Advanced-Cpp/C2/Constructor-And-Destructor/Kannada

From Script | Spoken-Tutorial
Jump to: navigation, search
Time Narration
00:01 C++ ನಲ್ಲಿ Constructors and Destructors (ಕನ್ಸ್ಟ್ರಕ್ಟರ್ಸ್ ಮತ್ತು ಡಿಸ್ಟ್ರಕ್ಟರ್ಸ್) ಎನ್ನುವುದರ ಕುರಿತು ಇರುವ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ.
00:07 ಈ ಟ್ಯುಟೋರಿಯಲ್ ನಲ್ಲಿ,
00:09 ಕನ್ಸ್ಟ್ರಕ್ಟರ್ಸ್, ಕನ್ಸ್ಟ್ರಕ್ಟರ್ಸ್ ನ ಪ್ರಕಾರಗಳು,
00:12 ಹಾಗೂ ಡಿಸ್ಟ್ರಕ್ಟರ್ಸ್ ಗಳನ್ನು ನಾವು ಕಲಿಯುವೆವು, ಇದನ್ನು ನಾವು ಕೆಲವು ಉದಾಹರಣೆಗಳ ಸಹಾಯದಿಂದ ಮಾಡುವೆವು.
00:17 ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು,
00:20 Ubuntu ವರ್ಷನ್ 11.10 ಎನ್ನುವ ಆಪರೇಟಿಂಗ್ ಸಿಸ್ಟಮ್,
00:23 g++ Compiler ವರ್ಷನ್ 4.6.1 ಗಳನ್ನು ನಾನು ಬಳಸುತ್ತಿದ್ದೇನೆ.
00:28 ಕನ್ಸ್ಟ್ರಕ್ಟರ್ಸ್ ಎನ್ನುವುದರ ಪರಿಚಯದೊಂದಿಗೆ ನಾವು ಆರಂಭಿಸೋಣ.
00:31 constructor ಎನ್ನುವುದು ಒಂದು ಮೆಂಬರ್ ಫಂಕ್ಶನ್ ಆಗಿದೆ.
00:33 ಇದಕ್ಕೆ ಕ್ಲಾಸ್ ನ ಹೆಸರೇ ಇರುತ್ತದೆ.
00:37 ಕನ್ಸ್ಟ್ರಕ್ಟರ್ಸ್ ವ್ಯಾಲ್ಯೂಗಳನ್ನು ರಿಟರ್ನ್ ಮಾಡಲು ಸಾಧ್ಯವಿಲ್ಲ.
00:40 ಇದು, ಒಂದು ಒಬ್ಜೆಕ್ಟ್ ಅನ್ನು ಕ್ರಿಯೇಟ್ ಮಾಡಿದಾಗ ತಾನಾಗಿಯೇ ಕರೆಯಲ್ಪಡುತ್ತದೆ.
00:44 ಕನ್ಸ್ಟ್ರಕ್ಟರ್ಸ್ ನಲ್ಲಿಯ ವಿಧಗಳು:
00:46 ಪ್ಯಾರಾಮೀಟರೈಸ್ಡ್ ಕನ್ಸ್ಟ್ರಕ್ಟರ್ಸ್,
00:49 ಕಾಪಿ ಕನ್ಸ್ಟ್ರಕ್ಟರ್ಸ್, ಮತ್ತು ಡೀಫಾಲ್ಟ್ ಕನ್ಸ್ಟ್ರಕ್ಟರ್ಸ್ ಎಂದು ಇರುತ್ತದೆ.
00:53 ನಾವು ಡಿಸ್ಟ್ರಕ್ಟರ್ಸ್ ನೆಡೆಗೆ ನಡೆಯೋಣ.
00:56 ಡಿಸ್ಟ್ರಕ್ಟರ್ಸ್, ಮೆಮೊರಿಯನ್ನು ಡೀಅಲೊಕೇಟ್ ಮಾಡಲು ಬಳಸಲ್ಪಡುತ್ತವೆ.
00:59 ಒಂದು ಒಬ್ಜೆಕ್ಟ್ ಅನ್ನು ನಾಶ (ಡಿಸ್ಟ್ರಾಯ್) ಮಾಡಿದಾಗ ಇವುಗಳು ಕರೆಯಲ್ಪಡುತ್ತವೆ.
01:02 ಡಿಸ್ಟ್ರಕ್ಟರ್ ಎನ್ನುವುದು ಆರ್ಗ್ಯುಮೆಂಟುಗಳನ್ನು ತೆಗೆದುಕೊಳ್ಳುವದಿಲ್ಲ ಮತ್ತು ರಿಟರ್ನ್ ಟೈಪ್ ಗಳನ್ನು ಹೊಂದಿಲ್ಲ.
01:07 ಕನ್ಸ್ಟ್ರಕ್ಟರ್ಸ್ ಮತ್ತು ಡಿಸ್ಟ್ರಕ್ಟರ್ಸ್ ನ ಒಂದು ಉದಾಹರಣೆಯನ್ನು ನಾವು ನೋಡೋಣ.
01:11 ನಾನು ಕೋಡನ್ನು ಈಗಾಗಲೇ ಎಡಿಟರ್ನಲ್ಲಿ ಟೈಪ್ ಮಾಡಿದ್ದೇನೆ, ಅದನ್ನು ತೆರೆಯುತ್ತೇನೆ.
01:15 ನಮ್ಮ ಫೈಲ್ ನೇಮ್ ‘cons ಹೈಫನ್ dest ಡಾಟ್ cpp’ ಆಗಿದೆ ಎನ್ನುವುದನ್ನು ಗಮನಿಸಿರಿ.
01:20 ನಾವು ಈ ಪ್ರೋಗ್ರಾಂನಲ್ಲಿ, ಕನ್ಸ್ಟ್ರಕ್ಟರ್ ಅನ್ನು ಬಳಸಿ ಎರಡು ಸಂಖ್ಯೆಗಳ ಸ೦ಕಲನವನ್ನು ಮಾಡಿ ತೋರಿಸುವೆವು.
01:25 ನಾನು ಕೋಡ್ ಅನ್ನು ಈಗ ವಿವರಿಸುತ್ತೇನೆ.
01:27 ಇದು iostream ಎನ್ನುವ ನಮ್ಮ ಹೆಡರ್ ಫೈಲ್ ಆಗಿದೆ.
01:30 ಇಲ್ಲಿ ನಾವು std namespace ಎನ್ನುವುದನ್ನು ಉಪಯೋಗಿಸಿದ್ದೇವೆ.
01:33 ಆಮೇಲೆ ನಾವು Addition ಎನ್ನುವ ಕ್ಲಾಸ್ ಅನ್ನು ಹೊಂದಿದ್ದೇವೆ. 'a' ಮತ್ತು 'b', ಇವುಗಳು ಇಂಟೀಜರ್ ವೇರಿಯಬಲ್ ಗಳಾಗಿವೆ.
01:38 ಇವುಗಳು Addition ಎನ್ನುವ ಕ್ಲಾಸ್ ನ ಪ್ರೈವೇಟ್ ಮೆಂಬರ್ ಗಳಾಗಿವೆ.
01:42 ಇಲ್ಲಿ ನಾವು ಈ public ಎನ್ನುವ ಸ್ಪೆಸಿಫೈಯರನ್ನು ಹೊಂದಿದ್ದೇವೆ.
01:44 ಆಮೇಲೆ Addition ಎನ್ನುವ ಕನ್ಸ್ಟ್ರಕ್ಟರ್ ಅನ್ನು ಹೊಂದಿದ್ದೇವೆ.
01:47 ಈ ಕನ್ಸ್ಟ್ರಕ್ಟರ್ನ ಹೆಸರು ಕ್ಲಾಸ್ನ ಹೆಸರೇ ಆಗಿರುತ್ತದೆ.
01:52 ನಾವು ಇಲ್ಲಿ ಎರಡು ಆರ್ಗ್ಯುಮೆಂಟುಗಳನ್ನು ಪಾಸ್ ಮಾಡಿದ್ದೇವೆ.
01:54 ಈಗ ನಾವು Destructor ಎನ್ನುವುದನ್ನು ಡಿಫೈನ್ ಮಾಡಿದ್ದೇವೆ.
01:57 ಇದಕ್ಕಾಗಿ ನಾವು ಡಿಸ್ಟ್ರಕ್ಟರ್ ನ ಹೆಸರಿನ ಹಿಂದೆ ಟಿಲ್ಡ್ (~) ಚಿಹ್ನೆಯನ್ನು ಬಳಸುತ್ತೇವೆ.
02:02 ಇದು add ಎನ್ನುವ ಪಬ್ಲಿಕ್ ಫಂಕ್ಶನ್ ಆಗಿದೆ.
02:05 ಇದು ’a’ ಮತ್ತು ‘b’ ಗಳ ಮೊತ್ತವನ್ನು ರಿಟರ್ನ್ ಮಾಡುತ್ತದೆ.
02:08 ಇಲ್ಲಿ ನಾವು ‘ಸ್ಕೋಪ್ ರೆಸಲ್ಯೂಶನ್ ಆಪರೇಟರ’ ಎನ್ನುವುದನ್ನು ಬಳಸಿ ಕನ್ಸ್ಟ್ರಕ್ಟರನ್ನು ಆಕ್ಸೆಸ್ ಮಾಡುತ್ತೇವೆ.
02:12 a ಮತ್ತು b ಗಳು ಪ್ರೈವೇಟ್ ಮೆಂಬರ್ ಗಳಾಗಿವೆ.
02:15 ಪ್ರೈವೇಟ್ ಮೆಂಬರ್ ಗಳನ್ನು ಆಕ್ಸೆಸ್ ಮಾಡಲು ನಾವು x ಮತ್ತು y ಗಳನ್ನು ಬಳಸುತ್ತೇವೆ.
02:19 ಆಮೇಲೆ ನಾವು ಡಿಸ್ಟ್ರಕ್ಟರನ್ನು ಆಕ್ಸೆಸ್ ಮಾಡುತ್ತೇವೆ.
02:21 ಇದರಲ್ಲಿ ನಾವು Memory Deallocation ಎಂದು ಪ್ರಿಂಟ್ ಮಾಡುತ್ತೇವೆ.
02:25 ಇದು ನಮ್ಮ main ಎನ್ನುವ ಫಂಕ್ಶನ್ ಆಗಿದೆ.
02:28 ಇಲ್ಲಿ ನಾವು Addition ಎನ್ನುವ ಕ್ಲಾಸ್ ನಲ್ಲಿ obj ಎನ್ನುವ ಒಂದು ಒಬ್ಜೆಕ್ಟ್ ಅನ್ನು ಕ್ರಿಯೇಟ್ ಮಾಡುತ್ತೇವೆ.
02:32 ಆಮೇಲೆ ನಾವು 3 ಮತ್ತು 4, ಈ ಎರಡು ಆರ್ಗ್ಯುಮೆಂಟುಗಳನ್ನು ಪಾಸ್ ಮಾಡುತ್ತೇವೆ.
02:36 3 ಅನ್ನು 'x' ನಲ್ಲಿ ಹಾಗೂ 4 ಅನ್ನು 'y' ನಲ್ಲಿ ಸ್ಟೋರ್ ಮಾಡಲಾಗುವದು.
02:40 ’a’ ದ ವ್ಯಾಲ್ಯೂ, 3 ಮತ್ತು 'b' ದ ವ್ಯಾಲ್ಯೂ, 4 ಆಗಿದೆ ಎಂದು ಇದರ ಅರ್ಥ.
02:45 ಆರ್ಗ್ಯುಮೆಂಟುಗಳನ್ನು ಹೊಂದಿದ ಕನ್ಸ್ಟ್ರಕ್ಟರನ್ನು ಪ್ಯಾರಾಮೀಟರೈಸ್ಡ್ ಕನ್ಸ್ಟ್ರಕ್ಟರ್ ಎಂದು ಕರೆಯಲಾಗುತ್ತದೆ.
02:50 ಆದ್ದರಿಂದ ಇದೊಂದು prameterized constructor ಆಗಿದೆ.
02:53 ಇಲ್ಲಿ obj ಎನ್ನುವ ಒಬ್ಜೆಕ್ಟ್ಅನ್ನು ಬಳಸಿ, ನಾವು add ಎನ್ನುವ ಫಂಕ್ಶನ್ ಅನ್ನು ಕಾಲ್ ಮಾಡುತ್ತೇವೆ.
02:58 ಮತ್ತು ನಾವು ಮೊತ್ತವನ್ನು ಪ್ರಿಂಟ್ ಮಾಡುತ್ತೇವೆ.
03:00 ಇದು ನಮ್ಮ return ಸ್ಟೇಟಮೆಂಟ್ ಆಗಿದೆ.
03:02 ಈಗ ನಾವು ಪ್ರೊಗ್ರಾಮನ್ನು ಎಕ್ಸಿಕ್ಯೂಟ್ ಮಾಡೋಣ.
03:05 ನಿಮ್ಮ ಕೀಬೋರ್ಡ್ ಮೇಲಿನ Ctrl, Alt ಮತ್ತು T ಎನ್ನುವ ಕೀಗಳನ್ನು ಒಂದೇ ಬಾರಿಗೆ ಒತ್ತಿ, ಟರ್ಮಿನಲ್ ವಿಂಡೋವನ್ನು ಓಪನ್ ಮಾಡಿರಿ.
03:12 ಕಂಪೈಲ್ ಮಾಡಲು, g++ ಸ್ಪೇಸ್ cons ಹೈಫನ್ dest ಡಾಟ್ cpp ಸ್ಪೇಸ್ ಹೈಫನ್ o ಸ್ಪೇಸ್ cons ಎಂದು ಟೈಪ್ ಮಾಡಿರಿ.
03:21 Enter ಅನ್ನು ಒತ್ತಿರಿ.
03:23 ./cons (ಡಾಟ್ ಸ್ಲ್ಯಾಷ್ cons) ಎಂದು ಟೈಪ್ ಮಾಡಿರಿ.
03:25 Enter ಅನ್ನು ಒತ್ತಿರಿ.
03:27 ಔಟ್ಪುಟ್ ಹೀಗೆ,
03:29 Sum is 7 ಮತ್ತು Memory Deallocation ಎಂದು ತೋರಿಸಲ್ಪಡುತ್ತದೆ.
03:33 ಈಗ Default constructors ಎನ್ನುವುದರ ಒಂದು ಉದಾಹರಣೆಯನ್ನು ನಾವು ನೋಡೋಣ.
03:37 ನಮ್ಮ ಪ್ರೋಗ್ರಾಂಗೆ ಹಿಂದಿರುಗಿರಿ.
03:39 ನಾನು ಕೋಡನ್ನು ಈಗಾಗಲೇ ಟೈಪ್ ಮಾಡಿದ್ದೇನೆ.
03:41 ನಮ್ಮ ಫೈಲ್ ನ ಹೆಸರು default dot cpp ಆಗಿದೆ ಎನ್ನುವುದನ್ನು ಗಮನಿಸಿರಿ.
03:45 ಒಂದು ವೇಳೆ ಕನ್ಸ್ಟ್ರಕ್ಟರನ್ನು ಕ್ಲಾಸ್ ನಲ್ಲಿ ಡಿಕ್ಲೇರ್ ಮಾಡಿರದಿದ್ದರೆ,
03:48 ಆಗ ಕಂಪೈಲರ್, ಕ್ಲಾಸ್ ಗಾಗಿ ಒಂದು ಡೀಫಾಲ್ಟ್ ಕನ್ಸ್ಟ್ರಕ್ಟರನ್ನು ಊಹಿಸುತ್ತದೆ.
03:53 ನಾನು ಕೋಡ್ ಅನ್ನು ವಿವರಿಸುತ್ತೇನೆ.
03:55 ಇದು ನಮ್ಮ iostream ಎನ್ನುವ ಹೆಡರ್ ಫೈಲ್ ಆಗಿದೆ.
03:58 ಇಲ್ಲಿ ನಾವು std namespace ಎನ್ನುವುದನ್ನು ಉಪಯೋಗಿಸಿದ್ದೇವೆ.
04:02 ಆಮೇಲೆ, ನಾವು Subtraction ಎನ್ನುವ ಕ್ಲಾಸ್ ಅನ್ನು ಹೊಂದಿದ್ದೇವೆ.
04:04 ಆಮೇಲೆ, ನಾವು ಪಬ್ಲಿಕ್ ಎಂದು ಡಿಕ್ಲೇರ್ ಮಾಡಲಾದ 'a' ಮತ್ತು 'b' ಇವುಗಳನ್ನು ಹೊಂದಿದ್ದೇವೆ.
04:08 ಇಲ್ಲಿ sub ಎನ್ನುವ ಫಂಕ್ಶನ್ ಇರುತ್ತದೆ.
04:10 int a ಮತ್ತು int b ಎನ್ನುವ ಎರಡು ಆರ್ಗ್ಯುಮೆಂಟುಗಳನ್ನು ನಾವು ಪಾಸ್ ಮಾಡಿದ್ದೇವೆ.
04:15 ಇದು 'a' ಮತ್ತು 'b' ಗಳ ವ್ಯತ್ಯಾಸವನ್ನು ರಿಟರ್ನ್ ಮಾಡುತ್ತದೆ.
04:19 ಇದು ಡೀಫಾಲ್ಟ್ ಕನ್ಸ್ಟ್ರಕ್ಟರ್ ಆಗಿದೆ.
04:22 ಇಲ್ಲಿ, ನಾವು 'ಸ್ಕೋಪ್ ರೆಸಲ್ಯೂಶನ್ ಆಪರೇಟರ'ನ್ನು ಬಳಸಿ ಡೀಫಾಲ್ಟ್ ಕನ್ಸ್ಟ್ರಕ್ಟರನ್ನು ಆಕ್ಸೆಸ್ ಮಾಡುತ್ತೇವೆ.
04:27 ಇದು ನಮ್ಮ main ಎನ್ನುವ ಫಂಕ್ಶನ್ ಆಗಿದೆ.
04:29 ಇದರಲ್ಲಿ ನಾವು 'x' ಎನ್ನುವ ಒಂದು ವೇರಿಯಬಲ್ ಅನ್ನು ಡಿಫೈನ್ ಮಾಡಿದ್ದೇವೆ.
04:34 ಇಲ್ಲಿ, subtraction ಎನ್ನುವ ಕ್ಲಾಸ್ ನ, 's' ಎನ್ನುವ ಒಂದು ಒಬ್ಜೆಕ್ಟ್ ಅನ್ನು ನಾವು ಕ್ರಿಯೇಟ್ ಮಾಡುತ್ತೇವೆ.
04:39 ಆಮೇಲೆ, s ಎನ್ನುವ ಒಬ್ಜೆಕ್ಟ್ ಅನ್ನು ಬಳಸಿ, ನಾವು sub ಎನ್ನುವ ಫಂಕ್ಶನ್ ಅನ್ನು ಕಾಲ್ ಮಾಡುತ್ತೇವೆ.
04:42 ಮತ್ತು 8 ಹಾಗೂ 4, ಈ ಎರಡು ಆರ್ಗ್ಯುಮೆಂಟುಗಳನ್ನು ಪಾಸ್ ಮಾಡುತ್ತೇವೆ.
04:47 ಆಗ ಇದರ ಫಲಿತಾಂಶವು 'x' ಎನ್ನುವ ವೇರಿಯಬಲ್ ನಲ್ಲಿ ಸ್ಟೋರ್ ಆಗುತ್ತದೆ.
04:51 ಮತ್ತು ನಾವು ವ್ಯತ್ಯಾಸವನ್ನು ಇಲ್ಲಿ ಪ್ರಿಂಟ್ ಮಾಡುತ್ತೇವೆ.
04:54 ಇದು ನಮ್ಮ ರಿಟರ್ನ್ ಸ್ಟೇಟಮೆಂಟ್ ಆಗಿದೆ.
04:56 ಈಗ ನಾವು ಪ್ರೊಗ್ರಾಮನ್ನು ಎಕ್ಸಿಕ್ಯೂಟ್ ಮಾಡೋಣ.
04:58 ನಮ್ಮ ಟರ್ಮಿನಲ್ ಗೆ ಹಿಂದಿರುಗಿರಿ.
05:01 ನಾವು ಕಂಪೈಲ್ ಮಾಡೋಣ. g++ ಸ್ಪೇಸ್ default ಡಾಟ್ cpp ಸ್ಪೇಸ್ ಹೈಫನ್ o ಸ್ಪೇಸ್ def ಎಂದು ಟೈಪ್ ಮಾಡಿರಿ.
05:09 Enter ಅನ್ನು ಒತ್ತಿರಿ. ./def (ಡಾಟ್ ಸ್ಲ್ಯಾಷ್ def) ಎಂದು ಟೈಪ್ ಮಾಡಿರಿ.
05:12 Enter ಅನ್ನು ಒತ್ತಿರಿ.
05:14 ಔಟ್ಪುಟ್,
05:16 Difference is 4 ಎಂದು ರಿಟರ್ನ್ ಆಗುತ್ತದೆ.
05:18 ನಮ್ಮ ಪ್ರೊಗ್ರಾಂಗೆ ಹಿಂದಿರುಗಿರಿ.
05:20 ಇಲ್ಲಿ ನಾವು ಫಂಕ್ಶನ್ ನ ವ್ಯಾಪ್ತಿಯೊಳಗೆ ಆರ್ಗ್ಯುಮೆಂಟುಗಳನ್ನು ಪಾಸ್ ಮಾಡಿದ್ದೇವೆ ಎನ್ನುವುದನ್ನು ನೀವು ನೋಡಬಹುದು.
05:25 ಮತ್ತು ನಮ್ಮ ಹಿಂದಿನ ಉದಾಹರಣೆಯಲ್ಲಿ, ನಾವು ಒಬ್ಜೆಕ್ಟ್ ನ ವ್ಯಾಪ್ತಿಯೊಳಗೆ ಆರ್ಗ್ಯುಮೆಂಟುಗಳನ್ನು ಪಾಸ್ ಮಾಡಿದ್ದೇವೆ.
05:30 ಮತ್ತು ಇಲ್ಲಿ ಒಬ್ಜೆಕ್ಟ್ ಅನ್ನು ಬಳಸಿಕೊಂಡು ಆರ್ಗ್ಯುಮೆಂಟುಗಳನ್ನು ಪಾಸ್ ಮಾಡಿದ್ದೇವೆ.
05:34 ನಾವು ಈಗ ನಮ್ಮ ಸ್ಲೈಡ್ ಗಳಿಗೆ ಹಿಂದಿರುಗೋಣ.
05:38 ಸಂಕ್ಷಿಪ್ತವಾಗಿ, ಈ ಟ್ಯುಟೋರಿಯಲ್ ನಲ್ಲಿ ನಾವು,
05:41 ಕನ್ಸ್ಟ್ರಕ್ಟರ್ಸ್, ಉದಾ. Addition
05:43 ಪ್ಯಾರಾಮೀಟರೈಸ್ಡ್ ಕನ್ಸ್ಟ್ರಕ್ಟರ್, ಉದಾ. Addition obj(3, 4);
05:48 ಡಿಸ್ಟ್ರಕ್ಟರ್ಸ್, ಉದಾ. ~Addition
05:52 ಡೀಫಾಲ್ಟ್ ಕನ್ಸ್ಟ್ರಕ್ಟರ್, ಉದಾ. Subtraction, ಇವುಗಳನ್ನು ಕಲಿತಿದ್ದೇವೆ.
05:55 ಒಂದು ಅಸೈನ್ಮೆಂಟ್ ಎಂದು, Division ಎನ್ನುವ ಕ್ಲಾಸ್ ಅನ್ನು ಕ್ರಿಯೇಟ್ ಮಾಡಿರಿ.
05:59 ಈ ಕ್ಲಾಸ್ ಗಾಗಿ ಒಂದು ಕನ್ಸ್ಟ್ರಕ್ಟರನ್ನು ಕ್ರಿಯೇಟ್ ಮಾಡಿರಿ.
06:01 ಕೊಟ್ಟಿರುವ ಎರಡು ಸಂಖ್ಯೆಗಳನ್ನು ಭಾಗಿಸುವ divide ಎನ್ನುವ ಫಂಕ್ಶನ್ ಒಂದನ್ನು ಕ್ರಿಯೇಟ್ ಮಾಡಿರಿ.
06:06 ಕೆಳಗೆ ತೋರಿಸಿದ ಲಿಂಕ್ನಲ್ಲಿ ಲಭ್ಯವಿರುವ ವೀಡಿಯೋವನ್ನು ನೋಡಿರಿ. http://spoken-tutorial.org/What_is_a_Spoken_Tutorial
06:09 ಅದು ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವನ್ನು ಸಾರಾಂಶಗೊಳಿಸುತ್ತದೆ.
06:11 ನೀವು ಉತ್ತಮವಾದ ಬ್ಯಾಂಡ್ವಿಡ್ತ್ ಅನ್ನು ಹೊಂದಿಲ್ಲದಿದ್ದರೆ, ಡೌನ್ಲೋಡ್ ಮಾಡಿ ನೋಡಬಹುದು.
06:16 ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ತಂಡವು ಸ್ಪೋಕನ್ ಟ್ಯುಟೋರಿಯಲ್ಸ್ ಬಳಸಿಕೊಂಡು ಕಾರ್ಯಶಾಲೆಗಳನ್ನು ನಡೆಸುತ್ತದೆ.
06:21 ಹಾಗೂ ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ.
06:25 ಹೆಚ್ಚಿನ ವಿವರಗಳಿಗೆ ದಯವಿಟ್ಟು ಈ ಈ-ಮೇಲ್ ಗೆ ಬರೆಯಿರಿ.
06:27 contact [at] spoken ಹೈಫನ್ tutorial ಡಾಟ್ org contact@spoken-tutorial.org
06:31 ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವು ‘ಟಾಕ್ ಟು ಎ ಟೀಚರ್’ ಪ್ರಕಲ್ಪದ ಒಂದು ಭಾಗವಾಗಿದೆ.
06:36 ಇದು ರಾಷ್ಟ್ರೀಯ ಸಾಕ್ಷರತಾ ಮಿಶನ್, ICT , MHRD, ಭಾರತ ಸರ್ಕಾರದ ಆಧಾರವನ್ನು ಹೊಂದಿದೆ.
06:42 ಇದರ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗೆ ತೋರಿಸಿದ ಲಿಂಕ್ ಗಳ ಮೇಲೆ ಲಭ್ಯವಿದೆ. http://spoken-tutorial.org/NMEICT-Intro
06:47 ಇದರ ಅನುವಾದಕಿ ಐ ಐ ಟಿ ಬಾಂಬೆಯಿಂದ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ಐ ಐ ಟಿ ಬಾಂಬೆ ಯಿಂದ ವಾಸುದೇವ. ಧನ್ಯವಾದಗಳು.

Contributors and Content Editors

PoojaMoolya, Vasudeva ahitanal