KTouch/S1/Customizing-Ktouch/Kannada

From Script | Spoken-Tutorial
Revision as of 10:44, 28 March 2014 by Vasudeva ahitanal (Talk | contribs)

(diff) ← Older revision | Latest revision (diff) | Newer revision → (diff)
Jump to: navigation, search
Time Narration
00.00 ಕೇಟಚ್ ನ ಕಸ್ಟಮೈಜ್ ವಿಷಯಕವಾದ ಈ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00.04 ಈ ಟ್ಯುಟೋರಿಯಲ್ ನಲ್ಲಿ ನೀವು,
00.08 ಒಂದು ಲೆಕ್ಚರ್ ಅನ್ನು ಹೇಗೆ ನಿರ್ಮಿಸುವುದು,

ಕೇಟಚ್ ನ ಕಸ್ತಮೈಜ್ ಹೇಗೆ ಮಾಡುವುದು, ಸ್ವಂತ ಕೀಬೋರ್ಡ್ ಅನ್ನು ಹೇಗೆ ನಿರ್ಮಿಸುವುದು ಎನ್ನುವುದನ್ನು ಕಲಿಯುತ್ತೀರಿ

00.13 ಇಲ್ಲಿ ನಾವು ಉಬುಂಟು ಲಿನಕ್ಸ್ 11.10 ರಲ್ಲಿ ಕೇಟಚ್ 1.7.1 ಎಂಬ ತಂತ್ರಾಂಶವನ್ನು ಉಪಯೋಗಿಸುತ್ತೇವೆ.
00.21 ಈಗ ಕೇಟಚ್ ಅನ್ನು ಒಪನ್ ಮಾಡೋಣ.
00.25 ಗಮನಿಸಿ, ಮೂರನೇಯ ಸ್ತರವು ಕಾಣುತ್ತಿದೆ.
00.28 ಏಕೆಂದರೆ, ನಾವು ಕೇಟಚ್ ಅನ್ನು ಕ್ಲೋಸ್ ಮಾಡಿದ್ದಾಗ ಮೂರನೇಯ ಸ್ತರದಲ್ಲಿಯೇ ಇದ್ದೆವು.
00.32 ಈಗ ನಾವು ಹೊಸ ಲೆಕ್ಚರ್ ಅನ್ನು ನಿರ್ಮಿಸುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ.
00.36 ಇಲ್ಲಿ ನಾವು ಹೊಸತಾದ ಅಕ್ಷರಸಮೂಹವನ್ನು ರಚಿಸೋಣ. ಇದು ಟೀಚರ್ಸ್ ಲೈನ್ ನಲ್ಲಿ ತೋರುತ್ತದೆ.
00.42 ಮೈನ್ ಮೆನ್ಯುವಿನಿಂದ File ಅನ್ನು ಆರಿಸಿ Edit Lecture ಎಂಬಲ್ಲಿ ಒತ್ತಿ.
00.48 Open Lecture File ಎಂಬ ಡಯಲಾಗ್ ಬಾಕ್ಸ್ ಕಾಣಿಸುತ್ತದೆ.
00.52 ಈಗ Create New Lecture ಎಂಬ ವಿಕಲ್ಪವನ್ನು ಆರಿಸಿ OK ಎಂಬಲ್ಲಿ ಒತ್ತಿ.
00.57 KTouch Lecture Editor ಎಂಬ ಡಯಲಾಗ್ ಬಾಕ್ಸ್ ಕಾಣಿಸುತ್ತದೆ.
01.01 ಟೈಟಲ್ ಫೀಲ್ಡ್ ನಲ್ಲಿ A default lecture ಎಂಬ ವಾಕ್ಯವನ್ನು ಆರಿಸಿ ಮತ್ತು ಅದನ್ನು ಅಳಿಸಿ My New Training Lecture ಎಂದು ಟೈಪ್ ಮಾಡಿ.
01.12 Level Editor ಎನ್ನುವುದು ಲೆಕ್ಚರ್ ನ ಸ್ತರವನ್ನು ಸೂಚಿಸುತ್ತದೆ.
01.15 Level Editor ಎಂಬ ಬಾಕ್ಸ್ ನ ಒಳಗೆ ಕ್ಲಿಕ್ ಮಾಡಿ.
01.18 ಈಗ Data of Level 1 ಎಂಬುದರ ಕೆಳಗೆ, New Characters in this level ಎಂಬಲ್ಲಿ & (ಎಂಪರ್ಸಂಡ್), * (ಸ್ಟಾರ್) ಮತ್ತು $ (ಡಾಲರ್) ಚಿಹ್ನೆಯನ್ನು ಟೈಪ್ ಮಾಡಿ.
01.29 ನಾವು ಚಿಹ್ನೆಗಳನ್ನು ಕೇವಲ ಒಮ್ಮೆ ಟೈಪ್ ಮಾಡಿದ್ದೇವೆ.
01.32 ಇಲ್ಲಿ ಗಮನಿಸಬೇಕಾದುದೇನೆಂದರೆ, ಈ ಚಿಹ್ನೆಗಳು Level Editor ಬಾಕ್ಸ್ ನ ಮೊದಲ ಸಾಲಿನಲ್ಲಿ ತೋರುತ್ತಿವೆ.
01.38 Level Data ಎಂಬಲ್ಲಿ ಕಾಣುತ್ತಿರುವ ವಾಕ್ಯವನ್ನು ಆರಿಸಿ ಅಳಿಸಿ.
01.44 & (ಎಂಪರ್ಸಂಡ್) * (ಸ್ಟಾರ್) ಮತ್ತು $ (ಡಾಲರ್) ಚಿಹ್ನೆಗಳನ್ನು ಐದು ಬಾರಿ ಟೈಪ್ ಮಾಡಿ.
01.49 ಈಗ Level Editor ಬಾಕ್ಸ್ ನ ಒಳಗಿನ ಪ್ಲಸ್ ಚಿಹ್ನೆಯ ಮೇಲೆ ಕ್ಲಿಕ್ ಮಾಡಿ. ಏನಾಯಿತು?
01.57 Level Editor ಬಾಕ್ಸ್ ನಲ್ಲಿ ಅಕ್ಷರಗಳಿಗೆ ಸಂಬದ್ಧವಾದ ಮತ್ತೊಂದು ಸಾಲು ಕಾಣಿಸುತ್ತದೆ.
02.02 Level Editor ಬಾಕ್ಸ್ ನಲ್ಲಿ ಮತ್ತೊಂದು ಸಾಲನ್ನು ಆರಿಸಿ.
02.06 Level ನಲ್ಲಿನ ಮಾಹಿತಿಯು ಈಗ 2 ಎಂದು ತೋರಿಸುತ್ತದೆ.
02.09 ಇದು ನಮ್ಮ ಟೈಪಿಂಗ್ ಪಾಠದ ಎರಡನೇಯ ಸ್ತರವಾಗಿದೆ.
02.13 New Characters in this Level ಎಂಬಲ್ಲಿ fjಎಂದು ಟೈಪ್ ಮಾಡಿ.
02.20 Level Data ಎಂಬಲ್ಲಿ ಐದು ಬಾರಿ fj ಎಂದು ಟೈಪ್ ಮಾಡಿ.
02.24 ನಿಮ್ಮ ಟೈಪಿಂಗ್ ಪಾಠದಲ್ಲಿ ನಿಮಗೆ ಎಷ್ಟು ಸ್ತರಗಳ ಅವಷ್ಯಕತೆ ಇದೆಯೋ ಅಷ್ಟು ಸ್ತರಗಳನ್ನು ನಿರ್ಮಿಸಬಹುದು.
02.35 Save ಎಂಬಲ್ಲಿ ಒತ್ತಿ.
02.37 Save Training Lecture – KTouch ಎಂಬ ಡಯಲಾಗ್ ಬಾಕ್ಸ್ ಕಾಣಿಸುತ್ತದೆ.
02.41 Name ಎಂಬಲ್ಲಿ New Training Lecture ಎಂದು ಟೈಪ್ ಮಾಡಿ.
02.45 ಈಗ ಫೈಲ್ ಗಾಗಿ ಯಾವುದಾದರೂ ಫಾರ್ಮೇಟ್ ಅನ್ನು ಆರಿಸಿಕೊಳ್ಳಿ.
02.49 Filter ನ ಡ್ರಾಪ್-ಡೌನ್ ಸೂಚಿಯಲ್ಲಿ ತ್ರಿಕೋಣ ಚಿಹ್ನೆಯನ್ನು ಒತ್ತಿ.
02.52 ಫೈಲ್ ನ ಫಾರ್ಮೇಟ್ ಆಗಿ KTouch Lecture Files ಎಂಬ ಕೋಷ್ಠಕದಿಂದ star.ktouch.xml ಎಂದು ಆರಿಸಿ.
03.03 ಫೈಲ್ ಅನ್ನು ಸೇವ್ ಮಾಡಲು ಡೆಸ್ಕ್ಟಾಪ್ ಅನ್ನು ಬ್ರೌಸ್ ಮಾಡಿ ನಂತರ Save ಎಂಬಲ್ಲಿ ಒತ್ತಿ.
03.08 KTouch Lecture Editor ಎಂಬ ಡಯಲಾಗ್ ಬಾಕ್ಸ್ ಈಗ New Training Lecture ಎಂಬ ಹೆಸರನ್ನು ತೋರಿಸುತ್ತದೆ.
03.15 ನಾವು ಎರಡು ಸ್ತರಗಳ ಜೊತೆಗೆ ಹೊಸತೊಂದು ಟ್ರೈನಿಂಗ್ ಲೆಕ್ಚರ್ ನಿರ್ಮಿಸಿದೆವು.
03.19 KTouch Lecture Editor ಎಂಬ ಡಯಲಾಗ್ ಬಾಕ್ಸ್ ಅನ್ನು ಮುಚ್ಚೋಣ.
03.24 ಈಗ ನಾವು ನಿರ್ಮಿಸಿದ ಲೆಕ್ಚರ್ ಅನ್ನು ಒಪನ್ ಮಾಡೋಣ.
03.28 ಮೈನ್ ಮೆನ್ಯುವಿನಿಂದ File ಅನ್ನು ಆರಿಸಿ Open Lecture ಎಂಬಲ್ಲಿ ಒತ್ತಿ.
03.34 Select Training Lecture File ಎಂಬ ಡಯಲಾಗ್ ಬಾಕ್ಸ್ ಕಾಣಿಸುತ್ತದೆ.
03.38 ಡೆಸ್ಕ್ಟಾಪ್ ಅನ್ನು ಬ್ರೌಸ್ ಮಾಡಿ New Training Lecture.ktouch.xml ಎಂಬುದನ್ನು ಆಯ್ಕೆಮಾಡಿ.
03.46 ಗಮನಿಸಿ, &, * ಮತ್ತು $ ಚಿಹ್ನೆಗಳು ಟೀಚರ್ಸ್ ಲೈನ್ ನಲ್ಲಿ ಕಾಣಿಸುತ್ತಿವೆ. ಈಗ ಟೈಪಿಂಗ್ ಅನ್ನು ಆರಂಭಿಸೋಣ.
03.54 ನಾವು ನಮ್ಮ ಸ್ವಂತ ಲೆಕ್ಚರ್ ಅನ್ನು ನಿರ್ಮಿಸಿದೆವು ಹಾಗೂ ಅದನ್ನು ಒಂದು ಟೈಪಿಂಗ್ ಪಾಠದಂತೆ ಉಪಯೋಗಿಸಿದೆವು.
03.59 ಕೇಟಚ್ ಟೈಪಿಂಗ್ ಪಾಠಕ್ಕೆ ಹೋಗಲು ಮೈನ್ ಮೆನ್ಯುವಿನಿಂದ File ಅನ್ನು ಆರಿಸಿಕೊಳ್ಳಿ, Open Lecture ಎಂಬಲ್ಲಿ ಒತ್ತಿ. ಮತ್ತು ಈ ಫೋಲ್ಡರ್ ಪಾಥ್ ಅನ್ನು ಬ್ರೌಸ್ ಮಾಡಿ.
04.10 Root->usr->share->kde4->apps->Ktouch ಮತ್ತು english.ktouch.xml ಎಂದು ಆಯ್ಕೆಮಾಡಿ.
04.26 ನಾವು ಕೇಟಚ್ ಅನ್ನು ನಮ್ಮ ಪ್ರಾಶಸ್ತ್ಯಕ್ಕೆ ಅನುಸಾರವಾಗಿ ನಿರ್ಮಿಸಬಹುದು.
04.30 ಉದಾಹರೆಣೆಗೆ, ಒಂದೊಮ್ಮೆ ನಾವು ಟೀಚರ್ಸ್ ಲೈನ್ ನಲ್ಲಿ ಇರದ ಅಕ್ಷರವನ್ನು ಟೈಪ್ ಮಾಡಿದಲ್ಲಿ ಸ್ಟುಡೆಂಟ್ ಲೈನ್ ಕೆಂಪುಬಣ್ಣಕ್ಕೆ ತಿರುಗುತ್ತದೆ.
04.37 ಇದನ್ನು ನೀವು ಬೇರೆ ಬಣ್ಣಕ್ಕೆ ಬದಲಾಯಿಸಬಹುದು.
04.41 ಈಗ ಕಲರ್ ಸೆಟ್ಟಿಂಗ್ ಅನ್ನು ಬದಲಾಯಿಸೋಣ.
04.44 ಮೈನ್ ಮೆನ್ಯುವಿನಿಂದ Settings ಆರಿಸಿ ಮತ್ತು Configure – KTouch ಎಂಬಲ್ಲಿ ಒತ್ತಿ.
04.50 Configure – KTouch ಎಂಬ ಡಯಲಾಗ್ ಬಾಕ್ಸ್ ಕಾಣಿಸುತ್ತದೆ.
04.53 Configure – KTouch ಎಂಬ ಡಯಲಾಗ್ ಬಾಕ್ಸ್ ನಲ್ಲಿ Color Settings ಅನ್ನು ಒತ್ತಿ.
04.58 Color Settings ಎಂಬುದರ ವಿವರಣೆಯು ಕಾಣಿಸುತ್ತದೆ.
05.02 Use custom color for typing line ಎಂಬ ಬಾಕ್ಸ್ ಅನ್ನು ಆಯ್ಕೆ ಮಾಡಿ.
05.05 ಟೀಚರ್ಸ್ ಲೈನ್ ಎಂಬಲ್ಲಿ ಟೆಕ್ಸ್ಟ್ ಎಂಬುದರ ಮುಂದಿರುವ ಕಲರ್ ಬಾಕ್ಸ್ ಅನ್ನು ಒತ್ತಿ.
05.12 Select-Color ಎಂಬ ಡಯಲಾಗ್ ಬಾಕ್ಸ್ ಕಾಣಿಸುತ್ತದೆ.
05.15 Select-Color ಎಂಬ ಡಯಲಾಗ್ ಬಾಕ್ಸ್ ನಲ್ಲಿ ಹಸಿರು ಬಣ್ಣದ ಮೇಲೆ ಒತ್ತಿ. ನಂತರ OK ಒತ್ತಿ.
05.21 Configure – KTouch ಎಂಬ ಡಯಲಾಗ್ ಬಾಕ್ಸ್ ಕಾಣಿಸುತ್ತದೆ. Apply ಎಂಬಲ್ಲಿ ಒತ್ತಿ. OK ಎಂಬಲ್ಲಿ ಒತ್ತಿ.
05.29 ಟೀಚರ್ಸ್ ಲೈನ್ ನಲ್ಲಿನ ಅಕ್ಷರಗಳು ಹಸಿರು ಬಣ್ಣಕ್ಕೆ ಬದಲಾಗಿವೆ.
05.33 ಈಗ ನಾವು ಸ್ವಂತ ಕೀಬೋರ್ಡನ್ನು ನಿರ್ಮಿಸೋಣ.
05.37 ಒಂದು ಹೊಸ ಕೀಬೋರ್ಡನ್ನು ನಿರ್ಮಿಸಲು ಪ್ರಸ್ತುತವಿರುವ ಕೀಬೋರ್ಡನ್ನು ಉಪಯೋಗಿಸಬೇಕಾಗುತ್ತದೆ.
05.42 ಇದರಲ್ಲಿ ಬದಲಾವಣೆಯನ್ನು ಮಾಡಿ ಇದನ್ನು ಬೇರೆ ಹೆಸರಿನಲ್ಲಿ ಸೇವ್ ಮಾಡಿ.
05.46 ಮೈನ್ ಮೆನ್ಯುವಿನಿಂದ File ಅನ್ನು ಆಯ್ಕೆಮಾಡಿ ಮತ್ತು Edit Keyboard Layout ಎಂಬಲ್ಲಿ ಒತ್ತಿ.
05.52 Open Keyboard File ಎಂಬ ಡಯಲಾಗ್ ಬಾಕ್ಸ್ ಕಾಣಿಸುತ್ತದೆ.
05.56 Open Keyboard File ಎಂಬ ಡಯಲಾಗ್ ಬಾಕ್ಸ್ ನಲ್ಲಿ Open a default keyboard ಎಂದು ಆಯ್ಕೆ ಮಾಡಿ.
06.02 ಈಗ ಈ ಫೀಲ್ಡ್ ನ ಮುಂದಿರುವ ಬಟನ್ ಅನ್ನು ಒತ್ತಿ.
06.06 ಕೀಬೋರ್ಡ ನ ಸೂಚಿಯು ಕಾಣಿಸುತ್ತದೆ. ಅಲ್ಲಿ en.keyboard.xml ಎಂದು ಆರಿಸಿ, OK ಎಂಬಲ್ಲಿ ಒತ್ತಿ.
06.15 KTouch Keyboard Editor ಎಂಬ ಡಯಲಾಗ್ ಬಾಕ್ಸ್ ಕಾಣುತ್ತದೆ.
06.19 Keyboard Title ಎಂಬಲ್ಲಿ Training Keyboard ಎಂದು ಟೈಪ್ ಮಾಡಿ.
06.25 ನಾವು ಕೀಬೋರ್ಡ್ ಗಾಗಿ ಯಾವುದಾದರೊಂದು ಭಾಷೆಯನ್ನು ಆರಿಸಬೇಕಾಗುತ್ತದೆ.
06.29 Language id ಯ ಡ್ರಾಪ್ ಡೌನ್ ಸೂಚಿಯಿಂದ en ಆಯ್ಕೆ ಮಾಡಿ.
06.35 ಪ್ರಸ್ತುತ ಕೀಬೋರ್ಡಿನ ಫಾಂಟ್ ಅನ್ನು ಬದಲಾಯಿಸಿ.
06.39 Set Keyboard Font ಎಂಬಲ್ಲಿ ಕ್ಲಿಕ್ ಮಾಡಿ.
06.42 Select Font – KTouch ಎಂಬ ಡಯಲಾಗ್ ಬಾಕ್ಸ್ ಕಾಣಿಸುತ್ತದೆ.
06.48 Select Font – Ktouch ಎಂಬ ಡಲಯಾಗ್ ಬಾಕ್ಸ್ ನಲ್ಲಿ Font ಗಾಗಿ Ubuntu ಎಂದೂ, Font Style ಗಾಗಿ italics ಎಂದೂ ಮತ್ತು Font Size ಗಾಗಿ 11 ಎಂದೂ ಆಯ್ಕೆ ಮಾಡಿ.
06.58 ಈಗ OK ಎಂಬಲ್ಲಿ ಕ್ಲಿಕ್ ಮಾಡಿ.
07.00 ಕೀಬೋರ್ಡನ್ನು ಸೇವ್ ಮಾಡಲು Save Keyboard As ಎಂಬಲ್ಲಿ ಕ್ಲಿಕ್ ಮಾಡಿ.
07.04 Save Keyboard – KTouch ಎಂಬ ಡಯಲಾಗ್ ಬಾಕ್ಸ್ ಕಾಣಿಸುತ್ತದೆ.
07.08 ಈ ಫೋಲ್ಡರ್ ಪಾಥ್ ಅನ್ನು ಬ್ರೌಸ್ ಮಾಡಿ.
07.10 Root->usr->share->kde4->apps->Ktouch ಮತ್ತು ಅಲ್ಲಿ english.ktouch.xml ಎಂದು ಆಯ್ಕೆ ಮಾಡಿ.
07.26 Name ಎಂಬಲ್ಲಿ Practice.keyboard.xml ಎಂದು ಟೈಪ್ ಮಾಡಿ. Save ಎಂಬಲ್ಲಿ ಕ್ಲಿಕ್ ಮಾಡಿ.
07.33 ಫೈಲ್ ಎಂಬುದು <name>.keyboard.xml’ ಎಂಬ ಫಾರ್ಮೇಟ್ ನಲ್ಲಿ ಸೇವ್ ಆಗಿದೆ. Close ಎಂಬಲ್ಲಿ ಕ್ಲಿಕ್ ಮಾಡಿ.
07.42 ನೀವು ಈ ನೂತನ ಕೀಬೋರ್ಡನ್ನು ಈಗಲೇ ಉಪಯೋಗಿಸುವಂತಿಲ್ಲ.
07.46 ನೀವು ಇದನ್ನು kde-edu ಎಂಬ ಈಮೇಲ್ ಐಡಿ ಗೆ ಮೇಲ್ ಮಾಡಬೇಕು. ಆಮೇಲೆ ಕೇಟಚ್ ನ ಮುಂದಿನ ಸಂಸ್ಕರಣದಲ್ಲಿ ಇದು ಸೇರಿರುತ್ತದೆ.
07.57 ಈಗ ನಾವು ಕೇಟಚ್ ನ ಈ ಪಾಠದ ಕೊನೆಗೆ ಬಂದಿದ್ದೇವೆ.
08.01 ಈ ಪಾಠದಲ್ಲಿ ಟ್ರೈನ್ ಮಾಡಲು ಮತ್ತು ಕಲರ್ ಸೆಟ್ಟಿಂಗ್ ನಲ್ಲಿ ಬದಲಾವಣೆಯನ್ನು ಮಾಡಲು ಒಂದು ಲೆಕ್ಚರ್ ನಿರ್ಮಿಸುವುದನ್ನು ಕಲಿತೆವು.
08.08 ನಾವು ಪ್ರಸ್ತುತವಿರುವ ಕೀಬೋರ್ಡನ್ನು ಒಪನ್ ಮಾಡುವುದು, ಅದರ ಬದಲಾವಣೆ ಮತ್ತು ಸ್ವಂತ ಕೀಬೋರ್ಡಿನ ನಿರ್ಮಾಣವನ್ನು ಇಲ್ಲಿ ತಿಳಿದೆವು.
08.15 ಇಲ್ಲಿ ನಿಮಗೊಂದು ಕೆಲಸವಿದೆ.
08.18 ಸ್ವಂತ ಕೀಬೋರ್ಡನ್ನು ರಚಿಸಿ.
08.20 ಕೀಬೋರ್ಡಿನಲ್ಲಿ ಬಣ್ಣ ಮತ್ತು ಫಾಂಟ್ ನ ಲೆವೆಲ್ ನಲ್ಲಿ ಬದಲಾವಣೆಯನ್ನು ಮಾಡಿ. ಪರಿಣಾಮವನ್ನು ಪರಿಶೀಲಿಸಿ.
08.28 ಈ ಕೆಳಗಿನ ಲಿಂಕ್ ನಲ್ಲಿರುವ ವೀಡಿಯೋವನ್ನು ನೋಡಿ.
08.31 ಇದು ಸ್ಪೋಕನ್ ಟ್ಯುಟೊರಿಯಲ್ ನ ಸಾರಾಂಶವನ್ನು ಹೇಳುತ್ತದೆ.
08.34 ನಿಮ್ಮಲ್ಲಿ ಉತ್ತಮ bandwidth ಇಲ್ಲವಾದಲ್ಲಿ ಇದನ್ನು ಡೌನ್ ಲೋಡ್ ಮಾಡಿ ನೋಡಿ.
08.38 ಈ ಪಾಠವನ್ನಾಧಾರಿಸಿ ಸ್ಪೋಕನ್ ಟ್ಯುಟೊರಿಯಲ್ ಗಣವು ಕಾರ್ಯಶಾಲೆಯನ್ನು ನಡೆಸುತ್ತದೆ. ಯಾರು ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ.
08.48 ಹೆಚ್ಚಿನ ಮಾಹಿತಿಗಾಗಿ contact @spoken-tutorial.org ಈ ಈ-ಮೇಲ್ ಮೂಲಕ ಸಂಪರ್ಕಿಸಿ
08.54 ಈ ಪಾಠವು Talk to a Teacher ಎಂಬ ಪರಿಯೋಜನೆಯ ಭಾಗವಾಗಿದೆ.
08.59 ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ.
09.07 ಹೆಚ್ಚಿನ ಮಾಹಿತಿಗಾಗಿ spoken hyphen tutorial dot org slash NMEICT hyphen Intro ಇಲ್ಲಿ ನೋಡಿ.
09.17 ಈ ಪಾಠದ ಅನುವಾದಕ ಮತ್ತು ಪ್ರವಾಚಕ ಐ ಐ ಟಿ ಬಾಂಬೆಯಿಂದ ವಾಸುದೇವ.

ಧನ್ಯವಾದಗಳು.

Contributors and Content Editors

Pratik kamble, Vasudeva ahitanal