Advanced-Cpp/C2/Static-Members/Kannada
From Script | Spoken-Tutorial
Time | Narration |
00:01 | C++ ನಲ್ಲಿಯ static members (ಸ್ಟ್ಯಾಟಿಕ್ ಮೆಂಬರ್ಸ್) ಎನ್ನುವುದರ ಕುರಿತು ಇರುವ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ. |
00:06 | ಈ ಟ್ಯುಟೋರಿಯಲ್ ನಲ್ಲಿ, |
00:09 | Static ಎನ್ನುವ ಕೀವರ್ಡ್, ಸ್ಟ್ಯಾಟಿಕ್ ವೇರಿಯಬಲ್, |
00:12 | ಸ್ಟ್ಯಾಟಿಕ್ ಫಂಕ್ಶನ್ ಇವುಗಳನ್ನು ನಾವು ಕಲಿಯುವೆವು, |
00:14 | ನಾವು ಇದನ್ನು ಒಂದು ಉದಾಹರಣೆಯ ಮೂಲಕ ಮಾಡುವೆವು. |
00:17 | ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, |
00:20 | Ubuntu ಎನ್ನುವ ಆಪರೇಟಿಂಗ್ ಸಿಸ್ಟಮ್, ವರ್ಷನ್ 11.10, |
00:24 | g++ ಕಂಪೈಲರ್, ವರ್ಷನ್ 4.6.1 ಗಳನ್ನು ನಾನು ಬಳಸುತ್ತಿದ್ದೇನೆ. |
00:29 | ನಾವು static ಎನ್ನುವುದರ ಪರಿಚಯದೊಂದಿಗೆ ಆರಂಭಿಸೋಣ. |
00:33 | ಮೊದಲನೆಯ ಒಬ್ಜೆಕ್ಟ್ ಅನ್ನು ಕ್ರಿಯೇಟ್ ಮಾಡುವ ಮುನ್ನ ಸ್ಟ್ಯಾಟಿಕ್ ವೇರಿಯಬಲ್ಸ್ ಗಳನ್ನು ಸೊನ್ನೆಯಿಂದ ಆರಂಭಿಸಲಾಗುತ್ತದೆ. |
00:39 | ಇಡೀ ಪ್ರೊಗ್ರಾಂಗಾಗಿ ಸ್ಟ್ಯಾಟಿಕ್ ವೇರಿಯಬಲ್ ನ ಒಂದೇ ಒಂದು ಪ್ರತಿ ಇರುತ್ತದೆ. |
00:44 | ಎಲ್ಲ ಒಬ್ಜೆಕ್ಟ್ ಗಳು ಅದೇ ವೇರಿಯಬಲ್ ಅನ್ನು ಹಂಚಿಕೊಳ್ಳುತ್ತವೆ. |
00:47 | ಇದು ಪ್ರೊಗ್ರಾಂನ ಕೊನೆಯವರೆಗೆ ಮೆಮೊರಿಯಲ್ಲಿ ಉಳಿಯುವುದು. |
00:52 | ಸ್ಟ್ಯಾಟಿಕ್ ಫಂಕ್ಶನ್ಸ್: |
00:54 | ಸ್ಟ್ಯಾಟಿಕ್ ಫಂಕ್ಶನ್ ಎನ್ನುವುದು, ಯಾವುದೇ ಒಬ್ಜೆಕ್ಟ್ ನ ಮೇಲೆ ಅವಲಂಬಿಸದೆ ತನ್ನಿಂದ ತಾನೇ ಕಾಲ್ ಮಾಡಲ್ಪಡಬಹುದು. |
01:00 | ಸ್ಟ್ಯಾಟಿಕ್ ಫಂಕ್ಶನ್ ಅನ್ನು ಆಕ್ಸೆಸ್ ಮಾಡಲು ನಾವು, |
01:03 | classname :: (ಸ್ಕೋಪ್ ರೆಸಲ್ಯೂಶನ್ ಆಪರೇಟರ್) ಮತ್ತು staticfunction(); ಇದನ್ನು ಬಳಸುತ್ತೇವೆ, |
01:09 | ನಾವು ಸ್ಟ್ಯಾಟಿಕ್ ಮೆಂಬರ್ಸ್ ಎನ್ನುವುದರ ಒಂದು ಉದಾಹರಣೆಯನ್ನು ನೋಡೋಣ. |
01:13 | ನಾನು ಕೋಡನ್ನು ಈಗಾಗಲೇ ಎಡಿಟರ್ನಲ್ಲಿ ಟೈಪ್ ಮಾಡಿದ್ದೇನೆ. |
01:17 | ನಮ್ಮ ಫೈಲ್ ನೇಮ್ ‘static ಡಾಟ್ cpp’ ಆಗಿದೆ ಎನ್ನುವುದನ್ನು ಗಮನಿಸಿರಿ. |
01:21 | ನಾನು ಕೋಡ್ ಅನ್ನು ಈಗ ವಿವರಿಸುತ್ತೇನೆ. |
01:24 | ಇದು iostream ಎನ್ನುವ ನಮ್ಮ ಹೆಡರ್ ಫೈಲ್ ಆಗಿದೆ. |
01:27 | ಇಲ್ಲಿ ನಾವು std namespace ಎನ್ನುವುದನ್ನು ಉಪಯೋಗಿಸುತ್ತಿದ್ದೇವೆ. |
01:31 | ಆಮೇಲೆ ನಾವು statex ಎನ್ನುವ class ಅನ್ನು ಹೊಂದಿದ್ದೇವೆ. |
01:34 | ಇದರಲ್ಲಿ, x ಎನ್ನುವ ಒಂದು ನೋನ್-ಸ್ಟಾಟಿಕ್ ವೇರಿಯಬಲ್, ಪ್ರೈವೇಟ್ ಎಂದು ಡಿಕ್ಲೇರ್ ಮಾಡಲ್ಪಟ್ಟಿದೆ. |
01:40 | ಆಮೇಲೆ ಪಬ್ಲಿಕ್ ಎಂದು ಡಿಕ್ಲೇರ್ ಮಾಡಲ್ಪಟ್ಟ, sum ಎನ್ನುವ ಸ್ಟಾಟಿಕ್ ವೇರಿಯಬಲ್ ಒಂದನ್ನು ನಾವು ಹೊಂದಿದ್ದೇವೆ. |
01:45 | ಇದು statex ಎನ್ನುವ ನಮ್ಮ ಕನ್ಸ್ಟ್ರಕ್ಟರ್ ಆಗಿದೆ. |
01:48 | ಇದರಲ್ಲಿ, ನಾವು sum ಎನ್ನುವುದನ್ನು ಹೆಚ್ಚಿಸಿದ್ದೇವೆ. |
01:52 | ನಂತರ sum ನ ವ್ಯಾಲ್ಯುವನ್ನು ‘x’ ಎನ್ನುವದರಲ್ಲಿ ಸ್ಟೋರ್ ಮಾಡಿದ್ದೇವೆ. |
01:55 | ಇಲ್ಲಿ stat ಎನ್ನುವ ಸ್ಟಾಟಿಕ್ ಫಂಕ್ಶನ್ ಒಂದನ್ನು ನಾವು ಹೊಂದಿದ್ದೇವೆ. |
01:58 | ಇದರಲ್ಲಿ ನಾವು sum ಎನ್ನುವುದನ್ನು ಪ್ರಿಂಟ್ ಮಾಡುತ್ತೇವೆ. |
02:01 | ನಂತರ, number ಎನ್ನುವ ಫಂಕ್ಶನ್ ಅನ್ನು ನಾವು ಹೊಂದಿದ್ದೇವೆ. |
02:04 | ಇಲ್ಲಿ ನಾವು x ಎನ್ನುವ ಸಂಖ್ಯೆಯನ್ನು ಪ್ರಿಂಟ್ ಮಾಡುತ್ತೇವೆ. |
02:07 | ಕ್ಲಾಸ್ ಎನ್ನುವುದನ್ನು ಇಲ್ಲಿ ಕ್ಲೋಸ್ ಮಾಡಲಾಗಿದೆ. |
02:10 | ಸ್ಟಾಟಿಕ್ ವೇರಿಯಬಲ್ ಅನ್ನು ಗ್ಲೋಬಲ್ ಆಗಿ ಡಿಕ್ಲೇರ್ ಮಾಡಲು ನಾವು ‘ಸ್ಕೋಪ್ ರೆಸಲ್ಯೂಶನ್ ಆಪರೇಟರ’ ಎನ್ನುವುದನ್ನು ಬಳಸುತ್ತೇವೆ. |
02:15 | ಸ್ಟಾಟಿಕ್ ವೇರಿಯಬಲ್ ಅನ್ನು ಆಕ್ಸೆಸ್ ಮಾಡಲು ನಾವು, |
02:19 | 'ಡೇಟಾಟೈಪ್ ಕ್ಲಾಸ್ನೇಮ್ ಸ್ಕೋಪ್ ರೆಸಲ್ಯೂಶನ್ ಆಪರೇಟರ್ ಮತ್ತು ಸ್ಟಾಟಿಕ್ ವೇರಿಯಬಲ್ ನೇಮ್' ಇವುಗಳನ್ನು ಬರೆಯುತ್ತೇವೆ. |
02:26 | ಈಗ ಸ್ಟೋರೇಜ್, sum ಎನ್ನುವ ವೇರಿಯಬಲ್ ಗೆ ಅಲ್ಲೋಕೇಟ್ ಆಗಿದೆ. |
02:31 | ಇದನ್ನು 0 ಯಿಂದ ಆರಂಭಿಸಲಾಗಿದೆ. |
02:33 | ಇದು ನಮ್ಮ main ಎನ್ನುವ ಫಂಕ್ಶನ್ ಆಗಿದೆ. |
02:35 | ಇಲ್ಲಿ ನಾವು statex ಎನ್ನುವ ಕ್ಲಾಸ್ ನ ಒಬ್ಜೆಕ್ಟ್ ಗಳನ್ನು ಕ್ರಿಯೇಟ್ ಮಾಡುತ್ತೇವೆ. |
02:39 | 'o1', 'o2' ಮತ್ತು 'o3'ಎಂದು. |
02:42 | ಆಮೇಲೆ 'o1', 'o2' ಮತ್ತು 'o3' ಎನ್ನುವ ಒಬ್ಜೆಕ್ಟ್ ಗಳನ್ನು ಬಳಸಿಕೊಂಡು ನಾವು number ಎನ್ನುವ ಫಂಕ್ಶನ್ ಅನ್ನು ಕಾಲ್ ಮಾಡುತ್ತೇವೆ. |
02:49 | stat ಎನ್ನುವ ಸ್ಟಾಟಿಕ್ ಫಂಕ್ಶನ್ ಅನ್ನು |
02:52 | ಕ್ಲಾಸ್ ನೇಮ್ ಮತ್ತು ಸ್ಕೋಪ್ ರೆಸಲ್ಯೂಶನ್ ಆಪರೇಟರ್ ಗಳನ್ನು ಬಳಸಿಕೊಂಡು ಇಲ್ಲಿ ಆಕ್ಸೆಸ್ ಮಾಡಲಾಗಿದೆ. |
02:56 | ಇಲ್ಲಿ ನಾವು sum ಎನ್ನುವ ಸ್ಟಾಟಿಕ್ ವೇರಿಯಬಲ್ ಅನ್ನು ಪ್ರಿಂಟ್ ಮಾಡುತ್ತೇವೆ. |
03:00 | ಮತ್ತು ಇದು ನಮ್ಮ return ಸ್ಟೇಟಮೆಂಟ್ ಆಗಿದೆ. |
03:03 | ಈಗ ನಾವು ಪ್ರೊಗ್ರಾಮನ್ನು ಎಕ್ಸಿಕ್ಯೂಟ್ ಮಾಡೋಣ. |
03:05 | ನಿಮ್ಮ ಕೀಬೋರ್ಡ್ ಮೇಲಿನ Ctrl, Alt and T ಎನ್ನುವ ಕೀಗಳನ್ನು ಒಂದೇ ಬಾರಿಗೆ ಒತ್ತಿ, ಟರ್ಮಿನಲ್ ವಿಂಡೋವನ್ನು ಓಪನ್ ಮಾಡಿರಿ. |
03:13 | ಕಂಪೈಲ್ ಮಾಡಲು, |
03:15 | g++ ಸ್ಪೇಸ್ static ಡಾಟ್ cpp ಸ್ಪೇಸ್ ಹೈಫನ್ o ಸ್ಪೇಸ್ stat ಎಂದು ಟೈಪ್ ಮಾಡಿರಿ. Enter ಅನ್ನು ಒತ್ತಿರಿ. |
03:24 | ./stat (ಡಾಟ್ ಸ್ಲ್ಯಾಷ್ stat) ಎಂದು ಟೈಪ್ ಮಾಡಿರಿ. Enter ಅನ್ನು ಒತ್ತಿರಿ. |
03:28 | ಔಟ್ಪುಟ್ ಹೀಗೆ, |
03:30 | Number is: 0, Number is: 1, Number is: 2 |
03:33 | Result is: 3 |
03:35 | Now static var sum is 3 ಎಂದು ತೋರಿಸಲ್ಪಡುತ್ತದೆ. |
03:38 | ಈಗ ನಾನು ಔಟ್ಪುಟ್ ಅನ್ನು ವಿವರಿಸುತ್ತೇನೆ: ನಾನು ವಿಂಡೋವನ್ನು ರಿಸೈಜ್ ಮಾಡುತ್ತೇನೆ. |
03:42 | ಇಲ್ಲಿ, ಮೊದಲು number ಎನ್ನುವುದರ ವ್ಯಾಲ್ಯು ೦ ಆಗಿದೆ, ಅಂದರೆ x ಎನ್ನುವುದು 0 ಆಗಿದೆ. |
03:49 | ಮೊದಲನೆಯ ಒಬ್ಜೆಕ್ಟ್, ವ್ಯಾಲ್ಯುವನ್ನು 0 ಎಂದು ಕೊಡುತ್ತದೆ. |
03:53 | ನಂತರ ನಾವು ವ್ಯಾಲ್ಯುವನ್ನು 1 ಎಂದು ಪಡೆದಿದ್ದೇವೆ, ಅಂದರೆ x =1 ಆಗಿದೆ. |
03:58 | ಎರಡನೆಯ ಒಬ್ಜೆಕ್ಟ್, ವ್ಯಾಲ್ಯುವನ್ನು 1 ಎಂದು ಕೊಡುತ್ತದೆ. |
04:01 | ಮತ್ತು ಮೂರನೆಯ ಒಬ್ಜೆಕ್ಟ್, ವ್ಯಾಲ್ಯುವನ್ನು 2 ಎಂದು ಕೊಡುತ್ತದೆ. |
04:05 | ನಂತರ Sum ನ ವ್ಯಾಲ್ಯುವನ್ನು ಕೊಡುವ stat ಎನ್ನುವ ಫಂಕ್ಶನ್ ಅನ್ನು ನಾವು ಕಾಲ್ ಮಾಡುತ್ತೇವೆ. |
04:10 | Result is sum. |
04:13 | ಇಲ್ಲಿ sum ಎನ್ನುವುದನ್ನು ಹೆಚ್ಚಿಸಲಾಗಿದೆ ಮತ್ತು x ಎನ್ನುವುದರಲ್ಲಿ ಸ್ಟೋರ್ ಮಾಡಲಾಗಿದೆ. |
04:18 | ಆದ್ದರಿಂದ ಇದು ವ್ಯಾಲ್ಯುವನ್ನು 3 ಎಂದು ಕೊಡುತ್ತದೆ. |
04:22 | ಹೀಗಾಗಿ ನಾವು ಪಡೆಯುವ ಕೊನೆಯ ಔಟ್ಪುಟ್, |
04:25 | Static var sum is 3 ಎಂದು ಆಗಿದೆ. |
04:28 | ಈಗ ನಾವು o4 ಎನ್ನುವ ಇನ್ನೊಂದು ಒಬ್ಜೆಕ್ಟ್ ಅನ್ನು ಕ್ರಿಯೇಟ್ ಮಾಡೋಣ. |
04:34 | ಒಬ್ಜೆಕ್ಟ್ ‘o4’ ಅನ್ನು ಬಳಸಿ ನಾನು number ಎನ್ನುವ ಫಂಕ್ಶನ್ ಅನ್ನು ಕಾಲ್ ಮಾಡುವೆನು. |
04:43 | Save ಎನ್ನುವುದರ ಮೇಲೆ ಕ್ಲಿಕ್ ಮಾಡಿರಿ. |
04:45 | ನಾವು ಎಕ್ಸಿಕ್ಯೂಟ್ ಮಾಡೋಣ. |
04:48 | ಆರೋ ಕೀಯನ್ನು ಎರಡು ಸಲ ಒತ್ತಿರಿ. |
04:51 | ಮತ್ತೊಮ್ಮೆ ಆರೋ ಕೀಯನ್ನು ಎರಡು ಸಲ ಒತ್ತಿರಿ. |
04:54 | ನೀವು Result is 4 ಎನ್ನುವುದನ್ನು ನೋಡಬಹುದು. |
04:57 | Now static var sum is 4 |
05:00 | ಏಕೆಂದರೆ 4 ನೆಯ ಒಬ್ಜೆಕ್ಟ್, ಕ್ರಿಯೇಟ್ ಮಾಡಲ್ಪಟ್ಟಿದೆ. |
05:03 | ಇದು ನಮ್ಮನ್ನು ಟ್ಯುಟೋರಿಯಲ್ ನ ಕೊನೆಗೆ ಮುಟ್ಟಿಸಿದೆ. |
05:06 | ಈಗ ಸ್ಲೈಡ್ ಗಳಿಗೆ ಹಿಂದಿರುಗಿರಿ. |
05:08 | ನಾವು ಇದನ್ನು ಸಂಕ್ಷಿಪ್ತಗೊಳಿಸೋಣ, |
05:10 | ಈ ಟ್ಯುಟೋರಿಯಲ್ ನಲ್ಲಿ ನಾವು, |
05:12 | Static ಎನ್ನುವ ಕೀವರ್ಡ್, ಸ್ಟ್ಯಾಟಿಕ್ ವೇರಿಯಬಲ್ |
05:15 | ಉದಾ. static int sum; |
05:18 | ಸ್ಟ್ಯಾಟಿಕ್ ಫಂಕ್ಶನ್, ಉದಾ. static void stat(), ಇವುಗಳನ್ನು ಕಲಿತಿದ್ದೇವೆ. |
05:22 | ಒಂದು ಅಸೈನ್ಮೆಂಟ್ ಎಂದು, ಸ್ಟ್ಯಾಟಿಕ್ ವೇರಿಯಬಲ್ ಅನ್ನು ಡಿಕ್ಲೇರ್ ಮಾಡುವ ಕ್ಲಾಸ್ ಒಂದನ್ನು ಕ್ರಿಯೇಟ್ ಮಾಡಿರಿ. |
05:26 | ವೇರಿಯಬಲ್ ಅನ್ನು ಇಳಿಕೆ ಮಾಡಿರಿ. |
05:29 | ಮತ್ತು ವ್ಯಾಲ್ಯುವನ್ನು ಪ್ರಿಂಟ್ ಮಾಡಿರಿ. |
05:31 | ಕೆಳಗೆ ತೋರಿಸಿದ ಲಿಂಕ್ನಲ್ಲಿ ಲಭ್ಯವಿರುವ ವೀಡಿಯೋವನ್ನು ನೋಡಿರಿ. http://spoken-tutorial.org/What_is_a_Spoken_Tutorial |
05:34 | ಅದು ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವನ್ನು ಸಾರಾಂಶಗೊಳಿಸುತ್ತದೆ. |
05:37 | ನೀವು ಉತ್ತಮವಾದ ಬ್ಯಾಂಡ್ವಿಡ್ತ್ ಅನ್ನು ಹೊಂದಿಲ್ಲದಿದ್ದರೆ, ಡೌನ್ಲೋಡ್ ಮಾಡಿ ನೋಡಬಹುದು. |
05:41 | ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ತಂಡವು |
05:44 | ಸ್ಪೋಕನ್ ಟ್ಯುಟೋರಿಯಲ್ಸ್ ಬಳಸಿಕೊಂಡು ಕಾರ್ಯಶಾಲೆಗಳನ್ನು ನಡೆಸುತ್ತದೆ. |
05:47 | ಹಾಗೂ ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. |
05:51 | ಹೆಚ್ಚಿನ ವಿವರಗಳಿಗೆ ದಯವಿಟ್ಟು contact [at] spoken hyphen tutorial ಡಾಟ್ org ಈ ಈ-ಮೇಲ್ ಗೆ ಬರೆಯಿರಿ. |
05:58 | ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವು ‘ಟಾಕ್ ಟು ಎ ಟೀಚರ್’ ಎನ್ನುವ ಪ್ರಕಲ್ಪದ ಒಂದು ಭಾಗವಾಗಿದೆ. |
06:02 | ಈ ಟ್ಯುಟೋರಿಯಲ್ ರಾಷ್ಟ್ರೀಯ ಸಾಕ್ಷರತಾ ಮಿಶನ್, ICT , MHRD, ಭಾರತ ಸರ್ಕಾರದ ಆಧಾರವನ್ನು ಹೊಂದಿದೆ. |
06:08 | ಇದರ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗೆ ತೋರಿಸಿದ ಲಿಂಕ್ ಗಳ ಮೇಲೆ ಲಭ್ಯವಿದೆ. http://spoken-tutorial.org/NMEICT-Intro |
06:13 | ಇದರ ಅನುವಾದಕಿ ಐ ಐ ಟಿ ಬಾಂಬೆ ಯಿಂದ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ಐ ಐ ಟಿ ಬಾಂಬೆಯಿಂದ ವಾಸುದೇವ. ಧನ್ಯವಾದಗಳು. |