Arduino/C2/Seven-Segment-Display/Kannada
| Time | Narration |
| 00:01 | Seven Segment Display ಕುರಿತ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ. |
| 00:06 | ಈ ಟ್ಯುಟೋರಿಯಲ್ ನಲ್ಲಿ ನಾವು:
ಸೆವೆನ್ ಸೆಗ್ಮೆಂಟ್ ಡಿಸ್ಪ್ಲೇಯನ್ನು ಆರ್ಡುಯಿನೊ ಬೋರ್ಡ್ ಗೆ ಸಂಪರ್ಕಿಸಲು ಮತ್ತು ಸೆವೆನ್ ಸೆಗ್ಮೆಂಟ್ ಡಿಸ್ಪ್ಲೇಯಲ್ಲಿ 0 ಯಿಂದ 4ರ ತನಕ ಅಂಕಿಗಳನ್ನು ಡಿಸ್ಪ್ಲೇ ಮಾಡಲು ಪ್ರೋಗ್ರಾಂ ಬರೆಯಲು ಕಲಿಯಲಿದ್ದೇವೆ. |
| 00:24 | ಈ ಟ್ಯುಟೋರಿಯಲ್ ಅನುಸರಿಸಲು, ನೀವು ಎಲೆಕ್ಟ್ರಾನಿಕ್ಸ್ ಮತ್ತು C ಅಥವಾ C++ ಪ್ರೋಗ್ರಾಮಿಂಗ್ ಲ್ಯಾಂಗ್ವೇಜ್ ನ ಮೂಲಭೂತ ಜ್ಞಾನ ಹೊಂದಿರಬೇಕು. |
| 00:37 | ಈ ಟ್ಯುಟೋರಿಯಲ್ ರೆಕಾರ್ಡ್ ಮಾಡಲು ನಾನು:
ಆರ್ಡುಯಿನೊ ಯು.ಎನ್.ಒ ಬೋರ್ಡ್, ಉಬಂಟು ಲೀನಕ್ಸ್ ಅಪರೇಟಿಂಗ್ ಸಿಸ್ಟಂ 14.04 ಮತ್ತು Arduino IDE ಬಳಸುತ್ತಿದ್ದೇನೆ. |
| 00:52 | ನಮಗೆ ಈ ಕೆಳಗಿನ ಬಾಹ್ಯ ಉಪಕರಣಗಳು ಬೇಕು:
ಸೆವೆನ್ ಸೆಗ್ಮೆಂಟ್ ಡಿಸ್ಪ್ಲೇ, 220 ohm ರೆಸಿಸ್ಟರ್, ಬ್ರೆಡ್-ಬೋರ್ಡ್ ಮತ್ತು ಜಂಪರ್ ವೈರ್ ಗಳು. |
| 01:08 | ಸೆವೆನ್ ಸೆಗ್ಮೆಂಟ್ ಡಿಸ್ಪ್ಲೇಯು ಎಂಟರ ಅಂಕಿಯ ಆಕಾರದಲ್ಲಿ ವ್ಯವಸ್ಥೆಗೊಳಿಸಲಾದ ಏಳು ಎಲ್.ಇ.ಡಿ ಗಳನ್ನು ಹೊಂದಿದೆ. |
| 01:17 | ಒಟ್ಟು ಎರಡು ರೀತಿಯ ಡಿಸ್ಪ್ಲೇಗಳಿವೆ:
ಕಾಮನ್ ಆನೋಡ್ ಮತ್ತು ಕಾಮನ್ ಕ್ಯಾಥೋಡ್ ಸೆವೆನ್ ಸೆಗ್ಮೆಂಟ್ ಡಿಸ್ಪ್ಲೇ. |
| 01:27 | ಕಾಮನ್ ಕ್ಯಾಥೋಡ್ ಸೆವೆನ್ ಸೆಗ್ಮೆಂಟ್ ಡಿಸ್ಪ್ಲೇಯಲ್ಲಿ a, b, c, d, e, f, g ಮತ್ತು dot ಪಿನ್ ಗಳನ್ನು +5V ಗೆ ಸಂಪರ್ಕಿಸಬೇಕು. |
| 01:43 | COM ಪಿನ್ ಗಳನ್ನು ಗ್ರೌಂಡ್ (GND) ಗೆ ಸಂಪರ್ಕಿಸಬೇಕು. |
| 01:49 | ಕಾಮನ್ ಆನೋಡ್ ಸೆವೆನ್ ಸೆಗ್ಮೆಂಟ್ ಡಿಸ್ಪ್ಲೇಯು ಇದಕ್ಕೆ ತದ್ವಿರುದ್ಧವಾಗಿದೆ. |
| 01:55 | ಇಲ್ಲಿ, a, b, c, d, e, f, g ಮತ್ತು dot ಪಿನ್ ಗಳನ್ನು GND ಗೆ ಮತ್ತು ಎರಡು COM ಪಿನ್ ಗಳನ್ನು +5V ಗೆ ಸಂಪರ್ಕಿಸಬೇಕು. |
| 02:12 | ಈಗ, ನಾವು ಕನೆಕ್ಷನ್ ಸರ್ಕಿಟ್ ವಿವರಗಳನ್ನು ನೋಡೋಣ. |
| 02:17 | ಈ ಪ್ರಯೋಗದಲ್ಲಿ, ನಾವು ಕಾಮನ್ ಕ್ಯಾಥೋಡ್ ಸೆವೆನ್ ಸೆಗ್ಮೆಂಟ್ ಡಿಸ್ಪ್ಲೇಯನ್ನು ಬಳಸುತ್ತೇವೆ. |
| 02:24 | ಸೆವೆನ್ ಸೆಗ್ಮೆಂಟ್ ಡಿಸ್ಪ್ಲೇಯ a, b, c, d, e, f ಮತ್ತು g ಪಿನ್ ಗಳನ್ನು ಆರ್ಡುಯಿನೊವಿನ 2, 3, 4, 5, 6, 8 ಮತ್ತು 9 ಪಿನ್ ಗಳಿಗೆ ಸಂಪರ್ಕಿಸಬೇಕು. |
| 02:40 | ನಾವು ಪಿನ್ 7ಕ್ಕೆ ಸಂಪರ್ಕಿಸಿಲ್ಲ ಎಂಬುದನ್ನು ಗಮನಿಸಿ. |
| 02:45 | ಎರಡು ಕಾಮನ್ (COM) ಪಿನ್ ಗಳನ್ನು ರೆಸಿಸ್ಟರ್ ಗಳ ಮೂಲಕ ಗ್ರೌಂಡ್ ಗೆ ಸಂಪರ್ಕಿಸಲಾಗಿದೆ.
ಇದನ್ನು ಇಲ್ಲಿ ಕಪ್ಪು ಬಣ್ಣದ ತಂತಿಯಲ್ಲಿ ತೋರಿಸಲಾಗಿದೆ. |
| 02:56 | ರೆಸಿಸ್ಟರ್ ಮೌಲ್ಯವು 220 ohms ಗಿಂತ ಜಾಸ್ತಿ ಇರಬೇಕು.
Dot ಅನ್ನು ಸಂಪರ್ಕಿಸಿಲ್ಲ. ಏಕೆಂದರೆ ಇದನ್ನು ಈ ಪ್ರಯೋಗದಲ್ಲಿ ಬಳಸಲಾಗುವುದಿಲ್ಲ. |
| 03:08 | ಇದು ಡಯಾಗ್ರಾಂನಲ್ಲಿ ತೋರಿಸಿದಂತೆ, ಸಂಪರ್ಕದ ಲೈವ್ ಸೆಟಪ್ ಆಗಿದೆ. |
| 03:15 | ನಾವೀಗ Arduino IDE ಯಲ್ಲಿ ಪ್ರೋಗ್ರಾಂ ಅನ್ನು ಬರೆಯಲಿದ್ದೇವೆ. ಹೀಗಾಗಿ ನಾವು Arduino IDE ಗೆ ಸಾಗೋಣ. |
| 03:24 | ಮೊದಲಿಗೆ ನಾವು ಸೆವೆನ್ ಸೆಗ್ಮೆಂಟ್ ಡಿಸ್ಪ್ಲೇಯಲ್ಲಿ ಎಲ್.ಇ.ಡಿ ಗಳನ್ನು ಮಿನುಗಿಸಲು ಪ್ರೋಗ್ರಾಂ ಬರೆಯಲಿದ್ದೇವೆ. |
| 03:31 | ಇಲ್ಲಿರುವಂತೆ ಕೋಡ್ ಅನ್ನು ಟೈಪ್ ಮಾಡಿ. |
| 03:34 | ನಾವು ಆರ್ಡುಯಿನೊ ಪಿನ್ ಗಳಿಗೆ ಸೆಗ್ಮೆಂಟ್ ಹೆಸರನ್ನು ಅಸೈನ್ ಮಾಡಿದ್ದೇವೆ. |
| 03:39 | ಯಾವ ಆರ್ಡುಯಿನೊ ಪಿನ್ ಗಳನ್ನು ಡಿಸ್ಪ್ಲೇಯ ಸೆಗ್ಮೆಂಟ್ ಗಳಿಗೆ ಸಂಪರ್ಕಿಸಲಾಗಿದೆ ಎಂದು ನೆನಪಿಡಲು ಇವು ಸಹಕರಿಸುತ್ತವೆ. |
| 03:47 | ನಿಮ್ಮ ಅನುಕೂಲಕ್ಕೆ ಈ ಕೋಡ್, code file ಲಿಂಕ್ ನಲ್ಲಿ ಲಭ್ಯ. ಇದನ್ನು ನೀವು ಡೌನ್ಲೋಡ್ ಮಾಡಿ ಬಳಸಬಹುದು. |
| 03:57 | void setup() ಫಂಕ್ಷನ್ ನಲ್ಲಿ, ಪಿನ್ ಅನ್ನು ಔಟ್ಪುಟ್ ಮೋಡ್ ಗೆ ಕಾನ್ಫಿಗರ್ ಮಾಡಲು ನಾವು pinMode ಫಂಕ್ಷನ್ ಬಳಸಲಿದ್ದೇವೆ. |
| 04:07 | ನಾವೀಗ void loop() ಗೆ ಕೋಡ್ ಬರೆಯಲಿದ್ದೇವೆ.
void loop() ಫಂಕ್ಷನ್, ಸೆವೆನ್ ಸೆಗ್ಮೆಂಟ್ ಡಿಸ್ಪ್ಲೇಯ ಎಲ್.ಇ.ಡಿ ಯನ್ನು ಮಿನುಗಿಸಲಿದೆ. |
| 04:18 | ಈ ಕೋಡ್, ಮತ್ತು ಹಿಂದಿನ ಟ್ಯುಟೋರಿಯಲ್ ನ ಕೋಡ್ ಒಂದೇ ಆಗಿವೆ. |
| 04:23 | ನಾವೀಗ ಪ್ರೋಗ್ರಾಂ ಅನ್ನು ಕಂಪೈಲ್ ಮತ್ತು ಅಪ್ಲೋಡ್ ಮಾಡಲಿದ್ದೇವೆ. |
| 04:27 | ಸೆವೆನ್ ಸೆಗ್ಮೆಂಟ್ ನಲ್ಲಿ ಎಲ್ಲಾ ಎಲ್.ಇ.ಡಿ ಗಳು ಪ್ರಕಾಶಿಸುತ್ತಿರುವುದನ್ನು ನಾವು ನೋಡಬಹುದು. |
| 04:35 | ನಂತರ, ಕೆಲವು ಅಂಕಿಗಳನ್ನು ಪ್ರದರ್ಶಿಸಲು ನಾವು ಪ್ರೋಗ್ರಾಂ ಅನ್ನು ಮಾರ್ಪಡಿಸಲಿದ್ದೇವೆ. |
| 04:41 | ನಾವು ಸೊನ್ನೆ ಅಂಕಿಯನ್ನು ಪ್ರದರ್ಶಿಸಬೇಕು ಎಂದುಕೊಳ್ಳೋಣ. |
| 04:46 | 'g' ಸೆಗ್ಮೆಂಟ್ ನ ಎಲ್.ಇ.ಡಿ ಗಳು ʻಲೋʼ ಆಗಿರಬೇಕು ಮತ್ತು ಎಲ್ಲಾ ಇತರ ಎಲ್.ಇ.ಡಿ ಸೆಗ್ಮೆಂಟ್ ಗಳು ʻಹೈʼ ಆಗಿರಬೇಕು. |
| 04:54 | ʻ1ʼ ನ್ನು ಡಿಸ್ಪ್ಲೇ ಮಾಡಲು, b ಮತ್ತು c ಸೆಗ್ಮೆಂಟ್ ಗಳು ʻಹೈʼ ಆಗಿರಬೇಕು ಮತ್ತು ಇತರ ಎಲ್.ಇ.ಡಿ ಗಳು ʻಲೋʼ ಆಗಿರಬೇಕು.
ಇದೇ ರೀತಿ ನಾವು ಎಲ್ಲಾ ಇತರ ಅಂಕಿಗಳಿಗೆ ಕೋಡ್ ಬರೆಯಬಹುದು. |
| 05:10 | ನಾವೀಗ Arduino IDE ಗೆ ಮರಳೋಣ. |
| 05:14 | ಇಲ್ಲಿ ತೋರಿಸಿರುವಂತೆ void loop() ಫಂಕ್ಷನ್ ನಲ್ಲಿ ಕೋಡ್ ಅನ್ನು ಬದಲಾಯಿಸಿ.
0, 1, 2, 3 ಮತ್ತು 4 ಅಂಕಿಗಳನ್ನು ಡಿಸ್ಪ್ಲೇ ಮಾಡಲು ನಾನು ಕೋಡ್ ಅನ್ನು ಬರೆದಿದ್ದೇನೆ. |
| 05:31 | ನಾವೀಗ ಪ್ರೋಗ್ರಾಂ ಅನ್ನು ಕಂಪೈಲ್ ಮತ್ತು ಅಪ್ಲೋಡ್ ಮಾಡೋಣ. |
| 05:35 | ಒಂದು ಸೆಕೆಂಡಿನ ಅಂತರದ ವಿಳಂಬದೊಂದಿಗೆ 0 ಯಿಂದ 4ರ ವರೆಗಿನ ಅಂಕಿಗಳು ಡಿಸ್ಪ್ಲೇ ಆಗುತ್ತಿರುವುದನ್ನು ನೀವು ನೋಡಬಹುದು. |
| 05:45 | ಇದರೊಂದಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ತಲುಪಿದ್ದೇವೆ. ನಾವೀಗ ಸಂಕ್ಷೇಪಿಸೋಣ. |
| 05:52 | ಈ ಟ್ಯುಟೋರಿಯಲ್ ನಲ್ಲಿ ನಾವು:
ಆರ್ಡುಯಿನೊ ಬೋರ್ಡ್ ಗೆ ಸೆವೆನ್ ಸೆಗ್ಮೆಂಟ್ ಡಿಸ್ಪ್ಲೇಯನ್ನು ಸಂಪರ್ಕಿಸಲು ಮತ್ತು ಸೆವೆನ್ ಸೆಗ್ಮೆಂಟ್ ಡಿಸ್ಪ್ಲೇಯಲ್ಲಿ 0 ಯಿಂದ 4ರ ವರೆಗಿನ ಅಂಕಿಗಳನ್ನು ಡಿಸ್ಪ್ಲೇ ಮಾಡಲು ಪ್ರೋಗ್ರಾಂ ಬರೆಯಲು ಕಲಿತೆವು. |
| 06:07 | ಈ ಕೆಳಗಿನ ಅಸೈನ್ಮೆಂಟ್ ಪೂರ್ಣಗೊಳಿಸಲು ಪ್ರಯತ್ನಿಸಿ.
5, 6, 7, 8 ಮತ್ತು 9 ಅಂಕಿಗಳನ್ನು ಡಿಸ್ಪ್ಲೇ ಮಾಡಲು ಇದೇ ಪ್ರೋಗ್ರಾಂ ಅನ್ನು ಬದಲಾಯಿಸಿ. ಪ್ರೋಗ್ರಾಂ ಅನ್ನು ಕಂಪೈಲ್ ಮತ್ತು ಅಪ್ಲೋಡ್ ಮಾಡಿ ಮತ್ತು ಸೆವೆನ್ ಸೆಗ್ಮೆಂಟ್ ಡಿಸ್ಪ್ಲೇಯಲ್ಲಿ ಅಂಕಿಗಳು ಡಿಸ್ಪ್ಲೇ ಆಗುವುದನ್ನು ಗಮನಿಸಿ. |
| 06:27 | ಈ ಕೆಳಗಿನ ಲಿಂಕ್ ನಲ್ಲಿ ಇರುವ ವೀಡಿಯೊ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಅನ್ನು ವಿವರಿಸುತ್ತದೆ. ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ಮತ್ತು ವೀಕ್ಷಿಸಿ. |
| 06:35 | ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡವು ಕಾರ್ಯಾಗಾರಗಳನ್ನು ನಡೆಸುತ್ತದೆ ಮತ್ತು ಪ್ರಮಾಣಪತ್ರಗಳನ್ನು ನೀಡುತ್ತದೆ. ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ನಮಗೆ ಬರೆಯಿರಿ. |
| 06:44 | ನಿಮ್ಮ ಟೈಮ್ಡ್ ಕ್ವೆರಿಯನ್ನು ಈ ಫೋರಂ ನಲ್ಲಿ ಪೋಸ್ಟ್ ಮಾಡಿ. |
| 06:48 | ‘ಸ್ಪೋಕನ್ ಟ್ಯುಟೋರಿಯಲ್’ ಪ್ರೊಜೆಕ್ಟ್, NMEICT, MHRD, ಭಾರತ ಸರ್ಕಾರದ ನೆರವು ಪಡೆದಿದೆ.
ಈ ಲಿಂಕ್ ನಲ್ಲಿ ಈ ಮಿಶನ್ ಕುರಿತ ಹೆಚ್ಚಿನ ಮಾಹಿತಿ ಲಭ್ಯ. |
| 07.00 | ಈ ಸ್ಕ್ರಿಪ್ಟ್ ನ ಅನುವಾದಕರು ಮಂಗಳೂರಿನಿಂದ ಮೆಲ್ವಿನ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.
ಧನ್ಯವಾದಗಳು. |