Arduino/C3/Assembly-programming-through-Arduino/Kannada
From Script | Spoken-Tutorial
Time | Narration |
00:01 | Assembly programming through Arduino ಕುರಿತ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ. |
00:07 | ಈ ಟ್ಯುಟೋರಿಯಲ್ ನಲ್ಲಿ, ನಾವು: ಆರ್ಡುಯಿನೊ ಬೋರ್ಡ್ ಗೆ ಸೆವೆನ್ ಸೆಗ್ಮೆಂಟ್ ಡಿಸ್ಪ್ಲೇಯನ್ನು ಇಂಟರ್ಫೇಸ್ ಮಾಡಲು, |
00:15 | ಸೆವೆನ್ ಸೆಗ್ಮೆಂಟ್ ಡಿಸ್ಪ್ಲೇಯಲ್ಲಿ ಅಂಕಿಯನ್ನು ಡಿಸ್ಪ್ಲೇ ಮಾಡಲು Assembly ಪ್ರೋಗ್ರಾಂ ಬರೆಯಲು ಮತ್ತು |
00:21 | 7447 IC ಬಳಸಿ ಸೆವೆನ್ ಸೆಗ್ಮೆಂಟ್ ಡಿಸ್ಪ್ಲೇಯಲ್ಲಿ ಅಂಕಿಯನ್ನು ಡಿಸ್ಪ್ಲೇ ಮಾಡಲು ಕಲಿಯಲಿದ್ದೇವೆ. |
00:28 | ಈ ಟ್ಯುಟೋರಿಯಲ್ ಅನುಸರಿಸಲು ನೀವು ಎಲೆಕ್ಟ್ರಾನಿಕ್ಸ್ ಮತ್ತು Assembly ಲ್ಯಾಂಗ್ವೇಜ್ ನ ಜ್ಞಾನ ಹೊಂದಿರಬೇಕು. |
00:36 | ಈ ಕೆಳಗಿನವುಗಳ ಕುರಿತು ಇನ್ನಷ್ಟು ಅರಿತುಕೊಳ್ಳಲು Additional reading material ಲಿಂಕ್ ಬಳಸಿ: |
00:42 | Arduino – Assembly ಕೋಡ್ ರೆಫರನ್ಸ್ ಮತ್ತು ಆರ್ಡುಯಿನೊ ATmega328 ಪಿನ್ ಮ್ಯಾಪಿಂಗ್. |
00:50 | ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು ನಾನು: ಆರ್ಡುಯಿನೊ ಯು.ಎನ್.ಒ ಬೋರ್ಡ್ |
00:56 | ಮತ್ತು ಉಬಂಟು ಲೀನಕ್ಸ್ ಒಪರೇಟಿಂಗ್ ಸಿಸ್ಟಂ ವರ್ಶನ್ 14.04 ಬಳಸುತ್ತಿದ್ದೇನೆ. |
01:02 | ನಮಗೆ ಈ ಕೆಳಗಿನ ಬಾಹ್ಯ ಸಾಧನಗಳು ಸಹ ಬೇಕು:
ಅವೆಂದರೆ ಬ್ರೆಡ್ ಬೋರ್ಡ್, |
01:09 | ಆರ್ಡುಯಿನೊ ಯು.ಎನ್.ಒ ಬೋರ್ಡ್, |
01:12 | ಕಾಮನ್ ಆನೋಡ್ ಸೆವೆನ್ ಸೆಗ್ಮೆಂಟ್ ಡಿಸ್ಪ್ಲೇ,
220 ohm ರೆಸಿಸ್ಟರ್, |
01:18 | ಡಿಕೋಡರ್ 7447 IC ಮತ್ತು ಜಂಪರ್ ವೈರ್ ಗಳು. |
01:25 | ಈ ಪ್ರಯೋಗದಲ್ಲಿ, ನಾವು ಕಾಮನ್ ಆನೋಡ್ ಸೆವೆನ್ ಸೆಗ್ಮೆಂಟ್ ಡಿಸ್ಪ್ಲೇ ಬಳಸುತ್ತಿದ್ದೇವೆ. |
01:31 | ಸೆವೆನ್ ಸೆಗ್ಮೆಂಟ್ ಡಿಸ್ಪ್ಲೇ ಕುರಿತು ಇನ್ನಷ್ಟು ತಿಳಿದುಕೊಳ್ಳಲು ಈ ಸರಣಿಯ ಬೇಸಿಕ್ ಲೆವೆಲ್ ಟ್ಯುಟೋರಿಯಲ್ ಅನ್ನು ನೋಡಿ. |
01:38 | ನಾವೀಗ ಕನೆಕ್ಷನ್ ಸರ್ಕಿಟ್ ವಿವರಗಳನ್ನು ನೋಡೋಣ. |
01:46 | ಸೆವೆನ್ ಸೆಗ್ಮೆಂಟ್ ಡಿಸ್ಪ್ಲೇಯ Dot ಪಿನ್ ಅನ್ನು ಆರ್ಡುಯಿನೊವಿನ ಪಿನ್ 13 ಕ್ಕೆ ಸಂಪರ್ಕಿಸಲಾಗಿದೆ. |
01:53 | ಯಾವುದಾದರೂ COM ಪಿನ್ ಅನ್ನು 220 ohm ರೆಸಿಸ್ಟರ್ ಮೂಲಕ +5 ವೋಲ್ಟ್ಸ್ ಗೆ ಸಂಪರ್ಕಿಸಲಾಗಿದೆ. |
02:00 | ಆರ್ಡುಯಿನೊ ಮತ್ತು ಮೈಕ್ರೋಕಂಟ್ರೋಲರ್ ಗಾಗಿ ಪಿನ್ ಮ್ಯಾಪಿಂಗ್ ನೋಡಿ. |
02:05 | ಇದು ಸಂಪರ್ಕದ ಲೈವ್ ಸೆಟಪ್ ಆಗಿದೆ. |
02:09 | ನಾವೀಗ, ಸೆವೆನ್ ಸೆಗ್ಮೆಂಟ್ ಡಿಸ್ಪ್ಲೇಯಲ್ಲಿ Dot ಎಲ್.ಇ.ಡಿ ಯನ್ನು ಟರ್ನ್ ಆನ್ ಮಾಡಲು assembly ಪ್ರೋಗ್ರಾಂ ಅನ್ನು ಬರೆಯೋಣ. |
02:17 | ನಾವು assembler AVRA ಮತ್ತು AVRDUDE ಅಳವಡಿಸಬೇಕು. |
02:23 | AVRA ಎನ್ನುವುದು assembler ಆಗಿದ್ದು ಇದು hex ಫೈಲ್ ಅನ್ನು ರೂಪಿಸುತ್ತದೆ. |
02:28 | hex ಫೈಲ್ ಅನ್ನು ಆರ್ಡುಯಿನೊ ಬೋರ್ಡ್ ಗೆ ಅಪ್ಲೋಡ್ ಮಾಡಲು AVRDUDE ಅನ್ನು ಬಳಸಲಾಗುತ್ತದೆ. |
02:34 | Ctrl + Alt + T ಕೀ ಗಳನ್ನು ಒಟ್ಟಿಗೆ ಒತ್ತಿ ಟರ್ಮಿನಲ್ ಅನ್ನು ತೆರೆಯಿರಿ. |
02:39 | avra ಮತ್ತು avrdude ಅಳವಡಿಸಲು ಹೀಗೆ ಟೈಪ್ ಮಾಡಿ: sudo space apt hyphen get space install space avra space avrdude. |
02:55 | ಕೇಳಿದರೆ ಅಡ್ಮಿನಿಸ್ಟ್ರೇಟಿವ್ ಪಾಸ್ವರ್ಡ್ ನಮೂದಿಸಿ ಮತ್ತು Enter ಒತ್ತಿ. |
03:01 | ಅಳವಡಿಕೆ ಪ್ರಕ್ರಿಯೆಯು ಪ್ರಾರಂಭಗೊಂಡಿರುವುದನ್ನು ನಾವು ನೋಡಬಹುದು. |
03:05 | ಅಳವಡಿಸುವ ವೇಳೆ ಕಾನ್ಫಿಗರೇಶನ್ ಅನ್ನು ದೃಢೀಕರಿಸಲು, ಕೇಳಿದಾಗಲೆಲ್ಲ 'Y' ಒತ್ತಿ. |
03:11 | ಇಂಟರ್ನೆಟ್ ವೇಗವನ್ನು ಆಧರಿಸಿ, ಅಳವಡಿಕೆ ಪೂರ್ಣಗೊಳ್ಳಲು ಒಂದಷ್ಟು ಸಮಯ ಬೇಕಾಗಬಹುದು. |
03:17 | ಅಳವಡಿಕೆ ಯಶಸ್ವಿಯಾಗಿ ಪೂರ್ಣಗೊಂಡಿರುವುದನ್ನು ನಾವು ನೋಡಬಹುದು.
ನಾವು ಸ್ಕ್ರೀನ್ ಅನ್ನು ತೆರವುಗೊಳಿಸೋಣ. |
03:25 | ನಾವೀಗ ಕಂಪ್ಯೂಟರ್ ಗೆ ಆರ್ಡುಯಿನೊ ಬೋರ್ಡ್ ಅನ್ನು ಸಂಪರ್ಕಿಸೋಣ. |
03:29 | ಆರ್ಡುಯಿನೊವಿನ ಪೋರ್ಟ್ ಸಂಖ್ಯೆ ತಿಳಿಯಲು ನಾವು ಹೀಗೆ ಟೈಪ್ ಮಾಡುತ್ತೇನೆ: ls space forward slash dev forward slash ttyACM asterisk. |
03:41 | ನಾವು ಔಟ್ಪುಟ್ ಅನ್ನು forward slash dev forward slash ttyACM0 ಆಗಿ ನೋಡಬಹುದು. |
03:49 | ಇಲ್ಲಿ ttyACM0 ಎಂದರೆ ಆರ್ಡುಯಿನೊವಿನ ಪೋರ್ಟ್ ಸಂಖ್ಯೆ. |
03:55 | ನೀವು ಬೇರೆಯೇ ಪೋರ್ಟ್ ಸಂಖ್ಯೆ ಪಡೆಯಬಹುದು. ನಿಮ್ಮ ಪೋರ್ಟ್ ಸಂಖ್ಯೆಯನ್ನು ಬರೆದಿಡಿ. |
04:00 | ಈ ಟ್ಯುಟೋರಿಯಲ್ ನ Code files ಲಿಂಕ್ ನಿಂದ m328Pdef.inc ಫೈಲ್ ಅನ್ನು ಡೌನ್ಲೋಡ್ ಮಾಡಿ. |
04:08 | ಸೋರ್ಸ್ ಕೋಡ್ ನ ಮೊದಲ ಸಾಲಿನಲ್ಲಿ ಈ library ಫೈಲ್ ಅನ್ನು ನಾವು ಸೇರಿಸಬೇಕು. |
04:13 | ಇದು, assembly ಪ್ರೋಗ್ರಾಂಗಳನ್ನು ಬರೆಯುವಾಗ Register ಮತ್ತು Bit name ಬಳಸಲು ಬಳಕೆದಾರರಿಗೆ ಅನುವು ಮಾಡಿಕೊಡುತ್ತದೆ. |
04:20 | ನಾವೀಗ assembly ಪ್ರೋಗ್ರಾಂ ಬರೆದು ಮೈಕ್ರೋಕಂಟ್ರೋಲರ್ ಗೆ ಅಪ್ಲೋಡ್ ಮಾಡೋಣ. |
04:25 | ಯಾವುದೇ ಟೆಕ್ಸ್ಟ್ ಎಡಿಟರ್ ತೆರೆಯಿರಿ ಮತ್ತು ಇದನ್ನು ಟೈಪ್ ಮಾಡಿ: |
04:29 | ಸೆಮಿಕೋಲನ್, ಕಮೆಂಟ್ ಸ್ಟೇಟ್ಮೆಂಟ್ ಗಳನ್ನು ಪ್ರತಿನಿಧಿಸುತ್ತದೆ. |
04:33 | ಈ ಸ್ಟೇಟ್ಮೆಂಟ್ ಗಳನ್ನು assembler ನಿರ್ಲಕ್ಷಿಸುತ್ತದೆ ಮತ್ತು ಎಕ್ಸಿಕ್ಯೂಟ್ ಮಾಡಲಾಗುವುದಿಲ್ಲ. |
04:38 | ಈ ಸಾಲು, assembler ಗೆ m328Pdef.inc ಫೈಲ್ ಅನ್ನು ಸೇರಿಸಲು ಹೇಳುತ್ತದೆ. |
04:45 | ಈ ಹಿಂದೆ, ಈ ಫೈಲ್ ಅನ್ನು ನಾವು ಡೌನ್ಲೋಡ್ ಮಾಡಿದ್ದೆವು ಮತ್ತು ನನ್ನ ಕಂಪ್ಯೂಟರ್ ನಲ್ಲಿ ಇದು ಪಾಥ್ ಆಗಿದೆ. |
04:51 | ಇಡೀ ಫೈಲ್ ಪಾಥ್ ಅನ್ನು ನಾವು ನಿರ್ದಿಷ್ಟಪಡಿಸಬೇಕು ಎಂಬುದನ್ನು ಗಮನಿಸಿ. |
04:55 | ldi ಎಂದರೆ "load immediate". |
04:59 | ಪಿನ್ PB5, ಅಂದರೆ ಡಿಜಿಟಲ್ ಪಿನ್ 13 ಅನ್ನು ಇದು ಔಟ್ಪುಟ್ ಆಗಿ ಸೆಟ್ ಮಾಡುತ್ತದೆ. |
05:05 | ಇದು assembler ಗೆ, ಕಾರ್ಯನಿರ್ವಹಿಸುತ್ತಿರುವ register r16 ಅನ್ನು ತೆಗೆದುಕೊಳ್ಳಲು ಮತ್ತು ಬೈನರಿ ನಂಬರ್ ಅನ್ನು ಇದಕ್ಕೆ ಲೋಡ್ ಮಾಡಲು ಹೇಳುತ್ತದೆ. |
05:12 | ಈ ಸಾಲು, register r16 ನ ಅಂಶಗಳನ್ನು DDRB ರಿಜಿಸ್ಟರ್ ಗೆ ನಕಲು ಮಾಡಲು ಕಂಪೈಲರ್ ಗೆ ಹೇಳುತ್ತದೆ. |
05:20 | 5 ವೋಲ್ಟ್ಸ್ ಗೆ ಸೆಟ್ ಮಾಡುವ ಪಿನ್ PB5, ಅಂದರೆ ಡಿಜಿಟಲ್ ಪಿನ್ 13 ಅನ್ನು ಹೊರತುಪಡಿಸಿ ಉಳಿದೆಲ್ಲ ಪಿನ್ ಗಳನ್ನು ಇದು 0 ವೋಲ್ಟ್ಸ್ ಗೆ ಸೆಟ್ ಮಾಡುತ್ತದೆ. |
05:30 | ಈ ಸಾಲು, ಅದೇ ಬೈನರಿ ನಂಬರ್ ಅನ್ನು ನಮ್ಮ ಸ್ಟೋರೆಜ್ ರಿಜಿಸ್ಟರ್ r17 ನಿಂದ PortB ಗೆ ನಕಲು ಮಾಡುತ್ತದೆ. |
05:38 | Relative jump ಸ್ಟೇಟ್ಮೆಂಟ್, ಪ್ರೋಗ್ರಾಂ ಅನ್ನು infinite ಲೂಪ್ ನಲ್ಲಿ ಎಕ್ಸಿಕ್ಯೂಟ್ ಮಾಡುತ್ತದೆ. |
05:44 | ಎಲ್.ಇ.ಡಿ ʻಆನ್ʼ ಆಗಿ ಉಳಿಯಲು, ಈ ಪ್ರೋಗ್ರಾಂ ಚಾಲನೆಯಲ್ಲಿರಬೇಕು. |
05:50 | ಕೋಡ್ ಅನ್ನು dot hyphen led.asm ಫೈಲ್ ಆಗಿ home slash spoken slash Assembly ಫೋಲ್ಡರ್ ನಲ್ಲಿ ಸೇವ್ ಮಾಡಿ. |
05:59 | ಈ ಕೋಡ್, ಈ ಟ್ಯುಟೋರಿಯಲ್ ನ Code files ಲಿಂಕ್ ನಲ್ಲಿಯೂ ಲಭ್ಯ. |
06:04 | ನೀವು ಇದನ್ನು ಡೌನ್ಲೋಡ್ ಮಾಡಿ ಬಳಸಬಹುದು. |
06:07 | terminal ಗೆ ಮರಳಿ. |
06:10 | dot hyphen led.asm ಫೈಲ್ ಸೇವ್ ಮಾಡಿರುವ ಫೋಲ್ಡರ್ ಗೆ ಹೋಗಿ. |
06:16 | avra space dot hyphen led.asm ಎಂದು ಟೈಪ್ ಮಾಡಿ Enter ಒತ್ತಿ. |
06:24 | ಇದು ಕೋಡ್ ಅನ್ನು ಸೇರಿಸುತ್ತದೆ ಮತ್ತು dot hyphen led.hex ಫೈಲ್ ಅನ್ನು ರಚಿಸುತ್ತದೆ. |
06:30 | ಅದೇ ಫೋಲ್ಡರ್ ನಲ್ಲಿ ರಚನೆಯಾಗಿರುವ dot hyphen led.hex ಫೈಲ್ ಅನ್ನು ನೋಡೋಣ. |
06:37 | ನಂತರ ನಾವು ಕೋಡ್ ಅನ್ನು ಆರ್ಡುಯಿನೊವಿಗೆ ಅಪ್ಲೋಡ್ ಮಾಡಬೇಕು. |
06:41 | terminal ಗೆ ಮರಳಿ. |
06:44 | ಇದಕ್ಕಾಗಿ ಹೀಗೆ ಟೈಪ್ ಮಾಡಿ: avrdude space hyphen p space atmega328p space hyphen c arduino space hyphen b space 115200 space hyphen capital P space forward slash dev forward slash ttyACM0 space hyphen capital U space flash colon w colon dot hyphen led dot hex. |
07:16 | ಇಲ್ಲಿ ttyACM0 ಆರ್ಡುಯಿನೊವಿನ ಪೋರ್ಟ್ ಸಂಖ್ಯೆಯನ್ನು ಪ್ರತಿನಿಧಿಸುತ್ತದೆ. |
07:22 | dot hyphen led.hex ಎನ್ನುವುದು ರಚಿಸಿದ ಫೈಲ್ ಆಗಿದೆ.
ಮತ್ತು Enter ಒತ್ತಿ. |
07:30 | ಈಗ, ಸೆವೆನ್ ಸೆಗ್ಮೆಂಟ್ ನಲ್ಲಿ Dot ಎಲ್.ಇ.ಡಿ ಮಿನುಗುತ್ತಿರುವುದನ್ನು ನಾವು ನೋಡಬಹುದು. |
07:36 | ಟ್ಯುಟೋರಿಯಲ್ ನಲ್ಲಿ ಪಾಜ್ (Pause) ಮಾಡಿ ಮತ್ತು ಕೆಳಗಿನ ಅಸೈನ್ ಮೆಂಟ್ ಪೂರ್ಣಗೊಳಿಸಿ.
Dot ಎಲ್.ಇ.ಡಿ ಯನ್ನು ಆಫ್ ಮಾಡಲು ಅದೇ ಕೋಡ್ ಅನ್ನು ಮಾರ್ಪಡಿಸಿ. |
07:44 | ನಂತರ ನಾವು ಸೆವೆನ್ ಸೆಗ್ಮೆಂಟ್ ಡಿಸ್ಪ್ಲೇಯಲ್ಲಿ ಅಂಕಿ 2ನ್ನು ಡಿಸ್ಪ್ಲೇ ಮಾಡಲಿದ್ದೇವೆ. |
07:49 | '2' ಅನ್ನು ಡಿಸ್ಪ್ಲೇ ಮಾಡಲು, a, b, d, e, g ಸೆಗ್ಮೆಂಟ್ ಗಳು ʻಹೈʼ ಆಗಿರಬೇಕು ಮತ್ತು ಇತರ ಎಲ್.ಇ.ಡಿ ಗಳು ʻಲೋʼ ಆಗಿರಬೇಕು. |
07:58 | ಸೆವೆನ್ ಸೆಗ್ಮೆಂಟ್ ಡಿಸ್ಪ್ಲೇಯ a, b, c, d, e, f ಮತ್ತು g ಪಿನ್ ಗಳನ್ನು ಆರ್ಡುಯಿನೊವಿನ 2, 3, 4, 5, 6, 7 ಮತ್ತು 8 ಪಿನ್ ಗಳಿಗೆ ಸಂಪರ್ಕಿಸಿ. |
08:10 | ಎರಡು ಕಾಮನ್ ಪಿನ್ ಗಳನ್ನು ರೆಸಿಸ್ಟರ್ ಗಳ ಮೂಲಕ ಪಾಸಿಟಿವ್ 5 ವೋಲ್ಟ್ಸ್ ಗೆ ಸಂಪರ್ಕಿಸಲಾಗಿದೆ. |
08:17 | ನಾವೀಗ ಲೈವ್ ಕನೆಕ್ಷನ್ ಸೆಟಪ್ ನೋಡೋಣ. |
08:21 | ಈ ಪ್ರೋಗ್ರಾಂ ಗೆ ಸೋರ್ಸ್ ಕೋಡ್ ನೋಡೋಣ. |
08:24 | ಯಾವುದಾದರೂ ಟೆಕ್ಸ್ಟ್ ಎಡಿಟರ್ ತೆರೆಯಿರಿ ಮತ್ತು ಈ ಕೋಡ್ ಟೈಪ್ ಮಾಡಿ. |
08:28 | ಈ ಹಿಂದೆ ನೋಡಿದಂತೆ, ನಾವು ಮೊದಲಿಗೆ ಪಿನ್ ಗಳನ್ನು ಔಟ್ಪುಟ್ ಆಗಿ ಕಾನ್ಫಿಗರ್ ಮಾಡಬೇಕು. |
08:34 | ನಂತರ ನಮ್ಮ ಅಗತ್ಯತೆಯಂತೆ ಇದನ್ನು ʻಹೈʼ ಅಥವಾ ʻಲೋʼ ಆಗಿ ಮಾಡಿ. |
08:39 | ಈ ಎರಡು ಸಾಲುಗಳು, PORT D ಯಲ್ಲಿ 2 ರಿಂದ 7 ಬಿಟ್ ಗಳನ್ನು ಔಟ್ಪುಟ್ ಆಗಿ ಮಾಡುತ್ತವೆ. |
08:45 | ಈ ಎರಡು ಸಾಲುಗಳು, PORT B ಯಲ್ಲಿ ಬಿಟ್ 0 ಅನ್ನು ಔಟ್ಪುಟ್ ಆಗಿ ಮಾಡುತ್ತದೆ. |
08:50 | ಈ ಬಿಟ್ ಗಳು, ಆರ್ಡುಯಿನೊ ದಲ್ಲಿ 2 ರಿಂದ 8 ಡಿಜಿಟಲ್ ಪಿನ್ ಗಳಿಗೆ ಹೊಂದಿಕೆಯಾಗುತ್ತವೆ. |
08:56 | ಇಲ್ಲಿ ನಾವು ಡಿಸ್ಪ್ಲೇ ಮಾಡಲು ಇಚ್ಛಿಸುವ ಸಂಖ್ಯೆಗೆ ಅನುಗುಣವಾಗಿ ಪಿನ್ ಗಳನ್ನು ʻಹೈʼ ಅಥವಾ ʻಲೋʼ ಮಾಡುತ್ತೇವೆ. |
09:04 | ನಮ್ಮ ವಿಚಾರದಲ್ಲಿ ಇದು ಅಂಕಿ ಎರಡು. |
09:07 | ನಾವಿಲ್ಲಿ ಆರ್ಡುಯಿನೊ ದಲ್ಲಿ 2 ರಿಂದ 8 ಡಿಜಿಟಲ್ ಪಿನ್ ಗಳಿಗೆ 0100100 ಬರೆಲಿದ್ದೇವೆ. |
09:16 | ಇದು, c ಮತ್ತು g ಹೊರತುಪಡಿಸಿ, SSD ಯ ಎಲ್ಲಾ ವಿಭಾಗಗಳನ್ನು ʻಲೋʼ ಮಾಡುತ್ತದೆ. |
09:22 | ಇದನ್ನು ನಾವು two.asm ಫೈಲ್ ಆಗಿ ಸೇವ್ ಮಾಡೋಣ. |
09:27 | terminal ಗೆ ಮರಳಿ. ಸ್ಕ್ರೀನ್ ಅನ್ನು ತೆರವುಗೊಳಿಸಿ. |
09:33 | avra space two.asm ಎಂದು ಟೈಪ್ ಮಾಡಿ Enter ಒತ್ತಿ. |
09:39 | ಅಪ್ಲೋಡ್ ಮಾಡಲು, ಹಿಂದಿನ ಕಮಾಂಡ್ ಪಡೆಯಲು ಅಪ್-ಆರೋ ಒತ್ತಿರಿ. |
09:44 | ಇಲ್ಲಿ ತೋರಿಸಿರುವಂತೆ ಫೈಲ್ ಹೆಸರನ್ನು ಈಗ ಬದಲಾಯಿಸಿ ಮತ್ತು Enter ಒತ್ತಿ. |
09:50 | ಸೆವೆನ್ ಸೆಗ್ಮೆಂಟ್ ನಲ್ಲಿ 2 ಅಂಕಿ ಮಿನುಗುತ್ತಿರುವುದನ್ನು ನೀವೀಗ ನೋಡಬಹುದು. |
09:56 | ಟ್ಯುಟೋರಿಯಲ್ ಅನ್ನು ಪಾಜ್ (Pause) ಮಾಡಿ ಮತ್ತು ಈ ಕೆಳಗಿನ ಅಸೈನ್ಮೆಂಟ್ ಪೂರ್ಣಗೊಳಿಸಿ. 0 ಯಿಂದ 9 ತನಕ ಯಾವುದೇ ಅಂಕಿಯನ್ನು ಡಿಸ್ಪ್ಲೇ ಮಾಡಲು ಮೇಲಿನ ಕೋಡ್ ಅನ್ನು ಮಾರ್ಪಡಿಸಿ. |
10:06 | ನಂತರ, ಸೆವೆನ್ ಸೆಗ್ಮೆಂಟ್ ಡಿಸ್ಪ್ಲೇಯಲ್ಲಿ, 5 ಸಂಖ್ಯೆಯನ್ನು ಡಿಸ್ಪ್ಲೇ ಮಾಡಲು ನಾವು Decoder ಬಳಸಲಿದ್ದೇವೆ. |
10:12 | ನಾವು 7447 IC ಬಳಸುತ್ತಿದ್ದೇವೆ. |
10:16 | ಡಿಕೋಡರ್ ನ a ಕಾಂಪ್ಲಿಮೆಂಟ್ ನಿಂದ f ಕಾಂಪ್ಲಿಮೆಂಟ್ ಪಿನ್ ಗಳು, ಸೆವೆನ್ ಸೆಗ್ಮೆಂಟ್ ಡಿಸ್ಪ್ಲೇಯ a ಯಿಂದ f ಪಿನ್ ಗಳಿಗೆ ಸಂಪರ್ಕಿಸುತ್ತವೆ. |
10:25 | ಡಿಕೋಡರ್ ನ Vcc ಮತ್ತು ಗ್ರೌಂಡ್ ಪಿನ್ ಗಳನ್ನು ಆರ್ಡುಯಿನೊವಿನ ಪಾಸಿಟಿವ್ 5 ವೋಲ್ಟ್ಸ್ ಮತ್ತು ಗ್ರೌಂಡ್ ಪಿನ್ ಗಳಿಗೆ ಸಂಪರ್ಕಿಸಲಾಗುತ್ತದೆ. |
10:33 | ಡಿಕೋಡರ್ ನ A, B, C, D ಪಿನ್ ಗಳನ್ನು ಆರ್ಡುಯಿನೊವಿನ 2, 3, 4, 5 ಪಿನ್ ಗಳಿಗೆ ಸಂಪರ್ಕಿಸಿ. |
10:40 | ಈ ಡಿಕೋಡರ್, ಕಾಮನ್ ಆನೋಡ್ ಸೆವೆನ್ ಸೆಗ್ಮೆಂಟ್ ಡಿಸ್ಪ್ಲೇ ಜೊತೆ ಮಾತ್ರ ಹೊಂದಬಲ್ಲದು ಎಂಬುದನ್ನು ಗಮನಿಸಿ. |
10:47 | ನಾವೀಗ ಲೈವ್ ಕನೆಕ್ಷನ್ ಸೆಟಪ್ ಅನ್ನು ನೋಡೋಣ. |
10:51 | A, B, C ಮತ್ತು D ಗಳು ಡಿಕೋಡರ್ ನ ಇನ್ಪುಟ್ ಪಿನ್ ಗಳಾಗಿವೆ. |
10:56 | A ಯು ಲೋವೆಸ್ಟ್ ಸಿಗ್ನಿಫಿಕೆಂಟ್ ಬಿಟ್ (LSB) ಮತ್ತು D ಯು ಮೋಸ್ಟ್ ಸಿಗ್ನಿಫಿಕೆಂಟ್ ಬಿಟ್ (MSB) ಆಗಿದೆ. |
11:02 | ಉದಾಹರಣೆಗೆ, A, B, C ಮತ್ತು D ಇನ್ಪುಟ್ ಗಳನ್ನು ಇಲ್ಲಿ ತೋರಿಸಿದಾಗ 5 ಸಂಖ್ಯೆಯು ಡಿಸ್ಪ್ಲೇಯಲ್ಲಿ ಗೋಚರಿಸುತ್ತದೆ. |
11:10 | ಈ ಪ್ರೋಗ್ರಾಂಗೆ ಸೋರ್ಸ್ ಕೋಡ್ ಅನ್ನು ನೋಡೋಣ. |
11:13 | ಯಾವುದೇ ಟೆಕ್ಸ್ಟ್ ಎಡಿಟರ್ ತೆರೆಯಿರಿ ಮತ್ತು ಈ ಕೋಡ್ ಅನ್ನು ಟೈಪ್ ಮಾಡಿ. |
11:17 | ಮೊದಲ ಎರಡು ಸಾಲುಗಳು, PORT D ಯಲ್ಲಿ 2 ರಿಂದ 5 ಬಿಟ್ ಗಳನ್ನು ಔಟ್ಪುಟ್ ಆಗಿ ಮಾಡುತ್ತವೆ. |
11:23 | ಅಂದರೆ ನಾವು ಆರ್ಡುಯಿನೊ ದಲ್ಲಿ 2 ರಿಂದ 5 ರ ವರೆಗಿನ ಡಿಜಿಟಲ್ ಪಿನ್ ಗಳನ್ನು ಔಟ್ಪುಟ್ ಪಿನ್ ಗಳಾಗಿ ಮಾಡುತ್ತೇವೆ. |
11:29 | ಆರ್ಡುಯಿನೊವಿನ 2 ರಿಂದ 5 ರ ವರೆಗಿನ ಪಿನ್ ಗಳು ಡಿಕೋಡರ್ ನ A, B, C, D ಪಿನ್ ಗಳಿಗೆ ಸಂಪರ್ಕ ಹೊಂದಿವೆ. |
11:36 | ನಂತರದ ಎರಡು ಸಾಲುಗಳು ಡಿಕೋಡರ್ ಇನ್ಪುಟ್ ಗೆ 0101 ಇನ್ಪುಟ್ ನೀಡುತ್ತವೆ. |
11:43 | ನಂತರ ಇದನ್ನು ಸೆವೆನ್ ಸೆಗ್ಮೆಂಟ್ ಡಿಸ್ಪ್ಲೇಯಲ್ಲಿ 5 ಆಗಿ ಡಿಕೋಡ್ ಮಾಡಲಾಗುತ್ತದೆ. |
11:48 | ಇದನ್ನು decoder.asm ಫೈಲ್ ಆಗಿ ಸೇವ್ ಮಾಡಿ. |
11:52 | terminal ಗೆ ಮರಳಿ. |
11:55 | avra space decoder.asm ಎಂದು ಟೈಪ್ ಮಾಡಿ Enter ಒತ್ತಿ. |
12:02 | ಅಪ್ಲೋಡ್ ಮಾಡಲು, ಹಿಂದಿನ ಕಮಾಂಡ್ ಪಡೆಯಲು ಅಪ್-ಆರೋ ಒತ್ತಿ. |
12:07 | ಈಗ, ಇಲ್ಲಿ ತೋರಿಸಿರುವಂತೆ ಫೈಲ್ ಹೆಸರನ್ನು ಬದಲಾಯಿಸಿ ಮತ್ತು Enter ಒತ್ತಿ. |
12:13 | ಈಗ, ಸೆವೆನ್ ಸೆಗ್ಮೆಂಟ್ ನಲ್ಲಿ ಅಂಕಿ ಐದು (5) ಮಿನುಗುತ್ತಿರುವುದನ್ನು ನಾವು ನೋಡಬಹುದು. |
12:19 | ಇದರೊಂದಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ತಲುಪಿದ್ದೇವೆ. ನಾವೀಗ ಸಂಕ್ಷೇಪಿಸೋಣ. |
12:24 | ಈ ಟ್ಯುಟೋರಿಯಲ್ ನಲ್ಲಿ ನಾವು: ಆರ್ಡುಯಿನೊ ಬೋರ್ಡ್ ಗೆ ಸೆವೆನ್ ಸೆಗ್ಮೆಂಟ್ ಡಿಸ್ಪ್ಲೇಯನ್ನು ಇಂಟರ್ಫೇಸ್ ಮಾಡಲು, |
12:31 | ಸೆವೆನ್ ಸೆಗ್ಮೆಂಟ್ ಡಿಸ್ಪ್ಲೇಯಲ್ಲಿ ಅಂಕಿಯನ್ನು ಡಿಸ್ಪ್ಲೇ ಮಾಡಲು assembly ಪ್ರೋಗ್ರಾಂ ಬರೆಯಲು |
12:36 | ಮತ್ತು 7447 IC ಬಳಸಿ ಸೆವೆನ್ ಸೆಗ್ಮೆಂಟ್ ಡಿಸ್ಪ್ಲೇಯಲ್ಲಿ ಅಂಕಿಯನ್ನು ಡಿಸ್ಪ್ಲೇ ಮಾಡಲು ಕಲಿತೆವು. |
12:42 | ಈ ಕೆಳಗಿನ ಲಿಂಕ್ ನಲ್ಲಿ ಇರುವ ವೀಡಿಯೊ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಅನ್ನು ಸಂಕ್ಷೇಪಿಸುತ್ತದೆ. ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ಮತ್ತು ವೀಕ್ಷಿಸಿ. |
12:50 | ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡವು ಕಾರ್ಯಾಗಾರಗಳನ್ನು ನಡೆಸುತ್ತದೆ ಮತ್ತು ಪ್ರಮಾಣಪತ್ರಗಳನ್ನು ನೀಡುತ್ತದೆ. ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ನಮಗೆ ಬರೆಯಿರಿ. |
12:58 | ನಿಮ್ಮ ಟೈಮ್ಡ್ ಕ್ವೆರಿಯನ್ನು ಈ ಫೋರಂ ನಲ್ಲಿ ಪೋಸ್ಟ್ ಮಾಡಿ. |
13:02 | ‘ಸ್ಪೋಕನ್ ಟ್ಯುಟೋರಿಯಲ್’ ಪ್ರೊಜೆಕ್ಟ್, MHRD, ಭಾರತ ಸರ್ಕಾರದ ನೆರವು ಪಡೆದಿದೆ.
ಈ ಮಿಷನ್ ಕುರಿತು ಹೆಚ್ಚಿನ ಮಾಹಿತಿ ಈ ಲಿಂಕ್ ನಲ್ಲಿ ಲಭ್ಯ. |
13.12 | ಈ ಸ್ಕ್ರಿಪ್ಟ್ ನ ಅನುವಾದಕರು ಮಂಗಳೂರಿನಿಂದ ಮೆಲ್ವಿನ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.
ಧನ್ಯವಾದಗಳು. |