಿಯಲ್ ರಾಷ್ಟ್ರೀಯ ಸಾಕ್ಷರತಾ ಮಿಶನ್, ICT ಯನ್ನು ಆಧರಿಸಿದ್ದು Project Oscar ಅವರಿಂದ ತಯಾರಿಸಲ್ಪಟ್ಟಿದೆ. |
09:37 | ಇದರ ಬಗ್ಗೆ ಹೆಚ್ಚಿನ ಮಾಹಿತಿ oscar.iitb.ac.in |
09:45 | ಮತ್ತು spoken-tutorial.org/NMEICT-Intro ಲಿಂಕ್ ಗಳ ಮೇಲೆ ಲಭ್ಯವಿದೆ. |
09:55 | ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವು ಸ್ಪೋಕನ್ ಟ್ಯುಟೋರಿಯಲ್ಸ್ ಬಳಸಿಕೊಂಡು ಕಾರ್ಯಶಾಲೆಗಳನ್ನು ನಡೆಸುತ್ತದೆ. |
10:01 | ಹಾಗೂ ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. |
10:06 | ಹೆಚ್ಚಿನ ವಿವರಗಳಿಗೆ ದಯವಿಟ್ಟು contact@spoken-tutorial.org ಈ ಈ-ಮೇಲ್ ಮೂಲಕ ಸಂಪರ್ಕಿಸಿ. |
10:16 | ಇದರ ಪ್ರವಾಚಕ ಐ ಐ ಟಿ ಬಾಂಬೆ ಯಿಂದ ವಾಸುದೇವ, ಧನ್ಯವಾದಗಳು. |