Tux-Typing/S1/Learn-advanced-typing/Kannada
From Script | Spoken-Tutorial
Revision as of 16:47, 27 March 2014 by Vasudeva ahitanal (Talk | contribs)
Time | Narration |
---|---|
00.00 | Tux Typing ನ ಪರಿಚಯಾತ್ಮಕವಾದ ಈ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
00.05 | ಈ ಟ್ಯುಟೋರಿಯಲ್ ನಲ್ಲಿ ನೀವು: |
00.08 | ವಾಕ್ಯಗಳ ಟೈಪಿಂಗ್ ಅನ್ನು ಹೇಗೆ ಮಾಡಬೇಕು. ನಮ್ಮದೇ ಆದ ಶಬ್ದಗಳ ಸೂಚಿಯನ್ನು ಹೇಗೆ ನಿರ್ಮಿಸಬೇಕು. |
00.12 | ಟೈಪಿಂಗ್ ಗಾಗಿ ಭಾಷೆಯನ್ನು ಹೇಗೆ ಸೆಟ್ ಮಾಡಬೇಕು ಇತ್ಯಾದಿಗಳನ್ನು ಕಲಿಯುತ್ತೀರಿ. |
00.17 | ಇಲ್ಲಿ ನಾವು ಉಬಂಟು ಲಿನಕ್ಸ್ 11.10 ರಲ್ಲಿ Tux Typing 1.8.0 ಎಂಬುದರ ಉಪಯೋಗವನ್ನು ಮಾಡುತ್ತೇವೆ. |
00.26 | Tux Typing ಒಪನ್ ಮಾಡಿ. |
00.28 | Dash Home ಎಂಬಲ್ಲಿ ಕ್ಲಿಕ್ ಮಾಡಿ. |
00.31 | ಸರ್ಚ್ ಬಾಕ್ಸ್ ನಲ್ಲಿ Tux Typing ಎಂದು ಟೈಪ್ ಮಾಡಿ. |
00.36 | Tux Typing ಎಂಬ ಐಕಾನ್ ನ ಮೇಲೆ ಕ್ಲಿಕ್ ಮಾಡಿ. |
00.38 | ಮೇನ್ ಮೆನ್ಯುವಿನಲ್ಲಿ Options ಎಂಬಲ್ಲಿ ಕ್ಲಿಕ್ ಮಾಡಿ. |
00.42 | ಆಪ್ಷನ್ ನ ಮೆನ್ಯು ಕಾಣಿಸುತ್ತದೆ. ಈಗ ವಾಕ್ಯಗಳ ಟೈಪಿಂಗ್ ಅನ್ನು ಅಭ್ಯಾಸ ಮಾಡಿ. |
00.47 | Phrase Typing ಎಂಬಲ್ಲಿ ಒತ್ತಿ. |
00.49 | ಟೀಚರ್ಸ್ ಲೈನ್ ನಲ್ಲಿ ಕಾಣುವ ವಾಕ್ಯವನ್ನು ಟೈಪ್ ಮಾಡಿ. |
00.53 | ಪ್ರಸ್ತುತ ಇಲ್ಲಿ ಅದು ಹೀಗಿದೆ - “The quick brown fox jumps over the lazy dog”. |
01.06 | ಈಗ ನಾವು ಮುಂದಿನ ವಾಕ್ಯವನ್ನು ಟೈಪ್ ಮಾಡಬೇಕು. ಮಾಡಬೇಕಲ್ಲವೇ? |
01.10 | Enter ಒತ್ತಿ. ಮುಂದಿನ ವಾಕ್ಯವು ಕಾಣುತ್ತದೆ. |
01.14 | ಈಗ ನಾವು ವಾಕ್ಯದ ಟೈಪಿಂಗ್ ಅನ್ನು ಅಭ್ಯಾಸ ಮಾಡಿದ್ದೆವು. |
01.17 | ನೀವು ವಿಭಿನ್ನ ವಾಕ್ಯಗಳೊಂದಿಗೆ ಅಭ್ಯಾಸ ಮಾಡಬಹುದು. |
01.21 | ಈಗ ಮುಂಚಿನ ಮೆನ್ಯುವಿಗೆ ಹಿಂತಿರುಗಲು Esc ಒತ್ತಿ. |
01.26 | ಆಪ್ಶನ್ ಮೆನ್ಯು ಕಾಣುತ್ತದೆ. |
01.29 | ನಾವೀಗ ಹೊಸ ವಾಕ್ಯದ ಮತ್ತು ಶಬ್ದದ ಸೇರಿಸುವಿಕೆಯನ್ನು ಕಲಿಯೋಣ. |
01.34 | Edit Word Lists ಎಂಬಲ್ಲಿ ಕ್ಲಿಕ್ ಮಾಡಿ. |
01.37 | Word List Editor ನ ವಿಂಡೋ ಕಾಣುತ್ತದೆ. |
01.40 | ನಾವು ಹೊಸ ಶಬ್ದವನ್ನು ಸೇರಿಸೋಣವೇ? |
01.42 | ವರ್ಡ್ ಲಿಸ್ಟ್ ಎಡಿಟರ್ ವಿಂಡೋ ನಲ್ಲಿ NEW ಎಂಬಲ್ಲಿ ಒತ್ತಿ. |
01.46 | Create a New Wordlist ಎಂಬ ವಿಂಡೋ ಕಾಣಿಸುತ್ತದೆ. |
01.49 | Create a New Wordlist ಎಂಬ ವಿಂಡೋ ನಲ್ಲಿ Learn to Type ಎಂದು ಟೈಪ್ ಮಾಡಿ OK ಒತ್ತಿ. |
02.01 | Word List Editor ಎಂಬ ವಿಂಡೋ ಕಾಣಿಸುತ್ತದೆ. |
02.04 | Remove ಎಂಬಲ್ಲಿ ಒತ್ತಿ ನಾವು ಟೈಪ್ ಮಾಡಿದ ವಾಕ್ಯವನ್ನು ಅಥವಾ ಶಬ್ದವನ್ನು ಅಳಿಸಬಹುದು. |
02.10 | ಶಬ್ದವನ್ನು ಅಥವಾ ವಾಕ್ಯವನ್ನು ಸೇವ್ ಮಾಡಲು DONE ಎಂಬಲ್ಲಿ ಒತ್ತಿ ಮತ್ತು ಇಂಟರ್ನಲ್ ಮೆನ್ಯುವಿಗೆ ಹೋಗಿ. |
02.17 | ಆಪ್ಶನ್ ಮೆನ್ಯು ಕಾಣಿಸುತ್ತದೆ. |
02.20 | ಇಂಟರ್ನಲ್ ಮೆನ್ಯುವಿನಿಂದ ನೀವು Setup language ಎಂಬ ವಿಕಲ್ಪವನ್ನು ಒತ್ತಿ ಭಾಷೆಯನ್ನು ವ್ಯವಸ್ಥೆಗೊಳಿಸಬಹುದು. |
02.26 | ನೀವು ಆಯ್ಕೆ ಮಾಡಿದ ಭಾಷೆಯಲ್ಲಿ ಟಕ್ಸ್ ಟೈಪಿಂಗ್ ನ ಇಂಟರ್ಫೇಸ್ ಮತ್ತು ಪಾಠವು ಕಾಣಿಸುತ್ತದೆ. |
02.32 | ಆದರೆ, ಪ್ರಸ್ತುತ ಟಕ್ಸ್ ಟೈಪಿಂಗ್ ಬೇರೆ ಭಾಷೆಗಳಲ್ಲಿ ಪಾಠಗಳನ್ನು ತೋರಿಸಲು ಸಮರ್ಥವಾಗಿಲ್ಲ. |
02.38 | ಈಗ ಆಟವೊಂದನ್ನು ಆಡೋಣ. |
02.40 | Main Menu ಎಂಬಲ್ಲಿ ಕ್ಲಿಕ್ ಮಾಡಿ. |
02.44 | Fish Cascade ಎಂಬ ಬಟನ್ ಒತ್ತಿ. |
02.47 | ಗೇಮ್ ಮೆನ್ಯು ಕಾಣಿಸುತ್ತದೆ. |
02.50 | ಆಟದ ಆರಂಭದ ಮೊದಲು ಇದನ್ನು ಹೇಗೆ ಒಪನ್ ಮಾಡಬೇಕೆಂಬ ನಿರ್ದೇಶಗಳನ್ನು ಓದೋಣ. Instructions ಎಂಬಲ್ಲಿ ಒತ್ತಿ. |
02.57 | ಆಟವನ್ನಾಡಲು ನಿರ್ದೇಶವನ್ನು ಓದಿ. |
03.03 | ಅನುವರ್ತಿಸಲು space bar ಒತ್ತಿ. |
03.07 | ಈಗ ಟೈಪಿಂಗ್ ಅಭ್ಯಾಸಕ್ಕಾಗಿ ಸರಳವಾದ ಆಟವನ್ನು ಆಯ್ಕೆ ಮಾಡಿ. Easy ಎಂಬಲ್ಲಿ ಒತ್ತಿ. |
03.13 | ವಿಭಿನ್ನ ವಿಕಲ್ಪಗಳುಳ್ಳ ವಿಂಡೋ ಕಾಣುತ್ತದೆ. |
03.18 | ಆ ವಿಭಿನ್ನ ವಿಕಲ್ಪಗಳೆಂದರೆ, colors, fruits, plants, ಇತ್ಯಾದಿಗಳು. Colors ಎಂಬಲ್ಲಿ ಒತ್ತಿ. |
03.26 | ಆಕಾಶದಿಂದ ಮೀನುಗಳು ಬೀಳುತ್ತವೆ. ಅವುಗಳಲ್ಲಿ ಅಕ್ಷರಗಳೂ ಅಂಟಿಕೊಂಡಿವೆ. |
03.32 | ನೀವು ಆ ಅಕ್ಷರಗಳನ್ನು ಸರಿಯಾಗಿ ಟೈಪ್ ಮಾಡಿದಲ್ಲಿ ಆ ಶಬ್ದವು ಕೆಂಪು ಬಣ್ಣಕ್ಕೆ ತಿರುಗಿ ಅದೃಶ್ಯವಾಗುತ್ತದೆ. |
03.38 | ಆಮೇಲೆ, ಆ ಮೀನು ಕೆಳಗೆ ಬಿದ್ದಾಗ ಪೆಂಗ್ವಿನ್ ಅದನ್ನು ತಿನ್ನಲು ಓಡುತ್ತದೆ. |
03.42 | ಈಗ ಮೀನಿನಲ್ಲಿರದ ಅಕ್ಷರವನ್ನು ಟೈಪ್ ಮಾಡೋಣ. ಏನಾಯಿತು? |
03.47 | ಅಕ್ಷರಗಳು ಹಾಗೇ ಬಿಳಿಬಣ್ಣದಲ್ಲಿಯೇ ಇವೆ. ಅಂದರೆ, ನೀವು ಆ ಅಕ್ಷರಗಳನ್ನು ಸರಿಯಾಗಿ ಟೈಪ್ ಮಾಡಬೇಕೆಂದು ಅರ್ಥ. |
03.52 | ನಿಮಗೆ ಎಷ್ಟು ಬೇಕೋ ಅಷ್ಟು ಆಟವನ್ನಾಡಬಹುದು. |
03.55 | ಗೇಮ್ಸ್ ಮೆನ್ಯುವಿಗೆ ಹೋಗಲು Escape ಬಟನ್ ಅನ್ನು ಎರಡು ಬಾರಿ ಒತ್ತಿ. |
04.00 | ಇಲ್ಲಿ ನಿಮಗೊಂದು ಕೆಲಸವಿದೆ. |
04.02 | ಕಠಿನತೆಯ ಸ್ತರವನ್ನು ಮೀಡಿಯಮ್ ಅಥವಾ ಹಾರ್ಡ್ ಗೆ ಬದಲಿಸಿ ಆಟವನ್ನಾಡಿ. |
04.09 | ಈಗ ನಾವು ಟಕ್ಸ್ ಟೈಪಿಂಗ್ ನ ಈ ಪಾಠದ ಕೊನೆಗೆ ಬಂದಿದ್ದೇವೆ. |
04.14 | ಈ ಟ್ಯುಟೋರಿಯಲ್ ನಲ್ಲಿ ನಾವು ವಾಕ್ಯಗಳ ಟೈಪಿಂಗ್, ಶಬ್ದಗಳ ಸೇರಿಸುವಿಕೆ ಮತ್ತು ಆಟವನ್ನಾಡುವುದನ್ನು ಕಲಿತೆವು. |
04.21 | ಕೆಳಗಿರುವ ಲಿಂಕ್ ನಲ್ಲಿರುವ ವೀಡಿಯೊವನ್ನು ನೋಡಿ.
http://spoken-tutorial.org/What_is_a_Spoken_Tutorial |
04.24 | ಇದು ಸ್ಪೋಕನ್ ಟ್ಯುಟೊರಿಯಲ್ ನ ಸಾರಾಂಶವನ್ನು ಹೇಳುತ್ತದೆ. |
04.27 | ನಿಮ್ಮಲ್ಲಿ ಉತ್ತಮ bandwidth ಇಲ್ಲವಾದಲ್ಲಿ ಇದನ್ನು ಡೌನ್ ಲೋಡ್ ಮಾಡಿ ನೋಡಿ. |
04.32 | ಈ ಪಾಠವನ್ನಾಧಾರಿಸಿ ಸ್ಪೋಕನ್ ಟ್ಯುಟೊರಿಯಲ್ ಗಣವು ಕಾರ್ಯಶಾಲೆಯನ್ನು ನಡೆಸುತ್ತದೆ. |
04.36 | ಯಾರು ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ. |
04.41 | ಹೆಚ್ಚಿನ ಮಾಹಿತಿಗಾಗಿ contact @spoken-tutorial.org ಈ ಈ-ಮೇಲ್ ಮೂಲಕ ಸಂಪರ್ಕಿಸಿ. |
04.47 | ಈ ಪಾಠವು Talk to a Teacher ಎಂಬ ಪರಿಯೋಜನೆಯ ಭಾಗವಾಗಿದೆ. |
04.52 | ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ. |
04.59 | ಹೆಚ್ಚಿನ ಮಾಹಿತಿಗಾಗಿ spoken hyphen tutorial dot org slash NMEICT hyphen Intro ಇಲ್ಲಿ ನೋಡಿ. |
05.11 | ಈ ಪಾಠದ ಅನುವಾದಕ ಮತ್ತು ಪ್ರವಾಚಕ ಐ ಐ ಟಿ ಬಾಂಬೆಯಿಂದ ವಾಸುದೇವ.
ಧನ್ಯವಾದಗಳು. |