Advance-C/C2/Union-and-Typedef/Kannada
Time | Narration |
00:01 | Typedef and Union in C (ಟೈಪ್ ಡೆಫ್ ಎಂಡ್ ಯೂನಿಯನ್ ಇನ್ ಸಿ) ಎಂಬ Spoken Tutorialಗೆ ನಿಮಗೆ ಸ್ವಾಗತ. |
00:07 | ಈ ಟ್ಯುಟೋರಿಯಲ್ ನಲ್ಲಿ, ನಾವು:
typedef (ಟೈಪ್ ಡೆಫ್) ಎಂಬ ಕೀವರ್ಡ್ union' ಎಂಬ ಕೀವರ್ಡ ಗಳನ್ನು ಕೆಲವು ಉದಾಹರಣೆಗಳ ಸಹಾಯದಿಂದ ಕಲಿಯುವೆವು. |
00:17 | ಈ ಟ್ಯುಟೋರಿಯಲ್ ಗಾಗಿ, ನಾನು:
Ubuntu Operating System ನ ಆವೃತ್ತಿ 11.10 ಹಾಗೂ gcc compiler ನ 4.6.1 ನೇ ಆವೃತ್ತಿಗಳನ್ನು ಬಳಸುತ್ತಿದ್ದೇನೆ. |
00:29 | ಈ ಟ್ಯುಟೋರಿಯಲ್ ಅನ್ನು ಅನುಸರಿಸಲು, ನೀವು C ಟ್ಯುಟೋರಿಯಲ್ ಗಳನ್ನು ಚೆನ್ನಾಗಿ ತಿಳಿದಿರಬೇಕು. |
00:36 | ಇಲ್ಲದಿದ್ದರೆ, ಸಂಬಂಧಿತ ಟ್ಯುಟೋರಿಯಲ್ ಗಳಿಗಾಗಿ, ದಯವಿಟ್ಟು ಕೆಳಗೆ ತೋರಿಸಿದ ನಮ್ಮ ವೆಬ್ಸೈಟ್ ಗೆ ಭೆಟ್ಟಿಕೊಡಿ. |
00:43 | ನಾನು typedef ಎಂಬ ಕೀವರ್ಡ್ ನ ಪರಿಚಯದೊಂದಿಗೆ ಆರಂಭಿಸುವೆನು. |
00:49 | ಈಗಾಗಲೇ ಅಸ್ತಿತ್ವದಲ್ಲಿರುವ 'ಟೈಪ್'ಗೆ ಅಥವಾ 'ಯೂಸರ್-ಡಿಫೈನ್ಡ್ ಡೇಟಾಟೈಪ್ 'ಗಳಿಗೆ ಸಾಂಕೇತಿಕ ಹೆಸರನ್ನು ಕೊಡಲು, typedef ಎಂಬ ಕೀವರ್ಡ್ ಅನ್ನು ಬಳಸಲಾಗುತ್ತದೆ. |
00:58 | ಇದು, ಕಮಾಂಡ್ ಗಳಿಗೆ ಅಲಿಯಾಸ್ ಅನ್ನು ಡಿಫೈನ್ ಮಾಡುವ ಒಂದು ರೀತಿಯಾಗಿದೆ. |
01:03 | ಕೋಡ್ ಗೆ ಸ್ಪಷ್ಟತೆಯನ್ನು ಒದಗಿಸಲು ಇದು ಸಹಾಯಮಾಡುತ್ತದೆ. |
01:07 | ಇದು, ಕೋಡ್ ಅನ್ನು ಅರ್ಥಮಾಡಿಕೊಳ್ಳಲು ಮತ್ತು ಬದಲಾಯಿಸಲು ಸುಲಭವಾಗುವಂತೆ ಮಾಡುತ್ತದೆ. |
01:12 | ಸಿಂಟ್ಯಾಕ್ಸ್: typedef existing_name alias_name. ಉದಾ: typedef unsigned int uint;
(ಟೈಪ್ ಡೆಫ್ ಎಗ್ಸಿಸ್ಟಿಂಗ್ ನೇಮ್ ಅಲಿಯಾಸ್ ನೇಮ್) (ಟೈಪ್ ಡೆಫ್ ಅನ್ಸೈಂಡ್ ಇಂಟ್ ಯು ಇಂಟ್) |
01:24 | ನಾವು ಒಂದು ಉದಾಹರಣೆಯ ಕೋಡ್ ಅನ್ನು ನೋಡೋಣ. |
01:28 | ನಮ್ಮ ಫೈಲ್ ನ ಹೆಸರು pallindrome.c (ಪಾಲಿಂಡ್ರೋಮ್ ಡಾಟ್ ಸೀ) ಎಂದು ಇರುವುದನ್ನು ಗಮನಿಸಿ. |
01:34 | ಈ ಪ್ರೊಗ್ರಾಂನಲ್ಲಿ, ಕೊಟ್ಟ ಸಂಖ್ಯೆಯು 'ಪ್ಯಾಲಿಂಡ್ರೋಮ್' (palindrome) ಆಗಿದೆಯೋ ಇಲ್ಲವೋ ಎಂಬುದನ್ನು ನಾವು ಪರೀಕ್ಷೆ ಮಾಡುವೆವು. |
01:41 | ನಾವು 'typedef' ಕೀವರ್ಡ್ ಅನ್ನು ಬಳಸಿ, unsigned int datatype'ಗೆ 'uint (ಯು ಇಂಟ್) ಎಂಬ ಅಲಿಯಾಸ್ ಹೆಸರನ್ನು ಕೊಟ್ಟಿದ್ದೇವೆ. |
01:52 | ಇಲ್ಲಿ, ನಾವು ವೇರಿಯೆಬಲ್ ಗಳನ್ನು ಡಿಕ್ಲೇರ್ ಮಾಡಲು uint (ಯು ಇಂಟ್) ಅನ್ನು ಬಳಸುತ್ತಿದ್ದೇವೆ. |
01:59 | ಇದು 'ಪ್ಯಾಲಿಂಡ್ರೋಮ್' ಗಾಗಿ ಲಾಜಿಕ್ (ತರ್ಕ) ಆಗಿದೆ. |
02:03 | ಈಗ, ನಾವು ಪ್ರೊಗ್ರಾಂಅನ್ನು ಎಕ್ಸಿಕ್ಯೂಟ್ ಮಾಡೋಣ. |
02:06 | ನಿಮ್ಮ ಕೀಬೋರ್ಡ್ ಮೇಲೆ Ctrl+Alt+T ಕೀಗಳನ್ನು ಒಟ್ಟಿಗೇ ಒತ್ತಿ ಟರ್ಮಿನಲ್ ಅನ್ನು ಓಪನ್ ಮಾಡಿ. |
02:16 | ಹೀಗೆ ಟೈಪ್ ಮಾಡಿ: gcc space palindrome (ಪಾಲಿಂಡ್ರೋಮ್) dot c space hyphen o space pallindrome. Enter ಅನ್ನು ಒತ್ತಿ. |
02:29 | ಟೈಪ್ ಮಾಡಿ: 'dot slash pallindrome |
02:34 | ನಾವು, “Enter any three digit number” ಎಂಬುದನ್ನು ನೋಡುತ್ತೇವೆ. |
02:38 | ನಾನು '121' ಅನ್ನು ಎಂಟರ್ ಮಾಡುತ್ತೇನೆ. |
02:42 | ಔಟ್ಪುಟ್ ಹೀಗೆ ಇದೆ: “Given number is a palindrome number”. |
02:47 | ಈಗ ನಾವು 'union' ಎಂಬ ಡೇಟಾಟೈಪ್ ಬಗ್ಗೆ ತಿಳಿಯೋಣ. |
02:52 | 'Union', ಒಟ್ಟಿಗೆ ಗುಂಪುಮಾಡಿದ ವಿಭಿನ್ನ ಡೇಟಾಟೈಪ್ ಗಳ ಸಂಗ್ರಹವಾಗಿದೆ. |
02:57 | 'Union', ಒಂದು ಸಾಮಾನ್ಯ ’ಸ್ಟೋರೇಜ್ ಸ್ಪೇಸ್’ಅನ್ನು ತನ್ನ ಎಲ್ಲ ಸದಸ್ಯರಿಗಾಗಿ ಮೀಸಲಿಡುತ್ತದೆ. |
03:03 | ಒಂದು ಸಲಕ್ಕೆ ನಾವು ’ಯೂನಿಯನ್’ ನ ಒಂದೇ ಮೆಂಬರ್ ಅನ್ನು ಆಕ್ಸೆಸ್ ಮಾಡಲು ಸಾಧ್ಯವಿದೆ. |
03:08 | ಸಿಂಟ್ಯಾಕ್ಸ್1:
'union union_name' ಕರ್ಲಿ ಬ್ರಾಕೆಟ್ ಗಳಲ್ಲಿ 'members;' ಕರ್ಲಿ ಬ್ರಾಕೆಟ್ ಗಳ ನಂತರ 'union_variable' ಮತ್ತು ಒಂದು ಸೆಮಿಕೋಲನ್. |
03:21 | ನಾವು ಪರ್ಯಾಯವಾದ ಇನ್ನೊಂದು ಸಿಂಟ್ಯಾಕ್ಸ್ ಅನ್ನು ಸಹ ಪಡೆದಿದ್ದೇವೆ. ಸಿಂಟ್ಯಾಕ್ಸ್ 2:
union union_name ಕರ್ಲಿ ಬ್ರಾಕೆಟ್ ಗಳಲ್ಲಿ members; ಕರ್ಲಿ ಬ್ರಾಕೆಟ್ ಗಳ ನಂತರ ಸೆಮಿಕೋಲನ್ union union_name union_variable; |
03:39 | ನಾವು ಒಂದು ಉದಾಹರಣೆಯನ್ನು ನೋಡೋಣ. |
03:41 | ನನ್ನ ಹತ್ತಿರ ಒಂದು ಕೋಡ್ ಫೈಲ್ ಇದೆ; ನಾವು ಇದನ್ನು ತಿಳಿದುಕೊಳ್ಳೋಣ. |
03:47 | ನಮ್ಮ ಫೈಲ್ ನ ಹೆಸರು “union dot c” ಎಂದು ಇರುವುದನ್ನು ಗಮನಿಸಿ. |
03:52 | ನಾವು student ಎಂಬ ಹೆಸರಿನ unionಅನ್ನು ಡಿಕ್ಲೇರ್ ಮಾಡಿದ್ದೇವೆ. |
03:56 | ಇಲ್ಲಿ, ಮೂರು ವೇರಿಯೇಬಲ್ ಗಳಿವೆ- english, maths ಮತ್ತು science. |
04:02 | 'main()' ಫಂಕ್ಷನ್ ನಲ್ಲಿ, ನಾವು 'stud' (ಸ್ಟುಡ್) ಎಂಬ ಒಂದು 'union' ವೇರಿಯೇಬಲ್ ಅನ್ನು ಡಿಕ್ಲೇರ್ ಮಾಡಿದ್ದೇವೆ. |
04:09 | ಇಲ್ಲಿ, ನಾವು ಒಂದು 'union' ವೇರಿಯೇಬಲ್ ಅನ್ನು ಬಳಸಿ, 'union' ಮೆಂಬರ್ ಗಳನ್ನು ಹೀಗೆ ಆಕ್ಸೆಸ್ ಮಾಡಬಹುದು:
'stud dot english' 'stud dot maths' 'stud dot science'. |
04:21 | ನಂತರ ನಾವು ಒಟ್ಟು ಅಂಕಗಳನ್ನು ಲೆಕ್ಕ ಮಾಡುತ್ತೇವೆ ಮತ್ತು ಅದನ್ನು ತೋರಿಸುತ್ತೇವೆ. |
04:26 | ನಾವು ಎಕ್ಸಿಕ್ಯೂಟ್ ಮಾಡೋಣ. ಟರ್ಮಿನಲ್ ನ ಮೇಲೆ ಹೀಗೆ ಟೈಪ್ ಮಾಡಿ: 'gcc space union dot c space hyphen o space union'
ಟೈಪ್ ಮಾಡಿ: 'dot slash union' |
04:44 | ಔಟ್ಪುಟ್ ಹೀಗೆ ತೋರಿಸಲ್ಪಡುತ್ತದೆ: “Total is 228”. |
04:50 | 'ಸ್ಟ್ರಕ್ಚರ್' (structure) ಮತ್ತು'ಯೂನಿಯನ್' (union) ಗಳ ನಡುವಿನ ವ್ಯತ್ಯಾಸವನ್ನು ನಾವು ನೋಡೋಣ. |
04:55 | 'ಯೂನಿಯನ್', ತನ್ನ ಎಲ್ಲ ಮೆಂಬರ್ ಗಳಿಗಾಗಿ, ಒಂದು ಸಾಮಾನ್ಯ 'ಸ್ಟೋರೇಜ್-ಸ್ಪೇಸ್' ಅನ್ನು ಮೀಸಲಾಗಿಡುತ್ತದೆ. |
05:01 | 'ಸ್ಟ್ರಕ್ಚರ್', ತನ್ನ ಎಲ್ಲ ಮೆಂಬರ್ ಗಳಿಗಾಗಿ, ಪ್ರತ್ಯೇಕವಾದ 'ಸ್ಟೋರೇಜ್-ಸ್ಪೇಸ್' ಅನ್ನು ಮೀಸಲಾಗಿಡುತ್ತದೆ. |
05:07 | 'ಯೂನಿಯನ್', 'ಲೋವರ್ ಮೆಮರಿ ಸ್ಪೇಸ್'ನಲ್ಲಿ ಇರುತ್ತದೆ. |
05:11 | 'ಸ್ಟ್ರಕ್ಚರ್', 'ಹೈಯರ್ ಮೆಮರಿ ಸ್ಪೇಸ್'ನಲ್ಲಿ ಇರುತ್ತದೆ. |
05:14 | 'ಯೂನಿಯನ್' ನ ಉದಾಹರಣೆ:
'union student{int marks;char name[6];double average;};' (ಯೂನಿಯನ್ ಸ್ಟುಡೆಂಟ್, ಇಂಟ್ ಮಾರ್ಕ್ಸ್, ಕ್ಯಾರ್ ನೇಮ್, ಸಿಕ್ಸ್, ಡಬಲ್ ಆವರೇಜ್) |
05:27 | ’ಡಬಲ್ ಡೇಟಾಟೈಪ್’, ಗರಿಷ್ಠ ಮೆಮರಿ ಸ್ಪೇಸ್ ಅನ್ನು ಆಕ್ರಮಿಸುವುದರಿಂದ 'ಯೂನಿಯನ್' ವೇರಿಯೇಬಲ್ ಗಾಗಿ 'ಮೆಮರಿ ಅಲೋಕೇಶನ್', '8 ಬೈಟ್ಸ್' ಆಗುವುದು. |
05:39 | 'ಸ್ಟ್ರಕ್ಚರ್' ನ ಉದಾಹರಣೆ:
'struct student{int mark;char name[6];double average;};' (ಸ್ಟ್ರಕ್ ಸ್ಟುಡೆಂಟ್, ಇಂಟ್ ಮಾರ್ಕ್ಸ್, ಕ್ಯಾರ್ ನೇಮ್, ಸಿಕ್ಸ್, ಡಬಲ್ ಆವರೇಜ್) |
05:48 | 'ಸ್ಟ್ರಕ್ಚರ್' ವೇರಿಯೇಬಲ್ ಗಾಗಿ 'ಮೆಮರಿ ಅಲೋಕೇಶನ್' ಹೀಗಿದೆ: '2bytes+6bytes+8bytes =16bytes'. |
06:00 | ಇಲ್ಲಿಗೆ, ನಾವು ಈ ಸ್ಪೋಕನ್ ಟ್ಯುಟೋರಿಯಲ್ ನ ಕೊನೆಗೆ ಬಂದಿರುತ್ತೇವೆ. |
06:04 | ಸಂಕ್ಷಿಪ್ತವಾಗಿ, |
06:06 | ಈ ಟ್ಯುಟೋರಿಯಲ್ ನಲ್ಲಿ, ನಾವು:
'typedef' 'union' 'union' ಮತ್ತು 'structure' ಗಳ ನಡುವಿನ ವ್ಯತ್ಯಾಸ ಇವುಗಳನ್ನು ಕಲಿತಿದ್ದೇವೆ. |
06:14 | ಒಂದು ಅಸೈನ್ಮೆಂಟ್- |
06:17 | ಒಂದು ’ಎಂಪ್ಲಾಯೀ’ಯ (employee) 'name, address, salary' (ನೇಮ್, ಅಡ್ರೆಸ್, ಸ್ಯಾಲರಿ) ಗಳಂತಹ |
06:21 | ರೆಕಾರ್ಡ್ ಗಳನ್ನು ತೋರಿಸಲು ಒಂದು ಪ್ರೊಗ್ರಾಂಅನ್ನು ಬರೆಯಿರಿ. |
06:25 | employee ಎಂಬ ಒಂದು union ಅನ್ನು ಡಿಫೈನ್ ಮಾಡಿ. |
06:29 | typedefಅನ್ನು ಬಳಸಿ, emp ಎಂಬ ಅಲಿಯಾಸ್ ಹೆಸರನ್ನು ಕೊಡಿ. |
06:35 | ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋವನ್ನು ವೀಕ್ಷಿಸಿ. |
06:39 | ಇದು “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ಸಾರಾಂಶವಾಗಿದೆ. |
06:42 | ನಿಮಗೆ ಒಳ್ಳೆಯ ‘ಬ್ಯಾಂಡ್ವಿಡ್ತ್’ ಸಿಗದಿದ್ದರೆ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು. |
06:47 | “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ತಂಡವು: * ‘ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ. |
06:53 | ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ.
ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ. contact@spoken-tutorial.org |
07:04 | "ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪವು “ಟಾಕ್ ಟು ಎ ಟೀಚರ್” ಪ್ರಕಲ್ಪದ ಒಂದು ಭಾಗವಾಗಿದೆ. |
07:08 | ಇದು ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ. |
07:16 | ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗೆ ತೋರಿಸಿದ ಲಿಂಕ್ ನಲ್ಲಿ ಲಭ್ಯವಿರುತ್ತದೆ.http://spoken-tutorial.org\NMEICT-Intro |
07:22 | IIT Bombay ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ವಾಸುದೇವ .ವಂದನೆಗಳು. |